ವಿಷಯದ ವಿವರಗಳಿಗೆ ದಾಟಿರಿ

Archive for

25
ಮೇ

ಜುಜುಬಿ ವೇತನಕ್ಕೆ ಸಂಜೆವರೆಗೆ ದುಡಿತ

 – ಪವನ್ ಎಮ್. ಟಿ

ನೀವು ಸರಕಾರಿ ನೌಕರರಾಗಿದ್ದರೆ ನಮ್ಮ ಈಗಿನ ಸರಕಾರದ ಬಳಿ ವೇತನ ಹೆಚ್ಚಳ ಮಾಡಿ, ಪಿಂಚಣಿ ನೀಡಿ, ನಿವೃತಿ ವೇತನ ನೀಡಿ ಎಂದು ಭೇಡಿಕೆಯಿಟ್ಟು ಹೋರಾಟ ಮಾಡಬೇಡಿ. ನಮ್ಮ ಸರಕಾರ ನಿಮ್ಮಮೇಲೆ ಪ್ರತಿಕಾರ ತೀರಿಸಿಕೊಂಡು ಬಿಡುತ್ತದೆ ಹುಷಾರ್.

ಕೆಲವು ದಿನಗಳ ಹಿಂದೆ ಅತಿಥಿ ಉಪನ್ಯಾಸಕರು ಸಂಬಳ ಹೆಚ್ಚು ಮಾಡಬೇಕೆಂದು ಹೋರಾಟಕ್ಕೆ ಮುಂದಾದಾಗ ಸರಕಾರ ಅವರನ್ನು ಕೆಲಸದಿಂದಲೇ ತೆಗೆದು ಹಾಕುವ ನಿರ್ಧಾರಕ್ಕೆ ಬಂದು ಅವರನ್ನು ಮುಂದೆ ಯಾವುದೇ ಭೇಡಿಕೆಯನ್ನು ಸಲ್ಲಿಸದಂತೆ ಕೈ ಬಾಯಿ ಕಟ್ಟಿ ಹಾಕಿತು. ನೋಡಿ ಇದು ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರಕಾರ ಮಾಡೋ ಕೆಲಸ.

ಈಗ ಸರಕಾರ ಪ್ರತಿಕಾರ ತೀರಿಸಿ ಕೊಳ್ಳುತ್ತಿರುವುದು ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಮತ್ತು ಪುಟ್ಟ ಮಕ್ಕಳ ವಿರುದ್ಧ. ಪಾಪ ಕಾರ್ಯ ಕರ್ತೆಯರು ಸರಕಾರ ಕೊಡೋ ಜುಜುಬಿ ಗೌರವ ವೇತನ ಹೆಚ್ಚಳ, ನಿವೃತಿ ವೇತನ, ಪಿಂಚಣಿಗಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಕಾರ್ಯಕರ್ತೆಯರ ಅನೇಕ ವರ್ಷಗಳ ಹೋರಾಟದ ಶ್ರಮದಿಂದ ಸರಕಾರ ದೊಡ್ದ ಮನಸ್ಸುಮಾಡಿ ಅಲ್ಪ ಸ್ವಲ್ಪ ಗೌರವ ವೇತನವನ್ನು ಹೆಚ್ಚಿಸಿದೆ. ನಿವೃತಿ ವೇತನವನ್ನು  ಕಾರ್ಯಕರ್ತೆಯರಿಗೆ ೬೦ ೦೦೦ ಸಹಾಯಕರಿಗೆ ೩೦ ೦೦೦ ನೀಡಲು ಮುಂದಾಗಿದೆ. ಇದರಲ್ಲಿ ಎಷ್ಟುದಿನ ಬದುಕು ನಡೆಸಬಹುದೆಂದು ನಿಮಗೇ ಗೊತ್ತು.

ಸರಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ನಿವೃತ್ತಿ ವೇತನದ ಭೇಡಿಕೆ ಸಲ್ಲಿಸಿರುವುದು ಒಬ್ಬರಿಗೆ ೫ಲಕ್ಷ ನೀಡಿ ಎಂದು. ಇದರಲ್ಲಿ ಸರಕಾರ ಒಂದು ಲಕ್ಷದಷ್ಟು ಹಣವನ್ನಾದರೂ ನೀಡಿದ್ದರೆ ಸರಕಾರ ಕೊಡುಗೆಯನ್ನು ಸ್ಮರಿಸಬಹುದಿತ್ತು. ಸರಕಾರ ಎಲ್ಲಿಯಾದರೂ ಇಷ್ಟು ಹಣವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿದರೆ ಕ್ರಿಕೇಟ್ ಆಟಗಾರರಿಗೆ ಮತ್ತು ಮಠಗಳಿಗೆ ಹಣ ಬಿಡುಗಡೆ ಮಾಡಲು ಕಷ್ಟವಾಗುದಿಲ್ಲವೇ ಪಾಪ ಅವರೆಲ್ಲರು ಕಡು ಬಡವರಲ್ಲವೇ. ಅದಕ್ಕೆ ಬಿಡುಗಡೆ ಮಾಡಲಿಲ್ಲವೇನೋ.

ನಮ್ಮ ಸರಕಾರ ಮಾಡಿರೋ ಮಹತ್ವದ ಕೆಲಸವಾದರೂ ಏನು ಗೊತ್ತಾ?

ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹಠ ಬಿಡದೆ ಹೋರಾಟವನ್ನು ಮಾಡಿ ಸರಕಾರಾರದಿಂದ ಅಲ್ಪ ಸ್ವಲ್ಪ ಅನುದಾನವನ್ನು ಪಡೆದನಂತರ, ಸರಕಾದವರು ಇದಕ್ಕೆ ಏನಾದರೂ ಪ್ರತಿಕಾರ ತೀರಿಸಿಕೊಳ್ಳಬೇಕೆಂಬ ಉದ್ದೇಶದಿಂದಲೇ ಏನೋ ಸಂಜೆಯವರೆಗೆ ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಸಮಯವನ್ನು ವಿಸ್ತರಿಸಿದೆ. ೮ ಗಂಟೆ ಕೆಲಸಮಾಡಿಸುವ ಮೂಲಕ ಕಾರ್ಮಿಕ ಕನಿಷ್ಟ ವೇತನ ಕಾನೂನಿನಡಿ ಅಂಗನವಾಡಿ ಕಾರ್ಯಕರ್ತೆಯರನ್ನು ತರುವ ಪ್ರಯತ್ನ ಇದಾಗಿರ ಬಹುದು ಆದರೆ ಸರಕಾರ ಈ ಎಲ್ಲಾ ನಿಯಮಗಳಿಂದ ಮಕ್ಕಳ ಮೇಲೆ ಆಗುವ ಪರಿಣಾಮವೇನು ಎಂಬುದನ್ನು ಸ್ವಲ್ಪವೂ ಯೋಚನೆ ಮಾಡದೆ ಈ ರೀತಿಂii ಕ್ರಮ ಜಾರಿಗೆ ತಂದಿರುವುದು ವಿಪರ್ಯಾಸ. ಮತ್ತಷ್ಟು ಓದು »

24
ಮೇ

ಬದಲಾವಣೆ ಬಯಸುವುದಾದರೆ ಬಸವನಗುಡಿಗೆ ಬನ್ನಿ…

– ರಾಕೇಶ್ ಶೆಟ್ಟಿ

ಬಸವನಗುಡಿಗೆ ಬಂದ ತಕ್ಷಣ ಬದಲಾವಣೆಯಾಗುತ್ತಾ? ಅನ್ನುವ ಪ್ರಶ್ನೆ ನಿಮ್ಮದಾದರೆ ನನ್ನ ಉತ್ತರ ’ಇಲ್ಲ’! ಅಂತಲೇ. ಭ್ರಷ್ಟಚಾರ ಅನ್ನುವ ಬ್ರಹ್ಮ ರಾಕ್ಷಸನ ವಿರುದ್ಧ ಅಣ್ಣ ಹಜ಼ಾರೆ ನೇತೃತ್ವದಲ್ಲಿ ಶುರುವಾಗಿರುವ ಈ ಹೋರಾಟವೇ ಅಂತಿಮವಲ್ಲ.ಇದು ಆರಂಭವಷ್ಟೆ ಅನ್ನುವುದು ನನ್ನ ಅಭಿಪ್ರಾಯ.

ಅಂತಿಮವಾಗುವುದಾದರೂ ಹೇಗೆ ಹೇಳಿ, ಭ್ರಷ್ಟಚಾರ ಅಂದಾಕ್ಷಣ ಎಲ್ಲರ ಕಣ್ಣು ಮೊದಲು ಬೀಳುವುದೂ ಕಳ್ಳ(ಎಲ್ಲ ಅಲ್ಲ) ರಾಜಕಾರಣಿಗಳ ಮೇಲೆ,ಆಮೇಲೆ ಸರ್ಕಾರಿ ಕಛೇರಿ ಮತ್ತು ಅಧಿಕಾರಿಗಳ ಮೇಲೆ.ತಪ್ಪೇನಿಲ್ಲ ಬಿಡಿ…! ಭ್ರಷ್ಟಚಾರ ಅನ್ನೋ ಪಿರಮಿಡ್ನ ತುತ್ತ ತುದಿಯಲ್ಲಿರೋ ಅವರ ಮೇಲೆ ಎಲ್ಲರ ಕಣ್ಣು ಬೀಳುವುದು ಸಹಜ.ಆದರೆ, ’ನಾವುಗಳೆಷ್ಟು ಸಾಚಾ?’ ಅಂತ ನಮ್ಮನ್ನೇ ನಾವ್ಯಾವತ್ತಾದರೂ ಕೇಳಿಕೊಂಡಿದ್ದೇವೆಯೇ?

ಮತ್ತಷ್ಟು ಓದು »

23
ಮೇ

ನೀವೂ ಭ್ರಷ್ಟಚಾರದ ವಿರೋಧಿಗಳೇ? ಹಾಗಿದ್ದರೆ, ಬಸವನಗುಡಿಗೆ ಬನ್ನಿ…

23
ಮೇ

ನರೇ೦ದ್ರ ಮೋದಿ ಎ೦ಬ ಭಾರತದ ಚಲಾವಣೆಯ ನಾಣ್ಯ !!

ರಾಘವೇಂದ್ರ ನಾವಡ ಕೆ ಎಸ್

ಎಲ್ಲರೂ ಮಹಾನ್ ವ್ಯಕ್ತಿಗಳಾಗಲು ಸಾಧ್ಯವಿಲ್ಲ.. ಎಲ್ಲರೂ ಮಹಾತ್ಮರಾದರೆ ಅತ೦ತ್ರರಾಗೋರ್ಯಾರು? ಎ೦ಬ ಉಡಾಪೆಯ ಮಾತೊ೦ದಿದೆ! ಸೂಕ್ತ ಸಮಯದಲ್ಲಿ ಸುಪ್ತವಾಗಿ ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಿ, ಜನ ಕಲ್ಯಾಣಕ್ಕಾಗಿ ಚಿ೦ತಿಸುವವರೆಲ್ಲಾ ಮಹಾತ್ಮರೇ ಆಗುತ್ತಾರೆ!

ಈ ಪ್ರಸ್ತುತ ಲೇಖನಕ್ಕೆ ಮತ್ತೊಮ್ಮೆ ನರೇ೦ದ್ರ ಮೋದಿಯೇ ಕಥಾವಸ್ತು! ನಿನ್ನೆ ನನ್ನ ಆತ್ಮೀಯ ಪ್ರಸ್ಕಾ ಕಳುಹಿಸಿದ ಮೊಬೈಲ್ ಸ೦ದೇಶವೇ ಮತ್ತೊಮ್ಮೆ  ನನ್ನ ಲೇಖನಕ್ಕೆ ಆಧಾರವಾಗಿದೆ. ಮೋದಿ ಸರ್ಕಾರದ ಮತ್ತೊ೦ದು ಸಾಧನೆಯನ್ನೇ ಈ ಲೇಖನದಲ್ಲಿ  ಬಿ೦ಬಿಸುತ್ತಿದ್ದೇನೆ. ಈ ಹಿ೦ದೆ ನರೇ೦ದ್ರ ಮೋದಿಯವರ ಬಗ್ಗೆ  ಇಷ್ಟಕ್ಕೂನರೇ೦ದ್ರ ಮೋದಿ ಮಾಡಿರುವ ತಪ್ಪಾದರೂ ಏನು? ಎ೦ಬ ಲೇಖನದಲ್ಲಿ ಗುಜರಾತ್ ಯಶೋಗಾಥೆಯನ್ನು ಸಾದ್ಯ೦ತವಾಗಿ ವಿವರಿಸುವ ಪ್ರಯತ್ನ ಮಾಡಿದೆ.

ಕಣ್ಣಿಗೆ ಕ೦ಡ, ಕೇಳಿ ತಿಳಿದ ಒಳ್ಳೆಯ ವಿಚಾರಗಳ ಬಗ್ಗೆ ಹಾಗೂ ಒಳ್ಳೆಯ ವ್ಯಕ್ತಿಗಳ ಬಗ್ಗೆ ನಾನು ಯಾವಾಗಲೂ ಪ್ರಚಾರ ಮಾಡುತ್ತಲೇ ಇರುತ್ತೇನೆ! ನನ್ನ ಇ೦ಥ ಸ೦ತಸಕ್ಕೆ ಕಾರಣ ಏನೆ೦ದು ಕೇಳುವಿರೇ? ಹಾಗಾದರೆ ಕೇಳಿ: ಗುಜರಾತ್ ಸರ್ಕಾರವನ್ನು “ಪ್ರಪ೦ಚದ ಎರಡನೇ ಅತ್ಯುತ್ತಮ ರಾಜ್ಯ ಸರ್ಕಾರ“ ವೆ೦ದು ವಿಶ್ವಸ೦ಸ್ಥೆಯ ಅ೦ತರಾಷ್ಟ್ರೀಯ ವ್ಯವಹಾರಗಳ ಕಾರ್ಯಲಯ ಘೋಷಿಸಿದೆ! ಇದಕ್ಕಿ೦ತಾ ಮತ್ತೊ೦ದು ಸ೦ತಸದ ಸ೦ಗತಿ ಭಾರತೀಯರಾದ ನಮಗೆ ಪ್ರಸ್ತುತ ಬೇರೇನಿದೆ? ನರೇ೦ದ್ರ ಮೋದಿ ಈಗ ಭಾರತದ ಚಲಾವಣೆಯ ನಾಣ್ಯ!!   ಜನತೆ ರಾಜಕೀಯದ ಬಗ್ಗೆ ಚರ್ಚಿಸುವಾಗ ಮೋದಿ ಯವರ  ಬಗ್ಗೆ ಅವರು ಗುಜರಾತಿನಲ್ಲಿ ಆರ೦ಭಿಸಿರುವ “ಅಭಿವೃಧ್ಧಿಯ ಶಕೆ“ ಯ ಬಗ್ಗೆ ಪ್ರಸ್ತಾಪವೆತ್ತದೆ ಇರಲಾರರು! ಮತ್ತಷ್ಟು ಓದು »
23
ಮೇ

ಅಮರನಾಥ ಯಾತ್ರೆಯ ಪ್ರಾರಂಭ

ಶ್ರೀಹರ್ಷ ಸಾಲಿಮಠ

ಅಮರನಾಥ ಯಾತ್ರೆ ಮತ್ತೆ ಶುರುವಾಗಿದೆ. ಅಲ್ಲಿ ಇಲ್ಲಿ ರಿಸರ್ಚು ಮಾಡುವವರಿಗಿಂತ ಹೋಗಿಬಂದವನ ಬಾಯಲ್ಲೇ ಕೇಳಿದರೆ ವಿವರವಾದ ಐಡಿಯಾ ಸಿಗುತ್ತದೆ! ವಾಟ್ ಎನ್ ಐಡಿಯಾ ಸರ್‍ ಜಿ!

ಅಮರನಾಥಕ್ಕೆ ಹೋಗುವವರು ಮೊದಲು ಪರವಾನಗಿ ಪಡೆಯಬೇಕು. ಪರವಾನಗಿ ಜೆ&ಕೆ (ಜಮ್ಮು ಕಾಶ್ಮೀರ) ಬ್ಯಾಂಕ್ ನಲ್ಲಿ ದೊರೆಯುತ್ತದೆ. ಕರುನಾಡಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಈ ಬ್ಯಾಂಕಿದೆ. ಬೆಂಗಳೂರಲ್ಲಿ ಅವೆನ್ಯೂ ರಸ್ತೆಯ ಕೊನೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಬಳಿ ಜಮ್ಮು ಕಾಶ್ಮೀರ ಬ್ಯಾಂಕಿದೆ. ದಿನಕ್ಕೆ ಪರಿಮಿತ ಜನರಿಗೆ ಮಾತ್ರ ಪರವಾನಗಿ ಕೊಡುತ್ತಾರೆ. ಇವತ್ತು ಪರವಾನಗಿ ಪಡೆದರೆ ಜುಲೈಗೆ ಸಿಗಬಹುದು. ಪರವಾನಗಿ ಸಿಕ್ಕ ದಿನವೇ ಗುಹೆಯ ಬಳಿ ಹೋಗಬೇಕೆಂದು ಹೇಳುತ್ತಾರಾದರೂ ಅಮರನಾಥದಲ್ಲಿ ಅಷ್ಟು ಕಟ್ಟುನಿಟ್ಟಿನ ನಿಯಮವಿರಲಿಲ್ಲ.
ಯಾತ್ರೆಗೆ ಹೊರಡಲು ಮದ್ಯಮವರ್ಗದವರಿಗೆ ರೈಲು ಒಳ್ಳೆಯ ಮಾರ್ಗ. ಪುಣೆಯಿಂದ ಜಮ್ಮುವಿಗೆ ನೇರ ರೈಲು ಇದೆ. ಇಲ್ಲವೇ ಹುಬ್ಬಳ್ಳಿ ಅಥವಾ ಬೆಂಗಳೂರಿನಿಂದ ಹೊಸದೆಹಲಿ ತಲುಪಿ ಹಳೆ ದೆಹಲಿ ರೇಲ್ವೇ ನಿಲ್ದಾಣದಿಂದ ಜಮ್ಮು ತಲುಪಬಹುದು (ಹೊಸ ದೆಹಲಿ ಯಿಂದ ಹಳೆದೆಹಲಿ ರೇಲ್ವೇ ನಿಲ್ದಾಣಕ್ಕೆ ಹೋಗಬೇಕು). ದೆಹಲಿಯಿಂದ ಜಮ್ಮು ಸುಮಾರು ಹದಿನೈದು ತಾಸುಗಳ ರೈಲು ಪಯಣ. ಸರ್ಕುಲಾರ್‍ ಟಿಕೆಟ್ ಕಾಯ್ದಿರಿಸಿದರೆ ಟಿಕೆಟ್ ದರದಲ್ಲಿ ರಿಯಾಯಿತಿ ಸಿಗುತ್ತದೆ.
ಜಮ್ಮು ಕಾಶ್ಮೀರದಲ್ಲಿ ಆ ರಾಜ್ಯದ ಪ್ರಿಪೇಡ್ ಸಿಮ್ ಕಾರ್ಡುಗಳನ್ನು ಹೊರತುಪಡಿಸಿ ಬೇರೆ ರಾಜ್ಯದ ಪ್ರಿಪೇಡ್ ಸಿಮ್ ಕಾರ್ಡುಗಳು ಕೆಲಸ ಮಾಡುವುದಿಲ್ಲ. ಎಲ್ಲ ರಾಜ್ಯದ ಎಲ್ಲ ಪೋಸ್ಟ್ ಪೇಡ್ ನೆಟ್ವರ್ಕ್‌ಗಳು ಕೆಲಸ ಮಾಡುತ್ತವಾದರೂ ಬಿ ಎಸ್ ಎನ್ ಎಲ್ ಪೋಸ್ಟ್ ಪೇಡ್ ಉತ್ತಮವಾದದ್ದು. ಮತ್ತಷ್ಟು ಓದು »

21
ಮೇ

ಪಾಕಿಸ್ತಾನದ ಭೂಪಟ 17.05.2011ರ ಕನ್ನಡಪ್ರಭದಲ್ಲಿ…

– ಪಿ.ಎಸ್.ರಂಗನಾಥ

ಒಂದು ದೇಶದ ಭೂಪಟ ಅಂದರೆ  ಅದರ ಭೌಗೋಳಿಕ ವಿನ್ಯಾಸ ಹಾಗು ಅದರ ಸರಿಹದ್ದು ಗಳನ್ನು ತೋರಿಸುವ ಚಿತ್ರ ಅಂತ ನಮ್ಮೆಲ್ಲರಿಗು ಗೊತ್ತಿರುವ ವಿಷಯ. ಪ್ರತಿಯೊಂದು ದೇಶವೂ ತನ್ನದೇ ಆದ ಒಂದು ನಕ್ಷೆಯನ್ನು ಸಿದ್ದಪಡಿಸಿಕೊಂಡು ಅಂತರಾಷ್ಟ್ರೀಯವಾಗಿ ತನ್ನನ್ನು ಗುರುತಿಸಿಕೊಳ್ಳುತ್ತದೆ. ಸದ್ಯಕ್ಕೆ ನಮ್ಮ ದೇಶಕ್ಕೆ ಬಂದರೆ ನಮ್ಮ ಕೆಲವು ಪ್ರಾಂತ್ಯಗಳು ಪಾಕಿಸ್ತಾನ ಹಾಗು ಚೀನಾದ ವಶದಲ್ಲಿದ್ದರು ನಾವುಗಳು ನಮ್ಮ ದೇಶದ ಗಡಿಯನ್ನು ಹಾಕಿ ನಾವು ಗುರುತಿಸಿಕೊಂಡಿದ್ದೇವೆ ಹಾಗು ಸರಕಾರ ಅದನ್ನು ಒಪ್ಪಿ ಅಧಿಕೃತವಾಗಿ ಮುದ್ರೆ ಹಾಕಿದೆ ಜತೆ ರಾಷ್ಟ್ರದ ಪ್ರಜೆಗಳಿಗೆ ಸಹ ಒಪ್ಪಿಗೆ ಯಾಗಿದೆ. ಯಾವುದೇ ಪುಸ್ತಕಗಳಲ್ಲಿ, ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಹಾಗು ರಾಷ್ಟ್ರದ ಮೂಲೆ ಮೂಲೆ ಗಳಲ್ಲಿ ಮುದ್ರಿತವಾಗಿ ಪ್ರಸಾರ ವಾಗುತ್ತಿರುವುದು POK (Pak Occupied Kashmir) ಹಾಗು ಚೈನಾ ಆಕ್ರಮಿತ ಕೆಲ ಭಾಗವನ್ನು ಒಳಗೊಂಡ ಭೂಪಟ ಮಾತ್ರ. ಆದರೆ ಪಾಕಿಸ್ತಾನ POK ಪ್ರಾಂತ್ಯವನ್ನು ತನ್ನ ಅಧಿಕೃತ ನಕ್ಷೆ ಯಾಗಿ ಉಪಯೋಗಿಸುತ್ತಿದೆ. ಅದನ್ನು ನಮ್ಮ ರಾಷ್ಟ್ರದವರು ಒಪ್ಪುವುದಿಲ್ಲ ಹಾಗು ಆ ಪ್ರಾಂತ್ಯ ಪಾಕಿಸ್ತಾನದ ವಶದಲ್ಲಿದ್ದರು ಸಹ ಅದಕ್ಕೆ ಅಂತರಾಷ್ಟ್ರೀಯ ಮನ್ನಣೆ ಇನ್ನು ದೊರಕಿಲ್ಲ. ಅದು disputed area ಅಂತ ಬೇರೆ ದೇಶದವರು dotted / dashed line ನಲ್ಲಿ ತೋರಿಸುತ್ತಾರೆ.

ನಾನು ಕಳೆದ ೪ ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತಿದ್ದೀನಿ, ಸಾಮನ್ಯವಾಗಿ ಭಾರತದ ಭೂಪಟ, ರಾಷ್ಟ್ರದ ಲಾಂಛನ, ಭಾವುಟ ಗಳನ್ನು ನೋಡಿ ನನಗೆ ಬಹಳ ಖುಶಿ ಯಾಗುತ್ತೆ. ಯಾವುದಾದರು ಕಛೇರಿ ಗಳಲ್ಲಿ ಹಾಕಿರುವ ಪ್ರಪಂಚದ ಭೂಪಟ ದಲ್ಲಿ ನಮ್ಮ ಭಾರತ ದೇಶವನ್ನು ಗಮನಿಸುವುದು ನನ್ನ ಅಭ್ಯಾಸ, ಒಂದು ವೇಳೆ ಭಾರತದ ಭೂಪಟದಲ್ಲಿ ಏನಾದರು ವ್ಯತ್ಯಾಸ ಗಳಿದ್ದರೆ, ಅಲ್ಲಿರುವ ಭಾರತೀಯ ಸಿಬ್ಬಂದಿ ಯವರ ಗಮನಕ್ಕೆ ತರುವ ಪ್ರಯತ್ನ ಮಾಡಿ ಬದಲಾಯಿಸಲು ಯತ್ನಿಸುವೆ. ಕೆಲವರು ನನ್ನ ವಿಚಾರಕ್ಕೆ ಸಹಮತ ವ್ಯಕ್ತ ಪಡಿಸಿ ವಿಷಾದ ವ್ಯಕ್ತ ಪಡಿಸುದ್ದುಂಟು. ಇನ್ನು ಕೆಲವರು, ಇಲ್ಲಿ ಸಿಗೋದೆ ಇದೇ ಮ್ಯಾಪ್ ಇದು ಬಿಟ್ರೆ ಬೇರೆ ವಿಧಿಯಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತಿದ್ದರು, .

ಕನ್ನಡಪ್ರಭ ೧೭.೦೫.೨೦೧೧ ಪುಟ ೯ರಲ್ಲಿ ಪ್ರಕಟವಾಗಿರುವ ಲೇಖನ “ದಾವುದ್ ನ ಮುಗಿಸುವ ಗುಂಡು ಸಿದ್ಧವಾಗಿಲ್ಲವೇ? ರಲ್ಲಿ ಮುದ್ರಿತವಾಗಿರುವ ಪಾಕಿಸ್ತಾನದ ಭೂಪಟ, ನಮ್ಮ ದೇಶದ ಕಾಶ್ಮಿರದ ಒಂದು ಭಾಗವನ್ನು ಅದರಲ್ಲಿ ಒಳಗೊಂಡಿದೆ.

ಮತ್ತಷ್ಟು ಓದು »

21
ಮೇ

ಗಜಮುಖ ಮೃದ್ವಸ್ತಿ ಅಥವಾ ಎಲಿಫೆಂಟ್ ಶಾರ್ಕ್ ಮೀನು

– ಆಜಾದ್

ಗೆಳೆಯರೇ ಮತ್ತು ವಿಜ್ಞಾನಾಸಕ್ತರೇ, ಶಾರ್ಕ್ (shark series) ಸರಣಿಯಲ್ಲಿ ಈ ಕಂತಿನಲ್ಲಿ elephant shark ಗಜಮುಖ ಶಾರ್ಕ್ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ.
ಮೊದಲೇ ತಿಳಿಸಿರುವಂತೆ ಶಾರ್ಕ್ ಮೀನು ಕಶೇರುಕ (vertebrates) ಮತ್ತು ಅಕಶೇರುಕಗಳ (invertebrates) ನಡುವಣ ಬಹು ಮುಖ್ಯ ಕೊಂಡಿ. ಹಾಗಾಗಿ ಪ್ರಾಣಿಜೀವ ಸರಣಿಯ ವಂಶವಾಹಿ (gene) ಗಳ ಸಾರಾಂಶ ಮಾಹಿತಿಯನ್ನು ಹೊಂದಿರುವ ಸಾಧ್ಯತೆಗಳು ಹೆಚ್ಚಾಗಿದ್ದು ಶಾರ್ಕ್ ಗಳ ಅಧ್ಯಯನ ಮಾನವನ ವಂಶವಾಹಿಗಳ ವಿಸ್ತೃತ ಮಾಹಿತಿಯನ್ನು ಕಂಡುಹಿಡಿಯುವಲ್ಲಿ ಬಹು ಉಪಯೋಗಿ ಆಗಬಹುದೆಂದು ಈ ದಿಶೆಯಲ್ಲಿ ಸಮ್ಶೋಧನೆಗಳು ಪ್ರಗತಿಯಲ್ಲಿವೆ.
ಈ ನಿಟ್ಟಿನಲಿ ಅಂದಿನ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ (ಈಗಿನ ಬಿಜಾಪುರದ ಪಶು ಸಂಗೋಪನೆ ಮತ್ತು ಮತ್ಸ್ಯ ಶಾಸ್ತ್ರ ವಿಶ್ವವಿದ್ಯಾಲಯದ) ಅಧೀನದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಮೀನುಗಾರಿಕಾ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿಶೇಷತಃ ನನಗೆ ಹೆಮ್ಮೆಯೆನಿಸುವ ನಮ್ಮ ಸೀನಿಯರ್  ಕನ್ನಡದವರಾದ ಡಾ. ಬೈರಪ್ಪ ವೆಂಕಟೇಶ್ ಸಿಂಗಪೂರ್ ನ  ಸಂಶೋಧನಾ ಸಂಸ್ಥೆಯೊಂದರಲ್ಲಿ ಉನ್ನತ ಸಂಶೋಧನೆಯಲ್ಲಿ ತೊಡಗಿದ್ದಾರೆ.  (http://esharkgenome.imcb.a-star.edu.sg/). ವೈದ್ಯಕೀಯ ಕ್ಷೇತ್ರದ ನೊಬೆಲ್ ವಿಜ್ಞಾನಿ ಬೆನ್ನರ್ ರವರ ಜೊತೆ ಕೆಲಸಮಾಡುವ ಇವರು ಗಜಮುಖ ಮೀನಿನ ಸಂಪೂರ್ಣ ವಂಶವಾಹಿನಿ ಜಾಲವನ್ನು ಬಿಡಿಸಲು ಹೊರಟಿದ್ದಾರೆ. ಈ ಮಾಹಿತಿ ಮಾನವನ ಹಲವಾರು ವೈದ್ಯಕೀಯ ಸವಾಲುಗಳಿಗೆ ಪರಿಹಾರ ಹುಡುಕುವಲ್ಲಿ ಸಹಾಯಕವಾಗಬಹುದು ಎನ್ನುವ ಸಾಧ್ಯತೆ ಇದೆ.
20
ಮೇ

ನಂಬಿಕೆ ಎಂಬ ಹುತ್ತದೊಳಗೆ “ಕೂರಿಯರ‍್” ಸಂಸ್ಥೆಗಳೆಂಬ ಹಾವುಗಳು.

-ರವಿ ಮೂರ್ನಾಡು

          ವ್ಯವಸ್ಥೆ ಹೇಗಿರುತ್ತೆ ಅಂದರೆ,ಸತ್ತವನನ್ನು ಹುಡುಕಿಕೊಂಡು ಪತ್ರ ಬರುತ್ತೆ.ಮುಂದೆ ಪ್ರೇತಾತ್ಮಗಳೂ ಪತ್ರ ಓದುವ ಕಾಲ ಬಂದಾಗ ಕೂರಿಯರ‍್ ಮತ್ತು ಅಂಚೆ ಇಲಾಖೆಗಳಲ್ಲಿ ಪತ್ರ ಕಳುಹಿಸಲು” ಮುಂಗಡ ಬುಕ್ಕಿಂಗ್‍” ವ್ಯವಸ್ಥೆ ಬರಬಹುದೇನೋ. 2000 ನೇ ಇಸವಿಗೆ ಕಳುಹಿಸಿದ ಪತ್ರ ಹತ್ತು ವರ್ಷಗಳ ನಂತರ 2010 ರಲ್ಲಿ ಮನೆ ಬಾಗಿಲಿನಲ್ಲಿ ಬಂದು ನಗುತ್ತಿರುತ್ತದೆ. ಹಾಗಿದೆ ನಮ್ಮ ಪತ್ರ ವಿಲೇವಾರಿಯ ಸಿನೇಮಾ ಕಾರ್ಯಕ್ರಮ…! ನಗು ಬರಬಹುದು..ಜೊತೆಗೆ ಮಡುಗಟ್ತುತ್ತವೆ ವಿಷಾಧದ ಮೋಡ..!

ಇದಕ್ಕೆ ಭಾರತೀಯ ಅಂಚೆ ಇಲಾಖೆಯಲ್ಲಿ ಬೇಕಾದಷ್ಟು ಪಟ್ಟಿಗಳು ಸಿಗುತ್ತವೆ.ಹಿಂದಿನ ಕಾಲದಲ್ಲಿ ಹೀಗೆ ಇಂತಹ ಸರಕಾರಿ ಸಾಮ್ಯದ ಇಲಾಖೆಗಳು ಪತ್ರಗಳ ಬಟಾವಾಡೆ ಮಾಡುವಾಗ ಬೆಳಕೇ ಇಲ್ಲದ ಗ್ರಾಮಗಳಲ್ಲಿ ಅಂಚೆ ಕಚೇರಿಗಳನ್ನು ತೆರೆದು ಸಾರ್ವಜನಿಕರಿಗೆ ಒಂದು ” ಲಿಂಕ್‍” ಕೊಟ್ಟಿತ್ತು. ಅಂಚೆ ಇಲಾಖೆಯಲ್ಲಿ ಕೆಲವು ದೌರ್ಬಲ್ಯಗಳಿವೆ. ಅದನ್ನು ಸದುಪಯೋಗಿಸಿಕೊಂಡವರು ” ಕೂರಿಯರ‍್” ಎಂಬ ಜಗತ್ತನ್ನು ತೆರೆದ ಈ ಹೊಟ್ಟೆಬಾಕ  ಖಾಸಗಿ ಸಂಸ್ಥೆಗಳು.

ಕೂರಿಯರ‍್ ಸಂಸ್ಥೆಗಳ ಕಣ್ಣು ಕೆಂಪಾಗಬಹುದು.ಯಾಕೆ ಹೀಗೆ ಬರೀತಾ ಇದ್ದಾರೆ ಅಂತ, ಅದು ಒಂದು ಮಗುವಿನ ಹುಟ್ಟುಹಬ್ಬದ “ಕೂರಿಯರ‍್ ಕತೆ “.ಆ ಹಬ್ಬದ ಸುಸಂದರ್ಭವನ್ನು ಕತ್ತಲೆಯಲ್ಲಿ ಮುಳುಗಿಸಿದ್ದು ಈ ಕೂರಿಯರ‍್  ಎಂಬ ಬಹು ಸಂಖ್ಯಾತ ಸಂಸ್ಥೆಗಳು.ಇಂದಿನ ವ್ಯವಹಾರಿಕ ಪ್ರಪಂಚದಲ್ಲಿ ಎಷ್ಟೆಲ್ಲಾ ಕೂರಿಯರ‍್ ಸಂಸ್ಥೆಗಳಿವೆಯೂ ಅಲ್ಲೆಲ್ಲಾ ಇಂತಹ ಸಿನೇಮಾ ಮಾದರಿಯ ಉದಾಹರಣೆಗಳು ಸಿಗುತ್ತವೆ.ಸಿಗಬೇಕಾಗಿದ್ದು ಯಾರಿಗೂ, ಸಿಗೋದು ಯಾರಿಗೂ .. ಹುಚ್ಚರ ಕೂರಿಯರ‍್ ಸಂತೆಯಲಿ ಅಚಾನಕ್‍ ಅದೃಷ್ಟದ ಪಾರ್ಸೆಲ್‍ ಸಿಕ್ಕಿದವನಿಗೆ ಹಬ್ಬ…! ಮತ್ತಷ್ಟು ಓದು »

20
ಮೇ

ನವರಸಪುರ ಉತ್ಸವ ಹಾಗೂ ಕನ್ನಡ ಮತ್ತು ಸಂಸ್ಕೃತಿ.!

ಮಹೇಶ.ಎಮ್.ಆರ್

ಕಳೆದ ಕೆಲವು ವರುಶಗಳಿಂದ ಸ್ಥಗಿತಗೊಂಡಿದ್ದ  ನವರಸಪುರ ಉತ್ಸವ ಮತ್ತೆ ಈ ವರುಶ ಹಮ್ಮಿಕೊಳ್ಳಲಾಗಿದ್ದು ಸಂತೋಶದ ವಿಶಯ ಮತ್ತು ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಜಾಪುರದ ಇತಿಹಾಸ, ಸಂಸ್ಕೃತಿ, ಕಲೆ, ಸಾಹಿತ್ಯ, ಪರಂಪರೆಯನ್ನು ಹೊರಜಗತ್ತಿಗೆ ತೋರಿಸುವಲ್ಲಿ, ಆ ಮೂಲಕ ನಾಡಿನ ಜನರಲ್ಲಿ ತಮ್ಮೂರಿನ ಬಗ್ಗೆ ಹೆಮ್ಮೆ ಮೂಡಿ, ನಾಡು-ನುಡಿಯ ಚೌಕಟ್ಟಿನಲ್ಲಿ ಅವರನ್ನು ಒಗ್ಗೂಡಿಸಲು ಇಂತಹ ಉತ್ಸವಗಳು ಸಹಕಾರಿಯಾಗುತ್ತವೆ. ಈ ಬಾಗದ ಸ್ಥಳೀಯ ಕಲಾವಿದರಿಗೂ ತಮ್ಮ ಪ್ರತಿಬೆಯನ್ನು ಪರಿಚಯಿಸಲು ಇದೊಂದು ಒಳ್ಳೆಯ ವೇದಿಕೆ.

ಈ ಉತ್ಸವವನ್ನು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಸಹಯೋಗದಲ್ಲಿ ನಡೆಸಲಾಗುತ್ತಿರುವುದರಿಂದ ಉತ್ಸವದಲ್ಲಿ ನಮ್ಮ ಕನ್ನಡ ಮತ್ತು ಸಂಸ್ಕೃತಿ, ಇತಿಹಾಸ, ಪರಂಪರೆಗೆ ಸಂಬಂದಿಸಿದ ಕಾರ್ಯಕ್ರಮಗಳಿಗೆ ಮಾತ್ರ ಸ್ಥಾನ ಇರಬೇಕಾಗಿರುವುದು ಸ್ವಾಬಾವಿಕ. ಉತ್ಸವದಲ್ಲಿ ವೈಬವೀಕರಣಕ್ಕಿಂತ ಹೆಚ್ಚಾಗಿ ನಮ್ಮತನ ಕಾಣಿಸಬೇಕು ಮತ್ತು ಹೊರಜಗತ್ತಿಗೆ ಪರಿಚಯಿಸಬೇಕು. ಈಗ ಸಿದ್ದಪಡಿಸಲಾಗಿರುವ ಕಾರ್ಯಕ್ರಮಗಳ ಪಟ್ಟಿಯಲ್ಲಿ ಅವಿಬಜಿತ ವಿಜಾಪುರ ಜಿಲ್ಲೆಯ ಮತ್ತು ಸುತ್ತ ಮುತ್ತಲಿನ ಬೆಳಗಾವಿ, ದಾರವಾಡ, ರಾಯಚೂರು ಜಿಲ್ಲೆಯ ಅನೇಕ ಕಲಾವಿದರಿಗೆ ಇಲ್ಲಿ ವೇದಿಕೆ ಕಲ್ಪಿಸಿದ್ದು ಸಂತೋಶದ ವಿಶಯ. ಇದರ ಮದ್ಯೆ ಕೊಂಚ ಅಸಮಾದಾನ ಆಗಿದ್ದು, ನವರಸಪುರ ಉತ್ಸವಕ್ಕೆ ಅಥವಾ ವಿಜಾಪುರಕ್ಕೆ ಅಥವಾ ಕರ್ನಾಟಕಕ್ಕೆ ಸಂಬಂದವಿರದ ಅನೇಕ ಕಾರ್ಯಕ್ರಮಗಳಿಗೆ ಇಲ್ಲಿ ಜಾಗ ಕಲ್ಪಿಸಿದ್ದು. ಮತ್ತಷ್ಟು ಓದು »
19
ಮೇ

ಸಾವಿಗೊಂದು ಸಲಾಮು

– ವಿಜಯ್ ಹೆರಗು

ಸಾವಿಲ್ಲದ ಮನೆಯ ಸಾಸಿವೆಯ ತಾ ಎಂದ ಬುದ್ಧ
ಮನೆಗಳು ಸಿಕ್ಕವು, ಸಾಸಿವೆಯೂ ಸಿಕ್ಕಿತು
ಸಿಗಲೇ ಇಲ್ಲ ಸಾವಿಲ್ಲದ ಮನೆ

ಮತ್ತಷ್ಟು ಓದು »