ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ
– ಕ.ವೆಂ.ನಾಗರಾಜ್
ಟಿಪ್ಪು ಸುಲ್ತಾನನ ಪರವಾಗಿ ಮತ್ತು ವಿರುದ್ಧವಾಗಿ ಬರುತ್ತಿರುವ ಲೇಖನಗಳು ಮತ್ತು ಹೇಳಿಕೆಗಳನ್ನು ಗಮನಿಸಿದಾಗ ಹೆಚ್ಚಿನವು ಉತ್ಪ್ರೇಕ್ಷೆಯಿಂದ ಕೂಡಿದುದೆಂದು ಮೇಲ್ನೋಟಕ್ಕೆ ಕಾಣುತ್ತವೆ. ಇದರಲ್ಲಿ ಜಾತಿ, ಧರ್ಮಗಳೂ ಥಳಕು ಹಾಕಿಕೊಂಡು ವಿಷಯವನ್ನು ಜಟಿಲಗೊಳಿಸುತ್ತವೆ. ಟಿಪ್ಪು ಪರಮತ ಸಹಿಷ್ಣುವೋ ಅಲ್ಲವೋ, ಕ್ರೂರಿಯೋ ಅಲ್ಲವೋ ಎಂಬ ಬಗ್ಗೆ ಪ್ರಖರವಾದ ವಾದ, ಪ್ರತಿವಾದಗಳನ್ನು ಕಂಡಿದ್ದೇವೆ. ಟಿಪ್ಪು ಹೆಸರಿನಲ್ಲಿ ಮುಸ್ಲಿಮ್ ವಿಶ್ವವಿದ್ಯಾಲಯದ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನ ಇಂತಹ ಚರ್ಚೆಗಳಿಗೆ ಮತ್ತಷ್ಟು ಒತ್ತು ಕೊಟ್ಟಿದೆ. ಇತಿಹಾಸವನ್ನು ಇತಿಹಾಸವಾಗಿಯೇ ಆಧ್ಯಯನ ಮಾಡಬೇಕು, ಅದಕ್ಕೆ ಜಾತ್ಯಾತೀತತೆಯ ಲೇಪ ಕೊಡುವ ಸಲುವಾಗಿ ವಾಸ್ತವತೆಯನ್ನು ಮರೆಮಾಚುವ ಕೆಲಸ ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ ಎಂಬುದನ್ನು ಎಷ್ಟು ಬೇಗ ಮನಗಾಣುತ್ತೇವೋ ಅಷ್ಟೂ ದೇಶಕ್ಕೆ ಒಳ್ಳೆಯದು. ಈಗಾಗಲೇ ಬಹಳಷ್ಟು ಚರ್ಚಿತವಾಗಿರುವ ವಿಷಯಗಳನ್ನು ಪುನಃ ಇಲ್ಲಿ ಪ್ರಸ್ತಾಪಿಸಹೋಗದೆ ಟಿಪ್ಪುವಿನ ಕಾಲದಲ್ಲಿ ಬಂದಿಗಳಾಗಿದ್ದವರ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಪ್ರಸ್ತಾಪಿಸಿ, ಟಿಪ್ಪುವಿನ ವಿರುದ್ಧ ಸೆಟೆದು ನಿಂತಿದ್ದ ಒಬ್ಬ ಧೀರ ಕನ್ನಡಿಗನ ಬಗ್ಗೆ ನನಗೆ ತಿಳಿದಿರುವ ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ.
ಮೂಲ ವಿಷಯಕ್ಕೆ ಬರುವ ಮುನ್ನ ಮೊದಲೇ ಹೇಳಿದ್ದಂತೆ ಹೈದರ್ ಮತ್ತು ಟಿಪ್ಪೂರ ಕಾಲದಲ್ಲಿ ಬಂದಿಗಳ ಸ್ಥಿತಿಯನ್ನು ತಿಳಿಸುವ ಸಲುವಾಗಿ ಜೇಮ್ಸ್ ಸ್ಕರಿ ಎಂಬ ಬ್ರಿಟಿಷ್ ಕೈದಿಯೊಬ್ಬನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ. ಜೇಮ್ಸ್ ಸ್ಕರಿಯ ತಂದೆ ಒಬ್ಬ ಬ್ರಿಟಿಷ್ ಸೈನಿಕನಾಗಿದ್ದು, ಸ್ಕರಿ ಚಿಕ್ಕಂದಿನಲ್ಲೇ ಗನ್ ಪೌಡರ್ ಸಾಗಾಟದ ಕೆಲಸ ಮಾಡುತ್ತಿದ್ದು ಅದಕ್ಕಾಗಿ ಸಮುದ್ರಯಾನ ಮಾಡಬೇಕಾಗುತ್ತಿತ್ತು. ಹೀಗೆ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ತನ್ನ ೧೪ನೆಯ ವಯಸ್ಸಿನಲ್ಲೇ ಸೈಂಟ್ ಹೆಲೆನಾ ಎಂಬ ದ್ವೀಪದಲ್ಲಿ ಫ್ರೆಂಚರಿಂದ ಹಡಗಿನಲ್ಲಿದ್ದ ಇತರ ೧೪ ಸಿಬ್ಬಂದಿಗಳೊಂದಿಗೆ ಕ್ರಿ.ಶ. ೧೭೮೦ರಲ್ಲಿ ಬಂಧಿಸಲ್ಪಟ್ಟ. ಈ ೧೫ ಜನರನ್ನು ಫ್ರೆಂಚ್ ಅಡ್ಮಿರಲ್ ಸಫ್ರೆನ್ ಹೈದರಾಲಿಯ ವಶಕ್ಕೆ ಒಪ್ಪಿಸಿದ. ಇವರುಗಳನ್ನು ಮೊದಲು ಬೆಂಗಳೂರಿನ ಜೈಲಿಗೆ, ನಂತರ ಶ್ರೀರಂಗಪಟ್ಟಣದ ಸೆರೆಮನೆಗೆ ಸಾಗಿಸಲಾಯಿತು. ಸೆರೆಯಾದ ಕೂಡಲೇ ಕಾಲುಗಳಿಗೆ ಬಲವಾದ ಕಬ್ಬಿಣದ ಸರಪಳಿಗಳನ್ನು ಹಾಕಿ, ಕೈಗಳಿಗೂ ಕಬ್ಬಿಣದ ಕೋಳಗಳನ್ನು ಹಾಕಿ ಸೆರೆಮನೆ ತಲುಪುವವರಗೆ ಹಲವಾರು ದಿನಗಳ ಕಾಲ ನಡೆಸಿಕೊಂಡೇ ಹೋಗಲಾಗಿತ್ತು. ಟಿಪ್ಪು ಇವರೆಲ್ಲರನ್ನೂ ಬಲವಂತವಾಗಿ ಇಸ್ಲಾಮ್ ಮತಕ್ಕೆ ಮತಾಂತರಿಸಿ, ಜೇಮ್ಸ್ ಸ್ಕರಿಗೆ ಮುಸ್ಲಿಮ್ ಹೆಸರಾದ ಶಂಶೇರ್ ಖಾನ್ ಎಂದು ಹೊಸ ಹೆಸರು ಕೊಟ್ಟು ಬಲವಂತವಾಗಿ ತನ್ನ ಸೇನೆಯಲ್ಲಿ ಕೆಲಸ ಮಾಡಿಸಿದ್ದ.
ಟಿಪ್ಪು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸೋತಾಗ ಆದ ಒಪ್ಪಂದದಂತೆ ೧೭೯೨ರಲ್ಲಿ ಇವನ ಬಿಡುಗಡೆಯಾಯಿತು. ಬಿಡುಗಡೆಯ ನಂತರದಲ್ಲಿ ಇವನ ಸ್ಥಿತಿ ಹೇಗಿತ್ತೆಂದರೆ ಆತನಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳುವುದೇ ಕಷ್ಟವಾಗಿತ್ತಂತೆ. ಚಾಕು, ಫೋರ್ಕುಗಳನ್ನು ಉಪಯೋಗಿಸುವುದೇ ಮರೆತುಹೋಗಿತ್ತಂತೆ. ಈತನ ಬಿಳಿಯ ಚರ್ಮ ಕಪ್ಪಾಗಿ ನೀಗ್ರೋನಂತೆ ಕಾಣಿಸುತ್ತಿದ್ದ ಇವನ ರೂಪ ಇವನು ಪಟ್ಟ ಪಾಡನ್ನು ಎತ್ತಿ ತೋರಿಸುತ್ತಿತ್ತು. ಟಿಪ್ಪುವಿನ ಸೆರೆಮನೆಗಳಲ್ಲಿ ಬಂದಿಗಳನ್ನು ಕೋಳಗಳಲ್ಲಿ ಬಂಧಿಸಿಡುತ್ತಿದ್ದರು. ಕತ್ತಿನವರೆವಿಗೂ ಬರುವಂತೆ ನೀರು ತುಂಬಿಸಿದ ಸ್ಥಳಗಳಲ್ಲಿಟ್ಟು ಹಿಂಸಿಸುತ್ತಿದ್ದರು. ಕೈದಿಗಳಿಗೆ ನೀಡುತ್ತಿದ್ದ ಆಹಾರದ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆ ಹೇಳದಿರುವುದೇ ಸರಿ. ಬಂಧಿಸಲ್ಪಟ್ಟರೂ ಸೆರೆಮನೆಯಲ್ಲಿರಿಸುವಷ್ಟು ಗುರುತರ ಅಪರಾಧ ಮಾಡದವರ ಕಿವಿ, ಮೂಗು ಅಥವ ತುಟಿಗಳನ್ನು ಕತ್ತರಿಸಿ ಬಿಟ್ಟುಬಿಡುತ್ತಿದ್ದರು. ಕೈದಿಗಳನ್ನು ಮತ್ತು ಅಪರಾಧಿಗಳನ್ನು ನಂದಿ ಬೆಟ್ಟದಿಂದ ಪ್ರಪಾತಕ್ಕೆ ತಳ್ಳಿ ಸಾಯಿಸುತ್ತಿದ್ದ ಸ್ಥಳಕ್ಕೆ ‘ಟಿಪ್ಪೂ ಡ್ರಾಪ್’ ಎಂದು ಹೆಸರಿದ್ದು, ಆ ಹೆಸರು ಇಂದಿಗೂ ಉಳಿದಿರುವುದು ಟಿಪ್ಪು ದಯಾಮಯಿ ಎಂದು ಹೇಳುವವರಿಗೆ ಅರಗಿಸಿಕೊಳ್ಳುವುದು ಕಷ್ಟವಾದೀತು.
ಈಗ ಪ್ರಧಾನ ವಿಷಯಕ್ಕೆ ಬರುತ್ತೇನೆ. ಆತ ಕಟ್ಟುಮಸ್ತಾದ ಕನ್ನಡಿಗ ತರುಣ. ಹೆಸರು ದೊಂಢಿಯವಾಘ. ಹೆಸರಿಗೆ ತಕ್ಕಂತೆ ಹುಲಿಯಂತೆ ಧೈರ್ಯಶಾಲಿ. ಹಿಂದಿನ ಶಿವಮೊಗ್ಗ ಜಿಲ್ಲೆಗೆ ಸೇರಿದ್ದ, ಪ್ರಸ್ತುತ ದಾವಣಗೆರೆ ಜಿಲ್ಲೆಗೆ ಸೇರಿರುವ ಚನ್ನಗಿರಿಯಲ್ಲಿ ಹುಟ್ಟಿದವನು. ಹೈದರಾಲಿಯಿಂದ ಕೆಳದಿ ಸಾಮ್ರಾಜ್ಯ ಪತನ ಕಂಡಿದ್ದ ಸಮಯವದು. ತರುಣನಾದಾಗ ಕೆಳದಿ ಅರಸೊತ್ತಿಗೆ ಇದ್ದಿದ್ದರೆ ಆತ ಕೆಳದಿಯ ಸೈನ್ಯದಲ್ಲಿ ಒಬ್ಬ ಪ್ರಚಂಡನೆನಿಸುತ್ತಿದ್ದ. ಆದರೆ ಚನ್ನಗಿರಿ ಟಿಪ್ಪುವಿನ ಆಳ್ವಿಕೆಗೆ ಸೇರಿದ್ದರಿಂದ ಸಹಜವಾಗಿ ಆತ ಕ್ರಿ.ಶ. ೧೭೯೪ರಲ್ಲಿ ಟಿಪ್ಪುವಿನ ಸೈನ್ಯಕ್ಕೆ ಸೈನಿಕನಾಗಿ ಸೇರಿದ. ಆತನ ಪರಾಕ್ರಮ, ಶೌರ್ಯಗಳನ್ನು ಗಮನಿಸಿದ ಟಿಪ್ಪು ಅವನ ಮನವೊಲಿಸಿ ಇಸ್ಲಾಮಿಗೆ ಮತಾಂತರಿಸಲು ಪ್ರಯತ್ನಿಸಿದ. ಬಡ್ತಿ ನೀಡಿ, ಸಂಬಳ ಹೆಚ್ಚಿಸುವ ಪ್ರಲೋಭನೆ ಒಡ್ಡಿದರೂ ಮತಾಂತರಕ್ಕೆ ಒಪ್ಪದ ದೊಂಢಿಯನನ್ನು ಬಲವಂತವಾಗಿ ಮುಸ್ಲಿಮನನ್ನಾಗಿ ಮತಾಂತರಿಸಲಾಯಿತು. ಅದನ್ನೂ ಧಿಕ್ಕರಿಸುವ ಧಾರ್ಷ್ಟ್ಯ ತೋರಿಸಿದ್ದಕ್ಕೆ ಪ್ರತಿಯಾಗಿ ಟಿಪ್ಪು ಅವನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿರಿಸಿದ. ಈ ರೀತಿ ಬಂಧಿಯಾಗಿದ್ದ ದೊಂಢಿಯ ತಪ್ಪಿಸಿಕೊಳ್ಳಲು ಅವಕಾಶವಾಗಲೇ ಇಲ್ಲ. ಅವನನ್ನು ಗಲ್ಲಿಗೇರಿಸಲು ಆದೇಶವಾಗಿದ್ದರೂ, ಕಾರಣಾಂತರದಿಂದ ಶಿಕ್ಷೆಯನ್ನು ಜಾರಿಗೊಳಿಸುವುದನ್ನು ಮುಂದೂಡಲಾಗಿತ್ತೆನ್ನಲಾಗಿದೆ. ಆತನಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದ್ದು ಐದು ವರ್ಷಗಳ ನಂತರದಲ್ಲಿ, ಟಿಪ್ಪು ಬ್ರಿಟಿಷರಿಂದ ಯುದ್ಧದಲ್ಲಿ ಹತನಾದ ನಂತರವೇ.
ಶ್ರೀರಂಗಪಟ್ಟಣದ ಸೆರೆಮನೆಯಿಂದ ಹೊರಬಂದ ದೊಂಢಿಯ ಬಿದನೂರಿಗೆ ಬಂದು ಮೊದಲು ಮಾಡಿದ ಕೆಲಸವೆಂದರೆ ಸ್ವಾಭಿಮಾನಿ ತರುಣರನ್ನು ಸಂಘಟಿಸಿ ತನ್ನದೇ ಆದ ಒಂದು ಸೈನ್ಯವನ್ನು ಕಟ್ಟಿದ್ದು. ಹೈದರ್ ಮತ್ತು ಟಿಪ್ಪುರಿಂದ ನೊಂದವರು, ಸೈನ್ಯದಿಂದ ಹೊರಬಿದ್ದವರು, ಪರಕೀಯರಾದ ಬ್ರಿಟಿಷರ ಆಳ್ವಿಕೆಯನ್ನು ಕೊನೆಗೊಳಿಸಬೇಕೆಂಬ ಛಲವಿದ್ದ ಸಮೂಹವನ್ನು ಒಗ್ಗೂಡಿಸಿ ಕಟ್ಟಿದ ಆ ಸೈನ್ಯ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಲಾರಂಭಿಸಿತು. ಬಿದನೂರು – ಶಿಕಾರಿಪುರ ಪ್ರದೇಶದಿಂದ ೧೮೦೦ರ ಸುಮಾರಿನಲ್ಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಬಾವುಟ ಹಾರಿಸಿದ ಇವನೊಂದಿಗೆ ಸುತ್ತಮುತ್ತಲಿನ ಪಾಳೆಯಗಾರರು ಕೈಜೋಡಿಸಿದ್ದರು. ಕುತಂತ್ರಗಳಿಂದಲೇ ಸಾಮ್ರಾಜ್ಯ ವಿಸ್ತರಣೆ ಮಾಡುತ್ತಿದ್ದ ಶತ್ರುಗಳನ್ನು ಎದುರಿಸಲು ಅವರ ಮಾರ್ಗವನ್ನೇ ಅನುಸರಿಸಬೇಕೆಂಬುದನ್ನು ಹಿಂದಿನ ಅನುಭವಗಳಿಂದ ಪಾಠ ಕಲಿತಿದ್ದ ದೊಂಡಿಯ ತನ್ನ ಪಡೆಗೆ ಗೆರಿಲ್ಲಾ ಮಾದರಿಯ ಯುದ್ಧತಂತ್ರಗಳಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಿದ. ಕರಾವಳಿ ಪ್ರದೇಶದಲ್ಲಿ ಜಮಾಲಾಬಾದ್ನಿಂದ ಸೋದೆಯವರೆಗೆ ಮತ್ತು ಘಟ್ಟ ಪ್ರದೇಶದ ಮೇಲೆ ಬೆಳಗಾಮ್, ರಾಯಚೂರಿನವರೆಗೆ ಸಹ ಆತನ ಕ್ರಾಂತಿಯ ವ್ಯಾಪ್ತಿ ವಿಸ್ತರಿಸಿತ್ತು. ಧೊಂಡಿಯ ವಾಘನನ್ನು ಮಣಿಸುವುದು ಆಂಗ್ಲರಿಗೆ ಸುಲಭವಾಗಿರಲಿಲ್ಲ. ಗೆರಿಲ್ಲಾ ಮಾದರಿಯಲ್ಲಿ ಹೊಂಚುಹಾಕಿ ಆಂಗ್ಲ ಸೈನಿಕರ ಮೇಲೆ ದಾಳಿ ಮಾಡಿ ಸಾಕಷ್ಟು ಕಷ್ಟ-ನಷ್ಟ ಉಂಟುಮಾಡಿ ಅವರು ಎಚ್ಚೆತ್ತು ತಿರುಗಿ ಬೀಳುವ ವೇಳೆಗೆ ಕಣ್ಮರೆಯಾಗುತ್ತಿದ್ದ ಅವನನ್ನು ಹಿಡಿಯುವುದು ಸುಲಭವಾಗಿರಲಿಲ್ಲ.
ಬ್ರಿಟಿಷ್ ಸೇನಾ ತುಕಡಿಗಳ ಮೇಲೆ ಆಯಕಟ್ಟಿನ ಸ್ಥಳಗಳಲ್ಲಿ ಹೊಂಚು ಹಾಕಿ ಅನಿರೀಕ್ಷಿತ ದಾಳಿ ನಡೆಸಿ ಅಪಾರ ಹಾನಿ ಉಂಟು ಮಾಡುತ್ತಿದ್ದುದಲ್ಲದೆ ಅವರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದುದನ್ನು ತಪ್ಪಿಸಲು ಆಂಗ್ಲರು ಹೆಣಗಾಡಬೇಕಾಯಿತು. ಅವನನ್ನು ಹಿಡಿಯುವ ಸಲುವಾಗಿಯೇ ಲಾರ್ಡ್ ವೆಲ್ಲೆಸ್ಲಿ ಸೈನಿಕರ ಒಂದು ಪ್ರತ್ಯೇಕ ತಂಡವನ್ನೇ ನಿಯೋಜಿಸಿದ್ದ. ಒಂದೊಮ್ಮೆ ಈ ರೀತಿಯ ಹೋರಾಟ ಮಾಡಿದ ಸಂದರ್ಭದಲ್ಲಿ, ಇಂತಹ ದಾಳಿಯ ಬಗ್ಗೆ ಎಚ್ಚರದಿಂದಿದ್ದ ಆಂಗ್ಲ ಸೈನಿಕರಿಂದ ತಪ್ಪಿಸಿಕೊಳ್ಳಲು ಹರಿಯುತ್ತಿದ್ದ ದೊಡ್ಡ ಹಳ್ಳವನ್ನು ತನ್ನ ಕುದುರೆಯನ್ನು ಹುರಿದುಂಬಿಸಿ ಹಾರಿಸಿ ತಪ್ಪಿಸಿಕೊಂಡಿದ್ದ ಧೀರನವನು. ಇಂತಹುದೇ ಮತ್ತೊಂದು ಸಂದರ್ಭದಲ್ಲಿ ಆಂಗ್ಲರ ಪ್ರತಿದಾಳಿಯಿಂದ ತಪ್ಪಿಸಿಕೊಂಡು, ಶಿಕಾರಿಪುರದ ಹುಚ್ಚರಾಯಸ್ವಾಮಿ (ಭ್ರಾಂತೇಶ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಆಂಜನೇಯ) ದೇವಾಲಯದಲ್ಲಿ ಅಡಗಿ ರಕ್ಷಣೆ ಪಡೆದಿದ್ದ. ತನ್ನನ್ನು ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ತನ್ನ ಖಡ್ಗವನ್ನು ದೇವರಿಗೆ ಸಮರ್ಪಿಸಿದ್ದ ಧೊಂಡಿಯ ವಾಘ. ಈ ಖಡ್ಗ ಈಗಲೂ ಆ ದೇವಸ್ಥಾನದಲ್ಲಿದ್ದು, ಆಸಕ್ತರು ನೋಡಬಹುದಾಗಿದೆ. ಬ್ರಿಟಿಷರು ಅನೇಕ ರಾತ್ರಿಗಳನ್ನು ನಿದ್ರೆ ಮಾಡದೆ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದ್ದವನು ಈ ಶೂರ. ಗವರ್ನರ್ ಜನರಲ್ ಆಗಿದ್ದ ಮಾರ್ಕಿಸ್ ವೆಲ್ಲೆಸ್ಲಿ ದೊಂಡಿಯವಾಘನನ್ನು ಸೆರೆ ಹಿಡಿದ ತಕ್ಷಣದಲ್ಲಿ ಹತ್ತಿರದ ಮೊದಲ ಮರಕ್ಕೆ ಅವನನ್ನು ನೇಣು ಹಾಕಬೇಕೆಂದು ಆದೇಶಿಸಿದ್ದ.
[ಟಿಪ್ಪಣಿ: ಪ್ರತಿ ವಿಜಯದಶಮಿಯಂದು ಹುಚ್ಚರಾಯಸ್ವಾಮಿ ದೇವಾಲಯದಲ್ಲಿರುವ ಧೊಂಡಿಯವಾಘನ ಖಡ್ಗದಿಂದಲೇ ಬನ್ನಿ ಕಡಿಯುವ ಸೌಭಾಗ್ಯ ಶಿಕಾರಿಪುರದ ತಾಲ್ಲೂಕು
ದಂಡಾಧಿಕಾರಿಯಾದವರಿಗೆ ಸಿಗುತ್ತದೆ. ಎರಡು ವರ್ಷಗಳು ಈ ಖಡ್ಗವನ್ನು ಹಿಡಿಯುವ ಮತ್ತು ಬನ್ನಿ ಕಡಿಯುವ ಪುಣ್ಯ ನನಗೆ ಸಿಕ್ಕಿತ್ತು. ಬ್ರಿಟಿಷರನ್ನು ನಡುಗಿಸಿದ ಧೊಂಡಿಯವಾಘನ ಖಡ್ಗವನ್ನು ನಾನು ಹಿಡಿದು ಬಾಳೆಯ ಕಂದನ್ನು ಕಡಿಯುವಾಗ ಹೆಮ್ಮೆಯಿಂದ ಉಬ್ಬಿದ್ದು ಸುಳ್ಳಲ್ಲ. ಅನ್ಯಾಯಿಗಳನ್ನು, ಸಮಾಜಘಾತಕರನ್ನು ಹೀಗೆಯೇ ನಿವಾರಿಸಬೇಕೆಂದು ಅನ್ನಿಸಿದ್ದ ಆ ಕ್ಷಣಗಳನ್ನು ನೆನೆಸಿಕೊಂಡು ಈಗಲೂ ಪುಲಕಿತನಾಗುತ್ತಿರುತ್ತೇನೆ-ಲೇಖಕ.]
ಉಭಯ ಲೋಕಾಧೀಶ್ವರ(ಎರಡು ಲೋಕಗಳ ಒಡೆಯ) ಎಂಬ ಬಿರುದು ಸಂಪಾದಿಸಿದ್ದ ದೊಂಢಿಯವಾಘ್ ಹುಲಿಯಂತೆಯೇ (ವಾಘ್=ಹುಲಿ) ಹೋರಾಡುತ್ತಿದ್ದ. ಅವನನ್ನು ಶಿವಮೊಗ್ಗದ ಸಮೀಪ ಬ್ರಿಟಿಷರು ಸುತ್ತುವರೆದಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಉತ್ತರ ಕರ್ನಾಟಕ ತಲುಪಿದ. ಆಗ ಅವನು ಮರಾಠಾ ಸೇನಾಪತಿ ಗೋಖಲೆಯಿಂದಲೂ ಪ್ರತಿರೋಧ ಎದುರಿಸಬೇಕಾಯಿತು. ಅಲ್ಲಿಂದಲೂ ತಪ್ಪಿಸಿಕೊಂಡು ಜೂನ್, ೧೮೦೦ರಲ್ಲಿ ತುಂಗಭದ್ರಾ – ಮಲಪ್ರಭಾ ನದಿಗಳ ನಡುವಿನ ಪ್ರದೇಶಕ್ಕೆ ಬಂದ ಇವನು ನಂತರದಲ್ಲಿ ಹೊಂಚು ಹಾಕಿ ೧೦,೦೦೦ ಕುದುರೆ ಸವಾರರು, ೫೦೦೦ ಕಾಲ್ದಳ, ೮ ಫಿರಂಗಿಗಳನ್ನು ಹೊಂದಿದ್ದ ಪ್ರಬಲ ಮರಾಠಾ ಸರದಾರ ಗೋಖಲೆಯನ್ನು ಎದುರಿಸಿ ಕೊಂದುಹಾಕಿದ್ದು ಆತನ ಧೈರ್ಯದ ಪ್ರತೀಕವೇ ಸರಿ.
ಬೇಹುಗಾರರನ್ನು ನೇಮಿಸಿ ದೊಂಢಿಯವಾಘನ ಚಲನವಲನಗಳನ್ನು ಗಮನಿಸುತ್ತಿದ್ದ ಲಾರ್ಡ್ ವೆಲ್ಲೆಸ್ಲಿ ಅವನನ್ನು ಮಲಪ್ರಭಾ ಬಲದಂಡೆಯ ಸಮೀಪಕ್ಕೂ ಬಂದು ಬೆನ್ನಟ್ಟಿದಾಗ ತನ್ನ ಸಾಮಗ್ರಿಗಳು, ಆನೆಗಳು, ಕುದುರೆಗಳನ್ನು ಬಿಟ್ಟು ಪುನಃ ತಪ್ಪಿಸಿಕೊಂಡು ಶಿರಹಟ್ಟಿಗೆ ಬಂದ. ನಿಜಾಮನ ಸೀಮೆ ತಲುಪಿದ ಇವನನ್ನು ಅಲ್ಲಿಯೂ ಬೆನ್ನಟ್ಟಿದ ಆಂಗ್ಲರು ಕೋಣಗಲ್ಲು ಎಂಬಲ್ಲಿ ೧೦-೦೯-೧೮೦೦ರಂದು ಸುತ್ತುಗಟ್ಟಿದಾಗ ವೀರಾವೇಶದಿಂದ ಚಕ್ರವ್ಯೂಹದಲ್ಲಿ ಸಿಲುಕಿದ್ದ ಅಭಿಮನ್ಯುವಿನಂತೆ ನಿಜವಾದ ‘ಮಾಡು ಇಲ್ಲವೇ ಮಡಿ’ ಎಂಬ ಹೋರಾಟ ನಡೆಸಿದ ಧೊಂಡಿಯವಾಘ ವೀರಮರಣ ಹೊಂದಿದ. ಅವಕಾಶ ಸಿಕ್ಕಿದ್ದರೆ ಧೊಂಡಿಯವಾಘ ಎರಡನೆಯ ಹ್ಶೆದರಾಲಿ ಆಗುತ್ತಿದ್ದ ಎಂಬುದು ಪ್ರಸಿದ್ಧ ಇತಿಹಾಸಕಾರ ಎಡ್ವರ್ಡ್ ಥಾರ್ನ್ಟನ್ನನ ಉದ್ಗಾರ! ಇವನಿಗೆ ಇತಿಹಾಸಕಾರರು ಕೊಡಬೇಕಾದ ಪ್ರಾಮುಖ್ಯತೆ ಕೊಟ್ಟಿಲ್ಲವೆಂದು ಉದ್ಗರಿಸಿದವರು ಶ್ರೀ ಡಿ.ಸಿ. ಬಕ್ಷಿಯವರು. ವೆಲ್ಲೆಸ್ಲಿ ತನ್ನ ಹೋರಾಟದ ಕುರಿತು ದಾಖಲಿಸಿರುವ ವಿವರಗಳಲ್ಲಿ ಧೊಂಡಿಯನ ವಿರುದ್ಧ ಸಾಧಿಸಿದ ಗೆಲುವಿಗೆ ಹೆಚ್ಚಿನ ಪ್ರಾಮುಖ್ಯ ಕೊಟ್ಟಿದ್ದಾನೆ; ಅದೊಂದು ಅದ್ಭುತ ಸಾಧನೆಯೆಂದಿದ್ದಾನೆ.
ಆದರೆ ನಮ್ಮವರು ಧೊಂಡಿಯನ ಸಾಧನೆ ಗುರುತಿಸುವಲ್ಲಿ ಎಡವಿದ್ದಾರೆ ಎನ್ನದೆ ವಿಧಿಯಿಲ್ಲ. ದೇಶಕ್ಕಾಗಿ ಹೋರಾಡಿ ಗಲ್ಲಿಗೇರಿದ ಸಂಗೊಳ್ಳಿ ರಾಯಣ್ಣನಂತೆಯೇ ಅಪ್ರತಿಮ ರೀತಿಯಲ್ಲಿ ಬಲಿದಾನ ಮಾಡಿದ ದೊಂಢಿಯವಾಘನಿಗೆ ರಾಯಣ್ಣನಿಗೆ ಸಿಕ್ಕಷ್ಟು ಮಾನ್ಯತೆ ಸಿಗದಿರುವುದು, ಇವನ ಹೋರಾಟವನ್ನು ಸರ್ಕಾರಗಳು ಗುರುತಿಸದಿರುವುದು ನಿಜಕ್ಕೂ ಅನ್ಯಾಯವೇ ಸರಿ. ಕುಟಿಲತೆಗೆ ಹೆಸರಾದ ಬ್ರಿಟಿಷರು ಕೇವಲ ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹದಿಂದ ಮಾತ್ರ ಬೆದರಿ ದೇಶ ಬಿಟ್ಟು ಹೋದರು ಎಂಬಂತೆ ಬಿಂಬಿಸಲಾಗುತ್ತಿರುವುದು ಸರಿಯಲ್ಲ. ಧೊಂಡಿಯವಾಘನಂತಹ ಅಸಂಖ್ಯಾತ ಹೋರಾಟಗಾರರ ಪಾಲು ಮಹತ್ವದ್ದಾಗಿದ್ದು ಅವರೆಲ್ಲರ ಸಾಮೂಹಿಕ ಹೋರಾಟದ ಫಲವೇ ಸ್ವಾತಂತ್ರ್ಯವೆಂಬುದನ್ನು ಮರೆತರೆ ಅದು ಕೃತಘ್ನತೆಯಾಗುತ್ತದೆ. ಅಂತಹವರನ್ನು ಗುರುತಿಸಿ ಗೌರವಿಸುವುದು, ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಇಂದು ನಮ್ಮ ದೇಶವನ್ನಾಳುತ್ತಿರುವ ಜನಪ್ರತಿನಿಧಿಗಳೆನಿಸಿಕೊಂಡವರಲ್ಲಿ ಬಹುತೇಕರು ಭಂಡರು, ಪುಂಡರು. ಅವರು ಬಗ್ಗುವುದು ದಂಡಕ್ಕೆ ಮಾತ್ರ. ಹೀಗಿರುವಾಗ, ಯಾವುದೇ ರೀತಿಯ ಅನ್ಯಾಯದ ವಿರುದ್ಧ ಯಾರೇ ಹೋರಾಡಲಿ, ಅವರೊಡನೆ ಕೈಜೋಡಿಸದಿದ್ದರೂ ಪರವಾಗಿಲ್ಲ, ಅವರನ್ನು ಸಮರ್ಥಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ಮಾಡಲು ನಾವು ಮನಸ್ಸು ಮಾಡಬಹುದಲ್ಲವೇ? ಸಜ್ಜನ ಶಕ್ತಿ ರೂಪುಗೊಳ್ಳುವುದು ಇಂತಹ ಮನೋಭೂಮಿಕೆಯಿಂದಲೇ. ಇಂತಹ ಕೆಲಸಗಳೇ ನಾವು ದೊಂಡಿಯವಾಘನಂತಹವರ ಬಲಿದಾನಕ್ಕೆ ತೋರಬಹುದಾದ ಗೌರವ.
ಆಧಾರ:
1. ಜ್ಞಾನಗಂಗೋತ್ರಿ -ಕಿರಿಯರ ವಿಶ್ವಕೋಶ-ಸಂಪುಟ-೭
2. International Referred Research Journal,June,2011,ISSN-0975-3486, RNI: RAJBIL 2009/30097, VOL-II *ISSUE 21
3. Shimogainfo.net/index.php/component/content/article/12-historical-places/1379-shikaripur.html
4. http://en.wikipedia.org/wiki/James_Scurry
5. ಚಿತ್ರ ಕೃಪೆ: ರಾಷ್ಟ್ರಗೌರವ ಸಂರಕ್ಷಣಾ ಪರಿಷತ್, ಬೆಂಗಳೂರು.





ನಿಜವಾದ ಹುಲಿಯನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.
ಮಾನ್ಯರೇ, ಒಳ್ಳೆಯ ಮಾಹಿತಿ ಮತ್ತು ಆಧಾರ ಸಮೇತ ನೀಡಿರುವಒಳ್ಳೆಯ ಲೇಖನ. ಲೇಖಕರಿಗೆ ಧನ್ಯವಾದಗಳು. ನಮಗಾಗಿ ನಮ್ಮ ದೇಶಕ್ಕಾಗಿ ಇನ್ನೆಷ್ಟು ಜನ ಸ್ವರ್ಥ ಮರೆತು ತನ್ನ ತಂದೆ ತಾಯಿ ಸತಿ ಸುತರನ್ನು ತೊರೆದು ಮರೆತು ದುಡಿದು ಮಡಿದಿದ್ದಾರೋ? ಇಂತಹ ಲೇಖನಗಳಿಂದ ಕಣ್ಣು ತೇವಗೊಳ್ಳುತ್ತವೆ.
ನಿಜಕ್ಕೂ ಉತ್ತಮ ಲೇಖನ, ನಾಗರಾಜ್ ಸರ್, ನೀವು ಹಾಕಿರುವ ದೋಂಡಿಯಾ ವಾಘ್್ನ ಚಿತ್ರ ನನ್ನ ಬಳಿ ಈಗಲೂ ಇದೆ. ನಿಮ್ಮದೇ ಅದು…..ದೋಂಡಿಯಾ ವಾಘ್ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
ದೊಂಡಿ ವಾಘ್ ಬಗ್ಗೆ ತಿಳಿಸಿಕೊಟ್ಟ ಶ್ರೀ ನಾಗರಾಜ್ ಅವರಿಗೆ ಧನ್ಯವಾದಗಳು. ಒಂದು ವಿಷಯವಂತು ಸತ್ಯ. ಈ ದರಿದ್ರ ಕಮ್ಯುನಿಷ್ಟರು ನಿರ್ನಾಮ ಆಗುವ ತನಕ ಈ ದೇಶ ಸುಧಾರಿಸುವುದಿಲ್ಲ. ನಮ್ಮ ಪುಣ್ಯಕ್ಕೆ ಅದು ಸಂಭವಿಸುವ ಲಕ್ಷಣಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ.
http://ladaiprakashanabasu.blogspot.in/2014/01/blog-post_2286.html
ನೋಡು,
ಮರುಭೂಮಿಯ ಮುಳ್ಳುಕಂಟಿ ಚಿಗುರಿ ಹೂವರಳಿಸುತ್ತದೆ
ಮುಸುಕಿದ ಮಂಜು ಹನಿಗೆ ಉಸುಕೂ ಸಂಭ್ರಮಪಡುತ್ತದೆ
ದೊಂಬಿಯ ಮರುದಿನ ನಿರ್ಜನ ಶಹರದ
ರಸ್ತೆಗಳ ಇಕ್ಕೆಲದಲೂ ಮರ ಹೂವರಳಿಸಿ ನಗುತ್ತದೆ
ಅರಳೆ ಸಿಗದ ಕಾಲಕ್ಕೆ ಹಕ್ಕಿ, ನಾರು ಹೆಕ್ಕಿ ಗೂಡು ಕಟ್ಟುತ್ತದೆ
ಯಾವ ತಾಲಿಬಾನಿಗೂ ಅವು ಅಂಜುವುದಿಲ್ಲ ಗೆಳತೀ,
ನಮೋಸುರನ ಬೆದರಿಕೆಗೆ ಗಿರ್ನ ಕೇಸರಗಳು ದಿಗಿಲುಗೊಳ್ಳುವುದಿಲ್ಲ
ಇರುಳಲ್ಲಿ ಗೂಬೆ ಸುಮ್ಮನೆ ಕೂರುವುದಿಲ್ಲ
ಸುರನೋ ಅಸುರನೋ
ಗಡ್ಡ ನೆರೆಯದೆ ಉಳಿಯುವುದಿಲ್ಲ
ಶೆಟ್ಕರ್ ರವರೇ, ಕವನ ತುಂಬಾ ಚೆನ್ನಾಗಿದೆ
ಮಹೇಶ್, ನಮೋಸುರನ ಪರಿಚಾರಿಕೆಯನ್ನು ಇನ್ನಾದರೂ ಬಿಡಿ, ಪೊರಕೆ ಹಿಡಿಯಿರಿ.
ಈಗ ಆಪ್ ನ ಪರ ಬ್ಯಾಟಿಂಗ್, ತಿನ್ನಲು ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ನಾಚಿಕೆಯಿಲ್ಲದೇ, ಅಹ್ವಾನವಿಲ್ಲದೇ ಅಲ್ಲಿಗೆ ನುಗ್ಗುತ್ತವೆ ಗ್ರಾಮಸಿಂಹಗಳು!
ಮನೋಹರ್ ಅವರೆ, ನಮೋಸುರ ಸುರೆಯ ಧಾರೆಯನ್ನೇ ಹರಿಸಬಹುದು, ಆದರೆ ರಾಕ್ಷಸನ ಬೆಂಬಲಕ್ಕೆ ದರ್ಗಾ ಸರ್ ಎಂದಿಗೂ ನಿಲ್ಲುವುದಿಲ್ಲ. ಅವರದ್ದು ತತ್ವನಿಷ್ಟ ಆಕ್ಟಿವಿಸಂ. ದರ್ಗಾ ಸರ್ ಅವರ ಬಗ್ಗೆ ಚೀಪ್ ಮಾತುಗಳನ್ನಾಡುವುದನ್ನು ನಿಲ್ಲಿಸಿ.
!! ನೀವು ಕಮೆಂಟ್ ಬರೆದು, ಆಮೇಲೆ ಅದಕ್ಕೆ ನಾನು ತಿರುಗಿ ಕಮೆಂಟ್ ಬರೆದರೆ, ನೀವು ಬೇರೆಯವರ ಹೆಸರು ಎಳೆದು ತಂದು ಅವರ ಬಗ್ಗೆ ನಾನು ಚೀಪ್ ಮಾತನಾಡಿದೆ ಅನ್ನುತ್ತೀರಿ!. ಒಳ್ಳೆ ನಾಟಕ ಕಂಪನಿ ಸಹವಾಸ ಆಯ್ತಿದು.
ನಮೋಸುರನ ಬೆದರಿಕೆಗೆ ಗಿರ್ನ ಕೇಸರಗಳು ದಿಗಿಲುಗೊಳ್ಳುವುದಿಲ್ಲ ಶೆಟ್ಕರ ಸಾಬರೆ ಇಲ್ಲಿನ ನಮೋಸುರನ ಇದ್ದುದನ್ನು ಎಡಚಾಸುರರ ಎಂದು ತಿದ್ದಿ ಓದಿ.
ಹೂಂ..ಈ ಗ್ರಾಮ ಸಿಂಹಗಳು ಹೆದರುವುದಿಲ್ಲ, ವಿಶ್ರಮಿಸುವುದಿಲ್ಲ. ಸಧ್ಯಕ್ಕೆ ಸರ್ಕಾರಿ ಗಂಜಿಯನ್ನು ತಿಂದು ಧರಣಿ,ಜಾಥಾ ಮಾಡುವುದು, ಜ್ವಲಂತ (ಕಡ್ಡಿಪೆಟ್ಟಿಗೆ ಮತ್ತು ಸೀಮೆಎಣ್ಣೆ ಇವರ ಕೈಯಲ್ಲೇ!) ಸಮಸ್ಯೆಗಳ ಚರ್ಚೆಗೆ ಪರ್ಯಾಯ ಸಮ್ಮೇಳನ ಮಾಡುವುದು, ಮೋದಿಯ ಮದುವೆ ದಾಖಲೆಗಳನ್ನು ಹುಡುಕುವುದು, ತಾವೇ ಕಾಡಿಗಟ್ಟಿದ ನಕ್ಸಲ್ ರನ್ನು ನಾಡಿಗೆ ತರುವುದು, ತಾವು ಸ್ನಾನ ಮಾಡದೇ ವಾಸನೆ ಎಲ್ಲಿಂದ ಬರುತ್ತಿದೆ ಎಂಬ ‘ಗಂಭೀರ ಚಿಂತನೆಗಿಳಿದು ಲೇಖನ ಬರೆದು ಕೊರೆಯುವುದು ಮೊದಲಾದ ಘನಕಾರ್ಯಗಳಲ್ಲಿ ತೊಡಗಿಕೊಂಡಿರುತ್ತವೆ. ಕೆಲವು ಮುದಿ ಸಿಂಹಗಳಿಗೆ ಈ ಹೋರಾಟಕ್ಕೆ ನಗದು ರೂಪದ ಬಹುಮಾನ ಇರುವ ಪ್ರಶಸ್ತಿಗಳೂ ಸಿಗುತ್ತಿವೆ. ಅವಸಾನವಂತೂ ಕಣ್ಣಿಗೆ ನಿಚ್ಚಳವಾಗಿ ಕಾಣಿಸುತ್ತಿದೆ. ಪಾಪ ಬದುಕಲಿ ಇನ್ನೊಂದು ವರುಪ ಅಥವಾ ಎರಡು, ಮತ್ತೆ ಚಿಗುರುವ ಆಶೆ ಇಟ್ಟುಕೊಂಡು!
ಪೊರಕೆ ಹಿಡಿದು ನಿಮ್ಮ ಮೆದುಳಿಗಂಟಿರುವ ಕಸವನ್ನು ಗುಡಿಸುವ ಕಾಲ ಬಂದಿದೆ.
[[Nagshetty Shetkar> ಪೊರಕೆ ಹಿಡಿದು ನಿಮ್ಮ ಮೆದುಳಿಗಂಟಿರುವ ಕಸವನ್ನು ಗುಡಿಸುವ ಕಾಲ ಬಂದಿದೆ.]]
ಶೇಟ್ಕರ್ ಅವರು ಸ್ವಾನುಭವದ ಕುಲುಮೆಯಲ್ಲಿನ ಬೆಂಕಿಗೊಡ್ಡಿ, ಅಪರಂಜಿ ಎಂದು ಸಿದ್ಧಪಟ್ಟದ್ದನ್ನು ಮಾತ್ರ ಒಪ್ಪುವವರು ಮತ್ತು ತಾವು ಸ್ವತಃ ಮಾಡುವುದನ್ನು ಮಾತ್ರ ಇತರರಿಗೆ ಮಾಡುವಂತೆ ತಿಳಿಸುವವರು. ಎಷ್ಟಿದ್ದರೂ ಕಾಯಕದಲ್ಲಿ ನಂಬಿಕೆಯಿಟ್ಟಿರುವ ಶರಣರಲ್ಲವೇ ಅವರು!? ಅವರು ಹೇಳಿದ್ದನ್ನು ಅಮೃತವಚನದಂತೆ ಇತರರು ಸ್ವೀಕರಿಸಬೇಕು.
ಕೆಲವು ದಿನಗಳ ಹಿಂದೆ ಅವರು ಲೈಂಗಿಕ ಅಲ್ಪಸಂಖ್ಯಾತರ ಸಭೆಯಲ್ಲಿ ಭಾಗವಹಿಸಿದ್ದಾಗಿ ಮತ್ತು ಇಲ್ಲಿರುವ ಮತ್ಯಾರೋ ಅಲ್ಲಿ ಬಂದಿರುತ್ತಾರೆಂದು ನಂಬಿ, ಅವರನ್ನು ಹುಡುಕಿದ್ದಾಗಿಯೂ ಹೇಳಿದರು. ಈ ರೀತಿಯ ಸಭೆಗಳಲ್ಲಿ ಭಾಗವಹಿಸಿದ್ದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲು ಗಂಡೆದೆಯೇ ಬೇಕು. ಅಂತೂ, ಗಂಡೆದೆ ಎನ್ನುವುದು ಗಂಡಸರಿಗೇ ಮಾತ್ರವಲ್ಲ, ಇತರರಿಗೂ ಇರಬಹುದು ಎನ್ನುವುದನ್ನು ಅವರು ಸಾಧಿಸಿ ತೋರಿಸಿಬಿಟ್ಟರು!
ಈಗ, ಮೆದುಳಿನ ಸಮಸ್ಯೆಗೆ ಪರಿಹಾರ ತಿಳಿಸಿಬಿಟ್ಟಿದ್ದಾರೆ. ಜಗತ್ತಿನಾದ್ಯಂತ ಮೆದುಳಿನ ವಿಜ್ಞಾನಿಗಳು ದಶಕಗಳ ಕಾಲ ಈ ಸಮಸ್ಯೆಗೆ ಪರಿಹಾರ ಹುಡುಕಲು ತಿಣುಕಾಡುತ್ತಿದ್ದಾರೆ. ಅತ್ಯಾಧುನಿಕ ಸಾಧನಗಳನ್ನೆಲ್ಲಾ ಉಪಯೋಗಿಸಿಯೂ ಅವರಿಗೆ ಸಾಧ್ಯವಾಗದ್ದನ್ನು, ನಮ್ಮ ಶೇಟ್ಕರ್ ಅವರು ಕೇವಲ ಪೊರಕೆ ಹಿಡಿದು ಸಾಧಿಸಿದ್ದಾರೆಂದರೆ, ಅದು ಕನ್ನಡಿಗರೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ. ಪ್ರಾಯಶಃ ಇವರ ಸಾಧನೆ ತಿಳಿದ ನಂತರವೇ, AAP ಪಕ್ಷದ ಅರವಿಂದ ಕೇಜ್ರೀವಾಲರು, ತಮ್ಮ ಪಕ್ಷಕ್ಕೆ ಪೊರಕೆಯನ್ನು ಚಿಹ್ನೆಯಾಗಿ ಪಡೆದಿರಬೇಕೆನ್ನಿಸುತ್ತದೆ!
ಇಂತಹ ಪ್ರತಿಭಾವಂತರು ನಮ್ಮ ಮಧ್ಯೆಯಿದ್ದಾರೆ ಮತ್ತು ನಮ್ಮ ಹುಡುಗಾಟದ ಪ್ರಶ್ನೆಗಳಿಗೂ, ತಾಳ್ಮೆಯಿಂದ ಸಂಶೋಧನೆ ನಡೆಸಿ, ಸ್ವತಃ ಪರೀಕ್ಷೆ ಮಾಡಿ ನಿಶ್ಕರ್ಷೆಗೆ ಬಂದದ್ದನ್ನೇ ತಿಳಿಸುತ್ತಾರೆ ಎನ್ನುವುದನ್ನು ತಿಳಿದು, ನನಗೆ ಮಾತುಗಳೇ ಹೊರಡುತ್ತಿಲ್ಲ.
ಅವರು ಹಾಕುವ ಪ್ರತಿಕ್ರಿಯೆಗಳನ್ನು ಓದುತ್ತಾ ಮೂಲ ವಿಷಯವೇ ಮರೆತು ಹೋಗುತ್ತದೆ, ಹೊಸ ಚರ್ಚೆಯೇ ಪ್ರಾರಂಭವಾಗುತ್ತದೆ ಎಂದರೆ, ಅವರ ಪ್ರತಿಭೆ ಎಷ್ಟಿರಬೇಕೆಂದು ನೀವೇ ಲೆಕ್ಕ ಹಾಕಿಕೊಳ್ಳಿ. ಮೂಲ ವಿಷಯದ ಚರ್ಚೆಯನ್ನು ಹಳ್ಳ ಹಿಡಿಸುವುದು ಅಷ್ಟು ಸುಲಭವೇ? ಎಲ್ಲರಿಗೂ ಅದು ಸಾಧ್ಯವಿಲ್ಲ. ಪ್ರಾಯಶಃ ಅವರು ಆಗಾಗ ಜಪಿಸುವ ‘ದರ್ಗಾ ಸರ್’ ಎನ್ನುವ ಬೀಜಾಕ್ಷರದಿಂದಲೇ ಇದು ಅವರಿಗೆ ಸಿದ್ಧಿಸಿರಬೇಕೆನಿಸುತ್ತದೆ!!
ಇಲ್ಲದಿದ್ದರೆ “ಮೈಸೂರು ಹುಲಿಯ ವಿರುದ್ಧ ಸೆಟೆದು ನಿಂತ ಸಹ್ಯಾದ್ರಿಯ ಹುಲಿ” ವಿಷಯದ ಚರ್ಚೆಯಲ್ಲಿ “ಪೊರಕೆ ಹಿಡಿದು ನಿಮ್ಮ ಮೆದುಳಿಗಂಟಿರುವ ಕಸವನ್ನು ಗುಡಿಸುವ” ವಿಷಯ ತರುವುದು ಸಾಧ್ಯವೇ ಇಲ್ಲ. ಹುಡುಗಾಟದ ಚರ್ಚೆ ನಡೆಸುವ ನಮ್ಮಂತಹ ಸಾಮಾನ್ಯರಿಗಂತೂ ಕನಸಿನಲ್ಲೂ ಇದು ಸಾಧ್ಯವಿಲ್ಲ!!!!
ಶೇಟ್ಕರ್ ಅವರ ಬರಹದಲ್ಲಿ ಮತ್ತೂ ಒಂದು ವಿಶೇಷವಿದೆ. ಅದು ನಾಸ್ಟರ್ಡಾಮಸ್ ಬರೆದಿರುವ ಚೌಪದಿಯಂತೆ. ಒಬ್ಬೊಬ್ಬರು ಒಂದೊಂದು ತರಹ ಅರ್ಥ ಮಾಡಿಕೊಳ್ಳಬಹುದು. ಶೇಟ್ಕರ್ ಅವರ ಬರಹವನ್ನು, ಚರ್ಚೆಯ ದಾರವನ್ನೇ ಹಿಡಿದು ಓದಿದಾಗ, ಮೂಲ ವಿಷಯವೇ ಮರೆತು ಚರ್ಚೆ ಹಳ್ಳ ಹಿಡಿದಿರುವುದೂ ತಿಳಿಯದಂತೆ ಮೋಡಿ ಮಾಡುತ್ತದೆ. ಅದೇ, ಅವರ ಬರಹವನ್ನು ಮಾತ್ರ ಓದಿಕೊಂಡು ಹೋಗಿ ನೋಡಿ. ಗಂಭೀರ ಮತ್ತು ಸಪ್ಪೆ ಎನ್ನಿಸುವ ಚರ್ಚೆಯ ನಡುವೆಯೂ, ಮರುಭೂಮಿಯ ಓಯಸಿಸ್^ನಂತೆ ಹಾಸ್ಯವನ್ನು ತಂದಿರುತ್ತದೆ. ನೀವೊಮ್ಮೆ ಅವರ ಬರಹವನ್ನು ಮಾತ್ರ (ಬೇಕಾದರೆ ಹಿಂದಿನ ಲೇಖನಗಳಲ್ಲಿ ಅವರು ಬರೆದಿರುವ ಪ್ರತಿಕ್ರಿಯೆಗಳನ್ನೂ ಓದಿ ನೋಡಿ) ಓದಿಕೊಂಡು ಹೋಗಿ – ಒಂದೊಂದು ಬರಹವಂತೂ ಬಿದ್ದು ಬಿದ್ದು ನಗುವಂತೆ ಮಾಡಿಬಿಡುತ್ತದೆ!
ಇಷ್ಟೊಂದು ಪ್ರತಿಭೆ ಇರುವವರು ನಮ್ಮ ಮಧ್ಯೆ ಇದ್ದಾರೆಂಬುದು ನಿಮಗಾರಿಗಾದರೂ ತಿಳಿದಿತ್ತೇ!? ಪ್ರಾಯಶಃ ಅವರು ‘ದರ್ಗಾ ಸರ್’ ಅವರಿಗೇ ಗುರುಗಳೆನಿಸುತ್ತದೆ. ಹೀಗಿದ್ದಾಗ್ಯೂ ಶಿಷ್ಯನನ್ನೇ ಗುರುಗಳೆಂದು ಕಾಣುವುದು, ಶೇಟ್ಕರ್ ಅವರ ದೊಡ್ಡತನ, ‘ಸರಳ-ಸಜ್ಜನಿಕೆ-ಉದಾರತೆ’ಗಳ ಪ್ರತೀಕ!
” ಗಂಡೆದೆ ಎನ್ನುವುದು ಗಂಡಸರಿಗೇ ಮಾತ್ರವಲ್ಲ, ಇತರರಿಗೂ ಇರಬಹುದು ಎನ್ನುವುದನ್ನು ಅವರು ಸಾಧಿಸಿ ತೋರಿಸಿಬಿಟ್ಟರು!”
ರಾಲಿಯಲ್ಲಿ ಭಾಗವಹಿಸಿದ್ದ ಲೈಂಗಿಕ ಅಲ್ಪಸಂಖ್ಯಾತರೂ ಅವರ ಬೆಂಬಲಕ್ಕೆ ನಿಂತಿದ್ದ ಬೆರಳೆಣಿಕೆಯ ಲೈಂಗಿಕ ಬಹುಸಂಖ್ಯಾತರೂ ಗಂಡೆದೆ ಹೆಂಗರಳು ಇರುವವ್ರೇ ಆಗಿದ್ದಾರೆ. ನರಸತ್ತ ನಿಸ್ತೇಜ ನಿರ್ವೀರ್ಯ ಕುಹುಕ ಪಂಡಿತರು ಕುಮಾರ್ ಅವರ ರೂಪದಲ್ಲಿ ತಮ್ಮ ಮನಸ್ಸಿನ ನಂಜನ್ನು ಕಾರುತ್ತಿದ್ದಾರೆ.
[[Nagshetty Shetkar> ತಮ್ಮ ಮನಸ್ಸಿನ ನಂಜನ್ನು ಕಾರುತ್ತಿದ್ದಾರೆ.]]
ನಂಜ ನುಂಗಿ ಅಮರನಾಗು ಧೈರ್ಯಧಾರೆ ಧುಮುಕಿಸು
ಹೇಡಿಗೆಷ್ಟು ಸಾವು ಬಹುದೊ ಎಷ್ಟು ಬದುಕೊ ತಿಳಿಯದು
ನಿನಗೆ ಹಾಲನೆರೆದ ತಾಯಿ ಸನಾತನೆ ಭಾರತಿ
ಅವಳ ಗರಿಮೆ ಗಳಿಕೆಗಾಗಿ ಜೀವಿಸು, ಮುಂದೆ ಧಾವಿಸು
ಕಾಶ್ಮೀರದಾ ಕೂಗು ನಿಮಗೆ ಕೇಳಿಸದೇನು?
ತಾಯೊಡಲ ತಳಮಳವು ಮನವ ಬಾಧಿಸದೇನು?
ಮೆರೆಯುತಿರೆ ಎಲ್ಲೆಲ್ಲೂ ದ್ರೋಹ ವಿಚ್ಛಿದ್ರತೆಯು
ಮೈಮರೆತು ಮಲಗಿದರೆ ಎಲ್ಲಿಹುದು ಭದ್ರತೆಯು
ಹಿಡಿಕೂಳಿನ ಬರಿಗೋಳಿನ ಬಾಳಿಗೆ
ಮಾರುವೆಯಾ ತನುಮನವನು ಗೆಳೆಯಾ
ಭ್ರಮೆಯ ಕೊಡವಿಕೊ ಕಣ್ತೆರೆದರಿತುಕೊ
ಮಾನವ ಜೀವನದನಂತ ಮಹಿಮೆ
ಸುವಿಚಾರಬದ್ಧತೆಗೆ ಆಚಾರ ಶುದ್ಧತೆಗೆ
ಭಾರತದೊಳಿಹುದೆಂದೂ ಅಗ್ರ ಪ್ರಾಶಸ್ತ್ಯ
ಬರಿದೆ ಶಾಂತಿ ಮಂತ್ರ ಜಪಿಸಿ ಕುಳಿತರೇನು ಸಾರ್ಥಕ?
ವ್ಯಕ್ತಿ ವ್ಯಕ್ತಿಯಾಗಲಿಂದು ರಾಷ್ಟ್ರಭಕ್ತ ಸೈನಿಕ
ಸಂಘರ್ಷದ ಸಮಯದಲ್ಲಿ ಹೇಡಿತನವು ಸಲ್ಲದು
ಸ್ವಾಭಿಮಾನಿ ಯುವಜನಾಂಗ ಸೋಲನೆಂದು ಒಲ್ಲದು
ಮಾತೃಭೂಮಿಯ ಮಕ್ಕಳಾದರೆ ಈಗ ನಿದ್ರಿಸಲೊಲ್ಲಿರಿ
ಮೈಯರಕ್ತವು ಶುದ್ಧವಿದ್ದರೆ ಈಗ ತೋರಿಸಬಲ್ಲಿರಿ
ಅಡಿಯ ಮುಂದಿಡೆ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ
ಕಡನಾಳಿರಿ ನಭವನಳೆಯಿರಿ ಯಂತ್ರತಂತ್ರವ ನಿರ್ಮಿಸಿ
ನಿಮ್ಮೂರಿನ ಬ್ರಾಹ್ಮಣ ಸಭೆಯ ಮುಂದಿನ ಮೀಟೀಂಗಿನಲ್ಲಿ ಈ ಪದ್ಯವನ್ನು ಜಾತಿಬಾಂಧವರ ಹಾಗೂ ವಟೋತ್ತಮರ ಮುಂದೆ ಓದಿ. ಕರತಾಡನ ಖಚಿತ!
ಪಾಪ ಸಾಮಾಜಿಕ ಸಮಾನತೆ ತರಲು ಹೊರಟವರಿಗೆ ಉಸಿರಾಟದಲ್ಲೇ ಜಾತಿ ತುಂಬಿಹೋಗಿದೆ. ತಮ್ಮದು ತಾವು ತೊಳೆದುಕೊಳ್ಳದೇ ಊರು ತೊಳೆಯಲು ಹೊರಟಿವೆ ನಾಚಿಕೆಯಿಲ್ಲದವು!
ನನ್ನ ಯಕಶ್ಚಿತ್ ಕಮೆಂಟೊಂದು ನಿಮಗೆ ಇಷ್ತೊಂದು ತುರಿಕೆ ಕಜ್ಜಿ ಉಂಟು ಮಾಡುತ್ತದೆ ಅಂತ ಊಹಿಸಿರಲಿಲ್ಲ. ಜಾತಿಯ ನಂಜು ನಿಮ್ಮ ರಕ್ತದಲ್ಲಿದೆ. ಅದಕ್ಕೆ ಇಷ್ತೊಂದು ತುರಿಕಾಟ!
ಬನ್ನಿ ಸೋದರರೇ ಬನ್ನಿ ಬಾಂಧವರೇ ಹೃದಯ ಹೃದಯಗಳ ಬೆಸೆಯೋಣ
ಜಾತಿ-ಮತಗಳ ಭಾಷೆ-ಪ್ರಾಂತಗಳ ಭೇಧವ ಮರೆಯೋಣ
ಬಿದ್ದವರನು ಮೇಲೆತ್ತುವ ಬನ್ನಿ ಎಲ್ಲರು ಒಂದೆನ್ನೋಣ
ವಿವೇಕಾನಂದರ ಸ್ಮರಿಸೋಣ, ತಾಯಿ ಭಾರತಿಗೆ ನಮಿಸೋಣ
ಒಹ್. ಹೀಗೆ ಯಕಶ್ಚಿತ್ ಮಾತನಾಡುತ್ತ ತಿರುಗಾಡುವ ಗಿರಾಕಿ ನಾನು, ನಾನು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಅಂತ ಮೊದಲೇ ಹೇಳಿದ್ದರೆ ಬರೆಯುವ ಕಷ್ಟ ಇರುತ್ತಿರಲಿಲ್ಲ!. ಅಂದ ಹಾಗೆ ನೀವು ಮಾತನಾಡುವುದು ಬಾಯಿಯಿಂದಲೋ ಅಥವಾ……..
ಏಕೆ ಕುಮಾರ್? “ಹೃದಯ ಹೃದಯಗಳ ಬೆಸೆಯೋಣ” ಅನ್ನುವ ನಿಮಗೆ ಕೇವಲ ವಿವೇಕಾನಂದರ ನೆನಪಾಗುತ್ತದೆ. ಈದ್ ಮಿಲಾದ್ ಸಂದರ್ಭದಲ್ಲಿ ಪ್ರವಾದಿ ಮಹಮ್ಮದ್ ಅವರನ್ನೂ ನೆನಪಿಸಿಕೊಳ್ಳಬಹುದಿತ್ತಲ್ಲ?
[[Nagshetty Shetkar> ನಿಮಗೆ ಕೇವಲ ವಿವೇಕಾನಂದರ ನೆನಪಾಗುತ್ತದೆ. ಈದ್ ಮಿಲಾದ್ ಸಂದರ್ಭದಲ್ಲಿ ಪ್ರವಾದಿ ಮಹಮ್ಮದ್ ಅವರನ್ನೂ ನೆನಪಿಸಿಕೊಳ್ಳಬಹುದಿತ್ತಲ್ಲ?]]
ಅದು ನಿಮಗೆ ಈದ್ ಮಿಲಾದ್ ಸಂದರ್ಭವಿರಬಹುದು. ನಮಗೆ ಸಂಕ್ರಾಂತಿ ಹಬ್ಬದ ಸಂದರ್ಭ.
ನನಗೆ ನನ್ನ ದೇಶಕ್ಕೆ ಸೇರಿದವರು, ತಾಯ್ನಾಡಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವರು, ತಾಯ್ನಾಡಿಗಾಗಿ ಬದುಕಿದವರು, ತಾಯ್ನಾಡಿನ ಗೌರವವನ್ನು ಜಗತ್ತಿನಲ್ಲೆಲ್ಲಾ ಎತ್ತಿ ಹಿಡಿದವರು ಮೊದಲು ನೆನಪಾಗುತ್ತಾರೆ. ಅವರಿಗೇ ನನ್ನ ಮೊದಲ ಆದ್ಯತೆ. ಅವರ ಜಾತಿ-ಮತ-ಭಾಷೆ-ಪ್ರಾಂತಗಳ ಮೇಲೆ ನನ್ನ ಗೌರವಾದರಗಳು ನಿರ್ಧಾರಗೊಳ್ಳುವುದಿಲ್ಲ. ಜನವರಿ 12 ವಿವೇಕಾನಂದರ ಜನ್ಮದಿನ. ಮತ್ತು ಇದು ಅವರ 150ನೇ ಜನುಮ ದಿನೋತ್ಸವದ ವರುಷ. ಅವರನ್ನು ಪ್ರತಿಯೊಬ್ಬ ಭಾರತೀಯನೂ ನೆನಪಿಸಿಕೊಂಡು ಗೌರವಿಸಬೇಕಾದುದು ಸಹಜವಲ್ಲವೇ?
ನಿಮ್ಮ ಮಾತಿನಿಂದ ತಿಳಿಯುತ್ತಿರುವ ಸಂಗತಿಯೇನೆಂದರೆ, ನೀವು ವ್ಯಕ್ತಿಯ ಹೆಸರು ಹೇಳಿದ ಕೂಡಲೇ, ಅವರ ಜಾತಿ-ಮತಗಳನ್ನು ಊಹಿಸಿಯೇ ಮುಂದಿನ ಮಾತನಾಡುವಿರಿ. ವಿವೇಕಾನಂದರ ಹೆಸರು ಹೇಳಿದಾಗ, ಪೈಗಂಬರ್ ನೆನಪಾಗುವುದಿಲ್ಲವೇ ಎಂದು ಕೇಳುವುದರ ಅರ್ಥವೇನು? ಪೈಗಂಬರ್ ಅವರ ನೆನಪು ನನಗೆ ಆಗುವ ಅಗತ್ಯವಿಲ್ಲ. ಅವರು ಭಾರತಕ್ಕಾಗಿ ಏನು ಮಾಡಿದರೆನ್ನುವುದು ನನಗೆ ತಿಳಿದಿಲ್ಲ. ಅವರು ನನ್ನ ದೇಶಕ್ಕಾಗಿ ಏನಾದರೂ ಕೆಲಸ ಮಾಡಿದ್ದರೆ ದಯವಿಟ್ಟು ತಿಳಿಸಿಕೊಡಿ.
ನಿಮ್ಮ ಮೈಮನದಲ್ಲೂ ಜಾತೀಯ ವಿಷವೇ ತುಂಬಿರುವಂತೆ ಕಾಣಿಸುತ್ತಿದೆ. ಇಲ್ಲದಿದ್ದರೆ ವಿವೇಕಾನಂದರಲ್ಲೂ ಜಾತಿ-ಮತಯನ್ನೇ ಕಾಣುತ್ತಿರಲಿಲ್ಲ! ವಿವೇಕಾನಂದ ಎಂದ ಕೂಡಲೇ ಪ್ರತಿಯೊಬ್ಬ ಭಾರತೀಯನಲ್ಲೂ ಶಕ್ತಿಯ ವಿದ್ಯುತ್ಸಂಚಾರವಾಗುತ್ತದೆ, ಪ್ರತಿಯೊಬ್ಬ ಭಾರತೀಯನೂ ತನ್ನ ದೇಶದ ಕುರಿತಾಗಿ ಹೆಮ್ಮೆ ಪಡುವಂತಾಗುತ್ತದೆ, ಪ್ರತಿಯೊಬ್ಬ ಭಾರತೀಯನೂ ತಾಯಿ ಭಾರತಿಗಾಗಿ ತಾನೂ ಏನಾದರೂ ಮಾಡಬೇಕೆಂಡು ತವಕಿಸುತ್ತಾನೆ. ಆದರೆ, ನಿಮ್ಮ ವರ್ತನೆ ನೋಡಿದರೆ, ಪಾಕಿಸ್ತಾನವನ್ನೋ, ಇರಾಣ್ ಅನ್ನೋ ಪ್ರೀತಿಸುತ್ತಿರುವಂತೆ ಕಾಣುತ್ತಿದೆ!!
“ಈ ಎಡಪಂಥಿಗಳಲ್ಲಿ ಶುದ್ಧ ಪ್ರಾಮಾಣಿಕರು ಶೆ ೧ ರಷ್ಟು, ಉಳಿದವರೆಲ್ಲ ಗಂಜಿ ಗಿರಾಕಿಗಳು.” ದರ್ಗಾ ಸರ್ ಅವರಂತಹ ಸೂಫಿ ಶರಣರಿಗೆ ನಿಮ್ಮ ಸರ್ಟಿಫ್ಹಿಕೇಟ್ ಬೇಕೆ? ಮೊದಲು ನಿಮ್ಮ ಹೃದಯದಲ್ಲಿರುವ ನಂಜನ್ನು ತೊಳೆದುಕೊಳ್ಳಿ, ಆಮೇಲೆ ಮಿಕ್ಕವರ ಪ್ರಾಮಾಣಿಕತೆ ಬಗ್ಗೆ ಸರ್ಟಿಫಿಕೆಟ್ ಕೊಡಿ.
ನೀವೂ ಅಷ್ಟೆ. ಮೊದಲು ನಿಮ್ಮದನ್ನು ತೊಳೆದುಕೊಂಡು, ಆಮೇಲೆ ಉಳಿದವರ ತೊಳೆಯುವ ಯೋಚನೆ ಮಾಡಿ!.
ಮಿ. ಕುಮಾರ್, ಮುಸ್ಲೀಮರು ದೇಶಭಕ್ತರಲ್ಲ ಬದಲಿ ಪಾಕಿಸ್ಥಾನ/ಇರಾನಿಗೆ ನಿಷ್ಟರು ಎಂಬ ನಿಮ್ಮ ಅಭಿಪ್ರಾಯವೇ ಸಾರಿ ಹೇಳಿದೆ ನಿಮಗೆ ಮುಸ್ಲೀಮರ ಬಗ್ಗೆ ಎಷ್ಟೊಂದು ಪೂರ್ವಗ್ರಹಗಳಿವೆ ಎಂದು! ನಿಮ್ಮ ಮಟ್ಟಿಗೆ ಮುಸ್ಲೀಮರು ಮತ್ತಿತರ ಅಲ್ಪಸಂಖ್ಯಾತರು ಭಾರತದ ಪ್ರಜೆಗಳೇ ಅಲ್ಲ!
[[Nagshetty Shetkar> ಮಿ. ಕುಮಾರ್, ಮುಸ್ಲೀಮರು ದೇಶಭಕ್ತರಲ್ಲ ಬದಲಿ ಪಾಕಿಸ್ಥಾನ/ಇರಾನಿಗೆ ನಿಷ್ಟರು ಎಂಬ ನಿಮ್ಮ ಅಭಿಪ್ರಾಯವೇ ಸಾರಿ ಹೇಳಿದೆ ನಿಮಗೆ ಮುಸ್ಲೀಮರ ಬಗ್ಗೆ ಎಷ್ಟೊಂದು ಪೂರ್ವಗ್ರಹಗಳಿವೆ ಎಂದು! ನಿಮ್ಮ ಮಟ್ಟಿಗೆ ಮುಸ್ಲೀಮರು ಮತ್ತಿತರ ಅಲ್ಪಸಂಖ್ಯಾತರು ಭಾರತದ ಪ್ರಜೆಗಳೇ ಅಲ್ಲ!]]
ಸ್ವಾಮಿ ಶೇಟ್ಕರ್ ಸಾಹೇಬರೇ,
ಪೂರ್ವಾಗ್ರಹ ನನ್ನದೋ ಅಥವಾ ನಿಮ್ಮದೋ ಎಂಬುದನ್ನು ಒಮ್ಮೆ ಖಾತರಿ ಮಾಡಿಕೊಂಡು, ನಂತರ ಬರೆಯುವುದನ್ನು ಮುಂದುವರೆಸಿ.
ನಾನು ನನ್ನ ಬರಹದಲ್ಲಿ ಎಲ್ಲಿಯೂ ಮುಸಲ್ಮಾನರಲ್ಲಿ ದೇಶಭಕ್ತರಿಲ್ಲ ಎಂದು ತಿಳಿಸಿಯೇ ಇಲ್ಲ.
ವಿವೇಕಾನಂದರು ದೇಶಭಕ್ತರು ಎಂದರೆ ಮುಸಲ್ಮಾನರು ದೇಶಭಕ್ತರಲ್ಲ ಎಂದು ಅರ್ಥವೇನು?
ವಿವೇಕಾನಂದರನ್ನು ನೆನೆದ ಕೂಡಲೇ, ಪೈಗಂಬರ್ ಅವರನ್ನು ನೆನೆಯಿರಿ ಎನ್ನುವುದು ಯಾರ ಪೂರ್ವಾಗ್ರಹವನ್ನು ತೋರಿಸುತ್ತದೆ?
ವಿವೇಕಾನಂದರನ್ನು ಅವರ ಜನ್ಮ ದಿನದಂದು ಮತ್ತು ಅವರ 150ನೇ ವಾರ್ಷಿಕೋತ್ಸವದಂದು ನೆನೆಯುವುದನ್ನೂ ನೀವು ಟೀಕಿಸುವುದು ನೋಡಿದರೆ ಮತ್ತು ವಿವೇಕಾನಂದ ಎಂದ ಕೂಡಲೇ “ವಿವೇಕಾನಂದರು ಮುಸಲ್ಮಾನರಲ್ಲ; ನೀವು ಪೈಗಂಬರ್ ಅವರನ್ನು ನೆನೆದರೆ ಮಾತ್ರ ಜಾತ್ಯಾತೀತರು” ಎಂಬಂತಹ ಅರ್ಥ ಬರುವ ಮಾತುಗಳನ್ನಾಡುವುದನ್ನು ನೋಡಿದರೆ, ಒಂದು ಮಾತು ನೆನಪಾಗುತ್ತಿದೆ:
ಹಾವಿಗೆ ಹಲ್ಲಿನಲ್ಲಿ ವಿಷವಾದರೆ. ಸೋಗಿನ ಜಾತ್ಯಾತೀತರಿಗೆ ಮೈಯೆಲ್ಲಾ ವಿಷ!
ಈ ದೇಶದ ಕುರಿತಾಗಿ ಒಳ್ಳೆಯ ಮಾತನ್ನಾಡಿದರೆ, ಈ ದೇಶಕ್ಕಾಗಿ ಕೆಲಸ ಮಾಡಿದವರ ಕುರಿತಾಗಿ ಒಳ್ಳೆಯ ಮಾತನ್ನಾಡಿದರೆ, ಅದನ್ನು ಟೀಕಿಸುವ, ಅದನ್ನು ಸಹಿಸದ, ಅದರಲ್ಲೂ ಜಾತಿ-ಮತಗಳನ್ನೇ ಕಾಣುವ, ನೀವು ಆಡುತ್ತಿರುವ ಒಂದೊಂದೊ ಮಾತು ಕೂಡಾ ವಿಷವನ್ನೂ ಸೂಸುತ್ತಿದೆ ಎನ್ನುವುದನ್ನು ತಿಳಿಯಿರಿ.
ವಿವೇಕಾನಂದರಲ್ಲೂ ಜಾತಿಯನ್ನು ಕಾಣುವುದಕ್ಕೆ ನಿಮಗೆ ನಾಚಿಕೆ ಎನಿಸುವುದಿಲ್ಲವೇ!?
ಮತಾಂಧ ಟೀಪು ಸುಲ್ತಾನ, ಔರಂಗಜೇಬ, ಮಹಮ್ಮದ್ ಘೋರಿ, ಮಹಮ್ಮದ್ ಘಜನಿ, ದೇಶವನ್ನೇ ತುಂಡರಿಸಿದ ಮಹಮ್ಮದ್ ಆಲಿ ಜಿನ್ನಾ, ಪಾಕಿಸ್ತಾನದ ಕಲ್ಪನೆಯನ್ನು ಹರಿಯಬಿಟ್ಟ ಮಹಮ್ಮದ್ ಇಖ್ಬಾಲ್. ಸ್ವಾಮಿ ಶ್ರದ್ಧಾನಂದರನ್ನು ಕೊಲೆಗೈದ ರಷೀದ್, ಜಗತ್ತಿಗೇ ಕಂಟಕನಾದ ಓಸಾಮಾ ಬಿನ್ ಲಡೇನ್, ಮುಂತಾದವರನ್ನು ಹೊಗಳಿ ನನ್ನ ಕವನವನ್ನು ಬರೆದಿದ್ದರೆ, ನೀವು ನನ್ನನ್ನು ಜಾತ್ಯಾತೀತನೆಂದು ಕೊಂಡಾಡುತ್ತಿದ್ದರೆನಿಸುತ್ತದೆ.
ಈ ರೀತಿಯ ಸೋಗಿನ ಜಾತ್ಯಾತೀತತೆಗೆ ಧಿಃಕ್ಕಾರವಿರಲಿ. ಜಾತ್ಯಾತೀತತೆಯ ಹೆಸರಿನಲ್ಲಿ ದೇಶದ್ರೋಹಿಗಳನ್ನು ಕೊಂಡಾಡುವವರಿಗೆ, ದೇಶದ ಶತೃಗಳನ್ನೂ ಅಪ್ಪುವವರಿಗೆ ಈ ದೇಶದಲ್ಲಿ ಜಾಗವಿಲ್ಲ ಎನ್ನುವುದು ನೆನಪಿರಲಿ.
ದೇಶಕ್ಕಾಗಿ ಹೋರಾಡಿದ ಅಶ್ವಾಖ್ ಉಲ್ಲಾ ಖಾನ್, ಪರಮ ವೀರ ಚಕ್ರ ಅಬ್ದುಲ್ ಹಮೀದ್, ಶ್ರೇಷ್ಠ ಕವಿ ರಸಖಾನ್, ಸಂಗೀತಗಾರರಾದ ಉಸ್ತಾದ್ ಅಮ್ಜದ್ ಆಲಿ ಖಾನ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಉಸ್ತಾದ್ ಝಾಕಿರ್ ಹುಸ್ಸೇನ್, ರಾಷ್ಟ್ರಾಧ್ಯಕ್ಷರಾಗಿದ್ದ ಅಬ್ದುಲ್ ಕಲಾಂ, ಮುಂತಾದವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಇವರನ್ನು ನೆನೆಸುವುದು ಅವರು ಮುಸಲ್ಮಾನರೆಂಬ ಕಾರಣಕ್ಕೆ ಅಲ್ಲ. ಅಬ್ದುಲ್ ಕಲಾಂ ಅವರನ್ನು ನೆನೆಸಿದಾಗ ಅವರು ಮುಸಲ್ಮಾನರೆನ್ನುವುದು ನಗಣ್ಯ. ವಿವೇಕಾನಂದರನ್ನು ನೆನೆಸಿದಾಗ ಅವರು ಹಿಂದುವೆನ್ನುವುದು ನಗಣ್ಯ. ಏಸುದಾಸರನ್ನು ನೆನೆಸಿದಾಗ ಅವರು ಕ್ರೈಸ್ತರೆನ್ನುವುದು ನಗಣ್ಯ. ರಾಜಾ ರಣಜಿತ್ ಸಿಂಗ್ ಅವರನ್ನು ನೆನೆಸಿದಾಗ ಅವರು ಸಿಖ್ಖರೆನ್ನುವುದು ನಗಣ್ಯ. ಶಿವಾಜಿಯನ್ನು ನೆನೆಸಿದಾಗ ಅವರು ಮರಾಠರೆನ್ನುವುದು ನಗಣ್ಯ. ಇವರೆಲ್ಲರೂ ಭಾರತಪುತ್ರರು ಎನ್ನುವುದೇ ಮುಖ್ಯ.
ವ್ಯಕ್ತಿಯನ್ನು ಜಾತಿಯಿಂದ ಅಳೆಯುವವರೆಗೆ ನಿಮಗೆ ಸತ್ಯ ಗೋಚರವಾಗುವುದಿಲ್ಲ!
ಕುಮಾರ್ ಅವರೆ, ವಿವೇಕಾನಂದ ಅವರು ಹಿಂದೂ ಧರ್ಮದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದರು ಹಾಗೂ ಆ ಧರ್ಮದ ನಾಯಕರಾಗಿ ಪ್ರವರ್ಧಮಾನಕ್ಕೆ ಬಂದಿದ್ದರು. ಹಲವು ಮತಧರ್ಮಗಳ ನಾಡಿನ ಒಂದು ಮತಧರ್ಮದ ನಾಯಕರನ್ನು ತಾವು ನೆನಪಿಸಿಕೊಳ್ಳುತ್ತೀರಿ ಆದರೆ ಮತ್ತೊಂದು ಮತಧರ್ಮದ ಪ್ರವಾದಿಯನ್ನು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲೂ ನೆನೆಸಿಕೊಳ್ಳುವುದಿಲ್ಲ. ಇದು ಮತೀಯ ವಕ್ರತೆಯಲ್ಲದೆ ಮತ್ತೇನು?!!
ಏಕೆ ನಿಮ್ಮ ಎಡಚರ ಸಭೆಯಲ್ಲಿ ಈ ಪದ್ಯಕ್ಕೆ ಕರತಾಡನ ಬೀಳುವದಿಲ್ಲವೆ? ಹೌದು ಮರೆತಿದ್ದೆ ನಿಮ್ಮ ತಾಯಿ ಭಾರತಿ ಅಲ್ಲ ನೋಡಿ . ಅವಳನ್ನು ಹೊಗಳುವದು ವಟು ವಿಪ್ರರು ಮಾತ್ರವೆಂದು ನೆನಪಿರಲಿಲ್ಲ. ನೀವು ಯಾವ ದೇಶದಲ್ಲಿ ವಾಸಿಸುತ್ತೀರಿ?? ಬಾಂಗ್ಲಾ ಪಾಕಿಸ್ತಾನಗಳಲ್ಲಿನಾ?? ತಾಯಿಯನ್ನು ಹೊಗಳಿದರೆ ನಿಮಗೆ ಸಿಟ್ಟು ಬರುತ್ತದೆ ಎಂದಾದರೆ ನೀವು ದಾರಿ ತಪ್ಪಿದ ಮಗನೇ ಇರ್ಬೇಕು ಅಲ್ಲವೆ?? ಯಾವ ಮಗನೂ ತನ್ನ ತಾಯಿಯನ್ನು ಬಿಟ್ಟು ಕೊಡುವದಿಲ್ಲ . ನೀವಿಂಥ ಮಗಾರಿ??
ಆನಂದ್ ಅವರೆ, ತಮ್ಮ ಬರವಣಿಗೆಯ ಧಾಟಿ ಹಾಗೂ ಧೋರಣೆಗಳನ್ನು ಗಮನಿಸಿದರೆ ತಾವೊಬ್ಬ ಸಂಘ ಪರಿವಾರದಿಂದ ಟ್ರೈನಿಂಗ್ ಪಡೆದ ನಮೋ ಸೈಬರ್ ಸ್ನೈಪರ್ ಅನ್ನುವುದು ಸ್ಪಷ್ತವಾಗಿ ತಿಳಿಯುತ್ತದೆ. ಬಾಂಗ್ಲಾದೇಶ ಹಾಗೂ ಪಾಕಿಸ್ಥಾನದಲ್ಲಿ ಬದುಕುತ್ತಿರುವವರೂ ಮನುಷ್ಯರು ಎಂಬ ಸರಳ ಸತ್ಯ ಗೊತ್ತಿಲ್ಲದವರ ಹಾಗೆ ವರ್ತಿಸುತ್ತೀರಲ್ಲ! ನೀವೇನು ನಾಟ್ಜಿ ಜರ್ಮನಿಯಲ್ಲಿ ಹಿಟ್ಲರನ ಅನುಯಾಯಿಗಳಿಗೆ ಹುಟ್ಟಿದವರಾ?
“ಬಾಂಗ್ಲಾದೇಶ ಹಾಗೂ ಪಾಕಿಸ್ಥಾನದಲ್ಲಿ ಬದುಕುತ್ತಿರುವವರೂ ಮನುಷ್ಯರು ಎಂಬ ಸರಳ ಸತ್ಯ ಗೊತ್ತಿಲ್ಲದವರ ಹಾಗೆ ವರ್ತಿಸುತ್ತೀರಲ್ಲ!”
ವಾಹ್! ಪರಮಾವಧಿ ಸೂಫಿ ಶರಣ! ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಸಿಕ್ಕರೂ ಸಿಗಬಹುದು!!
ರಿ ಕುಮಾರ್, ಇವರಿಗೆ ಈ ಕವನ ಕೇಳಿಸುವುದು ಒಂದೇ ಕೋಣನ ಮುಂದೆ ಕಿನ್ನರಿ ನುಡಿಸುವುದು ಒಂದೇ!. ಇವಕ್ಕೆ ತವಕ,ತಲ್ಲಣ ತುಂಬಿರುವ ಕರುಳು ಕೊಯ್ಯುವ ಕವನಗಳು (ಎರಡು ಪೆಗ್ ಬಿದ್ದ ಮೇಲೆ ಹುಟ್ಟಿದಂತವು) ಬೇಕು.
ಈಗ ಪೊರಕೆ ಹಿಡಿತೇನೆ ಅಂತೀರಲ್ಲ ಇಷ್ಟು ದಿವಸ ಏನು ನಿಮ್ಮ ಎಡಬಿಡಂಗಿಪಂಥಿಗಳು ಕಡ್ಲೆ,ಶೆಂಗಾ ಹುರಿಯುತ್ತ ಕೂತಿದ್ದರೆ? ಪ.ಬಂಗಾಳ, ಕೇರಳಗಳಲ್ಲಿ ನೀವು ಮಾಡಿದ ಉದ್ಧಾರವೇನು ಹೇಳುತ್ತೀರ ಸ್ವಲ್ಪ? ಜನ ದರಿದ್ದರಾಗಿಯೇ ಇರಬೇಕು, ಅವರ ಹೆಸರಲ್ಲಿ ‘ಹೋರಾಟ’ ಎಂಬುದೊಂದನ್ನು ಮಾಡಿ (ಕೆಲವರು ಲೇಖನದಲ್ಲೇ ಹೋರಾಟ,ಸಾಮಾಜಿಕ ಸಮಾನತೆ, ದಾರಿದ್ರ್ಯ ನಿವಾರಣೆ ಮಾಡ್ತಾರೆ!) ಮೇಲೆ ಕೂತ ಜನ ಗಂಜಿ, ಪೀಠ, ಪ್ರಶಸ್ತಿ ಮಾಡ್ಕೊಬೇಕು..ಈ ಎಡಪಂಥಿಗಳಲ್ಲಿ ಶುದ್ಧ ಪ್ರಾಮಾಣಿಕರು ಶೆ ೧ ರಷ್ಟು, ಉಳಿದವರೆಲ್ಲ ಗಂಜಿ ಗಿರಾಕಿಗಳು. ನಾಚಿಕೆ ಅಂದಿದ್ದು ಏನು ಇಲ್ಲವೆ ನಿಮ್ಮಗಳಿಗೆ?
ಸಾಮಾಜಿಕ ಹೋರಾಟಗಳ ಬಗ್ಗೆ ಮಾತನಾಡಲು ನಿಮಗೆ ನೈತಿಕ ಪ್ರಜ್ಞೆ ಇದೆಯೆ?
ಒಹ್ ಫುಲ್ ನೀವೇ ಗುತ್ತಿಗೆ ಹಿಡಿದಿರೊ ಹಾಗೆ ಕಾಣಿಸ್ತಿದೆ! ಎಡಬಿಡಂಗಿಗಳ ಬಾಯಲ್ಲಿ ನೈತಿಕ ಪ್ರಜ್ಞೆಯ ಪಾಠ!!
ನಿಮಗೆ ಪ್ರಜ್ಞೆ ಇದೆಯೆ ಎಂದು ನಾನು ಕೇಳಬೇಕಾಗಿದೆ. ಅಲ್ಲಾ ನಾನು ಪಾಕಿಸ್ತಾನ ಬಾಂಗ್ಲಾದಲ್ಲಿ ವಾಸಿಸುತ್ತೀರಾ ಎಂದು ಕೇಳಿದರೆ ಎಂಥ ಕೊಳಕು ಉತ್ತರಾ ನಿಮ್ಮದು? ನಿಮ್ಮ ಮನಸ್ಥಿತಿ ಎಂಥ ಕೊಳಕು? ನಾಟ್ಜಿ ಜರ್ಮನಿಯಲ್ಲಿ ಹಿಟ್ಲರನ ಅನುಯಾಯಿಗಳಿಗೆ ಹುಟ್ಟಿದವರಾ? ಎಂದು ಹುಟ್ತಿನ ಬಗ್ಗೆ ಮಾತನಾಡುತ್ತೀದ್ದೀರಲ್ಲಾ ನಾನೂ ನಿಮ್ಮ ಹಾಗೆ ನೀವೆನು ರಕ್ತಕುಡಿಯುವ ತಾಲಿಬಾನಿಗಳಿಗೆ ಹುಟ್ಟೀದ್ದೀರಾ ಎಂದು ನಿಮ್ಮನ್ನು ಕೇಳಬಹುದಾಗಿತ್ತು. ಆದರೆ ನಾನು ಬೆಳೆದು ಬಂದ ಸಂಸ್ಕಾರ ಹಾಗೆ ಮಾತನಾಡಲು ನನ್ನ ನಾಲಿಗೆಯನ್ನು ಬಿಡುವದಿಲ್ಲ. ನಿಮ್ಮಂಥ ಸಂಸ್ಕಾರ ಹೀನರಿಗೆ ಮಾತ್ರ ಇಂಥ ಪದಗಳು ನೆನಪಾಗುತ್ತವೆ. ನಿನ್ನ ಕುಲವ ನಿನ್ನ ನಾಲಿಗೆಯರುಹಿತು. ಎಂದು ಹರಿಶ್ಚಂದ್ರ ಕಾವ್ಯದಲ್ಲಿ ರಾಘವಾಂಕ ಹೇಳುತ್ತಾನೆ. ಅದು ಸತ್ಯವೇ ಆಗಿದೆ. ನೀವೆಂಥ ಸುಸಂಸ್ಕೃತರು ಎಂದು ನಿಮ್ಮನಾಲಿಗೆ ಹೇಳಿದೆ. ಅಲ್ಲಾರಿ ತಾಯಿ ಶಾರದೆಯ ಕೃಪೆಯಿಂದ ಓದು ಬರಹ ಕಂಪ್ಯೂಟರ್ ಜ್ಞಾನ ಸಂಪಾದಿಸಿದ್ದೀರಿ. ಅದನ್ನು ಯೋಗ್ಯ ಕೆಲಸಕ್ಕೆ ಬಳಸಿಕೊಳ್ಳಿ. ಕೊಳಕು ಮಾತನಾಡಲು ಅಲ್ಲ. ಯಾವುದೇ ಚರ್ಚೆ ಇರಲಿ ವಿಷಯಕ್ಕೆ ತಕ್ಕಂತೆ ನೀವು ಮಾತನಾಡುವದೇ ಇಲ್ಲ್. ಬರೇ ಸೆಗಣಿ ಬಕೆಟ್ ಹಿಡಿದು ನಿಲ್ಲುತ್ತೀರಿ. ನಿಮ್ಮ ಕಾಮೆಂಟ್ ಗಳು ಎಂದೂ ವಿಷಯಕ್ಕೆ ತಕ್ಕಂತೆ ಇರುವದೇ ಇಲ್ಲ. ವಿಚಾರ ಸ್ವಾತಂತ್ರ್ಯವನ್ನು ನಾನು ಎಂದೂ ಅಲ್ಲಗಳೆಯುವದಿಲ್ಲ. ಆದರೆ ನಿಮ್ಮಂತೆ ವಿಷಯವೆ ಇರದೆ ಕೊಳಕು ಮಾತನಾಡುವದಕ್ಕೆ ನಿಲುಮೆಯನ್ನು ವೇದಿಕೆ ಮಾಡಿಕೊಂಡವರಿಗೆ ಏನನ್ನಬೇಕೋ???? ನನ್ನಲ್ಲಂತೂ ಶಬ್ದಗಳಿಲ್ಲ. ಯಾವ ಕಾಮೆಂಟ್ಗಳಿಗೂ ಕೇಳಿದ ಪ್ರಶ್ನೆಗಳಿಗೆ ನೀವು ಉತ್ತರಿಸದೇ ಸಗಣಿ ಎರಚುತ್ತೀರಿ. ನಾನು ಕೇಳಿದ ಪ್ರಶ್ನೆ ತಾಯಿ ಭಾರತಿಯನ್ನು ಹೊಗಳುವದು ಹಾಗೂ ಹೊಗಳುವಂಥ ಪದ್ಯಗಳಿಗೆ ಚಪ್ಪಾಳೆ ಹಾಕುವದು ಇವು ಕೇವಲ ವಿಪ್ರರಿಗೆ ಮಾತ್ರ ಸೀಮಿತವೆ??? ಉಳಿದವರಿಗೆ ಭಾರತಿ ತಾಯಿಯಲ್ಲವೆ?? ನೀವು ಭಾರತೀಯರಲ್ಲವೆ?? ನಿಮ್ಮ ತಾಯಿಯನ್ನು ಹೊಗಳಿದಾಗ ನಿಮಗೆ ರೋಮಾಂಚನವಾಗುವದಿಲ್ಲವೆ?? ಇಷ್ಟೊಂದು ಸಭ್ಯವಾಗಿ ನಾನು ನಿಮ್ಮನ್ನು ಪ್ರಶ್ನೆ ಮಾಡಿದ್ದೇನೆ. ನೀವು ಮಾತ್ರ ಕೊಳಕು ಮಾತಿನ ಉತ್ತರ ನೀಡುತ್ತೀರಿ. ಇದನ್ನು ನೋಡಿದರೆ ನನಗೆ ನೀವೊಬ್ಬ ಮತಿಭ್ರಾಂತಿ ಎನಿಸುತ್ತದೆ. ಇದಕ್ಕಿಂತ ಹೆಚ್ಚು ಬರೆಯಲು ನಿಮ್ಮನ್ನು ನಿಂದಿಸಲು ನನ್ನ ಸಂಸ್ಕಾರ ಅಡ್ಡ ಬರುತ್ತಿದೆ. ಅಂಥ ಹೀನ ಕೆಲಸ ನಿಮ್ಮಂಥವರಿಗಿರಲಿ.
ನಿಮ್ಮ ಮನಸ್ಥಿತಿ ಎಂಥ ಕೊಳಕು? ನಾಟ್ಜಿ ಜರ್ಮನಿಯಲ್ಲಿ ಹಿಟ್ಲರನ ಅನುಯಾಯಿಗಳಿಗೆ ಹುಟ್ಟಿದವರಾ? ಎಂದು ಹುಟ್ತಿನ ಬಗ್ಗೆ ಮಾತನಾಡುತ್ತೀದ್ದೀರಲ್ಲಾ ನಾನೂ ನಿಮ್ಮ ಹಾಗೆ ನೀವೆನು ರಕ್ತಕುಡಿಯುವ ತಾಲಿಬಾನಿಗಳಿಗೆ ಹುಟ್ಟೀದ್ದೀರಾ ಎಂದು ನಿಮ್ಮನ್ನು ಕೇಳಬಹುದಾಗಿತ್ತು. ಆದರೆ ನಾನು ಬೆಳೆದು ಬಂದ ಸಂಸ್ಕಾರ ಹಾಗೆ ಮಾತನಾಡಲು ನನ್ನ ನಾಲಿಗೆಯನ್ನು ಬಿಡುವದಿಲ್ಲ. ನಿಮ್ಮಂಥ ಸಂಸ್ಕಾರ ಹೀನರಿಗೆ ಮಾತ್ರ ಇಂಥ ಪದಗಳು ನೆನಪಾಗುತ್ತವೆ. ನಿನ್ನ ಕುಲವ ನಿನ್ನ ನಾಲಿಗೆಯರುಹಿತು. ಎಂದು ಹರಿಶ್ಚಂದ್ರ ಕಾವ್ಯದಲ್ಲಿ ರಾಘವಾಂಕ ಹೇಳುತ್ತಾನೆ. ಅದು ಸತ್ಯವೇ ಆಗಿದೆ. ನೀವೆಂಥ ಸುಸಂಸ್ಕೃತರು ಎಂದು ನಿಮ್ಮನಾಲಿಗೆ ಹೇಳಿದೆ. ಅಲ್ಲಾರಿ ತಾಯಿ ಶಾರದೆಯ ಕೃಪೆಯಿಂದ ಓದು ಬರಹ ಕಂಪ್ಯೂಟರ್ ಜ್ಞಾನ ಸಂಪಾದಿಸಿದ್ದೀರಿ. ಅದನ್ನು ಯೋಗ್ಯ ಕೆಲಸಕ್ಕೆ ಬಳಸಿಕೊಳ್ಳಿ. ಕೊಳಕು ಮಾತನಾಡಲು ಅಲ್ಲ. ಯಾವುದೇ ಚರ್ಚೆ ಇರಲಿ ವಿಷಯಕ್ಕೆ ತಕ್ಕಂತೆ ನೀವು ಮಾತನಾಡುವದೇ ಇಲ್ಲ್. ಬರೇ ಸೆಗಣಿ ಬಕೆಟ್ ಹಿಡಿದು ನಿಲ್ಲುತ್ತೀರಿ. ನಿಮ್ಮ ಕಾಮೆಂಟ್ ಗಳು ಎಂದೂ ವಿಷಯಕ್ಕೆ ತಕ್ಕಂತೆ ಇರುವದೇ ಇಲ್ಲ. ವಿಚಾರ ಸ್ವಾತಂತ್ರ್ಯವನ್ನು ನಾನು ಎಂದೂ ಅಲ್ಲಗಳೆಯುವದಿಲ್ಲ. ಆದರೆ ನಿಮ್ಮಂತೆ ವಿಷಯವೆ ಇರದೆ ಕೊಳಕು ಮಾತನಾಡುವದಕ್ಕೆ ನಿಲುಮೆಯನ್ನು ವೇದಿಕೆ ಮಾಡಿಕೊಂಡವರಿಗೆ ಏನನ್ನಬೇಕೋ???? ನನ್ನಲ್ಲಂತೂ ಶಬ್ದಗಳಿಲ್ಲ. ಯಾವ ಕಾಮೆಂಟ್ಗಳಿಗೂ ಕೇಳಿದ ಪ್ರಶ್ನೆಗಳಿಗೆ ನೀವು ಉತ್ತರಿಸದೇ ಸಗಣಿ ಎರಚುತ್ತೀರಿ. ನಾನು ಕೇಳಿದ ಪ್ರಶ್ನೆ ತಾಯಿ ಭಾರತಿಯನ್ನು ಹೊಗಳುವದು ಹಾಗೂ ಹೊಗಳುವಂಥ ಪದ್ಯಗಳಿಗೆ ಚಪ್ಪಾಳೆ ಹಾಕುವದು ಇವು ಕೇವಲ ವಿಪ್ರರಿಗೆ ಮಾತ್ರ ಸೀಮಿತವೆ??? ಉಳಿದವರಿಗೆ ಭಾರತಿ ತಾಯಿಯಲ್ಲವೆ?? ನೀವು ಭಾರತೀಯರಲ್ಲವೆ?? ನಿಮ್ಮ ತಾಯಿಯನ್ನು ಹೊಗಳಿದಾಗ ನಿಮಗೆ ರೋಮಾಂಚನವಾಗುವದಿಲ್ಲವೆ?? ಇಷ್ಟೊಂದು ಸಭ್ಯವಾಗಿ ನಾನು ನಿಮ್ಮನ್ನು ಪ್ರಶ್ನೆ ಮಾಡಿದ್ದೇನೆ. ನೀವು ಮಾತ್ರ ಕೊಳಕು ಮಾತಿನ ಉತ್ತರ ನೀಡುತ್ತೀರಿ. ಇದನ್ನು ನೋಡಿದರೆ ನನಗೆ ನೀವೊಬ್ಬ ಮತಿಭ್ರಾಂತಿ ಎನಿಸುತ್ತದೆ. ಇದಕ್ಕಿಂತ ಹೆಚ್ಚು ಬರೆಯಲು ನಿಮ್ಮನ್ನು ನಿಂದಿಸಲು ನನ್ನ ಸಂಸ್ಕಾರ ಅಡ್ಡ ಬರುತ್ತಿದೆ. ಅಂಥ ಹೀನ ಕೆಲಸ ನಿಮ್ಮಂಥವರಿಗಿರಲಿ. ಆನಂದ್ ಅವರೆ ಈ ಕೊಳಕು ಮನುಷ್ಯನಬಗ್ಗೆ ಸರಿಯಾಗಿ ಬರೆದಿದ್ದೀರಾ. ಧನ್ಯವಾದಗಳು. ಆದರೆ ಈ ಕೊಳಕು ಮನುಷ್ಯರಿಗೆ ಇಂಥಾ ಭಾಷೆ ಅರ್ಥವಾಗಬೇಕಲ್ಲಾರಿ…????
ಒಮ್ಮೆ ಆಕಾಶ್ ಇನ್ನೊಮ್ಮೆ ಆನಂದ್! ನಿಮ್ಮ ಸಂಸ್ಕಾರ ಎಂಥದ್ದು ಅಂತ ಇದರಿಂದಲೇ ತಿಳಿದುಬರುತ್ತದೆ. ನೀವು ನಕಲಿ ಶ್ಯಾಮ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ!
ತಾವು ಹೇಳುವುದರಲ್ಲಿ ಅರ್ಥ ಇಲ್ಲ ಎನಿಸಿದಾಗ ಈ ಎಡಬಿಡಂಗಿ ನಕ್ಸಲರುಗಳಿಗೆ ಕವನಗಳು ತೆವಲುಗಳಾಗಿ ನೆನಪಾಗುತ್ತವೆ ಪ್ರಕಟಗೊಳ್ಳುತ್ತವೆ
ತಮ್ಮನ್ನು ತಾವೇ “ಪ್ರಗತಿಶೀಲರು”, “ಜಾತ್ಯಾತೀತವಾದಿಗಳು” ಎಂದು ಕರೆದುಕೊಳ್ಳುವವರಿಗೆ ಇರುವುದು ಒಂದೇ ಊರುಗೋಲು – ಅದೇ “ಜಾತ್ಯಾತೀತ” ಎನ್ನುವ ಹಳಸಲು ಪದ. ತಮ್ಮ ವಿರೋಧಿಗಳನ್ನು ಹೊಡೆಯಲು, ಅದನ್ನೇ “ಕೋಮುವಾದ” ಎನ್ನುವ ಕೋಲನ್ನಾಗಿ ತಿರುಗಿಸಿಕೊಳ್ಳುತ್ತಾರೆ. ಅವರಿಗೆ “ಜಾತ್ಯಾತೀತ” ಎನ್ನುವ ಪದದ ಅರ್ಥವೇನೆಂದು ಕೇಳಲು ಹೋಗಬೇಡಿ. ಹಾಗೆ ಕೇಳಿದವರೇ “ಕೋಮುವಾದಿ”ಗಳೆನ್ನಿಸಿಕೊಳ್ಳುತ್ತಾರೆ. ಇನ್ನು ಇವರು ಹೇಳಿದ್ದನ್ನೆಲ್ಲಾ ಪ್ರಶ್ನಿಸದೆ ಒಪ್ಪಿಕೊಂಡುಬಿಡಬೇಕು. ಅವರು ಹೇಳುವುದನ್ನು ಸಮರ್ಥಿಸಿಕೊಳ್ಳಲು, ಅವರಿಗೆ ಇತಿಹಾಸದ ಸತ್ಯವೇ ಬೇಕಾಗಿಲ್ಲ. ಏಕೆಂದರೆ, ಅವರ ವಾದವೆಲ್ಲಾ ನಿಂತಿರುವುದು, ಅವರ ಗುಂಪಿಗೇ ಸೇರಿದ “Eminent Historians” ಬರೆದಿರುವ ಸುಳ್ಳು ಇತಿಹಾಸ.
ಹೀಗಾಗಿ, ಇವರು “ಸತ್ಯ”ವನ್ನು ಒಪ್ಪಿಕೊಳ್ಳಲಾರರು ಮತ್ತು ತಮ್ಮ ವಾದ ಬಿದ್ದು ಹೋಗುವುದು ಖಚಿತವಾದಾಗ, ಉಕ್ಕುಕ್ಕಿ ಬರುವ ದುಃಖವು ಕವನವಾಗಿ ಹರಿಯುತ್ತದೆ ಅಷ್ಟೇ!!
ಸತ್ಯ ಹೇಳಿದ್ದೀರಿ.
ನಿನ್ನೆ ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳ ಬಗ್ಗೆ ರಾಲಿ ನಡೆಸಿದರು. ಅಲ್ಲಿ ನೀವು ಕಾಣಿಸಲಿಲ್ಲ ನನಗೆ ಮನೋಹರ್. ನಿಮ್ಮ ಭಾಜಪವಂತೂ ಸಲಿಂಗ ಕಾಮವನ್ನು ಅಪ್ರಾಕೃತಿಕ ಅಂತ ತೀರ್ಪು ಕೊಟ್ಟು ಲೈಂಗಿಕ ಅಲ್ಪಸಂಖ್ಯಾತರ ಗೋರಿ ತೋಡಲು ಮುಂದಾಗಿದೆ. ಗೋದ್ರಾದಲ್ಲಿ ಮತೀಯ ಅಲ್ಪಸಂಖ್ಯಾತರ ಕತೆ ಮುಗಿಸಿ ಆಯಿತು ಈಗ ಲೈಂಗಿಕ ಅಲ್ಪಸಂಖ್ಯಾತರದ್ದು ಸರಣಿ. ನಾಳೆ?
ಒಹ್..ನೀವು ಇದ್ರಾ ಆ ರ್ಯಾಲಿಯಲ್ಲಿ. ಪಾಪ, ನಿಮ್ಮ ಪಾಡು ನೋಡಿ ಆ ಗುರುವಿಗೆ ಎಷ್ಡು ಬೇಜಾರಾಗುತ್ತೊ!. ಅವರ ಕಣ್ಣ ಮುಂದೆ ನಿಮ್ಮ ನಾಶ ಆಗುತ್ತಾ ಇದೆ. ತಮ್ಮ ಧರ್ಮಕ್ಕೆ ಸೇರಿಸಿ ಶಿಷ್ಯನನ್ನು ಉಳಿಸಿಕೊಳ್ಳೋಣ ಅಂದರೆ ಎಲ್ಲ ಮುಲ್ಲಾಗಳು ಕೂಡ ಇದರ ವಿರುದ್ಧ!. ಕೇಳಿ ನೋಡಿ ಬೇಕಾದರೆ ನಿಮ್ಮ ಗುರುವರ್ಯರಿಗೆ.
ಮುಂದೆ ಯಾರ ಸರಣಿ ಅಂತಾನೆ?. ಈ ಎಡಬಿಡಂಗಿಗಳ ಸರಣಿ ಮೊದಲು ಬಂದು ಅವರು ನಿರ್ನಾಮವಾಗಬೇಕು. ಏನಂತೀರಿ?
Eminent historians is really good book…
ಎಲ್ಲ ಎಡಚರು ಓದಲೇಬೇಕಾದ ಪುಸ್ತಕ.
ನಾಗರಾಜ ಸರ ಕೋಟಿ ಪ್ರಣಾಮಗಳು.. _/I\_ ನಿಜವಾಗಲೂ ಈ ವಿಷಯ ಸ್ವಲ್ಪವೂ ಗೊತ್ತಿರಲಿಲ್ಲಾ..
ಆನಂದ ಅವರು ನಿಮ್ಮನು ಚನ್ನಾಗಿ ತೊಳೆದಿದ್ದಾರೆ. ಅದನ್ನು ಇನ್ನೊಮ್ಮೆ ಎಲ್ಲರೂ ಓದಲೆಂದು ನಾನು ಪುನಃ ಕಾಪಿ ಪೇಸ್ಟ್ ಮಾಡಿದೆ. ನೀವು ನನ್ನಂತೆ ಪರರ ಬಗೆದೊಡೆ ಎನ್ನುತ್ತಾರಲ್ಲಾ ಹಾಗೆ ನಕಲಿ ಎಂದು ಆನಂದರನ್ನು ಟೀಕಿಸಿದ್ದೀರಿ. ಸಭ್ಯ ಆನಂದ್ ಕೊಳಕು ನುಡಿಗೆ ಸೆಗಣಿ ಮೇಲೆ ಕಲ್ಲು ಎರಚುವದು ಬೇಡವೆಂದು ಸುಮ್ಮನಿದ್ದಾರೆನಿಸುತ್ತದೆ.
” ನಾನು ಪುನಃ ಕಾಪಿ ಪೇಸ್ಟ್ ಮಾಡಿದೆ.” ಸ್ವಂತ ವಿಚಾರವಿಲ್ಲದ ಸಗಣಿ ಹುಳು!
ಮೂರು ಮಾತಿಗೊಮ್ಮೆ ದರ್ಗಾ ಸರ್ ದರ್ಗಾ ಸರ್ ಎಂದು ಬಡಬಡಿಸುವ ಮನುಷ್ಯ(?)ನಿಂದ ಸ್ವಂತ ಆಲೋಚನೆಯ ಬೋಧನೆ!!!
ನಾನು ಸಗಣಿ ಹುಳು. ಹೇಗಿದ್ದರೂ ನೆಕ್ಕಿ ಸ್ವಚ್ಛ ಗೊಳಿಸಲು ನೀವಿದ್ದೀರಲ್ಲ??
[[” ನಾನು ಪುನಃ ಕಾಪಿ ಪೇಸ್ಟ್ ಮಾಡಿದೆ.” ಸ್ವಂತ ವಿಚಾರವಿಲ್ಲದ ಸಗಣಿ ಹುಳು!]]
ನಿಮ್ಮನ್ನು ಮುಖತಃ ಭೇಟಿ ಮಾಡದಿದ್ದರೂ, ನಿಮ್ಮ ಬರಹಗಳು ನಿಮ್ಮ ಸಂಸ್ಕಾರದ ಕುರಿತಾಗಿ ತಿಳಿಸುತ್ತದೆ. ಬರವಣಿಗೆಯ ಭಾಷೆಯ ಮೇಲೆ ಹಿಡಿತವಿದ್ದರೆ, ನೀವೂ ಸ್ವಲ್ಪ ಗೌರವ ಸಂಪಾದಿಸಬಹುದು.
ಆಕಾಶ್ ಅವರು ಹೇಳಿದ ಮಾತಿನ ಅರ್ಥ ನಿಮಗೆ ಆಗಲಿಲ್ಲ ಎನಿಸುತ್ತದೆ.
ಪ್ರತಿಕ್ರಿಯೆಯನ್ನು ಬರೆಯುವಾಗ, ತಮ್ಮ ಪ್ರತಿಕ್ರಿಯೆ ಯಾವ ಬರಹಕ್ಕೆ ಎಂದು ತಿಳಿಸಲು, ಆ ಹಿಂದಿನ ಪ್ರತಿಕ್ರಿಯೆ/ಬರಹವನ್ನು Quote ಮಾಡುವುದು ಒಂದು ಉತ್ತಮ ಅಭ್ಯಾಸ. ಇಲ್ಲದಿದ್ದರೆ, ಚರ್ಚೆಯ ದಾಟಿ ತಪ್ಪಬಹುದು. ಅದಕ್ಕಾಗಿ, ಆಕಾಶ್ ಅವರು, ಹಿಂದಿನ ಚರ್ಚೆಯನ್ನು ಉದ್ಧರಿಸಿದ್ದಾರೆ ಅಷ್ಟೇ!
ಅದನ್ನು ಅಪಾರ್ಥ ಮಾಡಿಕೊಂಡು, ನೀವು ಬರೆದಿರುವ ಮಾತುಗಳನ್ನು ಒಮ್ಮೆ ಓದಿ ನೋಡಿ, ನಿಮಗೇ ಅಸಹ್ಯ ಹುಟ್ಟಿಸಬಹುದು.
“ನಿಮ್ಮ ಬರಹಗಳು ನಿಮ್ಮ ಸಂಸ್ಕಾರದ ಕುರಿತಾಗಿ ತಿಳಿಸುತ್ತದೆ. ಬರವಣಿಗೆಯ ಭಾಷೆಯ ಮೇಲೆ ಹಿಡಿತವಿದ್ದರೆ, ನೀವೂ ಸ್ವಲ್ಪ ಗೌರವ ಸಂಪಾದಿಸಬಹುದು.” ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ.
[[ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ]]
ಕನ್ನಡಿಯಲ್ಲಿ ಮುಖ ನೋಡಿಕೊಂಡ ನಂತರವೇ ಈ ಮಾತು ಹೇಳುತ್ತಿರುವುದು.
“ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಎಂಬ ಬಸವಣ್ಣನವರ ವಚನ ಮರೆತು ಹೋಯಿತೇ?
ಬೇರೆಯವರು ತಪ್ಪು ಮಾಡಿದರೆ ನೀವಲ್ಲವೇ ತಿದ್ದಬೇಕು. ಅದನ್ನು ಬಿಟ್ಟು, ನಿಮ್ಮ ಬಾಯಿಂದಲೇ ‘ಸೆಗಣಿ’ಯಂತ ಮಾತುಗಳು ಉದುರಿದರೆ, ಇನ್ನು ಜಗವನ್ನು ತಿದ್ದುವವರಾರು…..!?
[[Nagshetty Shetkar> ಮತ್ತೊಂದು ಮತಧರ್ಮದ ಪ್ರವಾದಿಯನ್ನು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲೂ ನೆನೆಸಿಕೊಳ್ಳುವುದಿಲ್ಲ. ]]
ಈದ್ ಮಿಲಾದ್ ಗೆ ಭಾರತದಲ್ಲಿ ರಜೆಯಿದೆ, ಆದರೆ ಸೌದಿಯಲ್ಲಿ ರಜೆ ಇಲ್ಲ!
ಆಶ್ಚರ್ಯದ ಸಂಗತಿಯೆಂದರೆ, ಸೌದಿ ಅರೇಬಿಯಾದ ಜನರಿಗೆ ಅದರ ಮಾಹಿತಿ ಕೂಡಾ ಇಲ್ಲ.
ಹೀಗೇಕೆ ಗೊತ್ತೇ!?
ಈ ಆಚರಣೆಗೆ ಇಸ್ಲಾಮಿನ ಮನ್ನಣೆ ಇಲ್ಲ, ಪ್ರವಾದಿಗಳಾಗಲೀ, ಅವರ ಅನುಚರರೆ ಆಗಲೀ ಇಂಥ ಆಚರಣೆಗಳ ಪರವಾಗಿರಲಿಲ್ಲ.
ನಿಮಗೆ ನನ್ನ ಮಾತಿನ ಕುರಿತಾಗಿ ಅನುಮಾನಗಳಿದ್ದರೆ, ಈ ಕೊಂಡಿಗಳನ್ನೊಮ್ಮೆ ಓದಿ ನೋಡಿ:
http://www.quranandhadith.com/eid-milad-un-nabi-and-other-celebrations/
http://turntoislam.com/community/threads/reasons-why-we-should-not-celebrate-eid-milad-al-nabi-the-prophets-birthday.83401/
[[Nagshetty Shetkar> ಮತ್ತೊಂದು ಮತಧರ್ಮದ ಪ್ರವಾದಿಯನ್ನು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲೂ ನೆನೆಸಿಕೊಳ್ಳುವುದಿಲ್ಲ. ]]
ಈದ್ ಮಿಲಾದ್ ಗೆ ಭಾರತದಲ್ಲಿ ರಜೆಯಿದೆ, ಆದರೆ ಸೌದಿಯಲ್ಲಿ ರಜೆ ಇಲ್ಲ!
ಆಶ್ಚರ್ಯದ ಸಂಗತಿಯೆಂದರೆ, ಸೌದಿ ಅರೇಬಿಯಾದ ಜನರಿಗೆ ಅದರ ಮಾಹಿತಿ ಕೂಡಾ ಇಲ್ಲ.
ಹೀಗೇಕೆ ಗೊತ್ತೇ!?
ಈ ಆಚರಣೆಗೆ ಇಸ್ಲಾಮಿನ ಮನ್ನಣೆ ಇಲ್ಲ, ಪ್ರವಾದಿಗಳಾಗಲೀ, ಅವರ ಅನುಚರರೆ ಆಗಲೀ ಇಂಥ ಆಚರಣೆಗಳ ಪರವಾಗಿರಲಿಲ್ಲ.
ನಿಮಗೆ ನನ್ನ ಮಾತಿನ ಕುರಿತಾಗಿ ಅನುಮಾನಗಳಿದ್ದರೆ, ಈ ಕೊಂಡಿಗಳನ್ನೊಮ್ಮೆ ಓದಿ ನೋಡಿ:
http://turntoislam.com/community/threads/reasons-why-we-should-not-celebrate-eid-milad-al-nabi-the-prophets-birthday.83401/
http://www.quranandhadith.com/eid-milad-un-nabi-and-other-celebrations/
What is this!!? We are reading something serious, important and genuine about a freedom fighter! You are not only digressing but indulging in dirty discourse.
ನಿಜಕ್ಕೂ ಗೊತ್ತಿಲ್ಲದ ಎಷ್ಟೊ ವಿಷಯವನ್ನು ಅತೀ ಸೂಕ್ಷ್ಮವಾಗಿ, ಅಚ್ಚುಕಟ್ಟಾಗಿ, ಮಂಡಿಸಿದ್ದೀರಿ. ಇನ್ನು ಇದೇ ರೀತಿ ನಿಮ್ಮ ಬರವಣೆಗೆ ಸದಾ ಪ್ರಕಟವಾಗಲಿ. ದನ್ಯವಾದಗಳು