ವಿಷಯದ ವಿವರಗಳಿಗೆ ದಾಟಿರಿ

Archive for

19
ಏಪ್ರಿಲ್

‘ಅಪರೇಷನ್ ಪೀಠತ್ಯಾಗ’ದ ಸೂತ್ರದಾರರು ಯಾರು?

– ಮಂಜುನಾಥ ಹೆಗಡೆ

FB_IMG_1460892892983ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮೇಲೆ ಬಂದಂತಹ ಅತ್ಯಾಚಾರ ಆರೋಪವನ್ನು ಇತ್ತೀಚೆಗೆ ನ್ಯಾಯಾಲಯವು ತಳ್ಳಿಹಾಕಿ, “ಇದು ಶ್ರೀಗಳನ್ನು ಸಿಕ್ಕಿಹಾಕಿಸಲು ನಡೆಸಿದ ಷಡ್ಯಂತ್ರ” ಎಂದು ಷರಾ ಬರೆದಿದ್ದಲ್ಲದೇ, CID ಮತ್ತು FSLಗಳನ್ನು ಕೂಡ ತರಾಟೆಗೆ ತೆಗೆದುಕೊಂಡಿದೆ. ಹಾಗಾದರೆ ಯಾರು, ಯಾಕಾಗಿ ಒಂದು ಧಾರ್ಮಿಕ ಸಂಸ್ಥೆಯ ಮೇಲೆ ಹಗೆ ಸಾಧಿಸಲು ಹೊರಟಿದ್ದಾರೆ ? ಯಾರು ಮಠವನ್ನು ಇನ್ನಿಲ್ಲವಾಗಿಸುವ “ಷಡ್ಯಂತ್ರ” ಮಾಡುತ್ತಿದ್ದಾರೆ? ಆಮೂಲಾಗ್ರವಾಗಿ ಎಲ್ಲವನ್ನೂ ಪರಿಶೀಲಿಸಬೇಕಾಗಿದೆ!

ಸುಮಾರು 1200 ವರ್ಷಗಳ ಹಿಂದೆ ಆದಿಶಂಕರಾಚಾರ್ಯರು ಗೋಕರ್ಣದ ಸಮೀಪದ ಅಶೋಕೆಯಲ್ಲಿನ ಸೌಮ್ಯ ಪ್ರಕೃತಿಯ ಮಡಿಲಲ್ಲಿ ಧರ್ಮಪಾಲನೆಗಾಗಿ ಮಠವೊಂದನ್ನು ಸ್ಥಾಪಿಸಿ ತಮ್ಮ ಜ್ಯೇಷ್ಠ ಶಿಷ್ಯ ಸುರೇಶ್ವರಾಚಾರ್ಯರಿಂದ ಸನ್ಯಾಸ ದೀಕ್ಷೆ ಪಡೆದು ತಮ್ಮಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾನಂದರನ್ನು ಪೀಠಾಧಿಪತಿಯನ್ನಾಗಿ ಮಾಡಿ ಗೋಕರ್ಣ ದೇವಾಲಯದ ಆಡಳಿತವೂ ಸೇರಿದಂತೆ ಹಲವಾರು ಹೊಣೆಗಾರಿಕೆಗಳನ್ನು ಕೊಡುತ್ತಾರೆ. ಇದು ರಾಜಗುರುಪೀಠವಾಗಿದ್ದು ಸಮಾಜದ ಅಂತರಂಗ ಮತ್ತು ಬಹಿರಂಗ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದೆ. ಅಲ್ಲಿಂದ ಇಲ್ಲಿನವರೆಗೂ ಶ್ರೀಮಠದ ಮಾರ್ಗದರ್ಶನದಲ್ಲಿ ಧರ್ಮಪಾಲನೆ ನಡೆಯುತ್ತಾ ಬಂದಿದೆ. ಶಂಕರರಿಂದ ಆರಂಭಿಸಿ 35 ತಲೆಮಾರುಗಳು ಕಳೆದಿವೆ. ಪ್ರಸ್ತುತ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು 36ನೇ ಪೀಠಾಧೀಶರಾಗಿರುತ್ತಾರೆ. ಶ್ರೀಗಳ ಪ್ರೇರಣೆಯಂತೆ ಬಿಂದು-ಸಿಂಧು, ಮುಷ್ಟಿಭಿಕ್ಷೆ, ವಿದ್ಯಾನಿಧಿ, ಕಾಮದುಘಾ, ಗುರುಕುಲ, ಭಾರತೀ ವಿದ್ಯಾಲಯಗಳು, ಗ್ರಾಮರಾಜ್ಯ, ವಿದ್ಯಾನಿಧಿ, ಜೀವನದಾನ ಮೊದಲಾದ ಹತ್ತು ಹಲವಾರು ಸಮಾಜಮುಖಿ ಯೋಜನೆಗಳು ಆರಂಭಗೊಂಡವು. ಅಷ್ಟಾಗಿ ಮಠದ ಸಂಪರ್ಕ ಇಲ್ಲದವರೂ ಮಠಕ್ಕೆ ಬರಲಾರಂಭಿಸಿದರು! ಮಠದ ಪ್ರಸಿದ್ಧಿಯೂ ಜಾಸ್ತಿಯಾಗುತ್ತಾ ಬಂತು! ಬರೀ ಜಪ-ತಪ-ಅನುಷ್ಠಾನಗಳೇ ಆಗಿದ್ದರೆ ತೊಂದರೆ ಇರಲಿಲ್ಲವೇನೋ! ಆದರೆ ಇದು ರಾಜಗುರು ಪೀಠ. ಇಲ್ಲಿ ಕಾವಿಯೂ ಇದೆ, ಕಿರೀಟ-ಶ್ವೇತಛತ್ರಗಳೂ ಇವೆ! ಸಮಾಜದಲ್ಲಿ ನಡೆಯುವ ಅಧರ್ಮ ಕಾರ್ಯಗಳ ನಿಗ್ರಹವೂ ಪೀಠದ ಹೊಣೆಯಾಗಿರುತ್ತದೆ! ಮತ್ತಷ್ಟು ಓದು »

19
ಏಪ್ರಿಲ್

ಸೋಸುಕ (ಫಿಲ್ಟರ್)

– ಎಸ್ ಎನ್ ಸಿಂಹ, ಮೇಲುಕೋಟೆ

man-on-seesaw-with-heart-and-brainಕೋಪದ ಭರದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ಸರಿಯಾಗಿರುತ್ತವೆ ಎಂದು ನೀವು ಈಗಲೂ ಭಾವಿಸುತ್ತೀರಾ? ಎಂದ.
ದೂರಾನ್ವಯದೋಷದಿಂದ ಕೂಡಿದೆಯೆಂಬಂತೆ ಭಾಸವಾಗುವ ಇಂತಹ ವಾಕ್ಯಗಳು ಸಾಮಾನ್ಯ ಜನರಿಗೆ ಒಂದೇ ಸಲಕ್ಕೆ ಅರ್ಥವಾಗುವುದಿಲ್ಲ.
ಅವಳಿಗೂ ಹಾಗೇ ಆಯಿತು. ರೈಲು ನಿಲ್ದಾಣದ ಸಿಮೆಂಟು ಬೆಂಚಿನ ಮೇಲೆ ಮಗುವಿನೊಂದಿಗೆ ಕುಳಿತಿದ್ದ ಅವಳು ಗಲಿಬಿಲಿಗೊಂಡು, ಏನು? ಎಂದಳು.
ಸಿಟ್ಟಿನಲ್ಲಿ ತಗೋಳೋ ತೀರ್ಮಾನಗಳು ಸರಿಯಾಗಿರುತ್ವೆ ಅಂತೀರಾ? ಅಂದ.
ಅದಕ್ಕೇನೂ ಉತ್ತರಿಸದೆ, ‘ಊಟದ ಪಾರ್ಸೆಲ್ ಜೊತೆ ಚಾಕಲೇಟೂ ಬೇಕಂತೆ ಅಂತ ಡ್ಯಾಡಿಗೆ ಹೇಳಿ ತೆಗೆಸ್ಕೊಂ ಬಾ’ ಎಂದು ತನ್ನ ಮಗುವಿಗೆ ಹೇಳಿ ಕಳಿಸಿದಳು. ಖುಷಿಯಿಂದ ಓಡಿತು ಮಗು.
ಇವನ ಕಣ್ಣುಗಳಲ್ಲಿ ಮಾತ್ರ ಅದೇ ಪ್ರಶ್ನೆ ಸ್ಥಾಯಿಯಾಗಿ ನಿಂತಿದೆ.
ಬಲವಂತವಾಗಿ ನಗುತ್ತಾ, ನೀವು ಈಗಲೂ ಹಾಗೇ ಒಗಟಾಗಿಯೇ ಮಾತಾಡುತ್ತೀರಿ ಅಂದಳು. ಮತ್ತಷ್ಟು ಓದು »