ವಿಷಯದ ವಿವರಗಳಿಗೆ ದಾಟಿರಿ

Archive for

20
ಏಪ್ರಿಲ್

ಭವಿಷ್ಯನಿಧಿಯ ಮೇಲೆ ವರ್ತಮಾನದ ಕಣ್ಣೇಕೆ?

ರಾಘವೇಂದ್ರ ಸುಬ್ರಹ್ಮಣ್ಯ

Bangalore PF Protestನಿನ್ನೆ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ನೂತನ ಭವಿಷ್ಯ ನಿಧಿ ನೀತಿ ವಿರೋಧಿಸಿ ನಡೆದ ಪ್ರತಿಭಟನೆ ಮತ್ತದರ ಪರಿಣಾಮಗಳು ಇನ್ನೂ ನಮ್ಮಮುಂದೆಯೇ ಹೊಗೆಸೂಸುತ್ತ ನಿಂತಿವೆ. ಪ್ರತಿಭಟನೆಗೆ ಇಳಿದವರಲ್ಲಿ ಎಷ್ಟು ಜನಕ್ಕೆ ನೂತನ ಭವಿಷ್ಯ ನಿಧಿ(ಪಿಎಫ್) ನೀತಿ ಅಂದರೇನು, ಏನು ಬದಲಾವಣೆ ಆಗಿದೆ? ಅನ್ನೋದು ಹೋಗ್ಲಿ ಪಿಎಫ್ ಅಂದರೆ ಏನು ಅಂತಲೂ ಮಾಹಿತಿಯಿತ್ತೋ ಇಲ್ಲವೋ ಅನ್ನುವಷ್ಟು ಗೊಂದಲ ಶುರುವಾಗಿದೆ. ಪಿಎಫ್ ಯಾಕೆ ಬೇಕು? ಸರ್ಕಾರದ ನೀತಿಯೇನು ಮತ್ತದು ಹೇಗೆ ಬದಲಾಗ್ತಿದೆ ಅಂತಾ ನೋಡುವ ಪ್ರಯತ್ನವೇ ಈ ಲೇಖನ. ಇಲ್ಲಿರುವ ಎಲ್ಲಾ ಅಭಿಪ್ರಾಯ ನನ್ನದು ಮತ್ತು ನನ್ನದು ಮಾತ್ರ. ನಿಲುಮೆ ಇದನ್ನು ಬೆಂಬಲಿಸುತ್ತಿದೆಯೇ ಎಂಬುದು ಪ್ರಶ್ನೆಯೇ ಆಗಬಾರದು.

ಏನಿದು ಪಿಎಫ್? ಮತ್ತಷ್ಟು ಓದು »

20
ಏಪ್ರಿಲ್

ಮೆಲ್ಲುಸಿರೆ ಸವಿಗಾನ….!

– ನಾಗೇಶ ಮೈಸೂರು

ಪೀಠಿಕೆ: ಬಲ್ಲವನೆ ಬಲ್ಲ, ಬೆಲ್ಲದ ರುಚಿಯ – ಎಂಬಂತೆ, ಹಳೆಯ ಹಾಡುಗಳು ಮಾಡುವ ಮೋಡಿ ಅದನ್ನು ಮೆಲ್ಲುವವರಷ್ಟೆ ಬಲ್ಲರು. ಹಾಗೆ ಬಂದು ಹೀಗೆ ಹೋಗದ ಜೀವಮಾನ ಪೂರ ಸಖರಾಗಿಬಿಡುವ ಈ ಗಾನ ರತ್ನಗಳ ನೆನಕೆಯ ಅನಾವರಣ, ಈ ಬರಹದ ಆಶಯ..

veera kesari

ಕತ್ತಲು ತುಂಬಿದ ಆಗಸದ ತುಂಬ ಚಿತ್ತಾರ ಬರೆದ ನಕ್ಷತ್ರಗಳ ರಾಶಿ. ಹುಣ್ಣಿಮೆ ಹಾಲಿನ ಬಿಂದಿಗೆಯನ್ಹೊತ್ತು ಇಳೆಗೆ ಸುರಿಯಲೆಂದೇ ತಂದ ಬೆಳದಿಂಗಳನೆಲ್ಲ ಕಣೆ ಕಟ್ಟಿಸಿ ದೃಷ್ಟಿ ಬೊಟ್ಟಾಗಿಸಿಕೊಂಡು ವಿಹರಿಸುತ್ತ ಮೋಡಗಳ ನಡುವೆ ದೋಣಿಯಲಿ ಸಾಗಿದಂತೆ ಸ್ವೈರ ವಿಹಾರದಲ್ಲಿದ್ದಾನೆ ಸುಧಾಕರ. ಅವನ ಸುತ್ತಲಿನ ಕಾಂತಿಗೆ ಚದುರಿ ಚೆಲ್ಲಾಡಿದ ಮೇಘ ಪುಂಜವೂ ಪ್ರಜ್ವಲ ದೀಪ ಹೊತ್ತಿಸಿದ ಉಜ್ವಲ ಹಣತೆಯಂತೆ ಫಳಫಳ ಹೊಳೆಯುತ್ತ ತೇಲಾಡಿವೆ. ಮಲಗಿದಲ್ಲಿಂದಲೇ, ಅದನ್ನೆ ನೆಟ್ಟ ನೋಟದಿಂದ ನೋಡುತ್ತಿದ್ದರೆ ತೇಲಿಹೋಗುತ್ತಿರುವುದು ನಾವ ಅಥವ ಆಗಸದ ಚೆನ್ನ, ಚೆಲುವೆಯರ ಅನ್ನುವುದೇ ಗೊತ್ತಾಗದ ಅಯೋಮಯ ಸ್ಥಿತಿ – ಒಂದರೆಕ್ಷಣ, ಸುತ್ತುತ್ತಿರುವ ಭುವಿ ಚಂದ್ರರ ಸಂಬಂಧವು ಮರೆತುಹೋದಂತಾಗಿ. ಮತ್ತಷ್ಟು ಓದು »