ಅಸಲಿಗೆ ರಾಜ್ಯವೊಂದು ಎಲ್ಲೂ ಏಳಲಿಲ, ಧ್ವಜವೊಂದು ಏರಿತ್ತು ಅಷ್ಟೇ
– ಸಂತೋಷ್ ತಮ್ಮಯ್ಯ
ಪರಾಕ್ರಮಿ ದೊರೆ ದಾಹಿರ ರಾಜನಾಗಿದ್ದಾಗ ಸಿಂಧ್ ನ ಜನರಲ್ಲಿ ವಿಚಿತ್ರವಾದ ಒಂದು ನಂಬಿಕೆಯಿತ್ತು. ರಾಜ್ಯದ ದೇವಲ ಬಂದರಿನ ಒತ್ತಿನಲ್ಲೊಂದು ಪುರಾತನ ದೇವಾಲಯ. ಅದು ರಾಜ್ಯದ ಸಮಸ್ತ ಪ್ರಜೆಗಳ ಶ್ರದ್ಧಾಕೇಂದ್ರ ಕೂಡ. ಅದರ ಮೇಲೆ ಜನರಿಗೆಷ್ಟು ನಂಬಿಕೆಯೆಂದರೆ ಆ ದೇವಾಲಯದ ಧ್ವಜವನ್ನು ಕೆಳಗಿಸಿದರೆ ರಾಜನ ಶಕ್ತಿ ಇದ್ದಕ್ಕಿದ್ದಂತೆ ಕ್ಷೀಣಿಸುತ್ತದೆ ಎಂಬ ನಂಬಿಕೆಯನ್ನು ಅವರು ಬೆಳೆಸಿಕೊಂಡಿದ್ದರು. ಈ ಭಾವನೆ ಜನರಲ್ಲಿ ಗಟ್ಟಿಯಿದ್ದಾಗಲೇ ಮುಸ್ಲಿಂ ದಾಳಿಕೋರ ಮಹಮದ್ ಬಿನ್ ಕಾಸಿಂ ಸಿಂಧ್ ನ ಮೇಲೆ ಆಕ್ರಮಣ ಮಾಡಿದ. ಮುಸಲ್ಮಾನನ ಎಂಜಲು ಕಾಸಿಗೆ ಕೈಯೊಡ್ಡಿದ ಕೆಲವು ಕಾಂಗ್ರೆಸಿನಂತವರು ಕಾಸಿಮನಿಗೆ ಈ ದೇವಾಲಯ, ಆ ಧ್ವಜ, ಅದರ ಶಕ್ತಿ ಮೊದಲಾದ ರಹಸ್ಯವನ್ನು ಶತ್ರು ಪಾಳಯಕ್ಕೆ ತಿಳಿಸಿಕೊಟ್ಟಿದ್ದರು. ದಾಹಿರ ಮತ್ತು ಕಾಸಿಮನ ನಡುವೆ ಭೀಕರ ಯುದ್ಧ ನಡೆಯಿತು. ಒಂದೆಡೆ ಯುದ್ಧ ನಡೆಯುತ್ತಿದ್ದಾಗಲೇ ಮುಸಲ್ಮಾನ ಸೈನ್ಯ ದೇವಾಲಯದ ಧ್ವಜವನ್ನು ಇಳಿಸಿ ಧ್ವಜಭಂಗ ಮಾಡಿದ್ದರು. ಯುದ್ಧರಂಗದಲ್ಲಿ ಪರಾಕ್ರಮಿ ಹಿಂದೂ ಸೈನ್ಯದ ಕೈ ಮೇಲಾಗುತ್ತಿದ್ದರೂ ಧ್ವಜಭಂಗದ ಸುದ್ಧಿಯಿಂದ ಸಮಸ್ತ ಸೈನ್ಯದ ಮಾನಸಿಕ ಶಕ್ತಿ ಇದ್ದಕ್ಕಿದ್ದಂತೆ ಕುಂದಿತು. ಮಾನಸಿಕವಾಗಿ ಹಿಂದೂ ಪಡೆ ಸೋತುಹೋಯಿತು. ಮಾನಸಿಕವಾಗಿ ಸೋತವರ ಕೈಯಲ್ಲಿ ಶಸ್ತ್ರವಿದ್ದರೇನು ಬಂತು? ಸೈನ್ಯ ಚದುರಿತು. ಮುಸಲ್ಮಾನ ಸೈನ್ಯ ಲೂಟಿ ಆರಂಭಿಸಿತು. ಸ್ವತಃ ರಾಜ ದಾಹಿರನೇ ಬಾಣ ತಗುಲಿ ಯುದ್ಧರಂಗದಲ್ಲೇ ಸತ್ತ. ಮತ್ತಷ್ಟು ಓದು