ಶಿಕ್ಷಣ ತಜ್ಞರಾಗಿ ಡಾ. ಶಿವರಾಮ ಕಾರಂತರು
ಶ್ರೀಮತಿ ತುಳಸಿ ಶಿರ್ಲಾಲು
ಉಪನ್ಯಾಸಕರು
ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ (ಬಿ.ಎಡ್)
ತೆಂಕಿಲ , ಪುತ್ತೂರು. ದ.ಕ.
ಡಾ. ಶಿವರಾಮ ಕಾರಂತರು ತಮ್ಮ ಮಾತು – ಬರವಣಿಗೆಗಳೆರಡರಲ್ಲೂ ದಶಕಗಳುದ್ದಕ್ಕೂ ಶಿಕ್ಷಣ ಎಂದರೆ ಏನು? ಯಾವುದು ಶಿಕ್ಷಣ? ಶಿಕ್ಷಣ ಹೇಗಿರಬೇಕು? ತರಗತಿಯ ಒಳಗಿನ ಶಿಕ್ಷಣ ಮತ್ತು ನಿತ್ಯ ಜೀವನದಲ್ಲಿ ಉಪಯೋಗ ಮೊದಲಾದ ವಿಷಯಗಳನ್ನು ಮತ್ತೆ ಮತ್ತೆ ಪರಿಷ್ಕರಿಸುತ್ತಾ, ಸ್ಪಷ್ಟಗೊಳಿಸುತ್ತಾ, ಪುನರ್ ರೂಪಿಸುತ್ತಿದ್ದರು. “ಓದು ಯಾಕೆ ಬೇಕು, ಬರಹ ಯಾಕೆ ಬೇಕು ಎಂದು ತಿಳಿಯದ ಮಕ್ಕಳನ್ನು ಕುಳ್ಳಿರಿಸಿಕೊಂಡು ಓದಿನಲ್ಲಿ ಸ್ವಾರಸ್ಯವಿದೆ, ಬರಹದಿಂದ ನಮ್ಮ ಮನಸ್ಸನ್ನು ತೋಡಿಕೊಳ್ಳುವುದಕ್ಕೆ ಬರುತ್ತದೆ ಎಂಬ ಉದ್ದೇಶ ಸಾಧಿಸಬೇಕು. ಇಲ್ಲಿ ಕಲಿತ ಗಣಿತ, ನಾಳೆ ನಡೆಸುವ ವಿವಿಧ ವ್ಯವಹಾರಗಳಲ್ಲಿ ಅನಿವಾರ್ಯ ಎಂಬ ಭಾವನೆಗೆ ಪೀಠಿಕೆ ಹಾಕಬೇಕು. ಮಕ್ಕಳಿಗೆ ಕಲಿಸುವ ವಿಜ್ಞಾನ, ಸಮಾಜಶಾಸ್ತ್ರ, ಚರಿತ್ರೆ ಭೂಗೋಳದಂತಹ ವಿಷಯಗಳು ಕೂಡಾ ನಾಳಿನ ಬುದ್ದಿಯ ಬೆಳವಣಿಗೆಗೆ, ಜ್ಞಾನ ಸಂಪಾದನೆಗೆ ಅವಶ್ಯಕವಾದ ತೃಷೆಯ ರೂಪವನ್ನು ಹೊಂದಿದಾಗ ಮಾತ್ರವೇ ಪ್ರಾಥಮಿಕ ಹಂತದಲ್ಲಿ ನಾವು ಕೊಡುವ ಸರಳ ಪಾಠಗಳು ತಮ್ಮ ಗುರಿಯನ್ನು ಸಾಧಿಸಬಹುದು ಇಲ್ಲವಾದರೆ ಇಲ್ಲ” ಎನ್ನುತ್ತಾರೆ. ಈ ಮಾತುಗಳೇ ಕಾರಂತರು ಶಿಕ್ಷಣವನ್ನು ಗ್ರಹಸಿಕೊಂಡ ಅವರ ಉದ್ದೇಶವನ್ನು ತಿಳಿದುಕೊಂಡ ಸೃಜನಾತ್ಮಕ ನೆಲೆಗೆ ಸಾಕ್ಷಿಯಾಗಿವೆ. ಮತ್ತಷ್ಟು ಓದು