ಸಿಟಿಯೊಂದು ಸ್ಮಾರ್ಟ್ ಆಗುವುದು ಯಾವಾಗ?
– ರಾಘವೇಂದ್ರ ಸುಬ್ರಹ್ಮಣ್ಯ
ಮೊನ್ನೆ ಈ ವೆಂಕಯ್ಯನವರ ಗಲಾಟೆ ನಡೆಯುತ್ತಿರುವಾಗ ಯಾರೋ ಸ್ನೇಹಿತರು ವೆಂಕಯ್ಯ ಮಾಡಿದ ಅನ್ಯಾಯ ನೋಡಿ ಅಂತಾ ಪಕ್ಕದಲ್ಲಿರುವ ನ್ಯೂಸ್ ಕ್ಲಿಪ್ಪಿಂಗಿನ ಚಿತ್ರವೊಂದನ್ನು ಹಾಕಿದರು. ಆ ವಾದ ವಿವಾದ ಎಲ್ಲಾ ಮುಗಿದ ಮೇಲೂ, ಅದೊಂದು ಚಿತ್ರ ನನ್ನ ತಲೆಯಲ್ಲುಳಿದು ಬಿಡ್ತು. ವೆಂಕಯ್ಯ ಬದಿಗೆ ಹೋಗಯ್ಯ ಅಂತಾ ತಳ್ಳಿದ್ರೂ ಆ ಚಿತ್ರ ಹೋಗ್ಲಿಲ್ಲ.
ಆ ಚಿತ್ರದಲ್ಲಿದ್ದ ವಿಷಯ “ರಾಜ್ಯದ ಯಾವ ನಗರವೂ ಸ್ಮಾರ್ಟ್ ಸಿಟಿಯಾಗೋದಿಲ್ವಂತೆ” ಅನ್ನೋದು. ಆ ಸುದ್ಧಿಗೆ ನನಗೆ ಬೇಸರವಾಗ್ಲಿಲ್ಲ. ಆದರೆ ಅಲ್ಲಿ ಕೆಳಗಿರೋ ಚಿತ್ರ ನೋಡಿ ಬೇಸರವಾಯ್ತು. Infact, ಕರ್ನಾಟಕದ ನಗರ ಸ್ಮಾರ್ಟ್ ಸಿಟಿಯಾಗುವುದು ಅಂದ್ರೆ ಈ ಚಿತ್ರದಲ್ಲಿರೋವಂತೆ ಆಗೋದು ಅಂತಾದ್ರೆ, ಆ ಅವಕಾಶ ಕರ್ನಾಟಕದ ನಗರವೊಂದಕ್ಕೆ ತಪ್ಪಿದ್ದಕ್ಕೆ ಸಂತೋಷವೇ ಆಯ್ತು. ಯಾಕಂದ್ರೆ ಆ ಚಿತ್ರದಲ್ಲಿದ್ದದ್ದು ಬರೀ ದೊಡ್ಡ, ಎತ್ತರದ ಕಟ್ಟಡಗಳು. ಬಿಟ್ರೆ, ಫೈ ಓವರ್ ಮೇಲೆ ಇನ್ನೊಂದು ಫೈ ಓವರ್ರಿನ ಮೇಲೆ ಮತ್ತೊಂದು ಫ್ಲೈ ಓವರ್. ನಮಗೆ ನಮ್ಮ ಸರ್ಕಾರಗಳು, ಮಾಧ್ಯದವರು ಹಿಡಿಸಿರೋ ಈ ಸ್ಮಾರ್ಟ್ ಸಿಟಿಯ ಹುಚ್ಚು ನೋಡಿ ತಲೆಕೆಟ್ಟು ಹೋಯ್ತು. ಆಮೇಲೆ ಸ್ವಲ್ಪ ಹೊತ್ತಿನ ಮೇಲೆ ಅನ್ನಿಸ್ತು, ಇದು ಹುಚ್ಚಲ್ಲ. ಬರೀ ತಪ್ಪು ಮಾಹಿತಿ, ತಪ್ಪು ಗ್ರಹಿಕೆಯಷ್ಟೇ ಅಂತಾ. ಹೆಚ್ಚು ಯೋಚಿಸಿದಷ್ಟು ಆ ಅನಿಸಿಕೆ ಸರಿ ಅನ್ನಿಸ್ತಾ ಹೋಯ್ತು. ಹಾಗೆಯೇ ನಮ್ಮಲ್ಲೇ ಕೆಲ ಜನ ಮನಗೆ ಹಿಡಿಸಿರುವ ಈ ಸನ್ನಿ ಎಂತದ್ದು ಅಂತಾ ಕಣ್ಣಮುಂದೆ ಹರಿದಾಡಲು ಶುರುವಾಯ್ತು. ಮತ್ತಷ್ಟು ಓದು