ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 6, 2011

ಈ ವೆಬ್ಸೈಟ್ ನಲ್ಲಿ ಕನ್ನಡಕ್ಕಿಲ್ಲ ‘ಆಧಾರ’

‍ನಿಲುಮೆ ಮೂಲಕ
-ಪ್ರಶಸ್ತಿ.ಪಿ, ಶಿವಮೊಗ್ಗ

ಪಾಣಿಯಿಂದ ಹಿಡಿದು ಪೋಸ್ಟಾಫೀಸಿನ ಕಡತದವರೆಗೆ ಎಲ್ಲವೂ ನಾಡಭಾಷೆ ಕನ್ನಡದಲ್ಲಿ ಸಿಗುತ್ತಿರುವಾಗ ರಾಜ್ಯ ಸರ್ಕಾರವೇ ಸ್ಥಾಪಿಸಿದ ಮಿಂಬಲೆ(website) http://www.karnataka.gov.in ಯೆಲ್ಲಾ ಇಂಗ್ಲೀಷ್ ಮಯ. .ಹೋಗುತ್ತಿದ್ದ ಹಾಗೆಯೇ ಕನ್ನಡ/ಇಂಗ್ಲೀಷ ಎಂಬ ಆಯ್ಕೆ ಸಿಗುತ್ತದೆ. ನೋಡೋಣ ಎಂದು ಕುತೂಹಲಕ್ಕೆ ಕನ್ನಡವನ್ನು ಆಯ್ಕೆ ಮಾಡಿಕೊಂಡು ಒಳನಡೆದಾಗ ನನಗೆ ಗೋಚರಿಸಿ ಬೇಸರಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

“ಆಧಾರ್” ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ. ಭಾರತದ ಪ್ರತಿಯೊಬ್ಬ ನಾಗರೀಕನಿಗೂ ಪ್ರತ್ಯೇಕ ಗುರುತಿನ ಚೀಟಿ ನೀಡಬೇಕೆಂಬ ಮಹೋದ್ದೇಶದ್ದು. ಅದು ಈಗಾಗಲೇ ಅಂಚೆ ಕಛೇರಿಗಳ ಮೂಲಕ ಚಾಲನೆಗೆ ಬಂದಿರುವುದು ನಿಮಗೆಲ್ಲಾ ತಿಳಿದೇ ಇದೆ. ಅದೇ ಆಧಾರ ನ ಬಗ್ಗೆ ಕರ್ನಾಟಕದ ಮಿಂಬಲೆಯಲ್ಲಿ ಮಾಹಿತಿ ಪಡೆಯಲು ಹೋದಾಗ ನನಗಾಗಿದ್ದು ಆಘಾತ.

ಅದರ ಹೆಸರೊಂದೇ ನಮ್ಮ ಆಧಾರ್ ಅಂತ. ಬಲಗಡೆ ಬರುವಂತ ಚಿತ್ರ ಪ್ರದರ್ಶನ(Slide Show) ದಲ್ಲಿ ಮಾತ್ರ ನಿಮಗೆ ಕನ್ನಡ ಕಾಣಸಿಗುತ್ತದೆ  ಅಷ್ಟೆ!!!http://www.karnataka.gov.in/nammaaadhaar/home.html..

 ಅದೂ ೮ ಚಾಯಾ ಚಿತ್ರಗಳಷ್ಟೆ.. ಆಧಾರ ಕಾರ‍್ಡನು ಶಾಲೆಗೆ ಸೇರಿಸಲು, ವೃದ್ದಾಪ್ಯ ವೇತನ ಪಡೆಯಲು,  ಉದ್ಯೋಗ ಪಡೆಯಲು, ಬ್ಯಾಂಕ್ ಖಾತೆ ತೆರೆಯಲು,ಸರ್ಕಾರದ ಸೌಲಭ್ಯಗಳನ್ನು ಪಡೆಯಲು, ಆರೋಗ್ಯ ಸೇವೆಗಳ ಲಾಭ ಪಡೆಯಲು, ಅಂತ ಅದಕ್ಕೆ ಸಂಬಂಧಿಸಿದಂತೆ ಇರುವ ಚಿತ್ರಗಳನ್ನು ಹಾಕಲಾಗಿದೆ. ಅದರಲ್ಲಿ “ಆಧಾರ್” ಪಡೆಯಲು  ಏನೇನು ದಾಖಲೆ ಸಲ್ಲಿಸಬೇಕು ಅಂತ ಹೇಳಲಾಗಿಲ್ಲ. ವಿಳಾಸದ ದಾಖಲೆಗಾಗಿ ಸೂಚಿಸಿದ ೨೯ ದಾಖಲೆಗಳ ಮೂಲಪ್ರತಿಯನ್ನು , ಗುರುತಿನ ದಾಖಲೆಗಾಗಿ ಸೂಚಿಸಿದ ದಾಖಲೆಗಾಗಿ ೧೭ರಲ್ಲಿ ಒಂದು , ಹುಟ್ಟು ದಿನಾಂಕದ ದಾಖಲೆಗಾಗಿ ೪ ದಾಖಲೆಗಳಲ್ಲಿ ಒಂದರ ಮೂಲ ಪ್ರತಿ ಸಲ್ಲಿಸಬೇಕು. !! ನೋದಣಿಯ ನಂತರ ಅವುಗಳನ್ನು ಹಿಂತಿರುಗಿಸಲಾಗುವುದು ಅಂತ ಇದೆ. ಆ ೨೯,೧೭,೪ ದಾಖಲೆಗಳು ಏನು . ಎತ್ತ ಎಂಬುದರ ಬಗ್ಗೆ ಮಾಹಿತಿಯಿಲ್ಲ.. ಅದನ್ನು ಆಧಾರ್ ನೊಂದಣಿ ಕೇಂದ್ರದಲ್ಲಿ ಪಡೆಯಬೇಕು  ಆಧಾರ್ ಅನ್ನು ಎಲ್ಲಿ ಪಡೆಯಬಹುದು ಎಂಬ ಸ್ಲೈಡಲ್ಲಿ ಜಿಲ್ಲಾಡಳಿತದಿಂದ ಸ್ಥಾಪಿಸಲ್ಪಟ್ಟ ಆಧಾರ್ ನೊಂದಣಿ ಕೇಂದ್ರಗಳು ಅಂತ ಹಾಕಿದ್ದಾರೆ.. ನಮ್ಮ ಜಿಲ್ಲೆಯಲ್ಲಿ ಆಧಾರ್ ನೊಂದಣಿ ಕೇಂದ್ರ ಎಲ್ಲಿದೆ ಅಂತ ಈ ಸೈಟಿಂದ ಹೇಗೆ ತಿಳಿಯೋಣ ಸ್ವಾಮಿ ?? ಆಧಾರ್ ಕೇಂದ್ರ ಹತ್ತಿರದಲ್ಲಿ ಎಲ್ಲಿದೆ ಅಂತ ತಿಳಿಯೋಕೆ ಆಧಾರ್ ಕೇಂದ್ರಕ್ಕೇ ಹೋಗಬೇಕೇ ?   

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿಗಳ ಕಛೇರಿ, ತಹಶೀಲ್ದಾರ್ಗಳ ಕಛೇರಿ, ನಗರ ಸಭಾ ಆಯುಕ್ತರ ಕಛೇರಿಗಳ ಹೆಸರು ಕೊಟ್ಟಿದ್ದಾರೆ. ಬಲಗಡೆ ಇರುವ ಆಧಾರ್ ನ ಇತಿಹಾಸ, ಅದರ ಪ್ರಸ್ತುತ ಸ್ಥಿತಿಗತಿಗಳ ಬಗೆಗಿನ ಮಾಹಿತಿಯಂತೂ ಪೂರ್ತಿ ಆಂಗ್ಲದಲ್ಲೇ.. ನೆನಪಿರಲಿ.. ನಾವು ಕರ್ನಾಟಕ ಸರ್ಕಾರದ ಅಧಿಕೃತ ಮಿಂಬಲೆಯಲ್ಲಿ ಕನ್ನಡ ಎಂಬ ಆಯ್ಕೆಯನ್ನು ಉಪಯೋಗಿಸಿ ಇಲ್ಲಿಗೆ ಬಂದಿದ್ದೇವೆ !!!!   ಏನೋ ಮಾಹಿತಿ ಕೊಟ್ಟಿದ್ದಾರೆ ಕನ್ನಡದಲ್ಲಿ ಅಂತ ಖುಷಿ ಪಡೋಣವೇ? ಅದನ್ನಾದರೂ ಓದಲಾಗುವಂತೆ ಇಟ್ಟಿದ್ದಾರೆಯೇ? ಬರೀ ೫ ಸೆಕೆಂಡುಗಳ ಕಾಲ ಮಾತ್ರ ಆಧಾರ್ ಗೆ ೨೯,೧೭,೪ ದಾಖಲೆ ಬೇಕು ಅನ್ನುವ ಮಾಹಿತಿಯ ಸ್ಲೈಡು!!! . ಆಮೇಲೆ ಮುಂದಿನ ಸ್ಲೈಡಿಗೆ ಓಡುತ್ತದೆ. ಎಲ್ಲಾ ೮ ಸ್ಲೈಡುಗಳನ್ನ ಸೇರಿ ಒಟ್ಟು ೪೫ ಸೆಕೆಂಡುಗಳು.. ಆಧಾರಿನಿಂದ ಏನೇನು ಸೌಲಭ್ಯ ಪಡೆಯಬಹುದು ಎಂಬ ಚಿತ್ರದ Slide ಗೂ ಆಧಾರ್ ಗೆ ಏನೇನು ದಾಖಲೆ ಸಲ್ಲಿಸಬೇಕು ಎಂಬ ಕಿರು ಬರಹವನ್ನುಳ್ಳ Slide ಓದಲೂ ಒಂದೇ ಕಾಲಾವಧಿ !!!! 

ಆಧಾರ್ ಬಗೆಗಿನ Home ನ ಕಥೆ ಇಷ್ಟು. ಇನ್ನು ಅದರ ಮತ್ತೊಂದು ವಿಭಾಗ About UID ಅಂತ. ಅದ್ರಲ್ಲಂತೂ ನಯಾ ಪೈಸೆ ಕನ್ನಡವಿಲ್ಲ. http://www.karnataka.gov.in/nammaaadhaar/about-uid.html#.html

ಅದರಲ್ಲಿರುವ ವಿಭಾಗಗಳು ೧) About Adhar 2) Why Adhar 3)Who can get Adhar 4)How to get an adhar 5)Contact Center Details. ಇದರಲ್ಲಿ ಯಾವುದರ ಒಳಗೂ ಕನ್ನಡವಿಲ್ಲ.

ಕನ್ನಡ ಬೇಕೆಂದರೆ ಅಲ್ಲಿ ನೀಡಿರುವ ಸಂಪರ್ಕಾಧಿಕಾರಿಗಳನ್ನು ಈ ವಿಳಾಸದಲ್ಲಿ ಸಂಪರ್ಕಿಸಬಹುದೆಂದು ಮಾಹಿತಿ ಇದೆಯಷ್ಟೆ.. 

Dr. D.S. Ravindran IFS

Chief Executive Officer
Room No:146A, Multi-Storied Building,
Dr. Ambedkar Veedhi, Bangalore 560 001.
Phone :+91 080 – 22373840
Email :
ceoceg@karnataka.gov.in
cegkarnataka@gmail.com

ಸರಿ ಎಂದು ಮುಂದಿನ ವಿಭಾಗ Residents ಗೆ ಹೋದೆ. ಅದರಲ್ಲಿ FAQ(Frequently Asked Questions) ಅಂತ ಕೊಡಲಾಗಿದೆ. ಅದೂ ಪೂರ್ತಿ ಇಂಗ್ಲೀಷ್..ಅದರ ಮುಂದಿನ ವಿಭಾಗ Enrollment Agencies. ಅಲ್ಲೂ ಕನ್ನಡ ಕಾಣಲಾರಿರಿ. ಮೂರು ಇಂಗ್ಲೀಷ್ ಸಾಲುಗಳಲ್ಲಿ ಆ ವಿಭಾಗಕ್ಕೆ ಮುಕ್ತಾಯ ಹಾಡಲಾಗಿದೆ. ಮುಂದಿನ ವಿಭಾಗ Government Departments. ಅದು ಕೆಲಸ ಪ್ರಗತಿಯಲ್ಲಿದೆ (Under Construction) ಅಂತ ತೋರಿಸುತ್ತದೆ. ತದನಂತರ Downloads. ಅಲ್ಲೂ ಎಲ್ಲಾ ಇಂಗ್ಲೀಷ್ ಮಯ.. ಆದರೆ ಕನ್ನಡದಲ್ಲಿ Application Form ಅನ್ನು ಡೌನ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ .. ಅದೇ ಪುಣ್ಯ !!!

ಕೊನೆಯ ವಿಭಾಗ Contact Us. ಅಲ್ಲಿ ಇಷ್ಟು ಮಾಹಿತಿ ಕೊಡಲಾಗಿದೆ. ಸಹೃದಯಿಗಳು ಅವರನ್ನು ಸಂಪರ್ಕಿಸಿ ಕನ್ನಡಕ್ಕೆ ಆಗ್ರಹಿಸಿದರಾದರೂ ಕೆಲ ದಿನಗಳಲ್ಲಿ ಕನ್ನಡದ ಆಧಾರ ಅಲ್ಲಿ ಕಾಣಬಹುದೇನೋ ಎಂಬ ಆಶಾಕಿರಣ ಈ ಬರಹದ ಮೂಲಕ

Department of e-Governance

Shri M.N. Vidyashankar

Principal Secretary to Government (e-Governance)
DPAR (Administrative Reforms
Room No:107, Multi-Storied Building,
Dr. Ambedkar Veedhi, Bangalore 560 001.
Phone :+91 080 – 22353953
Email :
prsegv@gmail.com

Centre for e-Governance

Dr. D.S. Ravindran IFS

Chief Executive Officer
Room No:146A, Multi-Storied Building,
Dr. Ambedkar Veedhi, Bangalore 560 001.
Phone :+91 080 – 22373840
Email :
ceoceg@karnataka.gov.in
cegkarnataka@gmail.com

ಮುಗಿಸುವ ಮುನ್ನ:

ಹಾಗಾದರೆ ಈ ಆಧಾರ್ ಅನ್ನುವುದೇ ಒಂದು ಕನ್ನಡ ವಿರೋಧಿಯೇ ಎಂಬ ಸಂದೇಹ ಕಾಡುತ್ತಿದೆಯೇ? ನನಗೂ ಮೊದಲು ಹಾಗೇ ಅನಿಸಿತ್ತು. ಹತ್ತಿರದ ಅಂಚೆ ಕಚೇರಿಗೆ ಹೋದಾಗ ಅಲ್ಲಿ ಸಿಗುವ ಫಾರ್ಮಿನಲ್ಲಿ ಹೆಸರು/Name.. ಹೀಗೆ ಪ್ರತಿಯೊಂದು ಮಾಹಿತಿಗೂ ಕನ್ನಡದ ಜೊತೆಗೆ ತತ್ಸಂಬಂಧಿ ಆಂಗ್ಲ ಅವತರಣಿಕೆಯನ್ನು ನೀಡಿದ್ದನ್ನು ನೋಡಿ ಇದ್ದುದರಲ್ಲೇ ಸ್ವಲ್ಪ ಸಮಾಧಾನವಾಯಿತು. ಎಲ್ಲಾ ಮಾಹಿತಿ ಅಂಚೆ ಕಛೇರಿಗಳಲ್ಲೇ ಪಡೆಯುವುದಾದರೆ “ಆಧಾರ್” ಅಂತ ಕರ್ನಾಟಕ ಸರ್ಕಾರದ ಅಧಿಕೃತ ಮಿಂಬಲೆಯಲ್ಲಿ ತೆರೆಯುವ ಉದ್ದೇಶವಾದರೂ ಏನು? ಹೆಚ್ಚಿನ ಮಾಹಿತಿ ಬೇಕಾದರೆ ಕೇಂದ್ರದ ಆಧಾರ್ ಮಿಂಬಲೆ http://uidai.gov.in/ ಅನ್ನು ನೋಡಿ ಅಂತ ಕೈ ತೊಳೆದುಕೊಳ್ಳಬಹುದಲ್ಲಾ ?

****************

chitrakrupe: vurooz.com

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments