ವಿಷಯದ ವಿವರಗಳಿಗೆ ದಾಟಿರಿ

Archive for

29
ಆಕ್ಟೋ

ಬಾಳಿನ ಹಾರರ್ ಕತೆಯನ್ನು ಸೋಲಿಸಿದ ಹಾರರ್ ಕಾದಂಬರಿಕಾರನ ಕತೆಯಿದು. 

– ಗುರುರಾಜ ಕೊಡ್ಕಣಿ, ಯಲ್ಲಾಪುರ

ಇತ್ತೀಚೆಗೆ ಬಿಡುಗಡೆಯಾದ ‘ಇಟ್’ ಎನ್ನುವ ಆಂಗ್ಲ ಸಿನಿಮಾದ ಬಗ್ಗೆ ನೀವು ಕೇಳಿರಬಹುದು. 2017ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಈ ಹಾರರ್ ಸಿನಿಮಾ ವಿಶ್ವದಾದ್ಯಂತ ಭಯಂಕರ ಸದ್ದು ಮಾಡಿತ್ತು. ಬಿಡುಗಡೆಯಾದ ಮೊದಲ ವಾರದಲ್ಲೇ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಷ್ಟು ದುಡ್ಡು ಬಾಚಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ವರ್ಷದ ಮೊದಲ ಇಂಗ್ಲಿಷ್ ಹಾರರ್ ಚಿತ್ರವಿದು. ವರ್ಷದ ಅತಿಹೆಚ್ಚು ಗಳಿಕೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈ ಸಿನಿಮಾ ಗಳಿಕೆಯ ವಿಷಯದಲ್ಲಿ ಸಾರ್ವಕಾಲಿಕವಾಗಿ ಹಾರರ್ ಸಿನಿಮಾಗಳ  ಪಟ್ಟಿಯ ಐದನೇಯ ಸ್ಥಾನಕ್ಕೆ ನಿಂತಿದೆ. ಸಾಮಾನ್ಯವಾಗಿ ಹಾಸ್ಯಕ್ಕೋ, ಅಪಹಾಸ್ಯಕ್ಕೋ ಬಳಕೆಯಾಗುವ ಸರ್ಕಸ್ಸಿನ ಜೋಕರ್‌‍ನನ್ನು ‍ಅತಿಮಾನುಷ ಶಕ್ತಿಯುಳ್ಳ ವಿಲಕ್ಷಣ ವ್ಯಕ್ತಿತ್ವದಂತೆ ಬಳಸಿಕೊಂಡು ಭಯಹುಟ್ಟಿಸುವ, ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತ ಒಂದು ಅಸಹನೀಯ ಶಾಂತತೆಯ ನಡುವೆಯೇ ಏಕಾಏಕಿ ನೋಡುಗರನ್ನು ಬೆಚ್ಚಿಬೀಳಿಸಿ ಬೆನ್ನ ಹುರಿಯಾಳದಲ್ಲೊಂದು ನಡುಕ ಹುಟ್ಟಿಸುವ ಸಿನಿಮಾದ ವಿಭಿನ್ನ ಶೈಲಿಯ ಕಥಾವಸ್ತುವೇ ಈ ಸಿನಿಮಾದ ಅದ್ಭುತ ಯಶಸ್ಸಿಗೆ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. 1986ರಲ್ಲಿ ರಚಿತವಾದ ಇದೇ ಹೆಸರಿನ ಕಾದಂಬರಿಯನ್ನು ಸಿನಿಮಾವನ್ನಾಗಿಸಿ ಗೆಲುವು ಕಾಣುವಲ್ಲಿ ನಿರ್ದೇಶಕ ಆಂಡಿ ಮಶ್ಚಿಯಾಟಿ ಯಶಸ್ವಿಯಾಗಿದ್ದಾರೆ. ತೀರ ಹೀಗೆ ಜೋಕರ್‍‌ನಂತಹ ಹಾಸ್ಯರಸ ಪ್ರಧಾನ ಪಾತ್ರದಲ್ಲಿಯೂ  ಭಯಾನಕತೆಯನ್ನು ಮೂಡಿಸಬಹುದೆನ್ನುವ ವಿಕ್ಷಿಪ್ತ ಸೃಜನಶೀಲ ಪರಿಕಲ್ಪನೆಯನ್ನು ಕಟ್ಟಿಕೊಟ್ಟವರಾದರೂ ಯಾರೆಂದು ಹುಡುಕುತ್ತ ಹೊರಟಾಗ ಸಿಕ್ಕ ಅಂಗ್ಲ ಸಾಹಿತಿಯ ಹೆಸರು ಸ್ಟೀಫನ್ ಕಿಂಗ್. ಈಗಾಗಲೇ ಇಂಗ್ಲೀಷ್ ಸಾಹಿತ್ಯಲೋಕದಲ್ಲಿ ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ಸ್ಟೀಫನ್ ಕಿಂಗ್‌ನ ಬದುಕಿನ ಕತೆಯೂ ಯಾವುದೇ ರೋಚಕ ಸಿನಿಮಾದ ಕತೆಗಿಂತಲೂ ಕಡಿಮೆಯೇನಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಮತ್ತಷ್ಟು ಓದು »