ಜನರಲ್ ತಿಮ್ಮಯ್ಯ
– ಸಿ. ರವಿ ಕುಮಾರ್
ಒಂದು ದಿನ ನನ್ನ ತಂದೆಯವರು ತಮ್ಮ ಬಳಿ ಇದ್ದ ಮಿಲಿಟರಿ ಇತಿಹಾಸ ಈ ಒಂದು ಘಟನೆಯನ್ನು ತಿಳಿಸಿದರು. ಅದನ್ನು ಕೇಳಿದ ಮೇಲೆ ಬಹುಶಃ ನಮ್ಮ ಅಂದಿನ ಪ್ರಧಾನಿ ನೆಹರುರವರು ಈ ವ್ಯಕ್ತಿಯ ಅನುಭವವನ್ನು ಬಳಸಿಕೊಂಡಿದ್ದರೆ 1962ರ ಚೇನದೊಡನೆ ನಡೆದ ಯುದ್ಧದ ಗತಿ ಬದಲಾಗುತ್ತಿತ್ತೊ ಏನೊ? `ಅಪ್ಪಣೆ ಮೀರಿ ತಿಮ್ಮಯ್ಯ ಗೆದ್ದಾಗ’ ಎರಡನೇ ಮಹಾಯುದ್ಧದ ಮಧ್ಯಕಾಲ. ಜಪಾನಿ ಪಡೆಗಳು ಬರ್ಮಾ ದೇಶದಲ್ಲಿ ಹೊಕ್ಕು ಎತ್ತೆತ್ತಲೂ ಹಬ್ಬಿದ್ದವು. ಇರಾವತೀ ನದಿಯ ಕಣಿವೆ ಜಪಾನೀಯರ ವಶವಾಗಿ ಬ್ರಹ್ಮಪುತ್ರಾ ಕಣಿವೆಯೀಗ ಅವರ ತೋಪುಗಳ ಗರ್ಜನೆಯಿಂದ ಪ್ರತಿಧ್ವನಿಸುತ್ತಿತ್ತು. ಬ್ರಿಟಿಶ್ ಸಾಮ್ರಾಜ್ಯವಾದದ ಪರಕ್ರಮ ಸೂರ್ಯ ಅಕಾಲದಲ್ಲೇ ಅಸ್ತಂಗತನಾಗಿದ್ದ. ಬೆಟ್ಟದ ಒಂದು ಕೋಡಿನಲ್ಲಿ ಇನ್ನೂರೈವತ್ತು ಜಪಾನೀ ಸೈನಿಕರು ಕಂದಕ ತೋಡಿ ಬಲವಾಗಿ ತಳವೂರಿದ್ದರು. ಆ ಶೃಂಗದ ಕೆಳಗೆ ಕಡಿದಾದ ಬೆಟ್ಟದ ಗೋಡೆಗೆ ಅಂಟಿಕೊಂಡು ಭಾರತ ಸೈನ್ಯದ ಕುಮಾಂವ್ ರೆಜಿಮೆಂಟಿನ ಜವಾನರು ಟೆಂಟ್ ಹಾಕಿದ್ದರು. ಎರಡು ಸೈನ್ಯದ ಸೈನಿಕರು ತಮ್ಮ ತಮ್ಮ ನೆಲೆಗಳನ್ನು ಭದ್ರಪಡಿಸಿಕೊಂಡು ಮುನ್ನುಗುವ ದಾರಿಯನ್ನು ಯೋಚಿಸುತ್ತಿದ್ದವು. ಮತ್ತಷ್ಟು ಓದು