ಹಳಿ ತಪ್ಪಿರುವ ಚಾಲಕನಿಗೆ ತಿಳಿಹೇಳುವವರು ಯಾರು?
– ರೋಹಿತ್ ಚಕ್ರತೀರ್ಥ
ಮೂಕಂ ಕರೋತಿ ವಾಚಾಲಂ. ಹಾಗಾಗಿದೆ ನನಗೆ. ಬರೆಯಬೇಕಿದ್ದ ಕೈ ಓಡುತ್ತಿಲ್ಲ. ಮನಸ್ಸು ಹೆಪ್ಪುಗಟ್ಟಿ ಕೂತಿದೆ. ಏನು ಅಂತ ಬರೆಯಲಿ? ಏನನ್ನು ಹೇಳಲಿ? ಕತ್ತಲಿಗೆ ಹತ್ತೆ ತಲೆ? ನೂರಾರೆ? ಅದು ಅಸಂಖ್ಯ! ಕತ್ತರಿಸಿದರೆ ಬೆಳೆವ, ಬೆಳೆದು ಕತ್ತಿಗೆ ಬರುವ ಅನಾದಿ; ಕೋದಂಡದಂಡವೂ ಹೀಗೆ ದಂಡ ಎನ್ನುವ ಗೋಪಾಲಕೃಷ್ಣ ಅಡಿಗರ ಸಾಲುಗಳು ತಲೆಯೊಳಗೆ ಅಪ್ಪಾಲೆತಿಪ್ಪಾಲೆಯಂತೆ ಸುತ್ತುತ್ತಿವೆ. ಮಳೆಗಾಲದ ಕಾರ್ಮೋಡಗಳು ಸುತ್ತ ಇಳಿಬಿದ್ದಿರುವಂತೆ ಹೃದಯದ ತುಂಬೆಲ್ಲ ಕತ್ತಲೆ ತೂಗುತ್ತಿದೆ. ಮೈ ಮಂಜುಗಟ್ಟಿದೆ. ಬರೆಯುವುದನ್ನು ಉಸಿರಾಟದಷ್ಟೇ ಸಹಜವಾಗಿ ಮಾಡಬಲ್ಲ ನನಗೂ ಕೈಯನ್ನು ಯಾರೋ ಎಳೆದುಕಟ್ಟಿರುವಂಥ ಭಾವ. ಮತ್ತಷ್ಟು ಓದು 




