ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 8, 2016

33

ನನಗೆ ಅಜಾದಿ ಬೇಕು” ಎಂಬ ಆಕರ್ಷಕ ಅಪ್ರಬುದ್ಧತೆ!!

‍ನಿಲುಮೆ ಮೂಲಕ

-ಸಂಕೇತ್ ಡಿ ಹೆಗಡೆ, ಸಾಗರ

images (14)ಫೇಸ್ಬುಕ್ಕಿನಲ್ಲಿ ಸುಮ್ಮನೆ ಜಾಲಾಡುತ್ತಿದ್ದಾಗ ವಾಕ್ಯವೊಂದು ಎಡತಾಕಿತು. “Strict parents raise best liars” ಅಂತ. ತೀರಾ ಸ್ಟ್ರಿಕ್ಟ್ ಪೋಷಕರ ಮಕ್ಕಳು ಅತ್ಯುತ್ತಮ ಸುಳ್ಳುಗಾರರಾಗುತ್ತಾರೆ ಅಂತ. ಸತ್ಯ. ಮಕ್ಕಳು ಸ್ವಚ್ಚಂದವಾಗಿ ಸ್ವತಂತ್ರ್ಯವಾಗಿ  ಅವರಷ್ಟಕ್ಕೆ ಬೆಳೆಯಲು ಬಿಡದಿದ್ದರೆ, ಅವರು ತಪ್ಪಿಸಿಕೊಳ್ಳಲು ಅದ್ಭುತ ಸುಳ್ಳುಗಳನ್ನು ಹೆಣೆಯಬಲ್ಲ ಪ್ರತಿಭಾವಂತರಾಗಿಬಿಡುತ್ತಾರೆ! ಮನುಷ್ಯ ಅಂತ ಅಲ್ಲ, ಸ್ವಾತಂತ್ರ್ಯ ಪ್ರತಿ ಜೀವಿಯ ಮೂಲಭೂತ ಹಕ್ಕು. ಆದರೆ… ತನ್ನ ಮಗುವಿಗೆ ಸ್ವಾತಂತ್ರ್ಯ ಕೊಡಬೇಕೆಂದು ತಾಯಿ ಮಗುವಿಗೆ ಸಂಪೂರ್ಣ ತನ್ನಷ್ಟಕ್ಕೆ ಬೆಳೆಯಲು ಬಿಟ್ಟರೆ ಏನಾಗುತ್ತೆ? ತನ್ನ ಮಗು ಸರ್ವತೋಮುಖವಾಗಿ ಬೆಳೆಯಬೇಕೆಂದು ತಂದೆ ಮಗುವನ್ನು ಸಂಪೂರ್ಣ ಸ್ವೇಚ್ಛೆಗೆ ಬಿಟ್ಟುಬಿಟ್ಟರೆ ಏನಾಗುತ್ತೆ? ಮಗು ಹಾದಿತಪ್ಪದೆ ಉಳಿದೀತೇನು? ಆಜಾದಿ ಸರಿ, ಆದರೆ ಅದು ಆರೋಗ್ಯಪೂರ್ಣ ಆಜಾದಿ ಆದರೆ ಮಾತ್ರ ಚಂದ. ಸುಮ್ಮನೆ ಬೀದಿತಪ್ಪಿದ ನಾಲ್ಕು ಹುಡುಗರು ಹಾದಿತಪ್ಪಿದ ಹಳೆಯ ಸಿದ್ದಾಂತವೊಂದನ್ನು ನಂಬಿ, ಮತ್ತೂ ನಾಲ್ಕು ಕುರಿಗಳನ್ನ ಸೇರಿಸಿ ಕೆಲಸಕ್ಕೆ ಬಾರದ so called ಕ್ರಾಂತಿ ಮಾಡುತ್ತೇವೆ, ಆಜಾದಿ ತರುತ್ತೇವೆ ಅಂತೆಲ್ಲ ಕೂಗಿದರೆ ಚಂದವಲ್ಲ, ಭಂಗ. ಅವರು ಕೇಳುತ್ತಿರುವುದು ಖಂಡಿತವಾಗಿಯೂ ಸ್ವಾತಂತ್ರ್ಯವನ್ನಲ್ಲ, ಸ್ವೇಚ್ಛೆಯನ್ನ, ಅರಾಜಕತೆ ತಂದಿಡುವ ಸ್ವೇಚ್ಛೆಯನ್ನ. ಅದನ್ನೇ ಸ್ವಲ್ಪ ಆಕರ್ಷಣೀಯವಾಗಿ “ನಮಗೆ ಭಾರತದಿಂದ ಸ್ವಾತಂತ್ರ್ಯ ಬೇಡ. ಭಾರತದಲ್ಲಿ ಬೇಕು” ಅಂತ ಕೇಳುತ್ತಿರುವುದು. ಪ್ರಥಮ ಬಾರಿಗೆ ಕೇಳುತ್ತಿರುವವನಿಗೆ “ಎಷ್ಟು ಸೊಗಸಾಗಿ ಮಾತಾಡ್ತಾನಪಾ” ಅನ್ನಿಸಬೇಕು.

ನನಗೆ ತೀರಾ ನಿಗೂಢವಾಗಿ ಕಾಣುವ ವಿಷಯ ಅಂದರೆ ಈ ಎಡಪಂಥೀಯ ಚಿಂತನೆ ಉಳ್ಳ ಬುದ್ಧಿಜೀವಿಗಳು, ಕನ್ನಯ್ಯನಂತವರೆಲ್ಲ ಯಾಕೆ ಹೀಗೆ ರಾಷ್ಟ್ರೀಯತೆಗೆ ವಿರೋಧವಾಗಿರುವ ಸಂಗತಿಗಳನ್ನೇ ಹೆಚ್ಚು ಇಷ್ಟಪಟ್ಟು ಪಸರಿಸುತ್ತಾರೆ ಎಂಬುದು. ಅವರಿಗೇನು ನಿಜವಾಗಿಯೂ ಸತ್ಯ ಗೊತ್ತಿಲ್ಲವ? ಭಾರತ ತನ್ನ ಪ್ರಜೆಗಳಿಗೆ ಬೇಕಾಬಿಟ್ಟಿ ಸ್ವಾತಂತ್ರ್ಯ ಕೊಟ್ಟಿದೆ ಎಂಬುದು. ನಾವು ನೀವು ಇರುವುದೂ ಒಂದೇ ಭೂಮಿಯಲ್ಲಿ, ಅಂಥವರಿರುವುದೂ ಒಂದೇ ಭೂಮಿಯಲ್ಲಿ, ಅಂಥದ್ದರಲ್ಲಿ ನಮಗೆ ಕಣ್ಣಿಗೆ ಹೊಡೆಯುವ ಸತ್ಯ ಅವರ ಕಣ್ಣಿಗೆ ಮಸುಬಾಗಿಯೂ ಕಾಣದೇನು? ಯಾಕೀ ಪೂರ್ವಗ್ರಹಪೀಡಿತ ರೋಗಗ್ರಸ್ಥ ಮನಸ್ಸು? ಖ್ಯಾತಿಯ ಚಿಂತೆಯಾ? ವೋಟಿನ ಚಿಂತೆಯಾ? ಕಾಸಿನ ಚಿಂತೆಯಾ? ಅಸ್ತಿತ್ವದ ಚಿಂತೆಯಾ? ಅಥವಾ ಪೊಳ್ಳು ಭ್ರಮೆಯನ್ನೇ ತಾನೂ ನಂಬಿ ಪರರನ್ನೂ ನಂಬಿಸುವುದು ಒಂದು ಮಾನಸಿಕ ಖಾಯಿಲೆಯಾ?

ನಿಜ ಹೇಳುವುದಾದರೆ, ಭಾರತದಲ್ಲಿ ಸ್ವಾತಂತ್ರ್ಯ ಅವಶ್ಯಕತೆಗಿಂತ ತುಸು ಹೆಚ್ಚೇ ಇದೆ. ಅವರುಗಳು ದಿನ ಬೆಳಗಾದರೆ ಬೊಬ್ಬಿರಿಯುವ ಅಭಿವ್ಯಕ್ತಿ ಸ್ವಾತಂತ್ರ್ಯವಂತೂ ಸಾಕುಬೇಕಷ್ಟು ಇದೆ. ಭಾರತದಲ್ಲಿ ಬಹುಸಂಖ್ಯಾತ ಧರ್ಮವೊಂದರ ಪವಿತ್ರ ಗ್ರಂಥವನ್ನೇ ಸುಟ್ಟುಹಾಕುತ್ತೇನೆ ಅನ್ನಬಹುದು! ಮರ್ಯಾದಾ ಪುರುಷೋತ್ತಮ ಅಂತ ಗೌರವಿಸಿ ಪೂಜಿಸುವ ರಾಮನ ಬಗ್ಗೆ ಇಲ್ಲಸಲ್ಲದ ಮಾತನಾಡಬಹುದು. ಆ ಧರ್ಮವನ್ನು ಹೀಯಾಳಿಸಿ ಚಿತ್ರಗಳನ್ನು ತೆಗೆದು ನೂರಾರು ಕೋಟಿ ಸಂಪಾದಿಸಬಹುದು. ತಾನು ಏನೋ ದೊಡ್ಡದನ್ನು ಕಡಿದಿಟ್ಟ ಜ್ಞಾನಿಯಂತೆ ಪವಿತ್ರ ಗ್ರಂಥಗಳನ್ನೇ ಸುಳ್ಳೆಂದು ಪ್ರತಿಪಾದಿಸಿ counter theory ಬರೆಯಬಹುದು. ಪಠ್ಯಪುಸ್ತಕಗಳಲ್ಲೆ ಇತಿಹಾಸವನ್ನು ತಿರುಚಿ ವೈರಿಗಳನ್ನೇ ಹೀರೊಗಳನ್ನಾಗಿ ಮಾಡಿಬಿಡಬಹುದು. ರಕ್ತ ಕುಡಿದು ಹೋದ ಭಯೋತ್ಪಾದಕರ ಸ್ಮರಣೆ ಮಾಡಬಹುದು, ಅವರಿಗೆಲ್ಲ ಸ್ಮಾರಕ ಕಟ್ಟಬಹುದು. ಶಿಕ್ಷಿಸಿದ್ದಕ್ಕೆ ನ್ಯಾಯಾಂಗವನ್ನೇ ಮನಃಪೂರ್ವಕವಾಗಿ ಬೈದು, Black day for Indian Democracy ಅಂದುಬಿಡಬಹುದು. ಯಾವುದೋ ಸಾವನ್ನು ಚಾಣಾಕ್ಷ್ಯವಾಗಿ ಮಿಸ್ ಲೀಡ್ ಮಾಡಿ, ಭಾರತದ ಸಮಾಜದಲ್ಲಿ ಮಾನವೀಯತೆಯೇ ಇಲ್ಲ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಕಳೆದುಬಿಡಬಹುದು. ಬಹುಸಂಖ್ಯಾತರು ನಂಬಿ ಪೂಜಿಸುವ ದೇವತೆಗಳ ಕುರಿತೇ ಕೆಟ್ಟದಾಗಿ ಮಾತಾಡಬಹುದು. ಕೊನೆಗೆ ತುಟಿ ಪಿಟಕ್ ಅನ್ನದೇ ಎಲ್ಲವನ್ನೂ ಸಹಿಸಿಕೊಂಡಿದ್ದರೂ “ಇದು ಅಸಹಿಷ್ಣು ರಾಷ್ಟ್ರ” ಅಂತ ಅದ್ಭುತ ಷರಾ ಬರೆದುಬಿಡಬಹುದು.
ಮೇಲೆ ಹೆಳಿದ್ದನ್ನೆಲ್ಲ ಮಾಡಿದವರು ಈ ಕ್ಷಣದಲ್ಲೂ ಇದೇ ದೇಶದ ರಸ್ತೆಗಳಲ್ಲಿ  ಸ್ವತಂತ್ರವಾಗೇ ಓಡಾಡಿಕೊಂಡಿದ್ದಾರೆ. ಮತ್ತೆ ದಾರಿಯಲ್ಲೆಲ್ಲಾದರೂ ಮೈಕ್ ಸಿಕ್ಕರೆ ಮತ್ತೆ ಇವುಗಳನ್ನೆಲ್ಲ ಅಭಿವ್ಯಕ್ತಿಸಲು ಕಾತರದಿಂದಿದ್ದಾರೆ. ಕನ್ನಯ್ಯನಿಗೆ ಮತ್ತೆ ಈ ದೇಶದಲ್ಲಿ ಆಜಾದಿ ಬೇಕಂತೆ, ಪಾಪ.

ತಪ್ಪು ಕನ್ನಯ್ಯನದಲ್ಲ. ದೇವರದ್ದು!  ಉಸಿರಾಡಲೂ ಅಧ್ಯಕ್ಷನ ಕೇಳಬೇಕಿರುವ ಉತ್ತರ ಕೊರಿಯಾದಲ್ಲೊ, ದೇಶದ್ರೋಹಿಗಳನ್ನು ಶಿಕ್ಷಿಸಿದಾಗ ಬೀದಿಗಿಳಿದು ಸಂಭ್ರಮಿಸುವ ಅಮೆರಿಕೆಯಲ್ಲೋ, ದೇಶಕ್ಕೆ ಎರವಾದವರ ವಿರುದ್ಧ ದಿಟ್ಟ ಕ್ರಮ ತೆಗೆದುಕೊಳ್ಳುವ ಜರ್ಮನಿ, ಫ್ರಾನ್ಸ್ ನಲ್ಲೋ, ಇಂಥವರನ್ನೆಲ್ಲ ಸಮರ್ಥಿಸಲು ಒಬ್ಬರೂ ಸಿಗದ ಇಂಗ್ಲೆಂಡಿನಲ್ಲೊ, ಮಾತೆತ್ತಿದರೆ ಹೆಡೆಮುರಿಕಟ್ಟುವ ಇವರದೇ ಕಮ್ಮ್ಯುನಿಸ್ಟ್ ಚೀನಾದಲ್ಲೊ ಇವನನ್ನ ಹುಟ್ಟಿಸಬೇಕಿತ್ತು. ಭಾರತ ಕೊಟ್ಟ ಆಜಾದಿಯ ಬೆಲೆ ಅರ್ಥವಾಗುತ್ತಿತ್ತು. ಇವರ “ಲಾಲ್ ಸಲಾಮ್” ಚೀನಾ ಒಮ್ಮೆ ಏನು ಮಾಡಿತ್ತು ಗೊತ್ತೇನು?

ಅದು 1989ರ ಏಪ್ರಿಲ್ ತಿಂಗಳು. ಪ್ರಜಾಪ್ರಭುತ್ವ ಪರ ಸಂಘಟನೆಗಳೆಲ್ಲ ಸೇರಿ ಬೀಜಿಂಗ್ ನ ಟಿಯಾನ್ ಮನ್ ಸ್ಕ್ವೆರ್ ನಲ್ಲಿ ದೊಡ್ಡ ಪ್ರತಿಭಟನೆಯನ್ನು ಏರ್ಪಡಿಸಿದ್ದವು. ಮುಖ್ಯವಾಗಿ ವಿದ್ಯಾರ್ಥಿಗಳ ಪ್ರತಿಭಟನೆಯಾಗಿದ್ದ ಇದಕ್ಕೆ ನಾಗರಿಕರೂ ತೀವ್ರ ಬೆಂಬಲ ನೀಡಿದ್ದರು. ಇತರ ನೂರಾರು ಪಟ್ಟಣಗಳಿಗೂ ಕ್ರಾಂತಿಯ ಕಿಡಿ ಪಸರಿಸಿತು. ಪರಿಸ್ಥಿತಿ ಕೈಮೀರಿದ್ದನ್ನು ನೋಡಿ, ಚೀನಾ ಸರ್ಕಾರ martial law ಜಾರಿ ಮಾಡಿತು. ಪ್ರತಿಭಟನೆಯ ಸ್ಥಳಕ್ಕೆ ಸೇನೆ ಬಂತು. ಯುದ್ಧ ಟ್ಯಾಂಕರ್ ಗಳು ಬಂದವು. ಪ್ರತಿಭಟನಾಕಾರರು ನಿರಾಯುಧ ಜನಸಾಮಾನ್ಯರು. ಸೇನೆ ಅವರೆಡೆಗೆ ಗುಂಡು-ಮದ್ದುಗಳ ಮಳೆಗರೆಯಿತು. ನೋಡು ನೋಡುತ್ತಿದ್ದಂತೆ, ಪ್ರತಿಭಟನಾಕಾರರು ಸತ್ತುಬೀಳತೊಡಗಿದರು. ವಿದ್ಯಾರ್ಥಿಗಳಿದ್ದರು, ಪ್ರೊಫೆಸ್ಸರುಗಳಿದ್ದರು, ವೃದ್ಧರಿದ್ದರು, ಮಹಿಳೆಯರಿದ್ದರು, ಮಕ್ಕಳಿದ್ದರು, ಅಮಾಯಕ ನಾಗರೀಕರಿದ್ದರು. ಆದರೆ ಎಲ್ಲರೂ ಸತ್ತುಬಿದ್ದಿದ್ದರು. ಸರ್ಕಾರೀ ವರದಿಗಳು ಮುನ್ನೂರು ಜನ ಸತ್ತರು ಅಂದವು. ರೆಡ್ ಕ್ರಾಸ್ ಸಂಸ್ಥೆ 2600 ಜನ ಅಸುನೀಗಿದರು ಅಂದಿತು. ಲೆಕ್ಕ ಇವತ್ತಿಗೂ ಗೊಂದಲ. ಸಂಶೋಧಿಸಲು ಸರ್ಕಾರ ಯಾರನ್ನಾದರೂ ಬಿಟ್ಟರೆ ತಾನೆ?

ಭಾರತ ಹಾಗಾಗಲು ಸಾಧ್ಯವಿಲ್ಲ. ಅದು ಇಲ್ಲಿಯ ಸಂಸ್ಕೃತಿ ಖಂಡಿತ ಅಲ್ಲ. ಹಾಗಾಗಲೂ ಬಾರದು. ನನ್ನ ದೇಶ ಮಾನವೀಯ ದೇಶ ಎಂಬ ಹೆಮ್ಮೆ ನನಗಿದೆ. ನನ್ನ ದೇಶ ತನ್ನ ಪ್ರತೀ ಪ್ರಜೆಗೂ ಸ್ವಾತಂತ್ರ್ಯ ಕೊಟ್ಟ ಅದ್ಭುತ ದೇಶ ಎಂಬ ಕೀರ್ತಿ ಅದಕ್ಕಿದೆ. ಆದರೂ ಯಾಕೆ ಹೀಗೆ ಮಾಡುತ್ತೀರಿ? ನಿಮಗೇನು ಕಮ್ಮಿ ಮಾಡಿದೆ ಈ ದೇಶ? ನೀವು ಓದುತ್ತಿರುವ ಆ JNU ವನ್ನು ಕಟ್ಟುಕೊಟ್ಟಿದ್ದು, ಈಗ ನಿಮ್ಮನ್ನು ದುಡ್ಡು ಕೊಟ್ಟು ಓದಿಸುತ್ತಿರುವುದು ಇದೇ ದೇಶವಲ್ಲವಾ? No, please, I just don’t want to get lost until I come to know, why this happened to my country.

ಪ್ರಿಯ ಕನ್ನಯ್ಯ, ನಿಮಗೆ ದೇಶಕ್ಕೆ ಒಳಿತು ಮಾಡುವ ಕಲ್ಪನೆಯಿದ್ದರೆ ಆ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳಲು ಸಾಕುಬೇಕಷ್ಟು ವಿಷಯಗಳಿವೆ. ಈ ಬೇಡದ ಟೊಳ್ಳು misconceptionಗಳ ಬೆನ್ನು ಬಿದ್ದು ಭವಿಷ್ಯ ಹಾಳುಗೆಡವಿಕೊಳ್ಳಬೇಡಿ. ಒಂದು ತಿಂಗಳ cheap popularity ದಕ್ಕೀತಷ್ಟೆ. ದೇಶಕ್ಕೇನೂ ಲಾಭವಿಲ್ಲ. ಬದಲು ಸಮಾಜದ ಮುಖ್ಯವಾಹಿನಿಗಿಳಿದು, ಅದರ ನಿಜವಾದ ನೋವು ನಲಿವುಗಳನ್ನ ಅರಿತು, ಕಷ್ಟ ಕ್ಲೀಷೆಗಳನ್ನು ಬಗೆಹರಿಸುವ ಕುರಿತು ಕಾರ್ಯೋನ್ಮುಖವಾದರೆ ಜೀವನ ಸಾರ್ಥಕವಾಗುತ್ತೆ. ಭಾರತ ತನ್ನೊಳಗೆ ನಮಗೆಲ್ಲ ಸಾಕಷ್ಟು ಸ್ವಾತಂತ್ರ್ಯವನ್ನು ಕೊಟ್ಟಿದೆ. ನನ್ನ ದೇಶ ನನ್ನನ್ನು ನನ್ನ ಹಾಗಿರಲು ಬಿಟ್ಟ ದೇಶ ಎಂಬ ಹೆಮ್ಮೆ ನನಗಿದೆ. ನನ್ನ ದೇಶ ಎಲ್ಲವನ್ನೂ ಸಹಿಸಿಕೊಂಡೂ ಸದೃಢವಾಗಿರುವ ದೇಶ ಎಂಬ ಹೆಮ್ಮೆ ನನಗಿದೆ. ನನ್ನ ದೇಶ ನಿಮ್ಮಂತವರ ವ್ಯರ್ಥ ಪ್ರಯತ್ನಗಳನ್ನೆಲ್ಲ ಮೆಟ್ಟಿನಿಲ್ಲಲು ಸಶಕ್ತವಾದ ದೇಶ ಎಂಬ ಹೆಮ್ಮೆ ನನಗಿದೆ. ಧನ್ಯವಾದ.

Read more from ಲೇಖನಗಳು
33 ಟಿಪ್ಪಣಿಗಳು Post a comment
  1. shiva
    ಮಾರ್ಚ್ 8 2016

    ಕನ್ಹಯ್ಯಾ ಪ್ರಸ್ತಾಪಿಸಿದ ವಿಷಯಗಳಿಗಿಂತ ಬೇರೆ ಗಂಭೀರ ವಿಷಯಗಳಿದ್ದರೆ ತಿಳಿಸಿ
    ಮತ್ತೆ ಅದೇರೀತಿ ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿ ಸಂಘ ಟನೆ ಗಳು ಮಾಡುವ ದೇಶದ್ರೋಹಿ ಕಡಲೆಹಿಟ್ಟು ಉಪಯುಕ್ತ ಕೆಲಸ ಮಾಡಲು ಹೇಳಿ

    ಉತ್ತರ
  2. shiva
    ಮಾರ್ಚ್ 8 2016

    ಕನ್ಹಯ್ಯಾ ಪ್ರಸ್ತಾಪಿಸಿದ ವಿಷಯಗಳಿಗಿಂತ ಬೇರೆ ಗಂಭೀರ ವಿಷಯಗಳಿದ್ದರೆ ತಿಳಿಸಿ
    ಮತ್ತೆ ಅದೇರೀತಿ ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿ ಸಂಘ ಟನೆ ಗಳು ಮಾಡುವ ದೇಶದ್ರೋಹಿ ಕೆಲಸ ಬಿಟ್ಟು ಉಪಯುಕ್ತ ಕೆಲಸ ಮಾಡಲು ಹೇಳಿ

    ಉತ್ತರ
  3. Goutham
    ಮಾರ್ಚ್ 8 2016

    “ದೇಶದ್ರೋಹಿ” ಎಂಬ ಪಟ್ಟ ಕಟ್ಟುವ ಪ್ರಯತ್ನ ವಿಫಲವಾಗುತ್ತಿದೆ ಎನಿಸಿದಾಗ ಅಪ್ರಬುದ್ಧನಾಗಿ ಕಾಣಿಸುತ್ತಿದ್ದಾನೆಯೇ ?

    ಉತ್ತರ
    • ಮಾರ್ಚ್ 12 2016

      ರಾಷ್ಟದ್ರೋಹವನ್ನು ಸಮರ್ಥಿಸಿಕೊಳ್ಳಲೇ ಶಕ್ತಿಯಿಲ್ಲದಿರುವಾಗ ಅಪ್ರಬುದ್ಧತೆಯನ್ನೂ ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿ ಬಂತಲ್ಲ ಎಂಬ ಚಡಪಡಿಕೆಯೇ?

      ಉತ್ತರ
  4. ಮಾರ್ಚ್ 8 2016

    ಈಗ್ಗೇ ಸಹಿಷ್ಣುತೆಯಿಲ್ಲದಾ ಐಕ್ಯತೆ ಸಮಗ್ರತೆ ಇಲ್ಲದೇ ನೂರಾರು ಮುಖವನ್ನು ಕಾಣುವ ಈ ದೇಶವನ್ನು ಒಂದು ದೇಶವೆಂದರೇ……ಮೂರ್ಖರೇ ಸರೀ ಮೂರ್ಖರ ದೇಶವೇ ಸರಿ

    ಉತ್ತರ
  5. Mallappa
    ಮಾರ್ಚ್ 9 2016

    ಹೆಗಡೆಯವರೆ ಸರಿಯಾಗಿ ಹೇಳಿದಿರಿ. ಪ್ರಪಂಚದ ಯಾವುದೇ ದೇಶ ಇಷ್ಟು ಸ್ವಾತಂತ್ರ್ಯ ಕೊಟ್ಟಿಲ್ಲ. ವಿಶ್ವಕ್ಕೆ ಶಾಂತಿ ಮಂತ್ರ ಕಲಿಸಿದ ದೇಶ ಇದು. ಸರಿಯಾಗಿ ವಿಚಾರ ಮಾಡುದೇ ಯಾರದೋ ಸಂತೋಷಕ್ಕೆ ತಲೆ ಆಡಿಸಿದರೆ, ಮಂಗ ತಾನೂ ಕೆಟ್ಟು ವನವನ್ನು ಕೆಡಿದಿದ ಹಾಗಾಗುತ್ತೆ

    ಉತ್ತರ
  6. gundapp gabbur
    ಮಾರ್ಚ್ 9 2016

    ಹೆಗಡೆ sir ನಿಮ್ಮ ಲೇಖನ ಮನಮುಟ್ಟುವಂತಿದೆ,ನಿಮಗೆ ಧನ್ಯವಾದ ತಾಯ್ನಾಡುಲ್ಲಿದ್ದುಕೊoಡು ತಾಯ್ನಾಡುಗೆ ಬೈಯುವದು ಮತ್ತು ಅದನ್ನು ಸಮರ್ಥಸಿಕೊಳ್ಳವದು ಭಾರತದಲ್ಲಿ ಮಾತ್ರ ಅನಿಸುತ್ತೆ,

    ಉತ್ತರ
  7. ಆನಂದ್ ಕುಮಾರ್
    ಮಾರ್ಚ್ 11 2016

    ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ.

    ಉತ್ತರ
  8. laxmikanth
    ಮಾರ್ಚ್ 12 2016

    ಕೇವಲ 29 ವರ್ಷದ ಹೈದನೊಬ್ಬ ನಿಮಗೆ ಇಷ್ಟೊಂದು ಛಳಿ ಹಿಡಿಸಿದ್ದಾನೆಂದರೆ ಆತ ಹೇಳೋದ್ರಲ್ಲಿ ಏನಾದರೂ ಇರಲೇ ಬೇಕಲ್ಲವೆ…ಆತನ ವಯಸ್ಸನ್ನು ಗಮನಿಸಿ ನೀವು ಆತ ಅಪ್ರಭುಧ್ಧ ಅಂದಿರಾ…..ಗಾಂಧಿ ಆಫ್ರಿಕಾದಲ್ಲಿ ಸಿಡಿದೆದ್ದಾಗಲೂ ಅವರಿಗೆ ಸುಮಾರು ಇದೇ ವಯಸ್ಸು….

    ಶತಮಾನಗಳಿಂದ ಶೋಷಣೆಗೊಳಗಾದವರು ದನಿ ಎತ್ತಿದರೆ ಅದು “ರಾಷ್ಟ್ರೀಯತೆ” ಗೆ ವಿರೋದ… ಯಾಕೆಂದರೆ ಧರ್ಮದ ಹೆಸರಿನಲ್ಲಿ ಜಾತಿಯ ಹೆಸರಲ್ಲಿ ದೇವರ ಹೆಸರಿನಲ್ಲಿ ಶೋಷಣೆ ಮಾಡುವುದನ್ನೇ ನೀವು ರಾಷ್ಟ್ರೀಯತೆ ಅಂದುಕೊಂಡಂತಿದೆ….

    ಬಹುಸಂಖ್ಯಾತರು ಹೇಳುವುದು. …ಮಾಡುವುದು. ..ನಂಬುವುದು. ..ಎಲ್ಲಾ ಸತ್ಯ ಮತ್ತು ಸರಿ..ಅವರ ಗ್ರಂಥ ಪವಿತ್ರ. …ಅಂದರೆ ಅಲ್ಪ ಸಂಖ್ಯಾತರಿಗಿಲ್ಲಿ ಜಾಗವೇ ಇಲ್ಲ….ಅಲ್ಲವೇ….ಕನಯ್ಯ ಆಜಾದಿ ಕೇಳುತ್ತಿರುವುದು ನಿಮ್ಮ ಈ ” ಬಹುಸಂಖ್ಯಾತ” ದಬ್ಬಾಳಿಕೆಯಿಂದ….

    ಮನುಷ್ಯನೊಬ್ಬನ ಯೋಗ್ಯತೆ ಯನ್ನು. …ಅವನ ಸ್ಥಾನವನ್ನು ಆತನ ಹುಟ್ಟಿನಿಂದ ನಿರ್ದರಿಸಬೇಕನ್ನುವ ಮೌಢ್ಯ ತುಂಬಿದ “ಪವಿತ್ರ” ಗ್ರಂಥಗಳನ್ನು ಸುಡದೇ ಇನ್ನೇನು ಮಾಡಬೇಕು….ಕನಯ್ಯ ಆಜಾದಿ ಕೇಳಿದ್ದು ಈ ಮೌಢ್ಯದಿಂದ…..

    “ಮರ್ಯಾದಾ ಪುರುಷೋತ್ತಮ” ನನ್ನೂ ದಾರಿ ತಪ್ಪಿಸಿ ಅವನ ಕೈಯಲ್ಲಿ ಅವಮರ್ಯಾದೆಯ ಕಲಸ ಮಾಡಿಸಿದ ಪುರೋಹಿತ ಶಾಹಿ ನಿಮ್ಮ ರಾಷ್ಟ್ರೀಯತೆ ಅನ್ಸುತ್ತೆ….ಕನಯ್ಯ ಆಜಾದಿ ಕೇಳುತ್ತಿರುವುದು ಈ “ಶಾಹಿ” ಯಿಂದ….

    ರಾಷ್ಟ್ರಪತಿಯ convoy ಹೆದ್ದಾರಿಯಲ್ಲಿ ಹೋಗತ್ತಿದ್ದಾಗ “ಕುರಿ” ಮಂದೆ ಅಡ್ಡ ಬಂದರೆ ಆತನೂ ಕಾಯಬೇಕು…ಕುರಿಮಂದೆ ದಾಟುವ ತನಕ….ಅದು
    .. ಕುರಿಮಂದೆಯ ಶಕ್ತಿ. …ignore
    ಮಾಡಬೇಡಿ…..

    ಉತ್ತರ
    • ಮಾರ್ಚ್ 12 2016

      ಕೇವಲ ಹದಿನಾರೆ ವರ್ಷದ ಭಯೋತ್ಪಾದಕ ಬಂದು ಬಾಂಬ್ ಸಿಡಿಸಿ ನಮಗೆಲ್ಲ ನಡುಗುವಂತೆ ಮಾಡಿದರೆ ಅವನ ಸಿದ್ದಾಂತದಲ್ಲೂ ಏನೋ ಇದೆ ಎಂದು ಅರ್ಥವೇನು?

      ಶತಮಾನದಿಂದ ಶೋಷಣೆಗಳಿಗೆ ತುತ್ತಾದವರಿಗೆ ನಾವೂ ಧ್ವನಿಯಾಗಿದ್ದೇ. ನೀವು ಮಾತ್ರ ಅವರ ಬಗ್ಗೆ ಮಾತಾಡುವ patent ಪಡೆದವರು ಎಂಬ ಪೊಳ್ಳು ಜಂಭವೇಕೆ? ನಮಗೂ ನಿಮಗೂ ಇರುವ ವ್ಯತ್ಯಾಸ, ನಾವು ನೀಜವಾದ ಶೋಷಣೆಗೊಳಗಾದವರ ಬಗ್ಗೆ ಮಾತನಾಡುತ್ತೇವೆ, ನೀವು ನಿಮ್ಮ ಅಸ್ತಿತ್ವದ ಉಳಿವಿಗೆ ಕನ್ನಯ್ಯನಂತ ಪೋಸ್ ಲೀಡರ್ ಗಳ ಹಿಂದೆ ಬಿದ್ದು ಸುದ್ದಿ ಮಾಡುತ್ತೀರಿ. ದೇಶವಿರೋಧಿ, ಹಿಂದೂ ವಿರೋಧಿ ಕ್ರಿಮಿಗಳಿಗೆ ಬೆಂಬಲ ನೀಡುವುದೇ ‘ಪ್ರಗತಿಪರ’ ಅಂದುಕೊಂಡಿದ್ದೀರೆನು? ನೀವು ಯಾವ ಥರದ ‘ಪ್ರಗತಿ’ ಯ ಪರವಾದವರು?

      ಯೋಚನೆಗೆ ಹಿಡಿದ ವರಲೆಯನ್ನು ಮೊದಲು ಹೋಗಿಸಿಕೊಳ್ಳಿ. ಅಲ್ಪಸಂಖ್ಯಾತರಿಗೆ ಜಾಗವಿಲ್ಲವಂತೆ. ನಮ್ಮ ದೇಶಕ್ಕೆ, ಒಂದು ರಾಷ್ಟ್ರ ಧರ್ಮ ಅಂತಲೇ ನಾವು ಘೋಷಿಸಿಕೊಂಡಿಲ್ಲ, ಅಲ್ಪಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗಬಾರದೆಂಬ ಕಳಕಳಿಯಿಂದ. ನಿಮ್ಮ ಪ್ರಕಾರ ನಿಮ್ಮ ನೆಚ್ಚಿನ ಪಾಕಿಸ್ತಾನವನ್ನು ಮಾದರಿಯಾಗಿಟ್ಟುಕೊಳ್ಳಬೇಕಿತ್ತೇನು? ಅಲ್ಲಿ ಎಷ್ಟು ಜನ ಹಿಂದೂಗಳು ಇವತ್ತು ಬದುಕಿದ್ದಾರೆ? ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಏನು ಅನ್ಯಾಯವಾಗಿದೆ? ಯಾವಾಗಲೂ ಅದೇ ಜಂಪೇ ರಾಗವನ್ನು ಹಾಡುವುದ ಬಿಟ್ಟು, ರುಜು ಮಾಡಿ ತೋರಿಸಿ.

      ಇನ್ನು ಭಗವದ್ಗೀತೆಯನ್ನು ಏನು ಮಹಾನ್ ಓದಿಕೊಂಡವರಂತೆ ನೀವೆಲ್ಲ ಸುಡುವ ನಾಚಿಗೇಡಿನ ಮಾತಾಡುತ್ತೀರಿ? ಯಾರೋ ಹೇಳಿದ್ದನ್ನೇ ಎಲ್ಲೋ ಕೇಳಿಕೊಂಡು ಇಪ್ಪತ್ತು ವರ್ಷಗಳಿಂದ ಅದೇ ಅರ್ಥಹೀನ ಮಾತನಾಡಬೇಡಿ. ಭಗವದ್ಗೀತೆಯ ಕೂದಲೆಳೆ ಅರ್ಹತೆಯೂ ನಿಮಗಿಲ್ಲ.

      ಯಾವ ಪುರೋಹಿತ ನಿಮಗೆ ಇವತ್ತು ತೊಂದರೆಮಾಡುತ್ತಿದ್ದಾನ್ರೀ? ನೀವೆಲ್ಲ ಯಾವ ಕಾಲದಲ್ಲಿದ್ದೀರಿ? ಪುರೋಹಿತನಿಗೂ ರಾಷ್ಟ್ರಿಯತೆಗೂ ಏನು ಸಂಬಂಧ? ಯಾವ ಯಾವುದಕ್ಕೆ ಲಿಂಕ್ ಮಾಡುತ್ತೀರಿ ? ನಿಮಗೇ ಬಾಲಿಶ ಅನ್ನಿಸೋಲ್ಲ?

      ಕನ್ನಯ್ಯನ ವಯಸ್ಸನ್ನು ನೋಡಿ ಅಪ್ರಬುದ್ಧ ಅನ್ನುತ್ತಿಲ್ಲ. ಆತನ ವಯಸ್ಸಿಗೆ ವಿವೇಕಾನಂದರು ಜಗತ್ತನ್ನು ಗೆಲ್ಲುವ ಜ್ಞಾನವನ್ನು ಹೊಂದಿದ್ದರು. ಈತನ ದಾರಿ ತಪ್ಪಿಸುವ ನರಿಬುದ್ಧಿಗೆ ಅಪ್ರಬುದ್ಧ ಅಂದಿದ್ದು.

      ಲಾಸ್ಟಿಗೆ ಕುರಿಮಂದೆಯ connection ಬೇರೆ. ದೇಶದ ಜನರನ್ನೆಲ್ಲ ತನ್ನ ಅರ್ಥಹೀನ ಭಾಷಣದಿಂದ ದಾರಿತಪ್ಪಿಸಬಹುದು ಅಂದುಕೊಂಡಿದ್ದಾನಲ್ಲಾ, ನಿಮ್ಮವ, ಅವನಿಗೆ ಹೋಗಿ ಹೇಳಿ. ಭಾರತೀಯರು ಕುರಿಗಳಲ್ಲ ಅಂತಾ. ಲೇಖನದ ಎರಡನೇ ಪ್ಯಾರಾ ನಿಮ್ಮಂತವರ ಬಗ್ಗೆಯೇ ಬರೆದಿದ್ದು. ಮತ್ತೊಮ್ಮೆ ಓದಿಕೊಳ್ಳಿ. ಭಾಷೆ ಬರುತ್ತೆ ಎಂಬ ಕಾರಣಕ್ಕೆ ಅದೆಷ್ಟು ಸುಳ್ಳುಗಳನ್ನ ಪೋಣಿಸುತ್ತೀರೆಂದರೆ, ನಿಮ್ಮ ಬಾಲಿಶತನ ಓದುವರ ಕಣ್ಣಿಗೆ ದಟ್ಟವಾಗಿ ಕಾಣುತ್ತೆ. ಮಾತಿಗೊಂದು ಅರ್ಥ ಬೆಡ್ವೇನ್ರಿ?

      ಉತ್ತರ
      • Goutham
        ಮಾರ್ಚ್ 13 2016

        ಸಂಕೇತ್ ಹೆಗಡೆಯವರೆ, ದೇಶವಿರೋಧಿ, ಹಿಂದೂ ವಿರೋಧಿ ಕ್ರಿಮಿಗಳಿಗೆ ಬೆಂಬಲ ನೀಡುವುದೇ ‘ಪ್ರಗತಿಪರ’ ಮತ್ತು ” ನನ್ನ ಮೆಚ್ಚಿನ ಹಾಕಿಸ್ತಾನ ” ಎಂದು ಲಕ್ಷ್ಮೀಕಾಂತ್ ರವರು ಹೇಳಿದ್ದಾರೆಯೇ ?ಸಿಟ್ಟು ಮಾಡಿ ಕೊಳ್ಳದೇ ಲಕ್ಷ್ಮೀಕಾಂತ್ ರವರು ಬರೆದಿರುವುದನ್ನು ಶಾಂತವಾಗಿ ಮತ್ತೊಮ್ಮೆ ಓದಿ.

        ಉತ್ತರ
        • ಮಾರ್ಚ್ 13 2016

          ಅಯ್ಯೋ ನೀವು ಏನನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ ಸ್ವಾಮೀ, ಅದೇ ನಿಮ್ಮ biggest ಪ್ರಾಬ್ಲಮ್. ದೇಶವಿರೋಧಿಗಳಿಗೆ ಬೆಂಬಲ ಸೂಚಿಸುವುದು ಪ್ರಗತಿಪರತೆ ಅಂತ ಹೇಳುವುದಿಲ್ಲ. ನಾವು ಪ್ರಗತಿಪರರು ಅಂತ ಹೇಳಿಕೊಂಡು ದೇಶವಿರೋಧಿಗಳಿಗೆ ಬೆಂಬಲಿಸುತ್ತೀರಿ. ನಾವೇನಂದುಕೊಳ್ಳಬೇಕು?

          ಪಾಕಿಸ್ತಾನ ನನ್ನ ಪ್ರೀತಿಯ ದೇಶ ಅನ್ನುವುದಿಲ್ಲ. ಬದಲಾಗಿ ಅದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಹಿತ್ತಲಲ್ಲಿ ಬೆಂಕಿಬಿದ್ದವರಂತೆ ಆಡುತ್ತೀರಿ. ನಾವೇನಂದು ಕೊಳ್ಳಬೇಕು?

          ನಿಮಗೆ ಹಾವೂ ಸಾಯಬಾರದು, ಕೋಲೂ ಮುರಿಯಬಾರದು. ಒಟ್ಟಿನಲ್ಲಿ ನಿಮ್ಮ ಬೇಳೆ ನೀವು ಬೇಯಿಸಿಕೊಳ್ಳಬೇಕು. ಇನ್ನು ಸತ್ಯ ಸಿಟ್ಟಿನಂತೆ ಕಂಡರೆ ಅದು ಸಂಪೂರ್ಣವಾಗಿ ನಿಮ್ಮದೇ ಬಲಹೀನತೆ. ಮತ್ತೊಮ್ಮೆ ಮಗದೊಮ್ಮೆ ಓದಿದರೂ ಸುಳ್ಳು ಸುಳ್ಳೇ, Terribly Sorry!

          ಉತ್ತರ
    • sandeep bhat s
      ಮಾರ್ಚ್ 14 2016

      Mr. Laxmikant, gandhiji elli kannaiah elli, ajagajaantara !!
      ನಿಮಗೆ ನನ್ನ ಕಥೆ ಹೇಳ್ತೀನಿ ಕೇಳಿ, ನಾನೊಬ್ಬ GM student, ನನ್ನ ತಂದೆ tempo driver. ನಾನು 2nd pu(2014) ನಲ್ಲಿರುವಾಗ ನಂದು JEE MAIN marks 116, ಅದು ನನ್ನ ಆಲಸ್ಯದಿಂದ ಬಂದದ್ದು ಬಿಡಿ. ನನ್ನ friendದು 146 ಆಸುಪಾಸು, ಅವ್ನಿಗೆ NITKಯಲ್ಲಿ mining or metallurgy ಸಿಗೋದು ಕಷ್ಟದ ಪರಿಸ್ಥಿತಿ. ಅವ್ನು ಕೂಡ GM student. ನನ್ನ freind ಒಬ್ಬ ಇದ್ದ, ಅವ್ನು ನೀವ್ ಹೇಳೋ ತರ (ST) ಹಿಂದುಳಿದವ!!. ಆದರೆ ಅವ್ನು ನನಗಿಂತ ಎಷ್ಟೋ ಪಾಲು ಅನುಕೂಲಸ್ತ. ಅವನ JEE MAIN marks 49 ಇರಬಹುದು, ಅದು cut off marks for eligibility to write JEE ADVANCE for ST students . GMಗೆ ಅದು 115. ಆದ್ರೂ ಕೂಡ ಅವ್ನಿಗೆ NITKಯಲ್ಲಿ ಯಾವ್ದೇ BRANCH ಆಯ್ಕೆ ಮಾಡಿಕೊಳ್ಳುವ ಅವಕಾಶ, ಅವ್ನಿಗಿಂತ ಹತ್ತಿರಹತ್ತಿರ 60, 100 ಜಾಸ್ತಿ marks ತೆಗೆದವರಿಗೆ ಯಾವ seat ಇಲ್ಲ. ಈಗ ಹೇಳಿ ಯಾರು ನಿಜವಾಗಿ ಶೋಷಣೆಗೆ ಒಳಗಾದವರು. ನಾನಾ ಅವನ???
      gramatical mistakes ಇದ್ರೆ ಕ್ಷಮಿಸಿ.

      ಉತ್ತರ
      • laxmikanth
        ಮಾರ್ಚ್ 14 2016

        Dear Sandeep, Even I have a story…to tell u.. if I want…. But let me not tell u my story.

        but in the first place why do you think that the “Reservation system” was introduced in our constitution.??

        ಉತ್ತರ
        • sandeep bhat
          ಮಾರ್ಚ್ 14 2016

          first eno olledakke maad’dru, aadre aamele adu vote bank aaghoytu, adu namma duradrusta, neev nodidre anta kannaiah na support maadtiralla sir??

          ಉತ್ತರ
          • laxmikanth
            ಮಾರ್ಚ್ 14 2016

            Dear Sandeep…One clarification… I am not a supporter of Kanaiah I only support which I feel correct

            Now let us keep caste based reservation aside for some time….

            I am in city …earn a 6 digit salary per month. and I send my son to a well-known English medium international school… However I am basically from a village where my brother’s son walks not less than 4 KM daily to go o school and another 4 KM to come home back.

            And he walks another 3-4 KM in searching of buffaloes ( Emmegalu) after reaching home…

            Now tell me is it if I set a same yard stick of 80% from both my son and my brother’s son to get a seat in engineering college…will it be justified?

            Hope you certainly agree with me that his 49% is equivalent or more than my Son’s 80% Won’t you

            And when it comes to Kanaiah…I went though his entire speech ( As published in an English daily) he reportedly gave during the of so called function to arranged to commemorate hanging of Afzal Guru’s hanging”. I did not find any thing which can be considered as anti-national in his speech. If you found any such mentions in his speech please let me know.

            You are against “reservation” because you feel it is snatching away your opportunities and you are being deprived of your opportunity which you feel your right because you scored 80%

            Kannaiah thinks that he and people like him are deprived of equal opportunities for centuries… because of the caste systems they were subjected to…

            I completely agree that the reservation system requires immediate review and economic criteria has to be a part of reservation system.It should not be only cast based…

            ಉತ್ತರ
            • ಮಾರ್ಚ್ 14 2016

              “It shud not only be caste based” ಅಂದ್ರೆ ಅರ್ಥ caste based ಕೊಡ ಇರ್ಬೇಕು ಅಂತ ಅಲ್ವೇ? ಅದಕ್ಕೇ ಹೇಳಿದ್ದು, ನಿಮ್ಮಂತವರ ಪಾಡು ಹಾವೂ ಸಾಯಂಗಿಲ್ಲ ಕೊಲೂ ಮುರಿಯಂಗಿಲ್ಲ ಅಂತ. ನನ್ನ ಮುಂಚಿನ ಪ್ರಶ್ನೆಗಕಿಗೆ ಉತ್ತರಿಸಿ. ಯಾಕೆ ಚರ್ಚೆಯ ಹಾದಿಯನ್ನು ತಪ್ಪಿಸುತ್ತೀರಿ?
              Reservation ಬಗೆಗಿನ ನಮ್ಮ ನಿಲುವು ತಿಳಿಯಲು ನಾನು ಇದೇ web ನಲ್ಲಿ ಬರೆದ “ಒಂದು ಸಾವು ತೋರಿಸಿದ ಜಗತ್ತಿನ ಕರಾಳ ಮುಖಗಳು” ಲೇಖನ ಓದಿ.
              ಕನ್ನಯ್ಯ ಜೈಲಿನಿಂದ ಬಂದು ನಂತರ ಮಾಡಿದನಲ್ಲ ಆಜಾದಿ ಭಾಷಣ, ಅದರ ಬಗ್ಗೆ ಈ ಲೇಖನ ಬರೆದಿದ್ದು. ಅದನ್ನು ಸಮರ್ಥಿಸಿಕೊಂಡಿರಿ ತಾನೇ? ಈಗ ಹಳೆ ಭಾಷಣದಲ್ಲಿ ದೆಶದ್ರೋಹ ಕಾಣಲಿಲ್ಲ, ಅದಕ್ಕೇ ಅವನನ್ನ ಸಮರ್ಥಿಸಿಕೊಂಡೆ ಅನ್ನುತ್ತೀರಲ್ರೀ? ಅಳೋಣವೆ, ನಗೋಣವೆ?

              ಉತ್ತರ
              • laxmikanth
                ಮಾರ್ಚ್ 14 2016

                ಹೌದು ಸಂಕೇತ್ ನನಗೆ ಹಾವೂ ಬದುಕಬೇಕು…ಕೋಲೂ ಉಳಿಯಬೇಕು….

                ನಿಮಗೆ ಯಾಕೀ ಸಾಯಿಸುವ ಮುರಿಯುವ ಉತ್ಕಟ ಆಪೇಕ್ಷೆ..

                ಹಾ. ..when it comes to Reservation I am very clear it has to continue…but with a economical criteria attached to it

                ಉತ್ತರ
                • sandeep bhat
                  ಮಾರ್ಚ್ 14 2016

                  laxmikant I agree with ur point “but with a economical criteria”. a vishya pakkakke ittu, nanu reservation bagge maatadiddu purohotashahi, shoshane adu idu anta heltidralla adkoskara.
                  kannaiaha na yaake sir hero maadtidira.
                  http://www.digitalkannada.com/
                  plz read the articles in this website about kannaiah
                  istadru nimage arta aagilla andre, nim jote vada maadodu samaya vyartha aste…

                  ಉತ್ತರ
                • ಮಾರ್ಚ್ 15 2016

                  “ಹಾವೂ ಸಾಯಂಗಿಲ್ಲ, ಕೊಲೂ ಮುರಿಯಂಗಿಲ್ಲ” ಅನ್ನುವುದು ನಿಮ್ಮಂತ ಎಡಬಿಡಂಗಿಗಳಿಗೆ ಹೇಳಿಮಾಡಿಸಿದ ಕನ್ನಡ ಗಾದೆ. ನಿಮಗೆ ಅದನ್ನೇ ಅರ್ಥ ಮಾಡಿಕೊಳ್ಳುವಷ್ಟೂ ಕನ್ನಡ ಬರುವುದಿಲ್ಲ ಅಂತ ಗೊತ್ತಿರಲಿಲ್ಲ. ಕ್ಷಮಿಸಿ, ಇನ್ನು ಅದು ಹೇಗೆ ಲೇಖನಗಳನ್ನೆಲ್ಲ ಅರ್ಥ ಮಾಡಿಕೊಂಡು “ಅದ್ಭುತ” comment ಗಳನ್ನ ಕೊಡುತ್ತೀರಿ ಅನ್ನುವುದು ದೇವರಿಗೆ ಗೊತ್ತು. ಇನ್ನು “ಸಾಯಿಸುವ, ಮುರಿಯುವ” ನನ್ನ “ಉತ್ಕಟ” ಅಪೇಕ್ಷೆ ಅತ್ಲಾಗಿರಲಿ. ನಾನೇನೆಂದು ನನ್ನ ಹತ್ತಿರದಿಂದ ನೋಡಿದವರಿಗೆ ಗೊತ್ತು. ನಿಮ್ಮಿಂದ ಷರಾ ಬರೆಸಿಕೊಳ್ಳುವ “ಪುಣ್ಯ” ನನಗೆ ಬೇಡ.
                  ಪ್ರತಿವಾದಕ್ಕೆ ವಿಷಯ ಸಿಗದೇ ಬೌದ್ಧಿಕವಾಗಿ ಭಿಕ್ಷುಕರಾಗಿಬಿಡುವ ನಿಮ್ಮಂತವರು, ಕೆಲಸ ತೋಚದೆ ವೈಯಕ್ತಿಕ ದಾಳಿಗೆ ಇಳಿಯುತ್ತೀರಿ. Sorry, ತಲೆಕೆಡಿಸಿಕೊಳ್ಳಲು ಸಮಯ ಅಭಾವ ಆಗಿಬಿಟ್ಟಿದೆ.
                  Reservation ಬಗ್ಗೆ economic status ಅನ್ನು ಯಾಕೆ attach ಮಾಡಿ ಜಾರಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತೀರಿ? Economic status ಮುಖ್ಯವಲ್ಲ, ಒಂದು attachment ಅಷ್ಟೇ ನಿಮಗೆ. ಜಾತಿ ನಿಮ್ಮ primary scale. ಜಾತಿಯ ಮೇಲೆ ಮೀಸಲಾತಿ ಬೇಡ ಅನ್ನುವಷ್ಟೂ ಗಟ್ಟಿತನವಿಲ್ಲ. ಅಲ್ಲೇ ಮಧ್ಯೆ ತಪ್ಪಿಸಿಕೊಂಡು ಒಳ್ಳೆಯವನಾಗುವ ಜಾಣ್ಮೆ. ಏನು talent ರೀ… ಪಲಾಯನವಾದಕ್ಕೆ ನಿಮಗಿಂತ ಒಳ್ಳೆಯ ಪಿತಾಮಹ ಮತ್ತೊಬ್ಬ ಸಿಗಲಾರ.

                  ಉತ್ತರ
    • WI
      ಮಾರ್ಚ್ 14 2016

      ‘ಕೇವಲ ಇಪ್ಪತ್ತೊಂಬತ್ತು ವರ್ಷದ ಹೈದನೊಬ್ಬ..’ ಇಂಟರೆಸ್ಟಿಂಗ್! ೨೯ ವರ್ಷಕ್ಕೆ ಜೀವನದ ಮೂರು ದಶಕಗಳ ಬಹುತೇಕ ಭಾಗವನ್ನು ಜನ ಮುಗಿಸಿರುತ್ತಾರೆ ಸ್ವಾಮಿ, ಅವರು ಹೈಕಳು ಅಲ್ಲ! ನಿಮ್ಮ ‘ಯೌವನ’ದ ವ್ಯಾಖ್ಯಾನ ಬಹುಶಃ ಬೇರೆಯದೇ ಇದ್ದಿರಬಹುದು, ನಿಜ, ಇವನು ಹೈದ ಆದರೆ, ಗಾಂಧಿ-ನೆಹರು ಪರಿವಾರದ ಫೇಮಿಲಿ ಬುಸಿನೆಸ್ ಆದ ಕಾಂಗ್ರೆಸ್ ಪಕ್ಷದ ನಾಯಕ ೪೬ ವರ್ಷಗಳ ವಯಸ್ಸಿನಲ್ಲೂ ಯುತ್ ಐಕಾನ್ ಆಗಿರುವುದು ಸಹಜವೆ! ಬಿಡಿ, ಅದು ಈ ಸಂದರ್ಭದಲ್ಲಿ ಅಪ್ರಸ್ತುತ ಎಂದುಕೊಂಡರೂ, ಈ ನಿಮ್ಮ ಐಲು ಹೈಕಳ ಬಂಧನವನ್ನು ವಿರೋಧಿಸಿ ಜೆ ಎನ್ ಯು ಗೆ ಭೇಟಿಕೊಟ್ಟ ವಿವಿಧ ರಾಜಕೀಯನಾಯಕರ ಪೈಕಿ ಎದ್ದು ಕಾಣುವಂತೆ ಇದ್ದಿದ್ದು ಇದೇ ‘ಯುತ್ ಐಕಾನ್’ ಎನ್ನುವುದು ಕೂಡ ಅಷ್ಟೆ ಸತ್ಯ!

      ಗಾಂಧೀಜಿಯವರ ಹೆಸರನ್ನು ಪ್ರಸ್ತಾಪಿಸಿದ್ದೂ ಅಷ್ಟೇ ಕುತೂಹಲಕಾರಿ. ಗಾಂಧೀಜಿ ದಕ್ಷಿಣ ಆಫ್ರಿಕಾ ದೇಶಕ್ಕೆ ಎಲ್ಲ ಪರೀಕ್ಷೆಗಳಲ್ಲೂ ತೇರ್ಗಡೆಯಾಗಿ, ಬ್ಯಾರಿಸ್ಟರ್ ಆಗಿ ಹೋಗಿದ್ದರು, ವಿಫಲ ಸಂಶೋಧನಾ ವಿದ್ಯಾರ್ಥಿಯಾಗಿ ಅಲ್ಲ!

      ಶೋಷಣೆಗೆ ಒಳಗಾದವರು ದನಿಯೆತ್ತಿದರೆ ಅದು ತಪ್ಪಲ್ಲ. ಆದರೆ, ಇಂದು ಶೋಷಣೆಯ ಮಿಥ್ಯಾರೋಪದಲ್ಲಿ ತಥಾಕಥಿತ ಶೋಷಿತರು ಕಾನೂನನ್ನು ಮುರಿಯುವುದು ಸರಿಯೇ? ಬಿಡಿ, ನಿಮಗೆ ಇದರ ಅರ್ಥ ಆಗಲೆಂದು ನಂಬಿಕೆ ಇಟ್ಟುಕೊಳ್ಳುವುದೂ ಮೂರ್ಖತನವೇ.

      ‘ಬಹುಸಂಖ್ಯಾತರು ಹೇಳುವುದು. …ಮಾಡುವುದು. ..ನಂಬುವುದು. ..ಎಲ್ಲಾ ಸತ್ಯ ಮತ್ತು ಸರಿ..ಅವರ ಗ್ರಂಥ ಪವಿತ್ರ. …ಅಂದರೆ ಅಲ್ಪ ಸಂಖ್ಯಾತರಿಗಿಲ್ಲಿ ಜಾಗವೇ ಇಲ್ಲ….ಅಲ್ಲವೇ…’ ಬೇಡಬೇಡವೆಂದುಕೊಂಡರೂ ಇದು ನಮ್ಮ ನೆರೆದೇಶವೊಂದರ ಪರಿಸ್ಥಿತಿಯನ್ನು ನೆನಪಿಗೆ ತರುತ್ತದೆ. ಅಂದಹಾಗೆ ನಮ್ಮ ದೇಶದ ಬಹುಸಂಖ್ಯಾತರಿಗೆ ಒಂದೇ ಧರ್ಮಗ್ರಂಥ, ಒಬ್ಬ ಪ್ರವಾದಿ ಇವೆಲ್ಲ ಇಲ್ಲ ಎನ್ನುವುದು ನಿಮಗೆ ತಿಳಿದಿಲ್ಲ ಎಂದು ಕೊಂಡಿದ್ದೇನೆ.

      ಇನ್ನು ನಿಮ್ಮ ಮೆಚ್ಚಿನ ‘ಆಫ್ರಿಕನ್ ಸ್ಟಡೀಸ್’ ನ ಸಂಶೋಧನಾ ವಿದ್ಯಾರ್ಥಿಯನ್ನು (ನಾಲ್ಕು ವರ್ಷಗಳಿಂದ ತೋಳೇರಿಸಿ ಅದೇನು ‘ಸಂಸೋದನೆ’ ಮಾಡ್ತಿದ್ದಾನೋ, ಆ ‘ಕನ್ಹಯ್ಯ’ನಿಗೇ ಗೊತ್ತು!) ‘ನಾಯಕನೊಬ್ಬ ಹುಟ್ಟಿಕೊಂಡ..’ ಎಂಬ ಆನಂದದಿಂದ ಪುಳಕಿತರಾಗಿ ನೋಡುತ್ತಿರುವವರು ಅದೆಷ್ಟು ಡೆಸ್ಪರೇಟ್ ಆಗಿದ್ದಾರೆ ಎನ್ನುವುದು ಕರುಣೆಗೂ ಕನಿಕರಕ್ಕೂ ಎಡೆಮಾಡಿಕೊಡುತ್ತದೆ, ಅಷ್ಟೇ!

      ಉತ್ತರ
    • ಕಮಲೇಶ
      ಮಾರ್ಚ್ 14 2016

      ಲಕ್ಷ್ಮಿಕಾಂತಣ್ಣ,
      ಈ ಕನ್ನಯ್ಯನೆಂಬುವವನ ಒಂದೇ ಒಂದು ಮಾತಿನ ಅರ್ಥ ಯೋಳ್ಬುಡಿ ಸಾಕು.ದೇಶದಿಂದ ಆಜಾದಿ ಬ್ಯಾಡ.ದೇಶದೊಳಗೆ ಬೇಕು ಅಂದೇನಣ್ಣೋ?

      ಉತ್ತರ
      • laxmikanth
        ಮಾರ್ಚ್ 14 2016

        Hi, Kamalesh,

        Please read my first response to what my friend Shri Sanket had written….

        it is so simple..

        ಉತ್ತರ
        • ಮಾರ್ಚ್ 14 2016

          Damn simple! ಸತ್ಯ ಮಾತ್ರ ಕಠಿಣವಾಗಿರೋದು. ಸುಳ್ಳು ಸಿಹಿಸಿಹಿಯಾಗಿ ಸಿಂಪಲ್ಲಾಗಿ ಇರತ್ತೆ. ಕಮಲೆಷಣ್ಣ ಅರ್ಥ ಗಿರ್ಥ ಎಲ್ಲ ಇರಬೇಕೂಂತ ಇಲ್ಲ. ಯಾವನೋ ಸ್ವಲ್ಪ ಆ ದಾಟಿಯಲ್ಲಿ ನಿಂತು ಕೂಗಿಕೊಂಡರೂ ಸಾಕು. ಅವನನ್ನು ಹೀರೋ ಮಾಡಿ ಅಟ್ಟಕ್ಕೇರಿಸಲು ಕಾಯ್ದುಕೊಂಡಿರುವ ಸಾಕಷ್ಟು ಜನರಿದ್ದಾರೆ.

          ಉತ್ತರ
          • laxmikanth
            ಮಾರ್ಚ್ 14 2016

            I pity you dear Sanket… It is you who are referring Kanaiah as Hero again and again…

            Don’t you think you are making him a real HERO and by making him HERO you are getting reduced to ZERO!!!

            ಉತ್ತರ
            • ಮಾರ್ಚ್ 14 2016

              I am proud to be looked as a ZERO by people like u just because I exposed the pitiable mindset of your kind of folks.
              I refer Kannaiah as Hero? Haha… ಅಂಗಡಿಯವ ಆಕಡೆ ನೋಡಿದಾಗ ಪೆಪ್ಪರ್ಮೆಂಟ್ ಎತ್ತಿಕೊಂಡ ಗುಂಡ, ಅಂಗಡಿಯವ ಪೆಪ್ಪರ್ಮೆಂಟ್ ಎಲ್ಲಿ” ಅಂದಾಗ “ನಾನಲ್ಲ ನಾನಲ್ಲ” ಅಂದನಂತೆ. ಹಂಗಾಯಿತು ತಮ್ಮ ಕಥೆ. ಕನ್ನಯ್ಯನನ್ನೇ ಆವಾಹಿಸಿಕೊಂದಂತೆ ಮೊದಲು ಬರೆದು, ಈಗ ಅವನ ಹೊಗಳಿದ್ದು ನಾನಲ್ಲ ಅಂತೆ. ಶರಣು ಸ್ವಾಮೀ…

              ಉತ್ತರ
              • ಮಾರ್ಚ್ 14 2016

                “ಕನ್ನಯ್ಯನನ್ನೇ ಆವಾಹಿಸಿಕೊಂಡಂತೆ…” ಆಗಬೇಕು.

                ಉತ್ತರ
            • WITIAN
              ಮಾರ್ಚ್ 18 2016

              ನಗೆಯು ಬರುತಿದೆ ನನಗೆ ನಗೆಯು ಬರುತಿದೆ….

              ಕನ್ಹಯ್ಯ ಕುಮಾರನಿಗೆ ಪೋಲಿಸರು ತಿಹಾರ್ ಜೈಲಿನಲ್ಲಿ ಹಾಕಿ ರುಬ್ಬಿದ್ದು ಪರಿಣಾಮಕಾರಿಯಾಗಿದೆ ಅಂತ ಕಾಣತ್ತೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಅಂತ ರಾಗ ಬದಲಾಯಿಸಿದ್ದಾನೆ. ಕನಿಷ್ಠ ಪಕ್ಷ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದರೆ ಇವನ ವಿರೋಧಕ್ಕೆ ಒಂದು ಬೆಲೆಯಿರುತ್ತಿತ್ತು. ಈಗ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಆದ್ದರಿಂದ ಅದನ್ನು ಯಾವುದೇ ವೇದಿಕೆಯಲ್ಲಿ ಚರ್ಚಿಸಲು ಭಾರತೀಯರಿಗೆ ಹಕ್ಕಿದೆ, (ಆದ್ದರಿಂದ ವಿರೋಧಿಸುತ್ತೇನೆ) ಎಂದರೆ ನಗೆಪಾಟಲಿಗೆ ಈಡಾಗುವುದು ಬಿಟ್ಟರೆ ಮತ್ತೇನೂ ಅಲ್ಲ. ೨೯ ವರ್ಷದ ‘ಹೈದ’ನ ಜಾಮೀನಿನ ನಂತರದ ಭಾಷಣ ಕೇಳಿ ಆನಂದತುಂದಿಲರಾದ ‘ಸಹಿಷ್ಣು’ಗಳು ಈಗ ಏನು ಹೇಳುತ್ತಾರೋ, ನೋಡಬೇಕು. ಮತ್ತಷ್ಟು ಮನರಂಜನೆ ಮುಂದಿದೆ…

              http://timesofindia.indiatimes.com/india/Now-Kanhaiya-Kumar-says-Kashmir-is-an-integral-part-of-India/articleshow/51459992.cms

              ಉತ್ತರ
              • ಮಾರ್ಕ್ಸ್ ಮಂಜು
                ಮಾರ್ಚ್ 21 2016

                ಮಹರ್ಷಿ ಮಾರ್ಕ್ಸ್ ಅವರ ಸಿದ್ದಾಂತಗಳನ್ನು ಮಣ್ಣುಗೂಡಿಸಲೆಂದು ಹುಟ್ಟಿಕೊಂಡವರು ಭಾರತದ ಕಮ್ಯುನಿಸ್ಟರು.ಈಗಲಾದರೂ ಇವರೆಲ್ಲರೂ ಮಹರ್ಷಿ ಮಾರ್ಕ್ಸ್ ಅವರ ದಾರಿ ಹಿಡಿಯಬೇಕಾಗಿದೆ

                ಉತ್ತರ
  9. ಕಮಲೇಶ
    ಮಾರ್ಚ್ 16 2016

    (ಬಹುಸಂಖ್ಯಾತರು ಹೇಳುವುದು,ಮಾಡುವುದು,ನಂಬುವುದು,ಎಲ್ಲಾ ಸತ್ಯ ಮತ್ತು ಸರಿ.ಅವರ ಗ್ರಂಥ ಪವಿತ್ರ.ಅಂದರೆ ಅಲ್ಪ ಸಂಖ್ಯಾತರಿಗಿಲ್ಲಿ ಜಾಗವೇ ಇಲ್ಲ.ಅಲ್ಲವೇ..ಕನಯ್ಯ ಆಜಾದಿ ಕೇಳುತ್ತಿರುವುದು ನಿಮ್ಮ ಈ ” ಬಹುಸಂಖ್ಯಾತ” ದಬ್ಬಾಳಿಕೆಯಿಂದ….)

    ಬಹುಸಂಖ್ಯಾತರೆಂದರೆ ಯಾರು ಲಕ್ಷ್ಮಿಕಾಂತಣ್ಣ.ಅವರ ಧರ್ಮ ಗ್ರಂಥ ಯಾವುದಣ್ಣ.ಅವರ ಧರ್ಮ ಗ್ರಂಥ ಮಾತ್ರವೇ ಪವಿತ್ರ ಅಂತ ಎಲ್ಲಿ ಹೇಳವ್ರೆ.ಅಲ್ಪಸಂಖ್ಯಾತರು ಯಾರಣ್ಣ,ಅವರನ್ನೇನಾದ್ರೂ ಸಮುದ್ರಕ್ಕೆಸಿತವ್ರಾ. ಎಲ್ಡು ವರ್ಶದ ಹಿಂದ್ಗಿಂತ ಈಗ ಏನಾ ಬದ್ಲಾಗೈತಂತ ಆಜಾದಿ ಬೇಕಣ್ಣೊ

    (ಮನುಷ್ಯನೊಬ್ಬನ ಯೋಗ್ಯತೆಯನ್ನು ಅವನ ಸ್ಥಾನವನ್ನು ಆತನ ಹುಟ್ಟಿನಿಂದ ನಿರ್ದರಿಸಬೇಕನ್ನುವ ಮೌಢ್ಯ ತುಂಬಿದ “ಪವಿತ್ರ” ಗ್ರಂಥಗಳನ್ನು ಸುಡದೇ ಇನ್ನೇನು ಮಾಡಬೇಕು….ಕನಯ್ಯ ಆಜಾದಿ ಕೇಳಿದ್ದು ಈ ಮೌಢ್ಯದಿಂದ…..)

    ಯಾವ್ದಣ್ಣ ಪವಿತ್ರ ಗ್ರಂಥ ತಗಂಬಾರಣ್ಣ ಸುಡಾನಾ.ಆಮ್ಯಾಕಾದ್ರೂ ಆಜಾದಿ ಸಿಕ್ತಾದೇನಣ

    (“ಮರ್ಯಾದಾ ಪುರುಷೋತ್ತಮ” ನನ್ನೂ ದಾರಿ ತಪ್ಪಿಸಿ ಅವನ ಕೈಯಲ್ಲಿ ಅವಮರ್ಯಾದೆಯ ಕಲಸ ಮಾಡಿಸಿದ ಪುರೋಹಿತಶಾಹಿ ನಿಮ್ಮ ರಾಷ್ಟ್ರೀಯತೆ ಅನ್ಸುತ್ತೆ.ಕನಯ್ಯ ಆಜಾದಿ ಕೇಳುತ್ತಿರುವುದು ಈ “ಶಾಹಿ” ಯಿಂದ…)

    ಪುರೋಹಿತಶಾಯಿಯಾ ಅದೆಲ್ಲೈತೆ,ಯಾರದು ಅಂತ ಹೇಳಣ.ಅದೇನು ದಯ್ಯವೇ ಕಾಣ್ದಂಗಿರೋಕೆ

    ಹೇಳಣ್ಣೋ,ಲಕ್ಷ್ಮಿಕಾಂತಣೋ

    ಉತ್ತರ

Leave a reply to sandeep bhat s ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments