ವಿಷಯದ ವಿವರಗಳಿಗೆ ದಾಟಿರಿ

ಮೇ 3, 2016

7

ಆಡಿಕೊಳ್ಳುವವರ ಮುಂದೆ, ಬಡಿದಾಡಿಯಾದರೂ ಗೆಲ್ಲಬೇಕು.

‍ನಿಲುಮೆ ಮೂಲಕ

– ಶ್ರೀಕಾಂತ ಆಚಾರ್ಯ

An angry group of white figures standing in a circle, pointing finger at a dotted figure in the middle.

Don’t try to sell yourotions’ because nobody gonna buy it. ಸತ್ಯದ ಮಾತುಗಳವು. ಇರೋ ‘ಪ್ರಾಬ್ಲಂ’ಗಳಿಗೆ ಪರಿಹಾರ ಕೊಡಿಸೋ ಅಂತ ಗೋಗರೆದರೆ, ಕೇಳಿಸಿಕೊಂಡವ ನಕ್ಕು ಬಿಡುತ್ತಾನೆ. Infact ಅವನಿಗೆ ಇಂತದ್ದೊಂದು ಸಮಸ್ಯೆಗೆ ‘ಸೊಲ್ಯೂಷನ್’ ಕೊಡಬೇಕು ಅಂತನಿಸಲ್ಲ. ಬದಲಾಗಿ ‘He is glad that you have problems. ಅಂತವರ ಎದುರಲ್ಲಿ ಗೋಳಿಟ್ಟುಕೊಂಡು ಪರಿಹಾರಕ್ಕೆ ಅಂಗಲಾಚುವುದು ಮೂರ್ಖತನ. ನಮ್ಮ ಸಮಸ್ಯೆ ಇರೋದು ಇಲ್ಲೆ. ನಮ್ಮ ನೋವುಗಳಿಗೆ ಗ್ರಾಹಕರಾರು? ಯಾರು ಅದಕ್ಕೆ ಅರ್ಹರು? ಹುಡುಕೋದು ಕಷ್ಟ.   ಆದರೆ, ಪ್ರತಿಯೊಬ್ಬರ ಜೀವನದಲ್ಲೂ ಒಂದಷ್ಟು ಜನ ‘ಸ್ನೇಹಿತರು’ ಅಂತಿರುತ್ತಾರೆ. ಅದರಲ್ಲಿ ಕೆಲವರು ಮಾತ್ರ ‘Genuine’. ಉಳಿದವರು ಸುಮ್ಮನೆ ಲೆಕ್ಕ ಭರ್ತಿಗಾಗಿ ಇರುವಂತವರು. Genuine ಆದ ಸ್ನೇಹಿತರ ಜೊತೆ ಹೇಳಿಕೊಂಡ ಅಷ್ಟೂ ಕಷ್ಟಗಳಿಗೆ ಪರಿಹಾರ ಸಿಗುತ್ತೆ ಅಂತಲ್ಲ. ಹೆಗಲ ಮೇಲಿದ್ದ ಭಾರದ ಚೀಲವನ್ನ ಒಂದಷ್ಟು ಹೊತ್ತು ಕೆಳಗಿಸಿದ ಭಾವ. ಸ್ವಲ್ಪ Relief ಅಷ್ಟೇ. Solution ಕೊಡುತ್ತಾನೋ ಇಲ್ಲವೋ ಆದರೆ ಒಂದು Comfort Zone’ಗೆ ಎಳೆದು ಕೊಂಡೊಯ್ದು, ‌Console ಮಾಡುತ್ತಾನೆ. ಅಷ್ಟರ ಮಟ್ಟಿಗೆ ಉಪಕಾರಿ ಆತ. ಇಂಥವರೇ ಇರೋ ಒಂದು ಸರ್ಕಲ್ ಕಟ್ಟಿಕೊಂಡಿರುತ್ತೇವೆ. ಆತ್ಮೀಯ ಸ್ನೇಹಿತರು ಅಂತ ಒಂದು Tag attach ಮಾಡಿರುತ್ತೇವೆ. ಎಕ್ಸಾಂ ಟಫ್ ಇತ್ತು ಕಣೋ ಅಂದಾಗ, ಬಿಡು ಗುರು Next ಟೈಮ್ ನೋಡೋಣಾ ಅಂತಾನೆ. ಹುಡುಗಿ ಕೈ ಕೊಟ್ಲು ಅಂದ್ರೆ ಹೆಗಲ ಮೇಲೆ ಕೈ ಹಾಕಿ ಕಣ್ಣೀರೊರಸುತ್ತಾನೆ. ಮದ್ಯರಾತ್ರಿ ಅಲ್ಲೆಲ್ಲೋ ನಿಂತು ಪೆಟ್ರೋಲ್ ಖತಂ ಅಂದ್ರೆ, ಖಾಲಿ ಬಾಟಲ್ ಹಿಡ್ಕೊಂಡು ಥಟ್ ಅಂತ ಪ್ರತ್ಯಕ್ಷನಾಗುತ್ತಾನೆ. ಯಾವತ್ತಿಗೂ ನಮ್ಮ ಕೈ ಬಿಡದಂತವನು ಆತ.

ಆದರೆ ಇವೆಲ್ಲವನ್ನ ಬಿಟ್ಟು ಉಳಿದೊಂದು ವರ್ಗ ನಮ್ಮ ಸುತ್ತಲೂ ಇರುತ್ತೆ. ಅವರೇನು ವಾಮಾಚಾರ ಮಾಡಿ ನಮ್ಮ ಲಗಾಡಿ ತೆಗೀಬೇಕು ಅನ್ನೋವಂತವರಲ್ಲ. ಬದಲಾಗಿ ನಾವು ಬಿದ್ದಾಗ ಮಾತ್ರ ಚಾಚೂ ತಪ್ಪದೇ ಒಂದು ಹಿಡಿಯಷ್ಟಾದರೂ ಮಣ್ಣು ಹಾಕೋಕೆ ಮರೆಯೋರಲ್ಲ. ಇಂತವರ ಮಧ್ಯದಲ್ಲಿ ಬದುಕೋದಿದ್ಯಲ್ಲ, ಅದೊಂಥರಾ ‘Challenging’ ಅಂತನ್ನಿಸುತ್ತೆ. ಬರ್ತೀನಿ, ಬರ್ತಿನಿ ಅಂತಾನೆ ಕೈ ಕೊಡೋ ಜನ ಇವರು. ಬಹುಶಃ ನಮ್ಮನ್ನ ‘Life’ನಲ್ಲಿ ಗಟ್ಟಿ ಮಾಡೋದು ಇಂತವರೇ. ತಲೆ ಮೇಲೆ ಚಪ್ಪಡಿ ಕಲ್ಲು ಎಳೆದವರ ಮುಂದೆ ಮತ್ತಷ್ಟು, ಇನ್ನಷ್ಟು ಗಟ್ಟಿಯಾಗಿ ನಿಲ್ಲಬೇಕು ಅನ್ನೋ ಹಟಕ್ಕೆ ಬೀಳುತ್ತೀವಲ್ಲ : ಆ ಹಟವೇ ನಮ್ಮ ಬದುಕಿಗೊಂದು ‘ಫೈನ್’ ಆದ ದಾರಿ ತೋರಿಸುತ್ತೆ. ನಗೋರ ಮುಂದೆ ಅಳೋದು ನಿಷಿಧ್ದ ಅಲ್ವಾ? ಹಾಗಾಗಿ ಅಳೋ ಪ್ರಸಂಗ ಬರದಂತೆ ಗುದ್ದಾಡಿ ಜೀವನ ನಡೆಸುತ್ತೀವಿ. ಯಾವುದೋ ಕಷ್ಟಕ್ಕೆ ಹೆದರಿ ಮೂಲೆಗೆ ಸೇರುವ ಮುನ್ನ ಇಂತವರ ನೆನಪಾಗುತ್ತೆ, ಛೇ., ಗೊತ್ತಾದ್ರೆ ನಗ್ತಾನಲ್ಲಪ್ಪ ಅಂತ ಭಯ ಶುರುವಾಗುತ್ತೆ. ಆ ಭಯವೇ ನಾವು ಕೆಲಸಕ್ಕೆ ಹಚ್ಚಿಕೊಳ್ಳುವಂತೆ ಕಚ್ಚುತ್ತೆ. ದೇಹಕ್ಕೆ ರೆಸ್ಟ್ ಬೇಕು ಅಂದ್ಕೊಂಡ್ರು ಮನಸ್ಸು ಬೇಡ ಅನ್ನುತ್ತೆ. ಗುರಿ ಮುಟ್ಟೋವರೆಗೂ ನೋ ರೆಸ್ಟ್ ಅನ್ನುತ್ತೆ. ಉಸಿರು ಬಿಗಿ ಹಿಡಿದು ಅಣಿಯಾಗುತ್ತೀವಿ. ಮಾಡೋ ಕೆಲಸದಲ್ಲಿ ಸೋತರೂ, ಬಿದ್ದರೂ ಮತ್ತೆ , ಮತ್ತೆ ಏಳುತ್ತೀವಿ, ಎದ್ದು ಬೀಳುತ್ತೀವಿ, ಬಿದ್ದು ಏಳುತ್ತೀವಿ. ಕೊನೆಗೊಂದು ದಿನ ನಾವು ‌ಹಾಕಿಕೊಂಡ ‘ಗುರಿ’ ಅಲ್ಲೇ ಪಕ್ಕದಲ್ಲೆಲ್ಲೋ ನಮ್ಮನ್ನೇ ಕಾಯೋ ಹಾಗೆ ಕೂತಿರುತ್ತೆ. ಹತ್ತಿರ ಬಾ ಅಂತ ಕೈ ಚಾಚುತ್ತೆ. ಉಸ್ಸಪ್ಪಾ …. ಸ್ಟಾಪ್ ಬಂತು ಅಂತ ಸ್ವಲ್ಪ Relax ಆದಿರೋ ಕತೆ ಮುಗಿತು. ಇಷ್ಟು ದಿನ ಪಟ್ಟ ಆ ಶ್ರಮ ಹೇಳ ಹೆಸರಿಲ್ಲದೇ ವ್ಯರ್ಥವಾಗಿಬಿಡುತ್ತೆ. ಮತ್ತೆ ಎಲ್ಲವನ್ನೂ ಮೊದಲಿಂದ ಶುರು ಮಾಡಬೇಕಾಗುತ್ತೆ. ಹಾಗಾಗಿ ಗುರಿ ಮುಟ್ಟಿ ಜೈ ಅನ್ನುವ ತನಕವೂ ಒಂದಿಂಚೂ ವಿಚಲಿತರಾಗಕೂಡದು.

ಅನುಮಾನ, ಅವಮಾನ , ನೋವು, ದುಃಖ ಎಲ್ಲರ ಬದುಕಲ್ಲೂ ಇದ್ದದ್ದೇ. ಸೋಲದೇ ನೀವು ಗೆಲ್ಲುತ್ತೀರಿ ಅಂತಾದರೆ, ನೀವು ಅಯ್ದುಕೊಂಡ ದಾರಿ ಸರಿಯಾಗಿಲ್ಲ ಅಂತ. ಹೂವಿನ ಪಥದಲ್ಲಿ ನಡೆಯೋದು ಸುಲಭ. ಅದರೆ ಕೊನೆಗೊಂದು ದಿನ ಮುಗ್ಗರಿಸಿದಾಗ ಮಾತ್ರ ಎಲ್ಲವೂ ಯಾತನಾಮಯವೇ. ಇಷ್ಟು ದಿನ ನಡೆಸಿಕೊಂಡು ಬಂದ ಹಾದಿ ಯಾವತ್ತಿಗೂ ನಮ್ಮನ್ನ ಕೈ ಹಿಡಿದು ಎತ್ತೋದಿಲ್ಲ. ಯಾಕೆಂದರೆ ಬರೀ ಸುಖವನ್ನೇ ಉಂಡ ನಮಗೆ, ಕಷ್ಟ ಬಂದಾಗ ಅದನ್ನು ಎದುರಿಸುವುದು ಹೇಗೆ ಅನ್ನೋದನ್ನ ಕಲಿಸಿಕೊಟ್ಟಿರಲ್ಲ. ಅಂಥಹ ಹಾದಿಯಲ್ಲಿ ಅಸಲೀ ಜೀವನದ ಪರಿಚಯವೇ ನಮಗಾಗಿರುವುದಿಲ್ಲ. ಇನ್ನು ಪಾಠವಾದರೂ ಎಲ್ಲಿಂದ ಕಲಿತೇವು? ಹಾಗಾಗಿ ಹಾದಿ ಸುಗಮವಾಗಿದೆ ಅಂತನ್ನಿಸಿದರೆ, ನಿಂತ ಕಡೆಯೇ ಒಂದಷ್ಟು ಹೊತ್ತು ನಿಂತು ವಿಮರ್ಶಿಸಿಕೋಳ್ಳೋದು ಒಳಿತು. ಸರಿ ಅಂತನ್ನಿಸದರೆ ಸರಿ, ತಿರುಗಿ ನೋಡದೆಯೂ ಮುಂದೆ ಓಡಿ ಹೋಗಿ ಗಮ್ಯ ತಲುಪಿಕೊಳ್ಳುವ. ತಪ್ಪಿಲ್ಲ. ಆದರೆ ಇಷ್ಟೇ ಇಷ್ಟು ತಪ್ಪೆಂದರೂ ಮುಂದೆ ನಡೆಯೋದೇ ಬೇಡ. ಎಲ್ಲವನ್ನೂ ಮರೆತು ಮತ್ತೊಂದು ಶುದ್ಧ ಸಾಹಸಕ್ಕೆ ಕೈ ಹಾಕುವ. ಹೊಸತೊಂದು ಹೋರಾಟಕ್ಕೆ ನಮ್ಮನ್ನ ಅಣಿ ಮಾಡಿಕೊಳ್ಳುವ. ಗಾಳಿ, ಮಳೆ, ಸುನಾಮಿ, ಬರ, ಕ್ಷಾಮ, ನೋವು, ದುಃಖ , ಅವಮಾನ ಯಾವುದೇ ಎದುರಾಗಲಿ, ಎಲ್ಲದಕ್ಕೂ ಒಂದು ಗುದ್ದು ಕೊಡುವ ಮನಸ್ಸನ್ನ ತಯಾರಿಸಿಕೊಳ್ಳುವ. ಒಂದು ಶುದ್ಧ ದಂಡಯಾತ್ರೆಯಂತೆ, ಛಲದಿಂದ ಬಡಿದಾಡುವ. ಆಡಿಕೊಳ್ಳುವವರ ಬಾಯಿ ಮುಚ್ಚಿಸಬೇಕೆಂದರೆ ಇದೆಲ್ಲವನ್ನ ಮಾಡಲೇಬೇಕು. No Excuse. ಇಷ್ಟೆಲ್ಲಾ ಅದ ಮೇಲೂ ‘ಜಯ’ ದಕ್ಕದೇ ಇದ್ದೀತಾ? ದಕ್ಕಲೇಬೇಕು. ಯಾಕೆಂದರೆ, ಇದೊಂದು ಕ್ಷಣಕ್ಕೋಸ್ಕರ ನಮ್ಮ ಇಡೀ ಬದುಕನ್ನ ಬಸಿದಿರುತ್ತೀವಲ್ಲ. ದಕ್ಕೇ ದಕ್ಕುತ್ತದೆ. ಅಲ್ಲಿಯವರೆಗೆ ಉಸಿರು ಬಿಗಿ ಹಿಡಿದು ಓಡೋದರಲ್ಲೇ ಇರೋದು, ಜೀವನದ ನಿಜವಾದ ‘ಥ್ರಿಲ್’.

7 ಟಿಪ್ಪಣಿಗಳು Post a comment
  1. RENU K S's avatar
    RENU K S
    ಮೇ 3 2016

    a very good article

    ಉತ್ತರ
  2. ಮಂಜುಳ.ವಿ's avatar
    ಮಂಜುಳ.ವಿ
    ಮೇ 3 2016

    ವಾಸ್ತವ ಸತ್ಯ …ನವಿರಾದ ಭಾವದಲ್ಲಿ..!!😊
    ಸೂಪರ್

    ಉತ್ತರ
  3. ಸ್ಪಂದನ ರಾಮ್'s avatar
    ಸ್ಪಂದನ ರಾಮ್
    ಮೇ 3 2016

    Good article sir

    ಉತ್ತರ
  4. Raju Patil.'s avatar
    ಫೆಬ್ರ 12 2019

    ಮತ್ತೆ ಮತ್ತೆ ಓದಬೇಕು ಅನ್ನಿಸಿಬಿಡತ್ತೆ.
    ಬಹಳ ವಾಸ್ತವವಾದ ಅಂಶಗಳನ್ನ, ಬೇಗ ಅರ್ಥ ಆಗೋಹಾಗೆ ಹೇಳಿದ್ದೀರಿ.😍😘

    ಉತ್ತರ

Leave a reply to Shreekantha Acharya ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments