ವಿಷಯದ ವಿವರಗಳಿಗೆ ದಾಟಿರಿ

Archive for

24
ನವೆಂ

ಅಸಹಿಷ್ಣುತೆ ಎಂಬ ಅರ್ಥವಾಗದ ಸುಳಿಯಲ್ಲಿ..

images– ಚೈತ್ರ, ಕುವೆಂಪು ವಿಶ್ವವಿದ್ಯಾನಿಲಯ.

ಇತ್ತೀಚೆಗೆ ಅಸಹಿಷ್ಣುತೆ ಎಂಬ ಶಬ್ಧ ಎಲ್ಲೆಡೆಯಲ್ಲಿಯೂ ಪ್ರಭಾವಿಯಾಗಿ ಚರ್ಚೆಗೊಳಗಾಗುತ್ತಿದೆ. ಈ ವಿಚಾರದ ಕುರಿತಾಗಿ ವಿವಿಧ ವಲಯಗಳಲ್ಲಿನ ಪ್ರಭಾವಿ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ನೀಡುತ್ತಿದ್ದಾರೆ. ಇವುಗಳನ್ನೆಲ್ಲ ಗಮನಿಸಿದರೆ 12ನೆ ಶತಮಾನದ ನಂತರ ಮತ್ತೊಂದು ಬೃಹತ್ ಚಳುವಳಿಯಾಗುತ್ತಿದೆ ಎಂದೇನಾದರೂ ಭಾವಿಸಿದರೆ ಅದು ಮಾಯೆ. ಪ್ರಸ್ತುತದಲ್ಲಿ ಕೆಲವು ಪಂಥಕ್ಕೆ ಮತ್ತು ಪಕ್ಷಕ್ಕೆ ಸೇರಿದ ಕೆಲವು ಸಾಹಿತಿಗಳು ಮತ್ತು ಪ್ರಶಸ್ತಿ ವಿಜೇತರು ತಮ್ಮ ಅಸಮಧಾನದಿಂದ ಕೆಲವು ಗಂಭೀರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕಂಡುಬರುತ್ತಿದೆ.  ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬ ಕಾರಣದಿಂದ ವಿಭಿನ್ನ ಚಟುವಟಿಕೆಗಳು ವಿಭಿನ್ನ (ಒಂದೇ ಎಂದರೂ ತಪ್ಪಾಗಲಾರದು) ಗುಂಪುಗಳಿಂದ ಬಿರುಸಾಗಿ ನಡೆಯುತ್ತಿವೆ. ಅಂದರೆ, ಕಂಡಕಂಡಲ್ಲಿ ತಮ್ಮ ಹೇಳಿಕೆಗಳನ್ನು ನೀಡುವುದು, ರಾಷ್ಟ್ರಪತಿಯವರನ್ನು ಭೇಟಿ ಮಾಡುವುದು ಹಾಗೂ ತಮಗೆ ಸಿಕ್ಕಿರುವ/ದಕ್ಕಿಸಿಕೊಂಡ ಪ್ರಶಸ್ತಿಗಳನ್ನು ಮರಳಿ ವಾಪಸ್ ಕಳುಹಿಸುತ್ತಿರುವುದು ಪ್ರಧಾನವಾಗಿ ಕಂಡುಬರುತ್ತಿರುವ ಕ್ರಿಯೆಗಳಾಗಿವೆ. ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಧೂಳೆಬ್ಬಿಸುತ್ತಿರುವವರು ತಾವು ತೊಡಗಿಸಿಕೊಂಡಿರುವ ಚಟುವಟಿಕೆಗಳಿಗೂ ಹಾಗೂ ಅವುಗಳಿಗೆ ನೀಡುತ್ತಿರುವ ಕಾರಣ ಸಮರ್ಥನೆಗಳಿಗೂ ಏನಾದರೂ ಸಂಬಂಧವಿದೆಯೇ? ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೆ? ಎಂದು ನೋಡಿದರೆ, ಖಂಡಿತ ಇಲ್ಲ. ಏಕೆಂದರೆ ಸಹಿಷ್ಣುತೆ ಎಂದರೇನು? ಎಂಬುದೇ ಸರಿಯಾಗಿ ತಿಳಿದಿಲ್ಲದಿರುವುದು ವಾಸ್ತವವಾಗಿದೆ.

ಇಲ್ಲಿ ಪ್ರಮುಖವಾಗಿ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳನ್ನು ಬದಿಗಿಟ್ಟು ನೋಡೋಣ. ಏಕೆಂದರೆ ಎಷ್ಟೇ ನಿಷ್ಪಕ್ಷಪಾತವಾಗಿ ಆಲೋಚಿದರೂ ಕಡೆಗೆ ಯಾವುದಾದರೂ ಒಂದು ಪಕ್ಷಕ್ಕೆ ಗಂಟುಹಾಕುವ ಮೂಲಕ ಟೀಕೆ ಟಿಪ್ಪಣಿ ಪ್ರಾರಂಭವಾಗುತ್ತವೆ. ಇತ್ತೀಚೆಗೆ ನಡೆಯುತ್ತಿರುವ ಅಸಹಿಷ್ಣುತೆ ಮತ್ತು ಪ್ರಶಸ್ತಿ ಹಿಂದಿರುಗಿಸುವಿಕೆ ಎರಡು ಬೇರೆ ಬೇರೆಯದೆ ಆದ ಸಂಗತಿಗಳಾಗಿವೆ. ಆದರೆ ಅವೆರಡನ್ನೂ ಒಂದಕ್ಕೊಂದು ಸಂಬಂಧ ಕಲ್ಪಿಸುವ ಮೂಲಕ ತಮ್ಮ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಮೊದಲಿಗೆ ಪ್ರಶಸ್ತಿ ಹಿಂದಿರುಗಿಸುತ್ತಿರುವುದರ ಔಚಿತ್ಯವನ್ನು ನೋಡಬೇಕಾಗುತ್ತದೆ. ದಿ.ಡಾ.ಕಲ್ಬುರ್ಗಿಯವರ ಹತ್ಯೆಯಿಂದ ಪ್ರಾರಂಭವಾದ ಪ್ರಶಸ್ತಿ ಹಿಂದಿರುಗಿಸುವಿಕೆಯ ಕಾರ್ಯವು ಇಂದು ರಾಷ್ಟ್ರಮಟ್ಟದಲ್ಲಿ ಸರೋದ್ ವಾದಕರಿಂದ ಹಿಡಿದು ಸಾಮಾನ್ಯ ಪ್ರಶಸ್ತಿಗಳನ್ನು ಪಡೆದವರವರೆಗೂ ಹಬ್ಬಿದೆ. ಹಿಂದಿರುಗಿಸುತ್ತಿರುವರೆಲ್ಲರಿಗೂ ಅವರವರದೇ ಆದ ಕಾರಣಗಳಿವೆ. ಆದರೂ ಅವೆಲ್ಲವಕ್ಕೂ ಅಸಹಿಷ್ಣುತೆಯ ಬಣ್ಣವನ್ನು ಹಚ್ಚಲಾಗುತ್ತಿದೆ. ಮತ್ತಷ್ಟು ಓದು »