ವಿಷಯದ ವಿವರಗಳಿಗೆ ದಾಟಿರಿ

ಮೇ 28, 2011

4

ದೆವ್ವಗಳ ಹಾಡುಗಳು…!!

‍ನಿಲುಮೆ ಮೂಲಕ

– ಉಮೇಶ್ ದೇಸಾಯಿ

  ಶೀರ್ಷಿಕೆ ಓದಿ ಆಶ್ಚರ್ಯಗೊಳ್ಳಬಹುದು ಆದರೆಇದು ವಾಸ್ತವ ಹೌದು ನಮ್ಮ ಸಿನೇಮಾಗಳಲ್ಲಿ ಬಹಳ ದಿನಿಂದಲೂ ದೆವ್ವ ಹಾಡುತ್ತಿವೆ..ಹಾಗೂ ಆ ಹಾಡು ಹಿಟ್ ಸಹ ಆಗಿವೆ. ಇಲ್ಲಿ ಸಿನೇಮಾಜನ ಅವುಗಳಿಗೆ ದೆವ್ವ ಅನ್ನುವ ಬದಲು ಅತೃಪ್ತ ಆತ್ಮ ಅಂತ ಕರೆದರು. ಈ ಹಾಡುಗಳ ವಿಶೇಷತೆ ಅನೇಕ ಇವೆ..

ಕೃತಕವಾಗಿ ಹಾಕಿದ ಸೆಟ್ಟು.., ಬಿಳಿಸೀರೆ ಧರಿಸಿದ ನಾಯಕಿ ,ಆ ನೀರವತೆಯಲ್ಲೂ ಸುಶ್ರಾವ್ಯವಾಗಿ ಕೇಳಿಬರುವ ಹಿನ್ನೆಲೆ ಸಂಗೀತ, ಭಯ ಬೆವರು ಹೀಗೆ ಹತ್ತು ಹಲವು ಭಾವ ಮುಖದಲ್ಲಿ ತೋರುವ ನಾಯಕ. ಹೀಗೆ ಈ ಹಾಡುಗಳಿಗೆ ಒಂದು ಫಾರ್ಮುಲಾ ಇತ್ತು. ಹಾಗೂ ಆ ಫಾರ್ಮುಲಾ ಯಶಸ್ವಿಯೂ ಆಗಿತ್ತು. ನಮ್ಮ ಭಾರತೀಯ ಯಾವ ಭಾಷೆಯ ಚಿತ್ರವನ್ನೇ ತಗೊಂಡರೂ ಅಲ್ಲಿ ಈ ಬಗೆಯ ಹಾಡು ಇದ್ದೇ ಇರುತ್ತವೆ.

ರಾತ್ರಿವೇಳೆ ಯಾಕಾಗಿ ಈ ಹಾಡು ಅವುಗಳ ಉದ್ದೇಶ ಏನು ? ಮುಖ್ಯವಾಗಿ ನಾಯಕನಿಗೆ ದಿಗಿಲು ಹುಟ್ಟಿಸುವುದು

ನಾಯಕ ಟಾರ್ಚು ಹಿಡಿದುಕೊಂಡು ಹಾಡಿನ ಜಾಡು ಬೆಂಬತ್ತಿ ಬಿಳಿಸೀರೆ ಧರಿಸಿದ ಮೋಹಿನಿಯನ್ನು ಬೆನ್ನತ್ತುತ್ತಾನೆ. ರಹಸ್ಯ ಭೇದಿಸದೆ ದಿಗಿಲುಗೊಳ್ಳುತ್ತಾನೆ. ಚಿತ್ರ ವೀಕ್ಷಿಸುತ್ತಿದ್ದ ಪ್ರೇಕ್ಷಕನೂ ನಾಯಕನ ಜೊತೆಗೂಡುತ್ತಾನೆ. ಈ ಅತೃಪ್ತ ಆತ್ಮ ಅವುಗಳ ಮೇಲೆ ಚಿತ್ರಿತವಾದ ಹಾಡು ಹಿಟ್ ಅಂತ ಮೊದಲೇ ಹೇಳಿರುವೆ. ಇನ್ನೊಂದು ವಿಶೇಷ ಅಂದರೆ ಹೆಚ್ಚಿನವುಗಳು ಲತಾ ಹಾಡಿದ್ದು. ಸುಮಾರು ಅರವತ್ತು ವರ್ಷಗಳ ಹಿಂದೆ ತೆರೆಕಂಡ “ಮೆಹಲ್” ಚಿತ್ರದ “ಆಯೇಗಾ ಆಯೇಗಾ ಆನೇವಾಲಾ ಆಯೇಗಾ..”ಹಾಡು. ಲತಾಳ ದನಿ ತೀರ ಎಳಸು ಅನಿಸುತ್ತದೆ ಈ ಹಾಡಿನಲ್ಲಿ.

ಮಧುಬಾಲಾಳ ಮಾದಕ ಚೆಲುವು, ಅಶೋಕ್ ಕುಮಾರನ ದಿಗಿಲು ತುಂಬಿದ ಮುಖ ಒಟ್ಟಿನಲ್ಲಿ ಈ ಹಾಡು ಒಂಥರಾ ಟ್ರೆಂಡ್ ಸೆಟರ್. ಹಾಡಿನ ಸಾಲು ಸಹ ಎಷ್ಟು ಚಂದ…“ತರಸಿ ಹುಯಿ ಜವಾನಿ ಮಂಜಿಲ್ ಕೋ ಢುಂಡತಿಹೈ ಮಾಜಿ ಬಗೈರ್ ನೈಯ್ಯಾ ಸಾಹಿಲ್ ಕೊ ಢುಂಡತಿಹೈ..” ಅನೇಕ ಹಾಡಿವೆ. ಒಂದು ವಿಶೇಷದ್ದು. ಮುಬಾರಕ್ ಬೇಗಂ ಎನ್ನುವ ಗಾಯಕಿ ಹಾಡಿದ್ದು–“ಹಮಾರಿ ಯಾದ್ ಆಯೇಗಿ” ಚಿತ್ರದ್ದು. “ಕಭಿ ತನಹಾಯಿಮೆ ಯೂಂ ಹಮಾರಿ ಯಾದ್ ಆಯೇಗಿ…” ಮುಬಾರಕ್ ಬೇಗಂಳದ್ದು ಒಂಥರಾ ಶೀರು ದನಿ. ಈ ಹಾಡಿಗೆ ಅವಳು ಜೀವತುಂಬಿದ್ದಳು. ಇದು ಒಂಥರಾ ಸೇಡಿನ ಹಾಡೇ..ಸಾಲು ಗಮನಿಸಿ..“ಯೇ ಬಿಜಲಿ ರಾಖ ಕರಜಾಯೇಗಿ ತೇರೆ ಪ್ಯಾರ್ ಕಿ ದುನಿಯಾ ನ ತೂ ಜೀ ಸಕೇಗಾ ಔರ್ ನ ತುಜಕೊ ಮೌತ್ ಆಯೇಗಿ..”. ಹೇಮಂತ ಕುಮಾರ್ ಆರ್ಥರ್ ಕಾನನ್ ಡಾಯಲ್ ನ ಕಾದಂಬರಿ ಆಧರಿಸಿ ಒಂದು ಚಿತ್ರ ತೆಗೆದ–“ಬೀಸ್ ಸಾಲ್ ಬಾದ್”. ಈ ಚಿತ್ರದ ಥೀಮ್ ಸಾಂಗ್ “ಕಹಿ ದೀಪ್ ಜಲೆ ಕಹಿ ದಿಲ್ ಜರಾದೇಖಲೆ ಆ ಕರ್ ಪರವಾನೆ..”ಲತಾಳ ಅಧ್ಭುತ ಹಾಡು ಇದು.

ಅವಳ ದನಿಗೆ ಮಾರುಹೋಗಿ ಆ ದನಿ ಬಂದ ದಿಕ್ಕಿಗೆ ಹೋಗಿಬಿಡಬೇಕು ..ಅಂಥಾ ಸಮ್ಮೋಹಕ ಹಾಡು ಇದು. ಈ ಚಿತ್ರದ ಯಶಸ್ಸಿನ ನಂತರ ಹೇಮಂತ್ ದಾ ಮತ್ತೆರಡು ಚಿತ್ರ ತೆಗೆದ– “ಕೋಹರಾ” ಹಾಗೂ “ಬಿನ್ ಬಾದಲ್ ಬರಸಾತ್’. ಕೋಹರಾ ಚಿತ್ರದ ಲತಾಳ ದನಿಯ “ಜುಂ ಜುಂ ಢಲತಿ ರಾತ್ ..” ಹಾಡು ಕೇಳಿದರೆ ರೋಮಾಂಚನ ಆಗುವುದು ನಿಜ.

ಲತಾ ಮದನ್ ಮೋಹನ್ ಸಂಗೀತದಲ್ಲಿ ಹಾಡಿದ “ನೈನಾ ಬರಸೆ ರಿಮಝಿಮ್ ನೈನಾ ಬರಸೆ..” ಹಾಡು ಚಿತ್ರದ ಜೀವಾಳ. ಅಂತೆಯೇ “ತು ಜಹಾಂ ಜಹಾಂ ಚಲೇಗಾ ಮೇರಾ ಸಾಯಾ ಸಾಥ್ ಹೋಗಾ..” ಹಾಡು ಆ ಸಿನೇಮಾಗಳಿಗೆ ಒಂದು ಮೆರುಗು ಕೊಟ್ಟಿದ್ದವು. ಕೊಲೆ ಯಾರು ಮಾಡಿದ್ದು, ಕೊಲೆಗಾರ ಯಾರು ಎಂದು ನಾಯಕ ಮನೋಜ್ ಕುಮಾರ್ ತಲೆಕೆಡಿಸಿಕೊಳ್ಳುತ್ತಿರುವಾಗ ಶೂನ್ಯದಿಂದ ತೇಲಿ ಬರುವ ಹಾಡು “ಗುಮನಾಮ್ ಹೈ ಕೋಯಿ ಬದನಾಮ್ ಹೈ ಕೋಯಿ..” ಪ್ರೇಕ್ಷಕನಲ್ಲಿ ನಡುಕ ಹುಟ್ಟಿಸುತ್ತದೆ. ಲತಾಳ ಕಂಠಸಿರಿ ಕೇಳಿಯೇ ಅನುಭವಿಸಬೇಕು..!

ಕೇವಲ ನಾಯಕಿ ಮಾತ್ರ ಹೀಗೆ ಅತೃಪ್ತಳಲ್ಲ. ಪ್ರೇಯಸಿಯನ್ನು ಪಡೆಯದ ನೋವಿನಲ್ಲಿಯೇ ಸಾಯುವ ನಾಯಕ ಅವನ ತೃಷೆ ಹಾಡಾಗಿ ಮಾರ್ಪಟ್ಟು ನಾಯಕಿಯನ್ನು ಕರೆಯುತ್ತದೆ..” ಆ ಜಾ ತುಜ್ ಕೊ ಪುಕಾರೆ ಆ ಜಾ ಮೈ ತೋ ಮಿಟಾ ಹುಂ ತೇರಿ ಚಾಹ್ ಮೇ..”ರಫಿಯ ಈ ಹಾಡು ನೀಲಕಮಲ್ ಚಿತ್ರದ್ದು. ಹಾಗೆಯೇ ಕಿಶೋರ್ ಹಾಡಿದ “ಮೇರೆ ಮೆಹಬೂಬ್ ಕಯಾಮತ್ ಹೋಗಿ ಆಜ್ ರುಸವಾ ತೇರಿ ಗಲಿಯೊಂಮೆ ಮೊಹಬ್ಬತ್ ಹೋಗಿ….”. ಕಿಶೋರ್ ಆ ಅತೃಪ್ತ ಆತ್ಮದ ನೋವಿಗೆ ದನಿಯಾಗಿದ್ದ.

ಕನ್ನಡದಲ್ಲೂ ಇಂತಹ ಹಾಡುಗಳಿವೆ. ನನಗೆ ನೆನಪಿಗೆ ಬರುವುದು ಮೂರು ಹಾಡುಗಳು–

“ದೇವರಕಣ್ಣು” ಚಿತ್ರದ್ದು ಪಿ. ಸುಶೀಲಾ ಹಾಡಿದ ಹಾಡು “ಓ ಇನಿಯಾ ನೀ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ…” ಹಾಗೆಯೇ ಶಂಕರನಾಗ್ ನಿರ್ದೇಶನದಲ್ಲಿನ “ಜನ್ಮಜನ್ಮದ ಅನುಬಂಧ” ಚಿತ್ರದ ಎಸ್. ಜಾನಕಿ ಹಾಡಿದ  “ತಂಗಾಳಿಯಲ್ಲಿ ನಾನು ತೇಲಿ ಬಂದೆ ನಿನ್ನನ್ನು ಪ್ರೀತಿಯಿಂದ ಸೇರಲೆಂದೆ…”  ಇನ್ನೊಂದು ಹಾಡಿದೆ ಅದೂ ಕೂಡ ಜಾನಕಿ ಅವರೇ ಹಾಡಿದ್ದು “ಈ ಗುಲಾಬಿಯು ನಿನಗಾಗಿ ಅದು ಚೆಲ್ಲುವ ಪರಿಮಳ ನಿನಗಾಗಿ…” , ಇದು “ಮುಳ್ಳಿನಗುಲಾಬಿ” ಚಿತ್ರದ್ದು. ಇನ್ನೂ ಅನೇಕ ಹಾಡುಗಳಿರಬಹುದು. ನಾ ಮರೆತಿರಬಹುದು.

ಈ ಬಗೆಯ ಹಾಡುಗಳಿಗೆ ಅದರದೇ ಆದ ಛಂದ ಇದೆ ಲಾಲಿತ್ಯ ಇದೆ. ಅಂತೆಯೇ ಅವು ಅಮರ ಗೀತೆಗಳಾಗಿವೆ.

***********

photo courtesy: thehitman-cthemusic.blogspot.com

4 ಟಿಪ್ಪಣಿಗಳು Post a comment
  1. Bindu's avatar
    Bindu
    ಮೇ 28 2011

    ದೆವ್ವಗಳ ಹಾಡಿನ ಪಟ್ಟಿಗೆ ಧನ್ಯವಾದಗಳು.

    ಉತ್ತರ
  2. shamala's avatar
    ಮೇ 28 2011

    ಉಮೇಶ್ ಅವರೆ…
    ನೀವು ನೆನಪಿಸಿರುವ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ. ಒಮ್ಮೆ ಕೇಳಿದರೆ ಸಾಕು… ಮನದಲ್ಲಿ ರಿಂಗಣಿಸುತ್ತಲೇ ಇರುವಂತಹ ರಾಗಗಳು. ದೆವ್ವಗಳು ಹಾಡುವುವೋ.. ಮನುಷ್ಯರು ಹಾಡುವುದೋ.. ಅನ್ನುವ ಮಾತಿಗಿಂತ ಅಥವಾ ಹಾಡಿನ ಸನ್ನಿವೇಶಕ್ಕಿಂತ ಹಾಡಿನ ರಾಗವೇ ಹೆಚ್ಚು ಸೆಳೆಯುತ್ತದೆನ್ನುವ ಮಾತು ಮಾತ್ರ ನಿಜ. ದೆವ್ವಗಳ ಹೆಸರಲ್ಲಾದರೂ ಸರಿಯೇ ಒಳ್ಳೆಯ ಹಾಡುಗಳನ್ನು ನೆನಪಿಸಿ ಕೊಳ್ಳುವಂತೆ ಮಾಡಿದ್ದಕ್ಕೆ ಧನ್ಯವಾದಗಳು…

    ಶ್ಯಾಮಲ

    ಉತ್ತರ
  3. pavan's avatar
    ಮೇ 28 2011

    chanagide lekana

    ಉತ್ತರ
  4. ಮತ್ತೊಂದು ಹಾಡು “ಎಂದೆಂದಿಗೂ ನಾನಿನ್ನ… ಬಿಡಲಾರೆ ಬಾ ಚೆನ್ನಾ…” ನಾ ನಿನ್ನ ಬಿಡಲಾರೆ ಚಿತ್ರದ್ದು.

    ಇಂದಿನ ಬಹುತೇಕ ಸಿನಿಮಾಗಳ ಮನುಷ್ಯರ ಹಾಡುಗಳೇ ದೆವ್ವದಹಾಡುಗಳಂತಿರುತ್ತವೆ. ಅದಕ್ಕೆ ಹೋಲಿಸಿದರೆ ಆ ದೆವ್ವದ ಹಾಡುಗಳೇ ಎಷ್ಟೋ ಚೆನ್ನ.

    ಒಳ್ಳೆಯ ಲೇಖನ.

    ಉತ್ತರ

Leave a reply to Bindu ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments