ಆಜಾದ್ ಕಾಶ್ಮೀರವಾದಿಗಳಿಗೆ ಶಾಶ್ವತ “ಆಜಾದಿ” ಕೊಡಬೇಕಾದ ಕಠಿಣ ಸಮಯವಿದು
– ರಾಕೇಶ್ ಶೆಟ್ಟಿ
ಕಾಶ್ಮೀರದಲ್ಲಿ ಬರ್ಹನ್ ವನಿ ಎಂಬ ಭಯೋತ್ಪಾದಕ ರಕ್ಷಣಾ ಪಡೆಗಳ ಗುಂಡಿಗೆ ಬಲಿಯಾದ ನಂತರ ಶುರುವಾದ ಗಲಭೆಗೆ 42 (ಈ ಲೇಖನ ಬರೆಯುವ ಸಮಯಕ್ಕೆ) ಜನರು ಬಲಿಯಾಗಿ, 3000ದಷ್ಟು ಜನರು ಗಾಯಾಳುಗಳಾಗಿದ್ದಾರೆ ಎಂದು ವರದಿಯಾಗಿದೆ ಮತ್ತು 12ನೇ ದಿನಕ್ಕೂ ಕರ್ಫ್ಯೂ ಮುಂದುವರೆದಿದೆ! ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಉಗ್ರನ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟ ಕೇಂದ್ರ ಸರ್ಕಾರ ತಪ್ಪು ನಡೆ. ಉಗ್ರರು ಸತ್ತಾಗ ಅವರ ಕಳೆಬರವನ್ನು ಸಮುದ್ರಕ್ಕೋ, ನಾಯಿ-ನರಿಗಳಿಗೋ ಎಸೆಯುವುದು ಬಿಟ್ಟು ಕುಟುಂಬಸ್ಥರಿಗೆ ಕೊಟ್ಟಿದ್ದೇಕೆ? ಮುಂಬೈ ಸರಣಿ ಬಾಂಬ್ ಸ್ಪೋಟದ ಅಪರಾಧಕ್ಕಾಗಿ ನೇಣಿಗೇರಿದ ಯಾಕೂಬ್ ಮೆಮನ್ ಅಂತ್ಯಸಂಸ್ಕಾರದಲ್ಲಿ ಸೇರಿದ್ದ ಜನಸ್ತೋಮವನ್ನು ನೋಡಿಯಾದರೂ ಇವರು ಬುದ್ದಿ ಕಲಿಯಬಾರದಿತ್ತೇ? ಕನಿಷ್ಟ ಅಫ್ಜಲ್ ಗುರುವಿನ ಕಳೆಬರವನ್ನು ಕೊಡದೇ ಯುಪಿಎ ಸರ್ಕಾರ ತೋರಿದ ನಡೆಯನ್ನು ತೋರುವ ಜಾಣ್ಮೆಯನ್ನೇಕೆ ಕೇಂದ್ರದ ಬಿಜೆಪಿ ತೋರಿಸಲಿಲ್ಲ? ಮೈತ್ರಿ ಸರ್ಕಾರದ ಮರ್ಜಿಗೆ ಬಿದ್ದು ಈ ರೀತಿ ಮಾಡಿತೇ? ಇವರ ಈ ನೀತಿಯಿಂದಾಗಿ ಸಂಕಟ ಅನುಭವಿಸುತ್ತಿರುವುದು ಭದ್ರತಾಪಡೆಗಳು ಹಾಗೂ ಪೋಲಿಸರು. ಮತ್ತಷ್ಟು ಓದು