ವಿಷಯದ ವಿವರಗಳಿಗೆ ದಾಟಿರಿ

ಮೇ 24, 2016

30

ತಲೆಕೆಟ್ಟ ಕಾನೂನುಗಳು ಮತ್ತು ಸ್ವಂತ ಬುದ್ಧಿಯಿಲ್ಲದ ಜೀವಿಗಳು

‍ನಿಲುಮೆ ಮೂಲಕ

–  ರಾಕೇಶ್ ಶೆಟ್ಟಿ

ಬುದ್ಧಿಜೀವಿಗಳ ಮೂಢನಂಬಿಕೆಗಳುಇತ್ತೀಚೆಗೆ ಮತ್ತೂರಿನಲ್ಲಿ ನಡೆದ ಸೋಮಯಾಗದಲ್ಲಿ ಸಂಕೇತಿ ಬ್ರಾಹ್ಮಣರು ಮೇಕೆ ಬಲಿ ಕೊಟ್ಟು ತಿಂದರಂತೆ, ಸೋಮರಸ ಕುಡಿದರಂತೆ ಅಂತ ಪ್ರಗತಿಪರರ ವಾಣಿಯೊಂದು ಸುಳ್ಳು ಸುದ್ದಿ ಬರೆಯಿತು. ಈ ಸುದ್ದಿಯಿಂದಾಗಿ ಟೌನ್ ಹಾಲ್ ಮುಂದೆ ನಿಂತು ದನ ತಿನ್ನುವುದನ್ನು ಬೆಂಬಲಿಸುವ ಕಬಾಬ್ ಕ್ರಾಂತಿಕಾರಿಗಳಿಗೂ ಹೊಟ್ಟೆನೋವು ಕಾಣಿಸಲಾರಂಭಿಸಿತು. ಇವರನ್ನು ಕರೆಯದೇ ತಿಂದರೂ ಎಂದು ಹೊಟ್ಟೆ ನೋವಾಗಿತ್ತೋ ಏನೋ. PhD ಮಹಾಶಯನೊಬ್ಬ ಬ್ರಾಹ್ಮಣರು ಮಾಂಸ ತಿನ್ನಲು ಶುರು ಮಾಡಿದರೆ ರೇಟ್ ಜಾಸ್ತಿಯಾಗುತ್ತೆ ಅಂತ ಅಳ್ತಾ ಇದ್ದ. ಎಂತೆಂತವರೆಲ್ಲ ವಿವಿಗಳಲ್ಲಿ ಪಾಠ ಮಾಡುತ್ತಾರಪ್ಪಾ ಅನಿಸಿತು. ಎಲ್ಲಾ (ಜಾತಿ/ಪಂಗಡದ) ಬ್ರಾಹ್ಮಣರು ಸಸ್ಯಹಾರಿಗಳು ಅನ್ನೋದು “ಮೂಢನಂಬಿಕೆ”. ಸಿದ್ರಾಮಯ್ಯನವರಿಗೆ ಹೇಳಿ ಮೌಢ್ಯ ನಿಷೇಧ ಕಾಯ್ದೆಯ ಮೂಲಕ ಈ ಮೂಢನಂಬಿಕೆಯನ್ನು ನಿಷೇಧಿಸಬೇಕು. ಕಾಶ್ಮೀರಿ ಪಂಡಿತರಿಗೆ ಶಿವರಾತ್ರಿ ಹಬ್ಬದಂದು ಮಾಂಸದಡುಗೆಯೇ ವಿಶೇಷವಾದದ್ದು. ಬಂಗಾಳಿ, ಓಡಿಶಾದ ಬ್ರಾಹ್ಮಣರೂ, ಗೌಡ ಸಾರಸ್ವತ ಬ್ರಾಹ್ಮಣರಲ್ಲೂ ಮಾಂಸಹಾರಿಗಳಿದ್ದಾರೆ.

ಈ ಸುದ್ದಿಯ ಗದ್ದಲ ಶುರುವಾದ ಆ ಕ್ಷಣಕ್ಕೆ ನನ್ನ ಮನಸ್ಸಿಗನಿಸಿದ್ದು ಹೀಗೆ -ಜಾತ್ರೆ,ಉತ್ಸವ ಇತ್ಯಾದಿ ಸಾಂಸ್ಕೃತಿಕ ಆಚರಣೆಗಳಲ್ಲಿ ನಡೆಯುವ ಪ್ರಾಣಿಬಲಿ ಅಮಾನವೀಯ, ಕಾನೂನಿನ ಪ್ರಕಾರ ಅಪರಾಧವಾದರೇ, ಮಾಂಸದಂಗಡಿಗಳಿಗೆ-ಮಾಂಸಹಾರಿ ಹೋಟೆಲ್ಲುಗಳಿಗೇಕೆ ಸರ್ಕಾರಿ ಪರವನಾಗಿ? ಅಲ್ಲಿ ಪ್ರಾಣಿ ಬಲಿಯಾಗುವುದಿಲ್ಲವೇ? ಅಥವಾ ಅಲ್ಲಿ ಮಾಂಸ ತುಂಡುಗಳು ಆಕಾಶದಿಂದ ಉದುರುತ್ತವೆಯೇ? ಅಲ್ಲೊಂದು ನ್ಯಾಯ,ಇಲ್ಲೊಂದು ನ್ಯಾಯವೇಕೆ? ಸರ್ಕಾರಕ್ಕೆ ಅದನ್ನು ತಡೆಯುವ ತಾಕತ್ತಿದೆಯೇ? ಸರ್ಕಾರವನ್ನು ಬಿಡಿ. ಆಹಾರದ ಹಕ್ಕಿನ ಬಗ್ಗೆ ಗಂಟೆಗಟ್ಟಲೇ ಭಾಷಣ ಕೊಡಬಲ್ಲ, ಬುದ್ಧಿಜೀವಿಗಳ ದ್ವಂಧ್ವ ನೋಡಿ. ದನ ತಿನ್ನುವುದು ಆಹಾರದ ಹಕ್ಕಾದರೇ, ಯಾಗ ನಡೆಸುವುದು, ಯಾಗದಲ್ಲಿ ಬಲಿಕೊಡುವುದು ಯಾಗ ನಡೆಸುವವರ ಹಕ್ಕಾಗುವುದಿಲ್ಲವೇ? ಅಥವಾ ಹಕ್ಕುಗಳನ್ನು ನಿರ್ಧರಿಸುವವರು ಪ್ರಗತಿಪರರೇ? ಇವರು ಸತ್ಯಸಂಧರಾದರೇ, ಎಲ್ಲಾ ರೀತಿಯ ಪ್ರಾಣಿಹಿಂಸೆಗಳನ್ನು ನಿಲ್ಲಿಸಲಿ ನೋಡೋಣ. ಆಗುವುದಿಲ್ಲವೆಂದಾದರೇ, ಆಚರಣೆಗಳಲ್ಲಿ ಮೂಗುತೂರಿಸುವ ಮೂರ್ಖ ಕೆಲಸಗಳನ್ನು ಸರ್ಕಾರಗಳು ಬಿಡಬೇಕು.

ಅದ್ಯಾರೋ ಸ್ವಾಮೀಜಿಯೊಬ್ಬರು ಬಂದು ಕೊಡವರ ಕೆಲವು ಆಚರಣೆಗಳಿಗೆ ಪ್ರಾಣಿಬಲಿಯ ನೆಪವೊಡ್ಡಿ ಅಡ್ಡಗಾಲಾಕಿದ್ದನ್ನು ಸಂತೋಷ್ ತಮ್ಮಯ್ಯ ಬರೆದಿದ್ದರು. ಕೊಡಗಿನ ಎರಡು-ಮೂರು ಕಡೆ ಜಿಲ್ಲಾಡಳಿತ ಮೂಗುತೂರಿಸಿ ಪೋಲಿಸ್ ಮತ್ತು ಕಾನೂನಿನ ಭಯ ತೋರಿಸಿ ಕೊಡವರ ಆಚರಣೆಗೆ ಕಲ್ಲುಹಾಕಿತಂತೆ! ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಎನಿಸಿಕೊಂಡವರು ರೀಲು ಸುತ್ತಿಕೊಂಡು ಲಗಾಡಿಯೆದ್ದ ಹಳೇ ಕ್ಯಾಸೆಟ್ಟಿನಲ್ಲಿ ಬರುವ ಗೊರಗೊರ ಹಾಡಿನಂತೆ ಒಂದು ಪದ ಹಾಡುತ್ತಿರುತ್ತಾರೆ “ಸಂಘಪರಿವಾರದವರು ಈ ನಾಡಿನ ಬಹುಸಂಸ್ಕೃತಿಯನ್ನು ನಾಶ ಮಾಡಿ ಏಕ ಸಂಸ್ಕೃತಿಯನ್ನು ಹೇರಲು ಹೊರಟಿದ್ದಾರೆ” ಅಂತ. ಆದರೆ,ಈ ನಾಡಿನ ಬಹುಸಂಸ್ಕೃತಿಯ ಆಚರಣೆಗಳ ಬಗ್ಗೆ ಕಳಕಳಿ ತೋರಿಸುವಂತೆ ವರ್ತಿಸುವ ಇದೇ ಜನರು ಈ ದೇಶದ ಧರ್ಮಗ್ರಂಥ ಸಂವಿಧಾನ ಅದರಂತೆ ನಡೆದುಕೊಳ್ಳಿ ಅಂತ ಅಪ್ಪಣೆಕೊಡಿಸುತ್ತ, ನಾಡಿನ ಬಹುಸಂಸ್ಕೃತಿಗಳನ್ನು ಕಾನೂನಿನ ನೆಪವೊಡ್ಡಿ ನಾಶ ಮಾಡುತ್ತಾ ಏಕಸಂಸ್ಕೃತಿಯನ್ನು ಹೇರುತಿದ್ದಾರೆ. ಸಂವಿಧಾನಕ್ಕಿಂತ ಮೊದಲಿದ್ದ ಆಚರಣೆಗಳು ಎಲ್ಲಿಗೆ ಹೋಗಬೇಕು? ಸಂವಿಧಾನದ ಹೆಸರಿನಲ್ಲಿ ಈ ದೇಶದ ಬಹುಸಂಸ್ಕೃತಿಯ ಆಚರಣೆಗಳು ಸ್ಮಶಾನ ಸೇರಬೇಕೆ? ಸಂವಿಧಾನದ ವಿರುದ್ಧ ಮಾತನಾಡಿದೆ ಎಂದು ಒಂದು ವರ್ಗ ದನಿಯೆತ್ತಬಹುದೇನೋ? ಅವರು ಮಾಂಸಹಾರಿಗಳಲ್ಲವೇ? ಅವರು ತಿನ್ನುವ ಮಾಂಸವೇಗೆ ಸಿಗುತ್ತದೆ? ಅದನ್ನು ಮಾನ್ಯ ಮಾಡುವ ಸಂವಿಧಾನ, ಸಾಂಪ್ರದಾಯಿಕ ಆಚರಣೆಗಳಡಿಯಲ್ಲಿ ಏಕೆ ಮಾಡಬಾರದು? ಅವರಿವರ ಆಚರಣೆಗಳು ಪಕ್ಕಕ್ಕಿರಲಿ. ಸಂವಿಧಾನವೇ ಅಂತಿಮ ಎಂಬುವವರು ನಡೆಸುವ ಆಚರಣೆಗಳಲ್ಲಿ ಸರ್ಕಾರ ಮೂಗು ತೂರಿಸಿದರೆ ಇವರು ಸುಮ್ಮನಿರುತ್ತಾರೆಯೇ? ಬಗ್ಗಿದವರಿಗೊಂದು ಗುದ್ದು ಎನ್ನುವುದೇ ಈಗಿನ ವ್ಯವಸ್ಥೆಯ ನ್ಯಾಯ.

ಈ ಪ್ರಗತಿಪರರ ಪುಂಗಿಗೆ ಡೋಲು ಬಡಿಯಲಿಕ್ಕೆಂದೇ ಒಂದಿಷ್ಟು ಬಲಪಂಥೀಯ ಪ್ರಾಣಿದಯಾಮಯಿ ಸಸ್ಯಹಾರಿಗಳೂ ಸೇರಿಕೊಂಡಿದ್ದಾರೆ.ಅದ್ಯಾಕೆ ಹೀಗೆ? ಸಸ್ಯಹಾರಿಗಳ ಆಚರಣೆ ಮಾತ್ರವೇ ಸಂಸ್ಕೃತಿ ಉಳಿದದ್ದು ವಿಕೃತಿ ಎಂಬುದು ಇವರ ನಿಲುವೇ? ಈ ಜನರಿಗೇಕೆ ತಮ್ಮ ಕೆಲಸ ನೋಡಿಕೊಂಡು ತೆಪ್ಪಗಿರಲು ಬರುವುದಿಲ್ಲ? ಮತ್ತೂರಿನ ವಿಷಯದಲ್ಲಿ ಕೇಳಿಬಂದ ವಾದಗಳಲ್ಲಿ, ಬ್ರಾಹ್ಮಣರು ತಮಗೆ ಕೊಡದೇ ಮಾಂಸ ತಿಂದರೆಂದು ಹೊಟ್ಟೆನೋವು ಮಾಡಿಕೊಂಡ ಗುಂಪು ಒಂದಾದರೇ, ಇನ್ನೊಂದು ಗುಂಪು ಸತ್ಯಶೋಧನೆಗೆ ಹೊರಟು ಅಲ್ಲಿ ಪ್ರಾಣಿಬಲಿಯಾಗಲಿಲ್ಲ ಎಂದಿತು. ಮತ್ತೊಂದು ಗುಂಪು ಸೇಫ್ ಆಟಕ್ಕಿಳಿದು ಈ ಘಟನೆಯನ್ನು ಖಂಡಿಸಿತು. ಆದರೆ, ಈ ಯಾವುದೇ ಗುಂಪುಗಳೂ ಅಲ್ಲಿ ಬಲಿ ಕೊಟ್ಟಿದ್ದರೇ ಅದನ್ನೊಂದು ಆಚರಣೆಯ ಭಾಗವಾಗಿ ನೋಡಬೇಕು ಅಂತ ಯೋಚಿಸಲಿಲ್ಲ.

ಮಾಂಸಹಾರಿಯಾದ ನನಗೆ ಪ್ರಾಣಿಬಲಿಯೆಂಬುದು ಆಚರಣೆಯ ಭಾಗವಾಗಿಯಷ್ಟೇ ಕಾಣಿಸುತ್ತದೆ. ಹಾಗಾಗಿ ಒಂದು ವೇಳೆ ಮತ್ತೂರಿನಲ್ಲಿ ಬಲಿ ಕೊಟ್ಟಿದ್ದರೆ, ಅದು ಯಾಗ ಮಾಡಿಕೊಂಡವರಿಗೆ ಸಂಬಂಧಿಸಿದ್ದು. ಉಳಿದವರೇಕೆ ತಲೆಕೆಡಿಸಿಕೊಳ್ಳಬೇಕು? ಈ ದೇಶದ ಜನರಿಗೆ ಅಥವಾ ಹಿಂದೂಗಳಿಗೆ ತಮ್ಮ ಹಿರಿಯರಿಂದ ಬಂದ ಆಚರಣೆಗಳನ್ನು ನಡೆಸುವ ಹಕ್ಕಿಲ್ಲವೇ? ಹಿಂದೂಗಳಿಗೆ ಅಂತಲೇ ಏಕೆ ಒತ್ತಿ ಹೇಳಬೇಕೆಂದರೆ, ಸಂವಿಧಾನ, ಕಾನೂನು ಇತ್ಯಾದಿಗಳು ಅಪ್ಪ್ಲೈ ಆಗುವುದು ಹಿಂದೂಗಳೆಂದು ಗುರುತಿಸಲ್ಪಡುವ ಭಿನ್ನ ಭಿನ್ನ ಜಾತಿ-ಸಂಪ್ರದಾಯಗಳ ಭಾರತೀಯರಿಗೆ ಮಾತ್ರವೇ. ಉಳಿದಂತೆ ಇಸ್ಲಾಂ, ಕ್ರಿಶ್ಚಿಯನ್ ಆಚರಣೆಗಳ ತಂಟೆಗೂ ಇವರು ಹೋಗುವುದಿಲ್ಲ! ಮೇಕೆಯ ಬಗ್ಗೆ ಕಣ್ಣೀರು ಸುರಿಸಿ ಕಾನೂನು ಕ್ರಮಕ್ಕಾಗಿ ಎದೆ ಬಡಿದುಕೊಂಡವರು ಬಕ್ರೀದ್ ದಿನ ಬಲಿಯಾಗುವ ಆಡು-ಕುರಿಗಳ ಬಗ್ಗೆ ಮಾತನಾಡಲಿ ನೋಡೋಣ, ಆಗ ಸಂವಿಧಾನವೆಂಬ ಧರ್ಮಗ್ರಂಥದ ಪಾಠ ಮಾಡುವ ಧೈರ್ಯ ತೋರಬಲ್ಲರೇ? ಬಗ್ಗುವವರಿಗಷ್ಟೇ ಪೆಟ್ಟು ಎಂಬುದೇ ಈಗಿನ ನ್ಯಾಯ.

ಪ್ರೊಫೆಸರ್ ಪದಕ್ಕೆ ಅವಮಾನದಂತಿರುವ ವ್ಯಕ್ತಿಯೊಬ್ಬ ಪತ್ರಿಕೆಯೊಂದರಲ್ಲಿ “ಯಜ್ಞಗಳಿಗಾಗಿ ಪ್ರಾಣಿ ಬಲಿ ನಡೆಯುತ್ತಿದ್ದಿದ್ದರಿಂದ, ಬೇಸಾಯಕ್ಕೆ ದನಕರುಗಳು ಇಲ್ಲದೇ ತೊಂದರೆ ಆಗುತ್ತಿತ್ತು. ಬುದ್ಧ ಧಮ್ಮ ಹರಡಿದ್ದರಿಂದ ಯಜ್ಞಗಳು ನಿಂತು ಹೋದವು.” ಅಂತ ಬರೆದಿದ್ದರು. ಆ ಮಹಾನುಭಾವನ ತರ್ಕದಲ್ಲೇ ನೋಡಿದರೆ, ಅವರು ಗೋ-ಹತ್ಯೆ ನಿಷೇಧ ಕಾಯ್ದೆಯನ್ನು, ಮಾಂಸಹಾರ ಸೇವನೆಯನ್ನು ನಿಷೇಧಿಸಬೇಕು ಎಂಬುದನ್ನು ಬೆಂಬಲಿಸಬೇಕಿತ್ತು. ಆದರೆ ಆಗ ಆಹಾರದ ಹಕ್ಕು ಎಂಬ ಪುಂಗಿಯೂದಿ, ಮೇಕೆಯ ವಿಷಯ ಬಂದರೆ ರೈತರು ನೆನಪಾಗೋ ಎಡಬಿಡಂಗಿ ಮನಸ್ಥಿತಿಯ ಜನ. ಇಂತ ಮನಸ್ಥಿತಿ ಆ ಒಬ್ಬ ವ್ಯಕ್ತಿಯದ್ದಲ್ಲ, ಎಡಪಂಥೀಯರೆಂದು ಕರೆದುಕೊಳ್ಳುವ ಬಹಳಷ್ಟು ಮಂದಿಯದ್ದು. ಪಾಶ್ಚಾತ್ಯ ಶಿಕ್ಷಣದಿಂದ ಶಿಥಿಲವಾಗಿರುವ ಇವರ ಮೆದುಳು, ಭಾರತೀಯ ಬ್ರಿಟಿಷರಂತೆ ವರ್ತಿಸುತ್ತಿದೆ. ಪೂರ್ಣ ಭಾರತೀಯರೂ ಅಲ್ಲ, ಪೂರ್ಣ ಬ್ರಿಟಿಷರೂ ಅಲ್ಲ.

ಕೇವಲ ಎಡಪಂಥೀಯರಿಗೇ ಮಾತ್ರವೇ ಈ ಖಾಯಿಲೆಯಿದೆ ಎನ್ನುವುದು ಅರ್ಧಸತ್ಯ. ಅವರನ್ನೂ ಮೀರಿಸಬಲ್ಲ ಬ್ರಿಟೀಷ್ ಶಿಕ್ಷಣದ ಮೆದುಳಿನ, ಭಾರತೀಯ ಧಿರಿಸಿನವರು ಬಲಪಂಥೀಯರಲ್ಲೂ ಇದ್ದಾರೆ. ಉದಾಹರಣೆಗೆ ಶನಿಸಿಂಗಾಣಪುರ ದೇವಸ್ಥಾನದ ನಿರ್ದಿಷ್ಟ ಪ್ರದೇಶಕ್ಕೆ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಪುರಾತನ ಸಂಪ್ರದಾಯ ಈ ಜನರಿಗೆ ಅಸಮಾನತೆಯಂತೇ ಕಂಡಿತೇ ಹೊರತು, ದೇವಸ್ಥಾನಗಳ ಸಂಪ್ರದಾಯಗಳು ಮತ್ತು ಆಯಾ ಜಾಗದ ಶಕ್ತಿಗಳಿಗನುಗುಣವಾಗಿಯೂ ಇಂತಹದ್ದೊಂದು ಪರಂಪರೆ ಬೆಳೆದುಬಂದಿದೆಯೆಂಬ ನೆಲೆಯಲ್ಲಿ ಇವರು ಯೋಚಿಸಲಿಲ್ಲ. ಶ್ರೀ ರವಿಶಂಕರ್, ಸುಬ್ರಹ್ಮಣ್ಯನ್ ಸ್ವಾಮಿಯಂತವರೂ ಸಮಾನತೆಯ ಪುಂಗಿಯೂದಿದವರೇ. ಈ ವಿಷಯದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಮಾತುಗಳು ಲಾಜಿಕಲ್ ಎನಿಸುವಂತಿದ್ದವು. ದೇವಸ್ಥಾನವೆಂಬುದು ಕೇವಲ ದೇವರನ್ನು ಪೂಜಿಸುವ ಜಾಗವಲ್ಲ, ಭಿನ್ನ ಶಕ್ತಿ ತರಂಗಗಳನ್ನು ಮುಖಾಮುಖಿಯಾಗುವ ಜಾಗವೂ ಹೌದು. ಲಿಂಗ ಭೈರವಿಯಂತ ಜಾಗಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ ಎಂಬುದನ್ನು ಉಲ್ಲೇಖಿಸಿದ್ದರು. ಕಡೆಗೇನಾಯಿತು? ಸಂವಿಧಾನದಂತೆ ನಡೆಯುವ ನ್ಯಾಯಾಲಯದ ಆದೇಶದಂತೆ ಅಲ್ಲೇನೋ ಹೆಣ್ಮಕ್ಕಳಿಗೂ ಪುರುಷ ಭಕ್ತರಂತೆಯೇ ಅವಕಾಶ ಕೊಡಿಸಲಾಯಿತು. ಅದೆಷ್ಟು ಜನ ಅಲ್ಲಿಗೇ ಹೋಗುತ್ತಾರೆ ಎಂಬ ಕೂತೂಹಲ ನನ್ನಲ್ಲಿದೆ. ತೋರಿಕೆಗೆಂದು ಹೋದವರು ಅತ್ಲಾಗಿರಲಿ. ಆ ದೇವರಿಗೆ, ಆ ಜಾಗಕ್ಕೆ ಹಿಂದಿನಿಂದಲೂ ನಡೆದುಕೊಂಡು ಬರುವ ಮಹಿಳಾ ಭಕ್ತರೇನೂ ತಮ್ಮ ಆಚರಣೆಗಳನ್ನು ಬದಲಿಸಲಾರರು. ಕೇವಲ ಮೂರ್ಖರಷ್ಟೇ ಭಕ್ತಿಯ ವಿಷಯವಾದ ದೇವಸ್ಥಾನದಲ್ಲೂ “ಹಕ್ಕಿನ” ವಿಷಯ ಮಂಡಿಸಬಲ್ಲರು ಮತ್ತು ಅವರದೇ ಮನಸ್ಥಿತಿಯ ಜನರು ಅದನ್ನು ಒಪ್ಪಬಲ್ಲರು.

ಶನಿಸಿಂಗಣಾಪುರದ ನಂತರ ಈ ಜನರ ವಕ್ರದೃಷ್ಟಿ ಶಬರಿಮಲೆಯ ಕಡೆಗೆ ತಿರುಗಿತು. ಬ್ರಿಟಿಷ್ ಶಿಕ್ಷಣ ಪದ್ಧತಿ, ಅವರದೇ ಕಾನೂನಿನ ಮೂಲಕ ನಮ್ಮ ಸಮಾಜವನ್ನು ನೋಡುವ ದುಸ್ಥಿತಿಯಲ್ಲಿರುವುದರಿಂದಲೇ, ‘ವೇದಗಳಲ್ಲಿ ಈ ಬಗ್ಗೆ ಉಲ್ಲೇಖವಿದೆಯೇ’ ಎಂಬಂತ ಹಾಸ್ಯಾಸ್ಪದ ಪ್ರಶ್ನೆಗಳು ನ್ಯಾಯಾಲಯಗಳಿಂದ ಕೇಳಿ ಬರುತ್ತಿವುದು ನಮ್ಮದೇ ಸಂಸ್ಕೃತಿಯ ಕುರಿತು ನಮ್ಮ ಅಜ್ಞಾನವಲ್ಲದೇ ಮತ್ತಿನ್ನೇನು? ಶಬರಿಮಲೆಯಲ್ಲಿ ಹೆಣ್ಣುಮಕ್ಕಳನ್ನು ಬಿಡಬೇಕು ಎಂಬುದಕ್ಕೆ ಪ್ರತಿಯಾಗಿ ಸುಪ್ರಿಯಾ ಪಿಳ್ಳೈ ಎಂಬ ಮಲಯಾಳಿ ಹೆಣ್ಣುಮಗಳೊಬ್ಬರು ಫೇಸ್ಬುಕ್ಕಿನಲ್ಲಿ, “ನಾನು ಕೇರಳದ ಹಿಂದೂ ಹೆಣ್ಣುಮಗಳು. ನನಗೆ ಶಬರಿಮಲೆಗೆ ಹೋಗಬೇಕಿಲ್ಲ. ನಾನೊಬ್ಬಳೇ ಅಲ್ಲ ನನ್ನಂತೆ ಯೋಚಿಸುವ ಸಾವಿರಾರು ವಿವಿಧ ರಂಗದ ಜನರು ಕೇರಳದಲ್ಲಿದ್ದಾರೆ. ನಮಗೇ ನಮ್ಮದೇ ಆದ ಬೇಕಾದಷ್ಟು ದೇವಸ್ಥಾನಗಳೂ, ಆಚರಣೆಗಳೂ ಇವೆ. ನಮ್ಮ ಒಂದು ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ದೇವಸ್ಥಾನಕ್ಕೆ ಬರುವ ಹೆಣ್ಣುಮಕ್ಕಳ ಪಾದವನ್ನು ಅಲ್ಲಿನ ಪೂಜಾರಿಗಳು ತೊಳೆಯುತ್ತಾರೆ. ಆಗ ನಮ್ಮನ್ನು ದೇವಿಯ ರೂಪವೆಂದು ಗೌರವಿಸಲಾಗುತ್ತದೆ. ಮನ್ನಾರ್ಶಾಲದ ದೇವಸ್ಥಾನವೊಂದರಲ್ಲಿ ಹೆಣ್ಮಕ್ಕಳೇ ಪೂಜಾರಿಗಳು. ತಿರುವಥಿರಾ ಎಂಬ ಹಬ್ಬ ಇರುವುದು ಕೇವಲ ಹೆಣ್ಣುಮಕ್ಕಳಿಗೆಂದು ಮಾತ್ರವೇ, ಗಂಡಸರು ಹತ್ತಿರವೂ ಸುಳಿಯುವಂತಿಲ್ಲ. ಪೊಂಗಲ್ ಪೂಜೆಯ ದಿನ ತಿರುವನಂತಪುರಂನ ರಸ್ತೆಗಳೆಲ್ಲಾ ಹೆಣ್ಣುಮಕ್ಕಳ ಹಬ್ಬದ ಸಂಭ್ರಮದಿಂದಲೇ ಮುಳುಗಿರುತ್ತವೆ. ಇದಕ್ಕೆ ಹೊರತಾಗಿ ಶಬರಿಮಲೆಯೆಂಬುದು ಇರುವುದು ಕೇವಲ ಗಂಡು ಮಕ್ಕಳಿಗಾಗಿ. ಯಾವುದೇ ಜಾತಿ, ಧರ್ಮವೆಂದೆಣಿಸದೇ ಎಲ್ಲರೂ ಒಟ್ಟಾಗಿ ಸೇರುವ ಜಾಗವದು. ಆ ಸಮಯದಲ್ಲಿ ನಮ್ಮ ಗಂಡಸರ್ಯಾರೂ ಕುಡಿಯುವುದಿಲ್ಲ, ೪೦ ದಿನಗಳ ಕಟ್ಟುನಿಟ್ಟಿನ ಅನುಷ್ಟಾನದಲ್ಲಿರುತ್ತಾರೆ. ಒಂದು ರೀತಿಯ Detoxification Processನ ಸಮಯ. ಅವರು ಮಾಲೆ ತೆಗೆಯಲು ಹೋಗುವಾಗ ವಯಸ್ಸಾದ ತಾಯಿಯನ್ನೋ ಅಥವಾ ಪುಟ್ಟ ಹೆಣ್ಣುಮಕ್ಕಳನ್ನೂ ಒಮ್ಮೊಮ್ಮೆ ಕರೆದೊಯ್ಯುತ್ತಾರೆ. ನಿಮ್ಮ ಮಾಡ್ರನ್ ಭಾಷೆಯಲ್ಲಿ ಹೇಳುವುದಾದರೇ, ಆ ಸಮಯವೆಂಬುದು ಗಂಡಸರಿಗೆ ಗಂಡಸರೊಂದಿಗೆ ಸ್ಪೇಸ್ ಮಾಡಿಕೊಟ್ಟರೇ, ಹೆಣ್ಣುಮಕ್ಕಳಿಗೆ ಹೆಣ್ಣುಮಕ್ಕಳೊಂದಿಗೆ ಸ್ಪೇಸ್ ಮಾಡಿಕೊಡುತ್ತದೆ” ಅಂತ ಬರೆದುಕೊಂಡಿದ್ದರು. ಸಾಮಾನ್ಯ ಮಹಿಳೆಯೊಬ್ಬರಿಗೆ ಅರ್ಥವಾಗುವ ನಮ್ಮ ಸಂಸ್ಕೃತಿಯ ವಿಷಯಗಳು ಎಡ-ಬಲದ ಬುದ್ಧಿಜೀವಿಗಳಿಗೆ ಅಸಮಾನತೆ, ಪುರುಷರ ದಬ್ಬಾಳಿಕೆ ಇತ್ಯಾದಿಗಳಂತೆ ಕಾಣಿಸುವುದು ಮತ್ತದೇ ಪಾಶ್ಚಾತ್ಯರ ಶಿಕ್ಷಣ ಪದ್ಧತಿಯಿಂದಾಗಿರುವ ಮೆದುಳಿನ ಖಾಯಿಲೆ. ಸೂಚ್ಯವಾಗಿ Colonial Consciousness ಎನ್ನಬಹುದು.

ನಮ್ಮ ಸಂಸ್ಕೃತಿಗೆ ಪರಕೀಯವಾದ ಎರವಲು ಚಿಂತನೆಗಳನ್ನು ಅಳವಡಿಸಿಕೊಂಡು, ನಮ್ಮ ಸಮಾಜದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂರ್ಖ ಕೆಲಸವನ್ನು ಇನ್ನಾದರೂ ನಿಲ್ಲಿಸುವುದೊಳಿತು. ಶೀತವಾದರೆ ಮೂಗು ಕತ್ತರಿಸಿ ಎಂಬ ಕಾನೂನು-ಕಟ್ಟಳೆಗಳಿಂದ ನಾಶವಷ್ಟೇ ಆದೀತು. ಬುದ್ಧಿಜೀವಿಗಳ ಮೂಢನಂಬಿಕೆಗಳಿಗೆ ಈ ದೇಶದ ಬಹುಸಂಸ್ಕೃತಿ ನಾಶವಾಗುತ್ತಿದೆ. ಬಗ್ಗಿದವನಿಗೇ ಗುದ್ದು ಎನ್ನುವ ಕಾನೂನುಗಳು ನಮ್ಮ ದೇವಸ್ಥಾನಗಳನ್ನೂ ಮುಜರಾಯಿ ಇಲಾಖೆಯ ಹೆಸರಿನಲ್ಲಿ ಆಕ್ರಮಿಸಿಕೊಂಡಿವೆ. ಈಗ ಜಾತ್ರೆ, ಉತ್ಸವ, ಆಚರಣೆಗಳ ಮೇಲೆ ಸವಾರಿ ಮಾಡಲು ಶುರುಮಾಡಿವೆ. ಸಹಿಸಿಕೊಂಡಿದ್ದರೆ ಮನೆಯೊಳಗಿನ ಆಚರಣಗಳಿಗೂ ಕಾನೂನಿನ ಹೆಸರಿನಲ್ಲಿ ಮೂಗುದಾರ ಹಾಕಿಯಾರು! ಇವರ ತಲೆಕೆಟ್ಟ ಕಾನೂನು-ಕಟ್ಟಳೆಗಳು ಸದ್ಯಕ್ಕೆ ಬದಲಾಗದು. ಜನರೇ ಬದಲಾಗಬೇಕಷ್ಟೇ. ಜನರು ತಿರುಗಿ ಬಿದ್ದರೆ ಯಾವ ಸರ್ಕಾರ? ಯಾವ ಕಾನೂನು? ಅಂದು ಬ್ರಿಟಿಷರು ತರುತ್ತಿದ್ದ ಕಾನೂನುಗಳ ವಿರುದ್ಧ ಹೋರಾಟ ನಡೆಯುತಿತ್ತು. ಇಂದು ಬ್ರಿಟಿಷರು ಬಿಟ್ಟು ಹೋದ ಕಾನೂನುಗಳನ್ನು ಚಲಾಯಿಸುತ್ತಿರುವ ಭಾರತೀಯ ಧಿರಿಸಿನ ಬ್ರಿಟೀಷ್ ಮನಸ್ಥಿತಿಯ ವಿರುದ್ಧ ಹೋರಾಡಬೇಕಾದ ಸಂದರ್ಭಬಂದಿದೆ.

30 ಟಿಪ್ಪಣಿಗಳು Post a comment
 1. Dash
  ಮೇ 24 2016

  Very good article. So called rationalist should read and respect others also.

  ಉತ್ತರ
 2. Krishna Kulkarni
  ಮೇ 24 2016

  ಹುರ್ರೋssss. ನೀವು ಬರೆದುದೆಲ್ಲವೂ ಸತ್ಯ! ಈ ಬುದ್ಧಿ ಜೀವಿಗಳು ಮೊಂದೆ ನಮ್ಮ ಮನೆಯ ಆಚರಣೆಗಳಲ್ಲಿ, ಸಮಾನತೆಯ ವಿಷ ಬೀಜ ಬಿತ್ತಿ, ಅಪ್ಪ-ಮಗ, ಅಪ್ಪ-ಮಗಳು- ಗಂಡ -ಹೆಂಡಿರ ನಡುವಿನ ಸಂಬಂಧವನ್ನು ಹಾಳು ಮಾಡುವ ಕಾಲ ದೂರವಿಲ್ಲ! ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು.

  ಉತ್ತರ
 3. Salam Bava
  ಮೇ 24 2016

  “ನಮ್ಮ ಸಂಸ್ಕೃತಿಗೆ ಪರಕೀಯವಾದ ಎರವಲು ಚಿಂತನೆ”

  India is abode of many cultures and subcultures apart from the dominant hegemonic Vedic culture. Isolationist attitudes like that of Rakesh will forment intolerance. Secular societies are multicultural and inclusive.

  ಉತ್ತರ
  • ರಾಕೇಶ್ ಶೆಟ್ಟಿ
   ಮೇ 24 2016

   ತಾವೇನು ಹೇಳ ಬಯಸುತ್ತಿದ್ದೀರಿ ಅದನ್ನು ಕನ್ನಡದಲ್ಲಿ ಹೇಳಿ

   ಉತ್ತರ
   • ಮೇ 24 2016

    ಸಾಬಿಗೆ ಕನ್ನಡ ಸರಿಯಾಗಿ ಬರಲ್ಲ.ಹಾಗಾಗಿ ನೀವು ಬರೆದಿದ್ದರ ಸರಿಯಾದ ಅರ್ಥ ಅವನಿಗೆ ತಿಳಿದಿಲ್ಲ. ಸಾಬಿಯು ಕೇವಲ ಕುರಾನ್ಗೆ ಸಮ್ಮತವಾದ ಲೇಖನಗಳಷ್ಟೇ ಅರ್ಥವಾಗುತ್ತೆ.

    ಉತ್ತರ
   • Salam Bava
    ಮೇ 25 2016

    Hindutva bigots need education about multiculturalism.

    ಉತ್ತರ
  • ಮೇ 24 2016

   Like the ones who were destroying the sculptures in Srirangapatna? You must be joking saabi.

   ಉತ್ತರ
  • ಮೇ 24 2016

   We are tolerant. So you are alive ,thriving in India. Being a worm of gutter water,you don’t have eyes.

   ಉತ್ತರ
 4. Chandrashekar
  ಮೇ 24 2016

  Sir
  This is very true.right now I am in USA
  And I find this double standard of what you speak. Cats and dogs what immunity they enjoy under constitution
  Other animals cow sheep hen pig does not have. After all are animals and all have to be taken care with equal care.
  You can be suied for hurting a dog or cat
  But killing a cow and having it is a celebration
  This is a cow rich country and it wants to do business so such idiot ideas are spread in our country
  We respect animals and as God takes care of us and animals
  It is a chain that gas to be maintained
  For this world to survive
  Chandrashekar

  ಉತ್ತರ
  • ಮೇ 24 2016

   Your notion of everyone and everything is equal in this world itself is wrong and absurd. First clarification: you can expect fairness not equality because it is not practical.
   Second,now you think again as to what you want to say – in Kannada, properly without messing up the meaning.

   ಉತ್ತರ
   • Salam Bava
    ಮೇ 25 2016

    According to Purusha Sookta Brahmins are superior to all. This inhuman hierarchical layering of human society is what Sudharshna Rao and his Hindutva bigots champion. They abhor the idea of granting equality to shoodras and Dalits. They want Brahmanya over human dignity.

    ಉತ್ತರ
    • ಮೇ 25 2016

     Interpretation of purushasukta is not like literal interpretation of kurrrron. You pigs don’t understand it. Literally interpret ing a text is call that you know. Shut ur mouth and get last if you can’t raise above that

     ಉತ್ತರ
     • Salam Bava
      ಮೇ 25 2016

      _http://www.thenewsminute.com/article/i-still-havent-found-house-owner-who-doesnt-ask-your-caste-dalit-man-looking-rented-house

      Purusha Sookta in practice.

      ಉತ್ತರ
      • ಮೇ 26 2016

       Do not digress ,piggo

       ಉತ್ತರ
       • Salam Bava
        ಮೇ 26 2016

        What digression you bigoted mongrel? Dalit man’s plight is digression? No it is Purusha Sukta put to practice. Face it you scumbug. Stop eating beef curry in London.

        ಉತ್ತರ
        • Salam Bava
         ಮೇ 26 2016

         Stop eating beef curry in London and bullshitting afterwards in Nilume you sicko mongrel.

         ಉತ್ತರ
         • ಮೇ 26 2016

          First, I am a brahmin not sicko like you to kill a cow using halal slitting the throat. The most haram way of killing an animal.
          Second,literal interpretation is not for Hindu texts. They are philosophically much higher. That is not with in your reach ,because you live in a gutter.
          Metaphysical thought process is not inculcated when you rote learn kurrrrron. You are a waster. Go and swirl in gutter you pig.
          What it means in purushasukta is for real men of brains not for lazy asses like you.

          ಉತ್ತರ
 5. HEGDE N T
  ಮೇ 24 2016

  Dear Shri chandrashekhar, atleast have you understood what you want to tell. Please clear in your communication, Let us be serous in expressing our opinions. Consult some one in whom you confidence and find out what he understands from your statement.

  ಉತ್ತರ
 6. Goutham
  ಮೇ 25 2016

  ರಾಕೇಶ್ ಶಟ್ಟರೆ, ಪ್ರಸಾದದ ರೂಪದಲ್ಲಿ ಮಾಂಸ ಸೇವನೆ ಮಾಡಿರುವುದಾಗಿ ಈ ಕಾಯ೯ಕ್ರಮದ ಆಯೋಜಕರು ಹೇಳಿದ್ದನ್ನು ಟಿವಿ ಚಾನಲ್ ಗಳು ಪ್ರಸಾರ ಮಾಡಲಿಲ್ಲವೇ? ಆದರೂ ಪತ್ರಿಕಯಲ್ಲಿ ಪ್ರಕಟವಾಗಿರುವುದು ಸುಳ್ಳು ಎನ್ನುತ್ತೀರಲ್ಲ. ಇಷ್ಟಕ್ಕೂ ಬ್ರಾಹ್ಮಣರು ಮಾಂಸ ಸೇವಿಸಬಾರದು ಎಂದು ಯಾವ ಎಡಪಂಥೀಯರೂ ಹೇಳಿಲ್ಲ ಅಲ್ಲವೇ?

  ಉತ್ತರ
  • ಮೇ 26 2016

   ಯಾವ ಆಯೋಜಕರು ಯಾವ ಚಾನೆಲ್ ನಲ್ಲಿ ಹೇಳಿದ್ದಾರೆ. ತನಿಖಾ ತಂಡವೇ ಅಲ್ಲಿ ಪ್ರಾಣಿವಧೆ ನಡೆದಿಲ್ಲ ಅಂತ ಹೇಳಾಯ್ತಲ್ಲ! ಇದು ಯಾವ ಸೀಮೆ ಸಮಾಚಾರ ವಾಹಿನಿ ನಿಮ್ಮದು? ಪ್ರಧಾನ ಆಯೋಜಕರು ಮಾಂಸ ಸೇವನೆ ಅಲ್ಲಗಳೆದಿದ್ದಾರೆ.

   ಉತ್ತರ
   • ಶೆಟ್ಟಿನಾಗ ಶೇ.
    ಮೇ 26 2016

    ಗುಟ್ಟಿನಲ್ಲಿ ಮಾಂಸ ತಿಂದು ಬಳಿಕ ಅದನ್ನು ಮುಚ್ಚಿಹಾಕಲು ಏನೆಲ್ಲಾ ಹುನ್ನಾರ! ಇದೆಲ್ಲಾ ಬೇಕಿತ್ತೇನು? ವೇದಗಳಲ್ಲೇ ಬೀಫ್ ಸೇವನೆಯ ಉಲ್ಲೇಖಗಳಿವೆ.

    ಉತ್ತರ
    • ರಾಕೇಶ್ ಶೆಟ್ಟಿ
     ಮೇ 26 2016

     ಗೌತಮ್ : ಮೊದಲಿಗೆ ಈ ಖಾಸಗಿ ಕಾರ್ಯಕ್ರಮವನ್ನೇಕೆ ಪ್ರಜಾವಾಣಿಯವರು ದೊಡ್ಡ ವಿವಾದ ಮಾಡಬೇಕಿತ್ತು?ವರ ಜೊತೆಗೆ ಉಳಿದ ಚಾನೆಲ್ಲುಗಳು ಬೊಬ್ಬೆ ಇಡಬೇಕಿತ್ತು. ಭಗವಾನರ,ಚಂಪಾ ಅವರಿಗೆಲ್ಲ ಹೊಟ್ಟೆ ನೋವಾಗಿ ಪ್ರಾಣಿಬಳಿ ಮಾಡಿದವರ ವಿರುದ್ಧ ಕಾನೂನುಕ್ರಮವಾಗಲಿ ಅಂತ ಬರೆದು ಬೊಬ್ಬೆ ಇಟ್ಟಿದ್ದೇಕೆ? ಇವರಿಗೆ ಕೊಟ್ಟು ತಿನ್ನಲಿಲ್ಲ ಎಂದು ಹೊಟ್ಟೆ ನೋವಾಯಿತೇ?

     ಅಲ್ಲಿ ಅಂತದ್ದೇನು ನಡೆದಿಲ್ಲ ಎಂದು ಖುದ್ದು ಭಾಗವ್ಹಿಸಿದವ್ರು ಹೇಳಿದ್ದಾರೆ.ಸಹನಾ ವಿಜಯ್ಕುಮಾರ್ ಅವರು ಅಲ್ಲಿಯೇ ಹೋಗಿ ವರದಿ ನೀಡಿದ್ದಾರೆ.ಹೀಗಿದ್ದ ಮೇಲೂ ತಿಂದರು ತಿಂದರು ಅಂತ ಬಾಯಿ ಬಡಿದುಕೊಳ್ಳುವವರಿಗೇನು ಹೇಳೋಣ? ತಿನ್ನಲಿ ಬಿಡಿ ನಿಮಗೇಕೆ ಸಂಕಟ? ಅದನ್ನು ಒಂದು ಸುದ್ದಿ ಮಾಡಿದವರಿಗೆ ನಾಚಿಕೆಯಾಗಬೇಕಷ್ಟೇ

     ಉತ್ತರ
     • ಶೆಟ್ಟಿನಾಗ ಶೇ.
      ಮೇ 26 2016

      “ತಿನ್ನಲಿ ಬಿಡಿ ನಿಮಗೇಕೆ ಸಂಕಟ?”

      ಎಷ್ಟೋ ಜನ ವೈದಿಕರು ಗುಟ್ಟಾಗಿ ಚಿಕನ್ ಮಟನ್ ಫಿಶ್ ಬೀಫ್ ತಿನ್ನುವುದು ಎಲ್ಲರಿಗೂ ತಿಳಿದೇ ಇರುವ ವಿಚಾರ. ಆದುದರಿಂದ ಸಾಂಘಿಕವಾಗಿ ವೈದಿಕ ಕಾರ್ಯಕ್ರಮಗಳಲ್ಲಿ ಅಫೀಷಿಯಲ್ ಆಗಿ ಸಾರ್ವಜನಿಕವಾಗಿ ತಿನ್ನಲಿ, ಅದು ಬಿಟ್ಟು ಕದ್ದು ಮುಚ್ಚುವುದು ಏಕೆ?

      ಉತ್ತರ
      • ರಾಕೇಶ್ ಶೆಟ್ಟಿ
       ಮೇ 26 2016

       ಕದ್ದು ಮುಚ್ಚಿ ತಿಂದರೆ ನಿಮಗೇನ್ರಿ ತೊಂದರೆ? ನಿಮಗೂ ಬೇಕಾದ್ರೆ ಹೋಗಿ ಕೈಯೊಡ್ಡಿ,ಬೇಡವಾದರೆ ಸುಮ್ಮನಿರಿ

       ಉತ್ತರ
       • Salam Bava
        ಮೇ 26 2016

        “ಕದ್ದು ಮುಚ್ಚಿ ತಿಂದರೆ ನಿಮಗೇನ್ರಿ ತೊಂದರೆ?”

        Hypocrite! U forgot Dadri lynching?

        ಉತ್ತರ
        • ಮೇ 26 2016

         ದಾದ್ರಿ ಡ್ರಾಮಾ ಎಲ್ಲಾ ಬಯಲಾಯ್ತು ಸಾಬಿ. ಕಂಡವರ ಹಸು ಕದಿಯುವುದಕ್ಕೂ ಕದ್ದು ಮುಚ್ಚಿ ತಿನ್ನುವುದಕ್ಕೂ ಇರುವ ಭಾಷೆಯ ಅಂತರ್ಗತ ವ್ಯತ್ಯಾಸವು ತಿಳಿಯಸ ತುರುಕ ಹುಳವೇ ಹೋಗು ಕೊಚ್ಚೆಯಲ್ಲಿ ಬಿದ್ದು ಹೊರಳಾಡು

         ಉತ್ತರ
         • Salam Bava
          ಮೇ 27 2016

          “ಕೊಚ್ಚೆಯಲ್ಲಿ ಬಿದ್ದು ಹೊರಳಾಡು”

          Like you do every morning after waking up? Get a life you beef eating mongrel. You don’t have the courage to respond to the atrocities masterminded by your caste brothers on Dalits. Every Vemula is a victim of Purushasukta. Yet you beat your drum on literal interpretation.

          ಉತ್ತರ
      • ಮೇ 26 2016

       ಲೋ ಮತಿಗೇಡಿ ಬಸವನ ಹುಳವೇ
       ರಾಕೇಶ್ ಏನು ಬರೆದಿದ್ದಾರೆ ಎಂಬುದನ್ನು ಪೂರ್ತಿ ಓದಿ ,ಅರ್ಥ ಆದರೆ ಸರಿಯಾಗಿ ಉತ್ತರ ಬರಿ. ಅ

       ಉತ್ತರ
     • Goutham
      ಜೂನ್ 4 2016

      ರಾಕೇಶ್ ಶಟ್ಟರೆ, ಬ್ರಾಹ್ಮಣರು ಮಾಂಸ ಸೇವಿಸುವುದು ತಪ್ಪು ಎಂದು ಯಾರು ಹೇಳಿದ್ದಾರೆ? ಸೇವಿಸಿ, ನಂತರ ಸೇವನೆಯಾಗಿಲ್ಲ ಎಂದು ಸುಳ್ಳು ಹೇಳಿದ್ದನ್ನು ಮಾತ್ರ ಟೀಕಿಸಿದ್ದಾರೆ. ಪ್ರಜಾವಾಣಿ ಯಾಕೆ ವಿವಾದ ಮಾಡಬೇಕಿತ್ತು ಎಂದು ಬರೆದಿರುವಿರಿ. ಸುದ್ದಿ ಬಹಿರಂಗವಾಗಿದ್ದಕ್ಕೆ ಸಹಜವಾಗಿ ನಿಮಗೆ ಸಿಟ್ಟು ಬಂದಿದೆ. ಆದರೆ ಪ್ರಜಾವಾಣಿ ಪ್ರಕಟಿಸಿದೆ. ವಿವಾದ ಮಾಡಿಲ್ಲ.

      ಉತ್ತರ
    • ಮೇ 26 2016

     ಲೋ ಗುಡಸೆಟ್ಟಿ ,ನಿನಗೆ ಈಗಾಗಲೇ ಸಾಕಷ್ಟು ದಂಡಂ ಆಗಿದೆ. ಆದರೂ ಬುದ್ದಿ ಬಂದಿಲ್ಲ.

     ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments