ಪ್ರಾರ್ಥನಾ ಮಂದಿರ ವಶಕ್ಕೆ ಸರ್ಕಾರದ ಚಿಂತನೆ: ಭುಗಿಲೆದ್ದ ಆಕ್ರೋಶ (ಸುಳ್ಸುದ್ದಿ)
– ಪ್ರವೀಣ್ ಕುಮಾರ್, ಮಾವಿನಕಾಡು
ಕಲಾಸಿಪಾಳ್ಯದಲ್ಲಿರುವ ಪ್ರಾರ್ಥನಾ ಮಂದಿರವೊಂದನ್ನು ಸರ್ಕಾರ ವಶಕ್ಕೆ ಪಡೆಯಲು ತೀರ್ಮಾನಿಸಿದೆ. ಈ ಬಗ್ಗೆ ಗುರುವಾರ ನೋಟೀಸ್ ನೀಡಲಾಗಿದ್ದು ನಾಲ್ಕು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಲಾಗಿದೆ. ಈ ಪ್ರಾರ್ಥನಾ ಮಂದಿರವನ್ನು ಹೇಗಾದರೂ ಮಾಡಿ ವಶಪಡಿಸಿಕೊಳ್ಳಲೇಬೇಕು ಎನ್ನುವ ಹಠವಿದ್ದು ಅದೇ ಕಾರಣಕ್ಕೆ ಕೇವಲ ನಾಲ್ಕೇ ದಿನ ಸಮಯ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೋಟೀಸ್ ನೀಡಿದ್ದಾರೆ ಎಂದು ಸೌಹಾರ್ದಗೇಡು ವೇದಿಕೆ ದೂರಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ನಿವೃತ್ತರಾಗಲಿದ್ದು ಈ ಹಂತದಲ್ಲಿ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆಯುವ ಕುರಿತು ನೋಟೀಸ್ ನೀಡಿರುವುದು ಕರ್ನಾಟಕದ ಹಲವು ಬುದ್ದಿಜೀವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ನಿವೃತ್ತಿಯ ಹಂತದಲ್ಲಿ ಇಂತಹಾ ಪ್ರಮುಖ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ಒಮ್ಮೆ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆದ ನಂತರ ನಿವೃತ್ತಿಯಾದರೆ ಅದರಿಂದ ಮುಂದೆ ಆಗಬಹುದಾದ ಅಪಾಯಗಳಿಂದ ತಪ್ಪಿಸಿಕೊಳ್ಳುವ ಹುನ್ನಾರ ಇದರಲ್ಲಿದೆ ಎಂದು ಜಾತ್ಯತೀತ ಸಂಘಟನೆಯ ಪ್ರಮುಖರು ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಓದು