ವಿಷಯದ ವಿವರಗಳಿಗೆ ದಾಟಿರಿ

Archive for

26
ಡಿಸೆ

ನನ್ನ ಬದುಕು ಪರಿವರ್ತಿಸಿದ ಬಂಗಾರಪ್ಪ

-ಬನವಾಸಿ ಸೋಮಶೇಖರ್, ಮಂಗಳೂರು
“1992 ನೇ ಇಸ್ವಿ.ನಾನು ಆಗಷ್ಟೇ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಮುಗಿಸಿದ್ದೆ.ಫಲಿತಾಂಶ ಇನ್ನೂ ಬಂದಿರಲಿಲ್ಲ.ಅತ್ಯಂತ ಕಡು ಬಡತನದ ಕುಟುಂಬ ನಮ್ಮದು.ಒಂದು ಹೊತ್ತಿನ ತುತ್ತಿಗೂ ತತ್ವಾರ ಪಡುವಂತ ದಯನೀಯ ಮತ್ತು ಶೋಚನೀಯ ಸ್ಥಿತಿ.ತಂದೆ ನಾ ಮಗುವಾಗಿರುವಾಗಲೇ ಗತಿಸಿದ್ದರು.ಮೂರು ಜನ ಅಣ್ಣಂದಿರು, ಒಬ್ಬಳು ಸಹೋದರಿ.ದೊಡ್ಡಣ್ಣ 10-11ರ ಪ್ರಾಯದಲ್ಲಿಯೇ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದ.ಅಮ್ಮ ಅವನಿಗಾಗಿ ಹುಡುಕಾಡಿ ಹುಡುಕಾಡಿ ಹೈರಾಣಾಗಿದ್ದರು.ಉಳಿದ ಇಬ್ಬರು ಅಣ್ಣಂದಿರಲ್ಲಿ ಒಬ್ಬ ಮಾತ್ರ ಅತ್ಯಂತ ಶ್ರಮಜೀವಿ.ಇಬ್ಬರೂ ಕೂಲಿ ಕೆಲಸ ಮಾಡಿ ತುತ್ತಿನ ಚೀಲ ತುಂಬಿಸುತ್ತಿದ್ದರು. ಅನ್ನಕ್ಕಾಗಿ ಹಾತೊರೆಯುವ ಪರಿಸ್ಥಿತಿ ಅದಾಗಿತ್ತು. ಅದಕ್ಕಾಗಿ ಒಮ್ಮೊಮ್ಮೆ ಅಕ್ಕ,ಅಣ್ಣಂದಿರೊಂದಿಗೆ ಜಗಳವಾಡಿದ್ದು ಇಂದಿಗೂ ನೆನಪಿದೆ. ಕೊನೆಯ ಮಗನಾದ ನನ್ನನ್ನು ಓದಿಸಬೇಕೆಂಬುದು ಅಮ್ಮನ ಮಹದಾಸೆ ಅಣ್ಣಂದಿರ ಹಿರಿಯಾಸೆಯಾಗಿತ್ತು.
ನಾನಾದರೋ ಮನೆಯ ದೈನ್ಯೇಸಿ ಸ್ಥಿತಿಯನ್ನು ನೋಡಿ ಮನೆ ಬಿಟ್ಟು ಹೋಗಿ ಏನಾದರೂ ಕೆಲಸ ಮಾಡಿ ಮನೆಗೆ ಆಸರೆಯೊದಗಿಸಬೇಕೆಂದು ಹಾತೊರೆದು ಮನೆ ತೊರೆದು ಬೆಂಗಳೂರಿನತ್ತ ಮುಖ ಮಾಡಿಯೇ ಬಿಟ್ಟಿದ್ದೆ. ಕೈಯಲ್ಲಿ  ಸಂಗ್ರಹಿಸಿಟ್ಟಿದ್ದ ಇಪ್ಪತ್ತು ರೂಪಾಯಿ ಇತ್ತಷ್ಟೇ.ಯಾವ್ಯಾವುದೋ ಬಸ್ ಹತ್ತಿ ನಿರ್ವಾಹಕನ ಕಣ್ ತಪ್ಪಿಸಿ ಟಿಕೇಟು ತೆಗೆಸದೇ ಬೆಂಗಳೂರಿಗೆ ಬಂದಿಳಿದಿದ್ದೆ.ಆಗ ನಾಡಿನ ದೊರೆಯಾಗಿದ್ದವರೇ ನಮ್ಮ ಸಾರೆಕೊಪ್ಪ ಬಂಗಾರಪ್ಪನವರು.ಅವರು ನಮ್ಮ ಪಕ್ಕದ ತಾಲೂಕಿನವರಾಗಿದ್ದರಿಂದಲೂ ನಮ್ಮೂರಲ್ಲಿ ಅವರ ಬಗ್ಗೆ ಅಪಾರ ಜನಪ್ರೀಯತೆ ಇದ್ದುದರಿಂದಲೂ ಅವರಲ್ಲಿಗೆ ಹೋಗಿ ಏನಾದರೂ ಸಹಾಯ ಪಡೆದು ಬೆಂಗಳೂರಲ್ಲಿ ಕೆಲಸ ಮಾಡಬಹುದೆಂದು ಯೋಚಿಸಿ ಸೊರಬದವನೆಂದು ಸುಳ್ಳು ಹೇಳಿ ಮುಖ್ಯಮಂತ್ರಿಗಳ ಗೃಹ ಕಛೇರಿಯನ್ನು ಹರಸಾಹಸ ಮಾಡಿ ಪ್ರವೇಶಿಸಿದ್ದೆ.ಸಾವಿರಾರು ಸಾರ್ವಜನಿಕರು ಅಹವಾಲು ಸಲ್ಲಿಸಲು ಸರತಿಯಲ್ಲಿ ನಿಂತು ಕಾಯುತ್ತಿದ್ದರು.ನಾನೂ ಹಾಗೆಯೇ ಮಾಡಿದೆ. Read more »
26
ಡಿಸೆ

ಸಂಸ್ಕೃತಿ ಸಂಕಥನ 15 -ಭಾರತೀಯ ಪ್ರಭುತ್ವದ ಸೆಕ್ಯುಲರ್ ಗೊಂದಲಗಳು

ರಮಾನಂದ ಐನಕೈ

ಬಹುಸಂಸ್ಕೃತಿ ಹಾಗೂ ರಿಲಿಜನ್  ಎರಡೂ ಒಟ್ಟಿಗೇ ಬಾಳಬೇಕಾದ ಭಾರತದಂತಹ ದೇಶದಲ್ಲಿ ಪ್ರಭುತ್ವ  ತಟಸ್ಥವಾಗಿರಲು ಸಾಧ್ಯವೇ? ಏಕೆಂದರೆ ಇಲ್ಲಿ ನಂಬಿಕೆಯಲ್ಲಿ ಭಿನ್ನತೆ ಇದೆ. ಇಂಥಲ್ಲಿ ಸೆಕ್ಯುಲರ್ ಪ್ರಭುತ್ವ ಯಾರಿಗೆ ನ್ಯಾಯ ನೀಡುತ್ತದೆ? ಒಂದಕ್ಕೆ ನೀಡಿದ ನ್ಯಾಯ ಇನ್ನೊಂದಕ್ಕೆ ಅನ್ಯಾಯವಾಗಲು ಸಾಧ್ಯ. ಏಕೆಂದರೆ ರಿಲಿಜನ್ನವರು ಲೋಕಜ್ಞಾನದಲ್ಲಿ ಬದುಕುತ್ತಾರೆ. ಸಂಸ್ಕೃತಿಯಲ್ಲಿ ಕ್ರಿಯಾಜ್ಞಾನ ಇರುತ್ತದೆ. ಸೆಕ್ಯುಲರ್ ನೀತಿ ಲೋಕಜ್ಞಾನದಲ್ಲಿ ಉದಯಿಸಿದ್ದು. ಹಾಗಾಗಿ ಕ್ರಿಯಾಜ್ಞಾನದ ಸೂಕ್ಷ್ಮತೆಗೆ ಸ್ಪಂದಿಸುವಲ್ಲಿ ಸೋಲುವ ಸಾಧ್ಯತೆ ಇದೆ. ಹಾಗಾಗಿ ಸೆಕ್ಯುಲರ್ ನೀತಿಯನ್ನು ಭಾರತೀಯ ಸಂದರ್ಭದಲ್ಲಿ ಪುನರ್ಪರಿಶೀಲನೆ ಮಾಡುವ ಅಗತ್ಯ ಇದೆ.

ಭಾರತ ಸರಕಾರದ ಸೆಕ್ಯುಲರ್ ನೀತಿಯ ಸುತ್ತ ಹಲವು ಸಂದಿಗ್ಧಗಳಿವೆ. ನಮ್ಮ ಪ್ರಭುತ್ವಕ್ಕೆ ಈ ಪರಿಸ್ಥಿತಿ ಎದುರಾಗಲು ಕಾರಣವೇನು? ಸೆಕ್ಯುಲರ್ ಎಂಬ ಸಮಾನತೆಯ ಮಂತ್ರ ನಮ್ಮಲ್ಲಿ ಯಾವ ಫಲಿತಾಂಶ ನೀಡುತ್ತಿದೆ?

Read more »