ಬಗೆಬಗೆಯಾಗಿ ಕಾಡುವ ನಗೆಗಾರ: ಚಾಪ್ಲಿನ್
– ರೋಹಿತ್ ಚಕ್ರತೀರ್ಥ
ನನಗಾಗ ಹದಿನಾಲ್ಕು ವರ್ಷ. ಪ್ರೈಮರಿ ದಾಟಿ ಆಗಷ್ಟೇ ಹೈಸ್ಕೂಲಿಗೆ ಕಾಲಿಟ್ಟಿದ್ದೆ. ಮನೆಯಲ್ಲಿ ನಡೆಯಲಿದ್ದ ಒಂದು ಮದುವೆ ಸಮಾರಂಭಕ್ಕಾಗಿ ವಿಸಿಆರ್ ಬಾಡಿಗೆ ಪಡೆದಿದ್ದರು. ಎರಡೇ ಎರಡು ದಿನ ಮನೆಯಲ್ಲಿರುವ ಈ ಭಾಗ್ಯದ ಪೂರ್ಣ ಸದುಪಯೋಗ ಪಡೆಯಬೇಕಾದರೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಪಿಚ್ಚರ್ ಹಾಕಿ ಓಡಿಸಬೇಕು ಎಂಬುದು ನಮ್ಮ ನಿಲುವು. ಹಾಗೆ ಬಾಡಿಗೆಗೆ ತಂದಿದ್ದ ಮೂರ್ನಾಲ್ಕು ಚಿತ್ರಗಳ ಪೈಕಿ ಒಂದು – ಗೋಲ್ಡ್ ರಶ್. ದೂರ ದೇಶವೊಂದರಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪವಿದೆ ಎಂಬ ಸುದ್ದಿಯ ಜಾಡು ಹಿಡಿದು ಹೊರಡುವ ಮನುಷ್ಯರು ಎಂತೆಂಥ ತೊಂದರೆಗಳಲ್ಲಿ ಸಿಕ್ಕಿಕೊಳ್ಳುತ್ತಾರೆ; ಕೊನೆಗೂ ಮನುಷ್ಯನಿಗೆ ಮುಖ್ಯವಾಗುವುದು ಚಿನ್ನವೋ ಜೀವನವೋ ಎಂಬುದನ್ನು ತೋರಿಸುವ ಆ ಚಿತ್ರ ಕಪ್ಪುಬಿಳುಪಿನದ್ದು. ಅದನ್ನು ಒಮ್ಮೆ ನೋಡಿ ತೃಪ್ತಿಯಾಗದೆ ಮನೆಗೆ ಬಂದುಹೋದವರಿಗೆಲ್ಲ ತೋರಿಸಿ ಟೇಪು ಕಿತ್ತು ಬರುವಷ್ಟು ಸಲ ಬಳಸಿ ಮರಳಿಸಿದ್ದು ಅಚ್ಚಳಿಯದ ನೆನಪು ನನಗೆ. ಅದುವೇ ನನ್ನ ಮತ್ತು ಚಾಪ್ಲಿನ್ನನ ಪ್ರಥಮ ಚುಂಬನ. ಬಿದ್ದೂಬಿದ್ದೂ ನಕ್ಕು ದಂತಭಗ್ನವಾಗುವುದೊಂದು ಬಾಕಿ ಇತ್ತು ಅಷ್ಟೆ! ಮತ್ತಷ್ಟು ಓದು
ಬ್ಯಾಟಲ್ ಆಫ್ ಅಸಲ್ ಉತ್ತರ್
– ರಂಜನ್ ಕೇಶವ
ಸೆಪ್ಟಂಬರ್ 6 1965 ರಂದು ಪಾಕಿಸ್ತಾನೀ ಸೇನೆಯನ್ನು ತಡೆಯುವ ಸಲುವಾಗಿ ನಾಲ್ಕನೇ ಗ್ರೆನೇಡಿಯರ್ ಬ್ರಿಗೇಡ್, ಇಚೋಗಿಲ್ ಕಾಲುವೆಯ ಪನ್ನಾ ಸೇತುವೆಯನ್ನು ಆಕ್ರಮಿಸಲು ಕಳುಹಿಸಿರುತ್ತಾರೆ. ಅದು ಸೇನಾನೆಲೆ ದಿಬ್ಬಾಪುರದಿಂದ 11 ಕಿ ಮೀ ದೂರದ ಪ್ರದೇಶ . ಆದರೆ ಪಾಕಿಗಳು ಷೆಲ್ ಧಾಳಿ ಮುಖಾಂತರ ತೀವ್ರವಾಗಿ ಪ್ರತಿಕ್ರಿಯಿಸಿದ್ದರಿಂದ ಭಾರತೀಯ ಪಡೆ ಮುಂದುವರೆದರೂ ಸೇತುವೆಯನ್ನು ದ್ವಂಸಗೊಳಿಸಲಾಗದೇ ಹಿಮ್ಮೆಟ್ಟಬೇಕಾಯಿತು . ಅದೇ ಸಮಯದಲ್ಲಿ ಒಂದು ಗೋರ್ಖಾ ಪಡೆ ಬಲ್ಲನ್ವಾಲಾ ಎಂಬ ಪ್ರದೇಶವನ್ನು ಗೆಲ್ಲಲಾಗದೇ ಹಿಮ್ಮೆಟ್ಟಬೇಕಾಯಿತು . ಮತ್ತೆ ಪ್ರಾರಂಭದ ವಿಫಲತೆಯನ್ನು ಸರಿಪಡಿಸಿಕೊಂಡು ಸೇನಾವ್ಯೂಹವನ್ನು ಪುನರ್ ರಚಿಸಲು ಖೇಮ್ ಖರನ್ ನ ಅಸಲ್ ಉತ್ತರ್ ಎಂಬಲ್ಲಿಗೆ ಬಂದು ಸೇರಿದರು. ಮತ್ತಷ್ಟು ಓದು