ದೀಪಾವಳಿಯ ಬೆಳಕಿಗೆ ಶಾಶ್ವತ ಕತ್ತಲೆ ತುಂಬಿದ ಸೈತಾನ
– ಸಂತೋಷ್ ತಮ್ಮಯ್ಯ
ಮಂಡ್ಯದಲ್ಲಿ ಅಕಸ್ಮಾತ್ತಾಗಿ ಪರಿಚಯವಾದ ಒಬ್ಬರು ತನ್ನನ್ನು ಸೂರಜ್ ರಂಗಯ್ಯನ್ ಎಂದು ಹೇಳಿಕೊಂಡರು. ಕನ್ನಡದ್ದಲ್ಲದ ಕನ್ನಡದ ಹೆಸರು. ಕನ್ನಡದಂತೆಯೇ ಕೇಳಿಸುವ ಆ ಹೆಸರಿನ ಮೂಲವನ್ನು ಹೇಳುತ್ತಾ ಹೋದಂತೆ ಅದೊಂದು ಕಥೆಯೇ ಆದೀತು. ಆ ಕಥೆ ಮತ್ತೆಲ್ಲಿಗೋ ತಿರುವನ್ನು ಪಡೆದುಕೊಳ್ಳತೊಡಗಿತು. ಆ ಕಥೆ ಇತಿಹಾಸವಾಯಿತು. ಇತಿಹಾಸ ಭೀಕರತೆಯನ್ನು ಹೇಳಿತು. ಭೀಕರತೆ ಸೂತಕವನ್ನು ಹೇಳಿತು. ಆ ಇತಿಹಾಸ ವಿಚಿತ್ರವಾಗಿತ್ತು. ಅಪರೂಪವಾಗಿತ್ತು. ನೋವಿನಿಂದ ಕೂಡಿತ್ತು. ಆ ಇತಿಹಾಸ, ಭೀಕರತೆ, ನೋವಿನ ಉಳಿಕೆಯಂತೆ ಸೂರಜ್ ರಂಗಯ್ಯನ್ ಕಂಡರು. ಸೂಕ್ಷ್ಮವಾಗಿ ನೋಡಿದರೆ ಇನ್ನೂರು ವರ್ಷಗಳ ಹಿಂದಿನ ನೋವು ಇಂದೂ ಅವರ ಮುಖದಲ್ಲಿ ಇಣುಕುತ್ತಿತ್ತು. ಇತಿಹಾಸವನ್ನು ಹೇಳುತ್ತಾ ಹೇಳುತ್ತಾ ಸೂರಜ್ “ಹಾಗಾಗಿ ನಾವು ಇಂದಿಗೂ ದೀಪಾವಳಿ ಆಚರಿಸುತ್ತಿಲ್ಲ” ಎಂದು ಮುಗಿಸಿದರು. ಸೌಜನ್ಯಕ್ಕೂ ಹಬ್ಬಕ್ಕೆ ಕರೆಯಲಾರದ ಸ್ಥಿತಿ ಅವರದ್ದು. ಅವರು ಮಂಡ್ಯದ ಸದ್ಗಹಸ್ಥರು. ಅತಿ ವಿರಳ ಸಂಖ್ಯೆಯಲ್ಲಿರುವ ಮಂಡಯಂ ಅಯ್ಯಂಗಾರರರು ಎಂಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಮತ್ತಷ್ಟು ಓದು
ಟಿಪ್ಪು: ಸುಲ್ತಾನನೋ.. ಸೈತಾನನೋ?
– ರೋಹಿತ್ ಚಕ್ರತೀರ್ಥ
ಕರ್ನಾಟಕ ಸರಕಾರ 2015ನೇ ಇಸವಿಯ ನವೆಂಬರ್ 10ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿತು. ಈ ಸರಕಾರೀ ಕಾರ್ಯಕ್ರಮವನ್ನು ನಡೆಸಲು ಪ್ರತಿ ಜಿಲ್ಲೆಗೆ 50 ಸಾವಿರ ಮತ್ತು ಪ್ರತಿ ತಾಲೂಕಿಗೆ 25 ಸಾವಿರ ರುಪಾಯಿಗಳಂತೆ ಒಟ್ಟು 80 ಲಕ್ಷವನ್ನು ವ್ಯಯಿಸಲಾಯಿತು. ನಾಡಹಬ್ಬ ದಸರಾ ಆಚರಿಸಲು ದುಡ್ಡಿಲ್ಲದೆ ಪರದಾಡುತ್ತಿದ್ದ ಸರಕಾರಕ್ಕೆ ಟಿಪ್ಪು ಜಯಂತಿ ಎಂಬ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲು ಇಷ್ಟೊಂದು ದುಡ್ಡು ಎಲ್ಲಿಂದ ಸಿಕ್ಕಿತು ಎನ್ನುವುದು ಯಕ್ಷಪ್ರಶ್ನೆ! ಇರಲಿ, ಈ ಜಯಂತಿಯಾದರೂ ಸುಸೂತ್ರವಾಗಿ ನಡೆದಿದ್ದರೆ; ಒಂದಷ್ಟು ಒಳ್ಳೆಯ ಕೆಲಸಗಳು ಆ ಮೂಲಕವಾದರೂ ಆಗಿದ್ದರೆ ರಾಜ್ಯದ ಜನ ನೆಮ್ಮದಿ ಕಾಣುತ್ತಿದ್ದರೋ ಏನೋ. ಆದರೆ, ಈ ಜಯಂತಿ ಜನರ ಕಾರ್ಯಕ್ರಮವಾಗದೆ ಕೇವಲ “ಸರಕಾರಿ ಆಚರಣೆ” ಮಾತ್ರವೇ ಆಗಿ ಉಳಿಯಿತು. ತನ್ನ ಸಮಸ್ತ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರಿಗೆ ಮೆಚ್ಚಿಕೆಯಾಗುವ ಕೆಲಸ ಮಾಡುವ ಅವಕಾಶವನ್ನು ತಾನಾಗಿ ಕೈಚೆಲ್ಲಿ ಸರಕಾರ ಒಂದು ಗುಂಪಿನ ಮನಮೆಚ್ಚಿಸಲು ಹೋಗುವುದು ಅಗತ್ಯವಿತ್ತೆ ಎಂಬ ಪ್ರಶ್ನೆ ಎದ್ದಿತು. ಸರಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತ ಒಬ್ಬ ಬುದ್ಧಿಜೀವಿ, “ಈಗಾಗಲೇ ಹಲವು ಜಾತಿ-ಕೋಮುಗಳ ಜನರಿಗೆ ಬೇಕಾದ ಜಯಂತಿಗಳಿವೆ. ಆದರೆ ಮುಸ್ಲಿಮರಿಗೆ ಹೇಳಿಕೊಳ್ಳುವಂಥ ಯಾವುದೇ ಸರಕಾರೀ ಕಾರ್ಯಕ್ರಮ ಇರಲಿಲ್ಲ. ಈಗ ಶುರುಮಾಡಿರುವ ಜಯಂತಿಯನ್ನು ಆ ನಿಟ್ಟಿನಲ್ಲಿ ಯೋಚಿಸಿ ಸ್ವಾಗತಿಸಬೇಕು” ಎಂಬ ಮಾತುಗಳನ್ನು ಆಡಿದರು. ಜಯಂತಿಗಳನ್ನು ರಾಜ್ಯದಲ್ಲಿರುವ ವಿವಿಧ ಜಾತಿ-ಪಂಗಡಗಳನ್ನು ಮೆಚ್ಚಿಸಲಿಕ್ಕಾಗಿ ಆಚರಿಸಲಾಗುತ್ತದೆ ಎಂಬ ಸತ್ಯ ಅವರ ಈ ಮಾತುಗಳ ಮೂಲಕ ಹೊರಬಿದ್ದಿದೆ. ಟಿಪ್ಪು ಜಯಂತಿಯನ್ನು ಆಚರಿಸಿರುವುದು ಕೇವಲ ಮುಸ್ಲಿಮ್ ಸಮುದಾಯವನ್ನು ಮೆಚ್ಚಿಸಲಿಕ್ಕಾಗಿ ಎಂಬ ಸರಕಾರದ ಅಜೆಂಡವನ್ನು ಸರಕಾರೀ ಸಾಹಿತಿ ಬಾಯಿತಪ್ಪಿ ಹೇಳಿಬಿಟ್ಟಿದ್ದಾರೆ! ಮತ್ತಷ್ಟು ಓದು
ಉತ್ತರ ಕನ್ನಡ ಹವ್ಯಕರ ದೊಡ್ಡಬ್ಬ (ದೀಪಾವಳಿ) ದ ಆಚರಣೆ
– ಗೀತಾ ಹೆಗ್ಡೆ
ನಮ್ಮ ಹವ್ಯಕ ಜನಾಂಗದಲ್ಲಿ ದೀಪಾವಳಿ ಹಬ್ಬ ಎಂದು ಕರೆಯುವ ವಾಡಿಕೆ ಇಲ್ಲ. ಚೌತಿ ಹಬ್ಬ (ಗಣೇಶ ಚತುರ್ಥಿ) ಮಾರ್ನೋಮಿ ಹಬ್ಬ ಅಥವಾ ನವರಾತ್ರಿ ಹಬ್ಬ ( ದಸರಾ ಹಬ್ಬ) ದೊಡ್ಡಬ್ಬ (ದೀಪಾವಳಿ ಹಬ್ಬ) ಹೀಗೆ ತಮ್ಮದೆ ಶೈಲಿಯಲ್ಲಿ ಹಬ್ಬಗಳನ್ನು ಕರೆಯುವ ವಾಡಿಕೆ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಹಾಗೂ ಈ ಹಬ್ಬಗಳನ್ನು ಆಚರಿಸುವ ರೀತಿ ಕೂಡಾ ವಿಭಿನ್ನವಾಗಿದೆ. ಯಾವುದೇ ಹವ್ಯಕರ ಮನೆಗೆ ತೆರಳಿದರೂ ಹಬ್ಬ ಆಚರಿಸುವ ರೀತಿ, ಅಡುಗೆ ಮಾಡುವ ರೀತಿ, ಹವ್ಯಕ ಭಾಷೆ, ನಡೆ, ನುಡಿ, ಆದರಾಥಿತ್ಯ ಎಲ್ಲವೂ ಒಂದೇ ರೀತಿ ಇರುತ್ತದೆ. ಇದು ಉತ್ತರ ಕನ್ನಡದ ಹವ್ಯಕರ ನಡೆಯಾದರೆ ದಕ್ಷಿಣ ಕನ್ನಡದ ಕಡೆ ಹವ್ಯಕ ಭಾಷೆ, ಹಬ್ಬದ ಆಚರಣೆ ವಿಭಿನ್ನವಾಗಿ ಇರುತ್ತದೆ. ಅಡುಗೆ ಊಟ ಉಪಚಾರ ಪೂಜೆ, ಶಾಸ್ತ್ರ ಎಲ್ಲವೂ ವಿಭಿನ್ನವಾಗಿದೆ. ಎಲ್ಲರೂ ಹವ್ಯಕ ಬ್ರಾಹ್ಮಣರೇ ಆದರೂ ಸ್ವಲ್ಪ ವ್ಯತ್ಯಾಸ. ಮತ್ತಷ್ಟು ಓದು
ದಲಿತರ ಹೆಗಲ ಮೇಲೆ ಬಂದೂಕಿಟ್ಟಿರುವ ಕೈಗಳು ಯಾರದ್ದು?
– ರಾಕೇಶ್ ಶೆಟ್ಟಿ
‘ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗಿಂತಲೂ, ಅಧಿಕಾರದಲ್ಲಿರದ ಕಾಂಗ್ರೆಸ್ಸ್ ದೇಶಕ್ಕೆ ಅಪಾಯಕಾರಿ’ ಅಂತ ಗೆಳೆಯನೊಬ್ಬ ಆಗಾಗ್ಗೆ ಹೇಳ್ತಾ ಇರ್ತಾನೆ. 2014ರ ಮೇ 16 ರಂದು ಬಿಜೆಪಿ ಅಧಿಕಾರ ಹಿಡಿದ ದಿನದಿಂದ ಇವತ್ತಿನವರೆಗೂ ಕಾಂಗ್ರೆಸ್ಸ್ ಪಕ್ಷದವರ ಆರ್ಭಟಗಳನ್ನು ನೋಡಿದರೇ, ಗೆಳೆಯನ ಮಾತು ನಿಜವೆನಿಸುತ್ತದೆ. 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಈ ಹಿಂದಿನ ಯಾವುದೇ ಚುನಾವಣೆಗಳಂತಿರಲಿಲ್ಲ. ಕಾಂಗ್ರೆಸ್ ಎಂಬ ಪುರಾತನ ಪಕ್ಷ ಮಕಾಡೆ ಮಲಗಿದರೇ, ಉಳಿದ ಅವಕಾಶವಾದಿ ಪ್ರಾದೇಶಿಕ, ಕೌಟುಂಬಿಕ, ಸೆಕ್ಯುಲರ್, ಕಮ್ಯುನಿಸ್ಟ್ ಪಕ್ಷಗಳು ಹೇಳ ಹೆಸರಿಲ್ಲದಂತಾದವು. ಮತ್ತಷ್ಟು ಓದು
ಪೇಜಾವರ ಶ್ರೀಗಳು ಬಸವಣ್ಣನವರ ಕುರಿತು ಹೇಳಿದ್ದೇನು?
– ವಿನಾಯಕ ಹಂಪಿಹೊಳಿ
ಪ್ರಜಾವಾಣಿಯ ಅಂಕಣವೊಂದರಲ್ಲಿ (http://www.prajavani.net/news/article/2016/10/26/447756.html) ಅಂಕಣಕಾರರು ಪೇಜಾವರ ಶ್ರೀಗಳನ್ನು ತಪ್ಪಾಗಿ ಅರ್ಥೈಸುವುದರ ಜೊತೆಗೆ ಬಸವಣ್ಣನವರನ್ನೂ ತಪ್ಪಾಗಿ ಅರ್ಥೈಸಿದ್ದಾರೆ. ದೇವಸ್ಥಾನಗಳಲ್ಲಿ ಊಟದ ವ್ಯವಸ್ಥೆಯ ಕುರಿತು ತಪ್ಪು ದೃಷ್ಟಿಕೋನವೊಂದನ್ನು ಬೆಳೆಸಿಕೊಂಡಿದ್ದಾರೆ. ಅದು ಹೇಗೆ ಎಂಬುದನ್ನು ನೋಡೋಣ. ಹಾಗೆಯೇ ಪೇಜಾವರ ಶ್ರೀಗಳು ಯಾವ ಸಂದರ್ಭದಲ್ಲಿ ಬಸವಣ್ಣನವರನ್ನು ನೆನೆಪಿಸಿದರು ಎನ್ನುವದನ್ನೂ ನೋಡೋಣ. ಮೊದಲು ಈ ಅಂಕಣಕಾರರು ಬಸವಣ್ಣನವರ ಒಂದು ವಚನವನ್ನು ಹಾಕಿದ್ದಾರೆ. ಅದು ಇಲ್ಲಿದೆ: ಮತ್ತಷ್ಟು ಓದು
ಕಂಬಳ ಅಮಾನವೀಯ ಆಚರಣೆಯೇ?

ಪ್ರೊ.ಪ್ರೇಮಶೇಖರ್ ಮೇಲೆ ಎಡಪಂಥೀಯರ Intolerance!


ಜಗಳಕ್ಕೆ ಬುಡ ಯಾವುದು?
– ರೋಹಿತ್ ಚಕ್ರತೀರ್ಥ
“ಜಗಳಕ್ಕೆ ಬುಡ ಯಾವುದೋ ಬೋಳೀಮಗನೆ” ಅಂತ ನಮ್ಮ ಕಡೆ ಒಂದು ಗಾದೆ. ಚಿಕ್ಕವನಿರುವಾಗ ಕೇಳಿದ್ದು (ಪಾವೆಂ ಆಚಾರ್ಯರು ಇದನ್ನು ಒಮ್ಮೆ ಬರೆದೂ ಇದ್ದರು ಎನ್ನುವುದನ್ನು ಕೇಳಿದ್ದೇನೆ). ಒಗೆದ ಕಲ್ಲನ್ನು ಕಚ್ಚಿ ಹಿಡಿವ ಹಸಿಮಣ್ಣಿನ ಹಾಗೆ ಮನಸ್ಸು ಇಂಥ ಮಾತುಗಳನ್ನು ಬೇಗನೆ ಗ್ರಹಿಸಿ ಹಿಡಿದಿಟ್ಟುಕೊಂಡು ಬಿಡುತ್ತದೆ! ಈಗ ಕೂತು ಯೋಚನೆ ಮಾಡಿದರೆ ಇದಕ್ಕೆ ಎರಡು ಅರ್ಥ ಪದರಗಳಿರುವುದು ಹೊಳೆಯುತ್ತಿದೆ. ಒಂದು, ಜಗಳಕ್ಕೆ ಕಾರಣವೇ ಬೇಕಾಗಿಲ್ಲ; ಯಾವ ಕ್ಷುಲ್ಲಕ ವಿಚಾರವನ್ನು ಹಿಡಿದುಕೊಂಡೂ ಜಗಳವಾಡಬಹುದು ಎನ್ನುವುದು. ಇನ್ನೊಂದು, ನಮ್ಮಲ್ಲಿ ‘ಬೋಳೀಮಗ’ ಎಂಬ ಶಬ್ದಪ್ರಯೋಗ ಆದೊಡನೆ ಅದುವರೆಗೆ ನಡೆಯುತ್ತಿದ್ದ ಮಾತಿನ ಚಕಮಕಿಗೆ ಹೊಸ ರೂಪ, ಬಣ್ಣ, ವೇಗ ಸಿಗುತ್ತದೆ. ಉರಿಯಲೋ ಆರಲೋ ಎನ್ನುತ್ತ ಓಲಾಡುವ ಬಡಕಲು ಬೆಂಕಿಗೆ ಸೀಮೆಎಣ್ಣೆ ಸುರಿವಂತಹ ಪರಿಣಾಮವನ್ನು ಈ ಶಬ್ದ ಮಾಡುತ್ತದೆ – ಎನ್ನುವುದು. ಮತ್ತಷ್ಟು ಓದು
ಕಟು ಸತ್ಯ
– ಗೀತಾ ಹೆಗ್ಡೆ
ಇದು ಕಲಿಗಾಲ. ಇಲ್ಲಿ ಏನು ನಡೆಯುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತು. ಗೊತ್ತಿದ್ದೂ ಕಣ್ಣು ಮುಚ್ಚಿ ಕುರುಡರಂತೆ ಅಸಹಾಯಕತೆಯಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಆಗುತ್ತಲೇ ಇದೆ. ಇದರ ಅಂತ್ಯ ಎಲ್ಲಿಗೆ ಹೋಗಿ ತಲುಪುತ್ತದೊ ಅನ್ನುವ ಆತಂಕ , ಜಿಜ್ಞಾಸೆ ಮನದಲ್ಲಿ. ಈ ಜಗತ್ತು, ದೇಶ ಯಾರೊಬ್ಬರ ಸ್ವತ್ತಲ್ಲ. ಆದರೆ ಬರಬರುತ್ತಾ ಈ ದೇಶದ, ರಾಜ್ಯದ ಸ್ಥಿತಿ ಹದಗೆಡುತ್ತಲಿದೆ. ಹುಟ್ಟಿದ ಶಿಶುವಿನಿಂದ ಹಿಡಿದು ಸಾಯುವ ಮುದುಕರವರೆಗೂ ತೊಳಲಾಟ ತಪ್ಪಿದ್ದಲ್ಲ. ಎಲ್ಲಿ ನೋಡಿದರೂ ಅರಾಜಕತೆ. ಮನುಷ್ಯ ಪ್ರತಿಯೊಂದು ಕ್ಷಣವೂ ಕತ್ತಿಯ ಅಲಗಿನ ಮೇಲೆ ಬದುಕುವಂತ ಸ್ಥಿತಿ ನಿರ್ಮಾಣವಾಗುತ್ತಿದೆ. ಹಸುಳೆಗೆ ಹಾಲು ಕುಡಿಸುವಾಗಲೂ ತಂದ ಹಾಲು, ಹಾಲೋ ಅಥವ ಹಾಲಾಹಲವೊ ಅನ್ನುವ ಸಂಕಟದಲ್ಲಿ ಹೆತ್ತ ಕರುಳು ಸಂಕಟ ಪಡುವಂತಾಗಿದೆ. ಉಪಾಯ ಇಲ್ಲ. ಮನದೊಳಗಿನ ಆತಂಕ ಬದಿಗೊತ್ತಿ ಮಗುವಿನ ಹೊಟ್ಟೆ ತುಂಬಿಸುತ್ತಾಳೆ. ತಿನ್ನುವ ತರಕಾರಿ, ಹಣ್ಣು, ಬೇಳೆ ಕಾಳುಗಳಿಗೂ ವಿಷ ಮಿಶ್ರಿತ. ಕೆಡದೆ ಹಾಳಾಗದಿರಲು, ಫ್ರೆಶ್ ಆಗಿ ಕಾಣಲು. ಕಾಯಿ ಹಣ್ಣಾಗಲು ಎಲ್ಲದಕ್ಕೂ ತೀರ್ಥ ಪ್ರೋಕ್ಷಣೆ, ಗಂಧ ಲೇಪನ, ಅಕ್ಷತೆ ಹಾಕಿ ಜನರ ಕಣ್ಣಿಗೆ ಮಣ್ಣೆರಚುವ ಧಂದೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಟೀವಿ ಮಾಧ್ಯಮಗಳಲ್ಲಿ ಕಣ್ಣಾರೆ ಕಂಡ ಜನ ತುತ್ತು ಅನ್ನ ತಿನ್ನುವಾಗಲೂ ನಾಳೆ ನನ್ನ ಆರೋಗ್ಯ ಏನಾಗುತ್ತೊ ಎಂದು ಯೋಚಿಸುವಂತಾಗಿದೆ. ಪಿಜ್ಜಾ ಬರ್ಗರ್ ಹಾವಳಿ ಯುವಕ ಯುವತಿಯರ ಬಾಯಿ ಚಪಲಕ್ಕೆ ಮನೆಯ ತಿಂಡಿ ರುಚಿಸದಂತಾಗಿದೆ. ಮತ್ತಷ್ಟು ಓದು
ಸಾಮಾಜಿಕ ಸಮಾನತೆಯ ಐಡಿಯಾಲಜಿ ಹಾಗೂ ಸಮವಸ್ತ್ರ ನಿಯಮದ ಸಮಸ್ಯೆ
– ವಿನಾಯಕ ಹಂಪಿಹೊಳಿ
ಪಶ್ಚಿಮದ ದೇಶಗಳು ಶಾಲಾ ಕಾಲೇಜುಗಳಲ್ಲಿರುವ ಸಮವಸ್ತ್ರದ ನಿಯಮವನ್ನು ಕೇವಲ ಒಂದು ಶಿಸ್ತಿನ ನಿಯಮವನ್ನಾಗಿ ನೋಡುವದಿಲ್ಲ. ಆ ದೇಶಗಳು ಪ್ರೊಟೆಸ್ಟಂಟ್ ಚಳುವಳಿಯ ಕಾಲದಿಂದ ರೂಪಿಸಿಕೊಂಡಿರುವ ಸಾಮಾಜಿಕ ಸಮಾನತೆಯ ಐಡಿಯಾಲಜಿಯನ್ನು ಶಾಲೆಗಳಲ್ಲಿ ಅನುಷ್ಠಾನಕ್ಕೆ ತರುವ ಮತ್ತು ಬೆಳೆಯುತ್ತಿರುವ ಮಕ್ಕಳಿಗೆ ಆ ಐಡಿಯಾಲಜಿಯನ್ನು ತಿಳಿಸುವ ಪ್ರಯತ್ನ ಎಂದು ಅರ್ಥೈಸಲಾಗುತ್ತದೆ. ಶಾಲೆ ಎಂಬ ಸಂಸ್ಥೆಯ ಮುಂದೆ ಎಲ್ಲ ಮಕ್ಕಳೂ ಸಮಾನರು ಹಾಗೂ ಅಲ್ಲಿ ಬಡವ ಮತ್ತು ಬಲ್ಲಿದ ಎಂಬ ಭೇದವಿಲ್ಲ ಎಂಬ ಉನ್ನತವಾದ ಆಶಯವನ್ನು ಈ ಸಮವಸ್ತ್ರದ ನಿಯಮವು ಹೊಂದಿದೆ. ಹೀಗಾಗಿ ಅಲ್ಲಿ ಸಮವಸ್ತ್ರವನ್ನು ಹಾಕಿಕೊಳ್ಳಲು ಒಪ್ಪದಿರುವವರನ್ನು ಸಾಮಾಜಿಕ ಸಮಾನತೆಯ ವಿರೋಧಿ ಎಂದೇ ಪರಿಗಣಿಸಲಾಗುತ್ತದೆ. ಮತ್ತಷ್ಟು ಓದು