ಕನ್ನಡದಲ್ಲೂ ಮಾಹಿತಿ ಮುದ್ರಿತವಾಗಲಿ
– ರವಿ ಸಾವ್ಕರ್
ಇತ್ತೀಚಿಗೆ ಪೆಪ್ಸಿಕೋ ರವರ ಲೇಸ್ , ಮ್ಯಾಕ್ ಡೋನಾಲ್ದ್ ರವರ ಬರ್ಗರ್ ಗಳಲ್ಲಿ ಆರೋಗ್ಯಕ್ಕೆ ಹಾನಿಕಾರವಾಗುವಂಥಹ ಕೊಬ್ಬಿನಂಶ ಹೆಚ್ಚಾಗಿ ಇದೆ ಅನ್ನೋದರ ಬಗ್ಗೆ ಸುದ್ದಿ ಪ್ರಚಾರದಲ್ಲಿದೆ. ತಯಾರಕರು ತಮ್ಮ ಉತ್ಪಾದನೆಗಳಲ್ಲಿ ಯಾವ ಸಾಮಗ್ರಿ ಎಷ್ಟು ಪ್ರಮಾಣದಲ್ಲಿದೆ ಎಂದು ಗ್ರಾಹಕನಿಗೆ ಸರಿಯಾಗಿ ತಿಳಿಸುವುದು ಅವರ ಕರ್ತವ್ಯ. ಹಾಗೆಯೇ ಅದನ್ನು ಕೇಳಿ ಪಡೆಯುವುದೂ ಸಹ ಒಬ್ಬ ಗ್ರಾಹಕನಹಕ್ಕು ಆಗಿದೆ. Centre for Science and Environment (CSE) ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ.ಆದರೆ ಇಂಥಹ ಚರ್ಚೆಗಳಲ್ಲಿ ಈ ಮಾಹಿತಿಯನ್ನು ಜನರು ಅರಿಯಬೇಕಾದರೆ ಅದು ಜನರ ಭಾಷೆಯಲ್ಲಿ ಇರಬೇಕು ಅನ್ನೋ ಅತಿ ಮುಖ್ಯವಾದ ಅಂಶವನ್ನು ಮರೆತ ಹಾಗಿದೆ. ಒಂದು ವರದಿಯ ಪ್ರಕಾರ ನಮ್ಮ ದೇಶದಲ್ಲಿ ೭% ಜನರಿಗೆ ಮಾತ್ರ ಇಂಗ್ಲಿಷ್ ನಲ್ಲಿ ಇರುವುದನ್ನು ಅರ್ಥಮಾಡಿಕೊಳ್ಳಬಲ್ಲರು. ಮಿಕ್ಕ ೯೩% ಜನರಿಗೆ ಇಂಗ್ಲಿಷ್ ನಲ್ಲಿ ಮಾಹಿತಿ ತಲುಪಿಸಲಾಗದ ಪರಿಸ್ಥಿತಿ ಇರುವಾಗ , ಕೇವಲ ಇಂಗ್ಲಿಷ್ನಲ್ಲಿ ಮಾಹಿತಿಯನ್ನು ನಮೂದಿಸಿದರೆ ನಮ್ಮ ಜನರಿಗೆ ಹೇಗೆ ಅರ್ಥವಾದೀತು? ಒಬ್ಬ ಕನ್ನಡ ಮಾತ್ರ ಬರುವ ಗ್ರಾಹಕನೂ ಸಹ ಅಷ್ಟೇ ದುಡ್ಡು ಕೊಟ್ಟು ಖರೀದಿ ಮಾಡಿರುತ್ತಾನೆ. ಅವನಿಗೆ ಆ ಸಾಮಗ್ರಿಯ ಬಗೆಗೆ ಮಾಹಿತಿಯನ್ನು ತಿಳಿಸದಿರುವುದು ಯಾವ ನ್ಯಾಯ ?
ಗುಣಮಟ್ಟ,ಗರಿಷ್ಟ ಬೆಲೆ , ತೂಕಗಳ ಬಗೆಗೆ ಕನ್ನಡವೂ ಸೇರಿದಂತೆ ಆಯಾ ಪ್ರದೇಶದ ಸ್ಥಳೀಯ ಭಾಷೆಗಳಲ್ಲೂ ಸಹ ಮಾಹಿತಿಯನ್ನು ಮುದ್ರಿಸಬೇಕು. ಈ ಬಗೆಗೆ ಸರಿಯಾದ ಚರ್ಚೆಗಳಾಗಿ ಸ್ಥಳೀಯ ಭಾಷೆಯಲ್ಲಿ ಮಾಹಿತಿಯನ್ನು ತಿಳಿಸಲೇಬೇಕು ಅನ್ನುವಂಥಹ ನೀತಿ ನಿಯಮಗಳನ್ನು ರೂಪಿಸಬೇಕು.





+10 🙂