ವಿಷಯದ ವಿವರಗಳಿಗೆ ದಾಟಿರಿ

Archive for

12
ಆಕ್ಟೋ

ಜನರಕ್ಷಾ ಯಾತ್ರೆ : ಕಮ್ಯುನಿಸ್ಟರ ಭದ್ರಕೋಟೆಯಲ್ಲಿ ಕಂಪನ

ಅಂಜಲಿ ಜಾರ್ಜ್ ಮತ್ತು ಜಯಶಂಕರ್

ಮೂಲ ಲೇಖನ : https://swarajyamag.com/politics/kannurs-jana-raksha-yatra-turning-the-tide-on-the-communists

ಪಿಣರಾಯಿ, ಕೇರಳದ ಮಾರ್ಕ್ಸಿಸ್ಟರಿಗೆ ಬಹಳ ಪ್ರಮುಖವಾಗಿರುವ ಒಂದು ಸಣ್ಣ ಗ್ರಾಮ. ೧೯೩೯ರಲ್ಲಿ ಪಿಣರಾಯಿಗೆ ಸಮೀಪವಿರುವ ಪರಪ್ಪುರಂ ಎಂಬ ಸ್ಥಳದಲ್ಲಿ ಕಮ್ಯುನಿಸ್ಟರು ತಮ್ಮ ಕಾರ್ಯಚಟುವಟಿಕೆಯನ್ನು ಮೊದಲ ಬಾರಿಗೆ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಪಿಣರಾಯಿ ಕೇರಳದ ಕಮ್ಯುನಿಸ್ಟರ ಭದ್ರಕೋಟೆ ಎಂದೇ ಕರೆಯಲ್ಪಡುತ್ತದೆ. ಒಂದು ಕಾಲದಲ್ಲಿ ಕೇವಲ ಕೆಂಪುದ್ವಜಗಳಷ್ಟೇ ಹಾರಾಡುತ್ತಿದ್ದ ಪ್ರದೇಶ ಇದಾಗಿತ್ತು. ಕಮ್ಯುನಿಸ್ಟ್ ಪಾರ್ಟಿಯ ಹತೋಟಿಯಲಿದ್ದ ಈ ಗ್ರಾಮದಲ್ಲಿ ವಿರೋಧಕ್ಕೆ ಆಸ್ಪದವೇ ಇರಲಿಲ್ಲ. ವಿರೋಧಿ ಧ್ವನಿಗಳನ್ನು ಯಾವುದೇ ಕರುಣೆಯಿಲ್ಲದೆ ಮೆಟ್ಟಿಹಾಕಲಾಗುತ್ತಿತ್ತು. ಬಿಜೆಪಿ ಹಾಗು ಸಂಘದ ಕಾರ್ಯಕರ್ತರಾದ ಹುತಾತ್ಮ ಉತ್ತಮನ್ ಹಾಗು ಅವರ ಮಗ ಹುತಾತ್ಮ ರೆಮಿತ್ ರನ್ನು ಇದೇ ಕಮ್ಯುನಿಸ್ಟರು ಕೊಂದದ್ದು ೧೪ ದಿನಗಳ ಜನರಕ್ಷಾಯಾತ್ರೆಗೆ ಮುನ್ನುಡಿ ಬರೆಯಿತು. ಕಮ್ಯುನಿಸ್ಟರು ಮಾಡಿರುವ ರಾಜಕೀಯ ಹತ್ಯೆಗಳನ್ನು ಎತ್ತಿ ತೋರಿಸುತ್ತಿರುವ ಈ ಯಾತ್ರೆ ಕೆಲವು ದಿನದ ಹಿಂದೆ ಪಿಣರಾಯಿ ಗ್ರಾಮವನ್ನು ಪ್ರವೇಶಿಸಿ ಮುಂದುವರೆಯಿತು. ಕೇರಳದ ರಾಜಕೀಯ ಚರಿತ್ರೆಯಲ್ಲಿ ಇದೊಂದು ಮಹತ್ತರ ತಿರುವು

೧೯೭೭ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕತ್ವವನ್ನು ಕಂಡ ಬಹಳಷ್ಟು ಮಾರ್ಕ್ಸಿಸ್ಟ್ ನಾಯಕರು ಮತ್ತು ಕಾರ್ಯಕರ್ತರು ಸಂಘವನ್ನು ಸೇರಿಕೊಂಡರು. ಇದಕ್ಕೆ ಬಹುಮುಖ್ಯವಾಗಿ ಎರಡು ಕಾರಣಗಳಿದ್ದವು. ಮೊದಲನೆಯದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐಎಂ) ಕುಯುಕ್ತಿಯಿಂದ ಕಾಂಗ್ರೆಸ್ಸಿನ ಜೊತೆ ಸೇರಿಕೊಂಡು ಸರಕಾರ ರಚಿಸಿತ್ತು ಹಾಗು ಎರಡನೆಯದಾಗಿ, ಸಂಘ ಈ ಹೋರಾಟದ ಮುಂಚೂಣಿಯಲ್ಲಿದ್ದು,ಇಂದಿರಾ ಗಾಂಧಿಯನ್ನು ಎದುರಿಸುವ ಸಾಹಸ ಮಾಡಿತ್ತು, ಇದರ ಫಲ ಸ್ವರೂಪವಾಗಿ ಸಾವಿರಾರು ಸ್ವಯಂಸೇವಕರು ಬಂಧನಕ್ಕೆ ಒಳಗಾಗಿದ್ದರು.. ತಮ್ಮ ನಾಯಕರ ಹೊಣೆಗೇಡಿತನ ಹಾಗು ಕಪಟತನದಿಂದ ಬೇಸತ್ತ ಜನರನ್ನು ಸ್ವಯಂಸೇವಕ ಸಂಘದ ಸನ್ನದ್ಧತೆ ಹಾಗೂ ಜವಾಬ್ದಾರಿಯುತ ನಡವಳಿಕೆ ಆಕರ್ಷಿಸಿತು.

ಮತ್ತಷ್ಟು ಓದು »

9
ಆಕ್ಟೋ

ಶಿಕ್ಷಣ ತಜ್ಞರಾಗಿ ಡಾ. ಶಿವರಾಮ ಕಾರಂತರು

ಶ್ರೀಮತಿ ತುಳಸಿ ಶಿರ್ಲಾಲು
ಉಪನ್ಯಾಸಕರು
ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ (ಬಿ.ಎಡ್)
ತೆಂಕಿಲ , ಪುತ್ತೂರು. ದ.ಕ.

ಡಾ. ಶಿವರಾಮ ಕಾರಂತರು ತಮ್ಮ ಮಾತು – ಬರವಣಿಗೆಗಳೆರಡರಲ್ಲೂ ದಶಕಗಳುದ್ದಕ್ಕೂ ಶಿಕ್ಷಣ ಎಂದರೆ ಏನು? ಯಾವುದು ಶಿಕ್ಷಣ? ಶಿಕ್ಷಣ ಹೇಗಿರಬೇಕು? ತರಗತಿಯ ಒಳಗಿನ ಶಿಕ್ಷಣ ಮತ್ತು ನಿತ್ಯ ಜೀವನದಲ್ಲಿ ಉಪಯೋಗ ಮೊದಲಾದ ವಿಷಯಗಳನ್ನು ಮತ್ತೆ ಮತ್ತೆ ಪರಿಷ್ಕರಿಸುತ್ತಾ, ಸ್ಪಷ್ಟಗೊಳಿಸುತ್ತಾ, ಪುನರ್ ರೂಪಿಸುತ್ತಿದ್ದರು. “ಓದು ಯಾಕೆ ಬೇಕು, ಬರಹ ಯಾಕೆ ಬೇಕು ಎಂದು ತಿಳಿಯದ ಮಕ್ಕಳನ್ನು ಕುಳ್ಳಿರಿಸಿಕೊಂಡು ಓದಿನಲ್ಲಿ ಸ್ವಾರಸ್ಯವಿದೆ, ಬರಹದಿಂದ ನಮ್ಮ ಮನಸ್ಸನ್ನು ತೋಡಿಕೊಳ್ಳುವುದಕ್ಕೆ ಬರುತ್ತದೆ ಎಂಬ ಉದ್ದೇಶ ಸಾಧಿಸಬೇಕು. ಇಲ್ಲಿ ಕಲಿತ ಗಣಿತ, ನಾಳೆ ನಡೆಸುವ ವಿವಿಧ ವ್ಯವಹಾರಗಳಲ್ಲಿ ಅನಿವಾರ್ಯ ಎಂಬ ಭಾವನೆಗೆ ಪೀಠಿಕೆ ಹಾಕಬೇಕು. ಮಕ್ಕಳಿಗೆ ಕಲಿಸುವ ವಿಜ್ಞಾನ, ಸಮಾಜಶಾಸ್ತ್ರ, ಚರಿತ್ರೆ ಭೂಗೋಳದಂತಹ ವಿಷಯಗಳು ಕೂಡಾ ನಾಳಿನ ಬುದ್ದಿಯ ಬೆಳವಣಿಗೆಗೆ, ಜ್ಞಾನ ಸಂಪಾದನೆಗೆ ಅವಶ್ಯಕವಾದ ತೃಷೆಯ ರೂಪವನ್ನು ಹೊಂದಿದಾಗ ಮಾತ್ರವೇ ಪ್ರಾಥಮಿಕ ಹಂತದಲ್ಲಿ ನಾವು ಕೊಡುವ ಸರಳ ಪಾಠಗಳು ತಮ್ಮ ಗುರಿಯನ್ನು ಸಾಧಿಸಬಹುದು ಇಲ್ಲವಾದರೆ ಇಲ್ಲ” ಎನ್ನುತ್ತಾರೆ. ಈ ಮಾತುಗಳೇ ಕಾರಂತರು ಶಿಕ್ಷಣವನ್ನು ಗ್ರಹಸಿಕೊಂಡ ಅವರ ಉದ್ದೇಶವನ್ನು ತಿಳಿದುಕೊಂಡ ಸೃಜನಾತ್ಮಕ ನೆಲೆಗೆ ಸಾಕ್ಷಿಯಾಗಿವೆ. ಮತ್ತಷ್ಟು ಓದು »

5
ಆಕ್ಟೋ

ಆಧ್ಯಾತ್ಮಿಕ ಪ್ರಗತಿ ಮತ್ತು ಭಾರತೀಯ ಸಂಸ್ಕೃತಿ

ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ.

ದೀನ್ ದಯಾಳ್ ಉಪಾಧ್ಯಾಯ, ಪ್ರಾಯಶಃ ಇವರ ಹೆಸರನ್ನು ನಮ್ಮ ಪೀಳಿಗೆ ಹೆಚ್ಚಾಗಿ ಕೇಳಿಲ್ಲ ಎಂದರೂ ತಪ್ಪಾಗಲಾರದು. ಇಂದಿನ ಭಾರತೀಯ ಜನತಾ ಪಕ್ಷದ ಮೂಲ ಪಕ್ಷವಾದ ಜನಸಂಘವನ್ನು ಸ್ಥಾಪಿಸಿದ ಮಹಾ ನಾಯಕ ದೀನ್ ದಯಾಳ್ ರವರು. ಯಾವುದೋ ರಾಜಕೀಯ ಲಾಭ ಅಥವಾ ವೈಯುಕ್ತಿಕ ಹಿತಾಸಕ್ತಿಗೋಸ್ಕರ ರಾಜಕೀಯ ಪಕ್ಷವನ್ನು ಅವರು ಹುಟ್ಟುಹಾಕಲಿಲ್ಲ. ಬದಲಾಗಿ, ಅವರಲ್ಲಿದ್ದ ಅಧಮ್ಯ ರಾಷ್ಟ್ರಪ್ರೇಮ ಹಾಗೂ ರಾಜಕೀಯ ಸ್ಥಿತ್ಯಂತರಗಳನ್ನು ಸಕಾರಾತ್ಮಕ ದಿಕ್ಕಿಗೆ ತೆಗೆದುಕೊಂಡು ಹೋಗುವ ಇರಾದೆಯಿಂದ ರಾಜಕೀಯ ಪಕ್ಷವನ್ನು ಕಟ್ಟಿದರು. ಇಂದಿನ ಬಹುತೇಕ ರಾಜಕಾರಣಿಗಳಿಗೆ ರಾಜಕಾರಣ ಮಾಡುವುದರಲ್ಲಿ ಕೌಶಲ್ಯವಿದೆಯೇ ಹೊರತು, ರಾಜಕೀಯವನ್ನು ಏಕೆ ಮಾಡಬೇಕು, ಅದರ ಫಲಿತಾಂಶಗಳೇನು ಎನ್ನುವ ಸಮಗ್ರ ಜ್ಞಾನ ಇರುವುದು ಅಪರೂಪ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ, ಬಹಳ ಸ್ಪಷ್ಟವಾಗಿ ಸಂಸ್ಕೃತಿ ಹಾಗೂ ರಾಜಕಾರಣದ ಕುರಿತು ಅಪಾರ ಜ್ಞಾನವನ್ನು ಹೊಂದಿದ್ದ ವ್ಯಕ್ತಿ ಎಂದರೆ ಉಪಾಧ್ಯಾಯರು. ಸಂಸ್ಕೃತಿಯ ಆಳ ಅಗಲಗಳನ್ನು ಅಮೂಲಾಗ್ರವಾಗಿ ಬಲ್ಲಂತಹ ಹಾಗೂ ನಿರ್ಧಿಷ್ಟವಾಗಿ ರಾಜಕೀಯ ವ್ಯವಸ್ಥೆಯ ಉದ್ದೇಶ ಹಾಗೂ ಅದು ತಲುಪಬೇಕಾದ ಗುರಿಗಳನ್ನು ಸ್ಪಷ್ಟೀಕರಿಸಿದ ಮೊದಲ ಭಾರತೀಯ ವ್ಯಕ್ತಿ ಎಂದರೂ ಅತಿಶಯೋಕ್ತಿಯಾಗಲಾರದು. ಈ ಪುಟ್ಟ ಬರವಣಿಗೆಯಲ್ಲಿ ಅವರ ಕೆಲವು ವಿಚಾರಧಾರೆಗಳನ್ನು ಪರಿಚಯಿಸುವ ಮೂಲಕ ನಮ್ಮ ರಾಜಕೀಯ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ. ಮತ್ತಷ್ಟು ಓದು »

4
ಆಕ್ಟೋ

ಜೀವಪರರದ್ದು ಮಾತ್ರ ಜೀವವೇ ಸಾರ್?

– ಡ್ಯಾನಿ ಪಿರೇರಾ,ಹಳ್ಳಿಮೈಸೂರು

ಈ ‘ಬುದ್ಧಿಜೀವಿ’ ಎಂಬ ಪದದ ಉಗಮ ಹೇಗಾಯಿತು? ಯಾರನ್ನು ಬುದ್ಧಿಜೀವಿ ಎನ್ನುತ್ತಾರೆ? ಬುದ್ಧಿಜೀವಿ ಎನ್ನಲು ಇರಬೇಕಾದ ಮಾನದಂಡಗಳೇನು? ಬುದ್ಧಿಜೀವಿ ಎನ್ನುವವ ನಿಜಕ್ಕೂ ಬುದ್ಧಿವಂತನೇ? ಅಥವಾ ಹಾಗೆ ಭಾವಿಸಲು ಪೂರ್ವ ಷರತ್ತುಗಳಿವೆಯೇ? ಒಂದೊಮ್ಮೆ ಆತ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಮಾತಾಡಬಲ್ಲ ಸ್ಥಿತಪ್ರಜ್ಞನೇ? ಸತ್ಯವನ್ನು ನಿರ್ಭೀತಿಯಿಂದ ಹೇಳುವ ಸತ್ಯಸಂದನೇ?  ಯಾವುದೇ ಒಂದು ನಿರ್ಧಿಷ್ಟ ಸಿದ್ಧಾಂತಕ್ಕೆ ಅಂಟಿಕೊಳ್ಳದೇ ಸತ್ಯವನ್ನು ಮಾತ್ರ ಅಂಜಿಕೆ ಇಲ್ಲದೇ ಹೇಳುವ ನಿಷ್ಠೂರವಾದಿಯೇ?  ಎಂಬ ಪ್ರಶ್ನೆಗಳು ‘ಬುದ್ಧಿಜೀವಿ’ ಎಂದು  ಪದ ಕೇಳಿದಾಗಲೆಲ್ಲ ಮನಸ್ಸಲ್ಲಿ ಮೂಡುತ್ತದೆ. ಅದಕ್ಕೆ ಕಾರಣವಿದೆ.

ಇತ್ತೀಚಿನ ದಿನಗಳಲ್ಲಿ ಇಂಥ ಯಾವುದೇ ಮಾನದಂಡಗಳನ್ನಿಟ್ಟುಕೊಳ್ಳದೇ ಬುದ್ಧಿಜೀವಿಗಳಾಗುವ ಪ್ರಯತ್ನ ನಡೆಯುತ್ತಿರುವುದು ಹೆಚ್ಚಾಗುತ್ತಿದೆ.  ಅಂಥವರು ತಮ್ಮನ್ನು ತಾವು ಬುದ್ಧಿಜೀವಿ ಎಂದು ಹೇಳಿಕೊಳ್ಳದೆಯೂ ‘ಬುದ್ಧಿಜೀವಿ’ ಆಗಬಹುದೆಂದು ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ನಡೆದ ದಿನಗಳಿಂದ  ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ನಟ ಪ್ರಕಾಶ್ ರೈ ಯವರು ಅವರ ಮಾತುಗಳಿಂದ ನಿರೂಪಿಸುತ್ತಿದ್ದಾರೆಂದು ಭಾಸವಾಗುತ್ತಿದೆ.

ಭಾರತೀಯ ಸಮಾಜ ಬುದ್ಧಿಜೀವಿಯಾದವರು, ಪ್ರಗತಿಪರ ಎಂದೆನಿಸಿಕೊಳ್ಳುವವರು ಸಮಾಜದಲ್ಲಿ ವಿಚಾರಶೀಲನೂ, ನ್ಯಾಯಪರನೂ ಅಳೆದು ತೂಗಿ ಸತ್ಯವನ್ನಷ್ಟೇ ಹೇಳಬಲ್ಲ ನಿಷ್ಠೂರ ಭಾವದವನಾಗಿರಬೇಕೆಂದು ಅಪೇಕ್ಷೆ ಪಡುತ್ತದೆ. ಆದರೆ ಪ್ರಕಾಶ ರೈ ಯಂಥ ನಟರು ಮಾಡುತ್ತಿರುವುದೇನು? ಅವರು ಮಾತಾಡುತ್ತಿರುವುದೇನು? ಇವರು ಒಬ್ಬ ಪ್ರಸಿದ್ಧ ನಟನಾಗಿ ಯಾವುದೋ ಕಾಲಬಾಹ್ಯ ಸಿದ್ಧಾಂತಕ್ಕೆ  ಮನಸೋತು  ಎಲ್ಲಾ ವರ್ಗಗಳಲ್ಲೂ ಅವರ ಅಭಿಮಾನಿಗಳಿದ್ದಾರೆ ಎಂಬುದನ್ನು ಮರೆತು. ಎಡಪಂಥೀಯ ಪೂರ್ವಗ್ರಹ ವಿಚಾರ ವಿಮರ್ಶೆಗೆ ಜೋತು ಬಿದ್ದು ಅವರ ಅಭಿನಯವನ್ನು ಮೆಚ್ಚುವವರಿಗೆ ಅವರು ಆಪಥ್ಯರಾಗುತ್ತಿದ್ದಾರೆ ಎನಿಸುತ್ತಿದೆ.

ಈ ಪ್ರಶ್ನೆ ಯಾಕೆ ಮೂಡುತ್ತಿದೆ ಎಂದರೆ ಕೆಲವು ದಿನಗಳ ಹಿಂದೆ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆನಡೆಯಿತು. ಅದನ್ನು ಎಲ್ಲ ಪಕ್ಷಭೇದ ಮರೆತು ಖಂಡಿಸಿದ್ದೂ ಆಯಿತು. ಹತ್ಯೆಗೊಳಗಾದ ವ್ಯಕ್ತಿಯ ಬರವಣಿಗೆ ನಡೆ-ನುಡಿಯಿಂದ ಬೇಸತ್ತಿರುವ ಕೆಲವರು ಸ್ವಲ್ಪ ಅತಿ ಎನಿಸುವಷ್ಟು ಪ್ರತಿಕ್ರಿಯೆ ನೀಡಿದರೆ, ಅವರ ವಿರುದ್ಧದ ದನಿಯಾಗಿ ಆಕೆಯ ಧೈರ್ಯ-ಶೌರ್ಯವನ್ನು ಕೊಂಡಾಡುವ ಸಂಖ್ಯೆಯೂ ಸಾಕಷ್ಟಿತ್ತು. ಈ ನಡುವೆ ವಿಚಾರವಾದಿಗಳಿಂದ ತನಿಖೆ ನಡೆಯದೇ ತೀರ್ಪು ಹೊರಬಿತ್ತು.  ಕೊಂದವರು- ಸಂಘಪರಿವಾರದವರು. ಇರಲಿ, ಬುದ್ಧಿಜೀವಿಗಳ ಈ ನಡವಳಿಕೆ ಸೋಜಿಗವೇನಲ್ಲ. ಈ ಆಪಾದನೆಯ ಹಿಂದೆ ವಿಚಾರವಾದಿಗಳ, ಬುದ್ಧಿಜೀವಿಗಳ, ಜೀವಪರರ ಅಸ್ಥಿತ್ವದ ಪ್ರಶ್ನೆಯಿದೆ ಎಂಬುದು. ಆದರೆ ಇಲ್ಲಿ ಚಿತ್ರ ನಟ ಪ್ರಕಾಶ್ ರೈ ಯವರ ಸ್ಥಿತಿ ಹಾಗಲ್ಲ. ಅವರಿಗೆ ಎಲ್ಲಾ ವರ್ಗಗಳಲ್ಲೂ ಅವರ ಅಭಿನಯವನ್ನು ಆಸ್ವಾಧಿಸುವ ಅಭಿಮಾನಿಗಳಿದ್ದಾರೆ. ಹಾಗಾಗಿ ಅವರು ಬುದ್ಧಿಜೀವಿಯಾಗಬೇಕಿಲ್ಲ. ಆದರೂ ಹತ್ಯೆ ಖಂಡಿಸುವ ಬರದಲ್ಲಿ ಅವರು ಕರ್ನಾಟಕದಲ್ಲಿ ಏನಾಗುತ್ತಿದೆ? ಇದು ಸೈದ್ಧಾಂತಿಕ ದ್ವೇಷದಿಂದ ಬಲಪಂಥೀಯರು ಈ ಹತ್ಯೆಯ ಹಿಂದಿದ್ದಾರೆ ಎಂಬ ಷರಾ ಬರೆದೇಬಿಟ್ಟರು. ಕರ್ನಾಟಕದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆ ಸಹಜವಾಗಿತ್ತು. ಅವರು ಪ್ರಶ್ನೆಯನ್ನು ಕಾನೂನಾತ್ಮಕವಾಗಿ ಹೊಣೆ ಇರದ ದೇಶದ ಪ್ರಧಾನಿಯನ್ನು ಕೇಳಿದ್ದು ಪ್ರಶ್ನೆಯಲ್ಲಿ ಪ್ರಧಾನಿ ಇದಕ್ಕೆ ಉತ್ತರಿಸಬೇಕೆಂಬ ದಾರ್ಷ್ಟ್ಯವಿತ್ತು. ಹಾಗಾದರೆ ಸೈದ್ಧಾಂತಿಕ ಭಿನ್ನತೆ ಏನೇ ಇರಲಿ, ಹತ್ಯೆ ಮಾಡಿದವರು ಯಾರೆಂದು ಪತ್ತೆಮಾಡುವುದು ತನಿಖಾ ಸಂಸ್ಥೆಯೇ ಹೊರತು ಪರಸ್ಪರ ವಿರುದ್ಧವಾದ ಸಿದ್ಧಾಂತವಿರುವ ವ್ಯಕ್ತಿಗಳಲ್ಲ ಎನ್ನುವುದು ಈ ನಟನಿಗೆ ಗೊತ್ತಿಲ್ಲವೇ? ರೈ ಅವರನ್ನು ಜನರು ಒಪ್ಪಿರುವುದು ಅವರ ನಟನಾ ಪ್ರೌಢಿಮೆಯೇ ಅಥವಾ ಅವರ ಪೂರ್ವಗ್ರಹದಿಂದ ಕೂಡಿದ ಹಿಂದೂ ವಿರೋಧಿ ನೀತಿಯೇ?

ಮತ್ತಷ್ಟು ಓದು »