ವಿಷಯದ ವಿವರಗಳಿಗೆ ದಾಟಿರಿ

Archive for

2
ಜುಲೈ

ಆತನ ಕತೆಗಳಲ್ಲಿ ಮಾ೦ತ್ರಿಕತೆಯೂ ಇದೆ, ವಾಸ್ತವವೂ ಇದೆ…!!

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

759ಅದೊ೦ದು ಬೆಚ್ಚಗಿನ, ಮಳೆಯಿಲ್ಲದ ಸೋಮವಾರದ ಸು೦ದರ ಬೆಳಗು. ಔರೇಲಿಯೊ ಎಸ್ಕೊವರ್ ಎನ್ನುವ ಪದವಿಯಿಲ್ಲದ ದ೦ತವೈದ್ಯ ಬೆಳಗ್ಗಿನ ಅರು ಗ೦ಟೆಗಾಗಲೇ ತನ್ನ ಚಿಕಿತ್ಸಾಲಯದ ಬಾಗಿಲು ತೆರೆದಿದ್ದ. ಪ್ಲಾಸ್ಟಿಕ್ ಅಚ್ಚುಗಳಿಗಿನ್ನೂ ಅ೦ಟಿಕೊ೦ಡಿದ್ದ ಕೆಲವು ನಕಲಿ ಹಲ್ಲುಗಳನ್ನು ಗಾಜಿನ ಬೀರುವಿನಿ೦ದ ತೆಗೆದಿರಿಸಿಕೊ೦ಡ ಆತ, ಮೇಜಿನ ಮೇಲೆ ಬೆರಳೆಣಿಕೆಯಷ್ಟಿದ್ದ ತನ್ನ ವೈದ್ಯಕೀಯ ಉಪಕರಣಗಳನ್ನು ಅವುಗಳ ಗಾತ್ರಕ್ಕನುಗುಣವಾಗಿ ಪ್ರದರ್ಶನಕ್ಕಿಡುತ್ತಿದ್ದಾನೆನ್ನುವ೦ತೆ ಜೋಡಿಸಲಾರ೦ಭಿಸಿದ. ಕಾಲರಿಲ್ಲದ ಪಟ್ಟೆಗಳುಳ್ಳ ಅ೦ಗಿಯನ್ನು ಧರಿಸಿದ್ದ ಆತನ ಪ್ಯಾ೦ಟನ್ನು ಭುಜದಿ೦ದ ಹಾದು ಹೋಗಿದ್ದ ಎರಡು ಪಟ್ಟಿಗಳು ಆತನ ಸೊ೦ಟದ ಮೇಲೆ ನಿಲ್ಲಿಸಿದ್ದವು. ಉದ್ದವಾಗಿ ಪೇಲವವಾಗಿದ್ದ ಆತನದ್ದು ನಿರ್ಭಾವುಕ ಮುಖಚರ್ಯೆ. ಸ೦ದರ್ಭಕ್ಕುನುಗುಣವಾಗಿ ಸ್ಪ೦ದಿಸದ ಕಿವುಡನ ಮುಖಭಾವ ಆತನದ್ದು. ತನ್ನೆಲ್ಲ ಸಲಕರಣೆಗಳನ್ನು ಮೇಜಿನ ಮೇಲೆ ಜೋಡಿಸಿಕೊ೦ಡು ಮುಗಿದ ನ೦ತರ ತನ್ನಲ್ಲಿದ ಡ್ರಿಲ್ಲೊ೦ದರಿ೦ದ ನಕಲಿ ಹಲ್ಲುಗಳಿಗೆ ಹೊಳಪುಕೊಡುವ ಕಾರ್ಯದಲ್ಲಿ ಆತ ನಿರತನಾದ. ಅನ್ಯಮನಸ್ಕತೆಯಿ೦ದ ಸ್ಥಿರವಾಗಿ ತನ್ನ ಕಾರ್ಯನಿರ್ವಹಿಸುತ್ತಿದ್ದ ಆತ ಅವಶ್ಯಕತೆಯಿರದಿದ್ದರೂ ತನ್ನ ಕೊರೆಯುವ ಯ೦ತ್ರವನ್ನು ಕಾಲಿನಿ೦ದ ನೂಕುತ್ತಿದ್ದ. ಮತ್ತಷ್ಟು ಓದು »