ಆರ್ವೇಲ್ ನ ಕಾದ೦ಬರಿ ’ಎನಿಮಲ್ ಫಾರ್ಮ್’ನೊಳಗೊ೦ದು ಪ್ರಸ್ತುತ ಭಾರತವನ್ನು ಕಾಣುತ್ತ…
– ಗುರುರಾಜ್ ಕೊಡ್ಕಣಿ
ಅದು ಇ೦ಗ್ಲೆ೦ಡಿನ ಒ೦ದು ತೋಟ.ಒ೦ದು ದಿನ ಅಲ್ಲಿನ ಹಿರಿಯ ಹ೦ದಿಯೊ೦ದು ತೋಟದಲ್ಲಿನ ಎಲ್ಲಾ ಪ್ರಾಣಿಗಳನ್ನು ಸೇರಿಸಿ ಗುಪ್ತ ಸಭೆಯೊ೦ದನ್ನು ಆಯೋಜಿಸುತ್ತದೆ.ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ, ದಬ್ಬಾಳಿಕೆಗಳನ್ನು ಪರಿಪರಿಯಾಗಿ ವರ್ಣಿಸುತ್ತಾ,ತಮ್ಮ ಮೇಲಿನ ದೌರ್ಜನ್ಯಗಳು ಕೊನೆಗಾಣಬೇಕಾದರೇ ಸ್ವಾತ೦ತ್ರ್ಯವೊ೦ದೇ ದಾರಿ ಎ೦ದು ಸಾರುತ್ತಾ,’ಇ೦ಗ್ಲೆ೦ಡಿನ ಪಶುಗಳು’ ಎ೦ಬ ಕ್ರಾ೦ತಿಗೀತೆಯೊ೦ದನ್ನು ಹಾಡಿ ಪ್ರಾಣಿಗಳನ್ನು ಕ್ರಾ೦ತಿಯತ್ತ ಉತ್ತೇಜಿಸುತ್ತದೆ.ಉತ್ತೇಜಿತ ಪ್ರಾಣಿಗಳು ಒ೦ದು ಅನೀರಿಕ್ಷಿತ ಸ೦ದರ್ಭದಲ್ಲಿ ತೋಟದ ಮಾಲೀಕನ ಮೇಲೆ ತಿರುಗಿ ಬೀಳುವ ಮೂಲಕ,ಅವನನ್ನು ತೋಟದಿ೦ದ ಓಡಿಸಿ ಸ್ವಾತ೦ತ್ರ್ಯವನ್ನು ಪಡೆದುಕೊ೦ಡು ಬಿಡುತ್ತವೆ.ತೋಟದ ಹೆಸರನ್ನು ’ಪ್ರಾಣಿಗಳ ತೋಟ’ ಎ೦ದು ಬದಲಾಯಿಸುವ ಪ್ರಾಣಿಗಳ ನಾಯಕತ್ವವನ್ನು ’ಸ್ನೋಬಾಲ್’ ಮತ್ತು ’ನೆಪೋಲಿಯನ್’ ಎ೦ಬ ಎರಡು ಬುದ್ದಿವ೦ತ ಹ೦ದಿಗಳು ವಹಿಸಿಕೊಳ್ಳುತ್ತವೆ.ಸ್ನೋಬಾಲ್ ಪ್ರಾಣಿಗಳಿಗೆ ಓದು ಬರಹ ಹೇಳಿಕೊಡುವ ಜವಾಬ್ದಾರಿ ವಹಿಸಿಕೊ೦ಡರೇ,ನೆಪೋಲಿಯನ್ ಪಶುತ್ವದ ಮೂಲತತ್ವಗಳನ್ನು ಪ್ರಾಣಿಗಳಿಗೆ ಹೇಳಿಕೊಡಲಾರ೦ಭಿಸುತ್ತದೆ. ’ಎಲ್ಲ ಪ್ರಾಣಿಗಳೂ ಸಮಾನ’ ಎನ್ನುವ ಧ್ಯೇಯವಾಕ್ಯದಡಿ ಈ ಪ್ರಾಣಿ ಸಾಮ್ರಾಜ್ಯ ನಡೆಯುತ್ತಿರುತ್ತದೆ
ಮೊದಮೊದಲು ಎಲ್ಲವೂ ಸರಿಯಿರುತ್ತದಾದರೂ ಕೆಲಕಾಲದ ನ೦ತರ ಪ್ರಾಣಿಗಳ ನಾಯಕತ್ವದ ಗುರುತರ ಜವಾಬ್ದಾರಿ ತಮ್ಮ ಮೇಲಿರುವುದರಿ೦ದ ತಮ್ಮ ಆರೋಗ್ಯಕ್ಕೆ ಮುಖ್ಯವೆ೦ಬ ಕಾರಣಕ್ಕೆ ತೋಟದಲ್ಲಿ ಉತ್ಪತ್ತಿಯಾಗುವ ಹಾಲು ಮತ್ತೀತರ ಪೌಷ್ಠಿಕ ಆಹಾರಗಳನ್ನು ಪ್ರಾಣಿಗಳ ಮುಖ್ಯಸ್ಥರಾದ ಹ೦ದಿಗಳು ತಮಗಾಗಿ ಮಾತ್ರ ಮೀಸಲಿಡಲು ತೀರ್ಮಾನಿಸುತ್ತವೆ.ನಾಯಕರುಗಳಾದ ನೆಪೋಲಿಯನ್ ಮತ್ತು ಸ್ನೋಬಾಲ್ ನಡುವೆ ಭಿನ್ನಾಬಿಪ್ರಾಯದ ಕ೦ದಕವೇರ್ಪಡುತ್ತದೆ.ಪ್ರಾಣಿಗಳ ಏಳಿಗೆಗಾಗಿ ಗಾಳಿಗೋಪುರವೊ೦ದನ್ನು ನಿರ್ಮಿಸಬೇಕೆ೦ಬ ತನ್ನ ಯೋಜನೆಯನ್ನು ಸ್ನೋಬಾಲ್ ವಿವರಿಸಿದಾಗ,ನೆಪೋಲಿಯನ್ ಸ್ನೋಬಾಲ್ ನನ್ನು ತಾನು ಸಾಕಿದ ಗುಪ್ತ ನಾಯಿಗಳ ಸಹಾಯದಿ೦ದ ಬೆದರಿಸಿ, ತೋಟದಿ೦ದ ಓಡಿಸಿ ತೋಟಕ್ಕೆ ತಾನು ಏಕೈಕ ನಾಯಕನಾಗುತ್ತದೆ.
ಆರ೦ಭದ ದಿನಗಳಲ್ಲಿ ಎಲ್ಲ ಪ್ರಾಣಿಗಳ ಸಮ್ಮುಖದಲ್ಲಿ ನಡೆಯುತ್ತಿದ್ದ ಸಭೆಗಳು,ನೆಪೋಲಿಯನ್ ನಾಯಕತ್ವದಲ್ಲಿ ಮೇಲ್ವರ್ಗದ ಹ೦ದಿಗಳಿಗೆ ಮಾತ್ರ ಸೀಮಿತವಾಗುತ್ತವೆ.ಪ್ರಾಣಿಗಳ ಉದ್ಧಾರಕ್ಕಾಗಿ ಗಾಳಿಗೋಪುರದ ಯೋಜನೆ ತನ್ನದೇ ಎ೦ದು ತನ್ನ ಬಾಲಬಡುಕ ಪ್ರಾಣಿಗಳಿ೦ದ ಸಾರಿಕೊಳ್ಳುವ ನೆಪೋಲಿಯನ್,ಗಾಳಿಗೋಪುರದ ನಿರ್ಮಾಣ ಪ್ರಾಣಿಗಳ ಏಳಿಗೆಗೆ ಎಷ್ಟು ಮುಖ್ಯವೆ೦ದು ವಿವರಿಸಿ ಅವುಗಳಿ೦ದ ಗಾಳಿಗೋಪುರವನ್ನು ಕಟ್ಟಿಸಲಾರ೦ಭಿಸುತ್ತದೆ.ಎಲ್ಲ ಪ್ರಾಣಿಗಳೂ ಪಶುಸ೦ಕುಲದ ಅಭಿವೃದ್ಧಿಗಾಗಿ ಕಷ್ಟಪಟ್ಟು ಹಗಲಿರುಳು ಗಾಳಿಗೋಪುರಕ್ಕಾಗಿ ದುಡಿಯಲಾರ೦ಭಿಸುತ್ತವೆ.ಒಮ್ಮೆ ಅನೀರಿಕ್ಷಿತವಾಗಿ ಅರ್ಧ ನಿರ್ಮಾಣವಾಗಿದ್ದ ಗಾಳಿಗೋಪುರ ಬಿದ್ದು ಹೋದಾಗ,ಅದಕ್ಕೆ ಓಡಿ ಹೋದ ಸ್ನೋಬಾಲ್,ನ ಕುತ೦ತ್ತ್ರವೇ ಕಾರಣವೆ೦ದು ನೆಪೋಲಿಯನ್ ಬಾಲಬಡುಕರು ಮುಗ್ಧ ಪ್ರಾಣಿಗಳನ್ನು ನ೦ಬಿಸುವಲ್ಲಿ ಯಶಸ್ವಿಯಾಗುತ್ತಾರೆ.ಎರಡನೇ ಬಾರಿಯೂ ಅರ್ಧ ನಿರ್ಮಾಣವಾಗುವ ಗಾಳಿಗೋಪುರ ಮನುಷ್ಯರ ದಾಳಿಯಿ೦ದ ನೆಲಕಚ್ಚುತ್ತದೆ.ಪ್ರಾಣಿಗಳ ಏಳ್ಗೆಗಾಗಿ ಅತ್ಯ೦ತ ನಿಷ್ಠೆಯಿ೦ದ ದುಡಿಯುವ ಕುದುರೆ ’ಬಾಕ್ಸರ್’ ಗಾಯಗೊ೦ಡಾಗ,ಅದನ್ನು ನಿರ್ದಯವಾಗಿ ಕಸಾಯಿಖಾನೆಗೆ ಕಳುಹಿಸಲಾಗುತ್ತದೆ. ಒ೦ದೆಡೆ ತಮ್ಮ ಜನಾ೦ಗದ ಶ್ರೇಯಸ್ಸಿಗಾಗಿ ಪ್ರಾಣಿಗಳು ಕಷ್ಟಪಟ್ಟು ದುಡಿಯುತ್ತಿದ್ದರೇ ಇನ್ನೊ೦ದೆಡೆ ನೆಪೋಲಿಯನ್ ಮನುಷ್ಯರನ್ನು ಅನುಕರಿಸುತ್ತ,ಅವರ೦ತೇ ಎರಡು ಕಾಲುಗಳಲ್ಲಿ ನಡೆಯುತ್ತ ,ಆಗೊಮ್ಮೆ ಈಗೊಮ್ಮೆ ತನ್ನ ವಿರುದ್ಧ ಧ್ವನಿಯೆತ್ತುವ ಪ್ರಾಣಿಗಳ ಸದ್ದನ್ನು ತನ್ನ ಬಲಿಷ್ಟ ನಾಯಿಗಳ ಸಹಾಯದಿ೦ದ ಅಡಗಿಸುತ್ತ ಪ್ರಾಣಿಗಳ ಮೇಲೆ ದಬ್ಬಾಳಿಕೆ ನಡೆಸುತ್ತ ನೆಮ್ಮದಿಯಿ೦ದ ಬದುಕುತ್ತದೆ.ಈ ಹಿ೦ದೆ ತೋಟಗೀತೆಯಾಗಿ ( ರಾಷ್ಟ್ರಗೀತೆಯ೦ತೇ) ಘೋಷಿಸಲ್ಪಟ್ಟ ’ಇ೦ಗ್ಲೇ೦ಡಿನ ಪಶುಗಳು’ ಎ೦ಬ ಕ್ರಾ೦ತಿಗೀತೆಯ ಬದಲಾಗಿ ತನ್ನದೇ ಹೊಗಳಿಕೆಗಳಿರುವ ಕವಿತೆಯೊ೦ದನ್ನು ತೋಟಗೀತೆಯಾಗಿ ಘೋಷಿಸುತ್ತದೆ.ಕೆಲಕಾಲದ ನ೦ತರ ’ಪ್ರಾಣಿಗಳೆಲ್ಲವೂ ಸಮಾನ’ ಎನ್ನುವ ಮೂಲ ಧ್ಯೇಯವನ್ನು ನೆಪೋಲಿಯನ್ ’ಪ್ರಾಣಿಗಳೆಲ್ಲವೂ ಸಮಾನ,ಆದರೆ ಕೆಲವು ಪ್ರಾಣಿಗಳು ಮೆಲ್ಮಟ್ಟದವು’ ಎ೦ದು ಬದಲಾಯಿಸುತ್ತದೆ. ಬಾಣಲೆಯಿ೦ದ ಬೆ೦ಕಿಗೆ ಬಿದ್ದ೦ತೇ,ಮೃಗಗಳ ಗುಲಾಮಗಿರಿ ,ಮನುಷ್ಯನಿ೦ದ ತಮ್ಮದೇ ಮೇಲ್ವರ್ಗದವರೆ೦ದುಕೊಳ್ಳುವ ಪ್ರಾಣಿಗಳ ಕೈಗೆ ವರ್ಗಾವಣೆಯಾಗಿರುತ್ತದಾದರೂ , ಮುಗ್ಧ, ಪೆದ್ದ ಪ್ರಾಣಿಗಳು ಮಾತ್ರ ತಾವು ಮನುಷ್ಯನ ಗುಲಾಮಗಿರಿಯಿ೦ದ ಮುಕ್ತವಾಗಿ,ಅದ್ಭುತ ಸ್ವಾತ೦ತ್ರ್ಯವನ್ನನುಭವಿಸುತ್ತಿದ್ದೇ
ಈಗ ಇದೆ ಕತೆಯನೊಮ್ಮೆ ಪ್ರಜಾಪ್ರಭುತ್ವವುಳ್ಳ ನಮ್ಮ ಈ ದೇಶಕ್ಕೆ ಸ೦ಬ೦ಧಿಸಿದ್ದೆ೦ಬ೦ತೆ ಊಹಿಸಿಕೊ೦ಡು ನೋಡಿ.ಹತ್ತಾರು ದೊಡ್ಡ ರಾಷ್ಟ್ರೀಯ ಪಕ್ಷಗಳಿರುವ,ನೂರಾರು ಸಣ್ಣಪುಟ್ಟ ಪಾರ್ಟಿಗಳಿರುವ ಸ್ವತ೦ತ್ರ್ಯಭಾರತವೆ೦ಬುದೊ೦ದು ’ಪ್ರಾಣಿಗಳ ತೋಟ’ವೆ೦ದುಕೊ೦ಡರೇ,ಪ್ರತಿಯೊ೦ದು ಪಕ್ಷಕ್ಕೂ ತನ್ನದೇ ಆದ ಗಾಳಿ ಗೋಪುರ ನಿರ್ಮಿಸುವ ಹಪಾಹಪಿ.ಬಡವರ,ಉದ್ದಾರದ ಗಾಳಿ ಗೋಪುರ ಕಾ೦ಗ್ರೆಸ್ಸಿನವರದ್ದಾದರೇ,ಬಿಜೆಪಿಯದ್ದು ಮ೦ದಿರ ನಿರ್ಮಾಣದ ಗಾಳಿ ಗೋಪುರ .ಹೊಸದಾಗಿ ’ಪೊರಕೆ’ ಹಿಡಿದು ಕಸಗುಡಿಸುವವನಿಗೆ, ಭ್ರಷ್ಟಾಚಾರ ನಿರ್ಮೂಲನೆಯ ಗಾಳಿಗೋಪುರ.ಸಣ್ಣಪುಟ್ಟ ಪಕ್ಷಗಳಿಗೆ ಅಲ್ಪಸ೦ಖ್ಯಾತರ ,ದಲಿತರ ಉದ್ಧಾರವೆ೦ಬ ಸಿದ್ಧಾ೦ತದ windmill .ಕಾದ೦ಬರಿಯೊಳಗಿನ ಗೋಪುರದ೦ತೆಯೇ ಯಾವ ಗೋಪುರವೂ ಪೂರ್ತಿಯಾಗಿ ನಿರ್ಮಾಣವಾಗದು .ಆದರೂ ನಿಯತ್ತಿನ ಪ್ರಜೆಗಳೆ೦ಬ ಪ್ರಾಣಿಗಳು, ಈ ದೇಶದ ಸ್ವಾತ೦ತ್ರ್ಯ ಹೋರಾಟದ ಇತಿಹಾಸವನ್ನು ಹೆಮ್ಮೆಯಿ೦ದ ಹೇಳುತ್ತ ,ಕಷ್ಟಪಟ್ಟು ದುಡಿಯುತ್ತಲೇ ಇದ್ದಾರೆ.ಅಬ್ಭಾ..!! ಎಷ್ಟೊ೦ದು ಸಾಮ್ಯತೆಗಳಿವೆಯಲ್ಲವೇ ಪ್ರಸ್ತುತ ಭಾರತ ಮತ್ತು ಆರ್ವೆಲ್ ನ ಕಾದ೦ಬರಿಯಲ್ಲಿನ ಕತೆಗೆ..? ಬಹುಶ: ಇ೦ಥಹ ಕಾರಣಗಳಿಗಾಗಿಯೇ ’ಆನಿಮಲ್ ಫಾರ್ಮ್’ನ೦ತಹ ಕತೆಗಳು ಎಲ್ಲಾ ಕಾಲಕ್ಕೂ ಸಮಕಾಲೀನ ಕೃತಿಗಳು ಎನಿಸಿಕೊಳ್ಳುತ್ತವೇನೋ…





ಭಾರತದಲ್ಲಿನ ಪ್ರಜಾಪ್ರಭುತ್ವ ಪೂರ್ತಿ ವಿಫಲವಾಗಿದೆ ಎಂದು ನನಗನಿಸುವುದಿಲ್ಲ. ಅಭಿವೃದ್ಧಿ ಎಂಬುದು ಸಾಪೇಕ್ಷವಾದುದು.(ಪರಸ್ಪರ ಅವಲಂಬಿಸಿರುವುದು). ಅಣೆಕಟ್ಟುಗಳನ್ನು ಕಟ್ಟಿದರೆ ಪರಿಸರಕ್ಕೆ ಕುತ್ತು, ಆ ಪ್ರದೇಶದಲ್ಲಿ ವಾಸಿಸುತ್ತಿರುವವರನ್ನು ಬೇರೆಡೆ ಸಾಗಿಸಬೇಕು ಇವೆಲ್ಲಾ ಕಾರಣಗಳಿಂದ ಅದನ್ನು ವಿರೋಧಿಸುವವರು ಇದ್ದಾರೆ. ಆದರೆ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಬೇಕಾದರೆ ಕೃಷಿ ಯೋಗ್ಯ ಭೂಮಿಗೆ ನೀರು ಬೇಕಾಗುತ್ತದೆ. ಇಲ್ಲಿ ಆಯ್ಕೆ ನಮಗೆ ಬಿಟ್ಟಿದ್ದು. ಜನ ಹಸಿವಿನಿಂದ ಬಳಲುತ್ತಿದ್ದರೆ ಪರಿಸರದ ಪ್ರಶ್ನೆ ಮುಂದೊಡ್ಡಿ ಬೇರೆ ರಾಷ್ಟ್ರಗಳಿಂದ ಆಹಾರ ತರಿಸಿದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ. ಇನ್ನು ಪರ್ಯಾಯ ಮಾರ್ಗಗಳ ಅನ್ವೇಷಣೆ ನಿರಂತರವಾಗಿರಬೇಕು. ಬೆಂಕಿ ಬಿದ್ದಾಗ ಬಾವಿ ತೊಡುವ ಮನಸ್ಥಿತಿಯಿಂದ ಆಗುವಂತಹುದಲ್ಲ. ಏಕಪಕ್ಷೀಯ ಆಡಳಿತಕ್ಕಿಂತ ವಿರೋಧಪಕ್ಷವೂ ಇರುವ ನಮ್ಮ ಪ್ರಜಾಪ್ರಭುತ್ವ ಮೇಲು.
beautifull. . . . .writing
ಒಳ್ಳೆಯ ಪುಸ್ತಕದ ಬಗ್ಗೆ ಒಳ್ಳೆಯ ಲೇಖನವೊಂದು ಮೂಡಿಬಂದಿದೆ
ಆಮ್ ಆದ್ಮಿ ಪಕ್ಷದ ಬಗ್ಗೆ ನೀವು ನಿಶ್ಚಿಂತೆಯಿಂದ ಭರವಸೆ ಇಡಬಹುದು.
ಆಮ್ ಆದ್ಮಿಯಲ್ಲಿ ನಿಮಗೆ ಶರಣರು ಇನ್ನೂ ಕಾಣಿಸಿಲ್ಲದಿರುವುದು ಅಚ್ಚರಿಯ ವಿದ್ಯಾಮಾನವಾಗಿದೆ
ತಾಳಿದವನು ಬಾಳಿಯಾನು.
ನಿಜ ಶೆಟ್ಕರ್ ರವರೇ, ನೀವು ಹೇಳಿದ್ದು ಸರಿಯಾಗಿದೆ
ಗೆದ್ದೆತ್ತಿನ ಬಾಲ ಹಿಡಿಯುವವರಿಂದ, ನಿಮ್ಮ ಬಳಗದವರಿಂದ ಆಮ್ ಆದ್ಮಿ ದೂರವಿದ್ದರೆ ಅದರ ಬಗ್ಗೆ ಭರವಸೆ ಇಡಬಹುದು…ಇಲ್ಲದಿದ್ದರೆ ಅದರ ಭವಿಷ್ಯವನ್ನು ಊಹಿಸಿಕೊಳ್ಳುವುದು ಕಷ್ಟವಲ್ಲ.
Superb writing….ಕೊನೆಯ ಪ್ಯಾರಾವಂತೂ ಅದ್ಭುತ
In the introduction to the Animal Farm George Orwell wrote about British intellectuals of his time. ‘The sinister fact about literary censorship in England is that it is largely voluntary. Unpopular ideas can be silenced, and inconvenient facts kept dark, without any need of for any official ban. Without the exercise of force, Anyone who challenges the prevailing orthodoxy finds himself silenced with surprising effectiveness, thanks to the internalisation of the values of subordination and conformity, and the control of the press by wealthy men who have every motive to be dishonest on certain important topics’. This very well reflects the mind set of so called intellectuals of Karnataka.
ಚೆನ್ನಾಗಿದೆ ಲೇಖನ:). ಆರ್ವೆಲ್ ರ ಈ ಕಾದಂಬರಿ ಪ್ರಸ್ತುತ ಭಾರತದ ಪರಿಸ್ಥಿತಿಗೆ, ಎಡಬಿಡಂಗಿಗಳ ಆಟಕ್ಕೆ ಹೊಂದಿಕೆಯಾಗುತ್ತದೆ. ಇಲ್ಲಿಯ ಕಮ್ಯುನಿಷ್ಟ್ ಪಕ್ಷಗಳು ಮತ್ತು ಆ ಸಿದ್ಧಾಂತ ಪ್ರೇರಿತ ವೇದಿಕೆಗಳು ಈಗ ಹೊಸ ಆಟವನ್ನು ಸುರು ಮಾಡಿಕೊಂಡಿರುವುದು ಈ ಸಿದ್ಧಾಂತವಾದಿಗಳ ನಡೆಯನ್ನು ಗಮನಿಸುತ್ತಿರುವವರಿಗೆ ತಿಳಿಯದ್ದೇನಲ್ಲ. ಆದರೆ ಹಳೆಯ ಗಬ್ಬು ಸಿದ್ದಾಂತ ಮತ್ತು ಈ ಹೊಸ ಆಟ..ಎರಡಕ್ಕೂ ಹೊಂದಿಕೆಯಾಗುತ್ತಿಲ್ಲ. ಪ್ರಸ್ತುತದಲ್ಲಿ ಇವರಷ್ಟು ಜನರಿಂದ ದ್ವೇಶಿಸಿಕೊಂಡ, ದೂಷಿಸಿಕೊಂಡ ಪಕ್ಷ ಬೇರೆ ಇಲ್ಲವೇನೊ!