ವಿಷಯದ ವಿವರಗಳಿಗೆ ದಾಟಿರಿ

Archive for

17
ಮೇ

ಬರಗಾಲದಲ್ಲಿ ವರವಾದ ಶ್ರೀಸಂಕಲ್ಪ

– ಶಿಶಿರ್ ಅಂಗಡಿ

ಈ ಬಾರಿಯ ಭೀಕರ ಬರಗಾಲ ಮತ್ತು ಸರಕಾರದ ಅನರ್ಥದ ಕಾನೂನುಗಳು ಬೆಟ್ಟದ ತಪ್ಪಲಿನ ಸಾವಿರಾರು ಗೋವುಗಳನ್ನು ಹಾಗೂ ನೂರಾರು ಗೋಪಾಲಕರನ್ನು ಹಸಿವಿನಿಂದ ನರಳುವಂತೆ ಮಾಡಿ ಅಕ್ಷರಶಃ ಕಂಗೆಡಿಸಿದೆ.. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಲ್ಲಿನ ಗೋವುಗಳಿಗೆ ಮೇವೊದಗಿಸುವ ಮೂಲಕ ಆಪದ್ಬಾಂಧವರಂತೆ ಗೋವು‌ ಮತ್ತು ಗೋವಳರ ಕಷ್ಟಕ್ಕೊದಗಿ ಬಂದವರು  ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು. ಈ 44 ದಿನಗಳಿಂದೀಚೆಗೆ ಸತತವಾಗಿ ಬೆಟ್ಟಕ್ಕೆ ಮಠ ಪೂರೈಸಿದ ಮೇವಿನ ಒಟ್ಟು ಮೊತ್ತ ೨೧೦೦ ಟನ್ ದಾಟಿದೆ. ೨ ಲಕ್ಷ ಕೇಜಿ ಮೇವುಗಳನ್ನು ದಿನವೊಂದಕ್ಕೆ ೨.೫ ಲಕ್ಷ ರೂಪಾಯಿ ವೆಚ್ಚದಲ್ಲಿ ಹದಿಮೂರು ಕೇಂದ್ರಗಳಲ್ಲಿ ಪ್ರತಿದಿನ ಸುಮಾರು ೨೦-೨೫ ಸಾವಿರ ಗೋವುಗಳಿಗೆ ಮೇವು ಒದಗಿಸಲಾಗುತ್ತಿದೆ. ದಶಕಗಳಿಂದ ಗೋರಕ್ಷಣೆಗೆ ಕಟಿಬದ್ಧರಾಗಿರುವ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು, ಸಾವಿನ ಅಂಚಿನಲ್ಲಿರುವ ಗೋವುಗಳನ್ನು ರಕ್ಷಿಸುವ ಮಹದುದ್ದೇಶದಿಂದ ಬೆಟ್ಟದ ತಪ್ಪಲಿನ ಎಲ್ಲ ಗೋವುಗಳಿಗೂ ಮಳೆಗಾಲ ಪ್ರಾರಂಭದವರೆಗೂ ಮೇವು ಒದಗಿಸುವ ಭರವಸೆ ನೀಡಿದ್ದರು. ಮತ್ತಷ್ಟು ಓದು »

16
ಮೇ

ಕೇಳುತ್ತಿದೆಯಾ ಗೋವಿನ ಆಕ್ರಂದನ…

– ಶಾರದ ಡೈಮಂಡ್

ಜನನದಿಂದ ಮರಣ ಪರ್ಯಂತ ಹುಲು ಮಾನವರಿಗೆ ಅಮೃತ ಸಮಾನವಾದ ಹಾಲನ್ನುಣಿಸುವವಳು ಗೋಮಾತೆ. “ಗವಾಂ ಅಂಗೇಷು ತಿಷ್ಟಂತಿ ಭುವನಾನಿ ಚತುರ್ದಶ” – ಗೋವಿನ ದೇಹದ ಕಣಕಣಗಳಲ್ಲೂ ಹದಿನಾಲ್ಕು ಲೋಕಗಳನ್ನು ವ್ಯವಸ್ಥಿತವಾಗಿ ನಡೆಸತಕ್ಕ ಮೂವತ್ಮೂರು ಕೋಟಿ ದೇವತೆಗಳು ಅನ್ಯಾನ್ಯ ಸ್ಥಳಗಳಲ್ಲಿ ನೆಲೆಸಿರುತ್ತಾರೆ. ಗೋವಿನಿಂದ ದೊರಕುವ ಹಾಲು, ಮೊಸರು, ಬೆಣ್ಣೆ, ತುಪ್ಪ ಮನುಷ್ಯ ಸ್ವಾಸ್ಥಮಯ ಜೀವನವನ್ನು ನಡೆಸಲು ಆಧಾರವಾಗಿದೆ. ಗೋಮೂತ್ರ, ಗೋಮಯ ಕೃಷಿಗೆ ಜೀವಾಳ. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕಾಮಧೇನುವಾಗಿ ನಮ್ಮನ್ನು ಸಲಹುತ್ತಿರುವ ಗೋವಿಗೆ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಮತ್ತಷ್ಟು ಓದು »

15
ಮೇ

ನನ್ನ ಮೇಲೂ ನಡೆದಿತ್ತು ಆಪರೇಷನ್ ಶಿಲುಬೆ!

– ಪ್ರವೀಣ್ ಕುಮಾರ್ ಮಾವಿನಕಾಡು

ಬೆಂಗಳೂರಿಗೆ ಕಾಲಿಟ್ಟು ಕೆಲವೇ ಸಮಯವಾಗಿತ್ತು. ಮಾರಾಟ ಪ್ರತಿನಿಧಿಯಾಗಿ ಮನೆ ಮನೆಮನೆಗಳ ಮೆಟ್ಟಿಲು ಹತ್ತಿಳಿಯುತ್ತಿದ್ದ ಸಮಯದಲ್ಲೇ ಪರಿಚಯವಾದವರು ರಾಜು ಮೆನನ್ ಎಂಬ ಕೇರಳ ಮೂಲದ ವ್ಯಕ್ತಿ. ಪರಿಚಯ ಸ್ನೇಹವಾಗಿ ಸ್ನೇಹ ವ್ಯವಹಾರಕ್ಕೆ ತಿರುಗಿದಾಗ ಪ್ರಾರಂಭವಾಗಿದ್ದೇ ಇಮೇಜ್ ಮೇಕರ್ಸ್ ಎನ್ನುವ ಕಲರ್ ವಿಸಿಟಿಂಗ್ ಕಾರ್ಡ್ ಮುದ್ರಿಸುವ ಸಣ್ಣದೊಂದು ವ್ಯವಹಾರ. ಕೇವಲ ಐದು ಸಾವಿರ ಮುಂಗಡದೊಂದಿಗೆ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಪ್ರಾರಂಭಿಸಿದ ಆ ನಮ್ಮ ವ್ಯವಹಾರ ನಾವಂದುಕೊಂಡಷ್ಟಲ್ಲದಿದ್ದರೂ ಒಂದು ಮಟ್ಟದ ಯಶಸ್ಸು ಕಾಣತೊಡಗಿತು. ಆದರೆ ಆ ವೇಳೆಗಾಗಲೇ ಮದುವೆಯಾಗಿ ಒಂದು ಮಗುವನ್ನೂ ಹೊಂದಿದ್ದ ರಾಜು ಮೆನನ್ ಮಾಡಿಕೊಂಡ ಸಾಲ ವಿಪರೀತವಾಗಿ ವಿಸಿಟಿಂಗ್ ಕಾರ್ಡ್ಸ್ ಮುದ್ರಿಸಲು ಗಿರಾಕಿಗಳಿಂದ ನಾವು ಸಂಗ್ರಹಿಸಿದ್ದ ಮುಂಗಡ ಹಣವೂ ಸೇರಿದಂತೆ ಇದ್ದ ಬದ್ದ ಹಣವನ್ನೆಲ್ಲಾ ಎತ್ತಿಕೊಂಡು ರಾತ್ರೋ ರಾತ್ರಿ ಪರಾರಿಯಾಗಿದ್ದ. ಮತ್ತಷ್ಟು ಓದು »

14
ಮೇ

ಸತ್ಯಕ್ಕೆ ಸಾವಿಲ್ಲವೆನ್ನುವುದೇನೋ ನಿಜ, ಆದರೆ ಸುಳ್ಳಿಗೆ ಕೈಕಾಲುಗಳಿವೆಯಲ್ಲಾ!

– ಹನುಮಂತ ಕಾಮತ್

11143647_10204577244893080_67827641632082198_nಲೋಕ ಕಲ್ಯಾಣಕ್ಕಾಗಿ ತಪೋನಿರತ ಋಷಿಮುನಿಗಳಿಗೆ ರಾಕ್ಷಸರು ಉಪಟಳವನ್ನು ಕೊಡುತ್ತಿದ್ದರು, ಋಷ್ಯಾಶ್ರಮಗಳಿಗೆ ದಾಳಿ ಮಾಡುತ್ತಿದ್ದರು ಎನ್ನುವ ಕಥೆಗಳು ಪುರಾಣಗಳಲ್ಲಿ ಪದೇಪದೇ ಬರುತ್ತವೆ. ತ್ರೇತಾಯುಗದಲ್ಲೂ, ದ್ವಾಪರದಲ್ಲೂ ರಾಕ್ಷಸರದ್ದು ಅದೇ ಬುದ್ಧಿ, ಅದೇ ಚಾಳಿ. ಲೋಕಕಲ್ಯಾಣಕ್ಕೆ ಅಡ್ಡಗಾಲು ಹಾಕುವುದೆಂದರೆ ದುಷ್ಟಶಕ್ತಿಗಳಿಗೆ ಏನೋ ಖುಷಿ. ಅಂದರೆ ಸಮಾಜದಲ್ಲಿ ಸಾತ್ವಿಕ ಗುಣ ವೃದ್ಧಿಯಾದಾಗಲೆಲ್ಲಾ ಅದನ್ನು ತಡೆಯುವ ಪ್ರವೃತ್ತಿ ಅನಾದಿಯಿಂದಲೂ ಸೃಷ್ಟಿಯಲ್ಲಿ ನಡೆಯುತ್ತಾ ಬಂದಿವೆ.
ಮತ್ತಷ್ಟು ಓದು »

12
ಮೇ

ಪ್ರತಿಷ್ಠೆ ಮತ್ತು ಅನುಕಂಪದ ಸುಳಿಯಲ್ಲಿ ಉಪಚುನಾವಣೆಗಳು

– ಗೋಪಾಲಕೃಷ್ಣ

nanjana-gudu-live-election-live-updates-600x450-13-1492048906‘ಸೋ-ಕಾಲ್ಡ್ ಸ್ವಾಭಿಮಾನ’ಕ್ಕೆ ನಡೆದದ್ದು ನಂಜನಗೂಡು ಉಪಚುನಾವಣೆ, ಗೆದ್ದದ್ದು ಮಾತ್ರ ಸಿದ್ದರಾಮಯ್ಯನವರ ‘ಪ್ರತಿಷ್ಠೆ’. ‘ಪ್ರಜಾತಂತ್ರದ ಮೂಲ ಉದ್ದೇಶ’ಕ್ಕೆ ಕೊಡಲಿ ಪೆಟ್ಟು ಕೊಟ್ಟು ಗುಂಡ್ಲುಪೇಟೆಯಲ್ಲಿ ‘ಅನುಕಂಪ’ ಗೆಲುವಿನ ನಗೆ ಬೀರಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಒಂದು ದೇಶ, ಒಂದು ಚುನಾವಣೆ’ಯ ಬಗ್ಗೆ ಚರ್ಚೆ ಹುಟ್ಟು ಹಾಕುತ್ತಿರುವಾಗ ಹಾಗೂ ಇದಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರೂ ದನಿಗೂಡಿಸಿರುವ ಈ ಸಂಧರ್ಭದಲ್ಲಿ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗಳ ಅವಲೋಕನ ನಡೆಯಬೇಕಾದ ಅಗತ್ಯವಿದೆ. ಮತ್ತಷ್ಟು ಓದು »

9
ಮೇ

ಅನಿವಾರ್ಯತೆ…!

– ಗೀತಾ ಹೆಗ್ಡೆ

ನಮ್ಮಿಷ್ಟದಂತೆ ಜೀವನ ಸಾಗಿಸುವುದು ಅಷ್ಟು ಸುಲಭದಲ್ಲಿಲ್ಲ. ಕೆಲವೊಂದು ಅನಿವಾರ್ಯತೆಗಳು ಎದುರಾದಾಗ ನಾವು ತಲೆ ಬಾಗಲೇ ಬೇಕು. ಹಾಗೆ ಬದುಕುವುದು ನಮಗೆ ಇಷ್ಟವಿಲ್ಲದಿದ್ದರೂ ನಮಗಾಗಿ ಅಲ್ಲದಿದ್ದರೂ ಹೆತ್ತವರಿಗಾಗಿಯೋ, ಹೆಂಡತಿಗಾಗಿಯೋ, ಮಕ್ಕಳಿಗಾಗಿಯೋ, ಬಂಧು ಬಾಂಧವರಿಗಾಗಿಯೋ ಅಥವಾ ಈ ಸಮಾಜಕ್ಕಾಗಿಯೋ ನಮ್ಮತನವನ್ನು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳಲೇ ಬೇಕಾಗುತ್ತದೆ. ಆಗೆಲ್ಲ ಮನಸ್ಸಿಗೆ ಅತ್ಯಂತ ನೋವಾದರೂ ಅಥವಾ ನಮ್ಮ ಕಠಿಣ ನಿರ್ಧಾರದಿಂದ ಬೇರೆಯವರಿಗೆ ನೋವಾಗುವಂತಿದ್ದರೂ  ಹಾಗಿರದೆ ಗತಿ ಇಲ್ಲ. ಕಾರಣ ನಾವು ಈ ಸಮಾಜದಲ್ಲಿ ಬದುಕುತ್ತಿರುವವರು. ನಾವು ಮನುಷ್ಯ ಜನ್ಮದಲ್ಲಿ ಜನಿಸಿದವರು. ಇಲ್ಲಿ ಇತಿಹಾಸದಿಂದಲೂ ರೂಢಿಯಲ್ಲಿರುವ ಅನೇಕ ಕಟ್ಟುಪಾಡುಗಳಿವೆ. ರೀತಿ ರಿವಾಜುಗಳಿವೆ. ಇದನ್ನು ಮೀರಿ ನಡೆಯಲು ಸಾಧ್ಯವಿಲ್ಲ.  ಹಾಗೇನಾದರೂ ನಡೆದುಕೊಂಡರೆ ಅದು ಹುಟ್ಟಿದ ವಂಶಕ್ಕೆ ಕಳಂಕ ತರುವುದರಲ್ಲಿ ಸಂಶಯವಿಲ್ಲ. ಮತ್ತಷ್ಟು ಓದು »

4
ಮೇ

ಸಿದ್ಧಾಂತಕ್ಕಾಗಿ ಬದುಕುವ ಜೀವನ ಯಾವ ಸಂತರಿಗೂ ಕಡಿಮೆಯದ್ದಲ್ಲ..

– ಅರುಣ್ ಬಿನ್ನಡಿ

೨೫ ವರ್ಷಗಳ ಪ್ರಚಾರಕ್ ಜೀವನದಲ್ಲಿ ಗಳಿಸಿದ ಆಸ್ತಿ ಮೂರೂ ಜೊತೆ ಪಂಚೆ,ಎರಡು ಜುಬ್ಬ, ಎರಡು ಮೊಬೈಲ್, ಪುಸ್ತಕಗಳು ಜೊತೆಗೆ ಪ್ರಾಣಕೊಡುವ ಅಸಂಖ್ಯಾತ ಕಾರ್ಯಕರ್ತರು….

ಕೆಲವೊಮ್ಮೆ ಇಂದಿನ ಕರ್ನಾಟಕ ಬಿಜೆಪಿ ಯ ಸೈದ್ಧಾಂತಿಕ ತಿಕ್ಕಾಟಗಳಿಗೆ ನರೇಂದ್ರ ಮೋದಿಯೆ ಕಾರಣ ಎನ್ನಿಸಿ ಬಿಡುತ್ತದೆ, ಯುವ ಸಮುದಾಯವನ್ನು ಕಾಂಗ್ರೆಸಿನ ಪಾರಂಪರಿಕ ಓಲೈಕೆ ಹಾಗು ಜಾತಿ ರಾಜಕಾರಣದಿಂದ ರಾಷ್ಟ್ರೀಯತೆಯ ಸೈದ್ಧಾಂತಿಕ ರಾಜಕಾರಣಕ್ಕೆ, ಅಭಿವೃದ್ಧಿ ರಾಜಕಾರಣಕ್ಕೆ, ನೈತಿಕ ರಾಜಕಾರಣಕ್ಕೆ ಬದಲಾಯಿಸಿದ್ದೆ ದೊಡ್ಡ ಅಪರಾಧವಾಗಿಬಿಟ್ಟಿದೆ ಎನ್ನಬಹುದು. ಮತ್ತಷ್ಟು ಓದು »

3
ಮೇ

ಪೀರಾಯರು ಬರೆದ ಕಥೆ – ‘ತ್ರಿಕೋನ’ ( ಮುಂದುವರೆದ ಭಾಗ )

– ಮು. ಅ ಶ್ರೀರಂಗ ಬೆಂಗಳೂರು

ರಾಮಾಚಾರ್ಯರು ಸಂಜೆ ಐದು ಗಂಟೆಗೆ ಆಶ್ರಮದ ಶಾಲೆಯಿಂದ ಬಂದು ತಮ್ಮ ಕೊಠಡಿಯಲ್ಲಿ ಕೂತಿದ್ದರು. ಎಂದಿನಂತೆ ಅಡುಗೆಯವನು ಫ್ಲಾಸ್ಕಿನಲ್ಲಿ ಕಾಫಿ ತಂದು ಅವರ ಟೇಬಲ್ ಮೇಲೆ ಇಟ್ಟು ‘ಆಚಾರ್ಯರೇ ರಾತ್ರಿಗೆ ಏನು ಅಡಿಗೆ ಮಾಡಲಿ’ ಎಂದ.

‘ಬೆಳಗ್ಗೆಯ ಸಾರು ಮಿಕ್ಕಿರಬಹುದು. ಯಾವುದಾದರೊಂದು ಪಲ್ಯ ಮಾಡು ಸಾಕು. ಇವತ್ತು ಚಪಾತಿ ಬೇಡ’.

‘ಆಗಲಿ ಸ್ವಾಮಿ’ ಎಂದು ಅವನು ಕೊಠಡಿಯ ಬಾಗಿಲನ್ನು ಮುಂದಕ್ಕೆ ಎಳದು ಕೊಂಡು ಹೋದ. ಮತ್ತಷ್ಟು ಓದು »

1
ಮೇ

ಯಾರು ಹಿತವರು ಯಡ್ಯೂರಪ್ಪನವರಿಗೆ..?

ರಾಕೇಶ್ ಶೆಟ್ಟಿ

“ಕೊಟ್ಟ ಕುದುರೆಯನೇರಲರಿಯದೆ…” ವಚನದ ಸಾಲುಗಳು ಕರ್ನಾಟಕ ಬಿಜೆಪಿಯ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ. ಎಪಿಎಂಸಿ,ಪಾಲಿಕೆ ಚುನಾವಣೆಗಳೆನ್ನದೇ ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿ ಗೆದ್ದು ಬರುತ್ತಿರುವ ಕಮಲ ಪಕ್ಷದ ಸುವರ್ಣ ಸಮಯದಲ್ಲೂ, ರಾಜ್ಯ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಮಕಾಡೆ ಮಲಗಿ ಕಿರಗೂರಿನ ಗಯ್ಯಾಳಿಗಳಂತೆ ಕಾದಾಟಕ್ಕಿಳಿದಿದ್ದಾರೆ. ನಿನ್ನೆಯ ಸಂಘಟನೆ ಉಳಿಸಿ ಹೆಸರಿನ ಸಭೆ, ಅದಕ್ಕೆ ಪ್ರತಿಯಾಗಿ ನಡೆದ ಬೆಂಗಳೂರಿನ ಶಾಸಕ, ಸಂಸದರ ಪತ್ರಿಕಾಗೋಷ್ಟಿ, ನಾಯಕರೆನಿಸಿಕೊಂಡವರ ಏಕವಚನ ಪ್ರಯೋಗ, ಆರೋಪ-ಪ್ರತ್ಯಾರೋಪಗಳಿಂದಾಗಿ ನಿನ್ನೆ ಎಷ್ಟು ಮೆಗಾಧಾರವಾಹಿಗಳ ಟಿಆರ್ಪಿ ಕಡಿಮೆಯಾಯಿತೋ!

ದೇಶದ ಉಳಿದ ರಾಜ್ಯಗಳ ಬಿಜೆಪಿ, ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣ ಮತ್ತು ಯುವ ಮನಸ್ಸುಗಳ ಆಲೋಚನಾ ಶಕ್ತಿಯಿಂದ ಮುಂದುವರೆಯುತ್ತಿದ್ದರೆ, ರಾಜ್ಯ ಬಿಜೆಪಿ ಮಾತ್ರ ಪುರಾತನ  ಜಾತಿ ಮತ್ತು ಓಲೈಕೆ ರಾಜಕಾರಣವನ್ನೇ ನೆಚ್ಚಿಕೊಂಡಿದೆ.ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಮುಖಂಡರೊಬ್ಬರು, ಕುರುಬರಿಗಾಗಿ ಈಶ್ವರಪ್ಪ ಏನು ಮಾಡಿದ್ದಾರೆ? ಯಡ್ಯೂರಪ್ಪನವರೇ ಕನಕ ಜಯಂತಿ ಆರಂಭಿಸಿದ್ದು ಎಂದು ಹೇಳುತ್ತಿರುವುದನ್ನು ಕೇಳಿದೆ. ಆಗಾಗ್ಗೆ ಬರುವ ಜಯಂತಿಗಳ ನೆಪದಲ್ಲಿ ರಜೆಗಳನ್ನು ಕೊಟ್ಟು ಸರ್ಕಾರಿ ಯಂತ್ರವನ್ನು ನಿಲ್ಲಿಸುವ ಪರಿಪಾಠಗಳು ಕೊನೆಯಾಗಬೇಕೆಂಬ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತವರು ‘ಜಯಂತಿ ರಜೆ’ಗಳನ್ನೇ ಕಿತ್ತೊಗೆಯುವಂತಹ ಕೆಲಸ ಮಾಡುತ್ತಿರುವಾಗ, ರಾಜ್ಯ ಬಿಜೆಪಿಯ ನಾಯಕರ ಮನಸ್ಥಿತಿ ಇನ್ನೂ ಜಯಂತಿ ರಾಜಕಾರಣದಲ್ಲೇ ಇರುವುದು ಇವರ ಯೋಚನಾ ಲಹರಿ ಯಾವ ಕಾಲದಲ್ಲಿದೆ ಎಂದು ಸೂಚಿಸುತ್ತದೆ. ಹಾಗೆ ನೋಡಿದರೇ ಕಾಂಗ್ರೆಸ್ಸಿನ ‘ಭಾಗ್ಯ’ ರಾಜಕಾರಣಕ್ಕೂ, ಬಿಜೆಪಿಯ ‘ಜಯಂತಿ’ ರಾಜಕಾರಣಕ್ಕೂ ಯಾವ ವ್ಯತ್ಯಾಸವಿದೆ ? ಇವೆಲ್ಲವನ್ನೂ ಪ್ರಶ್ನಿಸಬೇಕಾದ ಪತ್ರಿಕೆಗಳು ಮಾಡುತ್ತಿರುವುದಾದರೂ ಏನು?

ಮತ್ತಷ್ಟು ಓದು »