ಧಾರಾವಾಹಿಗಳ ಜಗದಲ್ಲೊಂದು ಸುತ್ತು..
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಓದು ನನಗಿರುವ ಏಕೈಕ ಹವ್ಯಾಸ. ತುಂಬ ಟಿವಿ ನೋಡುವ ಅಭ್ಯಾಸ ನನಗಿಲ್ಲ. ಆಗೊಮ್ಮೆ ಈಗೊಮ್ಮೆ ಕ್ರಿಕೆಟ್ಟು ನೋಡುವುದು ಬಿಟ್ಟರೆ ನಾನು ಟಿವಿಯಿಂದ ದೂರವೇ. ಕೆಲವು ದಿನಗಳ ಹಿಂದೆ ಸುಮ್ಮನೇ ಟಿವಿಯ ರಿಮೋಟಿನ ಬಟನ್ನುಗಳನ್ನು ಒತ್ತುತ್ತಾ ಚಾನಲ್ಲು ಬದಲಿಸುತ್ತಾ ಕುಳಿತಿದ್ದವನ ಕಣ್ಣಿಗೆ ಬಿದ್ದದ್ದು ಹೊಸ ಧಾರಾವಾಹಿಯೊಂದರ ಜಾಹಿರಾತು. ಸುಮಾರು ಐದಾರು ವರ್ಷದ ಬಾಲಕಿಯೊಬ್ಬಳು ಕುಂಟಾಬಿಲ್ಲೆ ಆಟವಾಡುತ್ತ ಮಾತನಾಡುವ ಜಾಹಿರಾತು ಕೆಲಕಾಲ ನನ್ನ ಗಮನವನ್ನು ತನ್ನತ್ತ ಸೆಳೆಯಿತು. ಅಲ್ಲಿ ಆಡುತ್ತಿದ್ದ ಪುಟ್ಟ ಹುಡುಗಿಯ ಗೆಳೆಯನೊಬ್ಬ ಓಡುತ್ತ ಬಂದು,”ಏಯ್ ಗಂಗಾ ನಿನ್ನ ಗಂಡ ಸತ್ತೋದ್ನಡಾ, ನೀ ವಿಧವೆ ಆದ್ಯಡಾ (ಏಯ್ ಗಂಗಾ ನಿನ್ನ ಗಂಡ ಸತ್ತು ನೀನು ವಿಧವೆಯಾದೆಯಂತೆ) ” ಎನ್ನುತ್ತಾನೆ. ಅದಕ್ಕುತ್ತರಿಸುವ ಮುಗ್ದೆ, “ಮಳ್ನಂಗ್ ಮಾತಾಡಡ್ದಾ, ಅವನ್ಯಾರೋ ಸತ್ತೋದ್ರೆ, ನಾ ಹ್ಯಾಂಗ್ ವಿಧವೆ ಆಗ್ತೆ “ಎನ್ನುತ್ತ ತನ್ನ ಆಟವನ್ನು ಮುಂದುವರೆಸುತ್ತಾಳೆ. ಜಾಹಿರಾತಿನ ಕೊನೆಯ ಭಾಗದಲ್ಲಿ “ಗಂಗಾಳ ಕುಂಕುಮ ಕರಗಿಹೋಯ್ತು, ಸವೆಯಿತು ಸೌಭಾಗ್ಯ, ಕಳಚಿತು ಕೊರಳ ಮಾಂಗಲ್ಯ” ಎನ್ನುವ ದನಿಯೊಂದು ಕೇಳಿಬರುತ್ತದೆ. ಇಂಥದ್ದೊಂದು ಪ್ರೋಮೊ ನೋಡಿದ ನನಗೆ ಒಂದರೆಕ್ಷಣ ನಖಶಿಖಾಂತ ಉರಿದುಹೋಯಿತು. ಮತ್ತಷ್ಟು ಓದು