ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 10, 2016

40

ನಂಬಿಕೆ, ನಿಷೇಧ, ಆಚರಣೆಗಳಲ್ಲಿ ಆಹಾರ

‍ನಿಲುಮೆ ಮೂಲಕ

ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Non-Veg-Restaurantsಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಕುರಿತು ಬಹಳಷ್ಟು ಚರ್ಚೆ ರಾಷ್ಟ್ರಮಟ್ಟದಲ್ಲಿ ಆಗಾಗ ನಡೆಯುತ್ತದೆ. ದನ ಕದಿಯುವ ಹಾಗೂ ಅದನ್ನು ರಕ್ಷಿಸುವ ಗುಂಪುಗಳ ಹಿನ್ನೆಲೆಯಲ್ಲಿ ಮೂರ್ನಾಲ್ಕು ದಿನಗಳ ಹಿಂದೆ ಪ್ರಧಾನಿ ಮೋದಿ “ಸೋ ಕಾಲ್ಡ್ ಗೋರಕ್ಷಕರ” ವಿರುದ್ಧ ಗುಡುಗುತ್ತಿದ್ದಂತೆಯೇ ಮತ್ತೆ ಇಂಥ ಚರ್ಚೆ ಶುರುವಾಗಿದೆ. ಈ ಚರ್ಚೆಗಳಲ್ಲಿ ಮೇಲ್ನೋಟದಲ್ಲಿ ಬಹುಸಂಖ್ಯಾತರ ಆಹಾರ ಕ್ರಮವನ್ನು ಅಲ್ಪ ಸಂಖ್ಯಾತರ ಮೇಲೆ ಹೇರುವ ಹುನ್ನಾರ; ದಲಿತರು ಹಾಗೂ ಅಲ್ಪಸಂಖ್ಯಾತರ ಆಹಾರ ಪದ್ಧತಿಯನ್ನು ಪುರೋಹಿತಶಾಹಿ ವ್ಯವಸ್ಥೆ ಆಳುತ್ತಿರುವ ಸಂಕೇತ ಎಂದೂ, ಬ್ರಾಹ್ಮಣರನ್ನು ಬಿಟ್ಟರೆ ಬೇರೆ ಸಾವಿರಾರು ಜಾತಿ-ಸಮುದಾಯಗಳಿಗೆ ಆಹಾರ ಸಂಬಂಧಿ ವಿಧಿ-ನಿಷೇಧಗಳೇ ಇಲ್ಲ ಎಂಬಂತೆಯೂ ಬಿಂಬಿಸಲಾಗುತ್ತಿದೆ. ಅಷ್ಟೇ ಅಲ್ಲ, ಆಹಾರ ಸೇವಿಸುವಾಗಲೂ ಬ್ರಾಹ್ಮಣರು ಮಾತ್ರ ಅನ್ಯರನ್ನು ಸಹಪಂಕ್ತಿ ಭೋಜನದಲ್ಲಿ ಕೂರಿಸಿಕೊಳ್ಳುವುದಿಲ್ಲ, ಉಳಿದವರಲ್ಲಿ ಇಂಥ ಸಂಪ್ರದಾಯವಿಲ್ಲ ಎಂಬಂತೆಯೂ ಬಿಂಬಿಸುತ್ತ, ಇವೆಲ್ಲ ಜಾತಿಪದ್ಧತಿಯನ್ನು ಬಲಗೊಳಿಸುವ ಪುರೋಹಿತಶಾಹಿಯ ಹುನ್ನಾರ ಎಂದೂ ಸರಳವಾಗಿ ವಾದಿಸಲಾಗುತ್ತದೆ. ಆದರೆ ಇವೆಲ್ಲ ಹಾಗೆ ವಾದಿಸುವವರ ವಿವಿಧ ಸಮುದಾಯಗಳ ಆಹಾರ ಸಂಬಂಧಿ ಅಜ್ಞಾನವನ್ನು ತೋರಿಸುತ್ತದೆಯಲ್ಲದೇ ಇನ್ನೇನನ್ನೂ ಅಲ್ಲ. ಇಂಥ ತಿಳಿವಳಿಕೆಯನ್ನು ತಲೆಕೆಳಗಾಗಿಸುವ ಕ್ಷೇತ್ರಾಧಾರಿತ ಅಧ್ಯಯನದ ಫಲಿತ ಹಾಗೂ ವಾಸ್ತವ ಇಲ್ಲಿದೆ. ಇದು ತುಮಕೂರು ಜಿಲ್ಲೆಯ ಸಾಂಪ್ರದಾಯಿಕ ಆಹಾರ ಪದ್ಧತಿ ಕುರಿತ ಯೋಜನೆಯೊಂದನ್ನು ಆಧರಿಸಿದೆ.

ಸಾಂಪ್ರದಾಯಿಕ ರೀತಿಯಲ್ಲಿ ಆಹಾರ ಬೆಳೆ ಬೆಳೆಯುವ ಪದ್ಧತಿ ಅನೇಕಾನೇಕ ನಂಬಿಕೆ, ಆಚರಣೆಗಳಿಗೆ ಎಡೆ ಮಾಡಿ ಸಾಂಸ್ಕೃತಿಕ ಸಮೃದ್ಧಿಯನ್ನೂ ಹೆಚ್ಚಿಸಿದೆ. ಹೊನ್ನಾರು, ಬಿತ್ತನೆ ಪೂಜೆ, ಕುರಿತುಳಿಸುವುದು, ಹೊಲಕ್ಕೆ ಎಡೆ ಇಡುವುದು, ದನಗಳ ಪೂಜೆ, ಭೂಮಿ ಪೂಜೆ, ಮುನಿಯಪ್ಪನ ಆಚರಣೆ, ಕೊಯ್ಲು ಶಾಸ್ತ್ರ, ಕಣ ಮಾಡುವುದು, ರಾಶಿ ಪೂಜೆ-ಸುಗ್ಗಿ ಮೊದಲಾದವು ಬಿತ್ತನೆಯ ಹಂತದಿಂದ ಸುಗ್ಗಿಯವರೆಗಿನ ಆವರ್ತನದಲ್ಲಿ ಕಂಡುಬರುವ ಸಂಗತಿಗಳು. ಜಿಲ್ಲೆಯ ಆಹಾರಧಾನ್ಯಗಳಿಗೂ ವ್ಯಕ್ತಿ ಅಥವಾ ಊರಿನ ಹೆಸರಿಗೂ ಸಂಬಂಧ ಇರುವುದನ್ನು ಕೂಡ ಗುರುತಿಸಬಹುದು. ಉದಾಹರಣೆಗೆ ರಾಗಿಮುದ್ದನಹಳ್ಳಿ. ಈ ಊರು ತುಮಕೂರು ತಾಲ್ಲೂಕು ಕೇಂದ್ರದಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು 45 ಕಿ.ಮೀ ದೂರದಲ್ಲಿದೆ. ಹಿಂದೊಮ್ಮೆ ಈ ಊರಿಗೆ ಮದುವೆಯಾಗಿ ಬಂದ ಹೆಣ್ಣಿಗೆ ಗಂಡನ ಮನೆಯವರು ರಾಗಿ ಶ್ಯಾವಿಗೆ ಮಾಡಲು ರಾಗಿ ತಂದುಕೊಟ್ಟರಂತೆ. ಆಕೆ ಇದು ನಮ್ಮ ಊರಿನ ರಾಗಿ ಎಂದಾಗ ಆಕೆಯ ಗಂಡ ಇದು ನಿಮ್ಮ ಊರಿನ ರಾಗಿ ಅಲ್ಲ, ನಮ್ಮೂರಿನದು ಎಂದನಂತೆ. ಆಗ ಆಕೆ ನಮ್ಮೂರ ರಾಗಿ ಶ್ಯಾವಿಗೆ ತುಂಡಾಗದೇ ಬರುತ್ತದೆ; ಬೇರೆ ರಾಗಿ ಶ್ಯಾವಿಗೆ ತುಂಡು ತುಂಡಾಗಿ ಬರುತ್ತದೆ ಎಂದು ಹೇಳಿ ಎರಡರಲ್ಲೂ ಶ್ಯಾವಿಗೆ ಮಾಡಿ ತೋರಿಸಿದಳಂತೆ. ಅಂದಿನಿಂದ ಆಕೆಯ ಮನೆ ಕಡೆಯ ರಾಗಿಯನ್ನೇ ಅವರೂ ಬೆಳೆದು ರಾಗಿ ಶ್ಯಾವಿಗೆ, ಮುದ್ದೆಗೆ ಬಳಸತೊಡಗಿದರಂತೆ. ಅಂದಿನಿಂದ ಈ ಊರಿಗೆ ರಾಗಿಮುದ್ದನ ಹಳ್ಳಿ ಎಂದು ಹೆಸರು ಬಂದಿತು ಎನ್ನಲಾಗುತ್ತದೆ.

ತುಮಕೂರು ತಾಲ್ಲೂಕು ಕೇಂದ್ರದಿಂದ ದಕ್ಷಿಣಕ್ಕೆ ಸುಮಾರು 35 ಕಿ.ಮೀ ದೂರದಲ್ಲಿರುವ ನಾಣಿಕೆರೆ ಗ್ರಾಮ ನಿಡುವಳ್ಳು ಗ್ರಾಮಪಂಚಾಯ್ತಿಗೆ ಸೇರಿದೆ. ಈ ಊರಿನ ಸುತ್ತುಮುತ್ತಲಿನ ಕೆಲಸ ಊರುಗಳ ಹೆಸರಿನೊಂದಿಗೆ ಕತೆಯೊಂದು ತಳಕುಹಾಕಿಕೊಂಡಿದೆ. ಈ ಪ್ರದೇಶ ಹಿಂದೊಮ್ಮೆ ದಟ್ಟ ಕಾಡು ಪ್ರದೇಶವಾಗಿತ್ತಂತೆ. ಇಲ್ಲಿ ಪ್ರಾಣಿಯನ್ನು ಬೇಟೆಯಾಡುವಾಗ ಬೇಟೆಗಾರನಿಂದ ತಪ್ಪಿಸಿಕೊಂಡು ಓಡಿದ ಕಾಡು ಮೊಲವೊಂದು ಇಲ್ಲಿನ ಕೆರೆಯ ಪಕ್ಕದಲ್ಲಿದ್ದ ಸೀಗೆ ಮೆಳೆಗೆ ಸಿಕ್ಕಿಕೊಂಡಿತ್ತಂತೆ. ಬೇಟೆಗಾರನ ಜೊತೆಯಲ್ಲಿದ್ದ ಬೇಟೆ ನಾಯಿ ಆ ಮೊಲವನ್ನು ಹಿಡಿಯಲು ಯತ್ನಿಸಿ ಮೆಳೆಯಲ್ಲಿ ಸಿಕ್ಕಿಕೊಂಡಿತಂತೆ. ಆಗ ಬೇಟೆಗಾರರೆಲ್ಲ ಸೇರಿ ಮೆಳೆಗೆ ಬೆಂಕಿ ಹಚ್ಚಿದರಂತೆ. ಆಗ ಮೊಲ ತಪ್ಪಿಸಿಕೊಂಡು ಹೋಗಿ ಮೊಲ ಹಿಡಿಯಲು ಹೋಗಿದ್ದ ನಾಯಿ ಆ ಬೆಂಕಿಯಲ್ಲಿ ಬೆಂದುಹೋಗಿತ್ತಂತೆ. ಬೆಂದ ನಾಯಿಯನ್ನೇ ಮೊಲ ಎಂದು ಭಾವಿಸಿ ಈ ಊರಿನ ಜನ ಹಂಚಿ ತಿಂದದ್ದರಿಂದ ಈ ಊರಿಗೆ ನಾಣಿಕೆರೆ ಎಂದು ಹೆಸರು ಬಂದಿತಂತೆ. ಈ ನಾಯಿಯ ಭಾಗವನ್ನು ತಿಂದ ಊರಿನವರು ಯಾವ ಭಾಗ ತಿಂದಿದ್ದರೋ ಅವರ ಊರಿಗೆ ಅದೇ ಹೆಸರು ಬಂದಿದೆ ಎನ್ನಲಾಗುತ್ತದೆ. ಹೀಗಾಗಿ ನಾಯಿ ಮಧ್ಯಭಾಗ ತಿಂದವರ ಊರು ನಾಯಿ ನಾಣಿಕೆರೆ, ನಡ ತಿಂದವರ ಊರು ನಿಡುವಳ್ಳು, ಕಾಲು ತಿಂದ ಚನ್ನೇನ ಹಳ್ಳಿ ಎಂದು ಈಗಲೂ ಹೇಳಲಾಗುತ್ತದೆ. ಆಹಾರ ಅಂದರೆ ಹಸಿವಾದಾಗಲೋ ಚಪಲಕ್ಕೋ ಸಿಕ್ಕಿದ್ದನ್ನು ಒಂದಷ್ಟು ತಿನ್ನುವ ಅಥವಾ ಹೊಟ್ಟೆ ತುಂಬಿಸುವ ಮೂಲಕ ಜನರನ್ನು ಆರಾಮವಾಗಿ ಇರಿಸುವ ಪದಾರ್ಥವಷ್ಟೇ ಅಲ್ಲ. ಅದಕ್ಕೆ ಅನೇಕ ಆಯಾಮಗಳಿವೆ. ಬದಲಾದ ಇಂದಿನ ಜೀವನ ಶೈಲಿಯಿಂದಾಗಿ ಸಿದ್ಧ ಆಹಾರಗಳು ಸುಲಭವಾಗಿ ಲಭ್ಯವಾಗುತ್ತಿವೆ. ಮಾರುಕಟ್ಟೆಯ ವ್ಯಾಪನೆಯಿಂದ ಎಲ್ಲ ಮೂಲೆಗೂ ಸಂಸ್ಕರಿತ ಆಹಾರ ಪದಾರ್ಥಗಳು ತಲುಪುತ್ತಿವೆ. ಇಂಥ ಆಹಾರ ಕೆಡದಿರಲೆಂದು ಅನೇಕ ರೀತಿಯ ರಾಸಾಯನಿಕಗಳ ಮಿಶ್ರಣ ಕೂಡ ನಡೆಯುತ್ತಿದೆ. ಇದರಿಂದ ಅದನ್ನು ತಿನ್ನುವವರ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತಿವೆ. ಈ ಕುರಿತು ಸಮಾಜದಲ್ಲಿ ಉಂಟಾಗುತ್ತಿರುವ ಜಾಗೃತಿ ಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಹೊರಳುವಂತೆ ಮಾಡುತ್ತಿದೆ. ಇದೊಂದು ಗುಣಾತ್ಮಕ ಬೆಳವಣಿಗೆ.

ಬಸುರಿ-ಬಾಣಂತಿ, ಶಿಶು, ಕಾಯಿಲೆ ಬಿದ್ದವರಿಗೆ ಸಸ್ಯ ಮತ್ತು ಮಾಂಸಾಹಾರಗಳಲ್ಲಿ ವಿಧಿ-ನಿಷೇಧಗಳಿವೆ. ಉದಾಹರಣೆಗೆ ಅಣ್ಣೇಸೊಪ್ಪನ್ನು ಬಸುರಿಗೆ ನೀಡುವುದಿಲ್ಲ. ಇದು ತಂಪುಕಾರಕವಾದ್ದರಿಂದ ಬಸುರಿಗೆ ಶೀತವಾಗಿ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಇಂಥ ನಿಷಿದ್ಧ ಹೇಳಲಾಗಿದೆ ಅನ್ನಬಹುದು. ತುಮಕೂರು, ತಿಪಟೂರು, ಗುಬ್ಬಿ, ತಾಲ್ಲೂಕುಗಳಲ್ಲಿ ಸಸ್ಯಾಹಾರಿಗಳಾದ ವೀರಶೈವರು ಅಧಿಕವಾಗಿದ್ದಾರೆ. ಈ ಭಾಗದ ಮಾಂಸಾಹಾರಿ ಸಮುದಾಯಗಳು ವಿಶೇಷ ಸಂದರ್ಭ ಮತ್ತು ದೇವತಾ ಕಾರ್ಯಗಳಲ್ಲಿ ಮಾಂಸಾಹಾರ ಬಳಸುತ್ತಾರೆ. ಮಾಂಸಾಹಾರಿ ಸಮುದಾಯಗಳು ನಿತ್ಯವೂ ಮಾಂಸಾಹಾರವನ್ನೇ ಸೇವಿಸುತ್ತವೆ ಎನ್ನಲಾಗದು. ಮಾಂಸಾಹಾರ ಸೇವನೆಯಲ್ಲೂ ಕೆಲವು ವಿಧಿ ನಿಷೇಧಗಳಿವೆ. ಸಮುದಾಯ ಹಾಗೂ ವ್ಯಕ್ತಿ ನಿಷ್ಠವಾಗಿ ಇವು ಬದಲಾಗುತ್ತವೆ. ಕೆಲವು ಸಮುದಾಯಗಳು ವಾರದ ಒಂದೊಂದು ದಿನ ಆಹಾರ ಸೇವಿಸದ ದಿನಗಳಿವೆ. ಉದಾಹರಣೆಗೆ ಭಾನುವಾರದಂದು ರಾಮನ ಒಕ್ಕಲಿನವರು; ಸೋಮವಾರದಂದು ಸಾಮಾನ್ಯವಾಗಿ ಉಳಿದ ಎಲ್ಲ ಸಮುದಾಯಗಳು; ಮಂಗಳವಾರದಂದು ಆಂಜನೇಯ ಒಕ್ಕಲಿನವರು; ಶುಕ್ರವಾರದಂದು ಲಕ್ಷ್ಮೀ ಆರಾಧಕರು; ಶನಿವಾರದಂದು ಶನಿದೇವರ ಅಥವಾ ಜಡೆಮುನಿ ಅಥವಾ ಮುನಿಸ್ವಾಮಿಯ ಭಕ್ತರು ಮಾಂಸಾಹಾರ ಸೇವಿಸುವುದಿಲ್ಲ. ಸಾಮಾನ್ಯವಾಗಿ ಶ್ರಾವಣಮಾಸದಲ್ಲಿ ಮಾಂಸಾಹಾರಿಗಳು ಮಾಂಸಾಹಾರ ಸೇವಿಸುವುದಿಲ್ಲ. ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳಲ್ಲೂ ಮಾಂಸಾಹಾರ ಸಂಬಂಧಿ ವಿಧಿ-ನಿಷೇಧಗಳಿದ್ದೇ ಇವೆ.

ಇಷ್ಟಲ್ಲದೇ ಮಾಂಸಾಹಾರವನ್ನು ಮನೆಯ ಒಳಗಡೆ ಬೇಯಿಸದೆ, ಮನೆಯ ಹೊರಭಾಗದಲ್ಲಿರುವ ಹೊರ ಒಲೆಯಲ್ಲಿ ಬೇಯಿಸಲಾಗುತ್ತದೆ. ಜಿಲ್ಲೆಯಲ್ಲಿ ಕಂಡುಬರುವ ಮಾಂಸಾಹಾರಗಳಲ್ಲಿ ಅನೇಕ ಬಗೆಗಳಿವೆ. ಕರಿಮೀನು, ಸೀಗಡಿ ಪಲ್ಯ, ಏಡಿಸಾರು, ಕರ್‍ಬಾಡು, ಬಾಡಿನಸಾರು, ಕೋಳಿಸಾರು, ಚಾಕಣ, ಮೊಟ್ಟೆಸಾರು ಇತ್ಯಾದಿ ಜನಪ್ರಿಯವಾದವು. ಅಪರೂಪಕ್ಕೆ ಬೇಟೆಯಾಡಿದ ಮೊಲ, ಪಕ್ಷಿಗಳ ಮಾಂಸವನ್ನೂ ಸೇವಿಸುವುದಿದೆ. ಇದಕ್ಕೆ ನೆಂಚಿಕೆಯಾಗಿ ಚಕ್ಕೆ, ಲವಂಗ, ಮೆಣಸು, ಜಿರೀಗೆ, ಉಪ್ಪು, ಹುಣಸೆ, ಮೆಣಸಿನಪುಡಿ, ಧನಿಯಪುಡಿ, ಕೊತ್ತಂಬರಿಸೊಪ್ಪು, ಪುದೀನಾಸೊಪ್ಪು, ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿಗಳನ್ನು ಹದವಾಗಿ ಬೆರೆಸಿ, ಅರೆದು ಮಸಾಲೆ ಮಾಡಿ, ಮಾಂಸದ ಜೊತೆ ಬೇಯಿಸಿ ರಾಗಿಮುದ್ದೆಯ ಜೊತೆ ಸೇವಿಸಲಾಗುತ್ತದೆ.

ಸಕಾಲಕ್ಕೆ ಮಳೆ ಬಾರದಿದ್ದರೆ ಮಂಚಕಲ್‍ಕುಪ್ಪೆ ಬಳಿಯ ಬೊಮ್ಮನಹಳ್ಳಿಯ ಮಲ್ಲೇದೇವರ ಗುಡಿಯಲ್ಲಿ ಒಂದು ವಿಶಿಷ್ಟ ಆಚರಣೆ ನಡೆಯುತ್ತದೆ. ಆಗ ಇಲ್ಲಿಗೆ ಆಗಮಿಸುವ ಭಕ್ತರು ಅಣ್ಣೇ ಸೊಪ್ಪಿನ ಹರಕೆ ಹೊತ್ತು ಅದನ್ನೇ ದೇವರಿಗೆ ಪೂಜಿಸಿ ಅದನ್ನು ಅಲ್ಲೇ ಅಡುಗೆ ಮಾಡಿ ನೈವೇದ್ಯ ಅರ್ಪಿಸಿ ಪ್ರಸಾದವಾಗಿ ಸೇವಿಸುವರು. ಅಣ್ಣೇ ಸೊಪ್ಪಿನ ಹರಕೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಪ್ರಾಚೀನ ಕಾಲದಿಂದಲೂ ಉಳಿದುಬಂದಿದೆ. ಎಲ್ಲ ಸಮುದಾಯಗಳಲ್ಲೂ ಅವರದೇ ಆದ ಆಹಾರ ವೈವಿಧ್ಯವಿದೆ. ಹಾಗೆಯೇ ಆಹಾರ ಸಂಬಂಧಿ ನಂಬಿಕೆ, ಆಚರಣೆಗಳೂ ಇವೆ. ಎಲ್ಲ ಸಮುದಾಯಗಳೂ ಆಹಾರ ಸೇವನೆಯನ್ನು ಖಾಸಗಿ ವಿಚಾರವಾಗಿ ಪರಿಗಣಿಸುತ್ತವೆ. ವಿಶೇಷ ಅಂದರೆ ಯಾವುದೇ ಸಮುದಾಯದ ಜನ ಹಬ್ಬ, ಮದುವೆ, ತಿಥಿಯಂಥ ವಿಶೇಷ ಸಂದರ್ಭಗಳಲ್ಲಿ ಹಾಗೂ ಊರ ಹಬ್ಬದಲ್ಲಿ ಆಹಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಈ ನಿಯಮ ತಮ್ಮ ತಮ್ಮ ಮನೆಯಲ್ಲಿ ನಿತ್ಯ ಆಹಾರ ಸೇವಿಸುವಾಗಲೂ ಕಂಡುಬರುತ್ತದೆ. ಊಟಕ್ಕೆ ಮುಂಚೆ ಕಾಲು ತೊಳೆದುಕೊಳ್ಳುವುದು, ಕುಳಿತೇ ಊಟಮಾಡುವುದು, ತಮ್ಮ ಜನರೊಂದಿಗೆ ಮಾತ್ರ ಊಟಕ್ಕೆ ಕೂರುವುದು ಇತ್ಯಾದಿ ನಿಯಮಗಳ ಕನಿಷ್ಠ ಪಾಲನೆ ಇಂಥ ಕಡೆ ಕಾಣಿಸುತ್ತದೆ. ಉಳಿದಂತೆ ಹೊಟೇಲುಗಳಲ್ಲಿ, ಹಾದಿ ಬೀದಿಗಳಲ್ಲಿ ಆಹಾರ ಸೇವಿಸುವಾಗ ಸಮುದಾಯ ಪಾಲಿಸುವ ನಿಯಮಗಳ ಪಾಲನೆ ಕಾಣಿಸುವುದಿಲ್ಲ.

ಕಾಡುಗೊಲ್ಲರು ಹಂದಿ ಮತ್ತು ದನ, ಎಮ್ಮೆ ಮತ್ತು ಕೋಣಗಳನ್ನು ಯಾವ ಕಾರಣಕ್ಕೂ ಆಹಾರವಾಗಿ ಬಳಸುವುದಿಲ್ಲ. ಸಾಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುವ ಕೆಲವು ಗೊಲ್ಲರು ಕೋಳಿಯನ್ನೂ ತಿನ್ನುವುದಿಲ್ಲ. ಕುರಿ ಮತ್ತು ಮೇಕೆಗಳ ಮಾಂಸವನ್ನು ಮಾತ್ರ ಹೆಚ್ಚಾಗಿ ಬಳಸುತ್ತಾರೆ. ಶನಿವಾರ ಮತ್ತು ಸೋಮವಾರಗಳಂದು ಇವರು ಮಾಂಸಾಹಾರ ಸೇವಿಸುವುದಿಲ್ಲ. ಶ್ರಾವಣ ಮಾಸದಲ್ಲೂ ಮಾಂಸಾಹಾರ ಸೇವನೆ ನಿಷಿದ್ಧ. ಇವರು ಬೇಟೆಯಾಡದ ಕಾರಣ ಯಾವುದೇ ಹಕ್ಕಿಗಳನ್ನೂ ಆಹಾರವಾಗಿ ಬಳಸುವುದಿಲ್ಲ. ಸಾಮಾನ್ಯವಾಗಿ ಜನಿಗೆ ಕುರಿ ಎಂದು ಹೆಣ್ಣು ಕುರಿಯೊಂದನ್ನು ಬಿಡುವ ಇವರು ಅದನ್ನು ಹಾಗೂ ಅದರ ಮರಿಗಳನ್ನು ಹಾಲಿನ ಉದ್ದೇಶಕ್ಕೆ ಮಾತ್ರವೇ ಬಳಸುತ್ತಾರಲ್ಲದೇ ಅದನ್ನು ಆಹಾರಕ್ಕೆ ಬಳಸುವುದಿಲ್ಲ. ಹುರುಳಿ ವ್ರತದ ಗೊಲ್ಲರು ಹುರುಳಿಯನ್ನು ಯಾವ ಕಾರಣಕ್ಕೂ ತಿನ್ನುವುದಿಲ್ಲ. ಯಾವುದೇ ಸಮುದಾಯದ ಜನ ನಿಯಮದಂತೆ ವಿಶೇಷ ಸಂದರ್ಭಗಳಲ್ಲಿ ತಮ್ಮ ಜಾತಿಯ ಅಥವಾ ಬಂಧುಗಳ ಜೊತೆ ಮಾತ್ರ ಸಹಪಂಕ್ತಿ ಭೋಜನ ಮಾಡುತ್ತಾರೆ. ಕಾಡುಗೊಲ್ಲರಲ್ಲಿ ಮನೆಯ ವಿಶೇಷ ಕಾರ್ಯಕ್ರಮದ ಊಟದ ಸಂದರ್ಭದಲ್ಲಿ ಊಟಕ್ಕೆ ಯಾರು ಎಲ್ಲಿ ಕೂರಬೇಕು ಎಂಬುದನ್ನೂ ಹೇಳಲಾಗುತ್ತದೆ. ಸ್ವಜಾತಿಯಲ್ಲದ ಯಾರನ್ನೂ ಅವರು ಸಹಪಂಕ್ತಿ ಊಟಕ್ಕೆ ಕೂರಿಸಿಕೊಳ್ಳುವುದಿಲ್ಲ. ಆದರೆ ಯಾರೇ ಬಂದರೂ ಊಟ ನೀಡುತ್ತಾರಾದರೂ ಸಹಪಂಕ್ತಿಯಲ್ಲಿ ಅಲ್ಲ ಎಂಬುದು ಮುಖ್ಯ. ಉಳಿದ ಸಮುದಾಯಗಳಲ್ಲೂ ಇಂಥ ನಿಯಮಗಳೇ ಕಾಣಿಸುತ್ತವೆ. ಆಚರಣೆ ಸಂದರ್ಭದಲ್ಲಿ ಮಾತ್ರ ಆಹಾರ ಸೇವನೆಯ ಕಟ್ಟುನಿಟ್ಟಿನ ಪಾಲನೆ ಇರುತ್ತದೆ. ಬದಲಾದ ಇಂದಿನ ದಿನಗಳಲ್ಲಿ ಕೂಡ ಇಂಥ ಆಚರಣೆಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಈ ನಿಯಮ ಹೊಟೇಲುಗಳಲ್ಲಿ, ಮನೆಯಿಂದ ಹೊರಗೆ ಮದುವೆ, ಗೃಹಪ್ರವೇಶ ಇತ್ಯಾದಿ ಆಹ್ವಾನಿತ ಸಮಾರಂಭಗಳಲ್ಲಿ ಊಟ ಮಾಡುವಾಗ ಅನ್ವಯಿಸುವುದಿಲ್ಲ. ಇಂಥ ಸಾಮಾಜಿಕ ಮತ್ತು ವೈಯಕ್ತಿಕ ಊಟದ ನಿಯಮಗಳಲ್ಲಿ ಜನರೇ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಕಟ್ಟುನಿಟ್ಟಾಗಿ ಇಂಥ ನಿಯಮ ಪಾಲಿಸುವವರು ಇತರೆಡೆ ಊಟಕ್ಕೆ ಹೋಗುವುದೇ ಇಲ್ಲ.

ಆಹ್ವಾನವಿಲ್ಲದೇ ಸಂಬಂಧವಿಲ್ಲದೇ ಯಾರೂ ಯಾರ ಮನೆಯ ಬಾಗಿಲಿಗೂ ಊಟ ಅಥವಾ ಆಹಾರಕ್ಕಾಗಿ ಹೋಗುವುದಿಲ್ಲ. ಹಾಗೆ ಹೋಗುವುದನ್ನು ಭಿಕ್ಷಾಟನೆ ಎಂದು ಪರಿಗಣಿಸಲಾಗುತ್ತದೆ. ಆಹಾರ ಸೇವನೆ ಸ್ವಾಭಿಮಾನದ ಸಂಕೇತವೂ ಹೌದು. ಆಹ್ವಾನದ ಮೇರೆಗೆ ಒಂದೆಡೆ ಊಟಕ್ಕೆ ಹೋದರೂ ಅಲ್ಲಿ ನಿರೀಕ್ಷಿತ ಗೌರವ, ಸೌಜನ್ಯದ ನಡತೆ ಕಾಣಿಸದಿದ್ದರೆ ಅಲ್ಲಿ ಊಟವನ್ನು ಮಾಡುವುದಿಲ್ಲ. ಈ ವಿಷಯದಲ್ಲಿ ಬಡವ ಶ್ರೀಮಂತ ಎಂಬ ಭೇದವಿಲ್ಲ. ಈ ಎಲ್ಲ ದೃಷ್ಟಿಯಿಂದ ಆಹಾರ ಎಂಬುದು ವ್ಯಕ್ತಿಯ ವರ್ತನೆಯನ್ನೂ ಸಾಮಾಜಿಕ ನಡಾವಳಿಗಳನ್ನೂ ನಿಯಂತ್ರಿಸುತ್ತದೆ ಎಂಬುದು ಅರಿವಾಗುತ್ತದೆ. ಹೀಗಾಗಿಯೇ ಆಹಾರ ಸಂಬಂಧಿಯಾದ ಅಪಾರ ನಂಬಿಕೆ ಮತ್ತು ನಿಷೇಧಗಳು ಕಾಣಿಸುತ್ತವೆ. ಮಾಂಸಾಹಾರಿಗಳಾದರೂ ಕೆಲವರು ಹಂದಿಯನ್ನು, ದನ, ಎಮ್ಮೆಗಳನ್ನು ಯಾವ ಕಾರಣಕ್ಕೂ ತಿನ್ನುವುದಿಲ್ಲ, ಇನ್ನು ಕೆಲವರು ಕೋಳಿಯನ್ನೂ ತಿನ್ನುವುದಿಲ್ಲ. ಹಾಗೆಯೇ ಕುರಿಯನ್ನೇ ತಿನ್ನುವ ಕಾಡುಗೊಲ್ಲರು ಜನಿಗೆ ಕುರಿಯನ್ನು ಸೇವಿಸದಿದ್ದರೆ ನಾಯಕರಲ್ಲಿ ಕೆಲವರು ಮೇಕೆಯನ್ನು ತಿನ್ನುವುದಿಲ್ಲ. ಸಸ್ಯಾಹಾರಿಗಳಲ್ಲೂ ಕೆಲವರು ಈರುಳ್ಳಿ-ಬೆಳ್ಳುಳ್ಳಿ, ಗೆಣಸು, ಹುರುಳಿ ಇತ್ಯಾದಿ ನಿಷೇಧ ಇಟ್ಟುಕೊಂಡವರಿದ್ದಾರೆ. ಹೀಗೆ ಆಹಾರದಲ್ಲಿ ತಿನ್ನಬಹುದಾದುದನ್ನೆಲ್ಲವನ್ನೂ ಜನ ತಿಂದೇ ಬಿಡುತ್ತಾರೆ ಎನ್ನಲಾಗದು. ಆಚರಣೆ ಅಥವಾ ನಂಬಿಕೆ ಇತ್ಯಾದಿ ದೃಷ್ಟಿಯಿಂದ ಯಾವ ಆಹಾರವನ್ನು ಬಿಟ್ಟಿದ್ದಾರೋ ಅದನ್ನು ಅವರು ತಮ್ಮ ಆಹಾರ ಎಂದು ಪರಿಗಣಿಸಿಲ್ಲ ಎಂಬುದು ಮುಖ್ಯ. ಕಾಡುಗೊಲ್ಲರು ತಾವು ಹೊಟ್ಟೆಗೆ ಇಲ್ಲದೇ ಸಾಯುವಂತಾದರೂ ಸರಿ; ಜನಿಗೆ ಕುರಿ ಮತ್ತು ದನ ಮಾತ್ರ ತಿನ್ನುವುದಿಲ್ಲ ಎಂದು ಘೋಷಿಸುತ್ತಾರೆ. ಬ್ರಾಹ್ಮಣ, ಜೈನ, ಲಿಂಗಾಯತರಂಥ ಕಟ್ಟುನಿಟ್ಟಿನ ಸಸ್ಯಾಹಾರಿಗಳು ಯಾವುದೇ ಕಾರಣಕ್ಕೂ ಮೊಟ್ಟೆಯನ್ನು ಕೂಡ ಸೇವಿಸುವುದಿಲ್ಲ.

ನಾಯಕ ಸಮುದಾಯದಲ್ಲಿ ಸಾಂಪ್ರದಾಯಿಕ ಊಟದಲ್ಲಿ ಪಂಕ್ತಿ ಭೇದವಿದ್ದು ಸ್ವಜಾತಿಯ ಜನರನ್ನು ಹಾಗೂ ತಮಗೆ ಸರಿಸಮಾನವಾದ ಸಮುದಾಯಗಳನ್ನು ಮಾತ್ರ ತಮ್ಮ ಜೊತೆಯಲ್ಲಿಯೇ ಊಟಕ್ಕೆ ಕೂರಿಸಿಕೊಳ್ಳುತ್ತಾರೆ. ಇವರು ತಮ್ಮೊಂದಿಗೆ ಬ್ರಾಹ್ಮಣ, ಲಿಂಗಾಯತ, ಜೈನ, ಮುಸ್ಲಿಂ, ಆದಿ ದ್ರಾವಿಡ, ಆದಿ ಕರ್ನಾಟಕ ಸಮುದಾಯಗಳಿಗೆ ಸಹಪಂಕ್ತಿ ಊಟಕ್ಕೆ ಪ್ರವೇಶ ನೀಡುವುದಿಲ್ಲ. ಮುಸ್ಲಿಂ ಸಮುದಾಯ ಮಾಂಸಾಹಾರವನ್ನು ಹೆಚ್ಚಾಗಿ ಬಳಸುತ್ತದೆ. ಕೋಳಿ, ಕುರಿ, ಮೇಕೆ, ದನ, ಎಮ್ಮೆ, ಮೀನು, ತಿನ್ನುವರು. ಇವರು ಯಾವುದೇ ಪ್ರಾಣಿಗಳನ್ನು ಆಹಾರವಾಗಿ ಬಳಸಬೇಕಾದಾಗ ಅವುಗಳಿಗೆ ಜೀವವಿದ್ದಾಗ ದೇವರ ಸ್ಮರಣೆಯನ್ನು ಮಾಡಿ ಒಂದೇ ಏಟಿಗೆ ಕತ್ತರಿಸಿ ತಿನ್ನುವ ಪದ್ಧತಿ ಮತ್ತು ಆ ಪ್ರಾಣಿಯ ಆತ್ಮ ದೇವರಲ್ಲಿ ಸೇರುತ್ತದೆ ಎಂಬ ನಂಬಿಕೆ ಇದೆ. ಹೀಗೆ ಕ್ರಮಬದ್ಧವಾಗಿ ತಯಾರಿಸಿದ ಮಾಂಸಾಹಾರವನ್ನು ‘ಹಲಾಲ್’ ಎನ್ನುವರು. ನಿಷಿದ್ಧ ರೀತಿಯಲ್ಲಿ ಪ್ರಾಣಿಗೆ ತೀವ್ರ ಹಿಂಸೆ ನೀಡಿ ಅಥವಾ ಕದ್ದು ತಂದು ಕೊಂದು ಅಕ್ರಮವಾಗಿ ತಯಾರಿಸಿದ ಆಹಾರವನ್ನು ‘ಹರಾಮ್’ ಎನ್ನುವರು. ಹಲಾಲ್ ಆಹಾರ ಸ್ವೀಕಾರಾರ್ಹ. ಹರಾಮ್ ಆಹಾರ ತಿರಸ್ಕಾರ ಯೋಗ್ಯ ಎಂದು ತಿಳಿಯುವರು.

ತಿನ್ನಬಹುದಾದ ಎಲ್ಲ ಪ್ರಾಣಿ, ತರಕಾರಿ, ಧಾನ್ಯಗಳನ್ನು ಕೇವಲ ಆಹಾರವಾಗಿ ಮಾತ್ರ ನೋಡುವವರಿಗೆ ವಿವಿಧ ಸಮುದಾಯಗಳವರ ಆಹಾರ ಸಂಬಂಧಿ ವಿಧಿ ನಿಷೇಧಗಳು ಅರ್ಥರಹಿತವಾಗಿ ಕಾಣಬಹುದು. ಸ್ವತಃ ಮಾಂಸ ತಿನ್ನುವವರು ಅದರಲ್ಲೂ ಕುರಿ ತಿನ್ನುವವರು ಜನಿಗೆ ಕುರಿಯನ್ನು ಮಾತ್ರ ತಿನ್ನುವುದಿಲ್ಲ ಎನ್ನುವುದಕ್ಕೆ ಮೇಲ್ನೋಟದಲ್ಲಿ ಅರ್ಥ ಕಾಣಿಸದೇ ಇರಬಹುದು. ಆದರೆ ಯಾಕೆ ಹೀಗೆ ಎಂಬುದಕ್ಕೆ ಯಾವುದೇ ಒಂದು ಕಾರಣ ದೊರೆಯುವುದಿಲ್ಲ. ಈ ಪ್ರಶ್ನೆಗೆ ‘ತಮಗೆ ಒಗ್ಗುವುದಿಲ್ಲ’, ‘ನಮ್ಮ ಸಂಪ್ರದಾಯದಲ್ಲಿ ಇಲ್ಲ’, ‘ಪಾಪದ ಕೆಲಸ’, ‘ಹಿರಿಯರು ಮೆಚ್ಚುವುದಿಲ್ಲ’ ಇತ್ಯಾದಿ ಅನೇಕ ಕಾರಣಗಳು ದೊರೆಯುತ್ತವೆ. ವಿಜ್ಞಾನದ ವಿವರಣೆಯಂತೆ ಆಹಾರ ಎಂದರೆ ಪ್ರೋಟೀನು, ವಿಟಮಿನ್ ಮತ್ತು ಕಾರ್ಬೋಹೈಡ್ರೇಟುಗಳನ್ನು ದೇಹಕ್ಕೆ ಒದಗಿಸುವ ವಸ್ತು ಮಾತ್ರ. ಈ ದೃಷ್ಟಿಯಲ್ಲಿ ಸಸ್ಯಾಹಾರ, ಮಾಂಸಾಹಾರ ಎಂಬ ಭೇದವಾಗಲೀ ಅದು ಅಥವಾ ಇದು ನಿಷಿದ್ಧ ಎಂಬುದಾಗಲೀ ಇಲ್ಲ. ಆದರೆ ಸಮುದಾಯಗಳ ದೃಷ್ಟಿಯಲ್ಲಿ ಆಹಾರ ಎಂಬುದು ಕೇವಲ ವಿಜ್ಞಾನದ ವಿವರಣೆಯಂತಲ್ಲ. ಅದು ಇಡೀ ಜೀವನವನ್ನು ನಿಯಂತ್ರಿಸುವ ವಿಶಿಷ್ಟವೂ ಪ್ರಕೃತಿಯ ಅಪರೂಪದ ಕೊಡುಗೆಯೂ ಆಗಿದೆ ಎಂಬ ಭಾವನಾತ್ಮಕ ಸಂಬಂಧವಿದೆ. ಹೀಗಾಗಿಯೇ ಆಹಾರ ಸಂಬಂಧಿಯಾದ ಅಪಾರ ಸಂಪ್ರದಾಯ, ಆಚರಣೆ, ನಂಬಿಕೆ ಮತ್ತು ನಿಷೇಧಗಳು ಕಾಣಿಸುತ್ತವೆ.

2015ರಲ್ಲಿ ಭಾರತದಲ್ಲಿ ಗೋಮಾಂಸ ಭಕ್ಷಣೆಯ ಪರ ವಿರೋಧ ಚರ್ಚೆ ವಿಪರೀತವಾಗಿ ನಡೆಯಿತು. ಮಹಾರಾಷ್ಟ್ರ ಸರ್ಕಾರ ಗೋಮಾಂಸವನ್ನು ನಿಷೇಧಿಸಿತು. ಗೋವು ಹಿಂದೂಗಳ ಪವಿತ್ರ ಪ್ರಾಣಿ, ಅದನ್ನು ಕೊಂದು ತಿನ್ನುವುದು ಅವರ ಭಾವನೆಯನ್ನು ಘಾಸಿಗೊಳಿಸುತ್ತದೆ, ಸಂವಿಧಾನ ಕೂಡ ಗೋಹತ್ಯೆ ನಿಷೇಧ ಹೇಳಿದೆ ಎಂದು ಅದರ ಪ್ರತಿಪಾದಕರು ಹೇಳಿದರೆ, ಹಿಂದೂಗಳೆಂದು ಗುರುತಿಸಿಕೊಂಡ ಕೆಲವು ಸಮುದಾಯಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಗೋಮಾಂಸವನ್ನು ಹಿಂದಿನಿಂದಲೂ ಸೇವಿಸುತ್ತ ಬಂದಿದ್ದು ಅದು ಅವರ ಆಹಾರದ ಹಕ್ಕು ಎಂದು ನಿಷೇಧ ವಿರೋಧಿಸುವವರು ಹೇಳತೊಡಗಿದರು. ಈ ಹಿನ್ನೆಲೆಯಲ್ಲಿ ಆಹಾರದ ಜಾಗತಿಕ ಸಾಂಸ್ಕೃತಿಕ ಸಂಗತಿಯನ್ನು ವಿಶ್ಲೇಷಿಸಿದ ಸಂಸ್ಕೃತಿ ಚಿಂತಕರಾದ ಎಸ್ ಎನ್ ಬಾಲಗಂಗಾಧರ ಅವರು ಇಂಥ ಪರ ವಿರೋಧವಾದ ಈ ಎರಡೂ ವಾದಗಳು ನಿರ್ದಿಷ್ಟ ರೀತಿಯ ಐಡಿಯಾಲಜಿಗಳಿಂದ ಉಂಟಾಗಿವೆಯಲ್ಲದೇ ಯಾವುದೇ ಪ್ರಾಣಿಯನ್ನು ಅಥವಾ ಏನನ್ನಾದರೂ ಒಂದು ಸಮುದಾಯ ಯಾಕೆ ಆಹಾರವಾಗಿ ಸ್ವೀಕರಿಸುವುದಿಲ್ಲ ಎಂದರೆ ಅದನ್ನು ಆ ಸಮುದಾಯ ‘ತನ್ನ ಆಹಾರ ಎಂದು ಪರಿಗಣಿಸಿಲ್ಲ ಅಷ್ಟೇ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ (ಬೀಫ್ ಬ್ಯಾನ್ಸ್, ಬೀಫ್ ಪಾರ್ಟಿಸ್ ಆಂಡ್ ಸೇಕ್ರೆಡ್ ಕೌಸ್; ಎಸ್ ಎನ್ ಬಾಲಗಂಗಾಧರ ಆಂಡ್ ಜೆಕಬ್ ಡಿ ರೂವರ್, ಘೆಂಟ್ ಯೂನಿವರ್ಸಿಟಿ, ಬೆಲ್ಜಿಯಂ, 2015, ಪೇಜಸ್: 3-4).

ಗೋಮಾಂಸದ ವಿಚಾರದಲ್ಲಿ ಆಧುನಿಕ ಸಮಾಜ ಜನಪದ ಆಹಾರ ವಿಧಿ ನಿಷೇಧಗಳ ಸೂಕ್ಷ್ಮವನ್ನು ಗಮನಿಸದ ಕಾರಣ ಘರ್ಷಣೆಗೆ ಕಾರಣವಾಗಿದೆ. ಇಂಥ ಮನೋಧರ್ಮ ಹುಟ್ಟಲು ಕಾರಣವಾದ ಐತಿಹಾಸಿಕ ಸಂಗತಿಗಳನ್ನು ಬಾಲಗಂಗಾಧರ್ ಅವರು ಪೂರ್ವೋಕ್ತ ಲೇಖನದಲ್ಲಿ ಸಾಧಾರವಾಗಿ ಪ್ರತಿಪಾದಿಸಿ ಎರಡೂ ಪಕ್ಷಗಳ ವಾದದಲ್ಲಿ ಹುರುಳಿಲ್ಲ ಎಂದು ಸಾಬೀತುಪಡಿಸಿದ್ದಾರೆ. ಆಹಾರ ಸಂಬಂಧಿಯಾದ ತುಮಕೂರಿನ ಸಮುದಾಯಗಳ ನಂಬಿಕೆ ನಿಷೇಧಗಳನ್ನು ಗಮನಿಸಿದರೂ ಈ ಮಾತು ಸರಿ ಎನಿಸುತ್ತದೆ. ಆಹಾರ ಸ್ವೀಕರಿಸುವ ಅಥವಾ ಸ್ವೀಕರಿಸದ ಸಂಗತಿ ಎರಡು ರೀತಿಯಲ್ಲಿ ಕಾಣಿಸುತ್ತದೆ: ಮೊದಲನೆಯದು ವ್ಯಕ್ತಿ ನೆಲೆ-ಇದರಲ್ಲಿ ವ್ಯಕ್ತಿ ತನ್ನ ಬೇಕು ಬೇಡಗಳಿಗೆ ಇಷ್ಟದ, ಇಷ್ಟವಿಲ್ಲದ, ರುಚಿಸದ ಹಾಗೂ ತನ್ನ ಆರೋಗ್ಯದ ಕಾರಣಕ್ಕೆ ಆಹಾರದ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಇದು ಸಾಮಾಜಿಕ ಅಥವಾ ಸಮುದಾಯಗಳ ಮೇಲೆ ಅಷ್ಟಾಗಿ ಪ್ರಭಾವ ಬೀರದು, ಮಾತ್ರವಲ್ಲ ಇದನ್ನು ಸಮುದಾಯ ಅಥವಾ ಸಮಾಜದ ಇತರೆ ಸದಸ್ಯರು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಇನ್ನೊಂದು ಸಾಮಾಜಿಕ ಅಥವಾ ಸಾಮುದಾಯಿಕ ನೆಲೆ-ಇದು ಬಹಳ ಮುಖ್ಯವಾದುದು. ಸಮುದಾಯವೊಂದರಲ್ಲಿ ಹಿಂದಿನಿಂದಲೂ ನಡೆದು ಬಂದ ಆಹಾರ ಸಂಬಂಧಿ ರೀತಿ, ನಿಯಮ, ವಿಧಿ, ನಿಷೇಧಗಳನ್ನು ಆಯಾ ಸಮುದಾಯದ ಸದಸ್ಯರೆಲ್ಲ ಪಾಲಿಸಲೇಬೇಕಾಗುತ್ತದೆ. ಇದು ಸಹಜವಾಗಿಯೇ ಸಾಮಾಜಿಕ ಪರಿಣಾಮ ಮತ್ತು ಪ್ರಭಾವವನ್ನು ಉಳ್ಳದ್ದು. ಮಾಂಸಾಹಾರವನ್ನು ತನ್ನ ಸದಸ್ಯರು ಬಳಸಲೇಬಾರದೆಂದು ವಿಧಿಸಿದ ಸಮುದಾಯವೊಂದರ ಸದಸ್ಯ ಸ್ವ ಇಚ್ಛೆಯಿಂದ ಮಾಂಸಾಹಾರವನ್ನು ಸ್ವೀಕರಿಸಿ ವಿಧಿಯನ್ನು ಮೀರಿದರೆ ಅಕಸ್ಮಾತ್ ಇದನ್ನು ಗಮನಿಸಿದ ಇತರೆ ಸದಸ್ಯರು ಆಕ್ಷೇಪಿಸುವುದು ಹಾಗೂ ಮಾಂಸಾಹಾರಿ ಸಮುದಾಯದವರು ಅಚ್ಚರಿಯಿಂದ ನೋಡುವುದು, ಪ್ರತಿಕ್ರಿಯಿಸುವುದು ಕೂಡ ಸಾಮಾಜಿಕ ಪರಿಣಾಮದ ಕಾರಣದಿಂದಲೇ ಘಟಿಸುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಸಮುದಾಯವೊಂದು ತನ್ನ ಸಮುದಾಯದ ಸದಸ್ಯರಿಗೆ ಮಾತ್ರ ಇಂಥ ವಿಧಿ, ನಿಷೇಧಗಳನ್ನು ಹೇಳುತ್ತದೆಯೇ ವಿನಾ ಅನ್ಯ ಸಮುದಾಯಕ್ಕಲ್ಲ. ಆಯಾ ಸಮುದಾಯದ ಸದಸ್ಯ ಕೂಡ ತನ್ನ ಸಮುದಾಯದ ವಿಧಿ ನಿಷೇಧಗಳ ಬಗ್ಗೆ ಜಾಗೃತನಾಗಿರುತ್ತಾನೆಯೇ ವಿನಾ ಅನ್ಯ ಸಮುದಾಯದ ವಿಧಿ ನಿಷೇಧಗಳ ಪರಿಗಣನೆ ಆತನಿಗೆ ಬೇಕಿಲ್ಲ. ಇತರ ಸಮುದಾಯದ ಆಹಾರ ವಿಷಯದಲ್ಲಿ ಇನ್ನೊಂದು ಸಮುದಾಯ ಹಸ್ತಕ್ಷೇಪ ಮಾಡುವುದು ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಕಂಡುಬರುವುದಿಲ್ಲ.

ಒಂದೊಂದು ಸಮುದಾಯವೂ ತನ್ನ ಸದಸ್ಯರ ವ್ಯಾಪ್ತಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಉಳಿದವನ್ನು ನಿರ್ಲಕ್ಷ್ಯಿಸುತ್ತದೆ. ಹೀಗಾಗಿ ಸಮುದಾಯಗಳ ಮಧ್ಯೆ ಆಹಾರ ಸಂಬಂಧಿ ವಿಧಿ ನಿಷೇಧಗಳು ಎಷ್ಟೇ ಹುಟ್ಟಿಕೊಂಡರೂ ಅದು ಪರಸ್ಪರ ಘರ್ಷಣೆಗೆ ಕಾರಣವಾಗದೇ ವೈವಿಧ್ಯಕ್ಕೆ ಕಾರಣವಾಗುತ್ತದೆ, ಆಮೂಲಕ ಸಾಂಸ್ಕೃತಿಕ ವಿಶಿಷ್ಟತೆಗೆ ಕಾರಣವಾಗುತ್ತದೆ. ತುಮಕೂರು ಜಿಲ್ಲೆಯ ಹತ್ತಾರು ಸಮುದಾಯಗಳ ವೈವಿಧ್ಯಮಯ ಆಹಾರ ಸಂಬಂಧಿ ವಿಧಿ ನಿಷೇಧಗಳು ಇದನ್ನೇ ತೋರಿಸುತ್ತಿವೆ.

40 ಟಿಪ್ಪಣಿಗಳು Post a comment
  1. WITIAN
    ಆಗಸ್ಟ್ 11 2016

    ಡಾ. ಶ್ರೀಪಾದ ಭಟ್ ರ ಲೇಖನ ಕುತೂಹಲ ಹುಟ್ಟಿಸಿತು, ಆದರೆ ಅಂತ್ಯದಲ್ಲಿ ನಿರಾಸೆ ಮೂಡಿಸಿತು ಎನ್ನದೆ ವಿಧಿಯಿಲ್ಲ.

    ಲೇಖನದಲ್ಲಿ ಕಾಣಿಸಿದಂತೆ, ಹಲಾಲ್ ಎಂದರೆ ದೇವರ ಸ್ಮರಣೆ ಮಾಡಿ ಒಂದೇ ಏಟಿಗೆ ಪ್ರಾಣಿಯ ಕುತ್ತಿಗೆಯನ್ನು ಕತ್ತರಿಸುವುದಲ್ಲ. ಬದಲಿಗೆ ಕೆರಾಟಿಡ್ ಎಂಬ ಎರಡು ಆರ್ಟರಿಗಳನ್ನು ಕತ್ತರಿಸಿ ಪ್ರಾಣಿ ರಕ್ತಹೀನವಾಗುವಂತೆ ಮಾಡುವ ವಿಧಾನ, ಇದರಲ್ಲಿ ಕ್ರಮೇಣ ಶಕ್ತಿ ಉಡುಗಿ, ಪ್ರಾಣಿಯು ಪ್ರಜ್ಞೆ ಕಳೆದುಕೊಂಡು ಆ ಪ್ರಜ್ಞಾಹೀನ ಸ್ಥಿತಿಯಲ್ಲೇ ಅಸುನೀಗುತ್ತದೆ. ಕುತ್ತಿಗೆಯಲ್ಲಿನ ಗಾಯದ ವಿನಾ ಮತ್ಯಾವ ನೋವಿನ ಅನುಭವವೂ ಪ್ರಾಣಿಗೆ ಆಗುವುದಿಲ್ಲ. ಆದರೆ ಒಮ್ಮೆಗೇ ಅಪಾರ ಪ್ರಮಾಣದಲ್ಲಿ ರಕ್ತಸ್ರಾವವಾಗುವುದರಿಂದ ನೋಡುವವರಿಗೆ ಘೋರವಾಗಿ ಕಾಣುತ್ತದೆ. ಯಹೂದ್ಯರ ‘ಕೋಷರ್’ ಕೂಡಾ ಹೆಚ್ಚು ಕಡಿಮೆ ಇದೇ ಪದ್ಧತಿಯದ್ದು. ಬದಲಿಗೆ ಅವರು ತಮ್ಮ ‘ತೋರಾ’ ದಿಂದ ಆಯ್ದ ಪ್ರಾರ್ಥನೆಯನ್ನು ಹೇಳುತ್ತಾರೆ.

    ಮಾಂಸಾಹಾರಿಗಳಾದ ಕೆಲವು ಸಿಕ್ಖರು ‘ಝಟ್ಕಾ’ ಎಂಬ ಪದ್ಧತಿಯಲ್ಲಿ ಪ್ರಾಣಿಹತ್ಯೆ ಮಾಡುತ್ತಾರೆ, ಈ ಹತ್ಯೆ ಗುರುದ್ವಾರಗಳಲ್ಲಿ ನಡೆಯುವುದಿಲ್ಲ, ಬದಲಿಗೆ ಮಾಂಸಾಹಾರಿಗಳ ಮನೆ ಯಾ ತೋಟದಲ್ಲಿ ನಡೆಯುತ್ತದೆ – ಇದು ಶ್ರೀಪಾದ ಭಟ್ಟರು ಹೇಳಿದ ವಿವರಣೆಗೆ ಹತ್ತಿರವಿದೆ.

    ಉತ್ತರ
    • shripad bhat
      ಆಗಸ್ಟ್ 11 2016

      Ok. Thank you for your information

      ಉತ್ತರ
    • Shripad
      ಆಗಸ್ಟ್ 11 2016

      ನಿರಾಸೆ ಏಕಾಯ್ತು-ಹೇಳಬಹುದಾ?

      ಉತ್ತರ
      • WITIAN
        ಆಗಸ್ಟ್ 12 2016

        ಆಹಾರ ಪದ್ಧತಿಯ ಆಚಾರ-ವಿಚಾರಗಳು ಅದೇನೇ ಇರಲಿ, ವೈಜ್ಞಾನಿಕವಾಗಿ ಪ್ರಾಣಿಹತ್ಯೆ, ಮುಖ್ಯತಃ ಗೋಹತ್ಯೆ ಏಕೆ ನಿಷೇಧಿಸಬೇಕೆನ್ನುವ ಬಗ್ಗೆ ತಮ್ಮ ಲೇಖನದಲ್ಲಿ ಯಾವುದೇ ಪ್ರಸ್ತಾಪ ಕಾಣದೆ ನಿರಾಸೆಯಾಯಿತು ಎಂದು ಹೇಳಿದೆ.

        ಉತ್ತರ
        • Non Vegetarian
          ಆಗಸ್ಟ್ 12 2016

          ನಮ್ತಟ್ಟೆ ಮೇಲ್ಯಾಕೆ ಸಿವಾ ನಿಮ್ ವೈಜ್ಞಾನಿಕ ಕಾಕ ದೃಷ್ಟಿ

          ಉತ್ತರ
  2. ಖಖಖ
    ಆಗಸ್ಟ್ 12 2016

    ಕುರಿ ಕೋಳೀನ ಸೋಮ್ವಾರ ಶನ್ವಾರ ಕುಯ್ಯಂಗಿಲ್ಲಾ….

    ಉತ್ತರ
    • Shripad
      ಆಗಸ್ಟ್ 12 2016

      ಹೌದು. ಆದರೆ ಎಲ್ಲ ಸಮುದಾಯಕ್ಕೂ ಇದು ಅನ್ವಯವಲ್ಲ ‘ಮೂರು ಖ’ ರೇ!

      ಉತ್ತರ
  3. Shripad
    ಆಗಸ್ಟ್ 12 2016

    ಓ ಅದಾ. ಗೋಮಾಂಸವನ್ನು ಕೆಲವು ಸಮುದಾಯಗಳು ತಿನ್ನುತ್ತವೆ, ಕೆಲವರು ತಿನ್ನುವುದಿಲ್ಲ ಎನ್ನುವುದನ್ನು ನನ್ನ ಕ್ಷೇತ್ರಕಾರ್ಯದಲ್ಲಿ ಕಂಡುಕೊಂಡು ಅದನ್ನು ದಾಖಲಿಸಿದ್ದೇನೆ. ದನ ತಿನ್ನುವುದು ಬಿಡುವುದು ಸಮುದಾಯಗಳ ಆಹಾರ ಕ್ರಮದಲ್ಲಿ ಚರ್ಚೆಯ ವಿಷಯವೇ ಅಲ್ಲ. ‘ತಿನ್ನುವವರು ತಿಂತಾರೆ ಬಿಡಿ, ನಾವು ತಿನ್ನಲ್ಲ ಅಷ್ಟೇ’ ಎಂಬುದಷ್ಟೇ ಅವರ ಉತ್ತರ.
    ನನಗೆ ಸಮುದಾಯಗಳ ಅಭಿಪ್ರಾಯ ಮುಖ್ಯವೇ ವಿನಾ ಯಾವುದೇ ‘ಐಡಿಯಾಲಜಿ’ ಹಿನ್ನೆಲೆಯ ಒಣ ಚರ್ಚೆಯಲ್ಲ. ಹಾಗಾಗಿ ಈ ವಿಷಯಕ್ಕೆ ಮಹತ್ವ ಕೊಟ್ಟಿಲ್ಲ. ‘ಗೋಮಾಂಸ ಬಹುಸಂಖ್ಯಾತ ದಲಿತರ ಆಹಾರ’ ಎಂದು ಒದರುವುದೂ ಅಜ್ನಾನವೇ. ಎಲ್ಲ ದಲಿತರೂ ದನ ತಿನ್ನುವುದಿಲ್ಲ. ಗೋಹತ್ಯೆ ಸಂಬಂಧವಾಗಿ ಜನ ಹೇಳುವುದು ಇಷ್ಟು: ‘ದನ ಸಾಕ್ತೀವಿ, ಅವುಕ್ಕೆ ಹುಲ್ಲು ನೀರು ಹಾಕಕಾಗಲ್ಲ ಅಂದ್ರೆ ಜಾತ್ರೇಲಿ ಮಾರ್ತಿವಿ. ಅವ್ರು ಬೇಕಾದ್ದು ಮಾಡ್ಕೋತಾರೆ’
    ನನಗೆ ತಿಳಿದಂತೆ ‘ಗೋರಕ್ಷಕರು’ ದನ ಕದ್ದವರನ್ನು ಹಿಡಿಯುತ್ತಿದ್ದಾರೆಯೇ ವಿನಾ ದನ ತಿಂತಾರೆ ಎಂಬ ಕಾರಣಕ್ಕಲ್ಲ. ನಾಯಿ, ಕುರಿ, ಹಂದಿ ಕದ್ದಾಗಲೂ ಇದೇ ಕಥೆಯಾದರೂ ಅದು ಗೋರಕ್ಷಣೆಯಷ್ಟು ಪ್ರಾಮುಖ್ಯ ಪಡೆಯುವುದಿಲ್ಲ. ಯಾಕೆಂದರೆ ಅದಕ್ಕೆ ರಾಜಕೀಯ ಕಾರಣವಿಲ್ಲ!
    ದನ ತಿನ್ನುವ ಕಾರಣಕ್ಕೆ ಗೋರಕ್ಷಕರು ಗಲಾಟೆಗೆ ಇಳಿಯುವುದಾದರೆ ಎಲ್ಲ ಊರಲ್ಲೂ ನಿತ್ಯವೂ ನೂರಾರು ಗಲಭೆ ಆಗಬೇಕಿತ್ತು. ಅನೇಕಾನೇಕ ಹೊಟೇಲುಗಳ ಮೇಲೆ ದಾಳಿಯಾಗಬೇಕಿತ್ತು. ಹಾಗಿಲ್ಲ ಅಲ್ವಾ? ದನಗಳ್ಳರಿಗೆ ಶಿಕ್ಷೆ ಇಲ್ಲ. ಸಾಕುವವರು ಸಾಕಲಿ, ಅನ್ನುತ್ತ ಕದಿಯುವವರು ಕದಿಯುತ್ತಿದ್ದಾರೆ. ಈ ಸಮಸ್ಯೆ ಚರ್ಚೆಯ ಮುಂಚೂಣಿಗೆ ಎಂದೂ ಬರುತ್ತಿಲ್ಲ. ಸಮಸ್ಯೆಯ ಮೂಲವನ್ನು ತಿರುಚಿ ಇದನ್ನು ‘ಆಹಾರ ರಾಜಕಾರಣದ’ ಭಾಗವಾಗಿಸಲಾಗಿದೆ.
    ತಮ್ಮ ಸಮುದಾಯದಲ್ಲಿ ಸಾಂಪ್ರದಾಯಿಕವಾಗಿ ಏನು ತಿನ್ನಬೇಕು, ತಿನ್ನಬಾರದು ಎನ್ನುವುದು ಆಯಾ ಸಮುದಾಯಕ್ಕೆ ಮುಖ್ಯವೇ ವಿನಾ ಬೇರೆ ಯಾರು ಏನಾದರೂ ತಿಂದುಕೊಳ್ಳಲಿ, ಅದು ಮುಖ್ಯವಲ್ಲ. ಹಾಗಾಗಿಯೇ ಇಷ್ಟೊಂದು ಆಹಾರ ವೈವಿಧ್ಯ ಇರುವುದು, ಸಾಂಸ್ಕೃತಿಕ ಭಿನ್ನತೆ ಇರುವುದು. ನನಗೂ ಇಷ್ಟೇ ಮುಖ್ಯ.

    ಉತ್ತರ
  4. WITIAN
    ಆಗಸ್ಟ್ 12 2016

    Non-vegetarian ಅವರಿಗೆ, ನಿಮ್ಮ ತಟ್ಟೆಯ ಮೇಲೆ ‘ವೈಜ್ಞಾನಿಕ ಕಾಕದೃಷ್ಟಿ’ ನನಗಿಲ್ಲ. ಊಟ ತನ್ನಿಚ್ಛೆ, ನೋಟ ಪರರಿಚ್ಛೆ.. ಭಾರತದಲ್ಲಿ ಎಂದೂ ಮಾಂಸಾಹಾರ ನಿಷಿದ್ಧವಾಗಿರಲಿಲ್ಲ, ಮತ್ತು ಅದು ಸಾಧ್ಯವೂ ಅಲ್ಲ. ಆದರೆ, ಸಾಮಾಜಿಕ-ಆರ್ಥಿಕ ದೃಷ್ಟಿಯಿಂದ ನೋಡಿದಲ್ಲಿ, ದೇಶದ ಒಟ್ಟು ೧೨೫ ಕೋಟಿ ಜನರಿಗೆ ಬೇಕಾಗುವಷ್ಟು ಆಹಾರ ಒದಗಿಸುವುದು ಆಹಾರದಲ್ಲಿ ಸಸ್ಯಮೂಲದ ಪರಿಮಾಣ ಜಾಸ್ತಿ ಇದ್ದರೆ ಹೆಚ್ಚು ಇಕನಾಮಿಕಲ್ ಎನ್ನುವ ಅಭಿಪ್ರಾಯ ನನ್ನದು. ವಿವಿಧ ದೇಶಗಳ ಆಹಾರ ಪದ್ಧತಿಯನ್ನು ನೋಡಿದರೆ ಇದು ಗಮನಕ್ಕೆ ಬರುತ್ತದೆ. ಚೀನಾದ ಜನಸಂಖ್ಯೆ ಕೂಡಾ ಭಾರತದಂತೆ ಇರುವುದರಿಂದ ಮತ್ತು ಅಲ್ಲಿಯ ಸಂಪನ್ಮೂಲಗಳ ಕೊರತೆಯನ್ನು ಗಮನಿಸಿದರೆ, ನಮಗೆ ಯಾವುದು ಸಹ್ಯವಲ್ಲವೋ ಅಂತಹ ವಸ್ತುಗಳನ್ನು ಕೂಡಾ ಅಲ್ಲಿಯ ಜನರು ತಿನ್ನುವುದನ್ನು ನೋಡಬಹುದು (ಉದಾ: ಹಲ್ಲಿ, ಹಾವು, ಕಡೆಗೆ, ಜರಿ, ಚೇಳುಗಳನ್ನು ಕೂಡಾ ಬಿಡುವುದಿಲ್ಲ. ಬಿದಿರಿನ ಗಿಡಗಳಲ್ಲಿ ಬೆಳೆಯುವ ಒಂದು ಬಗೆಯ ಲಾರ್ವಾವನ್ನು ಹುರಿದು ಗರ್ಭಿಣಿಯರಿಗೆ ಪುಷ್ಟಿದಾಯಕವಾಗಿ ಕೊಡುತ್ತಾರೆ!). ನೀವೇನು ತಿನ್ನುತ್ತೀರಿ ಎನ್ನುವುದನ್ನು ‘ಕಂಟ್ರೋಲ್’ ಮಾಡುವ ಇಚ್ಛೆ ನನಗೆ ಇಲ್ಲ.

    ಉತ್ತರ
    • Kalgundi Naveen
      ಆಗಸ್ಟ್ 14 2016

      WITIAN ಅವರ ಮಾತಿಗೆ ಪೂರಕವಾಗಿ ಒಂದು ಮಾತು. ಡಾ ಸ ಜ ನಾಗಲೋಟಿಮಠರ ಆತ್ಮಕತೆ “ಬಿಚ್ಚಿದ ಜೋಳಿಗೆ”ಯಲ್ಲಿ ಅವರು ಚೀನಾ ಪ್ರವಾಸ ಮಾಡಿದ ಪ್ರಸಂಗವಿದೆ. ಅಲ್ಲಿ ಇವರು ಗಮನಿಸಿದ ಒಂದು ಸಂಗತಿ, ಮಾನವರಲ್ಲಿ ಗರ್ಭಪಾತವಾಗಿ ಬರುವ ಮೃತಶಿಶುವನ್ನು ಅಲ್ಲಿಯವರು ತಿನ್ನುತ್ತಾರೆ ಎಂಬುದು.

      ಉತ್ತರ
      • ಶೆಟ್ಟಿನಾಗ ಶೇ.
        ಆಗಸ್ಟ್ 14 2016

        ಕಮ್ಯೂನಿಸ್ಟರ ಬಗ್ಗೆ ಈ ತರಹದ ಅನೇಕ ಕಪೋಲ ಕಲ್ಪಿತ ಕತೆಗಳನ್ನು ಸೀ ಐ ಎ ಹಾಗೂ ಮೊಸ್ಸಾದ್ ತೇಲಿಬಿಟ್ಟಿದ್ದು ಅವುಗಳಲ್ಲಿ ಒಂದು ನಾಗಲೋಟಿಮಠರನ್ನು ತಲುಪಿದೆ ಹಾಗೂ ಅವರು ಅದನ್ನೇ ಸತ್ಯ ಎಂದು ಭಾವಿಸಿ ಆತ್ಮಕತೆಯಲ್ಲಿ ದಾಖಲಿಸಿದ್ದಾರೆ. ಬಲಪಂಥೀಯರಿಗೆ ಇಂತಹ ಅತಿರಂಜಿತ ಕತೆಗಳು ಪ್ರಿಯವಾಗುತ್ತವೆ.

        ಉತ್ತರ
        • shripad
          ಆಗಸ್ಟ್ 14 2016

          ನಾ. ಶೇ. ಅವರು ಹೇಳಿದ್ದು ‘ಸತ್ಯ’ ಎಂದು ಹೇಗೆ ನಂಬೋದು? ನಾಗಾಲೋಟಿಮಠರ ಅನುಭವವನ್ನು ‘ಅಂತೆ ಕತೆ’ ಅನ್ನಲು ಏನು ಆಧಾರವಿದೆ? ಒಬ್ಬ ವೈದ್ಯರಾಗಿ ಯಾವುದು ಏನು ಎಂಬುದು ತಿಳಿಯದವರಾಗಿರಲಿಲ್ಲ ಅವರು. ಐಡಿಯಾಲಜಿಗೆ ಮಾರಿಕೊಂಡವರು ತಾವು ಹೇಳಿದ್ದೇ ಅಂತಿಮ, ಅದೇ ಸತ್ಯ ಎಂಬ ಭ್ರಮೆಯಲ್ಲಿರುತ್ತಾರೆ ಎಂಬುದಕ್ಕೆ “ನಾಶೇ” ಕಮೆಂಟೇ ಸಾಕ್ಷಿ!

          ಉತ್ತರ
          • ಶೆಟ್ಟಿನಾಗ ಶೇ.
            ಆಗಸ್ಟ್ 14 2016

            ಹೆಸರಾಂತ ವೈದ್ಯರೂ ವಾಸ್ತು ನೋಡಿಯೇ ಮನೆ ಕಟ್ಟಿಸುವುದು, ರಾಹು ಕಾಲದಲ್ಲಿ ಸರ್ಜರಿ ಮಾಡದಿರುವುದು, ಮಠಮಾನ್ಯಗಳ ಸುತ್ತ ಗಿರಕಿ ಹೊಡೆಯುವುದು ಎಲ್ಲಾ ಕಾಮನ್ ಈ ಕಾಲದಲ್ಲಿ.

            ಉತ್ತರ
            • shripad
              ಆಗಸ್ಟ್ 14 2016

              ಇದೊಂದನ್ನು ಸರಿಯಾಗಿ ಹೇಳಿದ್ದೀರಿ. ಇದು ಪ್ರಜಾಪ್ರಭುತ್ವ-ಬಹುಮತಕ್ಕೆ ಬೆಲೆ. ಅದನ್ನು ಗೌರವಿಸಿ. ಈ ಹೇಳಿಕೆಯಲ್ಲಿ ತಾವೂ ಸೇರಿದ್ದೀರಿ ಅಂದುಕೊಂಡಿದ್ದೇನೆ! ಸಮಾಜವಾದಿಗಳೆನಿಸಿಕೊಂಡವರ ಬಣ್ಣ ಅನಂತಮೂರ್ತಿ ಸಾವಿನಲ್ಲೂ ವಾರಗಳ ಹಿಂದೆಯೂ ಸಾಬೀತಾಗಿದೆ. ಇದನ್ನೇ ಢೋಂಗಿತನ ಅನ್ನುವುದು.

              ಉತ್ತರ
              • ಶೆಟ್ಟಿನಾಗ ಶೇ.
                ಆಗಸ್ಟ್ 15 2016

                ಅನಂತಮೂರ್ತಿ ಕದ್ದು ಮುಚ್ಚಿ ಚಿಕನ್ ಮಟನ್ ಮೀನು ಬೀಫ್ ತಿಂದು ಎಲ್ಲರ ಮುಂದೆ ಸಸ್ಯಾಹಾರಿ ಪುಳಿಚಾರು ನಾಟಕ ಮಾಡುವ ಬಲಪಂಥೀಯ ಬ್ರಾಹ್ಮಣರಂತೆ ಢೋಂಗಿ ಆಗಿರಲಿಲ್ಲ. ಅವರು ಮನೆ ಹೊರಗೆ ಬೀಫ್ ತಿನ್ನುತ್ತಿದ್ದರು, ಮನೆ ಒಳಗೆ ಹೆಂಡತಿ ಮಾಡಿದ ಮಾಧ್ವರ ಶುದ್ಧ ಸಸ್ಯಾಹಾರಿ ಅಡಿಗೆ ಸವಿಯುತ್ತಿದ್ದರು. ವೇದ ಕಾಲದಲ್ಲೂ ಬ್ರಾಹ್ಮಣರು ತಮ್ಮ ಹಾಗೆ ಬೀಫ್ ತಿನ್ನುತ್ತಿದ್ದರು ಎಂದು ಅವರು ಪುರಾವೆಗಳೊಂದಿಗೆ ತರ್ಕ ಮಾಡಿ ಸಂಪ್ರದಾಯವಾದಿಗಳ ಸಿಟ್ಟಿಗೆ ಗುರಿಯಾಗಿದ್ದರು. ಅವರ ಸಾವಿನ ನಂತರ ಅವರ ಅಂತ್ಯಕ್ರಿಯೆ ವೈದಿಕ ಸಂಪ್ರದಾಯದಂತೆ ನಡೆಯಿತು ನಿಜ; ಆದರೆ ಅನಂತಮೂರ್ತಿ ಬದುಕಿದ್ದರೆ ಖಂಡಿತ ತಮ್ಮ ಅಂತ್ಯಕ್ರಿಯೆಯಲ್ಲಿ ಕೊಡಗಟ್ಟಲೆ ತುಪ್ಪ ಸುರಿದು ಟನ್ ಗಟ್ಟಲೆ ಗಂಧದ ಕೊರಡನ್ನು ಸುಡುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಬಿಲೀವ್ ಮಿ. ಅದಿರಲಿ ಅನಂತಮೂರ್ತಿ ಅವರನ್ನು ಅನಗತ್ಯವಾಗಿ ಚರ್ಚೆಯ ಮಧ್ಯ ತಂದು ಕೂರಿಸಿ ವಿಷಯಾಂತರ ಮಾಡಿದ್ದು ಸರಿಯಲ್ಲ ಮಿ. ಶ್ರೀಪಾದ್. ನಾಗಲೋಟಿಮಠ ಅವರು ಚೀನಾ ಬಗ್ಗೆ ಬರೆದಿರುವುದು ಸೀ ಐ ಎ ಹಬ್ಬಿಸಿದ ಸುಳ್ಳು ಸುದ್ದಿ. ಚೀನಾ ನೀವು ದ್ವೇಷಿಸುವ ಕಮ್ಯೂನಿಸ್ಟ್ ರಾಷ್ಟ್ರವಿರಬಹುದು ಆದರೆ ಚೀನೀಯರು ಮೃತಶಿಶುವನ್ನು ತಿನ್ನುವ ರಾಕ್ಷಸರಲ್ಲ.

                ಉತ್ತರ
                • Shripad
                  ಆಗಸ್ಟ್ 16 2016

                  “ಅವರು ಮನೆ ಹೊರಗೆ ಬೀಫ್ ತಿನ್ನುತ್ತಿದ್ದರು, ಮನೆ ಒಳಗೆ ಹೆಂಡತಿ ಮಾಡಿದ ಮಾಧ್ವರ ಶುದ್ಧ ಸಸ್ಯಾಹಾರಿ ಅಡಿಗೆ ಸವಿಯುತ್ತಿದ್ದರು” ಅವರ ಮನೆಯವರು (ಎಸ್ತರ್) ಅದೇನು ಶುದ್ಧ ಮಾಧ್ವರ ಅಡುಗೆ ಮಾಡುತ್ತಿದ್ದರೋ ಅದನ್ನು ಸವಿಯುವುದನ್ನು ತಾವ್ಯಾವಾಗ ಕಂಡು ಅನುಭವಿಸಿದರೋ…ದೇವರೇ!!! ಏನೇ ಆಗಲಿ, ವಾದಿಸುವುದನ್ನು ಬಿಡಬೇಡಿ.

                  ಉತ್ತರ
                  • ಶೆಟ್ಟಿನಾಗ ಶೇ.
                    ಆಗಸ್ಟ್ 16 2016

                    ನಿಮ್ಮ ತಂದೆ ತಾಯಿ ಆಣೆ ಆಕೆ ಚೆನ್ನಾಗಿ ಉಡುಪಿ ಮಾಧ್ವ ಅಡಿಗೆ ಮಾಡುತ್ತಾರೆ. ಅನುಮಾನವಿದ್ದರೆ ಅವರಿಗೆ ಫೋನಾಯಿಸಿ ಅನುಮಾನ ಪರಿಹರಿಸಿಕೊಳ್ಳಬಹುದು.

                    ಉತ್ತರ
  5. Kalgundi Naveen
    ಆಗಸ್ಟ್ 14 2016

    ಇಲ್ಲಿನ ಸಭ್ಯ ಚರ್ಚೆಗೆ ಇದನ್ನು ಹೋಲಿಸಿ: “…ಮಾಂಸ ತಿಂತ್ಯ ಇಲ್ಲವಾ ಅನ್ನುವುದಷ್ಟೇ ಪ್ರಶ್ನೆ. ತಿಂತಿನಿ ಅನ್ನೋದಾದ್ರೆ ನಾಲ್ಕು ಕಾಲಿನದರಲ್ಲಿ ಮೇಜು, ಕುರ್ಚಿ ಬಿಟ್ಟು, ಎರಡು ಕಾಲಿನದಲ್ಲಿ ಮನುಷ್ಯರನ್ನು ಬಿಟ್ಟು ಯಾವುದು ಬೇಕಾದರೂ ಆಗಬಹುದು”. ಎಷ್ಟೋ ಬಾರಿ ಅಹಂಕಾರದ ಮಾತುಗಳೇ ಚರ್ಚೆಯನ್ನು ಮೂಲ ಉದ್ದೇಶದಿಂದ ದಿಕ್ಕೆಡಿಸಿಬಿಡುತ್ತದೆ.

    ವೈಚಾರಿಕತೆ ಎಂದು ಬಂದ ಪಂಥಗಳಲ್ಲಿ (ಕಮ್ಯೂನಿಸಮ್ಮೂ ಸೇರಿದಂತೆ) ಬಹು ದೊಡ್ಡ ಕೊರತೆ ಎಂದರೆ ಈ ವಿನಯದ ಕೊರತೆಯೇ. ಸಹಮಾನವರಲ್ಲಿನ ಗೌರವವೇ ವಿನಯ. ಅದಿಲ್ಲದ ವೈಚಾರಿಕತೆಗೆ ಬೆಲೆಯೆಷ್ಟು? ಧನ್ಯವಾದಗಳು.

    ಉತ್ತರ
    • Goutham
      ಆಗಸ್ಟ್ 14 2016

      ವೈಚಾರಿಕತೆ ಇರುವಲ್ಲಿ ವಿನಯವಿರುತ್ತದೆ. ನೀವು ಗುರುತಿಸಿಲ್ಲ ಅಷ್ಟೆ.

      ಉತ್ತರ
      • ಶೆಟ್ಟಿನಾಗ ಶೇ.
        ಆಗಸ್ಟ್ 16 2016

        ೧೦೦% ಸತ್ಯ. ಇಲ್ಲಿ ಶ್ರೀಪಾದ್ ಹಾಗೂ ವಿಟಿಯನ್ (ಟ್ರೊಲ್) ಅವರ ಕಮೆಂಟ್ಸ್ ನೋಡಿ, ಅವರಿಗೆ ವೈಚಾರಿಕತೆ ಮುಖ್ಯವಲ್ಲ ಪ್ರತಿವಾದಿಯ ಖಂಡನೆಯೇ ಮುಖ್ಯ. ಹೀಗಾಗಿ ಅವರ ಕಮೆಂಟುಗಳಲ್ಲಿ ವಿನಯವೇ ಇಲ್ಲ, ಕೊಪಾವೇಶ/ಲೇವಡಿ/ನಿಂದನೆ/ಅಪಹಾಸ್ಯ/ಜಾತಿಗರ್ವ/ಪಾಳೆಗಾರಿಕೆ ಹೊಡೆದು ಕಾಣುತ್ತದೆ.

        ಉತ್ತರ
        • Shripad
          ಆಗಸ್ಟ್ 16 2016

          ಮೊಂಡುವಾದ ಒಂದುಕಡೆ…ಸಮಜಾವಾದಿಗಳೇ ಗ್ರೇಟ್ ಅನ್ನುವುದು, ಮೂಲಕ್ಕೆ ತಿವಿಯುವ ನಿದರ್ಶನ ಕೊಟ್ಟರೆ ವಿಷಯಾಂತರ ಅನ್ನುವುದು…ವಿನಯವಂತಿಕೆಗೂ ಹೊಸ ವ್ಯಾಖ್ಯಾನ ಕೊಟ್ಟುಕೊಂಡಿರಬೇಕು ಈ ಆಸಾಮಿಗಳು.

          ಉತ್ತರ
          • ಶೆಟ್ಟಿನಾಗ ಶೇ.
            ಆಗಸ್ಟ್ 16 2016

            ಸೊಕ್ಕು ಅತಿ ಆಯಿತು ನಿಮ್ಮದು ನಮೋ ಅಧಿಕಾರಕ್ಕೆ ಬಂದಾಗಿನಿಂದ. ದೆಹಲಿ, ಬಿಹಾರ, ಬಂಗಾಳದಲ್ಲಿ ಒದೆತ ಬಿದ್ದದ್ದು ಇನ್ನೂ ನೆತ್ತಿಗೆ ಅರಿವಾಗಿಲ್ಲ ಅಂತ ಕಾಣುತ್ತದೆ. ನಾಳೆ ಗುಜರಾತ್ ಹಾಗೂ ಪಂಜಾಬಿನಲ್ಲೂ ಒದೆತ ತಿಂದ ಮೇಲೆ ಸೊಕ್ಕು ಇಳಿಯುತ್ತದೆ.

            ಉತ್ತರ
  6. WITIAN
    ಆಗಸ್ಟ್ 16 2016

    ಸಿ ಐ ಎ ಹರಡಿದ ಸುಳ್ಳುಗಳು…ಹ್ಹ.. ಶೆಟ್ಟಿನಾಗನ ತಲೆಯಲ್ಲಿ ತುಂಬಿರುವ ಮಡ್ಡಿ ಕಳೆಯಲು ಇಲ್ಲಿ ಬರೆಯುವ, ವಿಚಾರ ಮಂಡಿಸುವ ಸಭ್ಯರಿಂದ ಸಾಧ್ಯವೇ ಇಲ್ಲ! ಲೋ ತಲೆತಿರುಕ ನಾಗಶಿಟ್ಟಿ, ಈ ಕೆಳಗೆ ಕೊಟ್ಟಿರುವ ಕೊಂಡಿಯನ್ನು ಹಿಂಬಾಲಿಸು.. ನಿನ್ನ ‘ಕಮ್ಮಿನಿಷ್ಠೆ’ಯ ಚೀನಾ ಏನೆಲ್ಲಾ ಮಾಡುತ್ತದೆ ಎನ್ನುವುದನ್ನು ನೋಡು..

    http://www.washingtontimes.com/news/2014/dec/31/chinese-cannibalism-infant-flesh-outrages-world/

    ಓದಿದ ನಂತರ ನಿನಗೆ ನಾಚಿಕೆ, ಮಾನ ಮರ್ಯಾದೆ ಏನಾದರೂ ಇದ್ದರೆ ನಾಗಲೋಟಿಮಠ ರಂತಹ ಪ್ರಾಜ್ಞರನ್ನು ಕೇವಲ ನಿನ್ನ ಹಾದಿಯನ್ನು ಒಪ್ಪದ ಕಾರಣಕ್ಕೆ ಹೀಗಳೆಯುವ ಕೆಲಸವನ್ನು ನಿಲ್ಲಿಸು..

    ಉತ್ತರ
    • ಶೆಟ್ಟಿನಾಗ ಶೇ.
      ಆಗಸ್ಟ್ 16 2016

      ಎಲೈ ವಿಟಿಯನ್ ಎಂಬ ಸುಳ್ಳು ಹೆಸರಿನಲ್ಲಿ ಅಪದ್ಧವಾಗಿ ಕಮೆಂಟಿಸುವ ಟ್ರಾಲ್ ಮಹಾಶಯನೇ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ವರದಿಯನ್ನು ಶೇರ್ ಮಾಡಿದ್ದಕ್ಕೆ ಧನ್ಯವಾದಗಳು. ಇದೇ ಪತ್ರಿಕೆ ನಿನ್ನ ‘ಹರಹರ’ ಮೋದಿ ಬಗ್ಗೆ ಏನಂದಿದೆ ಎಂಬುದನ್ನೂ ನೋಡು:
      http://www.washingtontimes.com/news/2016/jan/27/narendra-modi-selectively-targeting-western-christ/
      [“Prime Minister Narendra Modi is selectively targeting organizations that don’t fit into his nationalist vision of India emphasizing Hinduism.”]

      ಡೈಲಿ ಮೇಲ್ ವರದಿಯ ಒಂದು ಸ್ಯಾಂಪಲ್ ನೋಡಿ:
      http://www.dailymail.co.uk/indiahome/indianews/article-3023689/Hardline-Hindutva-hurts-Modi-sarkar-300-days-stormed-Delhi-durbar-PM-s-popularity-hit-ghar-wapsi.html
      [“communal overtones dominating the political space in the form of the saffron outfits’ ghar wapsi programme are beginning to hurt the Narendra Modi-led NDA government.”]

      ಉತ್ತರ
    • ಶೆಟ್ಟಿನಾಗ ಶೇ.
      ಆಗಸ್ಟ್ 16 2016

      ಎಲೈ ವಿಟಿಯನ್ ಎಂಬ ಸುಳ್ಳು ಹೆಸರಿನಲ್ಲಿ ಅಪದ್ಧವಾಗಿ ಕಮೆಂಟಿಸುವ ಟ್ರಾಲ್ ಮಹಾಶಯನೇ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ವರದಿಯನ್ನು ಶೇರ್ ಮಾಡಿದ್ದಕ್ಕೆ ಧನ್ಯವಾದಗಳು. ಇದೇ ಪತ್ರಿಕೆ ನಿನ್ನ ‘ಹರಹರ’ ಮೋದಿ ಬಗ್ಗೆ ಏನಂದಿದೆ ಎಂಬುದನ್ನೂ ನೋಡು:
      _http://www.washingtontimes.com/news/2016/jan/27/narendra-modi-selectively-targeting-western-christ/
      [“Prime Minister Narendra Modi is selectively targeting organizations that don’t fit into his nationalist vision of India emphasizing Hinduism.”]

      ಡೈಲಿ ಮೇಲ್ ವರದಿಯ ಒಂದು ಸ್ಯಾಂಪಲ್ ನೋಡಿ:
      _http://www.dailymail.co.uk/indiahome/indianews/article-3023689/Hardline-Hindutva-hurts-Modi-sarkar-300-days-stormed-Delhi-durbar-PM-s-popularity-hit-ghar-wapsi.html
      [“communal overtones dominating the political space in the form of the saffron outfits’ ghar wapsi programme are beginning to hurt the Narendra Modi-led NDA government.”]

      ಉತ್ತರ
  7. WITIAN
    ಆಗಸ್ಟ್ 16 2016

    ಚೀನಾದಲ್ಲಿ ಬೇಯಿಸಿದ ಮೊಟ್ಟೆಯ ‘ಸೀಸನಿಂಗ್’ ಗಾಗಿ ಬಳಸುವ ದ್ರವ: ಹನ್ನೊಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡು ಮಕ್ಕಳ ಮೂತ್ರ. ಕೋಳಿಯ ಅಥವಾ ಬಾತುಕೋಳಿಯ ಮೊಟ್ಟೆಗಳನ್ನು ಹಸಿಯಾಗಿ ಈ ಮೂತ್ರದಲ್ಲಿ ನೆನೆಸಿಡುತ್ತಾರೆ. ಒಂದು ದಿನ ಅಥವಾ ಮೂರುದಿನಗಳ ನಂತರ, ಈ ಮೂತ್ರದಲ್ಲೇ ಆ ಮೊಟ್ಟೆಗಳನ್ನು ಬೇಯಿಸುತ್ತಾರೆ..ನಂತರ ನೀರಿನಿಂದ ತೊಳೆದು ಮೊಟ್ಟೆಗಳ ಚಿಪ್ಪನ್ನು ತೆಗೆಯುತ್ತಾರೆ..ಅದೊಂದು ವಿಶೇಷ ತಿನಿಸು ಚೀನಾದಲ್ಲಿ! ಇದು ನಿಜವಲ್ಲ ಅಂತ ಶೆಟ್ಟಿನಾಗ ಪ್ರೂವ್ ಮಾಡಿದರೆ ನಾನು ಅವನ ಹಿಂಭಾಗಕ್ಕೆ ಒದೆಯುವುದನ್ನುಮತ್ತು ಈ ವಿಶೇಷಗಳನ್ನೆಲ್ಲ ಬರೆಯುವುದನ್ನು ನಿಲ್ಲಿಸುವ ವಾಗ್ದಾನ ಮಾಡುತ್ತೇನೆ!

    ಉತ್ತರ
    • ಶೆಟ್ಟಿನಾಗ ಶೇ.
      ಆಗಸ್ಟ್ 16 2016

      ನಿನ್ನ ಕಮೆಂಟುಗಳ ಗಬ್ಬು ನಾತದಿಂದಲೇ ತಿಳಿದುಬರುತ್ತದೆ ನೀನು ತಿನ್ನುವುದು ಇಂಥದ್ದೇ ಮೂತ್ರೀ ಮೊಟ್ಟೆ ಖಾದ್ಯವನ್ನು ಅಂತ! ಛೆ!

      ಉತ್ತರ
  8. WITIAN
    ಆಗಸ್ಟ್ 16 2016

    ಚೀನಾದಲ್ಲಿ ತಿನ್ನುವ ಖಾದ್ಯಗಳ ಬಗ್ಗೆ ಬರೆದರೆ “ಇಲ್ಲಾ ಹಾಗೆಲ್ಲ ಇಲ್ಲ…ಚೀನೀಯರೆಲ್ಲ ಸತ್ಯಸಂಧರು..ಅವರೆಲ್ಲ ಮಹರ್ಷಿ ಮಾವೋ ಕುಲ ಸಂಜಾತರು ಮತ್ತು ಮಾನವ ಹಕ್ಕುಗಳ ಸುಂದರ ಉದ್ಯಾನದ ಹೂಗಳು..” ಎಂದು ಆಲಾಪ ಹೊರಡಿಸಿದ ಶೆಟ್ಟಿನಾಗ, ಮುಖಕ್ಕೆ ರಾಚುವಂತಹ ಎವಿಡೆನ್ಸ್ ಕಣ್ಣೆದಿರಿಗೆ ಇಟ್ಟಾಗ “ಮೋದಿ, ಮೋದಿ..” ಅಂತ ಕುಯ್ಯೋ ಮರ್ರೋ ರಾಗ ಹೊರಡಿಸುತ್ತಾನೆ. ಲೇಖನಕ್ಕೂ ಮೋದಿಗೂ ಏನು ಸಂಬಂಧವಿದೆಯೋ ಮತಿಗೇಡಿ ಹೇತ್ಕರ್? ಚೀನಾದವರು ಮನುಷ್ಯ ಭ್ರೂಣಗಳನ್ನೂ ಬಿಡುವುದಿಲ್ಲ ಎನ್ನುವ ಸಾಕ್ಷ್ಯಾಧಾರ ಕೊಡುವ ತನಕ ಚೀನೀಯರ ತಿ.. ನೆಕ್ಕುತ್ತಿದ್ದ ಹೇತ್ಕರ್ ಈಗ ಭಾರೀ ಮಡಿ ಮಾಡುತ್ತಿದ್ದಾನೆ..ಹ ಹಾ..

    ಉತ್ತರ
    • ಶೆಟ್ಟಿನಾಗ ಶೇ.
      ಆಗಸ್ಟ್ 16 2016

      ವಾಷಿಂಗ್ಟನ್ ಪೋಸ್ಟ್ ನಲ್ಲಿ ಚೀನೀಯರ ಬಗ್ಗೆ ಬರೆದಿರುವುದನ್ನು ಸತ್ಯ ಎಂದು ನಂಬಿಸ ಹೋರಾಟ ವಿತಿಯನ್ ಎಂಬ ಅತಿಬುದ್ಧಿವಂತ ಟ್ರಾಲ್ ಅದೇ ವಾಷಿಂಗ್ಟನ್ ಪೋಸ್ಟ್ ನಲ್ಲಿ ಮೋದಿ ಬಗ್ಗೆ ಬರೆದಿರುವುದನ್ನು ಸತ್ಯ ಎಂದು ಸ್ವೀಕರಿಸಲಾರ! ಈತನ ಹೆಡ್ಡಬುದ್ಧಿವಂತಿಕೆ ನೋಡಿ ಈತನ ಪಾಲಕರು ಫೇಸ್ ಪಾಮ್ ಮಾಡಿದ್ದಾರೆಂದು ವರದಿ.

      ಉತ್ತರ
      • ಶೆಟ್ಟಿನಾಗ ಶೇ.
        ಆಗಸ್ಟ್ 16 2016

        ಮೂರ್ಖ ವಿಟಿಯನ್ ತನ್ನ ಬಲೆಗೆ ತಾನೇ ಸಿಕ್ಕಿ ಬಿದ್ದು ವಿಲವಿಲ ಒದ್ದಾಡುತ್ತಿದ್ದಾನೆ! ಹಹಹ!

        ಉತ್ತರ
    • ಶೆಟ್ಟಿನಾಗ ಶೇ.
      ಆಗಸ್ಟ್ 16 2016

      “ಚೀನೀಯರೆಲ್ಲ ಸತ್ಯಸಂಧರು..ಅವರೆಲ್ಲ ಮಹರ್ಷಿ ಮಾವೋ ಕುಲ ಸಂಜಾತರು ಮತ್ತು ಮಾನವ ಹಕ್ಕುಗಳ ಸುಂದರ ಉದ್ಯಾನದ ಹೂಗಳು”

      ಇದೆಲ್ಲಾ ವಿಟಿಯನ್ ಮೂಡಿಸಲು ಹೊರಟಿರುವ ನಕಲಿ ಹೂಗಳು! ಚೀನೀಯರನ್ನು ರಾಕ್ಷಸರೇನೋ ಎಂಬಂತೆ ಬಿಂಬಿಸುವ ವಿಟಿಯನ್ ತರಹದ ವಿಕೃತ ಮನಸ್ಸುಗಳಿಗೆ ಧಿಕ್ಕಾರ. ಚೀನೀಯರೂ ಭಾರತೀಯರ ಹಾಗೆ ಮನುಷ್ಯರು. ಭಾರತೀಯರ ಹಾಗೆ ಅವರೂ ಬೀಫ್ ಖಾದ್ಯಗಳನ್ನು ಇಷ್ಟಪಡುತ್ತಾರೆ. ಆದರೆ ಬಲಪಂಥೀಯ ಬ್ರಾಹ್ಮಣರ ಹಾಗೆ ಕದ್ದು ಮುಚ್ಚಿ ಬೀಫ್ ತಿಂದು ಲೋಕವೆಲ್ಲಾ ಪುಳಿಚಾರನ್ನೇ ತಿನ್ನಬೇಕು ಅಂತ ಡ್ರಾಮಾ ಮಾಡುವುದಿಲ್ಲ.

      ಉತ್ತರ
  9. WITIAN
    ಆಗಸ್ಟ್ 16 2016

    ಲೇಖನ ಆಹಾರ ಪದ್ಧತಿಗಳ ಬಗ್ಗೆ, ಪ್ರತಿಕ್ರಿಯೆ ಕೂಡಾ ಅದರಬಗ್ಗೆಯೇ ಇರುವುದು ಸಹಜವೆನ್ನಿಸಿಕೊಳ್ಳುತ್ತದೆ. ಮುಖದ ಮೇಲೆ ಕಣ್ಣಿಲ್ಲದ ಮೂರ್ಖಶಿಖಾಮಣಿ ನಾಗಶಿಟ್ಟಿಗೆ ತನಗೆ ತಿಳಿದಿರುವ ಎಲ್ಲದರ ಬಗ್ಗೆ (ತಿಳಿದಿರುವ ವಿಷಯಗಳ ಬಗ್ಗೆ ಮಾತ್ರ) ಅಸಂಬದ್ಧ ಪ್ರತಿಕ್ರಿಯೆ ಬರೆಯುವ ಕೆಲಸ..ಮೊದಲಿಗೆ ಅನಂತಮೂರ್ತಿ, ನಂತರ ಒಂದು ನವಿರಾದ ಸುಳ್ಳು.. (ಅನಂತಮೂರ್ತಿಗಳ ಹೆಂಡತಿ ಮಾಧ್ವರ ಅಡುಗೆ ಮಾಡಿದರಂತೆ, ಇವನು ಹೋಗಿ ತಿಂದು ಬಂದನಂತೆ), ಚೀನಾದವರ ಆಹಾರಪದ್ಧತಿ ಬಗ್ಗೆ ಮಾತನಾಡಿದರೆ ಹಿಂದುಗಡೆ ತೊಣಚಿ ಹೊಕ್ಕವರಂತೆ ‘ಮೋದಿ, ಮೋದಿ’ ಎಂದು ಬಡಬಡಿಸ ತೊಡಗಿದ.. ಈಗ ‘ಫೇಸ್ ಪಾಮ್’ ಅಂತೆ..ತನಗೂ ಸ್ವಲ್ಪ ಇಂಗ್ಲೀಷ್ ಭಾಷೆ ಬರುತ್ತದೆ ಅಂತ ತೋರಿಸಿಕೊಳ್ಳಲು ವ್ಯರ್ಥ ಪ್ರಯತ್ನ.. ಇವನ ಮುಂದಿನ ಹೆಜ್ಜೆ ವ್ಯಾಕರಣವಿಲ್ಲದ, ಸ್ಪೆಲ್ಲಿಂಗ್ ಅನ್ನು ಕಿಟಕಿಯಿಂದ ಹೊರಗೆಸೆದ ಇಂಗ್ಲಿಷ್ ನಲ್ಲಿ ಪ್ರತಿಕ್ರಿಯೆಗಳು…ಅಯ್ಯಾ foot in the mouth ಗೆ ನಿನಗಿಂತ ಉತ್ತಮ ಉದಾಹರಣೆ ಬೇಕೆ?

    ಉತ್ತರ
  10. WITIAN
    ಆಗಸ್ಟ್ 16 2016

    https://en.wikipedia.org/wiki/Virgin_boy_egg
    ಇದನ್ನೂ ಸ್ವಲ್ಪ ನೋಡು, ನಿನ್ನ ಗಾಢ ಮಿತ್ರರೂ, ಹತ್ತಿರದ ನಂಟರೂ ಆದ ಚೀನೀಯರು ತಿನ್ನುವ ಖಾದ್ಯ…

    ಉತ್ತರ
    • ಶೆಟ್ಟಿನಾಗ ಶೇ.
      ಆಗಸ್ಟ್ 17 2016

      ಚೀನೀಯರು ಒಲಂಪಿಕ್ಸ್ ಆಟೋಟ ಸ್ಪರ್ಧೆಯಲ್ಲಿ ಅದೆಷ್ಟು ಪದಕಗಳನ್ನು ಪಡೆದಿದ್ದಾರೆ ಗೊತ್ತೆ? ಒಂದು ಸಂಸ್ಕೃತಿಯನ್ನು ತುಚ್ಚವಾಗಿ ನೋಡುವ ನಿನ್ನಂತಹ ಬ್ರಾಹ್ಮಣ್ಯ ಪ್ರತಿಪಾದಕರಿಗೆ ಚೀನಾ ದೇಶದ ಸಾಧನೆಗಳೆಲ್ಲವೂ ನಗಣ್ಯ! ಚೀನಾ ದೇಶದಲ್ಲಿ ಉತ್ಪಾದನೆಯಾದ ಸಾಮಗ್ರಿಗಳಿಲ್ಲದೆ ನಿನ್ನ ದೈನಂದಿನ ಜೀವನ ನಡೆಯಲು ಸಾಧ್ಯವಿಲ್ಲ ಆದರೂ ಸದಾ ಮೂತ್ರಿ ಮೊಟ್ಟೆ ಖಾದ್ಯದ ಧ್ಯಾನ!! ಇಲ್ಲಿ ನಿಲುಮೆಯಲ್ಲಿ ಸ್ವಮೂತ್ರ ಸ್ನಾನ ಮಾಡುವುದನ್ನು ನಿಲ್ಲಿಸಿ ರಾಮಚಂದ್ರಾಪುರದಲ್ಲಿ ಗೋಮೂತ್ರದಲ್ಲಿ ಸ್ನಾನ ಮಾಡು ಹೋಗು.

      ಉತ್ತರ
      • ಶೆಟ್ಟಿನಾಗ ಶೇ.
        ಆಗಸ್ಟ್ 21 2016

        ಚೀನಾ ದೇಶದಲ್ಲಿ ಬ್ರಾಹ್ಮಣರಿಗೆ ಮಹತ್ವದ ಸ್ಥಾನಮಾನವನ್ನು ಕೊಟ್ಟಿದ್ದರೆ ಈ ವಿತಿಯನ್ ಶ್ರೀಪಾದ್ ಮೊದಲಾದ ನವ ವಟುಗಳು ಚೀನಾ ಸಂಸ್ಕೃತಿಯನ್ನು ಸಿಕ್ಕಾಪಟ್ಟೆ ಹೊಗಳುತ್ತಿದ್ದರು. ಅಲ್ಲವೇ?

        ಉತ್ತರ
  11. WITIAN
    ಆಗಸ್ಟ್ 17 2016

    ನಾಗಶಿಟ್ಟಿ, ಚರ್ಚೆ ನಡೆಯುತ್ತಿರುವುದು ಆಹಾರ ಪದ್ಧತಿಯ ಬಗ್ಗೆ, ನಾನು ಇದುವರೆಗೂ ಹೇಳಿದ್ದನ್ನು ಸಮರ್ಥಿಸಿಕೊಳ್ಳಲು ಪೂರಕವಾದ ಸಾಕ್ಷ್ಯವನ್ನು ಮುಂದಿಟ್ಟಿದ್ದೇನೆ. ನಾನು ಹೇಳುತ್ತಿರುವುದು ನಿಜವಲ್ಲ ಅಂತ ಹೇಳಲು ನಿನ್ನ ಹತ್ತಿರ ಸಾಕ್ಷ್ಯವಿದ್ದರೆ ಅದನ್ನು ಪ್ರಸ್ತುತಪಡಿಸು. ಅದನ್ನು ಬಿಟ್ಟು, ಸ್ವಮೂತ್ರ, ಗೋಮೂತ್ರ ಸ್ನಾನ, ಮೋದಿ, ಬಂಗಾಳ, ಬಿಹಾರ್ ಚುನಾವಣೆ ಅಂತೆಲ್ಲ ಬಾಯಿಗೆ ಬಂದದ್ದನ್ನೆಲ್ಲ ಗಳಹ ಬೇಡ. Don’t become irrelevant..ಹಾಗಂದರೆ ಏನು ಅಂತ ಕೇಳಬೇಡ. ಭಾರದ್ವಾಜ್ ಡಿಕ್ಷನರಿ ಬದಿಯಲ್ಲಿಟ್ಟುಕೋ. ಇಲ್ಲದಿದ್ದರೆ ‘ಚೀನೀ ಮೂತ್ರ’ ತೆಗೆದುಕೊಂಡು ಅದೇನು ಮಾಡ್ಕೊಳ್ತೀಯೋ ಮಾಡಿಕೋ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments