ವಿಷಯದ ವಿವರಗಳಿಗೆ ದಾಟಿರಿ

Archive for

12
ಡಿಸೆ

ಶರಿಯತ್ ಕಾನೂನಿನಡಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವ ದರ್ದೇಕೆ?

– ಶ್ರೀನಿವಾಸ್ ರಾವ್

ಮ್ಯುಚುಯಲ್ ಫಂಡ್ಈ ದೇಶದಲ್ಲಿ ಸಂವಿಧಾನಕ್ಕೆ ಪರ್ಯಾಯವಾದ ಮತ್ತೊಂದು ಕಾನೂನು ಚಾಲ್ತಿಯಲ್ಲಿದ್ದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ದೇಶದ ಭದ್ರತೆಗೇ ಅಪಾಯವೊಡ್ಡುವ ಸ್ಥಿತಿ ಎದುರಾದಾಗ ಮಾತ್ರ ಅದರ ಬಗ್ಗೆ ಎಚ್ಚೆತ್ತುಕೊಳ್ಳುತ್ತೇವೆ. ಇಲ್ಲದಿದ್ದರೆ ಪರ್ಯಾಯ ಕಾನೂನಿನ ಪ್ರಕಾರ ಏನು ನಡೆದರೂ ಪಿಳಿಪಿಳಿ ನೋಡುತ್ತಾ ಕುಳಿತುಬಿಡುತ್ತೇವೆ. ಈ ಮಾತನ್ನು ಈಗೇಕೆ ಹೇಳಬೇಕಾಗಿದೆ ಎಂದರೆ ಅಲ್ಪಸಂಖ್ಯಾತರಿಗೆ,ಎಸ್.ಬಿ.ಐ ಶರಿಯಾ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸಲು ಹೊರಟಿರುವದರಿಂದ.

ಒಂದಷ್ಟು ಜನರು ಗುಂಪಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಪ್ರಕ್ರಿಯೆಯೇ ಮ್ಯುಚುಯಲ್ ಫಂಡಿಂಗ್. ಇದಕ್ಕಾಗಿಯೇ ಹೆಚ್.ಡಿ.ಎಫ್.ಸಿ ಸೇರಿದಂತೆ ಹಲವು ಕಂಪನಿಗಳಿರುತ್ತವೆ.ಹೂಡಿಕೆ ಮಾಡಿರುವವರ ಹಣವನ್ನು ಸರಿಯಾದ ರೀತಿಯಲ್ಲಿ ಷೇರುಪೇಟೆಯಲ್ಲಿ ತೊಡಗಿಸಿ ಲಾಭ ಗಳಿಸಿಕೊಡಲೆಂದೇ ಆ ಕಂಪನಿಗೋರ್ವ ಫಂಡಿಂಗ್ ಮ್ಯಾನೇಜರ್ ಇರುತ್ತಾನೆ. ಯಾವ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಲಾಭ, ಎಷ್ಟು ಹೂಡಿಕೆ ಮಾಡಬೇಕು ಇತ್ಯಾದಿಗಳ ಪಕ್ಕಾ ಲೆಕ್ಕಾಚಾರದ ಕಸುಬು. ಗಮನಿಸಬೇಕಾದ ಮುಖ್ಯ ಅಂಶವೆಂದರೆ ಯಾವುದೇ ಮ್ಯುಚುಯಲ್ ಫಂಡಿಂಗ್ ಕಂಪನಿ ಇರಲಿ ಅದು ದೇಶದ  ಸಂವಿಧಾನಕ್ಕೆ, ಕಾನೂನಿಗೆ ಬದ್ಧವಾಗಿಯೇ ಕಾರ್ಯನಿರ್ವಹಿಸಬೇಕಾಗುತ್ತದೆ. ಆರ್.ಬಿ.ಐ, ಸೆಬಿ,(ಸೆಕ್ಯುರಿಟಿ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ)ನಿಂದ ಅನುಮತಿ ಪಡೆದು ನಿಬಂಧನೆಗಳಿಗೆ ಬದ್ಧವಾಗಿರಬೇಕಾಗುತ್ತದೆ. ವಿದೇಶಗಳಲ್ಲಿ ಹೂಡಿಕೆ ಮಾಡಿದ ಎನ್.ಆರ್.ಐ ಗಳು ಒಂದು ವರ್ಷದೊಳಗೆ ಮ್ಯುಚುಯಲ್ ಫಂಡ್ ಗಳನ್ನು ಮಾರಾಟ ಮಾಡಬೇಕು, ವಿದೇಶಗಳಲ್ಲಿ ಹೂಡಿಕೆ, ಹಿಂತೆಗೆತ ಸೇರಿದಂತೆ ಪ್ರತಿಯೊಂದಕ್ಕೂ ಸರಿಯಾದ ಲೆಕ್ಕ ಕೊಡಬೇಕು(ಭಾರತದಲ್ಲಿ ಹೂಡಿಕೆ ಮಾಡಿದರೆ ಲೆಕ್ಕ ಕೊಡಬೇಕಿಲ್ಲ ಎಂದಲ್ಲ, ವಿದೇಶದಲ್ಲಿ ಹೂಡಿದರೆ ವಿಶೇಷ ಎಚ್ಚರಿಕೆ ವಹಿಸಲಾಗುತ್ತದೆ ಅಷ್ಟೆ). ಹೀಗೆ ಹತ್ತು ಹಲವು ಷರತ್ತುಗಳು ವಿಧಿಸಲಾಗಿದೆ.
ಮತ್ತಷ್ಟು ಓದು »