ವಿಷಯದ ವಿವರಗಳಿಗೆ ದಾಟಿರಿ

Archive for

27
ಆಕ್ಟೋ

ಕ್ರೂರಿಯೇ ನಮ್ಮ ನಾಡಿನ ಆದರ್ಶ ವ್ಯಕ್ತಿಯಾಗಬೇಕೆ ?

– ಡ್ಯಾನಿ ಪಿರೇರಾ

ಭಾರತದ ಇತಿಹಾಸದುದ್ದಕ್ಕೂ ವಿವಾದಾತ್ಮಕ ವ್ಯಕ್ತಿಗಳನ್ನು ಈ ರಾಷ್ಟ್ರದ ಜನಮಾನಸದಲ್ಲಿ ಸರ್ವಮಾನ್ಯ ಮಾಡಬೇಕೆಂಬ ಪ್ರಯತ್ನ ನಿರಂತರವಾಗಿ ನಡೆದಿದೆ. ಬದಲಾದ ವ್ಯವಸ್ಥೆಯಲ್ಲಿ ಆಳುವವರ ಮರ್ಜಿಗೆ ಸಿಲುಕಿದ ಇತಿಹಾಸಕಾರರು ಮಿಥ್ಯೆಯನ್ನು ಸತ್ಯವೆಂದು ತುರುಕುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಿದ್ಧಾಂತಗಳ ಮೂಸೆಯಲ್ಲಿ ದೇಶಭಕ್ತರು ಖಳನಾಯಕರಾದರೆ, ಖಳನಾಯಕರು ಬೆಳಗಾಗುವದರೊಳಗೆ ದೇಶಭಕ್ತರಾಗಿ ರೂಪಾಂತರಗೊಂಡಿದ್ದಾರೆ! ಈ ಹಿನ್ನೆಲೆಯಲ್ಲಿ ಎಂದಿನಂತೆ ಟಿಪ್ಪು ಜಯಂತಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಾಗಾಗಿ ಕೆಲವರಿಗೆ ಟಿಪ್ಪು ಜಾತ್ಯತೀತ ಮತ್ತೆ ಕೆಲವರಿಗೆ ಮತಾಂಧನಾಗಿ ಗೋಚರಿಸುತ್ತಿದ್ದಾನೆ. ಈ ದೇಶದ ವಿಚಿತ್ರವೇನೆಂದರೆ ಈ ದೇಶದಲ್ಲಿ ಮುಸಲ್ಮಾನರಲ್ಲೇ ಈ ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟ ಮಹನೀಯರಿದ್ದಾರೆ. ಅವರ್ಯಾರನ್ನೂ ಈ ಸಮಾಜ ಧರ್ಮದ ಹೆಸರಲ್ಲಿ ಗುರುತಿಸುವುದಿಲ್ಲ. ಅವರು ಇಸ್ಲಾಂ ಚಿಂತನೆಗಳೊಂದಿಗೆ ಬೆಳೆದರೂ ಬೆಳೆ ಬೆಳೆದಂತೆ ಅವರ ವಾಸ್ತವ ಬದುಕಿನ ತಮ್ಮ ಪ್ರಪಂಚವನ್ನು ವಿಶಾಲಗೊಳಿಸಿದ್ದರಿಂದ ಮುಸ್ಲೀಮೇತರರಲ್ಲೂ ಅವರು ಆದರಣೀಯರಾಗಿದ್ದಾರೆ. ದುರ್ದೈವವೆಂದರೆ ಅವರು ಹುಟ್ಟಿದ ಸಮಾಜದಲ್ಲೇ ಕಡೆಗಣಿಸಲ್ಪಟ್ಟಿರುವುದರಿಂದ ಈ ದೇಶದ ಸೆಕ್ಯುಲರ್ ಪಟ್ಟಿಯಲ್ಲಿ ಅವರಿಗೆ ಮಹತ್ವದ ಸ್ಥಾನವಿಲ್ಲ. ಮತ್ತಷ್ಟು ಓದು »

27
ಆಕ್ಟೋ

ಜನರಕ್ಷಾಯಾತ್ರೆ : ಕಮ್ಯುನಿಸ್ಟ್ ರಕ್ತಚರಿತ್ರೆಯ ಅಂತ್ಯದ ಆರಂಭ

– ರಾಕೇಶ್ ಶೆಟ್ಟಿ

True Strength is in the Soul and Spirit. Not in Muscles ಅಂತೊಂದು ಮಾತಿದೆ. ಕೇರಳದ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮತ್ತು ಸಂಘಟನೆಗೆ ಅನ್ವಯವಾಗುವ ಮಾತಿದು. ಕಮ್ಯುನಿಸ್ಟರ 48 ವರ್ಷಗಳ ನಿರಂತರ ರಕ್ತಪಾತ,300ಕ್ಕೂ ಹೆಚ್ಚು ಸ್ವಯಂ ಸೇವಕರ ಹತ್ಯೆಗಳು,ಮಾರಣಾಂತಿಕ ಹಲ್ಲೆಗಳ ನಂತರವೂ, ಪ್ರಸ್ತುತ ನಡೆಯುತ್ತಿರುವ ಜನರಕ್ಷಾಯಾತ್ರೆಯಲ್ಲಿ ಸಾವಿರಾರು ಜನರು ಸ್ವಯಂ ಸ್ಫೂರ್ತಿ, ಮತ್ತು ಧೈರ್ಯದಿಂದ ಪಾಲ್ಗೊಳ್ಳುವುದನ್ನು ನೋಡಿದರೆ, ಕೇರಳದ ಜನತೆ, ಅನ್ಯಾಯ,ಹಿಂಸಾಚಾರವನ್ನು ಪ್ರತಿಪಾದಿಸುವ ಸರ್ವಾಧಿಕಾರಿ ಕಮ್ಯುನಿಸ್ಟ್ ಪಕ್ಷದ ಆಡಳಿತ ಕೊನೆಯಾಗಲೇಬೇಕೆಂದು ಆಶಿಸುತ್ತಿರುವ ಸ್ಪಷ್ಟ ಸಂದೇಶದಂತಿದೆ.

ಅಕ್ಟೊಬರ್ 3ಕ್ಕೆ ಪಯ್ಯನೂರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಂದ ಆರಂಭವಾಗಿ, 15 ದಿನಗಳ ಕಾಲ ಕೇರಳಾದಾದ್ಯಂತ ಸಂಚರಿಸಿ, ಅಕ್ಟೊಬರ್ 17ಕ್ಕೆ ಅಮಿತ್ ಷಾ ಅವರಿಂದಲೇ ತಿರುವನಂತಪುರಂನಲ್ಲಿ ಯಾತ್ರೆ ಕೊನೆಗೊಂಡಿದೆ.ಯಾತ್ರೆ ಆರಂಭವಾದ ದಿನ ಕಮ್ಯುನಿಸ್ಟರ ರಾಜಕೀಯ ಹಿಂಸಾಚಾರದ ಮೂಲಸ್ಥಾನ (ಕೇರಳದ ಇಂದಿನ ಮುಖ್ಯಮಂತ್ರಿಯ ತವರು) ಕಣ್ಣೂರಿನ 84 ಬಲಿದಾನಿಗಳ ಕುಟುಂಬದವರು ಪಾಲ್ಗೊಳ್ಳುವ ಮೂಲಕ ಶುರುವಾದ ಯಾತ್ರೆ, ಕಣ್ಣೂರು ಅದರಲ್ಲೂ ಮುಖ್ಯವಾಗಿ ಪಿಣರಾಯಿಯಂತಹ ಕಮ್ಯುನಿಸ್ಟ್ ನಟೋರಿಯಸ್ ಪಾರ್ಟಿ ವಿಲೇಜುಗಳನ್ನು ಹಾದು ಹೋಗಿದೆ. ಮುಖ್ಯಮಂತ್ರಿಯ ಪಿಣರಾಯಿಯನ್ನೇಕೆ ನಟೋರಿಯಸ್ ಎನ್ನುತ್ತಿದ್ದೇನೆ ಎಂದು ತಿಳಿದುಕೊಳ್ಳಬೇಕೆಂದರೆ ಕಮ್ಯುನಿಸ್ಟ್ ಪಾರ್ಟಿ ವಿಲೇಜುಗಳ ಬಗ್ಗೆ ತಿಳಿದುಕೊಳ್ಳಬೇಕು.

ಮತ್ತಷ್ಟು ಓದು »