ವಿಷಯದ ವಿವರಗಳಿಗೆ ದಾಟಿರಿ

Archive for

20
ಮೇ

ಬೀಭತ್ಸ (ಭಾಗ ೨)

ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಭಾಗ 1 ರಿಂದ ಮುಂದುವರೆದ ಕತೆ

8149361_f260“ಎಷ್ಟು ಬೇಗ ಈ ಆಚರಣೆ ಮರುಕಳಿಸಿತು ಅಲ್ಲವಾ..”? ಎಂದವಳು ಶ್ರೀಮತಿ ಡೆಲಾಕ್ರೋಕ್ಸ್. ಅವಳ ಮಾತಿಗೆ ಸಮ್ಮತಿಸುವಂತೆ ತಲೆಯಾಡಿಸಿದ ಶ್ರೀಮತಿ ಗ್ರೇವ್ಸ್, “ಹೌದು, ಮೊನ್ನೆಮೊನ್ನೆಯಷ್ಟೇ ಕಳೆದ ವರ್ಷದ ಚೀಟಿಯೆತ್ತುವಿಕೆಯ ಆಚರಣೆ ಮುಗಿದಿತ್ತೇನೋ ಎಂದು ಭಾಸವಾಗುತ್ತಿದೆ. ಕಾಲ ಎಷ್ಟು ಬೇಗ ಸರಿದು ಹೋಗುತ್ತದಲ್ಲವಾ..’?”ಎಂದು ನುಡಿದಳು. ಅಷ್ಟರಲ್ಲಿ ಕ್ಲಾರ್ಕ್ ನ ಸರದಿ ಮುಗಿದು ಡೆಲಾಕ್ರೋಕ್ಸ್ ತನ್ನ ಪಾಳಿಗಾಗಿ ಕಾಯುತ್ತ ನಿಂತಿದ್ದ. “ಅಲ್ನೋಡು ನನ್ನ ಗಂಡನ ಸರದಿ ಬಂದೇ ಬಿಟ್ಟಿತು” ಎಂದ ಅವನ ಮಡದಿಗೆ ಒಂದು ಕ್ಷಣ ಉಸಿರು ನಿಂತ ಅನುಭವ. ಡೆಲಾಕ್ರೊಕ್ಸ್ ಚೀಟಿಯನ್ನೆತ್ತಿಕೊಂಡು ಸ್ವಸ್ಥಾನಕ್ಕೆ ಮರಳಿದ. “ಡನ್ಬರ್” ಎಂಬ ಹೆಸರು ಕೇಳುತ್ತಲೇ ಕಾಲು ಮುರಿದುಕೊಂಡು ಮನೆಯಲ್ಲಿಯೇ ಮಲಗಿದ್ದ ಡನ್ಬರನ ಮಡದಿ ನಿಧಾನವಾಗಿ ಕಪ್ಪುಪೆಟ್ಟಿಗೆಯ ಬಳಿ ನಡೆಯಲಾರಂಭಿಸಿದಳು. ಆಕೆಯನ್ನು ಗಮನಿಸಿದ ಮಹಿಳೆಯೊಬ್ಬಳು “ಧೈರ್ಯವಾಗಿ ಹೋಗು ಜೇನಿ, ಭಯ ಬೇಡ” ಎನ್ನುತ್ತ ಆಕೆಯನ್ನು ಹುರಿದುಂಬಿಸಿದಳು. “ನಮ್ಮದು ಮುಂದಿನ ಸರದಿ” ಎನ್ನುತ್ತ ಕೊಂಚ ಗಂಭೀರಳಾದಳು ಶ್ರೀಮತಿ ಗ್ರೇವ್ಸ್. ತನ್ನ ಪತಿ ಗಡಿಬಿಡಿಯಾಗಿ ಕರಿಪೆಟ್ಟಿಗೆಯತ್ತ ತೆರಳಿ ಸಮ್ಮರ್ಸನಿಗೊಂದು ನಮಸ್ಕಾರ ಹೇಳಿ, ಚೀಟಿಯನ್ನು ಎತ್ತಿದ್ದನ್ನು ದೂರದಿಂದಲೇ ಗಮನಿಸಿದಳಾಕೆ. ಸಾಕಷ್ಟು ಸಮಯ ಕಳೆದಿತ್ತು. ಅದಾಗಲೇ ಚೀಟಿಯನ್ನು ಎತ್ತುಕೊಂಡಿದ್ದ ಜನ ಚೀಟಿಯನ್ನು ತೆರೆದು ನೋಡಲಾಗದೆ, ಕುತೂಹಲವನ್ನು ತಡೆದುಕೊಳ್ಳಲಾಗದೆ ನಿಂತಲ್ಲೆ ಸಣ್ಣಗೆ ಕಂಪಿಸುತ್ತಿದ್ದರು. ಡನ್ಬರನ ಮಡದಿ ಸಹ ಕೊಂಚ ಆತಂಕದಿಂದಲೇ ತನ್ನೆರಡು ಮಕ್ಕಳೊಡಗೂಡಿ ಮೂಲೆಯೊಂದರಲ್ಲಿ ನಿಂತಿದ್ದಳು. ಅಷ್ಟರಲ್ಲಿ ಹರ್ಬರ್ಟನ ಸರದಿ ಮುಗಿದು, ಹಚ್ಚಿಸನ್ನನ ಸರದಿ ಬಂದಿತ್ತು. “ಬೇಗ ಹೋಗಿ ಚೀಟಿ ಎತ್ತು, ಬಿಲ್” ಎಂದ ಟೆಸ್ಸಿಯ ಮಾತಿನ ಶೈಲಿಯೇ ನೆರೆದಿದ್ದ ಕೆಲವರಿಗೆ ನಗು ತರಿಸಿತ್ತು. ಹಚ್ಚಿಸನ್ನನ ನಂತರ ಚೀಟಿಯೆತ್ತುವ ಸರದಿ ಜೋನ್ಸಳದ್ದು. ಮತ್ತಷ್ಟು ಓದು »

19
ಮೇ

ಬೀಭತ್ಸ…….!!(ಭಾಗ ೧)

ಗುರುರಾಜ್ ಕೊಡ್ಕಣಿ,ಯಲ್ಲಾಪುರ

8149361_f260ಅದು ಜೂನ್ ಇಪ್ಪತ್ತೇಳನೆಯ ತಾರೀಖು. ಎಳೆಯ ಬಿಸಿಲಿನ್ನೂ ಭೂಮಿಯನ್ನು ಚುಂಬಿಸುತಿತ್ತು. ಮೈದಾನದುದ್ದಕ್ಕೂ ಆವರಿಸಿಕೊಂಡಿದ್ದ ಹಸಿರು ಹುಲ್ಲಿನ ನಡುನಡುವೆ ಬೆಳೆದುಕೊಂಡಿದ್ದ ಸಣ್ಣ ಗಿಡಗಳ ತುಂಬೆಲ್ಲ ಚಂದದ ಪುಷ್ಫಗಳು ಅರಳಿಕೊಂಡಿದ್ದವು. ಹಳ್ಳಿಯ ಅಂಚೆ ಕಚೇರಿ ಮತ್ತು ಬ್ಯಾಂಕುಗಳ ರಸ್ತೆಗಳು ಕೂಡುವ ಚೌಕದಲ್ಲಿ ನಿಧಾನವಾಗಿ ಹಳ್ಳಿಗರು ಸೇರಲಾರಂಭಿಸಿದ್ದರು. ಹಳ್ಳಿಯ ಚೀಟಿ ಎತ್ತುವಿಕೆಯ ಕಾರ್ಯಕ್ರಮ ಕೇವಲ ಒಂದೇ ದಿನದಲ್ಲಿ ಮುಗಿದು ಹೋಗುತ್ತದೆ. ಆದರೆ ಬೇರೆ ಕೆಲವು ಪಟ್ಟಣಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಕಡಿಮೆಯೆಂದರೂ ಎರಡು ದಿನಗಳಷ್ಟು ಕಾಲಾವಕಾಶ ಬೇಕು. ಕಡಿಮೆ ಜನಸಂಖ್ಯೆಯ ಕಾರಣದಿಂದಾಗಿ ಆ ಹಳ್ಳಿಯ ಜನ ಬೆಳಗ್ಗಿನ ಹತ್ತು ಗಂಟೆಗೆಲ್ಲ ಕಾರ್ಯಕ್ರಮ ಆರಂಭಿಸಿ, ಮಧ್ಯಾಹ್ನದ ಹೊತ್ತಿಗೆ ವಿಧಿವಿಧಾನಗಳನ್ನು ಪೂರೈಯಿಸಿ ಊಟಕ್ಕೆಂದು ತಮ್ಮತಮ್ಮ ಮನೆಗಳಿಗೆ ತೆರಳುತ್ತಿದ್ದರು. ಮತ್ತಷ್ಟು ಓದು »

18
ಮೇ

ನಂಜುಂಡೇಗೌಡರು ಮೋದಿಗೆ ಬರೆದ ಪತ್ರಕ್ಕೊಂದು ಆತ್ಮೀಯ ಪ್ರತಿಕ್ರಿಯೆ

– ವಿಜಯ್ ಪೈ

pvec16may16editmainಸನ್ಮಾನ್ಯ ಹೊನಕೆರೆ ನಂಜುಂಡೇಗೌಡರಿಗೆ ವಂದನೆಗಳು.

ತಾವು ಪ್ರಧಾನ ಮಂತ್ರಿಗಳಿಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಬರೆದ ‘ಆತ್ಮೀಯ’ ಪತ್ರವನ್ನು ಓದಿದ ನಂತರ ನಿಮಗೊಂದು ಆತ್ಮೀಯ ಪ್ರತಿಕ್ರಿಯೆ ನೀಡಬೇಕಾಯಿತು.

(ನಂಜುಂಡೇಗೌಡರ ಪತ್ರ : www.prajavani.net/columns/ಗೌರವಾನ್ವಿತ-ಪ್ರಧಾನಿಗೆ-ಆತ್ಮೀಯ-ಪತ್ರ )

ಮೋದಿ ಆಡಳಿತದಿಂದ ಈ ದೇಶದಲ್ಲಿ ಬಂದ ಒಂದು ಅತ್ಯುತ್ತಮ ಬದಲಾವಣೆಯೆಂದರೆ, ‘ಬುದ್ಧಿಜೀವಿ’ಗಳೆಂದು / ಪತ್ರಕರ್ತರೆಂಬ ಅಪಾದನೆಗೊಳಲ್ಪಟ್ಟವರು ಆಗಾಗ ಪ್ರಧಾನಿಗೆ ಪತ್ರ ಬರೆಯುವ, ಬುದ್ಧಿವಾದ ಹೇಳುವ/ ಎಚ್ಚರಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವುದು. ದಶಕಗಳ ಕಾಲ ಕೋಮಾಕ್ಕೆ ಒಳಗಾಗಿದ್ದ ಇವರುಗಳು, ಈಗ ಮೋದಿ ಎಂಬ ಸಂಜೀವಿನಿಯಿಂದ ಮತ್ತೆ ಜೀವಂತಗೊಂಡು ಮತ್ತೆ ‘ಸಾಕ್ಷಿ ಪ್ರಜ್ಞೆ’ಗಳಾಗಿದ್ದಾರೆ ಎಂದು ಜನ ಭಾವಿಸಿದರೆ, ನೀವೂ ಕೂಡ ಅಲ್ಲಗೆಳೆಯುವುದಿಲ್ಲ ಅಂದುಕೊಳ್ಳುತ್ತೇನೆ. ಮೊನ್ನೆ-ಮೊನ್ನೆ ಬರವನ್ನು ಹೇಗೆ ನಿರ್ವಹಿಸಬೇಕು, ಈ ವಿಷಯದಲ್ಲಿ ಸರಕಾರದ ನ್ಯೂನತೆಗಳೇನು ಎಂಬ ಬಗ್ಗೆ ನಮ್ಮ ದೇಶ ಕಂಡ ಕೆಲವು ಬಹುಮುಖ್ಯ ಸಾಕ್ಷಿಪ್ರಜ್ಞೆಗಳು ಪ್ರಧಾನಿಗಳಿಗೆ ಪತ್ರ ಬರೆದಿದ್ದರು. ಈಗ ನೀವು ಕೂಡ ಸರಕಾರದ ಎರಡನೆಯ ವರ್ಷಾಚರಣೆಯ ಸಂದರ್ಭದಲ್ಲಿ ಪತ್ರ ಬರೆದಿದ್ದೀರಿ. ತಮ್ಮ ಕಾಳಜಿಗೆ ವಂದನೆಗಳು. ಮತ್ತಷ್ಟು ಓದು »

17
ಮೇ

ಕಾಂಗ್ರೆಸ್‌ನ ವ್ಯಾಘ್ರ ದಾಳಿಗೆ ನಲುಗಿದ ಸಾಧ್ವಿ

– ಎಸ್.ಆರ್. ಅನಿರುದ್ಧ ವಸಿಷ್ಠ, ಭದ್ರಾವತಿ

sadhvi-pragya-singh.before_afterಮಾಲೇಗಾಂವ್ ಸ್ಪೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಕ್ಲೀನ್‌ಚಿಟ್ ನೀಡಿ ಆರೋಪಮುಕ್ತಗೊಳಿಸಲಾಗಿದೆ. ಹಾಗಾದರೆ, ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ನಿಜಕ್ಕೂ ಭಾಗಿಯಾದವರು ಯಾರು? ಸ್ಫೋಟದ ಹಿಂದಿರುವ ವ್ಯಕ್ತಿ ಹಾಗೂ ಸಂಘಟನೆಗಳು ಯಾರು ಎನ್ನುವುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕಿದ್ದು, ಈ ಕುರಿತಂತೆ ಸತ್ಯ ಹೊರಬರಬೇಕಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣಕ್ಕೀಗ ತಾರ್ಕಿಕ ಅಂತ್ಯ ದೊರೆತಿದ್ದು, ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಆರು ಜನರ ಮೇಲೆ ಹೇರಲಾಗಿದ್ದ ಮೋಕಾ ಪ್ರಕರಣದಲ್ಲಿ ಇವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಚಾರ್ಜ್‌ಶೀಟ್ ಸಲ್ಲಿಸಿರುವ ತನಿಖಾ ಸಂಸ್ಥೆ ಎನ್‌ಐಎ ಆರೋಪಗಳಿಂದ ಕ್ಲೀನ್ ಚಿಟ್ ನೀಡಿದೆ.

ನಿಜಕ್ಕೂ ಇದು ಸತ್ಯಕ್ಕೆ ಸಂದ ಜಯ ಎಂದು ಸಂತಸ ಪಡುವ ವೇಳೆಯೇ ಈ ಸಂತಸವನ್ನು ಸಂಭ್ರಮಿಸುವ ಮನಸ್ಥಿತಿ ಹಾಗೂ ದೇಹಸ್ಥಿತಿಯಲ್ಲಿ ಸ್ವತಃ ಸಾಧ್ವಿ ಪ್ರಜ್ಞಾ ಸಿಂಗ್ ಇಲ್ಲ ಎನ್ನುವುದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸಬೇಕಾದ ವಿಚಾರ. ಮತ್ತಷ್ಟು ಓದು »

15
ಮೇ

ಸಿದ್ಧಾಂತಗಳ ಸಂಗ ಸಾಕಾಗಿದೆ; ದೇಶಭಕ್ತಿಯ ಸಂಘ ಬೇಕಾಗಿದೆ

– ರೋಹಿತ್ ಚಕ್ರತೀರ್ಥ

indian-flag-rallyಕನ್ನಡದಲ್ಲಿ “ತಾಯಿನಾಡು” ಪತ್ರಿಕೆಯನ್ನು ನಾಲ್ಕು ದಶಕಗಳ ಕಾಲ ನಡೆಸಿದ ಮತ್ತು ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಮೊದಲ ಚುನಾಯಿತ ಶಾಸಕನಾಗಿದ್ದ ಪಿ.ಆರ್.ರಾಮಯ್ಯ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿದ್ದ ದಿನಗಳು. ಪದವಿಯ ಅಂತಿಮ ವರ್ಷದಲ್ಲಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ದಿನದಿನಕ್ಕೆ ಏರುತ್ತಿದ್ದ ಹೊತ್ತು. ಗಾಂಧಿಯ ಮಾತುಗಳನ್ನು ಕೇಳಲು ಎಲ್ಲಿಂದ ಎಲ್ಲಿಯವರೆಗೂ ಕಾಲ್ನಡಿಗೆಯಲ್ಲೋ ರೈಲಿನಲ್ಲೋ ಹೋಗಿಬರಲು ತಯಾರಾಗಿದ್ದ ರಾಮಯ್ಯನವರಿಗೆ ಒಂದು ದಿನ ವಾರಾಣಸಿಯ ಪಕ್ಕದಲ್ಲೇ ಗಾಂಧಿ ಭಾಷಣ ಏರ್ಪಾಟಾಗಿದ್ದನ್ನು ಕಂಡು ಸಕ್ಕರೆ ಹಾಲು ಕುಡಿದಷ್ಟು ಸಂತೋಷವಾಯಿತು. ಅಂದಿನ ಭಾಷಣದಲ್ಲಿ ಗಾಂಧಿ, ಹೋರಾಟಕ್ಕೆ ಭೀಮಬಲ ಬರಬೇಕಾದರೆ ವಿದ್ಯಾರ್ಥಿಗಳೆಲ್ಲರೂ ತಮ್ಮ ಶಾಲಾ-ಕಾಲೇಜುಗಳಿಂದ ಹೊರಬಂದು ಹೋರಾಟದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಮಾತು ರಾಮಯ್ಯನವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅವರು ತಕ್ಷಣ ತನ್ನ ಪದವಿ ವ್ಯಾಸಂಗವನ್ನು ಮೊಟಕುಗೊಳಿಸಿ ಚಳವಳಿಯಲ್ಲಿ ಭಾಗವಹಿಸಲು ನಿರ್ಧರಿಸಿಬಿಟ್ಟರು. ಇನ್ನೊಂದೆರಡು ವಾರಗಳು ಕಳೆದರೆ ಮುಖ್ಯಪರೀಕ್ಷೆಗಳು ಪ್ರಾರಂಭವಾಗುವುದರಲ್ಲಿದ್ದವು. ಈಗ ಏಕಾಏಕಿ ವಿಶ್ವವಿದ್ಯಾಲಯ ತೊರೆದರೆ ಗತಿಯೇನು ಎಂಬ ಸಣ್ಣದೊಂದು ಅಂಜಿಕೆಯೂ ಅವರ ಮನದ ಮೂಲೆಯಲ್ಲಿತ್ತು. ನೇರವಾಗಿ ವಿವಿಯ ಕುಲಪತಿಗಳಾಗಿದ್ದ ಮದನ ಮೋಹನ ಮಾಲವೀಯರಲ್ಲಿಗೆ ಹೋಗಿ ತನ್ನ ಇಬ್ಬಂದಿತನವನ್ನು ವಿವರಿಸಿ ಏನು ಮಾಡಲಿ ಎಂದು ಮಾರ್ಗದರ್ಶನ ಕೇಳಿದರು. ಮತ್ತಷ್ಟು ಓದು »

13
ಮೇ

ಶಂಕರಾಚಾರ್ಯರನ್ನು ಸ್ತುತಿಸಿದ್ದಾಯಿತು, ವಿದ್ಯಾರಣ್ಯರನ್ನೂ ಸ್ಮರಿಸೋಣ….

-ಶ್ರೀನಿವಾಸ ರಾವ್

vidyaranya

||ಅವಿದ್ಯಾರಣ್ಯಕಾನ್ತಾರೇ ಭ್ರಮತಾಂ ಪ್ರಾಣಿನಾಂ ಸದಾ

           ವಿದ್ಯಾಮಾರ್ಗೋಪದೇಷ್ಟಾರಂ ವಿದ್ಯಾರಣ್ಯಗುರುಂ ಶ್ರಯೇ||

ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು. ದಕ್ಷಿಣಪಥದಲ್ಲಿ ಹಿಂದೂ ಧರ್ಮದ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪೀಠಾಧಿಪತಿಗಳ ಬಿರುದಾವಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ತಂದುಕೊಟ್ಟಿದ್ದೂ ಅವರೇ. ಶೃಂಗೇರಿಯ ಈಗಿನ ಪೀಠಾಧಿಪತಿಗಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂದು ಬಿರುದಾವಳಿಗಳಲ್ಲಿ ಹೇಳಿದರೂ ನಮಗೆ ಆ ಯತಿಶ್ರೇಷ್ಠರೇ ನೆನಪಾಗುತ್ತಾರೆ. ಮನಸ್ಸು ಪುಟಿದೇಳುತ್ತದೆ. ‘ವಿದ್ಯಾಶಂಕರ ಪಾದಪದ್ಮಾರಾಧಕ’ ಎಂದಾಗಲೂ ವಿದ್ಯಾತೀರ್ಥರ ಶಿಷ್ಯರಾಗಿ-ಭಾರತೀ ತೀರ್ಥರ ಕರಕಮಲ ಸಂಜಾತರಾಗಿದ್ದ ಅವರನ್ನೇ ಮನಸ್ಸು ನೆನೆಯುತ್ತದೆ. ಮತ್ತಷ್ಟು ಓದು »

11
ಮೇ

ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ?

– ನಾಗೇಶ ಮೈಸೂರು
EDUCATIONಹೀಗೆ ಯೋಚಿಸುತ್ತ ಕುಳಿತಿದ್ದೆ ಪಾರ್ಕಿನ ಬೆಂಚೊಂದರ ಮೇಲೆ. ಶನಿವಾರ, ಭಾನುವಾರಗಳ ಒಂದೂವರೆ ತಾಸಿನ ನಡೆದಾಟ ಮುಗಿಸಿ, ಹಿಂದಿರುಗುವ ಮುನ್ನ ಅಲ್ಲೊಂದರ್ಧ ಗಂಟೆ ಕೂತು ವಿಶ್ರಮಿಸಿ ಹೊರಡುವುದು ರೂಢಿ. ಹಾಗೆ ಕೂತ ಗಳಿಗೆ, ಮನಸಿಗಷ್ಟು ಹುರುಪೆದ್ದರೆ ಒಂದು ಕವನವೊ, ಚುಟುಕವೊ ಗೀಚುವುದುಂಟು. ಇಲ್ಲವಾದರೆ, ಕಿವಿಗುಟ್ಟುವ ಹಾಡಿನ ಜತೆ ಗುನುಗುತ್ತ ಯಾವುದೋ ಆಲೋಚನೆಯಲ್ಲಿ ಕಳುವಾಗುವುದು ಉಂಟು. ಪ್ರತಿಬಾರಿಯೂ ಇದೇ ಪದೇ ಪದೇ ಪುನರಾವರ್ತನೆಯಾದರೂ ಇನ್ನು ಬೋರೆನಿಸುವ ಮಟ್ಟಕ್ಕೆ ತಲುಪದ ಕಾರಣ, ಇದನ್ನು ಮನಸಿಗೆ ಹಿತವಾದ ಪ್ರಕ್ರಿಯೆಯೆಂದೇ ಅಂದುಕೊಂಡೇನೋ, ಒಂದೆರಡು ವರ್ಷಗಳಿಂದ ಇದು ಹಾಗೆ ಮುಂದುವರೆದಿದೆ. ಮತ್ತಷ್ಟು ಓದು »

9
ಮೇ

ರಾಜ್ಯ ಸರ್ಕಾರ ರಾಜ್ಯವನ್ನು ಏನು ಮಾಡಲು ಹೊರಟಿದೆ?

ಎಸ್.ಆರ್. ಅನಿರುದ್ಧ ವಸಿಷ್ಠ, ಭದ್ರಾವತಿ

sep1401siddaramaih1ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯಲ್ಲಿ ಇನ್ನಿಲ್ಲದ ತಂತ್ರಗಾರಿಕೆ ಮಾಡಿ, ತಮ್ಮ ಪಕ್ಷಕ್ಕೇ ಅಧಿಕಾರ ಬರುವಂತೆ ಮಾಡಿಕೊಂಡಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈಗ್ಗೆ ಕೆಲವು ತಿಂಗಳ ಹಿಂದೆ ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಜಿಪಂ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಿದೆ.ಇದರ ಪರಿಣಾಮ ಈಗ ಅಧ್ಯಕ್ಷರಾಗುವವರಿಗೆ ಮಾಸಿಕ ೩೫ ಸಾವಿರ ವೇತನ, ಆತಿಥ್ಯ ಭತ್ಯೆ ೨ ಲಕ್ಷ, ಮನೆ ಬಾಡಿಗೆಗೆ ಮಾಸಿಕ ೮೦ ಸಾವಿರ, ಮನೆ ನಿರ್ವಹಣೆಗೆ ೨೦ ಸಾವಿರ, ತಿಂಗಳಿಗೆ ೧ ಸಾವಿರ ಲೀಟರ್ ಡೀಸೆಲ್, ರೈಲು ಹಾಗೂ ವಿಮಾನ ಪ್ರಯಾಣ ದರ, ದಿನ ಭತ್ಯೆ ೨ ಸಾವಿರ, ವಸತಿ ಗೃಹ ಭತ್ಯೆ ೫ ವರ್ಷಕ್ಕೆ ೧೦ ಲಕ್ಷ ದೊರೆಯುತ್ತಿದೆ. ಇದರೊಂದಿಗೆ ಅಧ್ಯಕ್ಷರಿಗೆ ಗೂಟದ ಕಾರು, ಚಾಲಕ, ಪೊಲೀಸ್ ಭದ್ರತೆ ಸಹ ಲಭ್ಯವಾಗಲಿದೆ. ಇದು ನೇರವಾಗಿ ಅವರಿಗಾಗಿ ವೆಚ್ಚ ಮಾಡುವ ಲೆಕ್ಕವಾದರೆ, ಪರೋಕ್ಷವಾಗಿ ಇನ್ನು ಲಕ್ಷಗಟ್ಟಲೆ ಇವರಿಗಾಗಿ ಸರ್ಕಾರ ವ್ಯಯ ಮಾಡುತ್ತದೆ. ಮತ್ತಷ್ಟು ಓದು »

7
ಮೇ

ಜಯ ಚಂದಲ್ ಮತ್ತು ಗೋಹಾ ನ ಸಮರ

– ರಂಜನ್ ಕೇಶವ

jodh-Jodhajiಹದಿನಾರನೆಯ ಶತಮಾನದ ಆದಿಯಲ್ಲಿ ರಾಜಸ್ತಾನದಲ್ಲಿ ಮೇವಾಡ್ ಮತ್ತು ಮಾರ್ವಾರ್ ಮನೆತನಗಳು ಪ್ರಭುತ್ವಕ್ಕೆ ಬಂದಿದ್ದವು. ಆ ಕಾಲವೂ ನಿರಂತರ ವಿದೇಶೀ ಆಕ್ರಮಣಗಳನ್ನು ನೇರಾನೇರಾ ಎದುರಿಸುತ್ತಿದ್ದ ಘೋರ ಕಾಲಘಟ್ಟವೇ ಆಗಿತ್ತು. ಆದರೂ ಈ ಎರಡು ರಾಜಪೂತರು ಒಂದಾಗಿರದೆ ಪರಸ್ಪರ ವೈರತ್ವವನ್ನಿಟ್ಟುಕೊಂಡಿದ್ದರು .

1532 ರಲ್ಲಿ ರಾವ್ ಮಾಲ್ ದೇವ್ ಮಾರ್ವಾರಿನ ಸಿಂಹಾಸನವನ್ನೇರಿದ್ದ. ತನ್ನ ಸಾಮ್ರಾಜ್ಯವನ್ನು ದೆಹಲಿಯಿಂದ ಕೇವಲ 50 ಮೈಲಿ ದೂರದಲ್ಲಿದ್ದ ಹಿಸ್ಸರ್ ಮತ್ತು ಜಝ್ಹರ್ ತನಕ ವಿಸ್ತರಿಸಿದ್ದ. ಇದರಿಂದ ದೆಹಲಿಯನ್ನಾಳುತ್ತಿದ್ದ ಷೇರ್ ಷಾಹ್ ಸೂರಿಗೆ ಗುಜರಾತ್ ಮತ್ತು ಪಶ್ಚಿಮ ಏಷ್ಯಾದೊಂದಿಗಿನ ವ್ಯಾಪಾರ ಸಂಪರ್ಕ ಕಡಿತಗೊಂಡಿತ್ತು. ಆದರೆ ಷೇರ್ ಷಾಹನ ಸಾಮಂತರು ತಾರೀಖ್ ಇ ದೌದ್ರಿಯ ಪ್ರಕಾರ ದಕ್ಷಿಣದ ಶಿಯಾ ಸುಲ್ತಾನರನ್ನು ಮಣಿಸಲೆಂದು ದಂಡಯಾತ್ರೆ ಹೊರಡಬೇಕೆಂದು ಒತ್ತಾಯಿಸುತ್ತಾರೆ. ಅದಕ್ಕೆ ಷೇರ್ ಷಾಹ್ ಸಮ್ಮತಿಸಿದನಾದರೋ ಅದಕ್ಕೆ ಮೊದಲು ಉತ್ತರ ಭಾರತವನ್ನು ಇಸ್ಲಾಮೀಕರಣಗೊಳಿಸದೇ ದಕ್ಷಿಣಕ್ಕೆ ಮುನ್ನಡೆಯುವುದಿಲ್ಲವೆಂದು ಹಾಗು ಮೊದಲು ಆ ಖಾಫಿರ್ ರಾವ್ ಮಾಲದೇವನನ್ನು ಮುಗಿಸಿ ಆ ಮಾರ್ವಾರನ್ನು ವಶಪಡಿಸಿಕೊಳ್ಳಬೇಕೆಂದು ನಿಶ್ಚಯಿಸಿದ್ದ . ಮತ್ತಷ್ಟು ಓದು »

6
ಮೇ

ಸೈಕಲ್ಲೇರಿದ ನಲ್ಲ, ದಾಟಿದ ಸಾವಿರ ಮೈಲಿಗಲ್ಲ!

– ರಾಘವೇಂದ್ರ ಸುಬ್ರಹ್ಮಣ್ಯ

12316585_929706350454452_2022226888221524595_nಒಬ್ಬ ಬಡ ಹುಡುಗ, ಒಂದು ದಿನ ಒಬ್ಬ ಶ್ರೀಮಂತ ಹುಡುಗಿಯನ್ನ ಭೇಟಿಯಾದ. ಇಬ್ಬರಲ್ಲೂ ಪ್ರೇಮಾಂಕುರವಾಯ್ತು. ಹುಡುಗಿ ವಾಪಾಸು ತನ್ನ ದೇಶಕ್ಕೆ ಹೊರಟುಹೋದಳು. ಹುಡುಗ ‘ನನ್ನ ಪ್ರೀತಿಯನ್ನ ಸಾಯೋಕೆ ಬಿಡಲ್ಲ. ಬರ್ತೀನಿ. ಒಂದಲ್ಲಾ ಒಂದು ದಿನ ನಿನ್ನ ಭೇಟಿಯಾಗುತ್ತೇನೆ’ ಅಂತಾ ಆಕೆಗೂ, ಆಕೆಯ ಜೊತೆಗೆ ತನಗೆ ತಾನೇ ಮಾತುಕೊಟ್ಕೊಂಡ. ಆದರೆ ಅವಳಿದ್ದಲ್ಲಿಗೆ ಹೋಗೋಣ ಅಂದ್ರೆ ಇವನ ಹತ್ರ ದುಡ್ಡಿಲ್ಲ. ಬೆಳಾಗಾದ್ರೆ ‘ಇವತ್ತು ಸಾಯಂಕಾಲ ಊಟಕ್ಕೆ ಏನು?’ ಅನ್ನುವಷ್ಟು  ಬಡತನ. ಆದರೆ ಕಮಿಟ್ಮೆಂಟ್ ಕೊಟ್ಟಾಗಿದೆ. ಒಂದಿನ ಆ ಹುಡುಗ ‘ಇನ್ನು ಸುಮ್ನಿದ್ರೆ ಆಗಲ್ಲ. ಶುರು ಮಾಡೇಬಿಡೋಣ’ ಅಂತಾ ಹೇಳ್ಕಂಡು ಒಂದು ಸೈಕಲ್ ತಗಂಡು ಈ ಹುಡುಗಿಯನ್ನು ಭೇಟಿಯಾಗೋಕೆ ಹೊರಟೇ ಬಿಡ್ತಾನೆ. ಎಷ್ಟೂ ದೂರ ಸೈಕಲ್ ಹೊಡೆದ ಅಂತೀರಾ? ನೂರಲ್ಲ, ಐನೂರಲ್ಲ, ಸಾವಿರವೂ ಅಲ್ಲ. ಬರೋಬ್ಬರಿ 9350 ಕಿಲೋಮೀಟರ್ ದೂರ!! ಪ್ರೀತಿಯ ಆಳದ ಮುಂದೆ ಈ ದೂರ ಯಾವ ಲೆಕ್ಕ ಬಿಡ್ರೀ! ಮತ್ತಷ್ಟು ಓದು »