ವಿಷಯದ ವಿವರಗಳಿಗೆ ದಾಟಿರಿ

Archive for

8
ಏಪ್ರಿಲ್

ಯುಗಾದಿಯ ತಗಾದೆ

– ನಾಗೇಶ್ ಮೈಸೂರು

ಯುಗಾದಿ ಹಬ್ಬದ ಶುಭಾಶಯಗಳುಗುಬ್ಬಣ್ಣ ‘ಗುರ್ರ್’ ಎಂದು ಏದುಸಿರಲ್ಲೆ ಭುಸುಗುಟ್ಟುತ್ತ, ಧುಮುಗುಟ್ಟುತ್ತಲೆ ಮನೆಯೊಳಗೆ ಕಾಲಿಟ್ಟಾಗ ಇಂದೇಕೊ ಅಪರೂಪಕ್ಕೆ ಗುಬ್ಬಣ್ಣನಿಗು ಕೋಪ ಬಂದಿರುವಂತಿದೆಯಲ್ಲ ಅನಿಸಿ ಕುತೂಹಲವಾಯ್ತು. ಸಹನೆಯಲ್ಲಿ ಸಾಧು ಸಂತರ ಅಪರಾವತಾರವಾದ ಗುಬ್ಬಣ್ಣ ಕೂಗಾಡಿದರು ಪೂಜೆಗೆ ದೇವರ ಮೇಲೆಸೆದ ಹೂವಂತಿರುವುದನ್ನು ಮಾತ್ರ ಕಂಡಿದ್ದ ನನಗೆ, ಅವನ ಈ ಅವತಾರ ಸ್ವಲ್ಪ ಹೊಸದು. ಅದರಲ್ಲು ಮನೆಯಲ್ಲಿ ನರಸಿಂಹಿಣಿಯವತಾರದ ‘ಫುಲ್ ಟೈಮ್ ಕಾಂಟ್ರಾಕ್ಟ್’ ಅನ್ನು ಅವನ ಶ್ರೀಮತಿಯೆ ಶ್ರದ್ಧಾಪೂರ್ವಕವಾಗಿ (ಬಲಾತ್ಕಾರವಾಗಿಯೆ), ವಹಿಸಿಕೊಂಡ ಮೇಲೆ ಗುಬ್ಬಣ್ಣ ಇನ್ನೂ ತೀರಾ ಸಾಧುವಾಗಿಬಿಟ್ಟಿದ್ದ. ಅದೇ ಹಿನ್ನಲೆಯಲ್ಲೆ,

‘ ಗುಬ್ಬಣ್ಣ… ಯಾಕೊ ಮುಖವೆಲ್ಲ ಕೆಂಪಗೆ ಚೆಂಡು ಮಲ್ಲಿಗೆಯಾಗಿಬಿಟ್ಟಿದೆ ? ಜ್ವರ ಗಿರ ಬಂದುಬಿಟ್ಟಿದಿಯಾ ಹೇಗೆ ? ಹುಷಾರಾಗಿದ್ದೀಯಾ ತಾನೆ ?’ ಎಂದೆ ಒಂದೆ ಉಸಿರಲ್ಲಿ.

Read more »

8
ಏಪ್ರಿಲ್

ಕಮ್ಯುನಿಸ್ಟರ ರಕ್ತ ಚರಿತ್ರೆಯ ಪುಟಗಳು

– ರಾಕೇಶ್ ಶೆಟ್ಟಿ

ನಕ್ಸಲ್ಇತ್ತೀಚೆಗೆ ಹೈದರಾಬಾದ್ ಯುನಿವರ್ಸಿಟಿಯ ರೋಹಿತ್ ವೆಮುಲ ಎಂಬ ಯುವಕನ ಆತ್ಮಹತ್ಯೆ ಹಾಗೂ ದೆಹಲಿಯ ಜೆ.ಎನ್.ಯು ವಿವಾದಗಳ ಸಮಯದಲ್ಲಿ ಕಾಕಗಳು (ಕಾಂಗ್ರೆಸ್+ಕಮ್ಯುನಿಸ್ಟ್) ಮೋದಿಯವರ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಉಯಿಲೆಬ್ಬಿಸಿದ್ದಾರೆ.ಕರ್ನಾಟಕದಲ್ಲಿರುವ ಇವರ ಅಣ್ತಮ್ಮಂದಿರು ದಿನ ಬೆಳಗಾದರೆ ಟೌನ್ ಹಾಲ್ ಎದುರು ನಿಲ್ಲುತ್ತಿದ್ದಾರೆ. ಆದರೆ,ಯುನಿವರ್ಸಿಟಿ,ವಿದ್ಯಾರ್ಥಿಗಳ ಬಗ್ಗೆ ಮಾತನಾಡುವ ನೈತಿಕತೆ ಕಾಕಗಳಿಗಿದೆಯೇ? ಕರ್ನಾಟಕದ ಕುವೆಂಪು ಯುನಿವರ್ಸಿಟಿಯಲ್ಲಿದ್ದ CSLC ಎಂಬ ಸಂಶೋಧನಾ ಕೇಂದ್ರವನ್ನು ಮುಚ್ಚಿಸಿದ್ದು ಇದೇ ಕಾಂಗ್ರೆಸ್ ಸರ್ಕಾರ,ಮುಚ್ಛಿಸುವಂತೆ ಒತ್ತಡ ಹಾಕಿದ್ದು ಟೌನ್ ಹಾಲ್ ಬುದ್ಧಿಜೀವಿಗಳೇ. ಕಾಂಗ್ರೆಸ್ಸಿನವರ ಇತಿಹಾಸ ಎಲ್ಲರಿಗೂ ತಿಳಿದಿರುವುದೇ.ಆದರೆ ಈ ಕಮ್ಯುನಿಸ್ಟರ ಪುಣ್ಯ ಕಾರ್ಯಗಳ ಬಗ್ಗೆ ಸ್ವಲ್ಪ ಹೇಳಬೇಕು. (ಇದು ಕೇವಲ ಕೇರಳದ ಕಮ್ಯುನಿಸ್ಟರ ಇತಿಹಾಸ.ಬಂಗಾಳದ ಕಾಮ್ರೇಡುಗಳ ಕತೆ ಇದಕ್ಕೂ ದೊಡ್ಡದು)

ಅದು ಸೆಪ್ಟಂಬರ್ ೧೭,೧೯೯೬ರ ದಿನ.ಕೇರಳದ ಪರುಮಲ ಜಿಲ್ಲೆಯ ದೇವಸ್ವೋಮ್ ಕಾಲೇಜಿನ ಕ್ಯಾಂಪಸ್ಸಿಗೆ ಲಗ್ಗೆಯಿಟ್ಟ ಕಮ್ಯುನಿಸ್ಟರು ‘ಅನು,ಸುಜಿತ್,ಕಿಮ್’ ಎಂಬ ಎಬಿವಿಪಿಯ ಕಾರ್ಯಕರ್ತರ ಮೇಲೆ ಮುಗಿಬಿದ್ದರು.ಎಬಿವಿಪಿಯೊಂದಿಗೆ ಗುರುತಿಸಿಕಂಡಿದ್ದೇ ಈ ಹುಡುಗರು ಮಾಡಿದ್ದು ತಪ್ಪು,ಕೇರಳದಲ್ಲಿ ಕಮ್ಯುನಿಸ್ಟರು ನಿಮ್ಮನ್ನು ಸುತ್ತುವರೆದರೆಂದರೇ ಸ್ಟಾಲಿನ್/ಮಾವೋ ಪ್ರೇತಾತ್ಮ ಮೃತ್ಯು ರೂಪದಲ್ಲಿ ನಿಮ್ಮೆದುರು ಬಂದು ನಿಂತಂತೆಯೇ ಸರಿ.ಪ್ರಾಣ ಉಳಿಸಿಕೊಳ್ಳಲು ಓಡಿದ ಈ ಹುಡುಗರು ಪಂಪಾ ನದಿಗೆ ಹಾರಿ ಈಜಲಾರಂಭಿಸಿದ್ದರು.ನೀರಿಗೆ ಬಿದ್ದ ವಿದ್ಯಾರ್ಥಿಗಳ ಮೇಲೆ ಕಮ್ಯುನಿಸ್ಟ್ ಗೂಂಡಾಗಳು ಕಲ್ಲು ತೂರಲಾರಂಭಿಸಿದರು. ಆಚೆ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಣ್ಣು ಮಕ್ಕಳು ಕಮ್ಯುನಿಸ್ಟರ ಕಲ್ಲಿನೇಟಿಗೆ ತುತ್ತಾಗಿ ಮುಳುಗುತ್ತಿದ್ದ ಹುಡುಗರತ್ತ ಸೀರೆಗಳನ್ನೆಸೆದು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೇ,ಮಹಿಳಾವಾದದ ಭಾಷಣ ಬಿಗಿಯುವ ಕಾಮ್ರೇಡುಗಳು ಅವರ ಮೇಲೆ ಕಲ್ಲಿನ ಮಳೆ ಸುರಿದರು.ವಿಧಿಯಿಲ್ಲದೇ ಆ ಹೆಣ್ಣುಮಕ್ಕಳು ಪ್ರಾಣ ಉಳಿಸಿಕೊಳ್ಳಲು ಓಡಿದರು.ಇತ್ತ ಹದಿಹರೆಯದ ವಿದ್ಯಾರ್ಥಿಗಳ ಪ್ರಾಣಕ್ಕೆ ಆಜಾದಿ ಸಿಕ್ಕಿತ್ತು.ಸ್ಟಾಲಿನ್ ಘೋರಿಯೊಳಗಿಂದಲೇ ಲಾಲ್ ಸಲಾಂ ಎಂದನೇನೋ. ಕಡೆಗೇನಾಯ್ತು.ಅವರದ್ದೇ ಸರ್ಕಾರ,ಅವರು ಮಾಡಿದ್ದೇ ಕಾನೂನು.ಯಾರೆಂದರೇ ಯಾರಿಗೂ ಶಿಕ್ಷೆಯಾಗಲಿಲ್ಲ.ಇಂದು ಅದೇ ಕಮ್ಯುನಿಸ್ಟರು ವಿದ್ಯಾರ್ಥಿಗಳ ಆಜಾದಿ ಬಗ್ಗೆ ಮಾತನಾಡುತಿದ್ದಾರೆಂದರೇ ಎಂತ ವ್ಯಂಗ್ಯವಲ್ಲವೇ?

Read more »

8
ಏಪ್ರಿಲ್

ಬಡ್ಜೆಟ್ಟೆಂಬ ಬಕಾಸುರ

– ನಾಗೇಶ ಮೈಸೂರು

union-budget-inner14-newಈಗ ನಾನು ಹೇಳ ಹೊರಟಿರುವುದು ವಾರ್ಷಿಕ ಬಡ್ಜೆಟ್ಟಿನ (ಆಯವ್ಯಯ ಲೆಕ್ಕಾಚಾರ) ಕುರಿತು. ಪ್ರತಿ ವರ್ಷದ ಫೆಬ್ರವರಿ ಕೊನೆಗೆ ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸುವ ದೇಶದ ಬಡ್ಜೆಟ್ಟಲ್ಲ ಬಿಡಿ. ಸ್ವಲ್ಪ ಪುಟ್ಟ ಮಟ್ಟದಲ್ಲಿ ಕಂಪನಿಗಳಲ್ಲಿ ನಡೆಯುವ ವಾರ್ಷಿಕ ಬಡ್ಜೆಟ್ಟಿನ ಕುರಿತು. ಕಂಪನಿ ಚಿಕ್ಕದೋ, ಮಧ್ಯಮ ಗಾತ್ರದ್ದೋ, ದೊಡ್ಡದೋ ಒಟ್ಟಾರೆ ಒಂದಲ್ಲಾ ಒಂದು ರೀತಿ ಆಯವ್ಯಯದ ಲೆಕ್ಕಾಚಾರ ನಡೆದೇ ನಡೆಯುತ್ತದೆ. ಆಯಾ ಸಂಸ್ಥೆಯ ವಾತಾವರಣಕ್ಕೆ ಸರಿ-ಸೂಕ್ತ ಮಟ್ಟದಲ್ಲಿ.

ತುಂಬ ಸರಳವಾಗಿ ಹೇಳುವುದಾದರೆ ಈ ಇಡೀ ವಾರ್ಷಿಕ ವ್ಯಾಯಾಮ ಎರಡು ಮುಖ್ಯ ಅಂಶಗಳ ಸುತ್ತ ಗಿರಕಿ ಹೊಡೆಯುವ ಪುನರಾವರ್ತನ ಚಕ್ರ. ಮೊದಲಿಗೆ ಸಂಸ್ಥೆಗೆ ಆ ವರ್ಷದಲ್ಲಿ ಏನೆಲ್ಲ ಮೂಲೆಗಳಿಂದ ಬರಬಹುದಾದ ಆದಾಯದ ಅಂದಾಜು ಮಾಡಿಟ್ಟುಕೊಳ್ಳುವುದು. ಮತ್ತೊಂದು ಕಡೆಯಿಂದ ಆ ಆದಾಯ ಮೂಲಕ್ಕೆ ಸಂವಾದಿಯಾಗಿ ಏನೆಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಾಗಿ ಬರುವುದೋ ಎಂದು ಅಂದಾಜು ಲೆಕ್ಕಾಚಾರ ಹಾಕುವುದು. ಇವೆರಡು ಅಂದಾಜುಗಳನ್ನು ಕ್ರೋಢಿಕರಿಸಿದರೆ ಒಟ್ಟಾರೆ ನಿವ್ವಳ ಲಾಭ, ನಷ್ಟಗಳ ಅಂದಾಜು ಸಿಗುತ್ತದೆ. ಜತೆಗೆ ಅದನ್ನು ನಿಭಾಯಿಸಲು ಬೇಕಾದ ಹಣ ಬಲ, ಜನ ಬಲ, ಯಂತ್ರ ಬಲ ಇತ್ಯಾದಿಗಳ ಸ್ಥೂಲ ಅಂದಾಜು ಸಿಗುತ್ತದೆ. ಇದನ್ನು ಗುರಿಯತ್ತ ನಡೆಸುವ ಆಧಾರವಾಗಿಟ್ಟುಕೊಂಡು ತಮ್ಮಲ್ಲಿನ ಹಣಕಾಸು ಮತ್ತಿತರ ಸಂಪನ್ಮೂಲಗಳನ್ನು ಸಮರ್ಥವಾಗಿ ಸರಿಯಾದ ಕಡೆ ವಿನಿಯೋಗಿಸಲು ಪ್ರಯತ್ನಿಸುವುದು ಇದರ ಮೂಲೋದ್ದೇಶ. ಹಣ ತುಟ್ಟಿಯಾದ ಕಾರಣ ಮತ್ತು ಹೇರಳವಾಗಿ ದೊರಕದ ಸಂಪನ್ಮೂಲವಾದ ಕಾರಣ ಇರುವಷ್ಟು ಹಣದ ಸೂಕ್ತ ಸದ್ವಿನಿಯೋಗ ಮಾಡಿಕೊಳ್ಳುವುದು ಅತಿ ಮುಖ್ಯವಾದ ಅಂಶ. ಆಯ ವ್ಯಯದ ಲೆಕ್ಕಾಚಾರ ಈ ದಿಸೆಯಲ್ಲಿ ನಡೆಯಲು ಸಹಕಾರಿಯಾಗುವ ಹೆಜ್ಜೆ ಮತ್ತು ನಿಭಾಯಿಸಿ ಸಂಭಾಳಿಸುವ ಆಯುಧ. Read more »