ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ
– ಗುರುಪ್ರಸಾದ್ ಕೆ ಕೆ.
ಶ್ರೀಧರಭಾಮಿನಿಧಾರೆ ೨೧-೨೫
21)
ಒಂದು ವರ್ಷದ ಮೇಲೆ ವರ್ಷವು
ಸಂಧಿತಾಗಲೆ ನೋಡುನೋಡುತ
ಬಂದೆ ಬಿಟ್ಟಿತು ತಾಯಿಯಗಲುವ ಕಾಲ ಸಿರಿಧರಗೇ||
ಬಂಧು ಇರುವುದು ತಾಯಿ ಮಾತ್ರವೆ
ಚೆಂದದಿಂ ಸೇವೆಯನು ಮಾಡುತ
ದುಂದುಭಿ ಎಂಬ ನಾಮದಲ್ಲಿಯ ವರುಷ ಬಂದಿಹುದೂ||
ತಾತ್ಪರ್ಯ : ವರುಷಗಳು ಉರುಳುತ್ತಿರಲು, ಅನಾರೋಗ್ಯದಿಂದ ತಾಯಿಯ ಅನಾಸಕ್ತಿಯೂ ಹೆಚ್ಚುತ್ತಲೇ ಹೋಯಿತು. ಜೀವನದಲ್ಲಿ ಯಾವ ಸ್ವಾರಸ್ಯವೂ ಇಲ್ಲದೇ ಅನಾಸಕ್ತರಾದ ತಾಯಿಯನ್ನು, ಶ್ರೀಧರರು ಅಪಾರ ಮಾತೃಭಕ್ತಿಯಿಂದ ಸೇವೆಗೈಯ ತೊಡಗಿದರು. ಹೀಗಿರುವಾಗ ಸನ್ 1921 ನೇ ವರ್ಷದಲ್ಲಿ ದುಂದುಭಿ ನಾಮ ಸಂವತ್ಸರವು ಬಂದಿತು. ದುಂದುಭಿ ಸಂವತ್ಸರದ ಮಾರ್ಗಶಿರ ಮಾಸದ ತಿಂಗಳಲ್ಲಿ ಮಂಗಳವಾರ ಬಂದಿತು. ಮತ್ತಷ್ಟು ಓದು