ನೋಟು ರದ್ದತಿಯ ಪೂರ್ವ ತಯಾರಿ ಮತ್ತು ದೂರ ದೃಷ್ಟಿತ್ವ…!
– ಶ್ರೇಯಾಂಕ ಎಸ್ ರಾನಡೆ
ಕಳೆದ ೭೦ ವರ್ಷಗಳಲ್ಲಿ ಭಾರತದ ಪ್ರತೀ ಪ್ರಜೆಗೆ ಬ್ಯಾಂಕ್ ಒಂದರಲ್ಲಿ ಖಾತೆ ತೆರೆಯುವಂತಾಗಲು ಹಿಂದಿನ ಸರಕಾರದ ‘ಸ್ವಾಭಿಮಾನ್’ದಂತಹ ಯೋಜನೆಯಿಂದಲೂ ಸಾಧ್ಯವಾಗಲಿಲ್ಲ. ಅದಕ್ಕೆ ಜನಧನ್ ಯೋಜನೆ ಬರಬೇಕಾಯಿತು. ಇದು ಉದ್ಯೋಗ ಖಾತ್ರಿಯಂತಹ ಸರಕಾರದ ೨೬ ಯೋಜನೆಗಳಲ್ಲಿ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆಯಾಗುವುದರಿಂದ ಆನೇಕ ರೀತಿಯ ಸೋರಿಕೆ, ಭ್ರಷ್ಟಾಚಾರ ಹಾಗೂ ದಾಖಲೆಗಳ ಕೊರತೆ ಎಲ್ಲದಕ್ಕೂ ಕಡಿವಾಣ ಹಾಕಿದಂತಾಯಿತು. ಅದಕ್ಕೆ ಪೂರಕವಾಗಿ ಕಳೆದ ವರ್ಷದಿಂದ ಜಾರಿಗೆ ತಂದ “ಜಾಮ್ ಟ್ರಿನಿಟಿ” ಯೋಜನೆ, ಅಂದರೆ ವ್ಯಕ್ತಿಯೊಬ್ಬರ ಜನ್ ಧನ್ ಖಾತೆ- ಆಧಾರ್ ಸಂಖ್ಯೆ-ಮೊಬೈಲ್ ಸಂಖ್ಯೆ. ಇವುಗಳನ್ನು ಬೆಸೆಯುವ ಮಹತ್ವದ ಕಾರ್ಯದಿಂದ ಸೋರಿಕೆ, ನಕಲಿ ಫಲಾನುಭವಿಗಳು, ನಕಲಿ ಖಾತೆಯಿಂದ ನಡೆಸಬಹುದಾದ ಮಾರಕ ವ್ಯವಹಾರಗಳನ್ನು ತಡೆಯಲು ಸಾಧ್ಯವಾಗಲಿದೆ. ಇದನ್ನೇ ಭಾನುವಾರ ಪ್ರಧಾನಿಯವರು ವ್ಯಕ್ತಪಡಿಸಿರುವ ದೂರದೃಷ್ಟಿಯ ಮನಿ ಕಿ ಬಾತ್. ಇಡೀ ದೇಶವೇ ಮೊಬೈಲ್ ಮೂಲಕ ನೋಟು ರಹಿತ ಆರ್ಥಿಕ ವ್ಯವಹಾರದತ್ತ ಸಾಗಬೇಕೆಂಬ ಇಂಗಿತಕ್ಕೆ ಪೂರಕವಾಗಿ ಬಹಳ ಅಚ್ಚುಕಟ್ಟಾಗಿ ಸಜ್ಜುಗೊಳಿಸಿದ ಡಿಜಿಟಲ್ ಬ್ಯಾಂಕಿಂಗ್ ಗೆ ಪೂರ್ವಭೂಮಿಕೆ. ಮತ್ತಷ್ಟು ಓದು
ಸಾಲದ ಮನೆಯೊಡೆಯ ಅಪ್ಪ..!
– ಸೋಮು ಕುದರಿಹಾಳ
ಬಡತನ ಉಂಡುಳಿದ ಬದುಕು
ವಂಶವಾಹಿನಿಯ ಕೊಂಡಿ
ಸಾಲದೆಂಬುದಕ್ಕೆ ಸಾಲದ ನಂಟು
ಗುಡಿಸಲಿನಲ್ಲಿ ಆರದ ಬೆಂಕಿ
ಬರೆದ ಗೆರೆಗಳೆಲ್ಲಾ ಸಾಲದ ಲೆಕ್ಕಕ್ಕೆ
ಸಮನಾಗಿ ಬಡ್ಡಿಗೆ ಹೆಚ್ಚುತ್ತಿದ್ದದ್ದು
ಬಿದಿರ ತಡಿಕೆಗೆ ಮೆತ್ತಿದ ಮಣ್ಣನ್ನು
ಬಲಪಡಿಸುತ್ತಿತ್ತು
ಕಣ್ಣೀರ ಕರಗಿಸಿಕೊಳತ್ತಿತ್ತು
ವಸೂಲಿಯ ಶೂಲಕೊಮ್ಮೆ ಅಪ್ಪ
ಕೆಮ್ಮುತ್ತಿದ್ದ ಉಸಿರಿನೊಡನೆ ಸ್ಪರ್ಧೆ
ಮತ್ತೆ ಬದುಕುತ್ತಿದ್ದ ಭೂಮಿ ತಾಯಿಗೆ
ತಲೆಯಿಟ್ಟು ಬೆವರಿನ ದಕ್ಷಿಣೆ ಕೊಟ್ಟು ಮತ್ತಷ್ಟು ಓದು
ಒಂದು ಪ್ರೇಮ ಪಲ್ಲಕ್ಕಿಯ ಮೇಲೆ…!
– ಗುರುರಾಜ ಕೋಡ್ಕಣಿ. ಯಲ್ಲಾಪುರ
ಸಾಯಂಕಾಲದ ಆರು ಗಂಟೆಗೆ ಇನ್ನೇನು ಆರೇ ನಿಮಿಷಗಳಿವೆ ಎಂಬುದನ್ನು ಸೂಚಿಸುತ್ತಿತ್ತು, ನ್ಯೂಯಾರ್ಕಿನ ಗ್ರಾಂಡ್ ಸೆಂಟ್ರಲ್ ರೈಲ್ವೆ ನಿಲ್ದಾಣದ ಮಾಹಿತಿ ಕೇಂದ್ರದ ಹೊರಗೊಡೆಯ ಮೇಲೆ ತೂಗುತ್ತಿದ್ದ ಬೃಹತ್ ಗಡಿಯಾರ. ಬಿಸಿಲಿಗೆ ಕಪ್ಪಗಾಗಿದ್ದ ತನ್ನ ಮುಖವನ್ನೊಮ್ಮೆ ನಿಧಾನಕ್ಕೆ ಮೇಲಕ್ಕೆತ್ತಿದ್ದ ಆ ಸೈನ್ಯಾಧಿಕಾರಿ ನಿಖರವಾದ ಸಮಯವನ್ನು ಕಂಡುಕೊಳ್ಳಲು ತನ್ನ ಕಣ್ಣುಗಳನ್ನು ಕ್ಷಣಕಾಲ ಕಿರಿದಾಗಿಸಿ ಗಡಿಯಾರವನ್ನು ದಿಟ್ಟಿಸಿದ. ಉಸಿರುಗಟ್ಟಿಸುವಷ್ಟು ಜೋರಾಗಿದ್ದ ಹೃದಯಬಡಿತ ಅವನಿಗಿಂದು. ಕೇವಲ ಆರೇ ಅರು ನಿಮಿಷಗಳಲ್ಲಿ ಆತ ತನ್ನ ಬದುಕಿನ ಬೆಳದಿಂಗಳ ಬಾಲೆಯನ್ನು ಭೇಟಿಯಾಗಲಿದ್ದ. ಕಳೆದ ಹದಿನೆಂಟು ತಿಂಗಳಿನಿಂದ ಬಾಳಿಗೊಂದು ಸ್ಪೂರ್ತಿಯಾಗಿರುವ, ತಾನು ಇದುವರೆಗೂ ನೋಡಿರದಿದ್ದ ತನ್ನ ಪತ್ರ ಪ್ರೇಮಿಯನ್ನು ಆತ ಮೊದಲ ಬಾರಿಗೆ ಸಂಧಿಸಲಿದ್ದ. ನಿಲ್ದಾಣದ ಮುಖ್ಯ ದ್ವಾರದತ್ತಲೇ ತದೇಕಚಿತ್ತದಿಂದ ನೋಡುತ್ತ ನಿಂತಿದ್ದ ಅವನು, ಮಾಹಿತಿಗಾಗಿ ಅಲ್ಲಿದ್ದ ಗುಮಾಸ್ತನ ಸುತ್ತ ಗಜಿಬಿಜಿಯಿಂದ ನಿಂತಿದ್ದ ಜನಜಂಗುಳಿಯಿಂದ ಕೊಂಚ ದೂರ ಸರಿದು ಮಾಹಿತಿ ಕೇಂದ್ರದ ಪಕ್ಕದಲ್ಲಿಯೇ ನಿಂತಿದ್ದ. ಮತ್ತಷ್ಟು ಓದು
“ಮನುಷ್ಯರು”…
– ‘ಶ್ರೀ’ ತಲಗೇರಿ
ಕಂಕುಳ ಬಿಸಿಯಲ್ಲಿ
ಸಿಕ್ಕಿಸಿಕೊಂಡ ಹೂವಿಗಿಂತ
ಆಚೆಮನೆಯ ಬೇಲಿ ಸಂಧಿಯಲಿ
ಬೀಡುಬಿಟ್ಟ ಮೊಗ್ಗು
ತಡವುತ್ತದೆ ರೋಮಗಳ ಹೆಚ್ಚೆಚ್ಚು..
ಆಗಲೂ ಮನುಷ್ಯರು ನಾವು… ಮತ್ತಷ್ಟು ಓದು
ನೋಟುಗಳ ಅಮಾನ್ಯೀಕರಣ – ಭಾರತೀಯರ ಪ್ರತಿಸ್ಪಂದನೆ
– ವಿನಾಯಕ ಹಂಪಿಹೊಳಿ
ಪಾಶ್ಚಿಮಾತ್ಯರಿಂದ ಆಮದು ಮಾಡಿಕೊಂಡಿರುವ “ಸಿಸ್ಟಂ”ಗಳ ಜೊತೆ ನಾವು ಭಾರತೀಯರು ಮುಂಚಿನಿಂದಲೂ ಅಗತ್ಯವಿದ್ದರೆ ಮಾತ್ರ ಹೊಂದಿಸಿಕೊಳ್ಳುವ ಗುಣವನ್ನು ಹೊಂದಿದ್ದೇವೆ. ಇದು ವಾಸ್ತವವಾಗಿ ನಮ್ಮ ತಪ್ಪಲ್ಲ. ಸಿಸ್ಟಂನ ತಪ್ಪೂ ಅಲ್ಲ. ಭಾರತೀಯ ಸಮಾಜಗಳ ಸಂರಚನೆಗೆ ಪಾಶ್ಚಿಮಾತ್ಯರ “ಸಿಸ್ಟಂ” ಸಂಪೂರ್ಣ ಸಾಂಗತ್ಯವನ್ನು ಹೊಂದಿಲ್ಲ. ಯಾವುದೇ ಸಿಸ್ಟಂನ ಜೊತೆಗೆ ನಾವು ವರ್ತಿಸುವ ರೀತಿಯನ್ನು ಗಮನಿಸಿದರೆ ನಮಗಿದು ಅರ್ಥವಾಗುತ್ತದೆ.
ವಿದ್ಯಾರ್ಥಿ ಜೀವನವನ್ನೇ ತೆಗೆದುಕೊಳ್ಳಿ. ಎಜುಕೇಶನ್ ಸಿಸ್ಟಂ ನಡೆಸುವ ಪರೀಕ್ಷೆಗಳ ಜೊತೆಗೆ ನಾವು ಹೇಗೆ ವರ್ತಿಸಿದ್ದೇವೆ? ನೂರು ಜನ ವಿದ್ಯಾರ್ಥಿಗಳಲ್ಲಿ, ಅಂದಂದಿನ ಪಾಠವನ್ನು ಅಂದಂದಿಗೇ ಓದಿಕೊಂಡು, ಪರೀಕ್ಷೆಯ ಸಮಯದಲ್ಲಿ ಕೇವಲ ಕಣ್ಣಾಡಿಸಿಕೊಂಡಿರುವ ವಿದ್ಯಾರ್ಥಿಗಳು, ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅದು ಬಿಟ್ಟರೆ ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆ ಸಮೀಪಿಸುತ್ತಿದ್ದಂತೆ, ಅಭ್ಯಾಸದ ವೇಗವನ್ನು ಹೆಚ್ಚಿಸಿಕೊಳ್ಳುವವರೇ. ಶಿಕ್ಷಕರೂ ಹಾಗೆಯೇ. ಮೊದಲಿನ ಪಾಠಗಳನ್ನು ಎಳೆದೂ ಎಳೆದೂ ಕಲಿಸಿ, ಸೆಮಿಸ್ಟರ್ ಮುಗಿಯಲು ಬಂದಂತೆ, ಸ್ಪೆಷಲ್ ಕ್ಲಾಸುಗಳನ್ನು ಇರಿಸಿ, ಕೊನೆಯ ಪಾಠಗಳನ್ನೆಲ್ಲ ಮುಗಿಸುತ್ತಾರೆ. ಮತ್ತಷ್ಟು ಓದು
ಪ್ರಕೃತಿ ಮತ್ತು ಹರೆಯ..!
– ಗೀತಾ ಹೆಗಡೆ
ಹೃದಯದ ಹೆಬ್ಬಾಗಿಲಿಗೆ ತೋರಣ ಕಟ್ಟಿ ಹೂವಿನ ಘಮಲಿನ ಅರವಳಿಕೆಯಲ್ಲಿ ಮೈನವಿರೇಳಿಸುವ ಶೃಂಗಾರದ ಕನಸು ಹೆಣೆಯುತ್ತ ಅರಿವಿಲ್ಲದೆ, ಅರಿವಾಗದಂತೆ ಹೃದಯ ಸಿಂಹಾಸನದ ಮೆಟ್ಟಿಲು ಒಂದೊಂದಾಗಿ ನಿಧಾನವಾಗಿ ಹತ್ತಿ ತಳವೂರಿದ ಕಾಲದ ನೆನಪು ಎಂದಾದರೂ ಮರೆಯಲು ಸಾಧ್ಯವೆ. ಅದು ಪ್ರತಿಯೊಬ್ಬರ ಬದುಕಿನ ಸುಂದರ ಕ್ಷಣವದು. ಹೆಣ್ಣಾಗಲಿ ಗಂಡಾಗಲಿ ಹರೆಯದ ಹೊಸಿಲಲ್ಲಿ ಮನಸ್ಸು ಬೆಳೆದಂತೆಲ್ಲ ಕನಸೂ ಬೆಳೆಯುವುದು ಸ್ವಾಭಾವಿಕ. ಅದಕ್ಕೆ ದಿನಕ್ಕೊಂದು ರೆಕ್ಕೆ ಪುಕ್ಕ. ಬಣ್ಣ ಬಣ್ಣದ ಓಕುಳಿಯ ತವರು. ಹರೆಯದ ಕನಸುಗಳು ನೂರೆಂಟು. ಅದು ಮಾತಿನಲ್ಲಿ ಅಥವಾ ಅಕ್ಷರಗಳಲ್ಲಿ ಯಾರಾದರು ವರ್ಣಿಸಲು ಸಾಧ್ಯವೇ.. ಇಲ್ಲವೆಂದೇ ಹೇಳಬೇಕು. ಹರೆಯದ ಪಾತ್ರೆಯಲ್ಲಿ ಪ್ರೀತಿಯೆಂಬ ಹುಟ್ಟು, ಮತ್ತದು ಹುಟ್ಟುವ ಕಾಲ ವಸಂತ ಋತು, ಚೈತ್ರ ಮಾಸ. ಮತ್ತಷ್ಟು ಓದು
ಸ್ಫೂರ್ತಿ ದಾರಿಯ ದೀಪಗಳು
– ಶಮಂತ್ ಬಿ ಎಸ್
‘ಜೀವನವೇ ದುಃಖ’ ಎಂಬ ಬುದ್ಧನ ಮಾತನ್ನು, ನಮ್ಮ ದೇಶವನ್ನು ಪ್ರತಿನಿಧಿಸಿದ ‘ಪ್ಯಾರಾಲಂಪಿಕ್ಗಳು’ ಗಂಭೀರವಾಗಿ ಪರಿಗಣಿಸಲಿಲ್ಲ. ಇವರ ಪ್ರತಿನಿತ್ಯದ ಜೀವನವೇ ಜ್ವಾಲೆಯ ಕೂಪವಾಗಿದ್ದರೂ, ಆತ್ಮಸ್ಥೈರ್ಯವನ್ನು ಮಾತ್ರ ಕಳೆದುಕೊಳ್ಳದಿರುವುದು ನಮ್ಮೆಲ್ಲರಿಗೂ ಸ್ಫೂರ್ತಿಯ ಸರಮಾಲೆಯೇ ಸರಿ. ಇತ್ತೀಚಿಗೆ ಮುಕ್ತಾಯಗೊಂಡ ಪ್ಯಾರಾಲಂಪಿಕ್ಸ್ ಸ್ಪರ್ಧೆಯಲ್ಲಿ ಭಾರತ ೪ ಪದಕಗಳನ್ನು ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ೪೩ನೇ ಸ್ಥಾನವನ್ನು ಪಡೆಯಿತು. ನಮ್ಮ ರಾಷ್ಟ್ರದಲ್ಲಿ ಕ್ರೀಡೆಗೆ ನೀಡುತ್ತಿರುವ ಅಲ್ಪ ಪ್ರೋತ್ಸಾಹಕ್ಕೆ ಹೋಲಿಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸ್ಥಾನವನ್ನು ನಾವು ಹೆಮ್ಮೆಯಿಂದಲೇ ಪರಿಗಣಿಸಬೇಕು. ಮತ್ತಷ್ಟು ಓದು
ಸದ್ಯದ ಸನ್ನಿವೇಶದಲ್ಲಿ ನಮ್ಮ ಮಾಧ್ಯಮಗಳ ನಡೆ ಸರಿಯಾಗಿದೆಯೇ..?
– ಮು ಅ ಶ್ರೀರಂಗ
ದಿನ ನಿತ್ಯ ಮಾಮೂಲಾಗಿ ಸಾಗುತ್ತಿದ್ದ ಜೀವನಕ್ಕೆ ಸ್ವಲ್ಪ ತಡೆ ಉಂಟಾದಾಗ ಮನಸ್ಸಿಗೆ ಕಸಿವಿಸಿ ಆಗುವುದು ಸಹಜ. ೫೦೦ ಮತ್ತು ೧೦೦೦ ನೋಟುಗಳ ಚಲಾವಣೆಯ ನಿಷೇಧದ ಪರಿಣಾಮದಿಂದಲೂ ಹೀಗಾಗಿದೆ. ಬಸ್ಸು, ರೈಲು, ವಿಮಾನ, ನೀರು, ವಿದ್ಯುತ್ತು ಇವುಗಳ ದರ ಇಷ್ಟನೇ ತಾರೀಖಿನಿಂದ ಹೆಚ್ಚಾಗುತ್ತದೆ ಎಂದು ಮುಂಚಿತವಾಗಿ ಘೋಷಣೆ ಮಾಡಿದಂತೆ ನೋಟಿನ ವಿಷಯದಲ್ಲಿ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅದರ ಹಿಂದಿನ ಉದ್ದೇಶವೇ ನಿರರ್ಥಕವಾಗುತ್ತದೆ. ಇದು ಸಾಮಾನ್ಯ ಜ್ಞಾನ. ಆ ಎರಡು ನೋಟುಗಳ ಬದಲಾವಣೆಗಾಗಿ ೫೦ ದಿನಗಳ ಕಾಲಾವಕಾಶವಿದೆ. ಆದರೆ ಹೆಚ್ಚಿನ ಪತ್ರಿಕೆ ಮತ್ತು ಟಿ ವಿ ಸುದ್ದಿ ಮಾಧ್ಯಮಗಳು ನೆಗೆಟಿವ್ ಧೋರಣೆಗೆ ಕೊಟ್ಟಷ್ಟು ಮಹತ್ವವನ್ನು ಧನಾತ್ಮಕ ಸುದ್ದಿಗಳಿಗೆ ಕೊಡದೆ ಇರುವುದು ಸಮಸ್ಯೆಯು ಜಟಿಲವಾಗುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಹರಡುತ್ತಿದೆ. ಮತ್ತಷ್ಟು ಓದು
ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!
– ಸಂತೋಷಕುಮಾರ ಮೆಹೆಂದಳೆ.
(ಇವತ್ತು ಮನೆಯಲ್ಲೊಂದು ಮದುವೆ ನಡೆಯುತ್ತಿದೆ ಎಂದಾದರೆ ಅನಾಮತ್ತು ತಿಂಗಳಗಟ್ಟಲೆಯಿಂದ ತಯಾರಿ ಮಾಡಿಕೊಳ್ಳುವ ಯಜಮಾನ ಮತ್ತವನ ಕುಟುಂಬ ಕೊನೆಯ ಕ್ಷಣದಲ್ಲಿ ಎನೋ ಮರೆತು ಬಿಟ್ಟಿರುತ್ತದೆ. ಮಂಟಪದಲ್ಯಾರೊ ಅದಕ್ಕಾಗಿ ಓಡಾಡುತ್ತಾರೆ. ಕೊನೆಗೆಲ್ಲಾ ಸಾಂಗವಾಗುತ್ತದೆ. ಒಂದು ಟೂರ್ ಅಂತಾ ಹೊರಟವರು ಅಯ್ಯೋ ಅದನ್ನು ಮರೆತು ಬಂದೆನೆನ್ನುವುದೇ ಸಾಮಾನ್ಯ ಆಗಿರುವಾಗ ನೂರೂ ಚಿಲ್ರೆ ಕೋಟಿ ಜನರನ್ನು ಸಂಭಾಳಿಸುವ ನಾಯಕ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಧೃಢ ನಿರ್ಧಾರ ಕೈಗೊಂಡು ಅಲ್ಲಲ್ಲಿ ಕೊಂಚ ಕ್ಯೂ ನಿಲ್ಲಿಸಿದಾಗಲೂ ಅದು ಕಾಮನ್ ಮ್ಯಾನ್‍ಗೆ ಹಬ್ಬದಂತೆ ಅನ್ನಿಸುತ್ತಿದ್ದಾಗಲೂ, ಏನು ಪ್ರಕಟಿಸಬೇಕು ಪ್ರಕಟಿಸಬಾರದು ಎನ್ನುವ ಪರಿಜ್ಞಾನ ಮಾಧ್ಯಮಗಳಿಗಿರಲೇ ಬೇಕಿತ್ತು.. ) ಮತ್ತಷ್ಟು ಓದು
ಪ್ರಧಾನಿಗಳ ನಡೆಯ ಹಿಂದೆ ಎಷ್ಟೆಲ್ಲ ಚಿಂತನೆ ಇದೆಯೆಂದರೆ…
– ರೋಹಿತ್ ಚಕ್ರತೀರ್ಥ
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಸಂಜೆ ಮಾಡಿದ ಭಾಷಣದಲ್ಲಿ ಐನೂರು ಮತ್ತು ಸಾವಿರ ರುಪಾಯಿ ಮುಖಬೆಲೆಯ ನೋಟುಗಳನ್ನು ಸರಕಾರ ವಾಪಸು ಪಡೆಯಲಿದೆ ಎಂಬ ಘೋಷಣೆ ಮಾಡಿದರು. ಈ ಕಾರ್ಯಾಚರಣೆ 4 ವಿಷಯಗಳನ್ನು ಗುರಿಯಾಗಿಟ್ಟುಕೊಂಡಿದೆ: ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ ಮತ್ತು ಖೋಟಾನೋಟು. ಈ ನಾಲ್ಕೂ ವಿಷಯಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದರಿಂದ ಅವನ್ನು ಒಟ್ಟಾಗಿ ಪರಿಹರಿಸುವ ಇಲ್ಲವೇ ನಿಶ್ಶಕ್ತಗೊಳಿಸುವ ಅತ್ಯಂತ ಪ್ರಬಲ, ಪರಿಣಾಮಕಾರಿ ಪರಿಹಾರದ ಅಗತ್ಯ ಹಲವು ವರ್ಷಗಳಿಂದ ಇತ್ತು. ಹತ್ತು ವರ್ಷ ದೇಶವನ್ನು ಆಳಿದ ನಾಮಕಾವಾಸ್ತೆ ಆರ್ಥಿಕತಜ್ಞರಿಗಾಗದ ಗಟ್ಟಿ-ದಿಟ್ಟ ನಡೆಯನ್ನು ಮೋದಿ ತೋರಿಸಿ ನಾಯಕತ್ವದಲ್ಲಿ ಜ್ಞಾನದ ಜೊತೆ ಧೈರ್ಯವೂ ಬೇಕೆಂಬ ಸಂದೇಶ ರವಾನಿಸಿದ್ದಾರೆ. ಮತ್ತಷ್ಟು ಓದು