ವಿಷಯದ ವಿವರಗಳಿಗೆ ದಾಟಿರಿ

Archive for

27
ನವೆಂ

ಹೆಚ್ಚುತ್ತಿರುವುದು ಅಸಹಿಷ್ಣುತೆಯೋ ಅಥವಾ ಅಭದ್ರತೆಯೋ…?

Red-billed_quelea_flocking_at_waterhole-ಡಾ. ಪ್ರವೀಣ್ ಟಿ. ಎಲ್. ಕುವೆಂಪು ವಿಶ್ವವಿದ್ಯಾನಿಲಯ

  ಕಳೆದ ಕೆಲವು ದಿನಗಳಿಂದಲೂ ನಮ್ಮ ಸುತ್ತ ಒಂದು ಗಂಭೀರ ಚರ್ಚೆ/ ವಿವಾದ/ಹೋರಾಟ ನಡೆಯುತ್ತಿದೆ. ಅದೆಂದರೆ “ಅಸಹಿಷ್ಣುತೆಯು ಹೆಚ್ಚುತ್ತಿರುವ ಕಾರಣಕ್ಕೆ ಪ್ರಶಸ್ತಿ ವಾಪಸು ಮಾಡುತ್ತಿರುವುದು ಮತ್ತು ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿರುವುದು”. ಆದರೆ ಹೀಗೆ ಹೇಳುತ್ತಿರುವವರೆಲ್ಲರೂ ಪ್ರಗತಿಪರ, ಎಡಪಂಥೀಯ ಚಿಂತನೆಯ ಪಾಲುದಾರರೇ ಆಗಿರುವುದು ಆಶ್ಚರ್ಯ. ಯಾವುದೇ ಒಂದು ವಾದವನ್ನು ಮಂಡಿಸಬೇಕಾದರೆ ತಾರ್ಕಿಕತೆ ಮತ್ತು ವಾದವನ್ನು ಬಲಪಡಿಸುವ ಫ್ಯಾಕ್ಟ್ ಗಳು ಮುಖ್ಯವಾಗುತ್ತದೆ. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳುತ್ತಿರುವ ಸಾಹಿತಿಗಳಾಗಲೀ, ರಾಜಕಾರಣಿಗಳಾಗಲೀ, ಸಿನಿಮಾ ಸ್ಟಾರ್ ಗಳಾಗಲೀ ಅದನ್ನು ಸಾಭೀತು ಪಡಿಸುವ ಗೋಜಿಗೆ ಹೋಗದಿರುವುದು ಅವರ ವಾದದ ಟೊಳ್ಳುತನಕ್ಕೆ ಹಿಡಿದ ಕನ್ನಡಿ. ಆದರೆ ತಮ್ಮ ಟೊಳ್ಳುತನದ ಪ್ರದರ್ಶನಕ್ಕೆ ಈ ಮಟ್ಟದ ಪೈಪೋಟಿಗೆ ಬಿದ್ದಿರುವುದು ಮಾತ್ರ ವಿಪರ್ಯಾಸ. ಅದೇನೆ ಇರಲಿ ಈ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಬೇಕಿರುವುದು ನಮ್ಮ ಕರ್ತವ್ಯ.   ಮತ್ತಷ್ಟು ಓದು »

27
ನವೆಂ

ಹೊಸತನದ ಹುಡುಕಾಟ ಇಂದಿನ ಅಗತ್ಯತೆ: ಡಾ.ಎಂ.ಮೋಹನ್ ಆಳ್ವ

– ಶ್ರೀಗೌರಿ ಎಸ್.ಜೋಶಿ,ಪತ್ರಿಕೋದ್ಯಮ ವಿಭಾಗ
ಆಳ್ವಾಸ್ ಕಾಲೇಜು,ಮೂಡುಬಿದಿರೆ

ನೇರಸಂದರ್ಶನದಲ್ಲಿ ಮಹತ್ವದ ವಿಚಾರಗಳನ್ನು ತೆರೆದಿಟ್ಟ `ಮೂಡುಬಿದಿರೆಯ ಕನಸುಗಾರ’

ಆಳ್ವಾಸ್ ನುಡಿಸಿರಿ೨೦೧೫`ಕನ್ನಡಭಾಷೆಯನ್ನು ಬೆಳೆಸುವ, ಕನ್ನಡ ಕಟ್ಟುವ ಕಾರ್ಯಗಳನ್ನು ಕೇವಲ ಸರಕಾರ, ಅಕಾಡೆಮಿಗಳೇ ಏಕೆ ಮಾಡಬೇಕು?ಕನ್ನಡ ಮನಸ್ಸುಗಳನ್ನು ಕಟ್ಟುವ ಕೈಂಕರ್ಯ ಒಬ್ಬ ಶ್ರೀಸಾಮಾನ್ಯನಿಂದ ಏಕೆ ಆಗಬಾರದು?’ ಎಂಬ ಆಶಯದೊಂದಿಗೆ ಆರಂಭವಾದ ಕನ್ನಡದ ಹಬ್ಬ `ಆಳ್ವಾಸ್ ನುಡಿಸಿರಿ’. ಈ ಕನ್ನಡ ಉತ್ಸವದ ರೂವಾರಿ `ಸಂಸ್ಕೃತಿಯ ಹರಿಕಾರ’ ಎಂದೇ ಖ್ಯಾತರಾದ ಡಾ.ಎಂ. ಮೋಹನ್ ಆಳ್ವರು. ಪ್ರಸ್ತುತ ಕಾಲಘಟ್ಟದಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ಹೊಸತನಗಳಿಗೆ ಸ್ಪಂದಿಸುವುದು ಅಗತ್ಯವೆಂದು ಹೇಳುವ ಡಾ.ಆಳ್ವರು `ಕರ್ನಾಟಕ:ಹೊಸತನದ ಹುಡುಕಾಟ’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ಈ ಸಲದ ನುಡಿಸಿರಿಯನ್ನು ಆಯೋಜಿಸಿದ್ದಾರೆ. ಹೊಸತನ ಎಂದರೇನು, ಹೊಸತನದಡಿಯಲ್ಲಿ ನುಡಿಸಿರಿಯ ಆಯಾಮಗಳೇನು ಎಂಬುದರ ಕುರಿತು  ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದು ಹೀಗೆ…

ಪ್ರ: `ಆಳ್ವಾಸ್ ನುಡಿಸಿರಿ’ ಪ್ರತಿಸಲವೂ `ಕನ್ನಡ ಮನಸ್ಸು’ ಎಂಬ ಮುಖ್ಯ ಪರಿಕಲ್ಪನೆಯಡಿಯಲ್ಲಿ ನಡೆಯುತ್ತಿತ್ತು.ಆದರೆ ಈ ಸಲದ ಕೇಂದ್ರ ವಿಷಯವನ್ನು `ಕರ್ನಾಟಕ: ಹೊಸತನದ ಹುಡುಕಾಟ’ ಎಂದು ಬದಲಾಯಿಸಿದ್ದೀರಿ. ಈ ಬದಲಾವಣೆಯ ಹಿನ್ನೆಲೆಯೇನು?

12 ವರ್ಷಗಳಿಂದ ಕನ್ನಡ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಬೇರೆ ಬೇರೆ ಪರಿಕಲ್ಪನೆ ಕೊಟ್ಟಿದ್ದೇವೆ. ಆಳ್ವಾಸ್ ವಿಶ್ವನುಡಿಸಿರಿ-ವಿರಾಸತ್ ಸಂದರ್ಭದಲ್ಲಿ ಮುಖ್ಯ ವಿಷಯ `ಕನ್ನಡ ಮನಸ್ಸು: ಅಂದು, ಇಂದು, ಮುಂದು’ ಎಂದಿತ್ತು.ಈ ಸಲದ ಕೇಂದ್ರ ವಿಷಯವನ್ನು `ಕರ್ನಾಟಕ: ಹೊಸತನದ ಹುಡುಕಾಟ’ ಎಂದು ಬದಲಾಯಿಸಲಾಗಿದೆ. ಏಕೆಂದರೆ ನಮ್ಮ ಬದುಕು, ಸಂಸ್ಕೃತಿ ನಿಂತ ನೀರಾಗಬಾರದು. ನಾವು ಯಾವತ್ತೂ ಹೊಸತನದ ಹುಡುಕಾಟದಲ್ಲಿರಬೇಕು. ಇಲ್ಲದಿದ್ದರೆ ನಾವು ಸವಕಲು ನಾಣ್ಯಗಳಾಗುತ್ತೇವೆ. ಹೊಸತನದೊಟ್ಟಿಗೆ ಹೋದಾಗ ಮಾತ್ರ ನಾವು ಚಲಾವಣೆಯಲ್ಲಿರುವ ನಾಣ್ಯಗಳಾಗುತ್ತೇವೆ. ಹೊಸತನದ ಹುಡುಕಾಟ ಇಂದಿನ ಅಗತ್ಯತೆ. ಕಾಲಕ್ಕೆ ಸರಿಯಾಗಿ ನಾವು ಸ್ಪಂದಿಸಬೇಕು ಹಾಗೂ ಅತ್ಯಂತ ಅವಶ್ಯಕವೂ ಹೌದು. ಈ ದೃಷ್ಟಿಯಲ್ಲಿ ನಾವು ನುಡಿಸಿರಿಯ ಕೇಂದ್ರ ವಿಷಯವನ್ನು `ಕರ್ನಾಟಕ:ಹೊಸತನದ ಹುಡುಕಾಟ’ ಎಂದು ಬದಲಾಯಿಸಿದ್ದೇವೆ.
ಮತ್ತಷ್ಟು ಓದು »