ಫೇಸ್ ಬುಕ್ಕಿನ ಫಂಡಾಸ್
-ಮಾಲತಿ ಎಸ್
ಜುಲೈ 2010, ಶ್ರೀಕಾಂತ ಗೆ ಡೆಂಗೆ ಹಾಗೂ ನಿಹಾರಿಕಂಗೆ air borne ವೈರಲ್ ಜ್ವರದಿಂದಾಗಿ 5-6 ದಿನಗಳ ಆಸ್ಪತ್ರೆವಾಸ. ಮನೆಗೆ ಬಂದ ಎರಡು ದಿನ, ನನಗೂ ರೆಸ್ಟ್ ಬೇಕಾಯಿತು..ಆಸ್ಪತ್ರೆ- ಮನೆ ಅಂತ ಓಡಾಡಿ ಬೆನ್ನುಹುರಿಯಲ್ಲಿ ನೋವು. ಮತ್ತೆ ಮನೆಯ ಉಳಿದ ಕ್ಲೀನಿಂಗ್-ಅದೂ-ಇದೂ etc.gಮೈಲ್ ತೆರೆದರೆ ಅದರಲ್ಲಿ ರಾಶಿ ರಾಶಿ ಮೈಲ್ ಗಳು. ಅದರಲ್ಲಿ ಮೊದಲಿಗೆ ಇದ್ದದ್ದು ಸಹನಾ ಜೋಶಿಯವರ facebook ಆಮಂತ್ರಣ. ಸಾಕಷ್ಟು ಫೇಸ್ ಬುಕ್ ಆಮಂತ್ರಣಗಳಿದ್ದರೂ ನಾನದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಶ್ರೀಕಾಂತ ನನ್ನ ಹಿಂದೆ ನಿಂತು ನನ್ನ ಮೈಲ್ ಗಳನ್ನು ನೋಡುತ್ತ ಇದ್ದರು. ’ನೀನು face book ನಲ್ಲಿ ಇಲ್ಲವಾ’ ಅಂತ ಕೇಳಿದ್ರು. ನಾನು ’ಇಲ್ಲ’ ಅಂದೆ. ಹೇ ಜಾಯಿನ್ ಆಗಿ ನೋಡು ಅದರಲ್ಲೇನಿದೆ ಅಂತ. ಇತ್ತೀಚಿಗೆ ಆಫಿಸ್ ನಲ್ಲಿ ಹೊರ ದೇಶದವರು ಬಂದಾಗಲೆಲ್ಲ r u on facebook ಅಂತ ವಿಚಾರಿಸುತ್ತಾರೆ. ಬುಸಿನೆಸ್ interactions ಗೆ ಅದು ಸೂಕ್ತ ತಾಣ ಅಂತೆಲ್ಲ ಹೇಳುತ್ತಾರೆ ಅಂದ್ರು. ಅದಕ್ಕೆ ನಾನು , ಹುಷಾರಾದ ಕೂಡಲೇ ನೀವೆ ಸೇರಿಕೊಂಡು ಬಿಡಿ, ನನಗೆ ಅದರಲ್ಲಿ ಆಸಕ್ತಿ ಇಲ್ಲ ಅಂದೆ. ಅಷ್ಟರಲ್ಲಿ ಶ್ರೀಕಾಂತ ಆರೋಗ್ಯ ವಿಚಾರಿಸಲು ತಮ್ಮ ಫೋನ್ ಮಾಡಿದಾಗ, ಅವನು ’ಯೇ ನೀನು facebook ಜಾಯಿನ್ ಆಗು, ನಾನು ಆಗ್ತಾ ಇದ್ದೇನೆ ಅಂದ. ಹೂಂ ಅಂತ ಸಹನಾ ಜೋಶಿಯವರ invite ಆಗಲೇ accept ಮಾಡಿ, ಸುಮ್ಮನಿದ್ದು ಬಿಟ್ಟೆ. ಆಮೇಲೆ ಶುರು ಆಯ್ತು invite ಗಳ ಸರಮಾಲೆ. ಗೊತ್ತಿದ್ದವರು, ಇಲ್ಲದವರು ಅಂತ ಒಂದು ರಾಶಿ.ಸ್ವಲ್ಪ ದಿನ ನಾನು ಆ ಕಡೆ ಹೋಗಲೇ ಇಲ್ಲ.





