ಸಂಸ್ಕೃತಿ ಸರಣಿ – ಭಾಗ ೧ : ಪೂಜೆ
ಜಗತ್ತಿನ ಎಲ್ಲ ನಾಗರೀಕತೆಗಳಿಗಿಂತ ಅತೀ ಪುರಾತನವಾದದ್ದು ಭಾರತೀಯ ನಾಗರೀಕತೆ.ಆದರೆ ಆ ಪ್ರಾಚೀನತೆ ಮಾತ್ರ ಅದರ ಹೆಗ್ಗಳಿಕೆ ಅಲ್ಲ. ಪ್ರಾಚೀನವಾದದ್ದೆಲ್ಲ ಉತ್ತಮ ಎಂಬ ಭ್ರಮೆ ಮತ್ತು ಕುರುಡು ಅಭಿಮಾನ ಉಚಿತವಲ್ಲ. ತಮ್ಮ ನಾಡೇ ಪ್ರಾಚೀನ, ಆ ಕಾರಣಕ್ಕೆ ತಮ್ಮ ಸಂತತಿಯೇ ಶ್ರೇಷ್ಠ, ನಾವೇ ಸುಸಂಸ್ಕೃತರು ಇತ್ಯಾದಿ ಅನೇಕ ಭ್ರಮೆಗಳನ್ನು ಐರೋಪ್ಯರು ಹೊಂದಿದ್ದರು.ಆ ಭ್ರಮೆಗಳ ಕಾರಣದಿಂದಾಗಿ ತಮ್ಮ ಸಾರ್ವಭೌಮತ್ವವನ್ನು ಎಲ್ಲರ ಮೇಲೆ ಹೇರಲು ಹೊರಟು, ಅನೇಕ ಜಾಗತಿಕ ಹಾಗೂ ಮಾನವೀಯ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ.
ಭಾರತದ್ದು ಇಂತಹ ಭ್ರಮಾ ಕಲ್ಪಿತ ಮತ್ತು ಆಕ್ರಾಮಕ ಶ್ರೇಷ್ಠತೆ ಅಲ್ಲ.ಅದರ ಶ್ರೇಷ್ಠತೆಯ ಗುಣಲಕ್ಷಣಗಳೇ ಬೇರೆ. ಹೂವಿನ ಗಂಧ ಸಹ ಜವಾಗಿ ಹರಡುವಂತೆ ಭಾರತೀಯ ಜೀವನ ವಿಧಾನದ ಅಂತಃಸತ್ವ ಬಹುತೇಕ ಭೂಭಾಗವನ್ನು ಪ್ರಭಾವಿಸಿತ್ತು.ಆದರೆ ಅದೆಲ್ಲ ಈಗ ಗತಕಾಲದ ಚರಿತ್ರೆ.ಕಳೆದ ಸಾವಿರ ವರ್ಷಗಳ ಐತಿಹಾಸಿಕ ಘಟನೆಗಳು ಮತ್ತು ಪರಕೀಯ ಶಿಕ್ಷಣ ವಿಧಾನ ನಮ್ಮ ಸಂಸ್ಕೃತಿಗೆ ನಮ್ಮನ್ನೇ ಪರಕೀಯರಂತೆ ಮಾಡುತ್ತಿದೆ.ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯಗಳ, ಆಚರಣೆಗಳ ಕುರಿತು ಹಲವರಿಗೆ ಪ್ರಶ್ನೆಗಳೇಳುವುದು ಸಹಜವೇ.
ಅಂತಹ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಶ್ರೀ.ದತ್ತರಾಜ್ ಅವರು ಈ “ಸಂಸ್ಕೃತಿ ಸರಣಿ”ಯನ್ನು ಪ್ರಾರಂಭಿಸಿದ್ದಾರೆ. ಭಾರತ ಯಾವ ರೀತಿಯಲ್ಲಿ ಭಿನ್ನ ಹಾಗೂ ಶ್ರೇಷ್ಠ ಎಂಬುದನ್ನು ವಿವರಿಸಲಿದ್ದಾರೆ.ದತ್ತರಾಜ್ ಅವರು ಧಾರವಾಡದ ಬಳಿ ಹಳ್ಳಿಯಲ್ಲಿ ಹುಟ್ಟಿದವರು.ಆರನೇ ವಯಸ್ಸಿಗೇ ಮನೆ ತೊರೆದು ಮಹಾರಾಷ್ಟ್ರ, ಆಂಧ್ರ, ತಮಿಳು ನಾಡು ಇತ್ಯಾದಿ ಕಡೆಗಳಲ್ಲಿ ವೇದ ಪಂಡಿತರ ಮನೆಗಳಲ್ಲಿ ಇದ್ದು ಗುರು ಸೇವೆ, ಭಿಕ್ಷೆ ಮಾಡಿಕೊಂಡು 12 ವರ್ಷ ಋಗ್ವೇದವನ್ನು ಆರು ಅಂಗಗಳ ಸಹಿತ ಕಂಠಪಾಠ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ.ಶಾಲಾ-ಕಾಲೇಜುಗಳ ಮೆಟ್ಟಿಲು ಹತ್ತಿದವರಲ್ಲ.ತಮ್ಮ ಅಧ್ಯಯನ ಮತ್ತು ವಿಭಿನ್ನ ಜೀವನದ ಅನುಭವದ ಆಧಾರದಿಂದ ಭಾರತೀಯ ಸಂಸ್ಕೃತಿ ಪರಿಚಯವನ್ನು ಸರಳ ಆಡು ಭಾಷೆಯಲ್ಲಿ ಮಾಡಿಕೊಡಲಿದ್ದಾರೆ.
ಸಂಸ್ಕೃತಿ ಸರಣಿಯ ಮೊದಲ ಎರಡು ಭಾಗವಾಗಿ “ಪೂಜೆ”ಯ ಕುರಿತು ಮಾತನಾಡಿದ್ದಾರೆ.ಆ ಎರಡು ಭಾಗಗಳು ನಿಮಗಾಗಿ ನಿಲುಮೆಯಲ್ಲಿ – ನಿಲುಮೆ ನಿರ್ವಾಹಕರು
ಭಾಗ – 2
ಚಿತ್ರಕೃಪೆ: http://www.4to40.com
ನಿಲುಮೆಯಿಂದ ಮತ್ತೊಂದು ಸ್ತುತ್ಯರ್ಹ ಕಾರ್ಯ.
Please consider doing a similar job of introducing the concept of worship in Islam and Christianity to the readers of Nilume. Diversity of perspectives is essential for maintaining equilibrium in the society.