ಮಹತ್ತರ ಸಂತಸಗಳ ಹುಡುಕಾಟದ ನಡುವೆ….!
– ಗುರುರಾಜ ಕೋಡ್ಕಣಿ. ಯಲ್ಲಾಪುರ
ತುಂಬ ಬುದ್ಧಿವಂತನಾಗಿದ್ದ ಆ ವೃದ್ಧ ತನ್ನ ಹಳ್ಳಿಯ ಮುಖ್ಯಸ್ಥ. ಆತನ ಸಲಹೆ ಸೂಚನೆಗಳಿಲ್ಲದೇ ಹಳ್ಳಿಯ ಯಾವ ಕೆಲಸಕಾರ್ಯಗಳೂ ನಡೆಯುತ್ತಿರಲಿಲ್ಲ. ಹಳ್ಳಿಗರಿಗೆ ಆತನ ಮಾತೆಂದರೆ ವೇದವಾಕ್ಯ.ತಮ್ಮ ಖಾಸಗಿ ಸಮಸ್ಯೆಗಳ ಕುರಿತಾದ ಸಲಹೆಗಳಿಗಾಗಿಯೂ ಹಳ್ಳಿಗರು ಅವನನ್ನು ಭೇಟಿಯಾಗುತ್ತಿದ್ದರು. ದುರಂತವೆಂದರೆ ಇಂಥಹ ಬುದ್ಧಿವಂತ ಅಪ್ಪನಿಗೆ ಇದ್ದೊಬ್ಬ ಮಗ ಭಯಂಕರ ಸೋಮಾರಿ. ಯಾವುದೇ ಕೆಲಸ ಮಾಡದೆ ಬೀದಿಬೀದಿ ಸುತ್ತುತ್ತ,ಕುಡಿಯುತ್ತ ತಿನ್ನುತ್ತ, ಸ್ನೇಹಿತರೊಂದಿಗೆ ಕಾಲ ಕಳೆಯುವುದೊಂದೇ ಅವನ ಬದುಕಾಗಿತ್ತು. ಮೊದಮೊದಲು ಅಪ್ಪ ಅವನನ್ನು ಗದರಿಸುತ್ತಿದ್ದ. ಮಗ ಕೊಂಚ ದೊಡ್ಡವನಾಗುತ್ತಿದ್ದಂತೆಯೇ ಗದರಿಸುವುದನ್ನು ಬಿಟ್ಟು ಪ್ರೀತಿಯಿಂದ ಬುದ್ದಿವಾದ ಹೇಳಿ ನೋಡಿದ. ಆದರೆ ಅಪ್ಪನ ಗದರಿಕೆಯಾಗಲಿ, ಪ್ರೀತಿಯಾಗಲಿ ಮಗನ ವರ್ತನೆಯಲ್ಲಿ ಯಾವ ಬದಲಾವಣೆಯನ್ನೂ ತರಲಿಲ್ಲ. ಹೆಚ್ಚುತ್ತಿರುವ ತನ್ನ ವಯಸ್ಸಿನೊಂದಿಗೆ ಮಗನ ಭವಿಷ್ಯದ ಚಿಂತೆಯೂ ಹೆಚ್ಚಿತ್ತು ಊರ ಮುಖ್ಯಸ್ಥನಿಗೆ. ಹೇಗಾದರೂ ಸರಿ ತಾನು ಸಾಯುವುದರೊಳಗಾಗಿ ಮಗನನ್ನು ಸರಿದಾರಿಗೆ ತರಲೇಬೇಕೆಂದು ನಿಶ್ಚಯಿಸಿಕೊಂಡ ಹಿರಿಯ, ಅದೊಂದು ದಿನ ಮಗನನ್ನು ಕರೆದು, ‘ಮಗು ನೀನಿನ್ನೂ ಚಿಕ್ಕ ಹುಡುಗನಲ್ಲ, ಬೆಳೆದು ನಿಂತಿರುವ ಯುವಕ. ಮತ್ತಷ್ಟು ಓದು