ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 2, 2012

40

‘ಕೋಮುವಾದ ಮತ್ತು ಮಹಿಳೆ’ ಎಂಬ ಲೇಖನಕ್ಕೊಂದು ಪ್ರತಿಕ್ರಿಯೆ

‍ನಿಲುಮೆ ಮೂಲಕ

– ಡಾ.ಜಿ. ಭಾಸ್ಕರ ಮಯ್ಯ

ಸಬಿಹಾರವರ ಮಹಿಳೆ ಮತ್ತು ಕೋಮುವಾದ ಇಂದು ವಿವಾದಕ್ಕೆ ಒಳಗಾಗಿರುವುದು ಜನರ ಕೋಮುವಾದೀಕರಣದ ಪ್ರಕ್ರಿಯೆ ಎಷ್ಟೊಂದು ಉಲ್ಬಣಿಸಿದೆ ಎನ್ನುವುದಕ್ಕೆ ಸಾಕ್ಷಿ. ಸಬಿಹಾರವರ ಲೇಖನದ ಯಾವ ಒಂದು ವಾಕ್ಯವೂ ಅಸತ್ಯದಿಂದ ಕೂಡಿಲ್ಲ. ಪೂರ್ವಾಗ್ರಹಪೀಡಿತವಾಗಿಲ್ಲ. ಅದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಹಾಗೆ ನೋಡಿದರೆ, ಗುಜರಾತಿನ ಬಗ್ಗೆ ಲೇಖಕಿ ಹೇಳಿರುವುದು ಕಡಿಮೆಯೆ. ಅಲ್ಲಿಯ ನರಮೇಧ ಮತ್ತು ಮಹಿಳೆಯರ ಮೇಲಿನ ಭಯಾನಕ ಅತ್ಯಾಚಾರ ಮಧ್ಯಯುಗದ ಯಾವುದೇ ಧರ್ಮಯುದ್ಧ, ಕ್ರುಸೇಡ್ ಮತ್ತು ಜಿಹಾದ್‌ಗೆ ಕಡಿಮೆಯಿಲ್ಲ. ಮನುಷ್ಯತ್ವದಲ್ಲಿ ನಂಬಿಕೆ ಇರುವವರಿಗೆ ಆಕ್ರೋಶ ಉಂಟಾಗುವಂತಹ ಸನ್ನಿವೇಶದ ಚಿತ್ರಣವನ್ನು ಲೇಖಕಿ ಅತ್ಯಂತ ಸಹನೆಯಿಂದ ಉಲ್ಲೇಖಿಸುತ್ತಾರೆ. ಕೋಮುವಾದದ ವಿವಿಧ ಮುಖಗಳನ್ನು ಮತ್ತು ಆಯಾಮಗಳನ್ನು ಚರ್ಚಿಸುತ್ತಾರೆ. ಆದರೆ, ಲೇಖನದ ಆರಂಭದಲ್ಲಿ ಫಣಿರಾಜರವರು ಕೋಮುವಾದದ ಕುರಿತು ಹೇಳಿದ ಮಾತಿನ ಒಂದು ಉಲ್ಲೇಖವಿದೆ. ಅದು …ಬಹುಸಂಖ್ಯಾತರ ಸಂಸ್ಕೃತಿಗೆ ಅಲ್ಪಸಂಖ್ಯಾತರು ಹೊರಗಿನವರು ಎಂದು ವಾದಿಸಿ ದ್ವೇಷ ತಿರಸ್ಕಾರಗಳನ್ನು ಬೆಳೆಸುವುದೇ ಕೋಮುವಾದ – ಕೋಮೂವಾದಕ್ಕೆ ಇಂತಹ ಸರಳ ವ್ಯಾಖ್ಯೆ ಸರಿಯಲ್ಲ. ಫಣಿರಾಜ್ ಮತ್ತು ಜಿ. ರಾಜಶೇಖರ್ ಕೋಮುವಾದವನ್ನು ವಿರೋಧಿಸುವಲ್ಲಿ ನಿಷ್ಪಕ್ಷಪಾತಿಗಳಾಗಿರದೆ, ಒಂದು ಕೋಮಿನ ಕೋಮುವಾದದ ಕುರಿತು ಮೌನವಹಿಸುವುದು ಅಥವಾ ಅಂತಹ ಸಂಸ್ಥೆಗಳೊಂದಿಗೆ ಸಂಬಂಧವನ್ನಿರಿಸಿಕೊಳ್ಳುವುದು ನಿಜಕ್ಕೂ ಆಕ್ಷೇಪಾರ್ಹ. ಆದರೆ ಸಬಿಹಾರವರ ಬರವಣಿಗೆ ಈ ನಿಟ್ಟಿನಲ್ಲಿ ದೋಷಮುಕ್ತವಾಗಿದೆ. ಅವರು ಪಾಕಿಸ್ತಾನ, ಬಾಂಗ್ಲಾ ಮತ್ತು ತಸ್ಲೀಮಾ ನಜರೀನ್ ಅವರನ್ನು ಉಲ್ಲೇಖಿಸುತ್ತಾ ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ಕುರಿತೂ ಹೇಳುತ್ತಾರೆ. ಸಬಿಹಾರವರ ಲೇಖನ ಈ ನಿಟ್ಟಿನಲ್ಲಿ ವಾಸ್ತವವಾದೀ, ಮಾನವತಾವಾದೀ ಬರವಣಿಗೆಯೆಂಬುದು ನಿಸ್ಸಂಶಯ.

ಚಂದ್ರನು ಭೂಮಿಯ ಉಪಗ್ರಹ, ೬ + ೩ = ೯ – ಎಂಬಂತಹ ವಾಸ್ತವ ಸಂಗತಿಗಳು ಚರ್ಚಾಸ್ಪದ ವಿಚಾರಗಳಲ್ಲ. ಆದರೆ ಟಿ.ವಿ. ಮಾಧ್ಯಮಗಳು ಕೋಮುವಾದಿಗಳನ್ನು ಕುಳ್ಳಿರಿಸಿಕೊಂಡು ಭಯಂಕರ ಚರ್ಚೆ, ಸಂವಾದ ನಡೆಸುವುದು ಮಾಧ್ಯಮಗಳ ಕೋಮುವಾದವನ್ನೇ ಬಿಂಬಿಸುತ್ತದೆ. ಇಂತಹ ಬೇಜವಾಬ್ದಾರಿ ಮಾಧ್ಯಮಗಳು ಕೋಮುವಾದವನ್ನು ಮತ್ತಷ್ಟು ಬೆಳೆಸಲು ತಮ್ಮ ಪಾಲಿನ ಕಾಣಿಕೆ ಸಲ್ಲಿಸುತ್ತಿವೆ. ಸದಾ ಸುಳ್ಳನ್ನೇ ಸತ್ಯವೆಂದು ವಿದ್ಯಾರ್ಥಿಗಳು ಕಲಿಯುವ ಕೆಟ್ಟ ವ್ಯವಸ್ಥೆ ಇರುವ ಈ ದೇಶದಲ್ಲಿ ಮುಂದಿನ ಜನಾಂಗವನ್ನು ರೂಪಿಸುವ ವಿದ್ಯಾರ್ಥಿಗಳಿಗೆ ವಾಸ್ತವವನ್ನು ತಿಳಿಸುವ ಇಂತಹ ಪಠ್ಯ ಅತ್ಯವಶ್ಯಕ. ಸಬಿಹಾರವರ ಅತ್ಯುತ್ತಮ ಲೇಖನವನ್ನು ಪಠ್ಯದಲ್ಲಿರಿಸಿದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪಠ್ಯಪುಸ್ತಕ ಮಂಡಳಿ (BOS) ಶ್ಲಾಘನೀಯ ಕಾರ್ಯವನ್ನೇ ಮಾಡಿದೆ.

*********

chitrakrupe: anti-caste.org

40 ಟಿಪ್ಪಣಿಗಳು Post a comment
  1. ಗಂಜಾಂ ಪರಮೇಶ್
    ಏಪ್ರಿಲ್ 2 2012

    ಈ ಕೋಮುವಾದಿಗಳನ್ನ ವಿರೋಧಿಸುವವರು ಅದೇ ಧ್ವನಿಯಲ್ಲಿ ಮೂಲಭೂತವಾದಿಗಳನ್ನೂ,ಎಡಬಿಡಂಗಿ ಸೆಕ್ಯುಲರ್ಗಳಿಗೂ ಕ್ಲಾಸ ತಗೋಬೇಕು ಅಲ್ವಾ?

    ಉತ್ತರ
  2. Kumar
    ಏಪ್ರಿಲ್ 2 2012

    ಸ್ವಾಮಿ ಭಾಸ್ಕರ ಮಯ್ಯ ಅವರೇ,

    ನಿಮಗೆ ಸತ್ಯದ ಕುರಿತು ಇರುವ ಕಾಳಜಿಯನ್ನು ಕಂಡು ಸಂತೋಷವಾಯಿತು.
    ಸತ್ಯವನ್ನು ತಿಳಿಸಲು ಎದೆಗಾರಿಕೆ ಬೇಕು; ನೀವು ಸತ್ಯವನ್ನು ಧೈರ್ಯವಾಗಿ ಹೇಳುತ್ತಿರುವುದು ಕಂಡು, ನೀವು ಬಹಳ ಧೈರ್ಯವಂತರೇ ಎಂದು ತಿಳಿಯುತ್ತೇನೆ.

    ದಯವಿಟ್ಟು, ಕಾಶ್ಮೀರದಲ್ಲಿ ಲಕ್ಷಾಂತರ ಕಾಶ್ಮೀರಿ ಪಂಡಿತರನ್ನು ಮನೆಗಳಿಂದ ಹೊಡೆದೋಡಿಸಿದ್ದು, ಅವರ ಹೆಣ್ಣುಮಕ್ಕಳ ಮೇಲೆ ಆದ ಅತ್ಯಾಚಾರಗಳ ಕುರಿತಾಗಿಯೂ ಸ್ವಲ್ಪ ತಿಳಿಸಿರಿ.
    ಅದೇ ರೀತಿ, ಜೆಹಾದಿನ ಹೆಸರಿನಲ್ಲಿ ಜಗತ್ತಿನೆಲ್ಲೆಡೆ ನಡೆಯುತ್ತಿರುವ ಕ್ರೌರ್ಯ, ಭಯೋತ್ಪಾದನೆಗಳ ಕುರಿತಾಗಿಯೂ ಎಲ್ಲರ ಕಣ್ತೆರೆಸಿರಿ.

    ೧೯೪೭ ಎಂದರೆ ಎಲ್ಲರ ಕಣ್ಮುಂದೆ “ಸ್ವತಂತ್ರ ದಿನಾಚರಣೆ” ನಲಿದಾಡುತ್ತದೆ.
    ದೇಶದ ಬಹುಭಾಗದಲ್ಲಿ “ಸ್ವಾತಂತ್ರ್ಯದ ಉತ್ಸವ” ನಡೆಯುವಾಗ, ಅದೇ ಸಮಯದಲ್ಲಿ ಗಡಿಭಾಗದಲ್ಲಿ ಕೋಟ್ಯಂತರ ಹಿಂದುಗಳು ರಾತ್ರೋರಾತ್ರಿ ನಿರಾಶ್ರಿತರಾಗಿಬಿಟ್ಟಿದ್ದರು.
    ಅವರ ಹೆಣ್ಣುಮಕ್ಕಳ ಅಪಹರಣ ನಡೆಯಿತು, ಅತ್ಯಾಚಾರಗಳಿಗೆ ಎಣೆಯೇ ಇಲ್ಲದಾಯಿತು. ಇದರಲ್ಲಿ ಅವರ ತಪ್ಪೇನೂ ಇರಲಿಲ್ಲ.
    ಈ ರೀತಿ ಕ್ರೌರ್ಯ ತೋರಿಸುತ್ತಿದ್ದವರ “ಓಟು”ಗಳು ನಮ್ಮ ರಾಜಕಾರಣಿಗಳಿಗೆ ಬಹು ಅಪ್ಯಾಯಮಾನವಾದ್ದರಿಂದ, ಆ ಘಟನೆಯ ಕುರಿತಾಗಿ ಎಲ್ಲೂ ಉಲ್ಲೇಖವೇ ಇಲ್ಲ.
    ಇಂದಿನ ಮಕ್ಕಳಿಗೆ, ಆ “ಸತ್ಯ”ದ ಕುರಿತು ಏನೇನೂ ತಿಳಿದಿಲ್ಲ.

    ನಿಮ್ಮಂತಹ “ಸತ್ಯ” ಪಕ್ಷಪಾತಿಗಳು, ಧೈರ್ಯವಂತರು, ಈ ರೀತಿಯ ಮತ್ತು ಇನ್ನೂ ಬೆಳಕಿಗೆ ಬಾರದ ಇನ್ನೂ ಅನೇಕ “ಸತ್ಯ”ಗಳ ಕುರಿತಾಗಿ ಬರೆದು
    ನಮ್ಮಂತಹ ಪಾಮರರಿಗೆ ಮಾರ್ಗದರ್ಶನ ಮಾಡಬೇಕೆಂದು ಕೇಳಿಕೊಳ್ಳುವೆ.

    ಉತ್ತರ
    • nitesh S Anchan
      ಏಪ್ರಿಲ್ 12 2012

      Dr.G.Bhaskar Maiya is a person who upholds the idea of peace and tolerance. His presentation and criticism is deep and relevant .Dr.G.Bhaskar Maiya has concluded his views in a unbiased manner. The communal violence during partition has killed many people belonging to different religion. First let us know that people created religion and religion dint create people. So, we all belong to humanity first and then to any other religion. If we start fighting in the name of religion, then this war will only end up killing humanity. Every religion has its own set of beliefs and philosophy. we can not force anyone to believe in our beliefs. Every religion has its own place and it should be respected. As Karl Marx said ” Religion is the sigh of the oppressed creature, it is the heart of the heartless society , it is the soul of the soulless condition. Religion is the opium of the people.” The base of every religion is PEACE , LOVE AND TOLERANCE. If some religious extremist do not intend to follow these principles, that does not mean that we should do the same. An eye for an eye only makes the world blind.

      ಉತ್ತರ
  3. ಜಾತ್ಯತೀತವಾದಿ !!??
    ಏಪ್ರಿಲ್ 3 2012

    ಶಹಬ್ಬಾಸ್ ಡಾ.ಜಿ. ಭಾಸ್ಕರ ಮಯ್ಯ ,
    ನೀವು ಇಟ್ಟುಕೊಂಡಿರುವ ಕೊಳೆತು ನಾರುತ್ತಿರುವ ಕನ್ನಡಕ ದಯವಿಟ್ಟು ತೆಗೆಯಿರಿ! ಇಲ್ಲವಾದಲ್ಲಿ ನಿಮ್ಮ ಕಣ್ಣಿಗೆ ಅಪಾಯ!.(ತೆಗೆಯದಿದ್ರೆ ಪರವಾಗಿಲ್ಲ – ಕೊಳೆತು ನಾರಲು ಶುರುವಾದದ್ದು ಹೆಚ್ಚುದಿನ{ಕನ್ನಡಕ ಮತ್ತು ನಿಮ್ಮ ಕಣ್ಣು } ಬಾಳಲಾರದು ಬಿಡಿ!)
    ನೀವು ಡಾಕ್ಟೊರರೋ ಅಥವಾ ಕೊಳಕು ರಾಜಕಾರಣಿಯೋ? ಗೊತ್ತಿಲ್ಲ!
    ಸಬಿಹಾರವರ ಲೇಖನ ಒಳ್ಳೇದಿದೆ (?)”ಲೇಖನವಾಗಿ ಓದಲು” ಮಾತ್ರಾ! ಪಟ್ಯವಾಗಿ ಅಲ್ಲ !

    ಉತ್ತರ
  4. ಶ್ರೀಧರ್ ಬಂಡ್ರಿ
    ಏಪ್ರಿಲ್ 4 2012

    ಭಾಸ್ಕರ ಮಯ್ಯರೆ,
    ಕೋಮುವಾದದ ಬಗ್ಗೆ ನಿಮ್ಮ ವಿಶೇಷ ನಿಲುವನ್ನು ಮೆಚ್ಚತಕ್ಕದ್ದೇ. ಹಾಗೆಯೇ ಸಬಿಹಾರವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯವೂ ಇರಬಹುದು. ಅದು ಖಂಡಿತವಾಗಿ ವಿಷಯದ ಒಂದು ಮುಖಮಾತ್ರ. ಅದು ಎಲ್ಲವನ್ನೂ ಬಿಂಬಿಸುತ್ತದೆ ಎಂದರೆ ಅದು ನಿಮ್ಮ ವೈಯ್ಯಕ್ತಿಕ ಅಭಿಪ್ರಾಯ ಅದರ ಬಗ್ಗೆ ಎರಡು ಮಾತಿಲ್ಲ.

    ಇರಲಿ,ಕೋಮುವಾದ ಹುಟ್ಟುವುದೇ ಒಂದು ಧರ್ಮದವರ ಪದ್ಧತಿಗಳನ್ನು ಇನ್ನೊಬ್ಬ ಧರ್ಮೀಯರು ಅವಹೇಳನ ಅಥವಾ ಅಪಹಾಸ್ಯ ಮಾಡಿದಾಗ ಅಥವಾ ಧರ್ಮಸಹಿಷ್ಣುತೆ ಇಲ್ಲದಾಗ. ನೀವು ಇದರಲ್ಲಿ ಬಳಸಿರುವ ಸರಸ್ವತಿ ದೇವಿಯ ಚಿತ್ರವನ್ನು ನೋಡಿದರೆ ಎಂತಹವರಿಗಾದರೂ ಅರ್ಥವಾಗುತ್ತದೆ ಅದನ್ನು ರಚಿಸಿದ ಕಲಾವಿದ ಎಮ್. ಎಫ್. ಹುಸೇನರ ಮನಸ್ಥಿತಿ ಎಂತಹ್ಹುದೆಂದು ಮತ್ತು ಅದನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಬಳಸಿರುವ ನಿಮ್ಮ ಮನಸ್ಥಿತಿಯೂ ಪ್ರಶ್ನಾರ್ಥಕವಾಗಿದೆ. ನಿಮ್ಮ ಉದ್ದೇಶ ಹೀಗೆ ನಮ್ಮ ಧರ್ಮವನ್ನು ಅವಹೇಳನ ಮಾಡುವವರನ್ನು ಪ್ರತಿಭಟಿಸಿದರೆ ಅದು ಕೋಮುವಾದ. ಅದೇ ರೀತಿ ನಾವು ಇತರ ಧರ್ಮೀಯರ ಪದ್ಧತಿಗಳ ಬಗ್ಗೆ ಮಾತನಾಡಿದರೆ ನಾವು ಕೋಮುವಾದಿಗಳು; ಶಹಬ್ಬಾಸ್……..ಸೆಕ್ಯೂಲರ್ ವಾದಿಗಳೆ. ದಯಮಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಇಂತಹ ಚಿತ್ರಗಳನ್ನು ತೆಗೆದುಹಾಕಿ. ನಿಮಗೆ ನಮ್ಮ ಧರ್ಮದಲ್ಲಿ ನಂಬಿಕೆಯಿಲ್ಲದಿದ್ದರೆ ಅದನ್ನು ಯಾರೂ ಪ್ರಶ್ನಿಸುವುದಿಲ್ಲ; ಏಕೆಂದರೆ ನಮ್ಮದು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವುಳ್ಳ ಧರ್ಮ; ಆದರೆ ಬೇರೆಯವರ ಧರ್ಮವನ್ನು ಎತ್ತಿಹಿಡಿಯುವ ನೆಪದಲ್ಲಿ ನಮ್ಮ ಧರ್ಮವನ್ನು ಅಪಹಾಸ್ಯ ಮಾಡುವ ಅವಶ್ಯಕತೆಯಿಲ್ಲ.

    ಉತ್ತರ
  5. Kumar
    ಏಪ್ರಿಲ್ 4 2012

    ಶ್ರೀಧರ್ ಬಂಡ್ರಿ> ನೀವು ಇದರಲ್ಲಿ ಬಳಸಿರುವ ಸರಸ್ವತಿ ದೇವಿಯ ಚಿತ್ರವನ್ನು ನೋಡಿದರೆ ಎಂತಹವರಿಗಾದರೂ ಅರ್ಥವಾಗುತ್ತದೆ.
    ಅವರ ಮನಸ್ಸಿನ ಒಳಗಿನ “ಕೊಳತು ನಾರುತ್ತಿರುವ ಮನಃಸ್ಥಿತಿ” ಚಿತ್ರಣವನ್ನು ಹಾಕಿಕೊಂಡಿದ್ದಾರೆ.

    ಡಾ.ಜಿ. ಭಾಸ್ಕರ ಮಯ್ಯ ಅವರೇ,
    ನೀವು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ, ಸತ್ಯಸಂಧರಾಗಿದ್ದರೆ, ನಿಷ್ಪಕ್ಷಪಾತಿಗಳಾಗಿದ್ದರೆ, ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇದ್ದರೆ,
    ನಿಮ್ಮ ಲೇಖನದಲ್ಲಿ ಡ್ಯಾನಿಶ್ ಪತ್ರಿಕೆಯಲ್ಲಿ ಜಿಲ್ಲ್ಯಾಂಡ್ಸ್-ಪೋಸ್ಟೆನ್ ಅವರು ಪ್ರಕಟಿಸಿದ
    ನಿಮಗಿಷ್ಟವಾದ ಯಾವುದಾದರೂ ಚಿತ್ರವನ್ನು ನಿಮ್ಮ ಲೇಖನದಲ್ಲಿ ಬಳಸಿ ಪ್ರಕಟಿಸಿರಿ.
    ಆಗ ನೋಡೋಣ, ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ, ಕೋಮು ಸೌಹಾರ್ದತೆ, ಜಾತ್ಯಾತೀತವಾದ ಇತ್ಯಾದಿಗಳನ್ನೆಲ್ಲಾ.
    ಇಲ್ಲದಿದ್ದಲ್ಲಿ, ನಿಮ್ಮದು “ಕೊಳೆತು ನಾರುವ ಪೊಳ್ಳುವಾದ” ಎಂದಷ್ಟೇ ಹೇಳಬಹುದು.

    ಉತ್ತರ
  6. Dr.G.BHASKARA MAIYA
    ಏಪ್ರಿಲ್ 5 2012

    I AM NOT RESPONSIBLE FOR THE SARASWATHI PICTURE DEPICTED IN MY ARTICLE.TILL DATE I HAVE NOT SEEN IT.ASK YOUR EDITOR FOR CLARIFICATION.I AM AGAINST TO ALL SORTS OF COMMUNAL ISM ,LET IT BE HINDU OR MUSLIM. COMMUNAL ISM IS THE BORN ENEMY OF RELIGION.ANY IMPARTIAL INTELLECTUAL CAN DIFFERENTIATE IT WELL.SORRY FOR YOUR MISUNDERSTANDINGS. IGNORANCE IS BLISS ,BUT THE SAME IGNORANCE CLOTHED WITH COMMUNAL ISM BECOMES MONSTER-Dr.G.Bhaskara Maiya

    ಉತ್ತರ
    • sridharbandri
      ಏಪ್ರಿಲ್ 6 2012

      ಭಾಸ್ಕರ ಮಯ್ಯರವರೆ,
      ಲೇಖನವನ್ನು ಕಳುಹಿಸಿದ್ದು ನೀವು ಆದ್ದರಿಂದ ಅವರು ನಿಮ್ಮ ಸಂಪಾದಕರು ಆಮೇಲೆ ಓದುಗರಾದ ನಮ್ಮ ಸಂಪಾದಕರು. ಹೀಗೆ ಪ್ರತಿಕ್ರಿಯೆ ಬಂದಿರುವುದರಿಂದ ಅದನ್ನು ತೆಗೆದು ಹಾಕುವಂತೆ ನಿಮ್ಮ ಲೇಖನದ ಆಶಯಕ್ಕೆ ಭಂಗ ಬರುತ್ತದೆ ಎನ್ನುವ ದೃಷ್ಟಿಯಿಂದಲಾದರೂ ಇದನ್ನು ಸಂಪಾದಕರ ಗಮನಕ್ಕೆ ತರುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಅದನ್ನು ಬಿಟ್ಟು ನಿಮ್ಮ ಸಂಪಾದಕರಿಗೆ ಹೇಳಿ ಎಂದು ನಿರ್ಲಕ್ಷ ತೋರಿದರೆ ಅದಕ್ಕೆ ನೀವೂ ಸಹಭಾಗಿಯಾಗುತ್ತೀರಿ ಮತ್ತು ಅದಕ್ಕೆ ನಿಮ್ಮ ಸಮ್ಮತವಿದೆ ಎನ್ನುವ ಇಂಗಿತವುಂಟಾಗುತ್ತದೆ; ಒಮ್ಮೆ ಆಲೋಚಿಸಿ ನೋಡಿ.

      ಉತ್ತರ
      • ಏಪ್ರಿಲ್ 6 2012

        ಗೆಳೆಯರೇ,
        ಭಾಸ್ಕರ್ ಮಯ್ಯ ಅವರಂದಂತೆ ಇದು ನಿಲುಮೆ ಪ್ರಕಟಣಾ ತಂಡದಿಂದ ಆದ ತಪ್ಪು.ಚಿತ್ರ ಬದಲಾಯಿಸಿದ್ದೇವೆ.ಮನ್ನಿಸಿ.

        ಉತ್ತರ
        • sridharbandri
          ಏಪ್ರಿಲ್ 8 2012

          ನಾನು ವೈಯ್ಯಕ್ತಿಕವಾಗಿ ಯಾವುದೇ ಧರ್ಮದ ವಿರೋಧಿಯಲ್ಲ; ಏಕೆಂದರೆ, “ಎಲ್ಲಾ ಮತಗಳೂ ಭಗವಂತನನ್ನು ಸೇರುವ ವಿವಿಧ ಪಥಗಳು” ಎಂದ ಶ್ರೀ ರಾಮಕೃಷ್ಣ ಪರಮಹಂಸರ ಮಾತಿನಲ್ಲಿ ದೃಢ ವಿಶ್ವಾಸವಿಟ್ಟವನು ನಾನು. ನಮ್ಮಲ್ಲಿ ತಪ್ಪುಗಳಿದ್ದರೆ ಖಂಡಿತಾ ತಿದ್ದಿಕೊಳ್ಳೋಣ ಅದು ಬೇರೆ ಮಾತು ಆದರೆ ಅನಾವಶ್ಯಕವಾಗಿ ನಮ್ಮ ಧರ್ಮವನ್ನು ಅವಹೇಳನ ಮಾಡಿದರೆ ಖಂಡಿತಾ ಸಹಿಸುವವನಲ್ಲ. ಇರಲಿ, ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಚಿತ್ರವನ್ನು ಬದಲಾಯಿಸಿದ್ದಕ್ಕೆ ಧನ್ಯವಾದಗಳು.

          ಉತ್ತರ
  7. reshma
    ಏಪ್ರಿಲ್ 5 2012

    I really am surprised by the negative comments which has no connection with the article . THE comments are totally biased . He has not commented on hindu religion or culture .IT is just a reaction to the article of Sabiha .She has treated the issue well in advance .The article of Sabiha and as well as the reaction of Dr Bhaskar Maiyya are really appreciable . Rotten minds thinks in a rotten way , yellowish eyes can never see the world as it really is . Long live humanism .

    ಉತ್ತರ
    • sridharbandri
      ಏಪ್ರಿಲ್ 6 2012

      <> You are right Ms. Reshma; that is the reason why insulting other religions is done by a famous painter. And you don’t get the smell of rotten things when people like salman rushdie or taslima nazreen point it out.

      ಉತ್ತರ
  8. Irshad
    ಏಪ್ರಿಲ್ 5 2012

    dear sir
    Really like this article………..

    ಉತ್ತರ
  9. satish
    ಏಪ್ರಿಲ್ 7 2012

    ಅಮಾಯಕರು ನಿಲುಮೆ ನಿಷ್ಪಕ್ಷಪಾತ ಎಂದುಕೊಳ್ಳುತ್ತಾರೆ… ಭಾಸ್ಕರ್ ಮಯ್ಯಾ ಥರದವರು… ಹಾಗೆ ಅಂದುಕೊಂಡು ಬರಹ ಕಳಿಸುತ್ತಾರೆ. ಈ ಲೇಖನ ಪ್ರಕಟಿಸುವಲ್ಲಿ ನಿಲುಮೆಯ ಉದ್ದೇಶವೇ ಓದುಗರನ್ನು ಕೆರಳಿಸುವುದು… ಹಾಗಾಗೆ ಸಂಬಂಧವಿಲ್ಲದೆ ಹೋದರು ಹುಸೇನ್ ಸಾಹೇಬರು ಬರೆದ ವಿಕ್ರುತವನ್ನು ಪ್ರಕಟಿಸಿದ್ದರು. ಈಗ ಸಭ್ಯರಂತೆ ಬದಲಾಯಿಸಿದ್ದೇವೆ ಮನ್ನಿಸಿ ಎನ್ನುತ್ತಿದ್ದಾರೆ!

    ಉತ್ತರ
    • ಏಪ್ರಿಲ್ 7 2012

      ನಿಲುಮೆ ಏನು? ಹೇಗೆ? ಅನ್ನುವುದು ಓದುಗರಿಗೆ ಗೊತ್ತಿದೆ.ಆಗಿದ್ದ ತಪ್ಪನ್ನು ಒಪ್ಪಿಕೊಂಡು ಬದಲಾಯಿಸಿದೆ ಕೂಡ.ಮನಸ್ಸು ಮಾಡಿದ್ದರೆ ನಿಮ್ಮಂತ ಹೆಸರು ಬದಲಾಯಿಸಿ ಬರೆಯುವ ಜನರದ್ದೂ ಸೇರಿಸಿ ಕಮೆಂಟುಗಳನ್ನ ಅಳಿಸಬಹುದಿತ್ತಲ್ಲ…!? .ಅಪ್ಪ-ಅಮ್ಮ ಇಟ್ಟ ಹೆಸರೇಳಿ ಬರೆಯೋ ಎದೆಗಾರಿಕೆಯನ್ನ ಮೊದಲು ತೋರಿಸಿ ಆಮೇಲೆ ನಿಲುಮೆಯ ಬಗ್ಗೆ ಮಾತನಾಡುವಿರಂತೆ.ಬರೆಯಬಲ್ಲಿರಾ?

      ಉತ್ತರ
      • ಅನಿಲ್
        ಏಪ್ರಿಲ್ 7 2012

        ರೀ ರಾಕೇಶ್,
        ನೀವು ಯಾಕೆ ಆ ಫೋಟೊ ಹಾಕಿದ್ದು ಮತ್ತು ಯಾಕೆ ತೆಗೆದದ್ದು ಎಂದು ಹೇಳಿ ಸಾಕು! ಹೆಸರಿದ್ದವರು ಪ್ರಶ್ನೆ ಕೇಳಿದರೂ ಇಲ್ಲದವರೂ ಕೇಳಿದರೂ ವ್ಯತ್ಯಾಸವೇನಿಲ್ಲ!

        ಉತ್ತರ
        • ಏಪ್ರಿಲ್ 8 2012

          ಅನಿಲ್,

          ನಿಲುಮೆ ಅಂದರೆ ರಾಕೇಶ್ ಶೆಟ್ಟಿಯಲ್ಲ.ಹಾಗಾಗಿ ನಾನು ಫೊಟೋ ಬಗ್ಗೆ ಏನೂ ಹೇಳಬೇಕಿಲ್ಲ.ಆದರೆ, ಹೆಸರೇಕೆ ಕೇಳಿದೆ ಅಂದರೆ ವೇಷ ಮರೆಸಿಬರೆಯುವವರಿಗೆ ಪ್ರಶ್ನೆ ಕೇಳುವ ನೈತಿಕತೆಯಿದೆಯಾ ಅನ್ನುವುದಕ್ಕಾಗಿಯಷ್ಟೆ! ನಿಲುಮೆಯ ಮೇಲೆ ತಮ್ಮ ಮನೋ ವಿಕಾರ ತೋಡಿಕೊಳ್ಳುತ್ತಿರುವ ಈ ಮನುಷ್ಯನ ’ಬಳಗ’ವೆಂತದ್ದು,ಯಾವುದು ಅನ್ನುವುದು ನನಗೆ ಗೊತ್ತಿದೆ.ಪ್ರತಿಕ್ರಿಯಿಸಿದ ಮನುಷ್ಯನೇ ಬಂದು ಉತ್ತರಿಸಲಿ.(ಉತ್ತರಿಸುವ ಮುಖವಿದ್ದರೆ)

          ಪೋಟೋ ಹಾಕಿದ್ದರ ಬಗ್ಗೆ ನಿಲುಮೆ ಆಗಲೇ ಸ್ಪಷ್ಟನೇ ನೀಡೂವ ಜೊತೆಗೆ ಕ್ಷಮೆಯನ್ನೂ ಕೇಳಿದೆ.ನಡೆಯುವವನು ಎಡವುದು ಸಹಜ.ಹಾಗೆಯೇ ತಪ್ಪುಗಳಾಗುವುದು ಸಹಜವೇ,ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ನಂತರ ಇನ್ನು ಏನಾಗಬೇಕಿತ್ತು? ನಿಲುಮೆಯ ಮೇಲೆ ದ್ವೇಷ ಸಾಧಿಸುವುದು ಬಿಟ್ಟು ವಿಷ್ಯದ ಬಗ್ಗೆ ಚರ್ಚಿಸಿದರೆ ಒಳ್ಳೆಯದು.

          ಉತ್ತರ
      • satish
        ಏಪ್ರಿಲ್ 9 2012

        ನಮಸ್ಕಾರ ರಾಕೇಶ್ ಸಾರ್,
        ನಮ್ಮಪ್ಪ ಅಮ್ಮ ಇಟ್ಟ ಹೆಸರು ಸತೀಶ್ ಕುಮಾರ್. ನಮ್ಮಪ್ಪ ಶಂಕರ್ ರಾವ್. ಅಮ್ಮ ಸುಜಾತ. ಊರು ಮೈಸೂರು. ಈಗ ಬೆಂಗಳೂರಿನಲ್ಲಿ ಇದ್ದೀನಿ. ಕೆಲಸ ಕೊಟ್ಟಿರೋದು ವಿಜಯ ಕರ್ನಾಟಕ ಪತ್ರಿಕಾ ಬಳಗ. ಹುಟ್ಟಿದ ದಿನಾಂಕ ೧೩.೦೬.೧೯೮೨. ನಕ್ಷತ್ರ : ಭರಣಿ ೩ನೇ ಪಾದ. ವಿಳಾಸ ಬೇಕಾ? ಫೋನ್ ನಂಬರ್ ಬೇಕಾ?

        ಉತ್ತರ
        • ಏಪ್ರಿಲ್ 9 2012

          ಇಟ್ಟಿರೋದು ಇದೊಂದೆ ಹೆಸ್ರಾ ಅಥವಾ ಇನ್ನ ೨-೩ ಇದೆಯಾ ಸರ್? 🙂
          ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯೋ ಕತೆ ನಿಮಗೆ ಗೊತ್ತಿಲ್ಲದ್ದೇನಲ್ಲ ಅಲ್ವಾ?

          ಉತ್ತರ
      • satish
        ಏಪ್ರಿಲ್ 9 2012

        Rakesh,

        Which “balaga’ you are talking about? O… gottaaytu biDi… neevu commens delete maadE ilvaa? yaakree… poLLaaDteeraa?

        ಉತ್ತರ
        • ಏಪ್ರಿಲ್ 9 2012

          ನಾನು ಯಾವ ಬಳಗದ ಬಗ್ಗೆ ಮಾತನಾಡಿದೆ ಅನ್ನುವುದು ನಿಮಗೆ ಗೊತ್ತಿದೆಯಲ್ಲ…! ಆ ಬಳಗದ ಹೆಸರಿನ ಬಗ್ಗೆ,ಅದರ ಉದ್ದೇಶದ ಬಗ್ಗೆ ನನಗೆ ಪ್ರೀತಿಯಿದೆ,ಅಭಿಮಾನವಿದೆ ಹಾಗಾಗಿ ಅದರ ಹೆಸರನ್ನ ಹೀಗೆ ಅನಗತ್ಯ ಜಾಗದಲ್ಲಿ ಬಳಸಲಾರೆ.

          ಇನ್ನು ಪ್ರತಿಕ್ರಿಯೆ ಅಳಿಸಿ ಹಾಕಿದ ಬಗ್ಗೆ, ಹೌದು..! ಅಸಂಬದ್ಧ ಅನ್ನಿಸಿದ ಕಮೆಂಟುಗಳನ್ನು ಅಳಿಸಿದ್ದೇವೆ,ಅಳಿಸುತ್ತಲೂ ಇರುತ್ತೇವೆ. ಪ್ರತಿಕ್ರಿಯಿಸುವ ಸ್ವಾತಂತ್ರ್ಯ ಸ್ವೇಚ್ಚಾಚಾರವಾಗಲಿಕ್ಕೆ ಬಿಡುವುದೂ ಇಲ್ಲ.

          ಮನ್ನಿಸಿ ಅಂತ ನಿಲುಮೆ ಪ್ರತಿಕ್ರಿಯಿಸಿದ ಮೇಲೂ ತಾವು ಸಂಶೋಧನೆ ಮಾಡಿದಂತೆ ಪ್ರತಿಕ್ರಿಯಿಸಿದ ಉತ್ಸಾಹದ ಹಿಂದೆ ನಿಲುಮೆಯೆಡೆಗಿನ ನಿಮ್ಮ ಪ್ರೀತಿ ಎದ್ದು ಕಾಣುತ್ತಿದೆ 🙂

          ಉತ್ತರ
  10. bhadravathi
    ಏಪ್ರಿಲ್ 7 2012

    ವಿವೇಚನಾತ್ಮಕವಾಗಿ ಚಿಂತಿಸುವವರ ಮೇಲೆ ಗುಂಪಾಗಿ ಎರಗಿ ವೈಚಾರಿಕ ಭೀತಿ ಹರಡುವ, “herd mentality” ಪ್ರದರ್ಶಿಸುವ ಜನರಿಗೆ ಎರಡು ತಪ್ಪುಗಳು ಒಂದು ಸರಿ ಗೆ ಸಮಾನ. “ಮೈನಸ್ X ಮೈನಸ್ = ಪ್ಲಸ್” ಆಗುತ್ತಲ್ಲ ಆ ರೀತಿ. ಪ್ರತೀ ಹಿಂಸೆಗೆ ಅವರು ಮೊದಲಿನ ಹಿಂಸೆಯ ಕಡೆ ಬೊಟ್ಟು ಮಾಡಿ ನುಣುಚಿಕೊಳ್ಳಲು ಹವಣಿಸುತ್ತಾರೆ. ನೀವು ಗುಜರಾತಿನ ಮಾರಣ ಹೋಮದ ಬಗ್ಗೆ ಮಾತನಾಡಿದರೆ ಕಾಶ್ಮೀರಿ ಪಂಡಿತರ ಬಗ್ಗೆ ಮಾತನಾಡಿ ವಾದದ ಧಾಟಿ ತಪ್ಪಿಸುತ್ತಾರೆ. ಪ್ರಪಂಚದ ಯಾವುದೇ ಗುಂಪೊ, ಭಯೋತ್ತ್ಪಾದಕ ಸಂಘಟನೆಯೋ ಹಿಂಸೆಗೆ ಇಳಿದಾಗ ಅದರ ವಿರುದ್ಧ ಮಾತನಾಡುವ ನೈತಿಕ ಹಕ್ಕನ್ನು ಕಳೆದು ಕೊಳ್ಳುವರು ಎನ್ನುವ ಪ್ರಜ್ಞೆ ಇವರಿಗೆ ಇರುವುದಿಲ್ಲ. ಅಮೆರಿಕೆಯ ೯/೧೧ ನ ಭೀಕರ ಘಟನೆಗಳಿಗೆ ಕಾರಣ ಅಮೆರಿಕೆಯ ತಪ್ಪಾದ ವಿದೇಶಾಂಗ ನೀತಿ ಎನ್ನುತ್ತಾರೆ. ಇಸ್ರೇಲ್ ದೇಶವನ್ನು ಅದರ ಎಲ್ಲಾ ರಕ್ತ ಪಿಪಾಸುತನಕ್ಕೆ ಬಹಿರಂಗವಾಗಿ ಕುಮ್ಮಕ್ಕು ನೀಡಿದ ಕಾರಣ ಅಮೆರಿಕೆಯ ವಿರುದ್ಧ ಧಾಳಿ ನಡೆಸಿದ್ದು ಎಂದು ಸಮರ್ಥಿಸುವವರು ಇದ್ದಾರೆ. ಈಗ ಹೇಳಿ ಈ ವಾದವನ್ನು ಯಾವ ಸಮಚಿತ್ತ ವ್ಯಕ್ತಿ, ಜನಾಂಗ ಸಮ್ಮತಿಸಲು ಸಾಧ್ಯ?
    ಭಯೋತ್ಪಾದನೆ ಆರೋಪದ ಮೇಲೆ ಸಾಧ್ವಿ ಪ್ರಗ್ಯಾ ಸಿಂಗ್ ಳನ್ನು ನ್ಯಾಯಾಲಯಕ್ಕೆ ಕರೆತಂದಾಗ ಆಕೆಯ ಮೇಲೆ ಹೂ ಎರಚಿ ಸ್ವಾಗತ ಕೋರುವುದು ಈ ಮಂದಿಗೆ ತಪ್ಪಾಗಿ ಕಾಣೋಲ್ಲ. ಏಕೆಂದರೆ ಆಕೆ ಭಯೋತ್ಪಾದಕ ಕೃತ್ಯ ಎಸಗಿದ್ದು ಪ್ರತೀಕಾರವಾಗಿ. ಪಂಡಿತರ ಮೇಲೆ ನಡೆದಿರಬಹುದಾದ ಹಿಂಸೆಗೆ ತಪ್ಪಿತಸ್ಥರನ್ನು ಮುಸ್ಲಿಂ ಸಮಾಜ ಬೆಂಬಲಿಸಿಲ್ಲ. ಹಾಗೆ ಬೆಂಬಲಿಸುವವ ಮುಸ್ಲಿಂ ಎನಿಸಿಕೊಳ್ಳಲು ಅರ್ಹನಲ್ಲ. ಕಾಶ್ಮೀರದಲ್ಲಿ ಪಂಡಿತರ ವಿರುದ್ಧ ನಡೆದ ದೌರ್ಜನ್ಯದಲ್ಲಿ ಕಾಶ್ಮೀರಿ ಸಮಾಜವಾಗಲೀ ಅಲ್ಲಿನ ಮುಖ್ಯಮಂತ್ರಿಯಾಗಲೀ, ಸರಕಾರವಾಗಲೀ ಉತ್ಸಾಹೀ, ಸಕ್ರಿಯ ಪಾತ್ರ ವಹಿಸಿಲ್ಲ. ಈಗ ಹೇಳಿ ಗುಜರಾತ ಮತ್ತು ಕಾಶ್ಮೀರವನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವುದು ಎಷ್ಟು ಸೂಕ್ತ ಎಂದು? ಗುಜರಾತಿನಲ್ಲಿ ನಡೆದ ಮಾರಣ ಹೋಮವನ್ನು ಕೆಲವು ಒಂದೆರಡು ವಾರ ಕೆಲಕಾಲ ವರೆಗೆ ಮೌನವಾಗಿ ನೋಡಿದ ಅಂದಿನ ಪ್ರಧಾನಿ ತನ್ನ ಆತ್ಮ ಸಾಕ್ಷಿಯ ಒತ್ತಡಕ್ಕೆ ಮಣಿದು ‘ರಾಜ ಧರ್ಮ’ ವನ್ನ ಪಾಲಿಸು ಎಂದು ಮುಖ್ಯ ಮಂತ್ರಿಗೆ ಕಿವಿ ಮಾತು ಹೇಳಬೇಕಾಯಿತು. ಗರ್ಭಿಣಿ ಸ್ತ್ರೀಯರ ಉದರ ಬಗೆದು ಭ್ರೂಣಗಳನ್ನು ಬೆಂಕಿಗೆ ಎಸೆದ ಕೃತ್ಯಗಳು, ಮಾನಭಂಗದ ದ್ರುಶ್ಯಗಳನ್ನು ಚಿತ್ರೀಕರಿಸಿ ಸೀ ಡೀ ಗಳನ್ನು ಮಾಡಿ ಹಂಚಿದ್ದು, ಜನರ ಆಕ್ರಂದನಗಳನ್ನು ಟೇಪ್ ಮಾಡಿ ಗಲಭೆ ನಿಂತ ನಂತರ ಮುಸ್ಲಿಂ ಬಡಾವಣೆಗಳಲ್ಲಿ ಧ್ವನಿ ವರ್ಧಕಗಳ ಮೂಲಕ ನುಡಿಸಿ sadist ಮನೋಭಾವ ಪ್ರದರ್ಶಿಸಿದ್ದು….ಇವೆಲ್ಲವೂ ಕೆಲವರಲ್ಲಿ ಹೇಸಿಗೆ ಹುಟ್ಟಿಸೋಲ್ಲ ಎನ್ನುವ ಸಂಗತಿಯೇ mentally disturbing. ಗುಜರಾತಿನಲ್ಲಿ ಮಹಿಳೆಯರ ವಿರುದ್ಧ ನಡೆದ ಹಿಂಸೆ ನಮ್ಮ ದೇಶದ ಒಂದೇ ಒಂದು ಮಹಿಳಾ ಸಂಘಟನೆಗಳ ಮನ ಕಲಕಿಲ್ಲ. ಅಲ್ಲಿನ ಗಲಭೆಯ ಸಮಯದ ವಿಧ್ಯಮಾನ ಓದಿದ ನನ್ನ ಸೋದರಿಯರು ಈಗಲೂ ಅದರ ಪ್ರಸ್ತಾಪ ಬಂದಾಗ ಕಣ್ಣೀರು ಹಾಕುತ್ತಾರೆ. ಗುಜರಾತಿನ ಹಿಂಸೆಯ ಬಗೆಗಿನ ಯಾವುದೇ ಲೇಖನ ಓದಲೂ ನನಗೆ ಮನಸ್ಸು ಬರದು. ಅಂಥ ಲೇಖನ ಕಣ್ಣಿಗೆ ಬಿದ್ದಾಗ ಓದುವ ಗೊಡವೆಗೆ ನಾನು ಹೋಗುವುದಿಲ್ಲ.
    ಹಿಂಸಾ ಕೃತ್ಯಗಳನ್ನು, ಭಯೋತ್ಪಾದನಾ ಚಟುವಟಿಕೆಗಳನ್ನು ಒಕ್ಕೊರಲಿನಿಂದ ವಿತಂಡವಾದ, ಮೂಗಿನ ನೇರಕ್ಕೆ ಯೋಚಿಸುವ ಮೂಲಕ ಬೆಂಬಲಿಸುವ ಮತ್ತೊಂದು ಉದಾಹರಣೆ ಆಧುನಿಕ ಇತಿಹಾಸದಲ್ಲಿ ನಮಗೆ ಕಾಣ ಸಿಗದು. ಹಿಂಸೆಗೆ ಹಿಂಸೆಯೇ ಉತ್ತರ ಎನ್ನುತ್ತಾ ರಕ್ತಬೀಜಾಸುರತನದ ನಿಲುವು ಇಟ್ಟು ಕೊಂಡ ಜನ ಪ್ರಪಂಚದಲ್ಲಿ ತುಂಬಿದಾಗ ಆಗುವ ಅನಾಹುತ ನೆನೆದರೆ ಎದೆ ನಡುಗುತ್ತದೆ. ಸಾಬೀಹಾರ ಬರಹಕ್ಕೆ ಪೂರಕವಾಗಿ ಬರೆದ ತಮ್ಮ ಲೇಖನ ಮೆಚ್ಚುಗೆಯಾಯಿತು. ಈ ದೇಶದ ಮೇಲೆ ಭರವಸೆ ಮೂಡುವುದು ತಮ್ಮಂತೆ ಚಿಂತಿಸುವವರು ಇದ್ದಾಗ ಎಂದರೆ ಅತಿಶಯೋಕ್ತಿಯಾಗಲಾರದು. ನಮಸ್ಕಾರಗಳು.

    ಉತ್ತರ
  11. Kumar
    ಏಪ್ರಿಲ್ 9 2012

    bhadravathi> ಆಕೆ ಭಯೋತ್ಪಾದಕ ಕೃತ್ಯ ಎಸಗಿದ್ದು ಪ್ರತೀಕಾರವಾಗಿ.
    ಸಾದ್ವಿ ಪ್ರಜ್ಞಾಸಿಂಗ್ ಮೇಲೆ ಮಾಡಿರುವ ಆರೋಪಗಳಲ್ಲಿ ಒಂದು ಆರೋಪಕ್ಕೂ ಇಲ್ಲಿಯವರೆಗೂ ಬಲವಾದ ಸಾಕ್ಷಿ ನೀಡಲಾಗಿಲ್ಲ. ಹೀಗಿರುವಾಗ, ಬಣ್ಣದ ಕನ್ನಡಕ ಧರಿಸಿರುವ ಮಾಧ್ಯಮದವರಂತೆ, ನಿಮ್ಮಂತಹ ಪ್ರಜ್ಜಾವಂತರೂ ಆಕೆಯನ್ನು ತಪ್ಪಿತಸ್ಥೆ ಎಂದು ನಿರ್ಧರಿಸಿ ಮಾತನಾಡುವುದು ನೀವು ಪೂರ್ವಾಗ್ರಹಪೀಡಿತರೆಂಬುದನ್ನೇ ಹೇಳುತ್ತದಲ್ಲವೇ?

    bhadravathi> ಪಂಡಿತರ ಮೇಲೆ ನಡೆದಿರಬಹುದಾದ ಹಿಂಸೆಗೆ ತಪ್ಪಿತಸ್ಥರನ್ನು ಮುಸ್ಲಿಂ ಸಮಾಜ ಬೆಂಬಲಿಸಿಲ್ಲ. ಹಾಗೆ ಬೆಂಬಲಿಸುವವ ಮುಸ್ಲಿಂ ಎನಿಸಿಕೊಳ್ಳಲು ಅರ್ಹನಲ್ಲ.
    ಇತಿಹಾಸವನ್ನೇ ಇಲ್ಲವೆಂದು ಸಾಧಿಸುವುದೇಕೆ? ಕಾಶ್ಮೀರದಲ್ಲಿ ಪಂಡಿತರ ಮೇಲೆ ದೌರ್ಜನ್ಯ ಎಸಗಿದವರು ಯಾರು?
    ಪಂಡಿತರು ಅನುಭವಿಸಿರುವುದೇನು ಸುಳ್ಳೇ? ಅಲ್ಲಿ ದೌರ್ಜನ್ಯ ನಡೆಸಿದವರು ಭಯೋತ್ಪಾದಕರಲ್ಲ; ಅತ್ಯಂತ ಸಾಮಾನ್ಯ ಮುಸ್ಲಿಮರು, ಅಕ್ಕ-ಪಕ್ಕದಲ್ಲಿ ಬಹಳ ಸಮಯದಿಂದ ಒಟ್ಟಾಗಿ
    ಜೀವಿಸಿಕೊಂಡು ಬಂದಿದ್ದವರು, ಇದ್ದಕ್ಕಿದ್ದಂತೆ ಪಂಡಿತರ ಮೇಲೆರಗಿ ಬಂದದ್ದು ಏಕೆ?

    bhadravathi> ಕಾಶ್ಮೀರದಲ್ಲಿ ಪಂಡಿತರ ವಿರುದ್ಧ ನಡೆದ ದೌರ್ಜನ್ಯದಲ್ಲಿಕಾಶ್ಮೀರಿ ಸಮಾಜವಾಗಲೀ ಅಲ್ಲಿನ ಮುಖ್ಯಮಂತ್ರಿಯಾಗಲೀ, ಸರಕಾರವಾಗಲೀ ಉತ್ಸಾಹೀ, ಸಕ್ರಿಯ ಪಾತ್ರ ವಹಿಸಿಲ್ಲ.
    ಹಾಗಿದ್ದರೆ, ಪಂಡಿತರನ್ನು ಇಲ್ಲಿಯವರೆಗೆ ಕಾಶ್ಮೀರಕ್ಕೆ ವಾಪಸ್ ಕರೆಸಲು ಅಲ್ಲಿನ ಯಾವ ರಾಜ್ಯ ಸರಕಾರಗಳೂ ಪ್ರಯತ್ನವನ್ನೇ ನಡೆಸಿಲ್ಲ?
    ಕಾಶ್ಮೀರದ ಮುಸಲ್ಮಾನ ಸಮಾಜ ಪಂಡಿತರ ಮೇಲೆ ನಡೆದ ದೌರ್ಜನ್ಯಕ್ಕೆ ಎಂದಾದರೂ ಕಣ್ಣೀರು ಹಾಕಿದೆಯೇ? ಅವರಿಗೆ ತಮ್ಮ ತಪ್ಪಿನ ಅರಿವಾಗಿದ್ದರೆ, ಕ್ಷಮೆ ಕೇಳಿ ಅವರನ್ನು ವಾಪಸ್ ಕರೆಸಬಹುದಾಗಿತ್ತಲ್ಲವೇ?

    bhadravathi> ಈಗ ಹೇಳಿ ಗುಜರಾತ ಮತ್ತು ಕಾಶ್ಮೀರವನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವುದು ಎಷ್ಟು ಸೂಕ್ತ ಎಂದು?
    ಹೌದು, ಖಂಡಿತ ಹೋಲಿಕೆಯಿಲ್ಲ.
    ಇಂದಿಗೂ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ವಾಪಸ್ ಹೋಗಲಾಗಿಲ್ಲ. ಅವರ ಕುರಿತಾಗಿ ಯಾವ ಮಾಧ್ಯಮಗಳೂ, ಮಾನವ ಹಕ್ಕು ಆಯೋಗದವರೂ, ಜಾತ್ಯಾತೀತರೂ ಕಣ್ಣೀರು ಕರೆದಿಲ್ಲ, ಅವರ ಬವಣೆಗಳ ಬರೆದು ನ್ಯಾಯಾಲಯಗಳಲ್ಲಿ ಹೋರಾಟ ನಡೆಸಿಲ್ಲ.
    ಗುಜರಾತಿನ ಮುಸಲ್ಮಾನರನ್ನು ನೋಡಿ. ಅವರು ಕಳೆದ ೧೦ ವರ್ಷಗಳಿಂದ ಸಂತೋಷವಾಗಿ, ಶಾಂತವಾಗಿ ತಮ್ಮದೇ ಸ್ಥಳದಲ್ಲಿ ನೆಲೆಸಿದ್ದಾರೆ; ತಮ್ಮ ನೆಚ್ಚಿನ ಮುಖ್ಯಮಂತ್ರಿಯನ್ನೇ ಮತ್ತೆಮತ್ತೆ ಆರಿಸುತ್ತಿದ್ದಾರೆ; ಆ ಮುಖ್ಯಮಂತ್ರಿಯ ಪಕ್ಷದವರನ್ನೇ ತಮ್ಮ ಸ್ಥಾನೀಯ ನಗರಸಭೆಗಳಿಗೂ ಕಳುಹಿಸುತ್ತಿದ್ದಾರೆ; ಅಲ್ಲಿನ ಮುಸಲ್ಮಾನ ನಾಯಕರೂ ಆ ಮುಖ್ಯಮಂತ್ರಿಯ ಪರಾಖು ಹೇಳುತ್ತಿದ್ದಾರೆ.

    bhadravathi> ಗರ್ಭಿಣಿ ಸ್ತ್ರೀಯರ ಉದರ ಬಗೆದು ಭ್ರೂಣಗಳನ್ನು ಬೆಂಕಿಗೆ ಎಸೆದ ಕೃತ್ಯಗಳು, ಮಾನಭಂಗದ ದ್ರುಶ್ಯಗಳನ್ನು ಚಿತ್ರೀಕರಿಸಿ ಸೀ ಡೀ ಗಳನ್ನು ಮಾಡಿ ಹಂಚಿದ್ದು,
    ಇದೆಲ್ಲವೂ ಮಾಧ್ಯಮಗಳ ಹಾಗೂ ತಥಾಕಥಿತ ಜಾತ್ಯಾತೀತವಾದಿಗಳ ಸೃಷ್ಟಿ.
    ತೀಸ್ತಾ ಸೆಟಲ್‌ವಾಡ್ ಹೇಳಿದ ಸುಳ್ಳುಗಳನ್ನು ನ್ಯಾಯಾಲಯವೇ ಖಂಡಿಸಿದೆ. ಆಕೆ ಸಾಕ್ಷಿ ಎಂದು ನ್ಯಾಯಾಲಯದ ಮುಂದೆ ನಿಲ್ಲಿಸಿದ ಮುಸ್ಲಿಂ ಮಹಿಳೆಯೇ ಆಕೆಯ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಇಂತಹ ವ್ಯಕ್ತಿ ತಯಾರಿಸಿದ ಸಿ.ಡಿ.ಗಳನ್ನು ಯತಾರ್ಥಚಿತ್ರವೆಂದು ನೀವು ಭಾವಿಸಿದರೆ, ಗುಜರಾತಿನ ಕಥೆ ನಿಮಗೆ ತಿಳಿದಿಲ್ಲವೆಂದೇ ಭಾವಿಸಬೇಕು;
    ಅಥವಾ ನಿಮ್ಮ ಉದ್ದೇಶ ಮತ್ತೇನೋ ಇರಬೇಕೆಂದೇ ತಿಳಿಯಬೇಕು.

    bhadravathi> ಗುಜರಾತಿನ ಹಿಂಸೆಯ ಬಗೆಗಿನ ಯಾವುದೇ ಲೇಖನ ಓದಲೂ ನನಗೆ ಮನಸ್ಸು ಬರದು. ಅಂಥ ಲೇಖನ ಕಣ್ಣಿಗೆ ಬಿದ್ದಾಗ ಓದುವ ಗೊಡವೆಗೆ ನಾನು ಹೋಗುವುದಿಲ್ಲ.
    ಕೇವಲ One-Sided ಲೇಖನಗಳನ್ನು ಓದಿದರೆ ಹೀಗೇ ಆಗುವುದು. ಗುಜರಾತಿನಲ್ಲಿ ನಡೆದ ಘಟನೆಗಳ ವಿಷಯದಲ್ಲಿ ಮಾಧ್ಯಮಗಳು ಬಹಳ ಪಕ್ಷಪಾತ ಧೋರಣೆ ತೋರಿವೆ.
    ಗುಜರಾತಿನಲ್ಲಿ ನಡೆದ ಘಟನೆಗಳನ್ನು ಇಷ್ಟೊಂದು ವೈಭವೀಕರಿಸಿ ತೋರಿಸುವ ಮಾಧ್ಯಮಗಳು, ಗೋಧ್ರಾ ರೈಲಿನ ಘಟನೆಯನ್ನು ಕುರಿತು ಒಂದು ಸಾಲನ್ನೇ ಬರೆಯುವುದಿಲ್ಲವಲ್ಲ, ಏಕೆ?
    ನೀವೂ ಸಹ, ಗೋಧ್ರಾದ ರೈಲಿನ ಘಟನೆಯನ್ನು, ಅಲ್ಲಿ ಸುಟ್ಟು ಕರಕಲಾದ ವ್ಯಕ್ತಿಗಳ ಬಗ್ಗೆ ಒಂದು ಕನಿಕರದ ಮಾತನ್ನೂ ಆಡಿಲ್ಲವಲ್ಲ? ಅವರೇನೂ ಮನುಷ್ಯರಲ್ಲವೇ?
    ಅಥವಾ ಮಾಡಿದವರು ಮುಸಲ್ಮಾನರಾದ್ದರಿಂದ, “ಪರವಾಗಿಲ್ಲ” ಎನ್ನುವು ಭಾವವೇ?

    ಗೋಧ್ರಾದ ರೈಲಿನ ಘಟನೆ ನಡೆಯದೇ ಇದ್ದಿದ್ದರೆ, ಗೋಧ್ರಾ ನಂತರದ ಘಟನೆಯೇ ನಡೆಯುತ್ತಿರಲಿಲ್ಲ ಎಂದು ನಿಮಗೆ ಎಂದೂ ಅನ್ನಿಸಿಯೇ ಇಲ್ಲವೇ?
    ರೋಗದ ಮೂಲಕ್ಕೆ ಚಿಕಿತ್ಸೆ ನೀಡಿದರೆ, ರೋಗವು ಮರುಕಳಿಸುವುದಿಲ್ಲ. ಸಾಮಾನ್ಯವಾಗಿ ಶಾಂತವಾಗಿರುವ ಹಿಂದು ಸಮಾಜ, ಇದ್ದಕ್ಕಿದ್ದಂತೆ ಗುಜರಾತಿನಲ್ಲಿ ಅಷ್ಟೊಂದು ತೀವ್ರವಾದ ಪ್ರತಿಕ್ರಿಯೆ ತೋರಿಸಿತೆಂದರೆ ಅದಕ್ಕೆ ಏನಾದರೂ ಕಾರಣ ಇರಬೇಕಲ್ಲವೇ? ಗೋಧ್ರಾದ ರೈಲಿನ ಘಟನೆಯನ್ನು ಖಂಡಿಸದೇ, ಕೇವಲ ನಂತರ ನಡೆದ ಘಟನೆಯನ್ನೇ ಖಂಡಿಸುತ್ತಿದ್ದರೆ, ಮುಂದೆಯೂ ಹಿಂದು ಸಮಾಜ ಇಂತಹ ಪ್ರತಿಕ್ರಿಯೆಗಳಿಗೆ ಕೈಹಾಕುವ ಸಾಧ್ಯತೆ ಇದ್ದೇ ಇರುತ್ತದೆ. ಒಂದು ಬಹುಸಂಖ್ಯಾತ ಸಮಾಜ ಪ್ರತೀಕಾರಕ್ಕೆ ಕೈಹಾಕಿದರೆ, ಯಾವ ಸರಕಾರಗಳೂ ಅದನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ನೆನಪಿಟ್ಟಿಕೊಳ್ಳಿ. ಮಾತುಮಾತಿಗೂ ಹಿಂದುಗಳನ್ನು ಹೀಗಳೆದು, ಗುಜರಾತಿನ ಘಟನೆಗಳನ್ನೇ ಮುಂದೆ ತೋರಿಸಿ, ಇಡೀ ಹಿಂದು ಸಮಾಜವನ್ನೇ “ಹಿಂಸಾತ್ಮಕ” ಎಂದು ಚಿತ್ರಿಸಿದರೆ, ಹಿಂದು ಸಮಾಜವು “ಸಾವಿರ ವರ್ಷ”ಗಳ ಆಕ್ರಮಣಗಳ ಪ್ರತೀಕಾರಕ್ಕೆ ಕೈಹಾಕಿದರೂ ಆಶ್ಚರ್ಯವಿಲ್ಲ.
    ಯಾವ ಸರಕಾರಗಳೂ, ಯಾವ ಪೊಲೀಸ್-ಸೈನ್ಯಗಳೂ ಅದನ್ನು ತಡೆಯಲಾರದು.

    ಉತ್ತರ
    • bhadravathi
      ಏಪ್ರಿಲ್ 9 2012

      ನರೇಂದ್ರ, ಸಬೀಹಾ ರವರು ಬರೆದಿರುವುದಕ್ಕೂ ಕಾಶ್ಮೀರಿ ಪಂಡಿತರ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ. ಲೋಕಸಭೆ ಪ್ರಸಕ್ತ ವರ್ಷದ ಆಯವ್ಯವಯ ದ ಚರ್ಚೆಗೆ ಕುಳಿತಾಗ ಇಂದಿರಾ ಗಾಂಧೀ ಕಾಲದ ಆಯವ್ಯಯದ ಬಗ್ಗೆ ಸದಸ್ಯರು ಚರ್ಚಿಸಿದರೆ ಆಗುವ ಅಭಾಸ ಊಹಿಸಿಕೊಳ್ಳಿ.
      ನನ್ನನ್ನು ಪೂರ್ವಾಗ್ರಹ ಪೀಡಿತ ಎಂದು ದೂರುತ್ತೀರಿ. ಆದರೆ ತಮ್ಮ ಕೆಲವು ವಾದ, ತರ್ಕ ನೋಡಿದರೆ ಇಷ್ಟೊಂದು ತಿಳಿದ ವ್ಯಕ್ತಿಯೊಬ್ಬರು ಇಷ್ಟೊಂದು ಪೂರ್ವಾಗ್ರಹ ಪೀಡಿತರಾಗಲು ಕಾರಣ ಏನಿರಬಹುದು ಎಂದು ಆಶ್ವರ್ಯ ಉಂಟು ಮಾಡುತ್ತದೆ.
      ಸಾಧ್ವಿ ವಿರುದ್ಧ ವಾಟರ್ “ಟೈಟ್ ಕೇಸ್” ತಯಾರಿಸಲಾಗಿದೆ, ನೀವದನ್ನು ಅಲ್ಲಗಳೆಯುತ್ತೀರಿ. ಗುಜರಾತಿನಲ್ಲಿ ನಡೆದ ಘಟನೆಗಳಿಗೆ ತೀಸ್ತಾ ಸೆತಲ್ವಾಡ್ ಮಾತ್ರವಲ್ಲ, ಬಹಳಷ್ಟು ಜನ ಹೇಳಿದ್ದಾರೆ, ಬರೆದಿದ್ದಾರೆ. ಗಲಭೆ ಸಮಯ ನಾಲ್ಕು ಐದು ವರ್ಷದ ಎಳೆ ಮಕ್ಕಳೂ ಅಡುಗೆ ಮನೆಯ ಕತ್ತಿ ಹಿಡಿದು “ಅವರನ್ನು ಕೊಲ್ಲಿ” ಎಂದು ಬೀದಿಯಲ್ಲಿ ಓಡುತ್ತಾ ಇರುವ ದೃಶ್ಯದ ಬಗ್ಗೆ outlook ಪತ್ರಿಕೆಯಲ್ಲಿ ಬಂದಿತ್ತು. ಈಗ outlook ನ ಸಂಪಾದಕ ವಿನೋದ್ ಮೆಹ್ತಾ ಬಗೆಗಿನ ಕಟು ಟೀಕೆಗಳಿಗೆ ನಾನು ತಯಾರಾಗಬೇಕೇನೋ? ಗುಜರಾತ್ ಬಗ್ಗೆ ಬರೆದಿರುವುದೆಲ್ಲಾ ಹಿಂದೂ ಸಹೋದರರು. ಒಂದು ಕಡೆ ಸೇತಲ್ವಾಡ್ ಮಾತನ್ನು ನಂಬಬಾರದು ಎಂದು ಹೇಳುತ್ತಾ ಮರು ಘಳಿಗೆಯಲ್ಲೇ “ಗುಜರಾತಿನಲ್ಲಿ ಅಷ್ಟೊಂದು ತೀವ್ರವಾದ ಪ್ರತಿಕ್ರಿಯೆ ತೋರಿಸಿತೆಂದರೆ” ಎನ್ನುವ ಮಾತನ್ನೂ ಹೇಳುತ್ತೀರಿ. ಗೋಧ್ರಾ ದ ರೈಲು ದುರ್ಘಟನೆ ಮತ್ತು ಪಾಶವೀ ಕೃತ್ಯವನ್ನು ಯಾವ ನೈಜ ಮುಸಲ್ಮಾನನೂ ವಿತಂಡವಾದವನ್ನ ಮುಂದಿಟ್ಟುಕೊಂಡು ಸಮರ್ಥಿಸಲಾರ. ಇದು ಅದಕ್ಕೆ ಸೇಡು, ಇದಕ್ಕೆ ಸೇಡು ಎಂದು ವಿಕೃತವಾದ ಮಂಡಿಸೋಲ್ಲ. ತಪ್ಪು ಯಾರು ಮಾಡಿದರೂ ತಪ್ಪೇ. ಕ್ರಿಯೆ ಪ್ರಕ್ರಿಯೆ, ಸೇಡು, ಪ್ರತೀಕಾರ ಇವೆಲ್ಲಾ ನೈಜ ಮಾನವ ಭಾವನೆಗಳಲ್ಲ. ಅವುಗಳಿಂದ ಏನನ್ನೂ ಸಾಧಿಸಲು ಸಾಧ್ಯವಲ್ಲ; ಮತ್ತಷ್ಟು ರಕ್ತ, ಅಸಹನೆ, ಗುಮಾನಿ, ಅಶಾಂತಿಯ ಹೊರತು. ಗುಜರಾತ್ ಗಲಭೆಗೆ ಕುಮ್ಮಕ್ಕು ನೀಡಿದ ಮುಖ್ಯಮಂತ್ರಿಗೆ ದೇವರು ಹತ್ತು ವರ್ಷಗಳ ನಂತರವಾದರೂ ಪಶ್ಚಾತ್ತಾಪವಾಗುವಂತೆ ಮಾಡಿದ. ಆ ಪಶ್ಚಾತ್ತಾಪದ ಫಲವೇ ಇರಬೇಕು “ಸದ್ಭಾವನಾ” ಯಾತ್ರೆ. ಒಂದು ತೆರನಾದ ‘sad’ bhavana ಯಾತ್ರೆಯಂದೂ ಹೇಳಬಹುದು.
      “ಹಿಂದು ಸಮಾಜವು “ಸಾವಿರ ವರ್ಷ”ಗಳ ಆಕ್ರಮಣಗಳ ಪ್ರತೀಕಾರಕ್ಕೆ ಕೈಹಾಕಿದರೂ ಆಶ್ಚರ್ಯವಿಲ್ಲ.
      ಯಾವ ಸರಕಾರಗಳೂ, ಯಾವ ಪೊಲೀಸ್-ಸೈನ್ಯಗಳೂ ಅದನ್ನು ತಡೆಯಲಾರದು”- ಸತ್ಯವಾದ ಮಾತನ್ನೇ ಆಡಿದ್ದೀರಿ, ನರೇಂದ್ರ. ಇದೇ ಆಗಿದ್ದು ಗುಜರಾತಿನಲ್ಲಿ. ಬೇಲಿಯೇ ಎದ್ದು ಹೊಲ ಮೇಯ್ದರೆ ಪರಮಾತ್ಮ ಮಾತ್ರ ಬಂದು ಕಾಪಾಡಬೇಕು.
      ಮತ್ತೊಂದು ಮಾತು. ಯಾವುದೇ ಸಂಘಟನೆ, ಸಂಸ್ಥೆಗಳ ಸದಸ್ಯರಾಗದೆ, ಅವರ ದೃಷ್ಟಿಕೋನವೇ ಸರಿ ಎಂದು ನಂಬಿದರೆ ವಿಷಯ ತಿಳಿಯಾಗಿ ಕಾಣೋಲ್ಲ. ದೇವರು ದಯಪಾಲಿಸಿದ ಸಾಮಾನ್ಯ ಬುದ್ಧಿಯನ್ನು ಉಪಯೋಗಿಸಿ ವಿಷಯಗಳನ್ನು, ಘಟನೆಗಳನ್ನು ಅವಲೋಕಿಸಿದಾಗ ಬೇರೆಯೇ ತೆರನಾದ dimension ಕಾಣಲು ಸಿಗುತ್ತದೆ. ಏಕೆಂದರೆ ಮುಂದಿರುವ ವ್ಯಕ್ತಿಯ ಅಭಿಪ್ರಾಯಗಳನ್ನೂ, ದೃಷ್ಟಿ ಕೋನವನ್ನೂ ಅರಿತು ಕೊಳ್ಳಬಹುದು. ಅದರಲ್ಲೂ ನಿಮ್ಮಂಥವರ ಜೊತೆ ಮಾತನಾಡುವುದೆಂದರೆ ಹೆಚ್ಚು ವಿಷಯಗಳು ತಿಳಿದಂತೆ. ನನಗೆ ಚರ್ಚೆಯಲ್ಲಿ ಪಾಲುಗೊಳ್ಳುವುದು ಇಷ್ಟ. ನಮ್ಮ ದೇಶದ ಹಿಂದೂ ಮುಸ್ಲಿಮ್ ನಡುವಿನ ಕಂದಕ, ಅಮೆರಿಕೆಯ ಕರಿಯ ಬಿಳಿಯನ ನಡುವಿನ ವೈಷಮ್ಯ ನನ್ನ ಆಸಕ್ತಿಯ ವಿಷಯಗಳು.

      ಉತ್ತರ
  12. Balachandra
    ಏಪ್ರಿಲ್ 9 2012

    Dear Bhadraavati,

    You are exposed by Mr. Kumar. I was about to reply you, but soom Mr. Kumar wrote it better than I could do. But still I have some comments:
    ಇಡೀ ನಿಮ್ಮ comment ನ್ನು ಅವಲೋಕಿಸಿದರೆ ನೀವೆಷ್ಟು ಪೂರ್ವಗ್ರಹಪೀಡಿತರೆಂಬುದು ಅರಿವಾಗುತ್ತದೆ. ನಮಗೆ ಗೊತ್ತಿರುವಂತೆ Mamtaaz Quadri ಎಂಬಾತ ತಸೀರ್ ಎಂಬವನನ್ನು ಕೊಲೆ ಮಾಡಿದ(ಪಾಕಿಸ್ತಾನದಲ್ಲಿ). ಆತನನ್ನು ಕೋರ್ಟ್ ಗೆ ತರುವಾಗ ಪುಷ್ಪಗಳ ಮೂಲಕ ಅಭಿನಂದಿಸಲಾಯಿತು ಗೊತ್ತೇ?ಆತ ಕೊಲೆ ಮಾಡಿದ ಕಾರಣವಾದರೂ ಗೊತ್ತೇ? ದಯವಿಟ್ಟು ತಿಳಿದುಕೊಳ್ಳಿ.
    ಇನ್ನು ಎಷ್ಟು ಮುಸ್ಲಿಂ ರಾಷ್ಟ್ರಗಳು ಪ್ರಜಾಪ್ರಭುತ್ವವನ್ನು ಹೊಂದಿವೆ?ಎಷ್ಟು ಮುಸ್ಲಿಂ ರಾಷ್ಟ್ರಗಳಲ್ಲಿ ಭಾರತದಲ್ಲಿರುವಂತೆ ಧಾರ್ಮಿಕ ಸ್ವಾತಂತ್ರ್ಯ ಇದೆ?
    ಹೋಗಲಿ “ಕಾಶ್ಮೀರದಲ್ಲಿ ಪಂಡಿತರ ವಿರುದ್ಧ ನಡೆದ ದೌರ್ಜನ್ಯದಲ್ಲಿ ಕಾಶ್ಮೀರಿ ಸಮಾಜವಾಗಲೀ ಅಲ್ಲಿನ ಮುಖ್ಯಮಂತ್ರಿಯಾಗಲೀ, ಸರಕಾರವಾಗಲೀ ಉತ್ಸಾಹೀ, ಸಕ್ರಿಯ ಪಾತ್ರ ವಹಿಸಿಲ್” ಎಂದು ಹೇಳುತ್ತೀರಿ. ಈಗಲೂ ಕಾಶ್ಮೀರ ವಿಭಜನೆಗಾಗಿ ಎಷ್ಟು ಜನರು ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ ಗೊತ್ತೇ?ಹಾಗಾದರೆ stone-pelters ಯಾರು?
    ಉಳಿದ ವಿಷಯಗಳನ್ನು, ನಿಮ್ಮ ಹುರುಳಿಲ್ಲದ ವಾದವನ್ನು ಕುಮಾರ್ ಅವರು ಈ ಮೇಲಿನ post ಲಿ ಸ್ಪಷ್ಟ ಪಡಿಸಿದ್ದಾರೆ. ದಯವಿಟ್ಟು ಓದಿ.
    @Kumar,
    Thanks for exposing Mr. Bhadravati. ಆದರೆ ಈ ಜನಗಳು ಆತ್ಮಾವಲೋಕನ ಮಾಡಿಕೊಳ್ಳಲಾರರು.

    ಉತ್ತರ
  13. Balachandra
    ಏಪ್ರಿಲ್ 9 2012

    @bhadravati
    ಇನ್ನೊಂದು ವಿಚಾರ. ಗೋದ್ರ ಹತ್ಯಾಕಾಂಡ ಹೇಗೆ ಶುರುವಾಯಿತೆಂಬುದರ ಬಗ್ಗೆ ನಿಮಗೆ ಸ್ವಲ್ಪವಾದರೂ ಗೊತ್ತಿದೆಯ? ಮೊದಲು ಗೋದ್ರ ರೈಲ್ವೆ ಯಲ್ಲಿ ಪ್ರಯಾಣಿಸುತ್ತಿದ್ದ 58 ಮಂದಿ ಕರಸೇವಕರನ್ನು ಜೀವಸಹಿತ ಸುಟ್ಟಿದ್ದು ಯಾರು?ಇದು ನಿಮಗೆ disturbing ಅಂತ ಅನಿಸೊಲ್ವ?ಹಾಗೆ ೫೮ ಜನ ಕರಸೇವಕರು ಮುಸ್ಲಿಂ ಭಯೋತ್ಪಾದಕರಿಂದ ಮಡಿಯದಿದ್ದರೆ ಗೋದ್ರ ಗಲಭೆಯೇ ಸಂಭವಿಸುತ್ತಿರಲಿಲ್ಲ ಎಂದು ನಿಮಗೆ ತಿಳಿದಿರಲಿ.

    ಉತ್ತರ
  14. chetana Teerthahalli
    ಏಪ್ರಿಲ್ 9 2012

    bahaLa baari aaghaata aagatte.
    alahabad nallobba kuDidu phone nalli talaakh koTTa baggeyaagalee, Saudiyalli MullaagaLu hengasaru baaLehaNNu/savate kaayigaLannu nODaluu baaradu ennuva ashleela phatvaa horaDisiddara bagegaagalee naavu bareyuva haage illa. nere deshagaLalli itara dharmeeyara mele mattondu dharmeeyaru esaguva atyaachaaravanna vivarisabaaradu. “vishayavanna touch madi” bidabahudashte!
    enuu karmavO! oTTinalli suffer maaDOru heNNugaLu. elli yavaga enu baredare, hege baredare naavu ‘brand’ agteevo, endu athava mtenO samskrutika, raajakeeya kaaraNagaLige, or sahityaka haya raajakeeyakke baliyaaguva bhaya ittukondu satya mare maachuva athava ondanna (ofcourse, bahusankhyaatavanna) vaibhaveekarisuva kelasa maaduvudaaguttade.
    yaavattu hengasaru jaati- pantha- siddhaantagaLa horataagi oTTaagtaarO bahushaha aaga ellakku ondu sauhardayuta antya sikkeetu.
    – CheT

    ಉತ್ತರ
  15. Kumar
    ಏಪ್ರಿಲ್ 9 2012

    ಅಬ್ದುಲ್,
    ನಾನು ಮೊದಲಿಗೇ ಒಂದು ವಿಷಯವನ್ನು ಸ್ಪಷ್ಟಪಡಿಸಿಬಿಡುತ್ತೇನೆ.
    ನಾನಿಲ್ಲಿ ಗುಜರಾತಿನಲ್ಲಿ ನಡೆದ ಹಿಂಸಾಚಾರದ ಘಟನೆಗಳನ್ನು ಸಮರ್ಥಿಸುತ್ತಿಲ್ಲ. ಯಾವುದೇ ರೀತಿಯ ಹಿಂಸಾಚಾರವನ್ನೂ ನಾನು ಸಮರ್ಥಿಸುವುದಿಲ್ಲ.

    “ಸಬೀಹಾ ರವರು ಬರೆದಿರುವುದಕ್ಕೂ ಕಾಶ್ಮೀರಿ ಪಂಡಿತರ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ.” ಎಂದು ಹೇಳುತ್ತಿರುವಿರಿ.
    ಆದರೆ, ನಾನೇಕೆ ಕಾಶ್ಮೀರಿ ಪಂಡಿತರ ವಿಷಯವನ್ನು ಇಲ್ಲಿಗೆ ತರಬೇಕಾಯಿತು ಎನ್ನುವುದನ್ನು ಸ್ವಲ್ಪ ಯೋಚಿಸಿ ನೋಡಿ.
    ಪ್ರಸ್ತುತ ಲೇಖಕರು (ಡಾ,ಜಿ.ಭಾಸ್ಕರ ಮಯ್ಯ ಮತ್ತು ಸಬೀಹಾ ಇಬ್ಬರನ್ನೂ ಸೇರಿಸಿ) ಗುಜರಾತಿನ ಹಿಂಸೆಯ ಕುರಿತಾಗಿ ವರ್ಣಮಯವಾಗಿ ಬರೆದಿದ್ದಾರೆ.
    ಆದರೆ, ಅದೇ ಕಾಶ್ಮೀರದಲ್ಲಿ ನಡೆದ ಘಟನೆಗಳ ಬಗ್ಗೆ ಒಂದು ಸಲವೂ ಅವರಿಗೆ ದುಃಖವಾಗಿಲ್ಲವಲ್ಲ?
    ಇರಲಿ, ನೀವು ಹೇಳಿದಂತೆ ಕಾಶ್ಮೀರದ ವಿಷಯಕ್ಕೂ ಗುಜರಾತಿಗೂ ಸಂಬಂಧವಿಲ್ಲವೆಂದು ಅದನ್ನು ಅಲ್ಲಿಗೇ ಬಿಡೋಣ.
    ಗೋಧ್ರಾದ ರೈಲು ಸುಟ್ಟ ಘಟನೆಗೂ ಗುಜರಾತಿನ ಹಿಂಸಾಚಾರಕ್ಕೂ ಸಂಬಂಧವಿದೆ ಎಂದು ಒಪ್ಪುವಿರಿ ತಾನೆ?
    ಸಬೀಹಾ ಬರಹದಲ್ಲಾಗಲೀ ಡಾ.ಜಿ.ಭಾಸ್ಕರ ಮಯ್ಯ ಅವರ ಲೇಖನದಲ್ಲಾಗಲೀ, ಗೋಧ್ರಾ ರೈಲಿನಲ್ಲಿ ಸತ್ತವರ ಕುರಿತಾಗಿ ಏನು ಬರೆದಿದ್ದಾರೆ ತೋರಿಸಿ ನೋಡೋಣ?
    ಇದರ ಅರ್ಥವೇನು?

    “ಸಾಧ್ವಿ ವಿರುದ್ಧ ವಾಟರ್ “ಟೈಟ್ ಕೇಸ್” ತಯಾರಿಸಲಾಗಿದೆ,” ಎಂದು ಹೇಳುತ್ತಿರುವಿರಿ ಅಬ್ದುಲ್.
    ಅದು ನಿಮ್ಮ ಊಹೆ ಅಷ್ಟೇ. ಅದೇನಾದರೂ ನಿಜವಾಗಿದ್ದಲ್ಲಿ, ಇಷ್ಟು ಹೊತ್ತಿಗೆ ಅವರಿಗೆ ಶಿಕ್ಷೆಯಾಗಿರುತ್ತಿತ್ತು.
    ತನಿಖಾ ಸಂಸ್ಥೆಗಳಿಗೆ ಇಲ್ಲಿಯವರೆಗೂ ಒಂದೇ ಒಂದು ಗಟ್ಟಿಯಾದ ಸಾಕ್ಷಿಯನ್ನೂ ನ್ಯಾಯಾಲಯದೆದುರು ತಂದು ನಿಲ್ಲಿಸಲಾಗಿಲ್ಲ!
    ಹೀಗಿದ್ದಾಗ್ಯೂ, ಅವರಿಗೆ ಜೈಲಿನಲ್ಲಿ ನರಕಯಾತನೆ ನೀಡಲಾಗಿದೆ; ಸೆರೆಮನೆಗೆ ಹೋಗುವಾಗ ಆರೋಗ್ಯವಾಗಿದ್ದ ಸಾಧ್ವಿಯವರು ಇಂದು ನಡೆದಾಡಲೂ ಆಗದಂತಾಗಿದ್ದಾರೆ. ತಮಗೆ ಸರಿಯಾದ ಆಹಾರ ನೀಡಲಾಗುತ್ತಿಲ್ಲ, ಔಷಧೋಪಚಾರ ಮಾಡಲಾಗುತ್ತಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇಷ್ಟಾಗಿಯೂ ಅವರನ್ನಿಟ್ಟಿರುವ ವಾತಾವರಣದಲ್ಲಿ ಸುಧಾರಣೆ ಮಾಡಲಾಗಿಲ್ಲ.
    ಅದೇ, ಅಜ್ಮಲ್ ಕಸಬ್ ಮತ್ತು ಅಫ಼್ಜಲ್ ಗುರು ಅವರ ಸೆರೆಮನೆಯನ್ನು ನೋಡಿ – ಅವರಿಗೆ ರಾಜೋಪಚಾರ ನಡೆಯುತ್ತಿದೆ!
    ಏಕೆ ಈ ರೀತಿಯ ತಾರತಮ್ಯ? ಆರೋಪ ಸಾಬೀತಾಗದ ಜೈಲುವಾಸಿಗೆ ನರಕವಾಸ; ಗಲ್ಲುಶಿಕ್ಷೆ ಖಾಯಂ ಆದ ಖೈದಿಗೆ ರಾಜೋಪಚಾರ!!

    ತೀಸ್ತಾ ಸೆತಲ್ವಾಡ್, ಔಟ್‌ಲುಕ್, ತೆಹಲ್ಕಾ, ಇತ್ಯಾದಿಗಳು ನಿಷ್ಪಕ್ಷಪಾತಿಗಳು ಎಂದು ನೀವು ತಿಳಿದಿರುವಂತಿದೆ.
    ಇವರು ನಿಜಕ್ಕೂ ನಿಷ್ಪಕ್ಷಪಾತಿಗಳಾಗಿದ್ದರೆ, ಗೋಧ್ರಾ ರೈಲು ಘಟನೆಯ ಕುರಿತಾಗಿ ಬರೆದಿರುವ ಲೇಖನಗಳನ್ನೋ, ನ್ಯಾಯಾಲಯಗಳಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದವರ ಮೇಲೆ ಇವರು ಹಾಕಿರುವ ಕೇಸನ್ನೋ ತೋರಿಸಿ ನೋಡೋಣ?

    ಗೋಧ್ರಾದಲ್ಲಿ ರೈಲನ್ನು ಸುಟ್ಟಾಗ ಈ ತಥಾಕಥಿತ ಬುದ್ಧಿಜೀವಿಗಳು (ನೀವು ತಿಳಿಸಿದ ಔಟ್‌ಲುಕ್ ಪತ್ರಿಕೆಯನ್ನೂ ಸೇರಿಸಿ) ಒಂದಿನಿತೂ ಕಣ್ಣೀರು ಹಾಕಲಿಲ್ಲ; ಬದಲಿಗೆ ಹಿಂದುಗಳಿಗೇ ಉಪದೇಶ ಪ್ರಾರಂಭಿಸಿದರು. ಅವರೇನಾದರೂ ಕೂಡಲೇ ಗೋಧ್ರಾದ ಘಟನೆಯನ್ನು ಖಂಡಿಸಿದ್ದರೆ, ಮುಂದೆ ನಡೆದ ಗುಜರಾತಿನ ಹಿಂಸಾಚಾರಕ್ಕೆ ಆಸ್ಪದವೇ ಆಗುತ್ತಿರಲಿಲ್ಲ!
    ಗೋಧ್ರಾದ ರೈಲು ದುರಂತವನ್ನು ಇವರೇಕೆ ಖಂಡಿಸುವುದಿಲ್ಲ?

    ಅಬ್ದುಲ್, ಎಷ್ಟು ಸುಲಭವಾಗಿ “ಗುಜರಾತ್ ಗಲಭೆಗೆ ಕುಮ್ಮಕ್ಕು ನೀಡಿದ ಮುಖ್ಯಮಂತ್ರಿಗೆ” ಎಂದು ಹೇಳಿರುವಿರಿ. ಗೋಧ್ರಾದ ಘಟನೆಯಿಂದಾಗಿ ಗುಜರಾತಿನ ಗಲಭೆಗಳು ನಡೆದವೆಂಬುದು ಇಡೀ ಜಗತ್ತಿಗೇ ಗೊತ್ತು. ನಿಮ್ಮಂತಹ ವಿದ್ಯಾವಂತರು, ತಿಳುವಳಿಕಸ್ಥರು ಸಹ ಇಂತಹ ಜಾಣ ಮರೆವನ್ನು ತೋರಿಸಿದರೆ, ಉಳಿದವರ ಪಾಡೇನು? ದಯವಿಟ್ಟು ತಥಾಕಥಿತ ಬುದ್ಧಿಜೀವಿಗಳ ಜಾಡನ್ನು ಹಿಡಿಯಬೇಡಿ.

    “ಮತ್ತೊಂದು ಮಾತು. ಯಾವುದೇ ಸಂಘಟನೆ, ಸಂಸ್ಥೆಗಳ ಸದಸ್ಯರಾಗದೆ, ಅವರ ದೃಷ್ಟಿಕೋನವೇ ಸರಿ ಎಂದು ನಂಬಿದರೆ ವಿಷಯ ತಿಳಿಯಾಗಿ ಕಾಣೋಲ್ಲ.” – ನೀವು ಯಾವ ಸಂಘಟನೆಯ ಅಥವಾ ಸಂಸ್ಥೆಯ ಕುರಿತಾಗಿ ಮಾತನಾಡುತ್ತಿದ್ದೀರಿ ಎಂಬುದು ನನಗೆ ತಿಳಿದಿಲ್ಲ.
    ಯಾವುದೋ ಸಂಸ್ಥೆ ನಮ್ಮ ಮೇಲೆ ಕುಳಿತು ತಾನು ಹೇಳಿದಂತೆ ಬರೆಸುತ್ತಿದೆ ಅಥವಾ ನಮ್ಮ ಚಿಂತನೆಯನ್ನು ನಿಯಂತ್ರಿಸುತ್ತಿದೆ ಎಂದು ನೀವು ತಿಳಿದಿರುವಂತಿದೆ. ಅದು ನಿಮ್ಮ ಊಹೆ. ಈ ರೀತಿಯ ಊಹೆಗಳೇ, ಬರಹಗಾರನ ಬರಹದ ಕುರಿತಾಗಿ ಚಿಂತನೆಯನ್ನು ನಿಯಂತ್ರಿಸುತ್ತವೆ ಎಂಬುದು ನನ್ನ ಅನಿಸಿಕೆ. ನಿಮ್ಮ ಊಹೆಗಳನ್ನೆಲ್ಲಾ ಬದಿಗಿಟ್ಟು, ಯಾವ ಕಡೆಗೂ ವಾಲದೆ (ನಿಮ್ಮ ಪಕ್ಷ, ಜಾತಿ, ಭಾಷೆ, ಪ್ರಾಂತ ಇತ್ಯಾದಿಗಳನ್ನೂ ಮರೆತು) ತ್ರಯಸ್ಥರಾಗಿ ಚಿಂತನೆ ನಡೆಸಿ. ಆಗ ನಿಜಕ್ಕೂ ನಿಮಗೆ ಏನನ್ನಿಸುತ್ತದೆ ಹೇಳಿ?

    ಅಬ್ದುಲ್, ನೀವು ಪ್ರಾಯಶಃ ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿ ಗುಜರಾತಿನ ಕುರಿತಾಗಿ, “ಕೆಲವು ಸಂಘಟನೆ”ಗಳ ಕುರಿತಾಗಿ ಅಭಿಪ್ರಾಯ ರೂಪಿಸಿಕೊಂಡಿರುವಂತೆ ಕಾಣುತ್ತಿದೆ. ಮತ್ತು ನಿಮ್ಮ ಮನಸ್ಸಿನಲ್ಲಿರುವ ವಿಷಯಕ್ಕೆ ಸಮರ್ಥನೆಗೆ ಔಟ್‌ಲುಕ್, ತೀಸ್ತಾ ಸೆಟಲ್‌ವಾಡ್, ಮುಂತಾದವರನ್ನು ಉದಾಹರಿಸುತ್ತಿದ್ದೀರಿ. ಆದರೆ, ನಿಮಗೆ ಇವರ ಕುರಿತಾಗಿ ಒಂದು ವಿಷಯ ತಿಳಿದಿದೆಯೋ ಇಲ್ಲವೋ ನಾ ಕಾಣೆ – ಇವರುಗಳು ಮಾಡುತ್ತಿರುವುದು ರಾಜಕಾರಣ; ಅವರನ್ನು ನಿಯಂತ್ರಿಸುತ್ತಿರುವುದು ಭಾರತದೊಳಗಿರುವ ಶಕ್ತಿಗಳಲ್ಲ; ಭಾರತವನ್ನು ದುರ್ಭಲಗೊಳಿಸಲು ನಿಶ್ಚಯಿಸಿರುವ ಶಕ್ತಿಗಳು ಹಣದ ಪ್ರಭಾವದಿಂದ ಇವರನ್ನು ನಿಯಂತ್ರಿಸುತ್ತಿವೆ. ಕೇವಲ, ಇವರಷ್ಟೇ ಅಲ್ಲ – ಹೆಚ್ಚು-ಕಡಿಮೆ ನಮ್ಮಲ್ಲಿರುವ ಎಲ್ಲಾ ಪ್ರಭಾವಿ ಮಾಧ್ಯಮಗಳೂ ಈ ರೀತಿ ಮಾರಾಟಾಕ್ಕೊಳಗಾಗಿವೆ. ನಿಮಗೆ ಆಸಕ್ತಿ ಮತ್ತು ಸಮಯವಿದ್ದರೆ, ನೀವು ನಂಬುವು ಮಾಧ್ಯಮ (ಮುದ್ರಣ ಇಲ್ಲವೇ ದೃಶ್ಯ)ದ ಮಾಲೀಕರು ಯಾರು, ಅವರಿಗೆ ಹಣ ಎಲ್ಲಿಂದ ಬರುತ್ತದೆ, ಇತ್ಯಾದಿಗಳನ್ನು ಪತ್ತೆಮಾಡಲು ಪ್ರಯತ್ನಿಸಿ.
    ನಿಮ್ಮಂತಹ ತಿಳುವಳಿಕಸ್ಥರು, ಇವರುಗಳನ್ನು ಕಣ್ಮುಚ್ಚಿ ಹಿಂಬಾಲಿಸುತ್ತಿರುವಿರೆಂದರೆ, ಅದನ್ನು ನಮ್ಮ ದೇಶದ ದುರ್ದೆಶೆ ಎಂದೇ ಹೇಳಬೇಕು.

    ಉತ್ತರ
  16. Balachandra
    ಏಪ್ರಿಲ್ 10 2012

    Teesta Setilvad grossed 15 million dollar for fabricating the scinario. And she is facing the charge for that also. I don’t say no muslims have been injured. But, both Hindus and Muslims injured in the riot, that’s too sad.
    But, instead of taking the measure for Godra train burning, our medias tried to fabricate the issues. They fabricated it that Godra burning took place as ‘Kar sevaks’ started quaralling with vendors outside the station, and the incident indeed is just accidental. I surprise no one pay least attention for this attitude of media, instead all gamble to flay on Modi! That’s ridiculous.

    ಉತ್ತರ
    • Kumar
      ಏಪ್ರಿಲ್ 10 2012

      Balachandra> They fabricated it that Godra burning took place as ‘Kar sevaks’ started quaralling
      ಅಷ್ಟೇ ಅಲ್ಲ. ಲಾಲೂ ಪ್ರಸಾದ್ ಯಾದವ್ ಅವರಂತಹವರು, ಕಾರಸೇವಕರೇ ರೈಲಿನೊಳಗಿಂದಲೇ ಬೀಗ ಹಾಕಿಕೊಂಡು, ಬೆಂಕಿಹಾಕಿ ರೈಲನ್ನು ಸುಟ್ಟರು ಎಂದು ನಿರೂಪಿಸಲು ಪ್ರಯತ್ನಿಸಿದರು!
      ಕಾರಸೇವಕರೇ ಇರಲಿ, ಮತ್ಯಾರೇ ಇರಲಿ, ಅವರ ಜೀವಕ್ಕೇನೂ ಬೆಲೆಯಿಲ್ಲವೆ? ವ್ಯಕ್ತಿಯ ಜೀವದ ಬೆಲೆಯನ್ನು ’ಹಿಂದು’ ಅಥವಾ ’ಮುಸಲ್ಮಾನ’ ಎನ್ನುವ ಆಧಾರದ ಮೇಲೆ ಮಾಡಲಾಗುತ್ತಿದೆಯೇ?

      ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಮುಸಲ್ಮಾನರನ್ನು, ಕಾಂಗ್ರೆಸ್ಸನ್ನು ಮಣಿಸಲು ದಾಳವನ್ನಾಗಿ ಉಪಯೋಗಿಸಿಕೊಂಡರು.
      ಸ್ವಾತಂತ್ರ್ಯಾ ನಂತರದಲ್ಲಿ ಕಾಂಗ್ರೆಸ್, ಮುಸಲ್ಮಾನರನ್ನು ತನ್ನ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದೆ.
      ಪರಿಣಾಮವಾಗಿ ಮುಸಲ್ಮಾನರು ಇಂದು “ಓಟ್ ಬ್ಯಾಂಕ್” ಆಗಿದ್ದಾರೆ.

      ಆದರೆ, ಈ ಯಾವ ಪಕ್ಷಗಳೂ ಮುಸಲ್ಮಾನರನ್ನು ಉದ್ದಾರ ಮಾಡುತ್ತಿಲ್ಲ ಎನ್ನುವುದು ಮುಸಲ್ಮಾನ ಸಮಾಜಕ್ಕೆ ತಿಳಿಯುತ್ತಿಲ್ಲ.
      ಸ್ವಾತಂತ್ರ್ಯ ಬಂದು ದಶಕಗಳಾದರೂ ಮುಸಲ್ಮಾನರ ಸ್ಥಿತಿಗತಿಗಳಲ್ಲಿ ಸುಧಾರಣೆಯಾಗಿಲ್ಲ. ಇಂದಿಗೂ ಮುಸಲ್ಮಾನ ಹುಡುಗರು ವಾಹನ ರಿಪೇರಿ, ವರ್ಕ್‌ಶಾಪ್, ಇತ್ಯಾದಿ ಕೆಲಸಗಳಲ್ಲಿ ಮಾತ್ರ ಸಿಗುತ್ತಾರೆ. ಎಲ್ಲೋ ಕೆಲವರು ಮಾತ್ರ ವಿದ್ಯಾವಂತರಾಗುತ್ತಾರೆ. ಇದು ಏಕೆ ಹೀಗೆ ಎಂದು ಮುಸಲ್ಮಾನ ಸಮಾಜ ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕು. ತಮ್ಮನ್ನು ಮೋಸ ಮಾಡುತ್ತಿರುವವರು ಯಾರು ಎಂಬುದನ್ನು ಅರಿತುಕೊಳ್ಳಬೇಕು. ತಾವು “ರಾಜಕಾರಣಿಗಳ ದಾಳ ಆಗಬಾರದು” ಎಂದು ನಿರ್ಧರಿಸಬೇಕು.
      ಆಗ ಮಾತ್ರ ಆ ಸಮಾಜ ಉದ್ಧಾರವಾಗುವುದು ಮತ್ತು ದೇಶದಲ್ಲಿ ಶಾಂತಿ ನೆಲೆಸುವುದು.

      ಉತ್ತರ
      • Balachandra
        ಏಪ್ರಿಲ್ 10 2012

        100% ನಿಜ ಕುಮಾರ್. ಇವತ್ತು ಸೂಫಿಗಳು ಬಹುತೇಕವಾಗಿ ಪ್ರಜ್ನಾವಂತರಾಗುತ್ತಿದ್ದಾರೆ, ಹಾಗೂ ಕಟ್ಟಳೆಗಳಿಂದ, ಮೂಲಭೂತವಾದಗಳಿಂದ ಹೊರಬರುತ್ತಿದ್ದಾರೆ. ಆದರೆ ಬಹಳಷ್ಟು ಸುನ್ನಿಗಳು ಇವತ್ತಿಗೂ ಡೆಮೊಕ್ರಾಟಿಕ್ ಆಡಳಿತವನ್ನು ವಿರೋಧಿಸುವಷ್ಟರ ಮಟ್ಟಿಗೆ ಮೂಲಭೂತವಾದದ ಕಪಿಮುಷ್ಟಿಯಲ್ಲಿದ್ದಾರೆ.

        ಉತ್ತರ
  17. noname
    ಏಪ್ರಿಲ್ 10 2012

    ivattu SC NaMO ge clean chit kottide. iiga Gujarat/Modi govt bagge, matte Teeasta bagge shreeyuta Bhadravati Abdul yeneltaare?

    ಉತ್ತರ
    • charles bricklayer
      ಏಪ್ರಿಲ್ 11 2012

      one small correction, SC has not given any clean chit to modi. all that has happened is SC appointed SIT has submitted a report to ahmadabad court saying that there is not enough or no evidence to proove modi’s role in GULBARG SOCEITY MASSACRE case.the ruling of the court is yet to come, it may accept or reject the report and the aggreaved parties can challenge it in higher courts.it is only the begining of an lengthy legal battle and not THE EXONARATION OF MODI as his spin doctors are making it out to be

      ಉತ್ತರ
      • Kumar
        ಏಪ್ರಿಲ್ 12 2012

        charles bricklayer> SC has not given any clean chit to modi
        ಕಳ್ಳನಿಗೊಂದು ಪಿಳ್ಳೆನೆವ!
        Come out of your Negationalism and understand the reality.
        ಸರ್ವೋಚ್ಛ ನ್ಯಾಯಾಲಯವೇನಾದರೂ SIT ವರದಿಯನ್ನು ಕೈಗೆ ತೆಗೆದುಕೊಂಡಿದ್ದರೆ, ನಿಮ್ಮ ಆನಂದಕ್ಕೆ ಪಾರವೇ ಇರುತ್ತಿರಲಿಲ್ಲವೆನಿಸುತ್ತದೆ.
        ಆದರೆ, ಅದು ಹಾಗೆ ಮಾಡಿಲ್ಲ; ಸರ್ವೋಚ್ಛ ನ್ಯಾಯಾಲಯವೂ SIT ವರದಿಯ ಆಧಾರದ ಮೇಲೇ ತೀರ್ಪು ನೀಡುತ್ತದೆ.
        ನಿಮ್ಮ ವರ್ತನೆ, “ಬಿದ್ದರೂ ಮೀಸೆ ಮಣ್ಣಾಗಲಿಲ್ಲ” ಎಂಬಂತಿದೆ!

        ಉತ್ತರ
        • charles bricklayer
          ಏಪ್ರಿಲ್ 12 2012

          ಮೊದಲಿಗೆ ವಯಕ್ತಿಕವಾಗಿ ನನಗೆ ನಿಮ್ಮ ಪರಿಚಯವಿಲ್ಲ,ಹಾಗಾಗಿ ನಿಮ್ಮ ವ್ಯಕ್ತಿತ್ವದ ಮೇಲೆ ನಾನು ಪ್ರತಿಕ್ರಯಿಸುವುದಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯಿಸುವಾಗ ಭಾಷೆಯ ಮೇಲೆ ಹಿಡಿತವಿರುವುದು ಒಳ್ಳೆಯದು.ನಾನೂ ಕೂಡ ನಿಮಗೆ ಖದೀಮ,ಠಕ್ಕ ಅಥವಾ ಇನ್ನೂ ಕೆಟ್ಟ ವಿಷೇಶಣಗಳನ್ನು ಉಪಯೋಗಿಸಬಹುದು ಆದರೆ ಆ ಸಂಸ್ಕೃತಿಯಲ್ಲಿ ಬೆಳೆದಿಲ್ಲದಿರುವುದರಿಂದ ಹಾಗೆ ಮಾಡಲಾರೆ.ಅದಕ್ಕಾಗಿ ದಯವಿಟ್ಟು ಕ್ಷಮೆಯಿರಲಿ.ಭಾಷೆಯ ಬಳಕೆಯಲ್ಲಿ ನಮ್ಮ ಜ್ಞಾನದ ಮಟ್ಟವನ್ನು ತೋರಿಸಬೇಕೆ ಹೊರತು ಹೃದಯದ ಮಟ್ಟವನಲ್ಲ.
          ಎರಡನೆಯಾದಾಗಿ ತಾವು ವಾಸ್ತವ ಸಂಗತಿಗಳನ್ನೂ ಹಾಗೂ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗೆಗೂ ಸರಿಯಾಗಿ ತಿಳಿದುಕೊಳ್ಳಿ,ನಂತರ ಪ್ರತಿಕ್ರಿಯಿಸಿ. ಸುಮ್ಮಸುಮ್ಮನೆ ಮನಸಿಗ್ಗೆ ಬಂದಂತೆ ಗೀಚಬೇಡಿ.ಯಾವುದೇ ಅಪರಾಧ ಘಟಿಸಿದಾಗ ಅದರ ತನಿಖೆಯನ್ನು ಮೊದಲು ಮಾಡಿ [ಸ್ಥಳೀಯ ಪೊಲೀಸರೆ]ಕೇಸು ದಾಖಲಿಸುವುದು ಸ್ಥಳೀಯ ನ್ಯಾಯಾಲಯದಲ್ಲಿಯೇ,ಅದು ಎಂತಹ ಮಹತ್ವದ ಪ್ರಕರಣವೇ ಅಗಿರಲಿ.ಅಲ್ಲಿ ಪ್ರಕರಣದ ಸಂಪೂರ್ಣ ವಿಛಾರಣೆ ನಡೆದು ತೀರ್ಪು ಹೊರ ಬಂದ ನಂತರ ನ್ಯಾಯ ಸಿಗಲಿಲ್ಲ ಎಂದು ಭಾವಿಸಿದಾತ ಅದರ ಮೇಲಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದೇ ಹೊರತು ಸರ್ವೋಚ್ಚ ನ್ಯಾಯಾಲಯಕಲ್ಲ.ಮುಂಬೈ ಮೇಲಿನ ಉಗ್ರಗಾಮಿಗಳ ಧಾಳಿಯಂತಹ ಅಂತರರಾಷ್ಟ್ರೀಯ ಆಯಾಮವುಳ್ಳ ಪ್ರಕರಣವೂ ವಿಚಾರಣೆಗೊಳಪಟ್ಟಿದ್ದು ಮುಂಬೈ ಸ್ಥಳೀಯ ನ್ಯಾಯಾಲಯದಲ್ಲಿಯೇ .ಅದೇ ಕಸ‍ಬ್‍ಗೆ ಘಲ್ಲು ಶಿಕ್ಷೆ ವಿಧಿಸಿರುವುದು.ಆ ತೀರ್ಪಿನ ವಿರುದ್ದ ಕಸಬ್‍ ಮೇಲ್ಮನವಿ ಸಲ್ಲಿಸಿದ್ದು ಮುಂಬೈ ಉಛ್ಛ ನ್ಯಾಯಾಲಯಕ್ಕೇ ಹೊರತು ಸರ್ವೋಛ್ಛ ನ್ಯಾಯಾಲಯಕ್ಕಲ್ಲ.ಅದೂ ಕೂಡ ಆ ತೀರ್ಪನ್ನು ಎತ್ತಿ ಹಿಡಿದ ನಂತರ ಆತ ಸರ್ವೋಛ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾನೆ. ಅದನ್ನು ಅಂಗೀಕರಿಸಿರುವ ಸರ್ವೋಛ್ಛ ನ್ಯಾಯಾಲಯ ಈಗಷ್ಟೇ ವಿಚಾರಣೆಗೆ ಕೈಗೆತ್ತಿಕೊಂಡಿದೆ.ಈ ಎಲ್ಲ ಹಂತಗಳಲ್ಲೂ ಅಂದರೆ ಪೊಲೀಸರು ಸಲ್ಲಿಸುವ ತನಿಖಾ ವರದಿಗಳಿಂದ ಹಿಡಿದು ತಪ್ಪಿತಸ್ಥ ಎಂದು ತೀರ್ಮಾನಿಸಲ್ಪಟ್ಟ ವ್ಯಕ್ತಿ ಸಲ್ಲಿಸುವ ಮೆಲ್ಮನವಿಯ ವರೆಗೂ ಅವೆಲ್ಲವೂ ಸರಿ ಅಥವಾ ತಪ್ಪು, ಸತ್ಯ ಅಥವಾ ಸುಳ್ಳು ಎಂದು ತೀರ್ಮಾನಿಸುವುದು, ಅಂಗೀಕರಿಸುವುದು ಅಥವಾ ವಜಾ ಮಾಡುವುದು ಆಯಾಯ ನ್ಯಾಯಾಲಯಗಳ ವಿವೇಚನೆಗೆ ಒಳಪಟ್ಟಿರುತ್ತದೆಯೇ ಹೊರತು ಯಾರೇ ವರದಿ[ಅದು ಸ್ವತಹ ಅದೇ ನೇಮಿಸಿರುವ ಸಮಿತಿ]ಕೊಟ್ಟರೂ ನ್ಯಾಯಾಲಯ ತನ್ನ ವಿವೇಚನೆಯಲ್ಲಿ ಅದನ್ನು ಸತ್ಯದ ಅಧಾರದ ಮೇಲೆ ನಿಂತ ಸರಿಯಾದ ವರದಿ ಎಂದು ಅಂಗೀಕರಿಸಿದರೆ ಆಗ ಅದು ಅಂತಿಮವೇ ಹೊರತು ವರದಿ ಕೊಟ್ಟ ತಕ್ಷಣವೇ ಅಲ್ಲ.ನ್ಯಾಯಾಲಯ ತನ್ನ ತೀರ್ಮಾನಗಳನ್ನು ಕೇವಲ ವರದಿಯ ಆಧಾರದ ಮೇಲೆ ಮಾತ್ರವೇ ನೀಡುವುದಿಲ್ಲ,ವರದಿ ಈಡೀ ಪ್ರಕರಣದ ವಿಚಾರಣೆಯ ಒಂದು ಭಾಗವೇ ಹೊರತು ಅದೇ ಎಲ್ಲವೂ ಅಲ್ಲ.ಆಂಧ್ರ ಸರ್ಕಾರದ ಮನವಿಯ ಮೇರೆಗೆ CBI ಕೈಗೆತ್ತಿಕೊಂಡಿರುವ ಗಣಿ ಹಗರಣದ ತನಿಖೆಗೆ ಸಂಭಂದಿಸಿದಂತೆ ವರದಿ ನೀಡಲು SCನಿಂದಲೇ ನೇಮಿಸಲ್ಪಟ್ಟ CEC ತನ್ನ ವರದಿಯಲ್ಲಿ ಯಡ್ಡಿಯೂರಪ್ಪನವರಿಗೆ ಸಂಬಂಧಿಸಿದಂತೆ ತನಿಖೆಯಾಗಬೇಕು ಎಂದು SCಗೆ ಹೇಳಿದೆ.ಅದರ ವಿರುದ್ದ SCನಲ್ಲಿ ಯಡಿಯೂರಪ್ಪನವರು ಮೇಲ್ಮನವಿ ಸಲ್ಲಿಸಿದ್ದಾರೆ ಅದು ವಿಚಾರಣೆಯ ಹಂತದಲ್ಲಿದೆಯೇ ಹೊರತು ವರದಿಯಲ್ಲಿದೆ ಎಂದು ಅವರ ವಿರುದ್ದ ಯಾವ ತನಿಖೆಯೂ ಆರಂಭವಾಗಿಲ್ಲ.ದಯವಿಟ್ಟು ಈವರೆಗೆ ನಾನು ಬರೆದಿರುವುದನ್ನು ೪ಬಾರಿಯಾದರೂ ಓದಿ ಎಂದು ವಿನಂತಿಸಿಕೊಳ್ಳುತ್ತೇನೆ.
          ಈಗ ಗುಜರಾತ್‍ ನ ವಿಷಯಕ್ಕೆ ಬರೊಣ.ಗುಜರಾತ್ ಹತ್ಯಾಕಾಂಡಕ್ಕೆ ಸಂಬಂದಿಸಿದಂತೆ ಪ್ರಕರಣಗಳು ನಡೆಯುತ್ತಿರುವುದು MAGISTRATE COURTಗಳಲ್ಲಿಯೇ ಹೊರತು HIGH COURTನಲ್ಲಾಗಲಿ SCನಲ್ಲಾಗಲಿ ಅಲ್ಲ.ಹತ್ಯಾಕಾಂಡ ನಡೆದ ಎರಡರಿಂದ ಮೂರು ವರ್ಷಗಳಲ್ಲಿಯೇ ಸಾಕ್ಷ್ಯಾಧಾರಗಳ ಕೊರತೆಯ ನೆವವೊಡ್ಡಿ ಎಲ್ಲಾ ಪ್ರಕರಣಗಳನ್ನೂ ಮುಚ್ಚಿ ಹಾಕಲಾಗಿತ್ತು .ಅದನ್ನು SCನವರೆಗೂ ತೆರಳಿ ಮತ್ತೆ ಮರು ತನಿಖೆಗೆ
          ಒಳಪಡಿಸಲಾಗಿದೆ.ಈ ಮರು ತನಿಖೆಗೆ ಸಹಾಯವಾಗಲೆಂದೇ SC SITಯನ್ನು ನೇಮಿಸಿ ವರದಿ ಕೊಡಲು ಹೇಳಿದ್ದು.ಅದು ತನ್ನ ವರದಿಯನ್ನು
          SCಗೇ ಸಲ್ಲಿಸಿದೆಯಾದರೂ ಅದರ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವುದು ಈಗ ಪ್ರಕರಣಗಳು ನಡೆಯುತ್ತಿರುವ
          MAGISTRATE COURT ಹೊರತು HC or SC ಅಲ್ಲ.ಹಾಗಾಗಿಯೇ ಆ ವರದಿಯನ್ನು SC MAGISTRATE COURTಗೆ ಕಳುಹಿಸಿಕೊಟ್ಟಿದೆಯೇ ಹೊರತು ಅದು ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ.MAGISTRATE COURT ಕೂಡ ಈವರೆಗೆ ಆ ವರದಿಯ ಆಧಾರದ ಮೇಲೆ ಯಾವ ಕ್ರಮವನ್ನೂ ಕೈಗೊಂಡಿಲ್ಲ.ಅದು ತನ್ನ ತೀರ್ಮಾನವನ್ನು ಪ್ರಕಟಿಸಿದ ಮೇಲೆ ಅದನ್ನು ಪ್ರಶ್ನಿಸಿ ಮೋದಿ ಅಥವಾ ಅವರ ಎದುರು ಪಕ್ಷದವರು HC ನಂತರ SCನಲ್ಲಿಯೂ ಪ್ರಶ್ನಿಸಲು ಬಹುದು. ಈಗಾಗಲೇ ಉಳಿದ ೬೯ ಜನಗಳ ಜೊತೆ ದಾರುಣವಾಗಿ ಹಲ್ಲೆಗೊಳಗಾಗಿ ಜೀವಂತವಾಗಿ ಸುಡಲ್ಪಟ್ಟ ೭೦ ವಯೋಮಾನದ ಮಾಜೀ ಲೊಕಸಭಾ ಸದಸ್ಯ ಎಹ್ಸಾನ್ ಜಾಫ್ರಿಯ ಪತ್ನಿ ಜಾಕಿಯ ಜಾಪ್ರಿ ಅದರ ವಿರುದ್ದ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.ಹಾಗಾಗಿಯೆ ನಾನು ಹೇಳಿದ್ದು ಇದು ಅಂತ್ಯವಲ್ಲ ಒಂದು LONG DRAWN LEGAL BATTLEನ ಆರಂಭ ಅಂತ.
          ತಮಗೆ ಮೋದಿ ಒಬ್ಬ ಹೀರೋ ಅಥವಾ ದೇವರೇ ಇರಬಹುದು.ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಹಾಗೆಯೇ ಇರಬೇಕಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ.ತಮಗೆ ಸಾದ್ಯವಾದರೆ ಇತ್ತೀಚೆಗಷ್ಟೇ ಕರ್ನಾಟ[ಕ] HC ಶಂಕರ ಬಿದರಿ ಅವರ ಪ್ರಕರಣದಲ್ಲಿ ಮಾಡಿರುವ observationಗಳನ್ನು ಒಂದು ಹತ್ತು ಬಾರಿ ಓದಿ ಅರ್ಥೈಸಿಕೊಂಡು ಅದನ್ನು ಗುಜರಾತ್ ಪ್ರಕರಣ ಹಾಗೂ ಮೋದಿಗೆ ಅನ್ವಯಿಸಿ ನೋಡಿ.ಇಷ್ಟಕ್ಕೂ SIT ತನ್ನ ವರದಿಯಲ್ಲಿ ಮೋದಿಯ ಮೇಲೆ ತನಿಖೆ ನಡೆಸಲು ಬೇಕಾಗುವಷ್ಟು ಸಾಕ್ಷ್ಯಗಳ ಕೊರತೆಯಿದೆ ಎಂದಿದೆಯೋ ಅಥವ ನಿರಪರಾಧಿ ಎಂದಿದೆಯೋ ಎಂಬುದನ್ನು ಒಮ್ಮೆ ತಿಳಿದುಕೊಂಡು ಆನಂತರ ಪ್ರತಿಕ್ರಿಯಿಸಿ.ಎರಡಕ್ಕೂ ಇರುವ ಅಘಾದ ವತ್ಯಾಸ ನನ್ನಂತ ಅಲ್ಪಮತಿಗಳಿಗೆ ತಿಳಿಯುವುದಿಲ್ಲವಾದರೂ ತಮಗೆ ತಿಳಿಯುತ್ತದೆ ಎಂದು ಭಾವಿಸುತ್ತಾ ,
          ತಮಗೆ ನೋವುಂಟಾಗಿದ್ದರೆ ಕ್ಷಮೆಯಿರಲಿ.

          ಉತ್ತರ
          • ಏಪ್ರಿಲ್ 20 2012

            ದೇವ್ರು ವರ ಕೊಟ್ರು ಪೂಜಾರಿ ಕೊಡ್ಲಿಲ್ಲ್ ಅನ್ನೋ ಹಾಗೆ ಆದಾತು. ಸುಪ್ರೀಂ ಕೋರ್ಟ್ ತೀರ್ಮಾನ ಕೊಟ್ಟಿಲ್ಲ ದಿಟ, ಆದ್ರೆ ಅದೇ ಕೋರ್ಟ್ ಈ ಕೇಸನ್ನ ಕೆಳ ಕೊರ್ಟಿಗೆ ಕಳಿಸಿದ್ದು.
            ಪರಪರ ಕೆರೆದು ಕೊಂಡ್ರೆ ಮೈ ಗಾಯ ಆಗ್ಬೋದೇನೋ! ವಸಿ ಸಮಾಧಾನ ತಂದ್ಕಳ್ಳಿ ಸಿವಾ! ಕೆರ್ಕೋಳ್ಳೋದು ಮುಂದೆ ಇದ್ದೇ ಇದೆ.

            ಉತ್ತರ
          • Nowfal Beary
            ಮೇ 31 2012

            soooooooppppper

            ಉತ್ತರ
  18. Kumar
    ಏಪ್ರಿಲ್ 11 2012

    ಅಬ್ದುಲ್,
    ಮುಸಲ್ಮಾನರು ಬಹುಸಂಖ್ಯಾತರಾಗದ ಸ್ಥಳಗಳಲ್ಲಿ ಅವರೊಂದಿಗೆ ಸಂವಾದ, ಚರ್ಚೆ, ಇತ್ಯಾದಿಗಳು ಸಾಧ್ಯ,
    ಆದರೆ, ಮುಸಲ್ಮಾನರೇ ಬಹುಸಂಖ್ಯಾತರಿರುವಲ್ಲಿ, ಇವಾವುದೂ ಸಾಧ್ಯವಿಲ್ಲ.
    ಉದಾಹರಣೆಗೆ ಪಾಕಿಸ್ತಾನದ ಹಿಂದುಗಳ ಸ್ಥಿತಿ ನೋಡಿ; ಆಫ಼್ಘಾನಿಸ್ಥಾನದ ಬುದ್ಧನ ವಿಗ್ರಹಗಳಿಗಾದ ಗತಿ ನೋಡಿ; ಬಾಂಗ್ಲಾದೇಶದ ಹಿಂದುಗಳ ಕಥೆ ಏನು? ಇರಾನಿನಲ್ಲಿ ಉಳಿದ ಮತ-ಧರ್ಮಗಳಿಗೆ ಉಪಾಸನಾ ಸ್ವಾತಂತ್ರ್ಯ ಇರುವುದೇನು?
    ಇತ್ತೀಚೆಗೆ ಬಂದ ಪಾಕಿಸ್ತಾನದ ಹಿಂದು ಹುಡುಗಿಯೊಬ್ಬಳ ಕರುಣಾಜನಕ ಕಥೆಯನ್ನು ಈ ಕೊಂಡಿಯಲ್ಲಿ ಓದಿ: http://www.asianews.it/news-en/Hindu-girl-tells-Supreme-Court-she-would-rather-die-than-convert-to-Islam-24358.html

    ಇವೆಲ್ಲವೂ “ಇಸ್ಲಾಂ”ನ ಹೆಸರಿನಲ್ಲಿ ನಡೆಯುತ್ತಿದೆ ಎನ್ನುವುದನ್ನು ನೆನಪಿಡಿ.
    ನೀವು “ಇದು ನಿಜವಾದ ಇಸ್ಲಾಂ ಅಲ್ಲ” ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ, ಇದೇ ವಾಸ್ತವ ಮತ್ತು ಮುಸಲ್ಮಾನರು ಬಹುಸಂಖ್ಯಾತರಾಗಿರುವೆಡೆ ನಡೆಯುತ್ತಿರುವುದು.
    ಈ ರೀತಿ ಮುಸಲ್ಮಾನರಿಂದ ಚಿತ್ರಹಿಂಸೆಗೊಳಗಾದವರು, ಮುಂದೊಂದು ದಿನ ಅವರ ಮೇಲೆ ತಿರುಗಿಬಿದ್ದರೆ ಆಶ್ಚರ್ಯವೇನು?

    ಉತ್ತರ
  19. S,Hayavadana Upadhya
    ಏಪ್ರಿಲ್ 11 2012

    Dr.Bhaskara Mayya,Your response to Sabiha’s artcle is apt and to the point, Communal-mindedpeople are un-neccessarily attacking you.In the name of Humanism you have to tolerate this kind of attacks.Hindu,Muslim,Christion etc are only nomenclatures.No human-being should inflct violence on other human-being.All should live happily. We want to establish such a humane world.Aii secular-minded people have this noble goal before them.You are one among them.

    ಉತ್ತರ
  20. nitesh S Anchan
    ಏಪ್ರಿಲ್ 13 2012

    Dr.G.Bhaskar Maiya is a person who upholds the idea of peace and tolerance. His presentation and criticism is deep and relevant .Dr.G.Bhaskar Maiya has concluded his views in a unbiased manner. The communal violence during partition has killed many people belonging to different religion. First let us know that people created religion and religion dint create people. So, we all belong to humanity first and then to any other religion. If we start fighting in the name of religion, then this war will only end up killing humanity. Every religion has its own set of beliefs and philosophy. we can not force anyone to believe in our beliefs. Every religion has its own place and it should be respected. As Karl Marx said ” Religion is the sigh of the oppressed creature, it is the heart of the heartless society , it is the soul of the soulless condition. Religion is the opium of the people.” The base of every religion is PEACE , LOVE AND TOLERANCE. If some religious extremist do not intend to follow these principles, that does not mean that we should do the same. An eye for an eye only makes the world blind.

    ಉತ್ತರ

Leave a reply to Kumar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments