ವಿಷಯದ ವಿವರಗಳಿಗೆ ದಾಟಿರಿ

ಜನವರಿ 21, 2014

67

ತೆಲಿಯಲೇರು ರಾಮ ಭಕ್ತಿ ಮಾರ್ಗಮುನು

‍ನಿಲುಮೆ ಮೂಲಕ

– ಹಂಸಾನಂದಿ

ತ್ಯಾಗರಾಜಇಂದು ಪುಷ್ಯ ಬಹುಳ ಪಂಚಮಿ. 1847ರಲ್ಲಿ ತ್ಯಾಗರಾಜರು ಸಮಾಧಿ ಹೊಂದಿದ ದಿನ.

ಈ ಮೊದಲೂ ತ್ಯಾಗರಾಜರ ಆರಾಧನೆಯ ಸಮಯದಲ್ಲಿ , ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದೆ. ಇವತ್ತು ಅದಕ್ಕಾಗೇ ನಾನು ಆಯ್ದುಕೊಂಡಿದ್ದು ‘ತೆಲಿಯಲೇರು ರಾಮ ಭಕ್ತಿಮಾರ್ಗಮುನು’ ಎಂಬ ಧೇನುಕ ರಾಗದ ರಚನೆ. ಈ ರಚನೆಗೆ ನಾನು ಮಾಡಿದ ಕನ್ನಡ ಅನುವಾದ ಇಲ್ಲಿದೆ.

ತಿಳಿಯಲಾರರು ಭಕ್ತಿಮಾರ್ಗವನ್ನು ||ತಿಳಿಯಲಾರರು ||

ತಿರೆಯೆಲ್ಲವ ತಿರುಗುತ್ತ ಕನ
-ವರಿಸುತಿಹರೆಲ್ಲ ರಾಮ || ತಿಳಿಯಲಾರರು ||

ಹಾಸಿಗೆಯಿಂದೆದ್ದು ಮುಳುಗು ಹಾಕಿ ಬೂದಿ
ಪೂಸಿ ತೋರಿಕೆಗೆ ಬೆರಳನೆಣಿಸಿ
ಕಾಸು ಗಳಿಕೆಯಲ್ಲೇ ತಮ್ಮ ಮನವನಿಡುತ
ಲೇಸು ತ್ಯಾಗರಾಜ ವಿನುತನ|| ತಿಳಿಯಲಾರರು ||

ಹೀಗೆ ಅನುವಾದಿಸುವಲ್ಲಿ ನಾನು ಮುಖ್ಯವಾಗಿ ಅನುವಾದವನ್ನು ಮೂಲದ ಮಟ್ಟಿನಲ್ಲಿಯೇ, ಅದೇ ಸಂಗತಿಗಳನ್ನೇ ಉಳಿಸಿಕೊಂಡು ಹಾಡಲು ಸಾಧ್ಯವಾಗಬೇಕು ಅನ್ನುವುದಕ್ಕೆ ಹೆಚ್ಚು ಗಮನವಿಟ್ಟಿದ್ದೇನೆ. ಹಾಗಾಗಿ, ಮೂಲದಲ್ಲಿದ್ದ ಕೆಲವು ಪದಗಳು ಅನುವಾದದಲ್ಲಿ ಇಲ್ಲದಿದ್ದರೂ, ಅಥವಾ ಅಲ್ಲಿಲ್ಲದ ಪದಗಳು ಅನುವಾದದಲ್ಲಿ ಬಂದರೂ, ಒಟ್ಟಾರೆ ಭಾವಾರ್ಥವನ್ನು ಮಾತ್ರ ಬದಲಿಸಿಲ್ಲ.ಅದರ ಜೊತೆಗೇ ಪ್ರಾಸವನ್ನೂ ಒಂದು ಮಟ್ಟಕ್ಕೆ ಉಳಿಸಿಕೊಂಡಿದ್ದೇನೆ ಅನ್ನುವುದು ನನಗೆ ಸಮಾಧಾನ ತರುವ ಸಂಗತಿ.

ಈ ರೀತಿ ಅನುವಾದಗಳು ಬೇಕೇ? ಅನ್ನುವುದು ಕೆಲವರ ಪ್ರಶ್ನೆ. ಅದು ಒಂದು ಮಟ್ಟಕ್ಕೆ ಸರಿಯೂ ಹೌದು. ತ್ಯಾಗರಾಜರ ಸಂಗೀತದ ಅಭಿಮಾನಿಯಾಗಿ, ನನಗೂ ಪೂರ್ತಿ ಅರ್ಥವಾಗದಿದ್ದಾಗಲೂ ಆ ರಚನೆಗಳನ್ನ ಅವರು ಬರೆದಂತೆ ಕೇಳುವುದೇ ಮೆಚ್ಚುಗೆ ಅನ್ನುವುದು ನಿಜವಾದ ಮಾತು. ಆದರೆ ಅದೇ ವೇಳೆಗೆ, ಅರ್ಥವನ್ನೂ ತಿಳಿಸುವಂತೆ, ಸಂಗೀತವನ್ನೂ ಉಳಿಸಿಕೊಂಡು ಮಾಡುವ ಪ್ರಯತ್ನದಲ್ಲಿ ತಪ್ಪಿಲ್ಲವೆಂದೂ ನನಗೆ ಮೊದಲಿಂದಲೂ ಅನ್ನಿಸುತ್ತಿತ್ತು. ಡಾ.ಬಾಲಮುರಳಿಕೃಷ್ಣರಂತಹ ಮೇಧಾವಿಗಳು ಪುರಂದರ ದಾಸರ ದೇವರನಾಮಗಳನ್ನು ತೆಲುಗಿಗೆ ಅನುವಾದಿಸಿ ಸೊಗಸಾಗಿ ಹಾಡಿರುವುದನ್ನು ಕೇಳಿ ಆ ರೀತಿಯ ಪ್ರಯತ್ನದಲ್ಲಿ ತಪ್ಪೇನಿಲ್ಲವೆಂದು ತಿಳಿದು, ಈ ರೀತಿ ಹಲವಾರು ಕೃತಿಗಳನ್ನು ಕನ್ನಡಿಸಿದ್ದೇನೆ.

ಧೇನುಕ ತ್ಯಾಗರಾಜರು ಬಳಕೆಗೆ ತಂದ ರಾಗಗಳಲ್ಲಿ ಒಂದು . ಅವರ ಮೊದಲು ಈ ರಾಗದಲ್ಲಿ ಯಾರೂ ಕೃತಿ ರಚಿಸಿದ ಹಾಗೆ ತೋರುವುದಿಲ್ಲ.

ಕೊ: ಮೂಲ ಕೃತಿ, ಇಂಗ್ಲಿಷ್ ಅನುವಾದದೊಂದಿಗೆ ಇಲ್ಲಿದೆ.

67 ಟಿಪ್ಪಣಿಗಳು Post a comment
  1. SSNK's avatar
    ಜನ 22 2014

    ಉತ್ತಮ ಪ್ರಯತ್ನ. ತೆಲಗು ಬರದ ನನ್ನಂತಹವರಿಗೆ ಅನುವಾದವು ಉಪಯುಕ್ತವೆನಿಸುತ್ತದೆ. ಧನ್ಯವಾದಗಳು.

    ಉತ್ತರ
  2. Akash's avatar
    Akash
    ಜನ 22 2014

    ತ್ಯಾಗರಾಜರು ತಮಿಳಿಗರೆಂದು ಕೇಳಿದ್ದೆ .

    ಉತ್ತರ
  3. neelanjana's avatar
    ಜನ 22 2014

    ತ್ಯಾಗರಾಜರು ತಮಿಳುನಾಡಿನ ತಿರುವೈಯ್ಯಾರಿನಲ್ಲೇ ಬಾಳಿ ಬದುಕಿದವರು. ಆದರೆ ಅವರ ಮನೆ ಮಾತು ತೆಲುಗಾಗಿದ್ದರಿಂದ ಅವರು ತಮ್ಮ ರಚನೆಗಳಿಗೆ ತೆಲುಗನ್ನು ಆಯ್ದುಕೊಂಡಿರಬೇಕು,

    ಉತ್ತರ
  4. Akash's avatar
    Akash
    ಜನ 22 2014

    ತ್ಯಾಗರಾಜರ ಕುರಿತ ನನ್ನ ಪ್ರಶ್ನೆಗೆ ಉತ್ತರಿಸಿದ್ದಾಗಿ ತುಂಬಾ ಅಭಿನಂದನೆಗಳು.

    ಉತ್ತರ
  5. Nagshetty Shetkar's avatar
    Nagshetty Shetkar
    ಜನ 23 2014

    ಬ್ರಾಹ್ಮಣ್ಯವನ್ನು ಮೀರದ ವೈದಿಕ ಕ್ರಮದ ಭಕ್ತಿಯಿಂದ ನಾಡಿನ ದಮನಿತರಿಗೆ ಯಾವ ಪ್ರಯೋಜನವೂ ಇಲ್ಲ. ಕರ್ನಾಟಕ ಸಂಗೀತ ವು ಶೋಷಕ ಸಂಸ್ಕೃತಿಯನ್ನೇ ಮೆರೆಸುವ ಕೃತಿಗಳನ್ನು ತ್ಯಜಿಸಿ ಕ್ರಾಂತಿಯ ಸಮಾನತೆಯನ್ನು ಬಿತ್ತರಿಸುವ ಕೃತಿಗಳನ್ನು ಅಳವಡಿಸಿಕೊಳ್ಳತಕ್ಕದ್ದು.

    ಉತ್ತರ
  6. Akash's avatar
    Akash
    ಜನ 23 2014

    ಬರೇ ಇದೇ ಆಯ್ತಲ್ಲರೀ ನಿಮ್ಮ ಹಾಡು . ಟೀಕಾಸುರ ಸಾಬರೆ [ಕರ್ನಾಟಕ ಸಂಗೀತ ವು ಶೋಷಕ ಸಂಸ್ಕೃತಿಯನ್ನೇ ಮೆರೆಸುವ ಕೃತಿಗಳನ್ನು ತ್ಯಜಿಸಿ ಕ್ರಾಂತಿಯ ಸಮಾನತೆಯನ್ನು ಬಿತ್ತರಿಸುವ ಕೃತಿಗಳನ್ನು ಅಳವಡಿಸಿಕೊಳ್ಳತಕ್ಕದ್ದು.] ಎಂದು ಆರ್ಡರ ಮಾಡುತ್ತೀರಲ್ಲಾ? ನೀವೇ ಯಾಕೆ ಆಪ್ರಯತ್ನ ಮಾಡಬಾರದು?? ನಿಮ್ಮನ್ನು ಕೇಳಿ ಹಾಡಬೆಕು. ಕುಣಿಯಬೇಕು. ನೀವೇನು ಸಾಮ್ರಾಟರಾ?? ನಾವು ಪ್ರಜಾಪ್ರಭುತ್ವ ಕಾಲದಲ್ಲಿದ್ದೇವೋ ಅರಸೊತ್ತಿಗೆ ಕಾಲದಲ್ಲಿದ್ದೇವೋ??

    ಉತ್ತರ
    • Nagshetty Shetkar's avatar
      Nagshetty Shetkar
      ಜನ 23 2014

      ಶಾಸ್ತ್ರೀಯ ಸಂಗೀತವು ಜೀವಪರವಾಗಿರಬೇಕು, ತನ್ನ ಪ್ರತಿಗಾಮಿ ಅಂಶಗಳನ್ನು ಅಳಿಸಿ ಪುರೋಗಾಮಿ ದೃಷ್ಟಿಕೋಣ ಅಳವಡಿಸಕೊಳ್ಳತಕ್ಕದ್ದು. ಪ್ರಜಾಪ್ರಭುತ್ವದಲ್ಲಿ ಜೀವವಿರೋಧಿಯಾದ ಯಾವುದಕ್ಕೂ ಸ್ಥಾನವಿಲ್ಲ.

      ಉತ್ತರ
      • Manohar's avatar
        Manohar
        ಜನ 23 2014

        ಇನ್ನು ಮುಂದೆ ಗದ್ದರನ ಹಾಡುಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಹಾಡಬೇಕು!. ಅಪ್ಪಣೆಯಾಗಲಿ ಮಹಾಪ್ರಭುಗಳೆ.

        ಉತ್ತರ
  7. Akash's avatar
    Akash
    ಜನ 23 2014

    [[ಶಾಸ್ತ್ರೀಯ ಸಂಗೀತವು ಜೀವಪರವಾಗಿರಬೇಕು, ತನ್ನ ಪ್ರತಿಗಾಮಿ ಅಂಶಗಳನ್ನು ಅಳಿಸಿ ಪುರೋಗಾಮಿ ದೃಷ್ಟಿಕೋಣ ಅಳವಡಿಸಕೊಳ್ಳತಕ್ಕದ್ದು]] ಮತ್ತೆ ಆರ್ಡರ ಮಾಡುತ್ತೀರಲ್ಲಾ?? ಜೀವವಿರೋಧಿಯಾದ ಯಾವ ಅಂಶಗಳು ಶಾಸ್ತ್ರೀಯ ಸಂಗೀತದಲ್ಲಿ ಇವೆ?? ಆಧಾರ ಸಮೇತ ಹೇಳಿ . ”ಒಲ್ಲದ ಗಂಡನೆಗೆ ಮೊಸರಲ್ಲೂ ಕಲ್ಲು”.

    ಉತ್ತರ
  8. Akash's avatar
    Akash
    ಜನ 23 2014

    ಸಾರಿರಿ ಶೆಟ್ಕರ್ ಸಾಬರೆ ನನಗೆ ಸರಿಯಾಗಿ ಅರ್ಥವೇ ಆಗಿರಲಿಲ್ಲ. ನನ್ನ ಬುದ್ಧಿಗೊಂದಿಷ್ಟು. ಛೇ ಛೇ ನೀವು ಶಾಸ್ತ್ರೀಯ ಸಂಗೀತ ಜೀವವಿರೋಧಿ ಎಂದು ಹೇಳಿದ್ದೂ ಈಗ ಅರ್ಥ ಆತ ನೋಡಿರಿ. ಏನಂದರ ಕರ್ನಾಟಕ ಶಾಸ್ತ್ರೀಯ ಸಂಗೀತದಾಗ ಬರೆ ಬ್ರಾಹ್ಮಣ ಜಾತಿಯವರಿದ್ದಾರೆ ನೋಡ್ರಿ. ಅಂದ ಮ್ಯಾಲ ಅದು ಜೀವ ವಿರೋಧಿ ಅಲ್ಲೆನು ಮತ್ತ?? ಅದನ್ನೆಂಗ ಹೊಗಳೂದರಿ??!!!! ಛೆ ಛೆ ಛೆ ಪಾಪ??

    ಉತ್ತರ
    • Nagshetty Shetkar's avatar
      Nagshetty Shetkar
      ಜನ 24 2014

      “ಶಾಸ್ತ್ರೀಯ ಸಂಗೀತದಾಗ ಬರೆ ಬ್ರಾಹ್ಮಣ ಜಾತಿಯವರಿದ್ದಾರೆ ನೋಡ್ರಿ. ಅಂದ ಮ್ಯಾಲ ಅದು ಜೀವ ವಿರೋಧಿ ಅಲ್ಲೆನು ಮತ್ತ??”

      ಬ್ರಾಹ್ಮಣ ಜಾತಿಯ = ಪ್ರತಿಗಾಮಿ. This is your conclusion not mine.

      ಉತ್ತರ
  9. Hamsanandi (@hamsanandi)'s avatar
    ಜನ 24 2014

    ಸಂಗೀತ ಹಾಡೋದು ‘ನಾಡಿನ ದಮನಿತ’ರಿಗೇ ಇರಬೇಕು ಅಂತ ಏನಾದರೂ ಠರಾವು ತಂದಿದ್ದೀರೋ ಹೇಗೆ?

    ಉತ್ತರ
    • Nagshetty Shetkar's avatar
      Nagshetty Shetkar
      ಜನ 24 2014

      ಸಂಗೀತ ಹಾಡೋದು ‘ನಾಡಿನ ದಮನಿತ’ರಿಗೇ ಇರಬೇಕು. ಶಾಸ್ತ್ರೀಯ ಸಂಗೀತವು ಜೀವಪರವಾಗಿರಬೇಕು.

      ಉತ್ತರ
  10. Hamsanandi (@hamsanandi)'s avatar
    ಜನ 24 2014

    ಅಷ್ಟಕ್ಕೂ ಈ ರಚನೆಯಲ್ಲಿ ಅದು ಯಾರು ಯಾರನ್ನ ತುಳಿದರು, ಏನು ಕಥೆ, ಜೀವ ವಿರೋಧ ಎಲ್ಲಿದೆ ಅಂತ ಹುಡುಕೋಣ ಅಂತ ಎರಡೆರಡು ಸಲ ಕನ್ನಡಕ ಹಾಕ್ಕೊಂಡು ಓದಿದೆ .. ಏನೂ ಸಿಕ್ತಿಲ್ಲವಲ್ಲ!

    ಉತ್ತರ
    • Nagshetty Shetkar's avatar
      Nagshetty Shetkar
      ಜನ 24 2014

      ಬ್ರಾಹ್ಮಣ್ಯವನ್ನು ಮೀರದ ವೈದಿಕ ಕ್ರಮದ ಭಕ್ತಿಯಿಂದ ನಾಡಿನ ದಮನಿತರಿಗೆ ಯಾವ ಪ್ರಯೋಜನವೂ ಇಲ್ಲ. ಕರ್ನಾಟಕ ಸಂಗೀತ ವು ಶೋಷಕ ಸಂಸ್ಕೃತಿಯನ್ನೇ ಮೆರೆಸುವ ಕೃತಿಗಳನ್ನು ತ್ಯಜಿಸಿ ಕ್ರಾಂತಿಯ ಸಮಾನತೆಯನ್ನು ಬಿತ್ತರಿಸುವ ಕೃತಿಗಳನ್ನು ಅಳವಡಿಸಿಕೊಳ್ಳತಕ್ಕದ್ದು.

      ಉತ್ತರ
      • ನವೀನ's avatar
        ನವೀನ
        ಜನ 24 2014

        ಶೆಟ್ಕರ್ ಸರ್, ಯಾರ ಕೃತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂಬುದನ್ನು ಉದಾಹರಣೆ ಕೊಟ್ಟರೆ ಮಹದುಪಕಾರವಾಗುತ್ತದೆ

        ಉತ್ತರ
        • Nagshetty Shetkar's avatar
          Nagshetty Shetkar
          ಜನ 24 2014

          ಶರಣರ ವಚನಗಳನ್ನೇಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಅಳವಡಿಸಿಕೊಂಡಿಲ್ಲ!!

          ಉತ್ತರ
          • SSNK's avatar
            ಜನ 24 2014

            [[Nagshetty Shetkar> ಶರಣರ ವಚನಗಳನ್ನೇಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಅಳವಡಿಸಿಕೊಂಡಿಲ್ಲ]]

            “ಶರಣರ ವಚನವನ್ನು Computer Softwareನಲ್ಲಿ ಅಳವಡಿಸಿಕೊಂಡಿಲ್ಲ; ಹೀಗಾಗಿ, ಅದು ಜೀವ ವಿರೋಧಿಯಾಗಿದೆ ಮತ್ತು ಶೋಷಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ”, ಎಂದ ಹಾಗಾಯಿತು ನಿಮ್ಮ ಮಾತಿನ ಅರ್ಥ!!
            ಶರಣರ ವಚನವನ್ನು Pop Musicಗೂ ಅಳವಡಿಸಲಾಗುವುದಿಲ್ಲ; ಶರಣರ ವಚನವನ್ನು “Classical Western Music”ಗೂ ಅಳವಡಿಸಲಾಗುವುದಿಲ್ಲ. ನಿಮ್ಮ ಪ್ರಕಾರ ಇವೆಲ್ಲವೂ ಜೀವ ವಿರೋಧಿಯೇ!?

            ಭಾವ-ರಾಗ-ತಾಳ – ಈ ಮೂರರ ಸಮ್ಮಿಲನವೇ ಸಂಗೀತ. ಶಾಸ್ತ್ರೀಯ ಸಂಗೀತವೆನ್ನುವುದು ವ್ಯಾಕರಣ ಅಥವಾ ಗಣಿತವಿದ್ದಂತೆ. ಅದಕ್ಕೊಂದು ನೀತಿ-ನಿಯಮ ಇರುತ್ತದೆ. ಆ ನೀತಿ-ನಿಯಮಗಳಿಗನುಸಾರ ಇರುವ ಪದ್ಯಗಳಿಗೆ ಮಾತ್ರ ಸಂಗೀತವನ್ನು ಅಳವಡಿಸಬಹುದು. ಆ ರೀತಿಯಲ್ಲಿ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಬಹುದಾದ ರೀತಿಯಲ್ಲಿ ಶರಣರ ವಚನಗಳಿದ್ದರೆ ಖಂಡಿತ ಅದನ್ನೂ ಅಳವಡಿಸಬಹುದು. ನನಗೆ ತಿಳಿದಿರುವಂತೆ ಶರಣರ ವಚನಗಳು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸುವ ರೀತಿಯಲ್ಲಿ ರಚಿತವಾಗಿಲ್ಲ. ನಿಮಗೆ ಅದು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅನುಗುಣವಾಗಿ ರಚಿತವಾಗಿದೆ ಎಂದು ಅನ್ನಿಸಿದರೆ, ದಯವಿಟ್ಟು ಅದನ್ನಿಲ್ಲಿ ನಿರೂಪಿಸಿ – ವಚನದ ಹೆಸರು, ಅದರ ಸಾಹಿತ್ಯ ಮತ್ತು ಅದಕ್ಕೆ ಹೇಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಳವಡಿಸಬಹುದು (ಯಾವ ರಾಗ, ತಾಳ, ಇತ್ಯಾದಿ ವಿವರಗಳು ಬೇಕು) ಎನುವುದನ್ನು ವಿವರಿಸಿ.

            ಉತ್ತರ
            • Nagshetty Shetkar's avatar
              Nagshetty Shetkar
              ಜನ 24 2014

              ನೀವೊಬ್ಬ ಅಧಿಕಪ್ರಸಂಗಿ! ನಾನು ಉತ್ತರ ಕೊಟ್ಟಿದ್ದು “ಯಾರ ಕೃತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂಬುದನ್ನು ಉದಾಹರಣೆ ಕೊಟ್ಟರೆ ಮಹದುಪಕಾರವಾಗುತ್ತದೆ” ಎಂಬ ನವೀನ ಅವರ ಪ್ರಶ್ನೆಗೆ. “ಶರಣರ ವಚನವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಅಳವಡಿಸಿಕೊಂಡಿಲ್ಲ; ಹೀಗಾಗಿ, ಅದು ಜೀವ ವಿರೋಧಿಯಾಗಿದೆ ಮತ್ತು ಶೋಷಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ” ಅಂತ ನಾನು ಹೇಳೇ ಇಲ್ಲ. ಹೀಗೆ ನಾನು ಹೇಳದೇ ಇರುವುದನ್ನು ನಾನು ಹೇಳಿದ್ದೇನೆ ಎಂದು ಚಂಡಿ ಹಿಡಿಯುವ ಮೊಂಡು ಕಮೆಣ್ಟಿಗರೇ ಜಾಸ್ತಿ ನಿಲುಮೆಯಲ್ಲಿ. ಅಥವಾ ಇವರಿಗೆಲ್ಲರಿಗೂ ಘೆಂಟ್ ಗುರು ಹೀಗೆ ನನ್ನನ್ನು ಅಟಾಕ್ ಮಾಡಲು ಹೇಳಿಕೊಟ್ಟಿದ್ದಾರಾ??

              ಉತ್ತರ
              • Manohar's avatar
                Manohar
                ಜನ 24 2014

                ಆಹಾ..ನಿಜಕ್ಕೂ ಟೈಂಪಾಸ್ ಕಡ್ಲೆಯೇ ಈ ಯಪ್ಪನ ವಾದಗಳು!

                “ಶಾಸ್ತ್ರೀಯ ಸಂಗೀತವು ಜೀವಪರವಾಗಿರಬೇಕು, ತನ್ನ ಪ್ರತಿಗಾಮಿ ಅಂಶಗಳನ್ನು ಅಳಿಸಿ ಪುರೋಗಾಮಿ ದೃಷ್ಟಿಕೋಣ ಅಳವಡಿಸಕೊಳ್ಳತಕ್ಕದ್ದು. ಪ್ರಜಾಪ್ರಭುತ್ವದಲ್ಲಿ ಜೀವವಿರೋಧಿಯಾದ ಯಾವುದಕ್ಕೂ ಸ್ಥಾನವಿಲ್ಲ.”
                “ಸಂಗೀತ ಹಾಡೋದು ‘ನಾಡಿನ ದಮನಿತ’ರಿಗೇ ಇರಬೇಕು. ಶಾಸ್ತ್ರೀಯ ಸಂಗೀತವು ಜೀವಪರವಾಗಿರಬೇಕು.”
                “ಶರಣರ ವಚನಗಳನ್ನೇಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಅಳವಡಿಸಿಕೊಂಡಿಲ್ಲ!!”

                ಇವೆಲ್ಲ ಹೇಳಿ ಕೊನೆಯಲ್ಲಿ ಮತ್ತೆ ಯು-ಟರ್ನ!

                “ಶರಣರ ವಚನವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಅಳವಡಿಸಿಕೊಂಡಿಲ್ಲ; ಹೀಗಾಗಿ, ಅದು ಜೀವ ವಿರೋಧಿಯಾಗಿದೆ ಮತ್ತು ಶೋಷಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ” ಅಂತ ನಾನು ಹೇಳೇ ಇಲ್ಲ.

                ಓದುವವರಿಗೆ ಬಿಡಿ. ಕುದ್ದು ಈ ಮಹಾನುಭಾವರಿಗೆ ಅರ್ಥವಾದರೆ ಸಾಕು ತಾನು ಏನು ಬರೆದಿದ್ದೇನೆ. ತನ್ನ ನಿಲುವೇನೆಂದು.

                ಉತ್ತರ
                • Nagshetty Shetkar's avatar
                  Nagshetty Shetkar
                  ಜನ 24 2014

                  ಸರಿಯಾಗಿ ಓದುವುದನ್ನು ಕಲಿಯಿರಿ. ಶರಣರ ವಚನಗಳನ್ನು ಅಳವಡಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ಸಂಗೀತ ಜೀವವಿರೋಧಿ ಅಂತ ಎಲ್ಲೂ ನಾನು ಹೇಳಿಲ್ಲ. ಜೀವಪರವಾಗುವ ದೃಷ್ಟಿಯಿಂದ ವಚನಗಳನ್ನು ಅಳವಡಿಸಿಕೊಳ್ಳುವುದು ಒಂದು ಹೆಜ್ಜೆಯಷ್ಟೇ! ದೇವಸ್ಥಾನಗಳಲ್ಲಿ ರಾಮಮಂದಿರಗಳಲ್ಲಿ ಕಾರ್ಯಕ್ರಮ ಕೊಡುವದನ್ನು ಸಂಗೀತಗಾರರು ನಿಲ್ಲಿಸತಕ್ಕದ್ದು. ಇದು ಇನ್ನೊಂದು ಹೆಜ್ಜೆ. ಹೀಗೆ ಇನ್ನೂ ಅನೇಕ ಹೆಜ್ಜೆಗಳನ್ನು ಹಾಕಿ ಮುಂದೆ ಸಾಗಬೇಕಾಗಿದೆ ಮಧ್ಯಯುಗದಿಂದ.

                  ಉತ್ತರ
                  • Manohar's avatar
                    Manohar
                    ಜನ 24 2014

                    ವಿಚಾರ ಮಾಡಿ ಬರೆದಿದ್ದರೆ ತಾನೇ ನೀವು ಬರೆದಿದ್ದು ನಿಮಗರ್ಥವಾಗುವುದು. ಕೊಳೆತ ವಿಚಾರ, ಕೈಯಲ್ಲಿ ರಾಡಿಯ ಬಕೆಟ್ ಎತ್ತ ಚೆಲ್ಲಿದರೂ ರಾಡಿಯೇ!.

                    “ದೇವಸ್ಥಾನಗಳಲ್ಲಿ ರಾಮಮಂದಿರಗಳಲ್ಲಿ ಕಾರ್ಯಕ್ರಮ ಕೊಡುವದನ್ನು ಸಂಗೀತಗಾರರು ನಿಲ್ಲಿಸತಕ್ಕದ್ದು. ಇದು ಇನ್ನೊಂದು ಹೆಜ್ಜೆ. .”
                    ಅಪ್ಪಣೆ ಮಹಾಪ್ರಭುಗಳೆ. ಉಳಿದ ಹೆಜ್ಜೆಗಳನ್ನು ಕೂಡ ಹೇಳುವ ಕಷ್ಟ ತೆಗೆದುಕೊಳ್ಳಿ.
                    ತಾವು ಇಲ್ಲಿರುವ ಬದಲು ಮೂವತ್ತು ವರುಷಗಳ ಹಿಂದೆ ಪ.ಬಂಗಾಳ, ಕೇರಳಗಳಲ್ಲಿ ಪ್ರವಚನ ಸುರು ಮಾಡಿದಿದ್ದರೆ, ಇವೆಲ್ಲವೂ ನಿಂತು, ಮಾನವತೆಯ ಜೀವಸೆಲೆಗಳು ಉಕ್ಕಿ ಹರಿದು, ನೋಡುಗರ ಕಣ್ಣುಗಳಲ್ಲಿ ಆನಂದಭಾಷ್ಪಗಳು ಸುರಿದು, ಕಂಡ-ಕಂಡಲ್ಲಿ ನೀವು ಜಗತ್ ಪ್ರಸಿದ್ದರಾಗುತ್ತಿದ್ದೀರಿ.

                    ಉತ್ತರ
                    • Nagshetty Shetkar's avatar
                      Nagshetty Shetkar
                      ಜನ 24 2014

                      ನನ್ನ ಚಿಂತೆ ನಿಮಗೇತಕ್ಕೆ?

                    • Nagshetty Shetkar's avatar
                      Nagshetty Shetkar
                      ಜನ 24 2014

                      “ವಿಚಾರ ಮಾಡಿ ಬರೆದಿದ್ದರೆ ತಾನೇ ನೀವು ಬರೆದಿದ್ದು ನಿಮಗರ್ಥವಾಗುವುದು. ” ನೀವು ವಿಚಾರವಾದ ಸಿ ಎಸ್ ಎಲ್ ಸಿ ಯ ಖಾಸಗಿ ಸ್ವತ್ತು ಎಂಬ ಗತ್ತಿನಲ್ಲಿ ಮಾತನಾಡುತ್ತಿದ್ದೀರಿ!

                    • Manohar's avatar
                      Manohar
                      ಜನ 24 2014

                      “ನನ್ನ ಚಿಂತೆ ನಿಮಗೇತಕ್ಕೆ?”
                      ನಿಮ್ಮ ಅದ್ಭುತ ಪ್ರತಿಭೆ ನಮ್ಮಂತಹ ಪಾಮರರ ಮುಂದೆ ಖಾಲಿಯಾಗುತ್ತಿದೆಯಲ್ಲ ಎಂಬ ಚಿಂತೆ. ಬಂಗಾಳ, ಕೇರಳದಲ್ಲಾದರೆ ಹಿಂದೆ ಮಾನವೀಯತೆಯ ತುಡಿತ ತುಂಬಿ ತುಳುಕುವ ಸರಕಾರವಿತ್ತು. ತಾವು ಅಲ್ಲಿ ಹೋಗಿದ್ದರೆ, ನಿಮ್ಮ ಆಶಯಗಳು ನಿಜವಾಗಿ, ಕನಿಷ್ಠ ಎರಡು ರಾಜ್ಯಗಳಲ್ಲಾದರೂ ಪ್ರಗತಿಯ ಗಂಗೆ ಉಕ್ಕಿ ಹರಿಯುವುದನ್ನು ಜಗ ನೋಡಬಹುದಿತ್ತು ಅನಿಸಿತು.

                    • Manohar's avatar
                      Manohar
                      ಜನ 24 2014

                      “ನೀವು ವಿಚಾರವಾದ ಸಿ ಎಸ್ ಎಲ್ ಸಿ ಯ ಖಾಸಗಿ ಸ್ವತ್ತು ಎಂಬ ಗತ್ತಿನಲ್ಲಿ ಮಾತನಾಡುತ್ತಿದ್ದೀರಿ!”
                      ನಿಮ್ಮ ವಿಚಾರಧಾರೆ, ವಿಚಾರವಾದದ ಬಗ್ಗೆ ಚೆನ್ನಾಗಿ ಗೊತ್ತು. ಎಲ್ಲರೂ ನಿಮ್ಮ ಹಾಗೆ ಯಾವುದಾದರೂ ಒಂದು ಗುಂಪಿನ ಸದಸ್ಯರಾಗಿ, ಅದರದೇ ಸಿದ್ಧಾಂತವನ್ನು ಮೂರ್ಖರಂತೆ ತಲೆಮೇಲೆ ಹೊತ್ತು ಕೊಂಡು ನಡೆಯಬೇಕು ಎಂಬುದು ನಿಮ್ಮ ತಿಳಿವಳಿಕೆಯಾದರೇ, ಆ ರೋಗಕ್ಕೆ ಮದ್ದಿಲ್ಲ!. ನೀವು ಎಡಬಿಡಂಗಿಗಳು, ನಿಮ್ಮ ಹಳಸಲು ವಾದವನ್ನು/ವಿಚಾರವನ್ನು/ಬೆಂಕಿ ಹಚ್ಚುವಿಕೆಯನ್ನು ನಾನು ವಿರೋಧಿಸುತ್ತೇನೆ ಎಂಬ ಮಾತ್ರಕ್ಕೆ ನಾನು ಬಲಪಂಥೀಯನಾಗಬೇಕಾಗಿಲ್ಲ ಅಥವಾ ಸಿ.ಎಸ್.ಎಲ್.ಸಿ ಯವನಾಗಬೇಕಾಗಿಲ್ಲ. ನನಗೆ ನನ್ನದೇ ಆದ ಸ್ವತಂತ್ರ ವ್ಯಕ್ತಿತ್ವವಿದೆ. ಸರಿ ಇದ್ದವರ ಪರ ಇರುವೆ ಅಷ್ಟೇ!

                    • Nagshetty Shetkar's avatar
                      Nagshetty Shetkar
                      ಜನ 24 2014

                      “ಸರಿ ಇದ್ದವರ ಪರ ಇರುವೆ ಅಷ್ಟೇ!” ನೀವೊಂದು ಇರುವೆ ಅನ್ನುವುದು ಸತ್ಯ!

                    • Manohar's avatar
                      Manohar
                      ಜನ 24 2014

                      ಹೂಂ, ಪ್ರತಿಯೊಬ್ಬರೂ ಕಾಯಕಜೀವಿ ಎಂದೊಡನೆ ನೆನೆಸಬೇಕಾಗಿದ್ದು ಇರುವೆಯನ್ನು!. ನಿಮ್ಮಂತಕ ಕಾಯಕಜೀವಿಗಳನ್ನಲ್ಲ.

                    • Nagshetty Shetkar's avatar
                      Nagshetty Shetkar
                      ಜನ 24 2014

                      ಮೊಂಡು ಜಗಳ ಕಾಯಲೆಂದೇ ಹುಟ್ಟಿದವರ ಹಾಗೆ ವರ್ತಿಸಿ ನಿಮ್ಮ ಕ್ಷುಲ್ಲಕ ವ್ಯಕ್ತಿತ್ವದ ಇರುವೆ ರೂಪ ತೋರಿಸಬೇಡಿ.

                    • Manohar's avatar
                      Manohar
                      ಜನ 24 2014

                      ನಿಮ್ಮ ವ್ಯಕ್ತಿತ್ವ ಆನೆಯದು ಎಂಬ ಭ್ರಮೆಯಲ್ಲಿ ಬಿಳಬೇಡಿ!. ಸಾಧ್ಯವಾದರೆ ಮನೆಯಲ್ಲಿ ಒಂದು ಕನ್ನಡಿ ಇಟ್ಟುಕೊಳ್ಳಿ.

      • SSNK's avatar
        ಜನ 24 2014

        [[ಕರ್ನಾಟಕ ಸಂಗೀತ ವು ಶೋಷಕ ಸಂಸ್ಕೃತಿಯನ್ನೇ ಮೆರೆಸುವ ಕೃತಿಗಳನ್ನು ತ್ಯಜಿಸಿ ಕ್ರಾಂತಿಯ ಸಮಾನತೆಯನ್ನು ಬಿತ್ತರಿಸುವ ಕೃತಿಗಳನ್ನು ಅಳವಡಿಸಿಕೊಳ್ಳತಕ್ಕದ್ದು]]

        ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಪುರಂದರದಾಸರು.
        ಇಂದಿಗೂ ಪುರಂದರದಾಸರ ರಚನೆಗಳಿಂದಲೇ ಸಂಗೀತಪಾಠ ಪ್ರಾರಂಭವಾಗುತ್ತದೆ.
        ದಾಸರು ತಮ್ಮದೆನ್ನುವ ಸಮಸ್ತವನ್ನೂ ಸಮಾಜಕ್ಕೆ ತ್ಯಾಗಮಾಡಿ, ತಂಬೂರಿ ಹಿಡಿದು, ಭಿಕ್ಷೆ ಬೇಡುತ್ತಾ ಜೀವನ ನಡೆಸಿದರು.
        ಸಮಾಜಕ್ಕೆ ವಚನಗಳ ಮತ್ತು ಹಾಡುಗಳ ಮೂಲಕ ಒಳ್ಳೆಯ ಸಂದೇಶಗಳನ್ನು ನೀಡಿದರು.
        ಜಾತಿಭೇದಯನ್ನು ಮರೆತು ಎಲ್ಲರೂ ಭಗವಂತನ ಮಕ್ಕಳೆಂದು ಒಂದಾಗಲು ಹೇಳಿದರು.
        ಕೆಳಕ್ಕೆ ಬಿದ್ದವರನ್ನು ಮೇಲೆತ್ತಲು ಪ್ರಯತ್ನಿಸಿದರು ಮತ್ತು ಸಮಾಜದ ಉಳಿದವರಿಗೂ ಅದನ್ನೇ ಮಾಡಲು ಹೇಳಿದರು.
        ಈ ರೀತಿ ಸ್ವಂತದ ಉದಾಹರಣೆಯ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು.
        ನಿಮಗೆ ಇದೆಲ್ಲಾ ಕಾಣುವುದಿಲ್ಲ. ಏಕೆಂದರೆ, ನಿಮಗೆ ಸತ್ಯವನ್ನು ತಿಳಿಯುವ ಹಂಬಲವಿಲ್ಲ.

        ನೀವು ಹೇಳುವ “ಶೋಷಕ ಸಂಸ್ಕೃತಿ” ಎನ್ನುವುದೇ ತಪ್ಪು ಕಲ್ಪನೆ.
        ಶೋಷಣೆ ಎನ್ನುವುದು ಎಂದಿಗೂ ಸಂಸ್ಕೃತಿ ಎನ್ನಿಸಿಕೊಳ್ಳದು, ಅದೊಂದು ವಿಕೃತಿ ಅಷ್ಟೇ.
        ಸಂಸ್ಕೃತಿ ಬೆಳಗಬೇಕಾದರೆ ವಿಕೃತಿ ತೊಲಗಬೇಕು.
        ನಿಮಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸರಿಯಿಲ್ಲದ್ದು ಇದೆಯೆಂದು ಅನ್ನಿಸಿದರೆ, ಅದು ಯಾವುದೆಂದು ತಿಳಿಸಿ; ಅದನ್ನು ಚರ್ಚಿಸಿ ಅರ್ಥಮಾಡಿಕೊಳ್ಳೋಣ.
        ಅದನ್ನು ಬಿಟ್ಟು ಕರ್ನಾಟಕ ಶಾಸ್ತ್ರೀಯ ಸಂಗೀತ ಶೋಷಕ ಸಂಸ್ಕೃತಿಯನ್ನೇ ಪ್ರತಿನಿಧಿಸುತ್ತದೆ ಎಂದು ನೀವು ಹೇಳಿದರೆ, ನಿಮ್ಮ ಕುರಿತಾಗಿಯೇ ಎಲ್ಲರಿಗೂ ಸಂಶಯ ಬರುತ್ತದೆ.

        ಸಂಶೋಧನಾ ವಿದ್ಯಾರ್ಥಿಗಳು ಹುಡುಕುವ ಕೆಲಸ ಮಾಡಬೇಕು; ಸತ್ಯಕ್ಕಾಗಿ ಹುಡುಕಾಟ ನಡೆಸಬೇಕು. ಅದೆಲ್ಲಾ ಬಿಟ್ಟು ನೀವು ಈ ರೀತಿ ಜಾತೀಯತೆಯಲ್ಲಿ ತೊಡಗಿರುವುದು ವಿದ್ವದ್ವಲಯದಲ್ಲಿ ನಿಮ್ಮ ಗೌರವವನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುವಿರೋ ಅಷ್ಟು ನಿಮಗೇ ಒಳ್ಳೆಯದು.

        ಉತ್ತರ
      • Akash's avatar
        Akash
        ಜನ 24 2014

        ಅಯ್ಯಾ ಮಹಾನುಭಾವ ಶೆಟ್ಕರ್ ಸಾಬರೆ ಸಂಗೀತವೆನ್ನುವದು ಜಾತಿ, ಧರ್ಮ, ಭಾಷೆ, ದೇಶ, ಸಂಸ್ಕ್ರತಿಗಳ ಗಡಿಯನ್ನು ದಾಟಿ ದಿವ್ಯ ಅನುಭೂತಿಯನ್ನು ಕೊಡುವಂಥದ್ದು. ಸಂಗೀತದ ಆಲಾಪನೆಗೆ ಭಾಷೆ ಗೊತ್ತಿರದ, ಧರ್ಮದ, ಜಾತಿಯ ಸೋಂಕೂ ಅರಿಯದ, ಶೋಷಣೆ, ಸಮಾನತೆ, ನೆಲಮೂಲ ಸಂಸ್ಕೃತಿ, ಮನುವಾದ, ಮಾರ್ಕ್ಸವಾದ ಇವಾವ ದೊಡ್ಡ ದೊಡ್ಡ ಪದಗಳನ್ನೂ ಕೇಳದ, ಈಗ ತಾನೆ ಜಗತ್ತನ್ನು ಕಣ್ಣರಳಿಸಿ ನೋಡುತ್ತಿರುವ ಮುಗ್ಧ ಮಗೂ, ಗಿಡಮರಗಳು , ಪ್ರಾಣಿಗಳು , ಕೂಡ ಸಂಗೀತಕ್ಕೆ ಸ್ಪಂದಿಸುತ್ತವೆ. ಸಂಗೀತವು ದಿವ್ಯ ಆನಂದವನ್ನು ಮಾತ್ರ ನೀಡುತ್ತದೆ. ಅಂಥ ದಿವ್ಯಾನುಭೂತಿಯುಳ್ಳ ಸಂಗೀತಕ್ಕೂ ನಿಮ್ಮ ಮಾರ್ಕ್ಸವಾದವನ್ನು ಆರೋಪಿಸಿ ಹಾಗಿರಬೇಕು ಹೀಗಿರಬೇಕು ಎಂಬ ಬಿಟ್ಟಿ ಸಲಹೆ ನೀಡುತ್ತೀರಲ್ಲಾ?? ದೇವಸ್ಥಾನಗಳಲ್ಲಿ ರಾಮಮಂದಿರಗಳಲ್ಲಿ ಕಾರ್ಯಕ್ರಮ ಕೊಡುವದನ್ನು ಸಂಗೀತಗಾರರು ನಿಲ್ಲಿಸತಕ್ಕದ್ದು. ಎಂದು ಅಪ್ಪಣೆ ಕೊಡುವಿರಲ್ಲಾ? ಏಕೆ? ಯಾರು ಮೆಚ್ಚುವದು , ಯಾರು ಕಿವಿ ಮುಚ್ಚುವದು, ಬಿರುದು ಸನ್ಮಾನಗಳಿಗಾಗಿ ನಿಜವಾದ ಸಂಗೀತಗಾರ ಹಾಡುವದಿಲ್ಲ. ಹಾಡುವದು ಅನಿವಾರ್ಯ ಕರ್ಮ ಅವನಿಗೆ. ದೇವಾಲಯದಲ್ಲೋ ಶೌಚಾಲಯದಲ್ಲೋ, ಸ್ನಾನಾಲಯದಲ್ಲೋ , ಸ್ಮಶಾನದಲ್ಲೂ ಕೂಡ ಲಹರಿ ಬಂದಲ್ಲಿ ಹಾಡಬಲ್ಲ. ಆತನಿಗೆ ಇಷ್ಟವಿಲ್ಲದಿದ್ದರೆ ಕತ್ತಿಯ ಮೊನೆಯಿಂದ ಚುಚ್ಚಿದರೂ ಹಾಡಲಾರ.ಪೂರ್ವ ಜನ್ಮದ ಸಂಸ್ಕಾರವಿದ್ದರೆ ಮಾತ್ರ ಸಂಗೀತ ತಿಳಿಯುತ್ತದೆ ಎನ್ನುತ್ತಾರೆ ಬಲ್ಲವರು, ಅಂಥ ಶ್ರೇಷ್ಟ ಸಂಗೀತವನ್ನು ಹಾಗಿಲ್ಲ ಹೀಗಿಲ್ಲ ಎಂದು ಅವಮಾನಿಸುವದು ತರವಲ್ಲ.

        ಉತ್ತರ
        • Nagshetty Shetkar's avatar
          Nagshetty Shetkar
          ಜನ 24 2014

          ನೀವು ಪದೆ ಪದೆ ನನ್ನನ್ನು ಶೆಟ್ಕರ್ ಸಾಬಿ ಎಂದು ಸಂಬೋಧಿಸುತ್ತಿರುವುದು ಯಾತಕ್ಕೆ?

          ದೇವಾಲಯಗಳು ಮಂದಿರಗಳು ಸ್ಥಾವರ. ಸಂಗೀತ ಜಂಗಮದ ಜೊತೆಗೆ ಹೆಜ್ಜೆ ಹಾಕುತ್ತ ನಡೆಯಬೇಕು ಸ್ಥಾವರದಲ್ಲಿ ತಾನೂ ಸ್ಥಾವರವಾಗಿಬಿಡಬಾರದು.

          ಉತ್ತರ
          • Akash's avatar
            Akash
            ಜನ 24 2014

            ನಾನು ತಮ್ಮನ್ನು ಸಾಬಿ ಎಂದು ಕರೆದಿಲ್ಲ. ಸಾಬರೆ ಎಂದು ಗೌರವಸೂಚಕ ಪದದಿಂದ ಕರೆದಿರುವೆ.ಸಾಹೇಬರೆ ಎಂಬುದರ ಗ್ರಾಮ್ಯ ಭಾಷೆ ಸಾಬರೆ ಎಂದಾಗಿದೆ ಅಷ್ಟೇ . ಅರೇ ! ಇದರಲ್ಲಿ ನೀವು ಸಿಟ್ಟು ಮಾಡಿಕೊಳ್ಳುವಂಥದ್ದೇನಿದೆ??

            ಉತ್ತರ
            • Nagshetty Shetkar's avatar
              Nagshetty Shetkar
              ಜನ 24 2014

              ಓಹೋ! ಗ್ರಾಮ್ಯ ಭಾಷೆ! ಅದು ಯಾಕೆ ಸಾಬರೆ ಅನ್ನುವ ಪದಕ್ಕೆ ಮಾತ್ರ ಸೀಮಿತ? ಸುಮ್ಮನೆ ಪುಂಗಿ ಊದಬೇಡಿ, ಇರುವ ಅಲ್ಪ ಸ್ವಲ್ಪ ಮರ್ಯಾದೆಯನ್ನು ಕೂಡ ಕಳೆದುಕೊಳ್ಳುತ್ತೀರಿ.

              ಉತ್ತರ
              • Akash's avatar
                Akash
                ಜನ 24 2014

                ನೀವು ಮರ್ಯಾದೆ ಉಳಿಸಿಕೊಂಡಿದ್ದರೆ ತಾನೆ ಇನ್ನೋಬ್ಬರದನ್ನು ಕಳೆಯುವದು??

                ಉತ್ತರ
  11. SSNK's avatar
    ಜನ 24 2014

    [[Nagshetty Shetkar> ಶರಣರ ವಚನಗಳನ್ನೇಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಅಳವಡಿಸಿಕೊಂಡಿಲ್ಲ]]
    “ಶರಣರ ವಚನವನ್ನು Computer Softwareನಲ್ಲಿ ಅಳವಡಿಸಿಕೊಂಡಿಲ್ಲ; ಹೀಗಾಗಿ, ಅದು ಜೀವ ವಿರೋಧಿಯಾಗಿದೆ ಮತ್ತು ಶೋಷಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ”, ಎಂದ ಹಾಗಾಯಿತು ನಿಮ್ಮ ಮಾತಿನ ಅರ್ಥ!!

    ಶರಣರ ವಚನವನ್ನು Pop Musicಗೂ ಅಳವಡಿಸಲಾಗುವುದಿಲ್ಲ; ಶರಣರ ವಚನವನ್ನು “Classical Western Music”ಗೂ ಅಳವಡಿಸಲಾಗುವುದಿಲ್ಲ. ನಿಮ್ಮ ಪ್ರಕಾರ ಇವೆಲ್ಲವೂ ಜೀವ ವಿರೋಧಿಯೇ!?

    ಭಾವ-ರಾಗ-ತಾಳ – ಈ ಮೂರರ ಸಮ್ಮಿಲನವೇ ಸಂಗೀತ. ಶಾಸ್ತ್ರೀಯ ಸಂಗೀತವೆನ್ನುವುದು ವ್ಯಾಕರಣ ಅಥವಾ ಗಣಿತವಿದ್ದಂತೆ. ಅದಕ್ಕೊಂದು ನೀತಿ-ನಿಯಮ ಇರುತ್ತದೆ. ಆ ನೀತಿ-ನಿಯಮಗಳಿಗನುಸಾರ ಇರುವ ಪದ್ಯಗಳಿಗೆ ಮಾತ್ರ ಸಂಗೀತವನ್ನು ಅಳವಡಿಸಬಹುದು.

    ಆ ರೀತಿಯಲ್ಲಿ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಬಹುದಾದ ರೀತಿಯಲ್ಲಿ ಶರಣರ ವಚನಗಳಿದ್ದರೆ ಖಂಡಿತ ಅದನ್ನೂ ಅಳವಡಿಸಬಹುದು. ನನಗೆ ತಿಳಿದಿರುವಂತೆ ಶರಣರ ವಚನಗಳು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸುವ ರೀತಿಯಲ್ಲಿ ರಚಿತವಾಗಿಲ್ಲ.

    ನಿಮಗೆ ಅದು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅನುಗುಣವಾಗಿ ರಚಿತವಾಗಿದೆ ಎಂದು ಅನ್ನಿಸಿದರೆ, ದಯವಿಟ್ಟು ಅದನ್ನಿಲ್ಲಿ ನಿರೂಪಿಸಿ – ವಚನದ ಹೆಸರು, ಅದರ ಸಾಹಿತ್ಯ ಮತ್ತು ಅದಕ್ಕೆ ಹೇಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಳವಡಿಸಬಹುದು (ಯಾವ ರಾಗ, ತಾಳ, ಇತ್ಯಾದಿ ವಿವರಗಳು ಬೇಕು) ಎನುವುದನ್ನು ವಿವರಿಸಿ.

    ಉತ್ತರ
    • Nagshetty Shetkar's avatar
      Nagshetty Shetkar
      ಜನ 24 2014

      ಹೇಳಿದ್ದನ್ನೇ ಹೇಳುವ ಕಿಸುಬಾಯಿ ದಾಸ ನೀವಿರಬೇಕು.

      ಉತ್ತರ
  12. SSNK's avatar
    ಜನ 24 2014

    [[ಹೇಳಿದ್ದನ್ನೇ ಹೇಳುವ ಕಿಸುಬಾಯಿ ದಾಸ ನೀವಿರಬೇಕು.]]
    “Post Comment” ಎರಡು ಸಲ ಒತ್ತಿದ್ದರಿಂದ ಎರಡು ಸಲ Submit ಆಗಿದೆ ಅಷ್ಟೇ!
    ಅದಕ್ಕೇಕೆ ಅಷ್ಟೊಂದು ಅಸಹನೆ!? ಚರ್ಚೆಯಲ್ಲಿ ಸ್ವಲ್ಪ ಸಹನೆಯಿರಲಿ.

    ಶೇಟ್ಕರ್ ಅವರೇ,
    ನೀವೇ ಬರೆದಿರುವ ಈ ವಾಕ್ಯವನ್ನೊಮ್ಮೆ ಓದಿಕೊಳ್ಳಿ:
    [[ಕರ್ನಾಟಕ ಸಂಗೀತ ವು ಶೋಷಕ ಸಂಸ್ಕೃತಿಯನ್ನೇ ಮೆರೆಸುವ ಕೃತಿಗಳನ್ನು ತ್ಯಜಿಸಿ….]]
    ಆ ವಾಕ್ಯದಲ್ಲಿರುವ “ಶೋಷಕ ಸಂಸ್ಕೃತಿಯನ್ನೇ’ ಎಂಬಲ್ಲಿ ಉಪಯೋಗಿಸಲ್ಪಟ್ಟಿರುವ “ನ್ನೇ” ಅಕ್ಷರದಲ್ಲಿರುವ ಧೀರ್ಘವು ಏನನ್ನು ಸೂಚಿಸುತ್ತಿದೆ?

    ಮತ್ತು ಇದೇ ಚರ್ಚೆಯಲ್ಲಿ ನೀವು ಈ ರೀತಿ ಹೇಳಿದ್ದಿರಿ:
    [[ಸಂಗೀತ ಹಾಡೋದು ‘ನಾಡಿನ ದಮನಿತ’ರಿಗೇ ಇರಬೇಕು. ಶಾಸ್ತ್ರೀಯ ಸಂಗೀತವು ಜೀವಪರವಾಗಿರಬೇಕು.]]
    ನಿಮ್ಮ ಪ್ರಕಾರ, ಈಗ ಶಾಸ್ತ್ರೀಯ ಸಂಗೀತವು ಜೀವಪರವಾಗಿಲ್ಲ. ಏಕೆಂದರೆ, ಅದು “ನಾಡಿನ ದಮನಿತರ” ಧ್ವನಿಯಾಗಿಲ್ಲ.

    [[ಬ್ರಾಹ್ಮಣ್ಯವನ್ನು ಮೀರದ ವೈದಿಕ ಕ್ರಮದ ಭಕ್ತಿಯಿಂದ ನಾಡಿನ ದಮನಿತರಿಗೆ ಯಾವ ಪ್ರಯೋಜನವೂ ಇಲ್ಲ. ]]
    ನಿಮ್ಮ ಪ್ರಕಾರ, ಶಾಸ್ತ್ರೀಯ ಸಂಗೀತವು ವೈದಿಕ ಕ್ರಮದ ಭಕ್ತಿಯನ್ನೇ ಪೋಷಿಸುತ್ತಿದೆ; ಹೀಗಾಗಿ, ಅದರಿಂದ ನಾಡಿನ ದಮನಿತರಿಗೆ ಯಾವ ಪ್ರಯೋಜನವೂ ಇಲ್ಲ.

    ಇದನ್ನೆಲ್ಲ ಓದಿದವರು, ಇದನ್ನು ಯಾವ ರೀತಿ ಅರ್ಥ ಮಾಡಿಕೊಳ್ಳುತ್ತಾರೆಂದರೆ:
    “ಶರಣರ ವಚನವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಅಳವಡಿಸಿಕೊಂಡಿಲ್ಲ; ಹೀಗಾಗಿ, ಅದು ಜೀವ ವಿರೋಧಿಯಾಗಿದೆ ಮತ್ತು ಶೋಷಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ”

    ಇದರಲ್ಲಿ ಅಧಿಕಪ್ರಸಂಗತನ ಎಲ್ಲಿದೆ ಶೇಟ್ಕರ್ ಅವರೇ? ಈ ಚರ್ಚೆಯಲ್ಲೇ ವಿವಿಧ ಸ್ಥಳಗಳಲ್ಲಿ ನೀವು ತಿಳಿಸಿರುವುದನ್ನೆಲ್ಲ ಒಟ್ಟುಗೂಡಿಸಿದಾಗ, ಓದುಗರಿಗೆ ಮೇಲಿನ ರೀತಿಯ ಅರ್ಥ ಬಂದರೆ, ಓದುಗರದೇನು ತಪ್ಪು?

    ಮತ್ತು ಆ ರೀತಿ ತಪ್ಪಾಗಿ ಅರ್ಥವಾಗಿದ್ದರೆ, ಅದನ್ನು ಸರಿಯಾಗಿ ಅರ್ಥ ಮಾಡಿಸಬೇಕಾದುದು ನೀವೇ ಅಲ್ಲವೇ!?

    ಉತ್ತರ
    • Nagshetty Shetkar's avatar
      Nagshetty Shetkar
      ಜನ 24 2014

      ನಿಮ್ಮ ಲಾಜಿಕಲ್ ಥಿಂಕಿಂಗ್ ನಲ್ಲಿರುವ ನ್ಯೂನ್ಯತೆಗಳನ್ನು ನೀವೇ ತಿದ್ದಿಕೊಳ್ಳುವುದು ಉತ್ತಮ. ನಾನು ಹೇಳಿರದ ಮಾತುಗಳನ್ನು ನನ್ನ ಬಾಯಿಗೆ ತುರುಕುವ ಪ್ರಯತ್ನ ಬಿಡಿ.

      ಉತ್ತರ
      • Manohar's avatar
        Manohar
        ಜನ 24 2014

        ಉಳಿದವರಿಗೆ ತರ್ಕದ ಪಾಠ ಹೇಳುವ ಮೊದಲು ನಿಮ್ಮ ಕಮೆಂಟುಗಳ ತರ್ಕ ಏನನ್ನು ಹೇಳುತ್ತದೆ ಎಂಬುದನ್ನು ಒಮ್ಮೆ ನೀವೇ ಪರಾಮರ್ಶೆ ಮಾಡಿಕೊಳ್ಳಿ. ಇದು ತಪ್ಪು ಎಂದು ಘಂಟಾಘೋಶವಾಗಿ ಹೇಳುವವವರಿಗೆ ಸರಿ ಯಾವುದು ಎಂದು ಮೊದಲು ಗೊತ್ತಿರಬೇಕು, ತಿಳಿಸುವ ಅರ್ಹತೆ ಇರಬೇಕು. ಅದನ್ನು ಓದಿದ ಯಾರೇ ಆದರೂ, ಅಭಿಪ್ರಾಯಭೇದವಿದ್ದರೂ , ಹೌದು ಇವರು ಹೇಳುವುದರಲ್ಲಿ ಅರ್ಥವಿದೆ ಎನ್ನಬೇಕು. ಕಂಡ-ಕಂಡಲ್ಲಿ ತಲೆಹಾಕಿ ಎಲ್ಲದರಲ್ಲೂ ಶೋಷಿತ, ದಮನಿತ, ಅಲ್ಪಸಂಖ್ಯಾತ ಎಂದು ನಿಮ್ಮ ಹಳಸಲು ವಿಚಾರಧಾರೆ ತುರುಕಬೇಡಿ. ಉಳಿದವರದನ್ನು ತೊಳೆಯುವುದು ಬಿಟ್ಟು ಮೊದಲು ನಿಮ್ಮದನ್ನು ನೀವು ತೊಳೆದುಕೊಳ್ಳಿ. ಅಜೀರ್ಣವಾಗಿರುವುದು ಯಾರಿಗೆ ಎಂದು ನಿಮ್ಮ ಕಮೆಂಟುಗಳನ್ನು ಓದಿದ ಯಾರಿಗೂ ಅರ್ಥವಾಗುತ್ತದೆ. ಸುಮ್ಮೆನೆ ಗೊಂದಲ ಮಾಡಿಕೊಳ್ಳದೇ. ತೊಳೆದು ಸ್ವಚ್ಛಮಾಡಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ವಿಚಾರಗಳು ಇನ್ನಷ್ಟು ನಾರುತ್ತವೆ.

        ಉತ್ತರ
      • SSNK's avatar
        ಜನ 24 2014

        ನವಶರಣರಿಂದ ಬಾಯಿಂದ ಉದುರಿದ ಹೊಸವಚನ
        (ಬಾಯಿಯಿಂದ ಇಂತದ್ದೆಲ್ಲಾ ಹೇಗೆ ಉದುರಲು ಸಾಧ್ಯ, ಎಂದು ಮಾತ್ರ ಕೇಳಬೇಡಿ; ಶರಣರ ಪವಾಡವನ್ನು ಹೀಗೆಲ್ಲಾ ಪ್ರಶ್ನಿಸಬಾರದು; ಅನುಮಾನಂ ಪೆದ್ದ ರೋಗಂ)!

        ಶೇಟ್ಕರ್ ಶರಣರೇ, ತಮ್ಮಿಂದ ಉದುರಿದ ಈ ವಚನಗಳನ್ನೂ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಬೇಕೇ!?
        ಇದಕ್ಕೆ ಈ ಕೆಳಗಿನ ಭಾವ-ರಾಗ-ತಾಳಗಳನ್ನು ಹೊಂದಿಸಿದರೆ ಹೇಗೆ:
        ಭಾವ – ಅಭಾವ
        ರಾಗ – ಸರಾಗ
        ತಾಳ – ಬೇತಾಳ

        😉

        ಉತ್ತರ
  13. Hamsanandi (@hamsanandi)'s avatar
    ಜನ 25 2014

    ವಚನಗಳನ್ನ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಾಡೋದಿಲ್ಲ ಅಂತ ಹೇಳಿದ್ದು ಯಾರು ಶೆಟ್ಕರ್ ಅವರೆ? ಅವನ್ನೂ ರಾಗ ತಾಳ ಬಳಸಿ ಹಾಡುವುದು ಉಂಟು.

    ಆದರೆ ಎಲ್ಲಕ್ಕೂ ಒಂದು sense of proportion ಅಂತ ಇರತ್ತೆ. ಈಗ ಊಟದಲ್ಲಿ ಅನ್ನ ಎಷ್ಟಿರಬೇಕೋ, ಪಲ್ಯ ಎಷ್ಟಿರಬೇಕೋ, ಉಪ್ಪಿನಕಾಯಿ ಎಷ್ಟಿರಬೇಕೋ ಅಷ್ಟಿದ್ದರೆ ಚೆಂದ. ಒಂದರ ಜಾಗವನ್ನು ಇನ್ನೊಂದು ತೆಗೆದುಕೊಳ್ಳಲಾಗದು! ಅಲ್ವೇ ಮತ್ತೆ?

    ಉತ್ತರ
    • Nagshetty Shetkar's avatar
      Nagshetty Shetkar
      ಜನ 26 2014

      ” ವಚನಗಳನ್ನರಾಗ ತಾಳ ಬಳಸಿ ಹಾಡುವುದು ಉಂಟು. ”

      ok, show me at least one example of any of the stalwarts of Karnataka music singing Vachanas in any of their concerts. Balamuralikrishna? Vasantkumari? Pattammal? Chembai? Tiger Varadachari? GN Bala? Shemmagudi? Show me one example.

      ಉತ್ತರ
      • Nagshetty Shetkar's avatar
        Nagshetty Shetkar
        ಜನ 26 2014
        • Hamsanandi (@hamsanandi)'s avatar
          ಜನ 26 2014

          ಅಲ್ರೀ ಸ್ವಾಮಿ, ಸುಮ್ಮನೆ ನಿಮ್ಮ ಟಿಪ್ಪಣೀಗೇ +೧ +೧ ಅಂತಾ ಒತ್ತಿಕೊಂಡು ಹೋದರೆ ಏನು ಹೇಳೋಣ? ಕೆಳಗೆ ಆಗಲೆ ಒಂದು ಉದಾಹರಣೆ ಕೊಟ್ಟಿದ್ದೆ. ಅಷ್ಟಕ್ಕೂ ಬಾಲಮುರಳಿ ಕೃಷ್ಣ, ವಸಂತಕುಮಾರಿ, ಪಟ್ಟಮ್ಮಾಳ್ ಇವರೇ ಹಾಡಬೇಕು ಅಂತ ಯಾಕೆ ಕೇಳ್ತಿದೀರ? ಅವರ್ಯಾರೂ ಕನ್ನಡದವರಲ್ಲ, ಮೊದಲೇ ಹೇಳಿದಂತೆ ವಚನ ಗಳನ್ನ ಹಾಡುವುದು ಸಾಧಾರಣವಾಗಿ ಊಟಕ್ಕೆ ಪಲ್ಯ ಉಪ್ಪಿನಕಾಯಿ ರೀತಿಯಲ್ಲಿ ಅಂತಹೇಳಿದೆನಲ್ಲ. ಬೆಂಡೇಕಾಯಿ ಪಲ್ಯ ಬೇಕೋ , ಅಮಟೇಕಾಯಿ ಉಪ್ಪಿನಕಾಯಿ ಬೇಕೋ ಅನ್ನೋದನ್ನ ಬಡಿಸೋವರು ಮಾತ್ರ ನಿರ್ಧರಿಸೋಕ್ಕಾಗತ್ತೆ.

          ಅದು ಬಿಡಿ. ನೀವು ಆರ್ ಕೆ ಶ್ರೀಕಂಠನ್, ನಾಗವಲ್ಲಿ ನಾಗರಾಜ್ ಮೊದಲಾದವರು ವಚನಗಳನ್ನು ಹಾಡಿರೋದನ್ನ ಕೇಳಿಲ್ಲದೆಯೇ ಇರಬಹುದು.

          ಆಮೇಲೆ, ವಚನಗಳನ್ನ ಇಟ್ಟುಕೊಂಡು ಮಾಡಿರುವ ಬೇರೆ ಪ್ರಯೋಗಗಳೂ ಇಲ್ಲದಿಲ್ಲ, ನನ್ನ ತುತ್ತೂರಿ ನಾನೇ ಊದಿಕೊಳ್ಳಬಾರದು ಅನ್ನೋ ಕಾರಣಕ್ಕೆ ಸುಮ್ಮನಿದ್ದೆ, ಈಗ ಕೇಳಿ – ನಾನೂ ಒಂದು ಬಸವಣ್ಣನವರ ವಚನವನ್ನ ನಾಗಸ್ವರಾವಳಿ ರಾಗ ದಲ್ಲಿ ಆದಿತಾಳದ ವರ್ಣವಾಗಿ ಅಳವಡಿಸಿದ್ದೀನಿ. ನನ್ನ ಪರಿಚಿತ ಗಾಯಕರೊಬ್ಬರು ಅದನ್ನು ಕಚೇರಿಯಲ್ಲಿ ಹಾಡಿದ್ದಾರೆ ಕೂಡ. ಆಸಕ್ತಿ ಇದ್ದರೆ ಕೆಳಗಿನ ಯು ಟ್ಯೂಬ್ ಕೊಂಡಿ ನೋಡಬಹುದು. ವರ್ಣ ಸುಮಾರು ೬ನೇ ನಿಮಿಷದಲ್ಲಿ ಮೊದಲಾಗುತ್ತದೆ.

          ಉತ್ತರ
          • Manohar's avatar
            Manohar
            ಜನ 27 2014

            ಈ ಭಂಡರಿಗೆ ಸಾವಧಾನದಿಂದ ಉತ್ತರಿಸಿದ ಹಂಸಾನಂದಿಯವರಿಗೆ ಧನ್ಯವಾದಗಳು. ಆದರೆ ಇವರ ಕ್ಯಾತೆ ತೆಗೆಯುವ ಸ್ವಭಾವ ನಿಲ್ಲಿಸಲು ಸಾಧ್ಯವಿಲ್ಲ ಎಂಬುದು ನಾವು ಕಂಡುಕೊಂಡ ಸತ್ಯ.

            ಉತ್ತರ
          • Nagshetty Shetkar's avatar
            Nagshetty Shetkar
            ಜನ 27 2014

            Mr. Nandy, good work, keep it up. Please continue to sing Vachanas in Karnataka style. We need to get rid of Brahmanya plaguing Karnataka music.

            ಉತ್ತರ
            • Hamsanandi (@hamsanandi)'s avatar
              ಜನ 28 2014

              Thanks for your appreciation.

              And thankfully, there is nothing plaguing Karnataka sangeetha. Classical music is a medium of entertainment and preserving cultural (& musical) traditions, at the same times doing incremental artistic innovations. It is NOT about spreading any ideology.

              ಉತ್ತರ
              • Nagshetty Shetkar's avatar
                Nagshetty Shetkar
                ಜನ 28 2014

                “there is nothing plaguing Karnataka sangeetha”

                shreshthateya vyasana. vaidikarige vaidikashaahiyu yaavattoo paripoorna.

                ಉತ್ತರ
        • Manohar's avatar
          Manohar
          ಜನ 27 2014

          ಸ್ವರತಿಪ್ರಿಯ ಗುರು-ಶಿಷ್ಯರು!. ಬಾವಿಯೋಳಗಿನ ಕಪ್ಪೆಗಳು. ಗುರು ಬಂದು ಬರೆಯುವುದು ಶಿಷ್ಯ ಅದಕ್ಕೆ +೧ ಒತ್ತುವುದು!

          ಉತ್ತರ
          • Nagshetty Shetkar's avatar
            Nagshetty Shetkar
            ಜನ 27 2014

            “ಸ್ವರತಿಪ್ರಿಯ ಗುರು-ಶಿಷ್ಯರು”
            “ಬಾವಿಯೋಳಗಿನ ಕಪ್ಪೆಗಳು.”
            “ಈ ಭಂಡರಿಗೆ”
            “ಇವರ ಕ್ಯಾತೆ ತೆಗೆಯುವ ಸ್ವಭಾವ”

            Mr. Rakesh Shetty, please take note of these derogatory phrases and take action against Mr. Manohar.

            @Sriranga: who is beating whom here?

            ಉತ್ತರ
          • Nagshetty Shetkar's avatar
            Nagshetty Shetkar
            ಜನ 27 2014

            “ಗುರು ಬಂದು ಬರೆಯುವುದು ಶಿಷ್ಯ ಅದಕ್ಕೆ +೧ ಒತ್ತುವುದು! ”

            Darga Sir is a saintly man. He has noble goals in life. Countering Vaidikshahi and spreading Basavaprajne. Don’t drag him into your petty politics. Go listen to his lectures on Basavadwaita.

            ಉತ್ತರ
            • SSNK's avatar
              ಜನ 27 2014

              ಶೇಟ್ಕರ್,

              ನೀವು ಸಂಗೀತ ಕ್ಷೇತ್ರದಲ್ಲೂ ಜಾತಿಗಳನ್ನು ಹುಡುಕುತ್ತಿರುವುದನ್ನು ನೋಡಿದರೆ, ನನಗೆ ಈ ಕೆಳಗಿನ ಗಾದೆಮಾತು ನೆನಪಿಗೆ ಬರುತ್ತಿದೆ:
              “ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು”!!

              [[Countering Vaidikshahi]]
              ನಿಮ್ಮ ‘ಬ್ರಾಹ್ಮಣ್ಯ’ದ ಜಪದ ಜೊತೆಗೆ ‘ವೈದಿಕಶಾಹಿ’ ಎನ್ನುವ ಹೊಸಪದವನ್ನೀಗ ಸೇರಿಸಿದ್ದೀರಿ!
              ಶಾಹಿ ಎನ್ನುವುದು ವೇದಕ್ಕಾಗಲೀ, ವೈದಿಕರಿಗಾಗಲೀ ಎಲ್ಲಿಂದ ಅಂಟುಕೊಂಡಿತು!?
              ನೌಕರಶಾಹಿ, ಶಾಹಿ ಇಮಾಮ್, ದರಿದ ಶಾಹಿ, ಕುತುಬ ಶಾಹಿ, ಇತ್ಯಾದಿ ಎಲ್ಲರೂ ಕೇಳಿರುವರು.
              ಆದರೆ, ಏನಿದು ವೈದಿಕಶಾಹಿ? ಈ ಪದ ಎಲ್ಲಿಂದ ಹುಟ್ಟಿಕೊಂಡಿತು? ಇದರ ಇತಿಹಾಸವೇನು?

              ನೀವು ಇಲ್ಲಿಯವರೆಗೆ, “ನಾನು ಬ್ರಾಹ್ಮಣ್ಯದ ವಿರುದ್ದ, ಬ್ರಾಹ್ಮಣ ಜಾತಿಯ ವಿರುದ್ದವಲ್ಲ” ಎನ್ನುತ್ತಿದ್ದಿರಿ.
              ಇದೀಗ, ನೀವು ವೈದಿಕಶಾಹಿ ಎನ್ನುವ ಪದವನ್ನುಪಯೋಗಿಸಿ, ತಾವು ಭಾರತಕ್ಕೆ ಸಂಬಂಧಿಸಿದ ಉನ್ನತ ಸಂಸ್ಕೃತಿಯ ವಿರುದ್ಧ ಎನ್ನಿಸುತ್ತಿದೆ. ಹೌದೇ!?

              ಉತ್ತರ
              • Nagshetty Shetkar's avatar
                Nagshetty Shetkar
                ಜನ 27 2014

                “ಏನಿದು ವೈದಿಕಶಾಹಿ?” the evil that has plagued our society since the times of the Vedas and continues to plague even today. Unwritten constitution of India.

                ಉತ್ತರ
                • vidya's avatar
                  vidya
                  ಜನ 27 2014

                  ನನ್ನಂಥ ಇಂಗ್ಲೀಷ ಬಾರದ ಮಂದಿಗೆ ನೀವು ಇಂಗ್ಲೀಷದಲ್ಲಿ ಕಮೆಂಟ್ ಬರೆದರೆ ತಿಳಿಯುವದು ಹ್ಯಾಗೆ?? ಹಿಂದೊಮ್ಮೆ ತಾವು ಒಬ್ಬರಿಗೆ ಕನ್ನಡದಲ್ಲಿ ಬರಿರಿ ಅಂತಾ ಕಮೆಂಟ್ ಮಾಡಿದ್ದೀರಿ. ಈಗ ತಾವೇ ಇಂಗ್ಳಿಷಿನಲ್ಲಿ ಬರೆಯುತ್ತೀರಿ. ಯಾಕೆ??

                  ಉತ್ತರ
                  • Nagshetty Shetkar's avatar
                    Nagshetty Shetkar
                    ಜನ 27 2014

                    Mobile phone nalli Kannada type maaduva saulabhyavilla.

                    ಉತ್ತರ
                • SSNK's avatar
                  ಜನ 27 2014

                  [[the evil that has plagued our society since the times of the Vedas and continues to plague even today.]]
                  ಲಿಂಗಾಯತತನ ಅಷ್ಟು ಕೆಟ್ಟದ್ದೇ!?

                  ಉತ್ತರ
  14. Hamsanandi (@hamsanandi)'s avatar
    ಜನ 25 2014

    ಇಲ್ಲಿ ಒಂದು ಉದಾಹರಣೆ – ಇದು ನೃತ್ಯವಾದರೂ, ಹಿನ್ನೆಲೆ ಸಂಗೀತವನ್ನು ಗಮನಿಸಿ.

    ಉತ್ತರ
  15. barigannada's avatar
    ಜನ 27 2014

    ಐಲಾ… ಹಂಸಾನಂದಿ, ನಿಮ್ಮ ಬರಹಗಳು ಐಲುಗಳನ್ನೂ ಆಕರ್ಷಿಸುತ್ತದೆ ಎಂದು ತಿಳಿದೇ ಇರಲಿಲ್ಲ. ಏನ್ ಮಾಟಾರೀಯಪ್ಪಾ ನಿಮ್ದೂ

    ಉತ್ತರ
  16. ಶ್ರೀಕಾಂತ್'s avatar
    ಶ್ರೀಕಾಂತ್
    ಜನ 27 2014

    ಯಾವ ಹುಚ್ಚ ಹೇಳಿದ್ದು ಶರಣರ ವಚನಗಳು ಶಾಸ್ತ್ರೀಯ ಸಂಗೀತದಲ್ಲಿಲ್ಲ ಅಂತ? ನಾದಪ್ರಿಯ ಶಿವನೆಂಬರು ವಚನ ಬಾಂಬೆ ಸಿಸ್ಟರ್ಸ್ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿ ಹಾಡಿದ್ದಾರೆ. ಈ ಮನೆಮುರುಕರನ್ನು ನಿಲುಮೆಯಿಂದ ಓಡಿಸಿ.

    ಉತ್ತರ
    • Akash's avatar
      Akash
      ಜನ 27 2014

      ಛೇ ಛೇ ಕಂಡದ್ದನ್ನು ಕಂಡಂತೆ ಹೇಳಬಾರದು.

      ಉತ್ತರ
    • Nagshetty Shetkar's avatar
      Nagshetty Shetkar
      ಜನ 27 2014

      ಎಲ್ಲೋ ಅಲ್ಲಿ ಇಲ್ಲಿ ಒಂದೆರಡು ಉದಾಹರಣೆಗಳಿವೆ. ಆದರೆ ಮುಖ್ಯವಾಹಿನಿಯು ವಚನಸಾಹಿತ್ಯವನ್ನು ಪೂರ್ಣವಾಗಿ ನಿರ್ಲಕ್ಷಿಸಿ ವೈದಿಕಶಾಹಿಯ ಶಾಸನಕ್ಕೆ ಬದ್ಧವಾಗಿ ಬ್ರಾಹ್ಮಣ್ಯವನ್ನು ಮೆರೆಸುತ್ತಲೇ ಬಂದಿದೆ.

      ಉತ್ತರ
      • SSNK's avatar
        ಜನ 27 2014

        [[ವೈದಿಕಶಾಹಿಯ ಶಾಸನಕ್ಕೆ ಬದ್ಧವಾಗಿ ಬ್ರಾಹ್ಮಣ್ಯವನ್ನು]]
        ಏನಿದು “ವೈದಿಕಶಾಹಿ”?
        ವೈದಿಕಶಾಹಿಯ ಶಾಸನ ಎಂದರೇನು?
        ಯಾವ ಯಾವ ರಾಜರು ಈ ಶಾಸನವನ್ನು ಅನುಷ್ಠಾನಕ್ಕೆ ತಂದರು?
        ಬ್ರಾಹ್ಮಣ್ಯ ಎಂದರೇನು?

        ಉತ್ತರ
        • Nagshetty Shetkar's avatar
          Nagshetty Shetkar
          ಜನ 27 2014

          “ಬ್ರಾಹ್ಮಣ್ಯ ಎಂದರೇನು?”

          I have answered this many times. Y do u keep asking me the same question? Ask new questions.

          ಉತ್ತರ
  17. SSNK's avatar
    ಜನ 27 2014

    [[“ಬ್ರಾಹ್ಮಣ್ಯ ಎಂದರೇನು?”

    I have answered this many times. Y do u keep asking me the same question? Ask new questions.]]

    ಲಿಂಗಾಯತತನಕ್ಕೆ ನೀವು ಹೊಸ ಹೆಸರು ನೀಡಿದ್ದೀರೆಂಬುದು ಆಕಾಶವಾಣಿಯಲ್ಲಿ, ದೂರದರ್ಶನದಲ್ಲಿ ಇನ್ನೂ ಪ್ರಚಾರವಾಗಿಲ್ಲವಲ್ಲ. ಹಾಗಾಗಿ, ಆಗಾಗ ಕೇಳುತ್ತಿರಬೇಕಾಗುತ್ತದೆ. ಲಿಂಗಾಯತತನ ಎಂದರೆ ಎಲ್ಲರಿಗೂ ಸುಲಭದಲ್ಲಿ ಅರ್ಥವಾಗಿಬಿಡುತ್ತದೆ.

    ಉತ್ತರ

Leave a reply to Kumar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments