ಏನ್ ಇವಾಗ? ನಾವ್ ಇರೋದೇ ಹೀಗೆ…
-ಸಾತ್ವಿಕ್ ಎನ್ ವಿ
ಒಮ್ಮೊಮ್ಮೆ ಇಂಥ ಪ್ರಸಂಗಗಳಿಗೆ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯುವುದಿಲ್ಲ. ನಿನ್ನೆ ನಮ್ಮ ಮೇಡಂ ಒಬ್ಬರು ಕಾಲ್ ಮಾಡಿ ’ಸಾತ್ವಿಕ್ ನಿಮ್ಮ ಕಡೆ ಯಾರಾದ್ರೂ ಹುಡುಗಿಯಿದ್ದರೆ ಹೇಳೋ ಅಂದ್ರು’. ಅದಕ್ಕೆ ತಮಾಷೆಯಿಂದ ’ನಾನು ಒಂದು ವಧುವರರ ಕೇಂದ್ರ ತೆಗೆದ್ರೆ ಒಳ್ಳೆ ಕಲೆಕ್ಷನ್ ಆಗಬಹುದು ಅಲ್ವಾ ಮೇಡಂ’ ಅಂದೆ. ಅವರು ತಮ್ಮ ಮಾತಿನಲ್ಲಿ ಗಂಭೀರತೆಯನ್ನು ಬಿಟ್ಟು ಕೊಡದೇ ’ಹಾಗಲ್ಲ, ನಿನಗೆ ಗೊತ್ತಲ್ಲ. ನಮ್ಮಲ್ಲಿ ಅಬಕ ಜಾತಿಯ ವಧುಗಳು ಸಿಗೋದು ಬಹಳ ಕಷ್ಟ ಆಗಿದೆ. ಹಾಗಾಗಿ ಅನಿವಾರ್ಯವಾಗಿ ಬೇರೆ ಜಾತಿಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ’ ಅಂದ್ರು. ನನ್ನ ವಯಸ್ಸಿನ ಯೋಚನೆಗೆ ನಿಲುಕದ ವಿಷಯವಾದ ಕಾರಣ ’ಆಯ್ತು ಮೇಡಂ ಪ್ರಯತ್ನಿಸುತ್ತೇನೆ’ ಅಂತ ಹೇಳಿ ಮಾತನ್ನು ಮುಗಿಸಲು ನೋಡಿದೆ.
ಕುತೂಹಲಕ್ಕೆ ’ವರನ ಮನೆಯ ಕಡೆಯಿಂದ ಏನೇನು ನಿರೀಕ್ಷೆಗಳಿರುತ್ತವೆ’ ಅಂತ ಕೇಳಿದೆ. ’ಅಂಥ ವಿಶೇಷಗಳೇನು ಇಲ್ಲ. ಹುಡುಗಿ ತಕ್ಕ ಮಟ್ಟಿಗೆ ಓದಿದ್ದರೆ ಸಾಕು. ಆದರೆ ಆಕೆ ಹುಟ್ಟಿನಿಂದ ಸಸ್ಯಾಹಾರಿ ಕುಟುಂಬದ ಹುಡುಗಿ ಆಗಿರಬೇಕು. ಮದುವೆಯ ನಂತರ ತನ್ನ ತವರಿನ ಜೊತೆಗಿರುವ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಅಕೆಯ ಮನೆಯವರು ವರನ ಮನೆಗೆ ಬರುವುದಾಗಲಿ ಅಥವಾ ಸಂಪರ್ಕ ಇಟ್ಟುಕೊಳ್ಳುವುದಾಗಲಿ ಮಾಡಬಾರದು. ಇವು ಸದ್ಯ ವರನ ಮನೆಯವರು ನಿರೀಕ್ಷಿಸುತ್ತಿರುವ ಅಗತ್ಯಗಳು’ ಎಂದರು. ಎರಡನೆಯ ಸಂಗತಿಯನ್ನು ಕೇಳಿ ನನಗೆ ಸಖೇದಾಶ್ಚರ್ಯವಾಯಿತು.
ಹೆಣ್ಣು ಮಕ್ಕಳ ಕೊರತೆಯಿರುವ ಬೇರೊಂದು ಜಾತಿಯ ಹೆಣ್ಣು ಮಕ್ಕಳನ್ನು ಮದುವೆಯಾಗಬೇಕಾದ ಪರಿಸ್ಥಿತಿಯಿರುವ ಜನರಿಗೂ ಇಷ್ಟೊಂದು ಕರಾರು ಮತ್ತು ಆಯ್ಕೆಗಳಿರುತ್ತವೆಯೇ? ಕೊಡುವವರಿಗೆ ಆಯ್ಕೆಗಳಿರುತ್ತವೆ. ಆದರೆ ಕೇಳುವವರಿಗೆ? ಮತ್ತಷ್ಟು ಓದು 
ಹೇಳುವುದು ಒಂದು……
-ಅಭಿನಂದನ್
ಆದರೆ ಒಂದೊಂದ್ ಸಲ ಅದು ಕೇಳಿಸೋದೇ ಇನ್ನೊಂದು ಥರ!!
ಮೊನ್ನೆ ಟ್ರೈನಿನಲ್ಲಿ ಶಿವಮೊಗ್ಗಕ್ಕೆ ಹೋಗ್ತಾ ಇದ್ದೆ. ಮುಂಜಾನೆ ಮಂಪರು..ಯಥಾ ಪ್ರಕಾರ ಮಲಗಿದ್ದೆ.
“ಮಲ್ಗೋರ್ರಿ..ಮಲ್ಗೋರ್ರಿ….!” ಅಂತ ಕೂಗಿಕೊಂಡು ಹೋದ ನಾಸಿಕ ವಾಣಿಯೊಂದು ಮಲಗಿದ್ದ ನನ್ನನ್ನು ಎಬ್ಬಿಸಿತು. ಯಾರಪ್ಪ pirvate ಆಗಿ ಮಲ್ಗಿರೋದನ್ನ public ಮಾಡ್ತಿದಾರೆ ಅಂತ ಕಣ್ಣು ತೆಗೆದು ನೋಡಿದಾಗ ಗೊತ್ತಾಯ್ತು, ಮಲ್ಲಿಗೆ ಹೂವು ಮಾರುವವ ಅವನ ಸಂಕ್ಷಿಪ್ತ, ಕ್ಷಿಪ್ರ, ಗೌಪ್ಯ ಶೈಲಿಯಲ್ಲಿ, “ಮಲ್ಲಿಗೆ ಹೂವು ರೀ, ಮಲ್ಲಿಗೆ ಹೂವು ರೀ….” ಅಂತಿದ್ರು ಅಂತ. ಅವರ speed ಗೆ ಒದ್ದಾಡಿ ಹೋಗಿ, ಬಾಯಿಂದ ಹೊರಗೆ ಬೀಳೋ ಹೊತ್ತಿಗೆ ಅದು “ಮಲ್ಗೋರ್ರಿ” ಆಗೋಗಿತ್ತು.
ಈ ಆಸಾಮಿ ಎಷ್ಟೋ ಪರವಾಗಿಲ್ಲ. ನಮ್ಮ ಮನೆ ಹತ್ತಿರ ಹೂವು ಮಾರುವವ ಏನು ಹೇಳುತ್ತಾರೋ ಇದುವರೆಗೂ ನಂಗೆ ಗೊತ್ತಾಗಿಲ್ಲ. ಒಟ್ಟಿನಲ್ಲಿ “ನಾನು ಹೂವು ಮಾರುತ್ತಿದ್ದೀನಿ” ಅನ್ನೋದನ್ನ ಅವ ಭಾರೀ effective ಆಗಿ ವರ್ಷಗಳಿಂದ communicate ಮಾಡುತ್ತಾ ಬಂದಿದ್ದಾರೆ…ಅದೂ ಅವರದೇ ಬಾಯಿಂದ.
ಇನ್ನು ಎಳನೀರಿನ ಗತಿಯಂತೂ ಬ್ಯಾಡ್ವೇ ಬ್ಯಾಡ. “ಎನ್ನೀರ್ರು”, “ನ್ನೀರ್ರು”, “ಈರ್ರು”, “…ರ್ರು”…ಅದಕ್ಕೇ ಒಂದು ತತ್ಸಮ ತದ್ಭವ ಗ್ರಂಥ ಬರೀಬೋದೇನೋ.
ಬಸ್ಸಿನಲ್ಲಿ ಕಂಡಕ್ಟರ್ರು “ಓಲ್ಡೈನ್” ಅಂತಿದ್ದಿದ್ದು ನನಗೆ ಚಿಕ್ಕಂದಿನಲ್ಲಿ ಸುಮಾರು ವರ್ಷಗಳ ಕಾಲ ತಲೆ ಕೆಡೆಸಿತ್ತು, ಅದ್ಯಾವ ಭಾಷೆಯಲ್ಲಿ ಅದರ ಅರ್ಥ ಎನು ಅಂತ. ಯಾರೋ ಪುಣ್ಯಾತ್ಮೆ sophisticated ಅಜ್ಜಿ ಒಂದು ದಿನ ಸ್ಟಾಪಿನಲ್ಲಿ ನಿಲ್ಲಿಸದೆ ಮುಂದೆ ಹೋಗುತ್ತಿದ್ದ ಬಸ್ಸಿನಿಂದ ಇಳೀಬೇಕಾದ್ರೆ ದಯನೀಯವಾಗಿ “HOLD ON PLEASE” ಅಂತ ಕೂಗಿದಾಗ್ಲೇ ಗೊತ್ತಾಗಿದ್ದು , ಓಲ್ಡೈನ್ ಎಲ್ಲಿಂದ ದಾರಿ ತಪ್ಪಿ ಬಂತು ಅಂತ.
ರೈಲು, ಬಸ್ಸು ಸ್ಟೇಷನ್ನುಗಳಲ್ಲಿ ಇಡ್ಲೀನ ಹೇಗೆಲ್ಲಾ ಚಿತ್ರಾನ್ನ ಮಾಡಲ್ಲ. “ಯಾರ್ರೀಡ್ಲಿ?”, “ಯಾರ್ಗಿಡ್ಲಿ?”, “ಎಲ್ರೀಡ್ಲಿ?”…
ಅಮೇರಿಕ ಕಡೆ ವಿಮಾನಗಳಲ್ಲಂತೂ orange juice ಅಂದ್ರೆ ಅರ್ಥ ಆಗದೆ ಇರೋ ಅಷ್ಟರ ಮಟ್ಟಿಗೆ ಅದು “onjuce” ಆಗೋಗಿದೆ.
ಮತ್ತಷ್ಟು ಓದು 
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 15: ಸಣ್ಣವರು,ದೊಡ್ಡವರು…
ನಾನು ಸಣ್ಣವನಿದ್ದಾಗ, ಹಲವು ಮಂದಿ ದೊಡ್ಡವರು ನನ್ನ ಕೈ ಹಿಡಿದು ನಡೆಸಿದ್ದರು. ದೈನಂದಿನ ಜೀವನಕ್ಕೆ ಅನ್ವಯಿಸುವಷ್ಟೇ ಪರಿಣಾಮಕಾರಿಯಾಗಿ ಆ ಮಾತು ಕಲಾ ಜೀವನಕ್ಕೂ ಅನ್ವಯಿಸುವಂತಹುದು. ಆಮೇಲೆ, ನಾನೂ ಒಬ್ಬ ಕಲಾವಿದ ಎಂದು ಹೇಳಿಕೊಳ್ಳುವ ಶಕ್ತಿ ಬಂದಾಗ (ಶಕ್ತಿಗಿಂತಲೂ ಹೆಚ್ಚಿನ ಕುರುಡು ಧೈರ್ಯವೂ ಇದ್ದಾಗ) ಹಲವು ಮಂದಿ ದೊಡ್ಡವರೆನಿಸಿಕೊಂಡವರ ಸ್ನೇಹ-ಪರಿಚಯಗಳನ್ನು ಮಾಡಿಕೊಂಡಿದ್ದೇನೆ. ಎಷ್ಟೋ ಮಂದಿ ಸಣ್ಣವರನ್ನು ಕಲಾರಂಗಕ್ಕೆ ಪರಿಚಯ ಮಾಡಿಸಿಕೊಟ್ಟಿದ್ದೇನೆ.ದೊಡ್ಡವರೆನಿಸಿದವರು ಹಲವರಲ್ಲಿ ಕೆಲವರು ಈಗ ಕಣ್ಮರೆಯಾಗಿದ್ದಾರೆ. ಇನ್ನು ಕೆಲವರು ನಿವೃತ್ತರಾಗಿದ್ದಾರೆ. ಸಣ್ಣವರಾಗಿದ್ದವರು ಮೆಲ್ಲಮೆಲ್ಲನೆ ದೊಡ್ಡವರಾಗುತ್ತಲಿದ್ದಾರೆ. ನಾನು ಎಳೆಯ ಕಲಾವಿದರನ್ನು ತರಬೇತಿಗಾಗಿ ನಮ್ಮಲ್ಲಿಗೆ ಎಳೆದು ತಂದಾಗ, ನನ್ನ ಆಯ್ಕೆಯ ಕ್ಷೇತ್ರವನ್ನು ವಿಸ್ತಾರಗೊಳಿಸುವ ಧೈರ್ಯ ನನಗಿರಲಿಲ್ಲ. ಮನೆಯವರಿಂದ ಬೇರ್ಪಡಿಸಿ ಹುಡುಗರನ್ನು ನನ್ನ ಬಳಿಗೆ ಕರೆತರಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ನಮ್ಮ ಮನೆಯ ಸಮೀಪದವರನ್ನಾದರೂ ಕರೆತಂದು ಸೇರಿಸಿಕೊಳ್ಳುವ ಮೊದಲು “ನಿಮ್ಮ ಹುಡುಗನಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇನೆ.” ಎಂಬ ಭರವಸೆ ಕೊಟ್ಟೇ ಕರೆತರಬೇಕಾಗುತ್ತಿತ್ತು. ಹಾಗೆ ತಂದು ತರಬೇತಿ ಮಾಡಿಸಿದವರಲ್ಲಿ ಹೆಚ್ಚಿನವರು ತಮ್ಮ ರಂಗಪ್ರವೇಶದ ಹಾರೈಕೆಗಳನ್ನು ಸಾರ್ಥಕಗೊಳಿಸಿದ್ದಾರೆ. ಇನ್ನು ಕೆಲವರು ತಾವು ಪರಿಣತರಾದೆವೆಂದು ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು, ಜೀವನದ ಇತರ ಜಂಜಾಟಗಳಿಗೆ ಸಿಕ್ಕಿ ತಮ್ಮ ಪ್ರತಿಭೆಯನ್ನು ಕಳೆದುಕೊಳ್ಳುವ ಮಟ್ಟಕ್ಕೂ ಮುಟ್ಟಿದ್ದಾರೆ.
ಎಲ್ಲರೂ ಒಂದೇ ರೀತಿಯಾಗಿರಬೇಕೆಂದು ನಿರೀಕ್ಷಿಸುವುದಾದರೂ ಹೇಗೆ? ಏಕರೂಪದ ಸಾಕಾರವೇ ಸಾಕ್ಷಾತ್ಕಾರವಾಗುವುದಾದರೆ, ಭಗವದ್ ಸೃಷ್ಟಿಯಲ್ಲಿ ವೈವಿಧ್ಯವೇ ಇರಲಾರದಲ್ಲ? ನನ್ನೊಂದಿಗೆ ಸಣ್ಣವರಾಗಿದ್ದು ದೊಡ್ಡವರಾಗುತ್ತಿರುವಾಗಲೇ ವಿಧಿಯ ಕಡೆ ಸೇರಿದವರು ಇಬ್ಬರು-ನಮ್ಮ ದೊಡ್ಡಪ್ಪನ ಮಕ್ಕಳು. ಒಬ್ಬನ ಹೆಸರು ರಾಮ, ಇನ್ನೊಬ್ಬನ ಹೆಸರು ಕೃಷ್ಣ. ರಾಮನ ಹೆಸರು ಅವನು ನಿರ್ವಹಿಸುತ್ತಿದ್ದ ರಾಕ್ಷಸ ಪಾತ್ರಗಳಿಂದಾಗಿ ಮೆರೆದಿತ್ತು. ಕೃಷ್ಣ ಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದ. ಅವರಿಬ್ಬರೂ ಪಡೆದು ಬಂದಿದ್ದ ಪ್ರತಿಭೆಯನ್ನು ಮೆರೆಸಲು ಸರಿಯಾದ ಅವಕಾಶ ದೊರೆಯುವ ಮೊದಲೇ ಇಬ್ಬರೂ ಅನಾರೋಗ್ಯಕ್ಕೆ ತುತ್ತಾದರು. ನನ್ನ ಜೊತೆಗೇ- ಅಥವಾ ಒಂದೆರಡು ವರ್ಷಗಳ ಹಿಂದು ಮುಂದಿನ ವ್ಯತ್ಯಾಸದಲ್ಲಿ- ರಂಗಪ್ರವೇಶ ಮಾಡಿ ಇಂದಿಗೂ ತಮ್ಮ ಕಲಾಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುತ್ತಲಿರುವವರು ಕೆಲವರಿದ್ದಾರೆ. ಅವರೆಲ್ಲರನ್ನೂ ನಾನು ಪ್ರತ್ಯೇಕವಾಗಿ ಹೆಸರಿಸಬೇಕಾಗಿಲ್ಲ.
ಮೂಢನಂಬಿಕೆಗಳು ಅಂಧಾನುಕರಣೆಯೇ ?
-ರಾವ್ ಎವಿಜಿ
ಮೂಢನಂಬಿಕೆ ಎಂದರೇನು? ಈ ಪ್ರಶ್ನೆ ನನ್ನಲ್ಲಿ ಉದ್ಭವಿಸಲು ಕಾರಣವಾದದ್ದು ಹಾಲಿ ಅಸ್ತಿತ್ವದಲ್ಲಿ ಇರುವ ಕೆಲವು ಮತೀಯ ಆಚರಣೆಗಳ ಪರ-ವಿರೋಧ ವಾದಗಳು. ಇದಕ್ಕೆ ಸಂಬಂಧಿಸಿದಂತೆ ನನ್ನ ಗಮನ ಸೆಳೆದ ಪತ್ರಿಕೆಗಳಲ್ಲಿ ವರದಿ ಆದ ಮತೀಯ ಆಚರಣೆಗಳು ಇವು:
(೧) ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಲು ಹಿಂದಿನಿಂದ ಆಚರಣೆಯಲ್ಲಿ ಇರುವ ‘ಬ್ರಾಹ್ಮಣರು ಉಂಡೆದ್ದ ಎಂಜಲೆಲೆಗಳ ಮೇಲೆ ಉರುಳು ಸೇವೆ ಮಾಡುವ ಮಡೆಸ್ನಾನ ಪದ್ಧತಿ’
(೨) ಗುಲ್ಬರ್ಗ ಜಿಲ್ಲೆಯಲ್ಲಿ ಆಚರಣೆಯಲ್ಲಿ ಇರುವ ‘ಸೂರ್ಯಗ್ರಹಣ ಕಾಲದಲ್ಲಿ ಸುಮಾರು ೬ ತಾಸು ಕಾಲ ಮಕ್ಕಳನ್ನು ಆಂಗವೈಕಲ್ಯದ ನಿವಾರಣೆಗಾಗಿ ಕುತ್ತಿಗೆಯ ತನಕ ಭೂಮಿಯಲ್ಲಿ ಹುಗಿದಿರಇಸುವ ಪದ್ಧತಿ’
(೩) ಮಹಾರಾಷ್ಟ್ರದ ಶೋಲಾಪುರದಲ್ಲಿ ಆಚರಣೆಯಲ್ಲಿ ಇರುವ ‘ಸುಮಾರು ೫೦ ಅಡಿ ಎತ್ತರದಿಂದ ಹಸುಗೂಸುಗಳನ್ನು ಕೆಳಗೆ ಬಿಗಯಾಗಿ ಎಳದು ಹಿಡಿದುಕೊಂಡಿರುವ ಬೆಡ್ ಶೀಟಿಗೆ ಎತ್ತಿ ಹಾಕುವ ಪದ್ಧತಿ’
(೪) ತಮಿಳುನಾಡಿನಲ್ಲಿ ಆಚರಣೆಯಲ್ಲಿ ಇರುವ ‘ಗಲ್ಲದ ಮೂಲಕ ಚೂಪಾದ ದಬ್ಬಳದಂಥ ಸಾಧನಗಳನ್ನು, ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸಿಕೊಂಡು ಆವೇಶದಿಂದ ಕುಣಿಯುವ ಕಾವಡಿ ಆಟಮ್ ಪದ್ಧತಿ’
(೫) ಭಾರತದ ಗಡಿಗೆ ತಾಗಿಕೊಂಡಿರುವ ನೇಪಾಳದ ಹಳ್ಳಿಯೊಂದರಲ್ಲಿ ೫ ವರ್ಷಕ್ಕೊಮ್ಮೆ ಜರಗುವ ಹಿಂದೂ ಹಬ್ಬದಲ್ಲಿ ಸುಮಾರು ೨೫೦೦೦೦ ಕ್ಕೂ ಅಧಿಕ ಪ್ರಾಣಿಗಳನ್ನು (ವಿಶೇಷತಃ ಎಮ್ಮೆಗಳನ್ನು) ಬಲಿ ಕೊಡುವ ಪದ್ಧತಿ
(೬) ಒರಿಸ್ಸಾದ ಕೆಲವೆಡೆ ಆಚರಣೆಯಲ್ಲಿ ಇರುವ ‘ಪುಟ್ಟ ಬಾಲಕರನ್ನು ನಾಯಿಯೊಂದಿಗೆ ಮದುವೆ ಮಾಡುವ ಪದ್ಧತಿ’
(೭) ಚಾಮರಾಜನಗರ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ಷಷ್ಠಿಯಂದು ಆಚರಿಸುವ ‘ಹುತ್ತಕ್ಕೆ ಪೂಜೆ ಸಲ್ಲಿಸಿ ಅದರ ಮೇಲೆ ಒಂದು ಕೋಳಿಮೊಟ್ಟೆ ಇಟ್ಟು (ಸಾಮಾನ್ಯವಾಗಿ ಹೆಂಗಸರು) ಕೋಳಿಯ ಕತ್ತು ಕೊಯ್ದು ಬಿಸಿರಕ್ತ ಸುರಿಯುವ ಪದ್ಧತಿ’
ಇಲ್ಲಿ ನಮೂದಿಸಿರುವ ಪ್ರತೀ ಆಚರಣೆಯನ್ನು ಸಮರ್ಥಿಸಿಕೊಳ್ಳಲು ‘ಅನಾದಿಕಾಲದಿಂದಲೂ ಆಚರಣೆಯಲ್ಲಿದೆ’, ‘ಆಚರಣೆಯಿಂದ ಅನೇಕರಿಗೆ ಒಳ್ಳೆಯದಾಗಿದೆ’, ‘ಅನೇಕರಿಗೆ ರೋಗ ವಾಸಿ ಆಗಿದೆ’ ‘ನಮಗೆ ಮನಶ್ಶಾಂತಿ ದೊರೆತಿದೆ’, ‘ಇತರರಿಗೆ ತೊಂದರೆ ಕೊಡುವುದಿಲ್ಲ’ ಮುಂತಾದ ವಾದಗಳನ್ನು ಮುಂದಿಡುತ್ತಾರೆ. ಇವುಗಳನ್ನು ‘ಆಧ್ಯಾತ್ಮಿಕ ಪ್ರತೀಕಗಳಾಗಿ’ ಏಕೆ ಪರಿಗಣಿಸ ಬೇಕು ಅನ್ನುವುದನ್ನು ವಿವರಿಸುವುದೂ ಉಂಟು. ಇವು ‘ಅಮಾನವೀಯ’, ‘ಅನಾಗರೀಕ’. ‘ವೈದಿಕ ಸಂಪ್ರದಾಯವಾದಿಗಳು ಅರ್ಥಾತ್ ಬ್ರಾಹ್ಮಣ ವರ್ಗದವರು ಹಿಂದುಳಿದವರನ್ನೂ ದಲಿತರನ್ನೂ ಶೋಷಿಸಲೋಸುಗವೇ ಹುಟ್ಟುಹಾಕಿ ಪೋಷಿಸಿಕೊಂಡು ಬಂದಿರುವ ಮೂಢನಂಬಿಕೆಗಳು’ ಎಂದೆಲ್ಲ ವಿರೋಧಿಸುವವರೂ ಇದ್ದಾರೆ. ಇರುವ ಅಸಂಖ್ಯ ಸ್ವಘೋಷಿತ ಮತ್ತು ಪರಂಪರಾಗತ ಮಠಾಧಿಪತಿಗಳ ಪೈಕಿ ಬಹುತೇಕರು ಈ ಕುರಿತು ‘ದಿವ್ಯಮೌನ’ ತಳೆದಿದ್ದಾರೆ, ಕೆಲವರು ‘ಇವೆಲ್ಲ ನಂಬಿಕೆಯ ಪ್ರಶ್ನೆಗಳು, ಬಲು ಹಿಂದಿನಿಂದ ಪರಂಪರಾಗತ ನಂಬಿಕೆಯನ್ನು ಪ್ರಶ್ನಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಸರಿಯಲ್ಲ’, ಆತ್ಮಸಂತೋಷಕ್ಕಾಗಿ ಅವರಿಗೆ ಸರಿ ಅನ್ನಿಸಿದ್ದನ್ನು ಮಾಡುವ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವುದು ಸರಿಯೇ?’ ಅನ್ನುವುದರ ಮೂಲಕ ಈ ಆಚರಣೆಗಳನ್ನು ಪರೋಕ್ಷವಾಗಿ ಪೋಷಿಸುತ್ತಿದ್ದಾರೆ. ಮತ್ತಷ್ಟು ಓದು 
ಯಥಾ ಗುರು ಹಾಗೆ ಶಿಷ್ಯ
ಪವನ್ ಪಾರುಪತ್ತೇದಾರ
ರಾಘವೇಂದ್ರ ಭವನದ ಸರ್ಕಲ್ ನ ಬಳಿಯ ಬೇಕರಿಯಲ್ಲಿ ನಾನು ಮತ್ತೆ ಗೆಳೆಯ ಯಾದವ್ ಕೆಟ್ಟದ್ದನ್ನ ಸುಡುತ್ತ ನಿಂತಿದ್ದೆವು. ಹಾಗೆ ಮಾತನಾಡುತ್ತಿರುವಾಗ ನಮ್ಮ ಮಾತುಗಳು ಕನಸಿನ ಬಗ್ಗೆ ಹೊರಟಿತು. ನಾನು ಹೇಳಿದೆ, ಮಗ ಕನಸು ಕಾಣಬೇಕು ಮಗ ಯಾವಾಗಲು, ಆಗಲೇ ಎತ್ತರಕ್ಕೆ ಬೆಳೆಯಕ್ಕೆ ಸಾಧ್ಯವಾಗೋದು ಅಂತ. ಯಾದವ್ ಒಂದು ರೀತಿಯ ಮಾರ್ಮಿಕವಾದ ನಗು ತೋರಿ ಶಾಸ್ತ್ರೀ ನಿದ್ದೆ ಮಾಡಿದ್ರೆ ತಾನೆ ಮಗ ಕನಸು ಕಾಣಕ್ ಆಗೋದು?? ನಿದ್ದೇನೆ ಇಲ್ಲ ಅಂದ್ರೆ ಕನಸು ಎಲ್ಲಿಂದ ಕಾಣನ ಹೇಳು ಅಂದ.ನಿದ್ದೇನೆ ಮಾಡದೇ ಕನಸು ಕಂಡ್ರೆ ಹಗಲುಗನಸು ಕಾಣಬೇಡ ಅಂತ ಬೈತಾರೆ. ಕನಸು ಕಾಣಕ್ಕದ್ರು ನಿದ್ದೆ ಮಾಡೋಣ ಅಂದ್ರೆ ಎಲ್ಲಿ ಸ್ವಾಮಿ ಬರುತ್ತೆ ನಿದ್ರೆ?? ಪಕ್ಕದ ಮನೆ ಪದುಮಕ್ಕ ನಮಮ್ಮ ನೀರಿಗೆ ಹೋದಾಗ ಏನ್ರಿ ಗಿರಿಜಮ್ಮ ನಿಮ್ಮ ಮಗ ಅದೇನೋ ಇಂಜಿನಿಯರಿಂಗ್ ಓದಿದ್ದನಲ್ಲ ಕೆಲಸ ಸಿಕ್ತ ಅವನಿಗೆ ಅಂತ ಕೇಳಿದಾಗ ನಮಮ್ಮ ಇಲ್ಲ ಕಣ್ರೀ ಯಾವ್ದೋ recession ಅಂತ ತೊಂದರೆ ಬಂದಿದೆ ಅಂತೆ ಅದದ್ಮೇಲೆ ಸಿಗತ್ತೆ ಅಂತ ಹೇಳ್ದ ಅಂತ ಹೇಳೋ ಮಾತು ಕೇಳಿದಾಗ, ನಮಪ್ಪ ಅವರ ಹೊಲದಲ್ಲಿ ಕೆಲಸ ಮಾಡುವ ಕೂಲಿಯವರು ಏನ್ ಸಾಮಿ ನಮ್ ಚಿಕ್ ಐನೋರು ಎಲ್ಲನ ಕೆಲಸಕ್ಕೆ ಹೋಗ್ತವ್ರ, ಇಲ್ಲ ಮನೇಲೆ ಮುದ್ದೆ ಮುರಕೊಂಡು ಅವ್ರ ಇನ್ನ ಅಂತ ಕೇಳಿದಾಗ ನನ್ನಪ್ಪ ನನ್ನ ಕಡೆ ನೋಡಿ ಹುಡುಕ್ತ ಇದ್ದನಪ್ಪ ಇನ್ನು ಯಾವಾಗ್ ಸಿಗತ್ತೋ ಗೊತ್ತಿಲ್ಲ ಅಂತ ಹೇಳೋವಾಗ ನೋಡಿ ಇನ್ನು ನನಗೆ ನಿದ್ದೆ ಅದ್ರು ಎಲ್ಲಿ ಬರಲು ಸಾಧ್ಯ?? ನನಗೆ ಮಾತ್ರ ಅಲ್ಲ ಸ್ವಾಭಿಮಾನ ಇರುವ ಯಾವುದೊ ವ್ಯಕ್ತಿಗೂ ನಿದ್ದೆ ಬರಲ್ಲ ಇನ್ನು ಕನಸು ಕಾಣುವುದು ಬಹಳ ದೂರದ ಮಾತು ಅಂತ ಒಂದೇ ಮಾತಿನಲ್ಲಿ ಹೇಳಿಬಿಟ್ಟ.
ಸಮಾಜ ಎಷ್ಟು ಬದಲಾಗಿಬಿಟ್ಟಿದೆ ಅಲ್ವಾ?? ಇಲ್ಲ ನಾವೇ ಬದಲಾಗಿದ್ದಿವ?? ಮೊದಲಿಗೆ ೧೦ನೇ ಕ್ಲಾಸ್ ಓದಿದರೆ ಸಾಕು ಕೆಲಸ ಸಿಕ್ತಿತ್ತಂತೆ ನಮ್ ತಾತ ಓದಿದ್ದು ಬರಿ ೭ನೇ ಕ್ಲಾಸು ಲೋವೆರ್ ಸೆಕೆಂಡರಿ ಅಂತೆ, ಅವರು ನಮ್ಮೂರಲ್ಲಿ ಫೇಮಸ್ ಎಲೆಕ್ಟ್ರಿಕ್ contractor. ಇನ್ನು ನಮ್ಮ ತಂದೆ PUC ಓದಿದಕ್ಕೆ ಎಷ್ಟೋ ಸರ್ಕಾರೀ ಕೆಲಸಗಳು ಬಂದಿದ್ದವಂತೆ.ನಮ್ಮ ಅಣ್ಣಂದಿರು ಡಿಗ್ರಿ ಓದಿ ಒಳ್ಳೆಯ ಕಡೆ ಕೆಲಸಗಳಲ್ಲೂ ಇದ್ದಾರೆ. ಆದ್ರೆ ಈಗ ಇಂಜಿನಿಯರಿಂಗ್ ಮಡಿ MBA ಮಾಡಿ. MA ಗಳು MCA ಗಳು ಎಲ್ಲ ಮಾಡಿಯೂ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿರುತ್ತಾರೆ. ಮೊನ್ನೆ ಮೊನ್ನೆ syntel ಎಂಬ ಕಂಪನಿ ಗೆ ವಾಕ್-ಇನ್ ಇಂಟರ್ವ್ಯೂ ಗೆ ಎಂದು ಹೋಗಿದ್ದೆ. ಇದ್ದ ಉದ್ಯೋಗಾವಕಾಶ ಸುಮಾರು ೬೦ ಅಂತೆ ಅಲ್ಲಿ ೬೦೦೦ ಕ್ಕೂ ಹೆಚ್ಚು ಜನ ಗೇಟ್ ನ ಹೊರಗೆ ಕಾಯುತಿದ್ದೆವು. ಅದರಲ್ಲಿ ೩೦೦೦ ಉತ್ತರ ಭಾರತೀಯರು ಒಂದು ೨೦೦೦ ತಮಿಳುನಾಡು ಮತ್ತು ಆಂಧ್ರ ಮತ್ತು ಕೇರಳಿಗರು ನಮ್ಮ ಜನ ಸುಮಾರು ೧೦೦೦. ಗೇಟ್ ತೆಗೆದಿದ್ದೆ ತಡ ಒಳ್ಳೆ ತಿರುಪತಿ ವೆಂಕಟರಮಣನ ದರ್ಶನಕ್ಕೆ ಭಕ್ತರು ನುಗ್ಗುವಂತೆ ನುಗ್ಗಲು ಆರಂಭಿಸಿದರು. ನಾನು ನನ್ನ ಗೆಳೆಯ ನುಗ್ಗಲು ಸಾಧ್ಯವಾಗದೆ ಬೇಡ syntel ಸಹವಾಸ ಎಂದು ವಾಪಾಸ್ ಬಂದೆವು. ಇಂತಹ ಅದೆಷ್ಟೋ ನಿದರ್ಶನಗಳು ನಮ್ಮ ಮುಂದೆ ಇದ್ದೇ ಇವೆ. ಮತ್ತಷ್ಟು ಓದು 
ಮೆಸೇಜೆಂಬ ಅಂಚೆ
-ಪ್ರಶಸ್ತಿ.ಪಿ
ನಮ್ಮ ಗುಂಡಣ್ಣ ಏನೋ ಬರೀತ ಕುತ್ಕಂಡಿದ್ದಾಗ ಅವ್ನ ಗೆಳೆಯರೆಲ್ಲ ಒಬ್ಬೊಬ್ರಾಗಿ ಅಲ್ಲಿ ಬಂದು ಸೇರ್ಕಂಡ್ರು. ಅವ್ನ ಬರೆಯೋ ಪ್ಯಾಡೂ ಕಸ್ಕಂಡು ಅದ್ರ ತಲೆಬರಹ ಓದಿದ ಟಾಂಗ್ ತಿಪ್ಪ ಅಲಿಯಾಸ ತಿಪ್ಪೇಶಿ.. “ಮೆಸೇಜೆಂಬ ಅಂಚೆ” .. ಎಂತ ಮಾರಾಯ ಪಂಚೆ ಅಂದ್ಯ? ಅದು ನನ್ನ ಮೆಚ್ಚಿನ ಉಡುಪು ಗುತ್ತುಂಟಾ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಪಂಚೆ ಅಲ್ಲ ಮುಂಜು ಅವ್ರೆ ಅಂಚೆ.. ಪೋಸ್ಟು ಅಲ್ವಾ ಮಿಸ್ಟರ್ ರೌಂಡ್ ಅಂತ ಬಂದ್ಳು ಇಳಾ ಅಲಿಯಾಸ್ ಇಳಾದೇವಿ. ಸಂದೇಶ ಹಾಕದು ಜಂಗಮದಾಗೆ, ಅಂಚೆ ಹಾಕದು ಡಬ್ದಾಗೆ. ಅದುಕ್ಕೂ ಇದುಕ್ಕೂ ಎಂತ ಸಂಬಂಧ ಗುಂಡು ಅಂದ್ಲು ಸರಿತಾ. ಹೌದು ಕಣ್ಲಾ, ಏನೂ ತಿಳ್ಯಾಕಿಲ್ಲ, ನೀನೇ ಬುಡ್ಸಿ ಹೇಳಪಾ ಸಾಯಿತಿ ಅಂತ ಕಾಲೆಳೆದ ತಿಪ್ಪೇಶಿ.
ಏ ಥೋ, ಸಾಯಿತಿ ಅಲ್ಲೋ , ಸಾಹಿತಿ.. “ಕೋಣಂಗೆ ಕಿನ್ನರಿ ನಾದನೇ ತಿಳ್ಯಕ್ಕಿಲ್ಲ” ಅಂತ ಹಾಡಕ್ಕೆ ಶುರು ಹಚ್ಕಂಡ ಗುಂಡ..ಎಲ್ಲಾ ನಗಕಿಡಿದ್ರು. ಕದ್ದಿರೋ ಟ್ಯೂನಿಗೆ ಗೊತ್ತಿರೋ ಗಾದೆ ಸೇರ್ಸಿ ಹೊಸ್ಯೋ ಬದ್ಲು ನೀನು ಬರ್ದಿದ್ದಲಿ ಹೊಸದೇನಿದೆ ಹೇಳು ಅಂದ ತಿಪ್ಪ ಸ್ವಲ್ಪ ಬೇಜಾರಾಗಿ. ಮುಂಚೆ ಎಲ್ಲ ಅಂಚೆ ಕಳಿಸ್ತಿದ್ವಿ, ಈಗ ಮೆಸೇಜು ಅಷ್ಟೆಯ ಬೇರೆಲ್ಲಾ ಅಲ್ಲಿದ್ದಿದ್ದೇ ಇಲ್ಲಿ, ಇಲ್ಲಿದ್ದದ್ದೇ ಅಲ್ಲಿ ಅಂದ ಗುಂಡ. ಮಾರ್ರೆ ವೇದಾಂತ ತರ ಹೇಳೋದು ಬಿಟ್ಟು ಸ್ವಲ್ಪ ಬಿಡ್ಸಿ ಹೇಳೂಕಾತ್ತ ? ಅಂದ ಮಂಜ. ಸರಿತಾ, ಇಳಾನೂ ಅದೇ ಸರಿ ಅನ್ನೋ ತರ ಹೂಂ ಅಂದ್ರು..
ವಿಳಾಸ ಸರಿ ಇದ್ರೂ ಅಂಚೆ ಕಳ್ಸಿದ್ದು ಕಳ್ದೇ ಹೋಗ್ತಿತ್ತು ಕೆಲೋ ಸಲ.ಅದೇ ತರ ಸಂದೇಶಗಳ “ಕಳಿಸುವಿಕೆ ವಿಫಲ” ಎಂಬ Delivery Report ಉ ಅಂದ ಗುಂಡ. ಎಲ್ಲರಿಗೂ ಒಂದ್ಸಲ ಕತ್ಲಲ್ಲಿ ಬಲ್ಬು ಹತ್ಕಂಡಗಾಯ್ತು. ಗುಂಡನ ಮುಖದಲ್ಲಿ ಈಗ ನಗು ಮೂಡಿತು.. ಮುಂದುವರ್ಸಿದ ಹಾಗೆ.
ಈ ‘ದಿನಾಚರಣೆ’ಗಳು ಲೇಖನ, ರಾಲಿಗಳಿಗೆ ಮಾತ್ರ ಸೀಮಿತ ಯಾಕೆ?
-ರಶ್ಮಿ. ಕಾಸರಗೋಡು
2011 ಕ್ಯಾಲೆಂಡರ್ ವರ್ಷ ಮುಗಿಯುತ್ತಾ ಬಂದಿದೆ. ಹಳೆಯ ಕ್ಯಾಲೆಂಡರ್್ನ್ನು ಬದಲಿಸಿ ಹೊಸ ಕ್ಯಾಲೆಂಡರ್್ಗೆ ಜಾಗ ಕಲ್ಪಿಸುವ ಹೊಸ ವರ್ಷಕ್ಕೆ ದಿನ ಎಣಿಕೆ ಆರಂಭವಾಗಿದೆ. ಹೌದು, ಮನೆಯಲ್ಲಿ ಹೊಸ ಕ್ಯಾಲೆಂಡರ್ ನೇತು ಹಾಕುವಾಗ “ವರ್ಷ ಎಷ್ಟು ಬೇಗ ಕಳೆದು ಹೋಯಿತಲ್ವಾ..ಗೊತ್ತೇ ಆಗಿಲ್ಲ” ಎಂಬ ಉದ್ಗಾರ ಸರ್ವೇ ಸಾಮಾನ್ಯ. ನಾವು ಚಿಕ್ಕವರಿರುವಾಗ ಅಂದ್ರೆ ಶಾಲೆಗೆ ಹೋಗುವ ಸಮಯದಲ್ಲಿ ಮನೆಗೆ ಹೊಸ ಕ್ಯಾಲೆಂಡರ್ ತಂದ ಕೂಡಲೇ ಅದರಲ್ಲಿನ ಕೆಂಪು ಬಣ್ಣದ ದಿನಾಂಕ ಎಷ್ಟು ಇದೆ ಅಂತಾ ಲೆಕ್ಕ ಹಾಕುತ್ತಿದ್ದೆವು. ಶಾಲೆಗೆ ಎಷ್ಟು ದಿನ ರಜೆ ಸಿಗುತ್ತೆ? ಎಂಹ ಕುತೂಹಲ ನಮ್ಮಲ್ಲಿ. ಕೆಲವೊಮ್ಮೆ ಸಾರ್ವಜನಿಕ ರಜಾದಿನಗಳು ಶನಿವಾರ, ಭಾನುವಾರ ಬಂದರೆ ಒಂದು ರಜೆ ನಷ್ಟವಾಯಿತಲ್ಲಾ ಅಂತಾ ಬೇಸರವೂ ಆಗುತ್ತಿತ್ತು. ಹಾಗಂತ ಕ್ಯಾಲೆಂಡರ್್ನಲ್ಲಿ ರಜೆ ಇರುವ ದಿನಗಳು ಸೇರಿ ಇನ್ನೂ ಹೆಚ್ಚಿನ ರಜೆಗಳು (ಕೇರಳದಲ್ಲಿ ಬಂದ್ ಸರ್ವೇ ಸಾಮಾನ್ಯ ಇಂತಿರುವಾಗ ಅಲ್ಲೂ ಒಂದೆರಡು ರಜೆ, ಅದರೆಡೆಯಲ್ಲಿ ಭಾರೀ ಮಳೆ, ಯಾವುದಾದರೂ ಮಹಾನ್ ವ್ಯಕ್ತಿಗಳು ಸಾವನ್ನಪ್ಪಿದರೆ ಸಿಗುವ ಶೋಕ ರಜೆ, ಓಣಂ, ಕ್ರಿಸ್್ಮಸ್ ಮೊದಲಾದ ಹಬ್ಬಗಳಿಗೆ ಸಿಗುವ 10 ದಿನಗಳ ರಜೆ) ಸಿಕ್ಕಿದರೂ ಶಾಲಾ ದಿನಗಳಲ್ಲಿ ಅದೂ ಕಮ್ಮಿಯೇ.
ದೇವರು, ಧರ್ಮ ಮತ್ತು ಮತ
– ಗೋವಿಂದ ರಾವ್ ವಿ ಅಡಮನೆ
ನಿಮಗೆ ದೇವರ ಅಸ್ತಿತ್ವದಲ್ಲಿ ನಂಬಿಕೆ ಇದೆಯೇ? ಎಂಬ ಬ್ಲಾಗಿನಲ್ಲಿ ನನ್ನ ದೃಷ್ಟಿಯಲ್ಲಿ ದೇವರು ಎಂದರೇನು ಎಂಬುದನ್ನು ವಿವರಿಸುತ್ತಾ – ನಾನು ನಂಬಿರುವ ‘ವಿಚಿತ್ರತೆ’ ದೇವರು ಬೇಕಾಬಿಟ್ಟಿಯಾಗಿ ಕಾರ್ಯಮಾಡುವಂತಿಲ್ಲ. ಅರ್ಥಾತ್, ಅದು ‘ಸರ್ವಶಕ್ತ’ವಲ್ಲ. ಎಂದೇ, ಅದನ್ನು ಓಲೈಸಲೂ ಸಾಧ್ಯವಿಲ್ಲ. ಅದು ಕರುಣಾಮಯಿಯೂ ಅಲ್ಲ, ನಿರ್ದಯಿಯೂ ಅಲ್ಲ. ಅರ್ಥಾತ್, ಜೀವಿಸಹಜವಾದ ಸಂವೇದನೆಗಳೇ ಆಗಲಿ, ಭಾವೋದ್ವೇಗಳೇ ಆಗಲಿ, ಜನನ-ಮರಣಗಳೇ ಆಗಲಿ ಇಲ್ಲದಿರುವ ಸ್ಥಿತಿ ಈ ‘ವಿಚಿತ್ರತೆ’. ಎಂದೇ, ಅದು ನಿರ್ವಿಕಾರ. ವಿಶ್ವದಲ್ಲಿ ಜರಗುವ ಪ್ರತಿಯೊಂದು ವಿದ್ಯಮಾನವೂ ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿದ್ದ ಮೂಲ ನಿಯಮದ ಮತ್ತು ಅದರ ಅನುನಿಯಮಗಳಿಗೆ ಅನುಗುಣವಾಗಿಯೇ ಜರಗುತ್ತದೆ ಎಂಬುದು ನನ್ನ ನಂಬಿಕೆ ಎಂದು ಈಗಾಗಲೇ ಘೋಷಿಸಿದ್ದೇನೆ. ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’ ಎಂಬುದು ನನ್ನ ನಿಲುವು – ಎಂದು ಹೇಳಿದ್ದೆ. ಈ ಬ್ಲಾಗಿನಲ್ಲಿ ಅದೇ ವಿಚಾರಧಾರೆಯನ್ನು ಮುಂದುವರಿಸುತ್ತಾ ನನ್ನ ದೃಷ್ಟಿಯಲ್ಲಿ ಧರ್ಮ ಎಂದರೇನು ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತೇನೆ. ಮೇಲ್ನೋಟಕ್ಕೆ ಸರಳವಾಗಿ ಗೋಚರಿಸುವ – ‘ವಿಚಿತ್ರತೆ’ಯಲ್ಲಿ ಅಂತಸ್ಥವಾಗಿರುವ ಮೂಲ ಮತ್ತು ಅನುನಿಯಮಗಳನ್ನು ತಿಳಿದು ಅವಕ್ಕೆ ಅನುಗುಣವಾಗಿ ವರ್ತಿಸುವುದೇ ‘ಧರ್ಮ’- ಎಂಬ ವ್ಯಾಖ್ಯಾನ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೂಲ ಮತ್ತು ಅನುನಿಯಮಗಳೇನು ಎಂಬುದನ್ನು ತಿಳಿಸುವುದಿಲ್ಲ. ಬಹುಶಃ ಎಲ್ಲರೂ ಒಪ್ಪುವ ರೀತಿಯಲ್ಲಿ ಇವನ್ನು ತಿಳಿಸುವ ಸಾಮರ್ಥ್ಯ ಯಾರಿಗೂ ಇಲ್ಲವೋ ಏನೋ. ಎಂದೇ, ಈ ದಿಶೆಯಲ್ಲಿ ಪ್ರಯತ್ನಿಸಿದವರ ಪೈಕಿ ಯಾರಿಗೂ ಸರ್ವಮಾನ್ಯತೆ ದೊರೆತಿಲ್ಲ. ದೊರೆತಿದ್ದಿದ್ದರೆ ಇಂದು ನಮಗೆ ಗೋಚರಿಸುತ್ತಿರುವ ‘ಧರ್ಮಯುದ್ಧ’ಗಳು ನಡೆಯುತ್ತಲೇ ಇರಲಿಲ್ಲ, ‘ಮತಾಂತರ’ದ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ.
ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ,ಜಾತಿಗಾಗಿಯಲ್ಲ
– ರಾಕೇಶ್ ಶೆಟ್ಟಿ
ಇದನ್ನ ಈ ದೇಶದ ಕರ್ಮ ಅಂತಲೇ ಅನ್ನಬೇಕೇನೋ, ಅಂದುಕೊಂಡಂತೆ ‘ಮಡೆ ಸ್ನಾನ’ದ ‘ಮಡೆ'(ಮಡೆ=ಎಂಜಲು) ಉರುಳದವರ ಮೇಲೆಯೂ ಬೀಳುತ್ತಿದೆ.ಇಷ್ಟು ದಿನ ಉರುಳಾಡಿದ್ದು ಮನುಷ್ಯರಾದರೆ ಈಗ ಸಮಸ್ತ ಜಾತಿಗಳು ಬಿದ್ದು ಉರುಳಾಡುತ್ತಿವೆ.ಮಡೆ ಸ್ನಾನವನ್ನು ವಿರೋಧಿಸಿ ನಾನು ಈ ಹಿಂದೆ ಬರೆದ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ‘ಅದು ಬ್ರಾಹ್ಮಣರ ಎಂಜಲೆಲೆ’ ಅನ್ನುವ ಕಾರಣಕ್ಕೆ ವಿರೋಧಿಸುತಿದ್ದಿರ ಅನ್ನುವಂತಹ ಪ್ರತಿಕ್ರಿಯೆಗಳು ಬ್ಲಾಗಿನಲ್ಲಿ/ಮಿಂಚೆಗಳ ಮೂಲಕ ಬಂದಿವೆ. ನನ್ನ ಲೇಖನದಲ್ಲೂ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದ್ದೆ, ಅದ್ಯಾವ ಜಾತಿಯವರು ತಿಂದು ಮತ್ತಿನ್ಯಾವಾ ಜಾತಿಯವ ಅದರ ಮೇಲೆ ಉರುಳಾಡುವುದು ಅಷ್ಟೇ ಅಸಹ್ಯಕರ’ ಅಂತ.
ಅಂದರೆ,ಅದು ಕುಕ್ಕೆಯ ಮಡೆ ಸ್ನಾನವಿರಲಿ ಅಥವಾ ತುರುವೇಕೆರೆಯ ಮಡೆಸ್ನಾನವಿರಲಿ ಎರಡೂ ಅಸಹ್ಯಕರವೇ, ಎರಡೂ ಖಂಡನೀಯವೇ.ಮಡೆ ಸ್ನಾನದ ಪರ-ವಿರೋಧ ಮಾತನಾಡುವವರು ನೆನಪಿಡಬೇಕಾದದ್ದು ‘ಈ ಮಡೆಸ್ನಾನ ನಿಲ್ಲಬೇಕಾಗಿರುವುದು ಮಾನವೀಯತೆಗಾಗಿ ಹೊರತು ಜಾತಿಗಾಗಿಯಲ್ಲ’ ಅನ್ನುವುದು.
ನಾವು ನಿಜಕ್ಕೂ ತಾಂತ್ರಿಕತೆಯನ್ನು ಬಳಸ್ತಾ ಇದೇವ?







