‘ಹೊಸ ತಲೆಮಾರಿನ ತಲ್ಲಣ’ ಕೃತಿ ಪರಿಚಯ
– ಮು.ಅ ಶ್ರೀರಂಗ ಬೆಂಗಳೂರು
ಡಾ. ರಹಮತ್ ತರೀಕೆರೆ ಅವರ ಸಂಪಾದಕತ್ವದಲ್ಲಿ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಅವರು ೨೦೦೮ರಲ್ಲಿ ಪ್ರಕಟಿಸಿರುವ ‘ಹೊಸ ತಲೆಮಾರಿನ ತಲ್ಲಣ’ ಕೃತಿಯ ಒಂದು ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ. ಈ ಕೃತಿಯಲ್ಲಿ ಒಟ್ಟು ೩೮ ಲೇಖನಗಳಿವೆ. ಸಂಪಾದಕರಾದ ರಹಮತ್ ತರೀಕೆರೆಯವರು ತಮ್ಮ ಮುನ್ನುಡಿಯಲ್ಲಿ ಹೇಳಿರುವಂತೆ ‘ಈ ಸಂಕಲನವು ಬರಹದಲ್ಲಿ ತೊಡಗಿಕೊಂಡಿರುವವರಿಗೂ, ಸಾಹಿತ್ಯ ಅಧ್ಯಯನ ಮಾಡುವವರಿಗೂ, ಸಾಹಿತ್ಯದಲ್ಲಿ ಸಾಮಾನ್ಯ ಆಸಕ್ತಿ ಇರಿಸಿಕೊಂಡಿರುವ ಓದುಗರಿಗೂ ಉಪಯುಕ್ತ ಆಗಬಹುದು’. ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ಹೊಸತಲೆಮಾರಿನ ಲೇಖಕರ ಆತ್ಮ ಕಥಾನಾತ್ಮಕ ಮಾದರಿಯ ಬರಹಗಳಿವೆ. ಎರಡನೇ ಭಾಗದ ಬರಹಗಳು ಸಂಪಾದಕರ ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಕೊಟ್ಟ ಉತ್ತರವಾಗಿ ಮೂಡಿಬಂದ ಲೇಖನಗಳಿವೆ. ಮೂರನೇ ಭಾಗದಲ್ಲಿ ಈ ಎರಡೂ ಭಾಗದ ಬರಹಗಳಿಗೆ ಸಂಪಾದಕರು ಮಾಡಿರುವ ‘ತಲ್ಲಣಗಳ ಸ್ವರೂಪ’ ಎಂಬ ಉತ್ತಮ ವಿಶ್ಲೇಷಣೆ ಇದೆ. ಮತ್ತಷ್ಟು ಓದು