ಈ ವೆಬ್ಸೈಟ್ ನಲ್ಲಿ ಕನ್ನಡಕ್ಕಿಲ್ಲ ‘ಆಧಾರ’
ಪಾಣಿಯಿಂದ ಹಿಡಿದು ಪೋಸ್ಟಾಫೀಸಿನ ಕಡತದವರೆಗೆ ಎಲ್ಲವೂ ನಾಡಭಾಷೆ ಕನ್ನಡದಲ್ಲಿ ಸಿಗುತ್ತಿರುವಾಗ ರಾಜ್ಯ ಸರ್ಕಾರವೇ ಸ್ಥಾಪಿಸಿದ ಮಿಂಬಲೆ(website) http://www.karnataka.gov.in ಯೆಲ್ಲಾ ಇಂಗ್ಲೀಷ್ ಮಯ. .ಹೋಗುತ್ತಿದ್ದ ಹಾಗೆಯೇ ಕನ್ನಡ/ಇಂಗ್ಲೀಷ ಎಂಬ ಆಯ್ಕೆ ಸಿಗುತ್ತದೆ. ನೋಡೋಣ ಎಂದು ಕುತೂಹಲಕ್ಕೆ ಕನ್ನಡವನ್ನು ಆಯ್ಕೆ ಮಾಡಿಕೊಂಡು ಒಳನಡೆದಾಗ ನನಗೆ ಗೋಚರಿಸಿ ಬೇಸರಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
“ಆಧಾರ್” ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ. ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಪ್ರತ್ಯೇಕ ಗುರುತಿನ ಚೀಟಿ ನೀಡಬೇಕೆಂಬ ಮಹೋದ್ದೇಶದ್ದು. ಅದು ಈಗಾಗಲೇ ಅಂಚೆ ಕಛೇರಿಗಳ ಮೂಲಕ ಚಾಲನೆಗೆ ಬಂದಿರುವುದು ನಿಮಗೆಲ್ಲಾ ತಿಳಿದೇ ಇದೆ. ಅದೇ ಆಧಾರ ನ ಬಗ್ಗೆ ಕರ್ನಾಟಕದ ಮಿಂಬಲೆಯಲ್ಲಿ ಮಾಹಿತಿ ಪಡೆಯಲು ಹೋದಾಗ ನನಗಾಗಿದ್ದು ಆಘಾತ.
ಅದರ ಹೆಸರೊಂದೇ ನಮ್ಮ ಆಧಾರ್ ಅಂತ. ಬಲಗಡೆ ಬರುವಂತ ಚಿತ್ರ ಪ್ರದರ್ಶನ(Slide Show) ದಲ್ಲಿ ಮಾತ್ರ ನಿಮಗೆ ಕನ್ನಡ ಕಾಣಸಿಗುತ್ತದೆ ಅಷ್ಟೆ!!!http://www.karnataka.gov.in/nammaaadhaar/home.html..
ಅದೂ ೮ ಚಾಯಾ ಚಿತ್ರಗಳಷ್ಟೆ.. ಆಧಾರ ಕಾರ‍್ಡನು ಶಾಲೆಗೆ ಸೇರಿಸಲು, ವೃದ್ದಾಪ್ಯ ವೇತನ ಪಡೆಯಲು, ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು,ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ಆರೋಗ್ಯ ಸೇವೆಗಳ ಲಾಭ ಪಡೆಯಲು, ಅಂತ ಅದಕ್ಕೆ ಸಂಬಂಧಿಸಿದಂತೆ ಇರುವ ಚಿತ್ರಗಳನ್ನು ಹಾಕಲಾಗಿದೆ. ಅದರಲ್ಲಿ “ಆಧಾರ್” ಪಡೆಯಲು ಏನೇನು ದಾಖಲೆ ಸಲ್ಲಿಸಬೇಕು ಅಂತ ಹೇಳಲಾಗಿಲ್ಲ. ವಿಳಾಸದ ದಾಖಲೆಗಾಗಿ ಸೂಚಿಸಿದ ೨೯ ದಾಖಲೆಗಳ ಮೂಲಪ್ರತಿಯನ್ನು , ಗುರುತಿನ ದಾಖಲೆಗಾಗಿ ಸೂಚಿಸಿದ ದಾಖಲೆಗಾಗಿ ೧೭ರಲ್ಲಿ ಒಂದು , ಹುಟ್ಟು ದಿನಾಂಕದ ದಾಖಲೆಗಾಗಿ ೪ ದಾಖಲೆಗಳಲ್ಲಿ ಒಂದರ ಮೂಲ ಪ್ರತಿ ಸಲ್ಲಿಸಬೇಕು. !! ನೋದಣಿಯ ನಂತರ ಅವುಗಳನ್ನು ಹಿಂತಿರುಗಿಸಲಾಗುವುದು ಅಂತ ಇದೆ. ಆ ೨೯,೧೭,೪ ದಾಖಲೆಗಳು ಏನು . ಎತ್ತ ಎಂಬುದರ ಬಗ್ಗೆ ಮಾಹಿತಿಯಿಲ್ಲ.. ಅದನ್ನು ಆಧಾರ್ ನೊಂದಣಿ ಕೇಂದ್ರದಲ್ಲಿ ಪಡೆಯಬೇಕು ಆಧಾರ್ ಅನ್ನು ಎಲ್ಲಿ ಪಡೆಯಬಹುದು ಎಂಬ ಸ್ಲೈಡಲ್ಲಿ ಜಿಲ್ಲಾಡಳಿತದಿಂದ ಸ್ಥಾಪಿಸಲ್ಪಟ್ಟ ಆಧಾರ್ ನೊಂದಣಿ ಕೇಂದ್ರಗಳು ಅಂತ ಹಾಕಿದ್ದಾರೆ.. ನಮ್ಮ ಜಿಲ್ಲೆಯಲ್ಲಿ ಆಧಾರ್ ನೊಂದಣಿ ಕೇಂದ್ರ ಎಲ್ಲಿದೆ ಅಂತ ಈ ಸೈಟಿಂದ ಹೇಗೆ ತಿಳಿಯೋಣ ಸ್ವಾಮಿ ?? ಆಧಾರ್ ಕೇಂದ್ರ ಹತ್ತಿರದಲ್ಲಿ ಎಲ್ಲಿದೆ ಅಂತ ತಿಳಿಯೋಕೆ ಆಧಾರ್ ಕೇಂದ್ರಕ್ಕೇ ಹೋಗಬೇಕೇ ? ಮತ್ತಷ್ಟು ಓದು