ದೇವಾಲಯಗಳ ಮೇಲೆ ಸರಕಾರದ ವಕ್ರದೃಷ್ಟಿ
ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ
ಕಳೆದ ಹಲವಾರು ದಶಕಗಳಿಂದ ಭಾರತದಲ್ಲಿ ಒಂದು ವಿಚಾರ ಚಾಲ್ತಿಯಲ್ಲಿದೆ, ಅದೆಂದರೆ ಸರ್ಕಾರವು ದೇವಾಲಯಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವುದು. ಇದರ ಕುರಿತು ವ್ಯಾಪಕವಾದ ಚರ್ಚೆಯಾಗಲಿ ಅಥವಾ ವಿರೋಧವಾಗಲಿ ಆಗಿಲ್ಲವಾದ್ದರಿಂದ ಸರ್ಕಾರಗಳು ಕಾನೂನಿನ ಹೆಸರಲ್ಲಿ ಸ್ವೇಚ್ಚಾಚಾರವಾಗಿ ದೇವಾಲಯಗಳ ಮೇಲೆ ಆಕ್ರಮಣ ಮಾಡುತ್ತಾ ಬಂದಿವೆ. ಮಹಮದ್ ಘೋರಿ, ಘಜ್ನಿ ಇವರುಗಳ ದಾಳಿಯಲ್ಲಿ ಭಾರತದ ದೇವಾಲಯಗಳು ಭೌತಿಕವಾಗಿ ನಾಶವಾದರೆ, ಆಧುನಿಕ ಕಾಲಘಟ್ಟದಲ್ಲಿ ಬಂದ ಸರ್ಕಾರಗಳಿಂದ ಇಡೀ ದೇವಾಲಯದ ಪರಂಪರೆ ನಾಶ ಹೊಂದುತ್ತಿರುವುದು ಖಚಿತ. ಇತ್ತೀಚೆಗಷ್ಟೆ ಗೋಕರ್ಣ ದೇವಾಲಯವನ್ನು ಮಠದ ಸುಪರ್ದಿಯಿಂದ ಬಿಡುಗಡೆಗೊಳಿಸಿ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದರ ಕುರಿತು ಚರ್ಚಿಸಲು ಸಕಾಲ ಒದಗಿದೆ. ಮತ್ತಷ್ಟು ಓದು
ಪರಿಸರ ಶಿಕ್ಷಣ: ಸಾಧನೆ ಮತ್ತು ಸವಾಲುಗಳು
– ಕಲ್ಗುಂಡಿ ನವೀನ್
ಬೆಂಗಳೂರು
ದೂರವಾಣಿ: 944 89 05214
ಇಂದು ಪರಿಸರ, ಪರಿಸರ ಮಾಲೀನ್ಯ ಎಂದರೆ ಅದನ್ನು ವಿವರಿಸಲು ಹೆಚ್ಚು ಶ್ರಮಪಡಬೇಕಿಲ್ಲ. ಆ ಕುರಿತಾದ ಜಾಗೃತಿ ಜನಸಾಮಾನ್ಯರಲ್ಲಿ ಇದೆ. ಇದೊಂದು ತೀರಾ ಇತ್ತೀಚಿನ ಸಂತೋಷದಾಯಕ ಬೆಳವಣಿಗೆ ಎಂದರೆ ಪರಿಸರ ಕುರಿತಾದ ಸಕಾರಾತ್ಮಕ ನಿಲುವು. ಹಿಂದೆ ಪರಿಸರ ಎಂಜಿನಿಯರ್ ಒಬ್ಬರು ಹೇಳುತ್ತಿದ್ದರು: “..ನಾವು ಪರಿಸರದ ಪರವಾಗಿ ಮಾತನಾಡಿದರೆ, ನಮ್ಮನ್ನು ಕರುಣೆಯಿಂದ ನೋಡಲಾಗುತ್ತಿತ್ತು” ಎಂದು! ಇಂದು ಆ ಸ್ಥಿತಿ ಖಂಡಿತಾ ಇಲ್ಲ. ಈ ಜಾಗೃತಿ ಹದಗೆಡುತ್ತಿರುವ ನಮ್ಮ ಪರಿಸರ ವ್ಯವಸ್ಥೆಯನ್ನು ಸರಿಪಡಿಸುವಷ್ಟು ದೃಢವಾಗಿದೆಯೇ ಎಂಬ ಪ್ರಶ್ನೆ ಬೇರೆ! ಆದರೆ ಆ ಜಾಗೃತಿ ಮೂಡಿರುವುದು ಗಮನಾರ್ಹ ಮತ್ತು ಸಂತೋಷದಾಯಕ ಅಂಶ. ಮತ್ತಷ್ಟು ಓದು
ದೇವರ ಪಟದ ಹಿಂದಿನ ಸೈಟು ಮಾರಾಟಕ್ಕಿದೆ!
– ರೋಹಿತ್ ಚಕ್ರತೀರ್ಥ
ನಮ್ಮ ಹಳ್ಳಿಮನೆಗಳ ಪಡಸಾಲೆಗಳ ನಾಲ್ಕೂ ಸುತ್ತು ಗೋಡೆಗಳಲ್ಲಿ ಚೌಕಟ್ಟಿನ ಪಟಗಳು ತೂಗಾಡುತ್ತಿದ್ದವು. ಧ್ಯಾನಾಸಕ್ತನಾಗಿ ಉನ್ಮೀಲಿತ ನೇತ್ರನಾದ ನೀಲಕಂಠ ಶಿವ, ಸಿಂಹವಾಹಿನಿ ದುರ್ಗೆ, ಸ್ಟುಡಿಯೋದಲ್ಲಿ ಫ್ಯಾಮಿಲಿ ಫೋಟೋಗೆ ಪೋಸ್ ಕೊಟ್ಟಂತಿರುವ ರಾಮಭದ್ರ ಮತ್ತವನ ಅವಿಭಕ್ತ ಸಂಸಾರ, ಹೆಂಡತಿಯಿಂದ ಕಾಲೊತ್ತಿಸಿಕೊಂಡು ಹಾವಿನ ಮೇಲೆ ಸುಖಾಸೀನನಾಗಿರುವ ಮಹಾವಿಷ್ಣು – ಹೀಗೆ ಒಂದು ರೀತಿಯಲ್ಲಿ ಜಗತ್ತಿನ ಮುಕ್ಕೋಟಿ ದೇವತೆಗಳೆಲ್ಲ ಈ ಮನೆಯಲ್ಲೇ ಝಂಡಾ ಹೂಡಿದ್ದಾರೆಂಬ ಭಾವನೆ ತರಿಸುವ ಪಟಗಳ ಚಿತ್ರಶಾಲೆಯಾಗಿತ್ತು ನಮ್ಮ ಪಡಸಾಲೆ. ದೇವರ ಭಯ ಮತ್ತು ಅದಕ್ಕಿಂತ ಮಿಗಿಲಾಗಿ, ಕೈ ಜಾರಿ ಬಿದ್ದು ಫಳಾರನೆ ಒಡೆದೇ ಹೋದರೆ ಬೆನ್ನು ಮುರಿಯಲಿದ್ದ ಅಜ್ಜನ ಭಯದಿಂದಾಗಿ ನಾವು ಈ ದೇವರ ಸಹವಾಸಕ್ಕೇ ಹೋಗುತ್ತಿರಲಿಲ್ಲ. ಆದರೆ ಆಗೀಗ ಆ ಪಟಗಳೆಡೆಯಲ್ಲಿ ಚಿಕ್‍ಚಿಕ್ ಚೀಂವ್ ಎಂಬ ದನಿ ಬಂದಾಗ ಮಾತ್ರ ಸ್ಟೂಲ್ ಹತ್ತಿ ಅಲ್ಲೇನಿದೆ ಎಂದು ಇಣುಕುವ ಕುತೂಹಲ ಚಿಗುರುತ್ತಿತ್ತು. ಅಲ್ಲಿ ನಮಗೆ ಕಾಣಿಸುತ್ತಿದ್ದುದು ಪುಟಾಣಿ ಗುಬ್ಬಚ್ಚಿಗಳ ಸಂಸಾರ. ದೇವರ ಪಟವನ್ನು ನಲವತ್ತೈದು ಡಿಗ್ರಿ ವಾರೆಯಾಗಿ ನೇತಾಡಿಸುತ್ತಿದ್ದುದರಿಂದ ಆ ಸಂದಿ ತಮ್ಮ ಮನೆ ಕಟ್ಟಲಿಕ್ಕೆಂದೇ ಮನುಷ್ಯ ಮಾಡಿಟ್ಟ ಏರ್ಪಾಟು ಎಂದು ಗುಬ್ಬಚ್ಚಿಗಳು ಬಗೆಯುತ್ತಿದ್ದವೋ ಏನೋ. ಉಗ್ರ ನರಸಿಂಹನಂಥ ಕಡುಕೋಪಿಷ್ಠ ದೇವರ ಪಟದ ಹಿಂದೆಯೂ ಅವು ನಿರಾತಂಕವಾಗಿ ತಮ್ಮ ಸಂಸಾರದ ಗುಡಾರ ಬಿಚ್ಚಿಕೊಳ್ಳುತ್ತಿದ್ದವು. ಮತ್ತಷ್ಟು ಓದು
ಪಕ್ಷ ರಾಜಕಾರಣದ ಮರ್ಮಗಳು
ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ
ರಾಜಕಾರಣವೆಂಬುದು ಇಂದಿಗೆ ಪಕ್ಷಕ್ಕೆ ಮಾತ್ರ ಸೀಮಿತವಾಗಿ, ಪ್ರದೇಶಗಳು ಎರಡನೇ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕರ್ನಾಟಕ ಸರ್ಕಾರವೆಂಬುದು ಕಾಂಗ್ರೆಸ್ ಸರ್ಕಾರ ಎಂಬ ಮಿತಿಯ ಒಳಗೆ ಕಾರ್ಯನಿರ್ವಹಿಸಲು ಇಚ್ಚಿಸುತ್ತದೆಯೇ ಹೊರತು ರಾಜ್ಯ ಸರ್ಕಾರವಾಗಿ ಅಲ್ಲ. ಇದು ಕಾಂಗ್ರೆಸ್ ಪಕ್ಷದ ಮಿತಿ ಎಂದು ಭಾವಿಸದೆ ಆಡಳಿತಕ್ಕೆ ಬರುವ ಬಹುತೇಕ ಪಕ್ಷಗಳ ಹಣೆಬರಹವಾಗಿದೆ. ಆದ್ದರಿಂದ ಸರ್ವತೋಮುಖ ಅಭಿವೃದ್ಧಿಯ ಬದಲು ಭಾಗಶಃ ಅಭಿವೃದ್ಧಿಯ ಕಾರ್ಯಚಟುವಟಿಕೆಗಳನ್ನು ಸರ್ಕಾರಗಳು ಕೈಗೆತ್ತಿಕೊಳ್ಳುತ್ತವೆ. ಹಾಗಾಗಿ ತುಷ್ಟೀಕರಣದ ರಾಜಕಾರಣ ಹೆಚ್ಚಾಗಿ ಇಂದು ಕಾಣಬಹುದಾಗಿದೆ. ಮತ್ತಷ್ಟು ಓದು
ಪ್ರಾರ್ಥನಾ ಮಂದಿರ ವಶಕ್ಕೆ ಸರ್ಕಾರದ ಚಿಂತನೆ: ಭುಗಿಲೆದ್ದ ಆಕ್ರೋಶ (ಸುಳ್ಸುದ್ದಿ)
– ಪ್ರವೀಣ್ ಕುಮಾರ್, ಮಾವಿನಕಾಡು
ಕಲಾಸಿಪಾಳ್ಯದಲ್ಲಿರುವ ಪ್ರಾರ್ಥನಾ ಮಂದಿರವೊಂದನ್ನು ಸರ್ಕಾರ ವಶಕ್ಕೆ ಪಡೆಯಲು ತೀರ್ಮಾನಿಸಿದೆ. ಈ ಬಗ್ಗೆ ಗುರುವಾರ ನೋಟೀಸ್ ನೀಡಲಾಗಿದ್ದು ನಾಲ್ಕು ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚಿಸಲಾಗಿದೆ. ಈ ಪ್ರಾರ್ಥನಾ ಮಂದಿರವನ್ನು ಹೇಗಾದರೂ ಮಾಡಿ ವಶಪಡಿಸಿಕೊಳ್ಳಲೇಬೇಕು ಎನ್ನುವ ಹಠವಿದ್ದು ಅದೇ ಕಾರಣಕ್ಕೆ ಕೇವಲ ನಾಲ್ಕೇ ದಿನ ಸಮಯ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನೋಟೀಸ್ ನೀಡಿದ್ದಾರೆ ಎಂದು ಸೌಹಾರ್ದಗೇಡು ವೇದಿಕೆ ದೂರಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸದ್ಯದಲ್ಲೇ ನಿವೃತ್ತರಾಗಲಿದ್ದು ಈ ಹಂತದಲ್ಲಿ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆಯುವ ಕುರಿತು ನೋಟೀಸ್ ನೀಡಿರುವುದು ಕರ್ನಾಟಕದ ಹಲವು ಬುದ್ದಿಜೀವಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ನಿವೃತ್ತಿಯ ಹಂತದಲ್ಲಿ ಇಂತಹಾ ಪ್ರಮುಖ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ಒಮ್ಮೆ ಪ್ರಾರ್ಥನಾ ಮಂದಿರವನ್ನು ವಶಕ್ಕೆ ಪಡೆದ ನಂತರ ನಿವೃತ್ತಿಯಾದರೆ ಅದರಿಂದ ಮುಂದೆ ಆಗಬಹುದಾದ ಅಪಾಯಗಳಿಂದ ತಪ್ಪಿಸಿಕೊಳ್ಳುವ ಹುನ್ನಾರ ಇದರಲ್ಲಿದೆ ಎಂದು ಜಾತ್ಯತೀತ ಸಂಘಟನೆಯ ಪ್ರಮುಖರು ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ಓದು
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೩ )
– ಡಾ. ಮಾಧವ ಪೆರಾಜೆ
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )
ಎರಡು ಭಿನ್ನ ಶಾಸನಗಳು:
ಆದರೆ ಈ ಮಾತಿಗೆ ಅಪವಾದಗಳಾಗಿ ಭಿನ್ನ ರಾಗವನ್ನು ಹಾಡುವ ಶಾಸಗಳೂ ಇಲ್ಲದಿಲ್ಲ. ಸದ್ಯಕ್ಕೆ ಅಂತಹ ಎರಡು ಶಾಸನಗಳು ನನ್ನ ಗಮನಕ್ಕೆ ಬಂದಿದೆ. ಮೊದಲನೆಯದು ಸಿರಗುಪ್ಪದ ಶಾಸನ, ಎರಡನೆಯದು ಹರಪನಹಳ್ಳಿಯ ಶಾಸನ. ಸಿರಗುಪ್ಪದ ಶಾಸನವು ಶಂಭುಲಿಂಗೇಶ್ವರ ದೇವಾಲಯದಲ್ಲಿರುವುದಾಗಿ ಅದರ ಕಾಲವು ಕ್ರಿ.ಶ. 1199 ಎಂದು ತಿಳಿದು ಬರುತ್ತದೆ. ಈ ಶಾಸನದ ಕೊನೆಯಲ್ಲಿ …… ಮತ್ತಷ್ಟು ಓದು
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )
– ಡಾ. ಮಾಧವ ಪೆರಾಜೆ
ಮಧ್ಯಕಾಲದಲ್ಲಿ ಗುಡಿಗಳು:
ದೇವಾಲಯಗಳಿಗೆ ಇದ್ದಕ್ಕಿದ್ದಂತೆ ಪ್ರಸಿದ್ಧಿ ಬಂದಿರುವುದೇ ಮಧ್ಯಯುಗದಲ್ಲಿ ಎನ್ನುವುದು ಇನ್ನೊಂದು ಗಮನಾರ್ಹ ಅಂಶವಾಗಿದೆ. ಪುರಾಣಗಳು ಕಾವ್ಯಗಳು ದೇವಾಲಯಗಳ ಕುರಿತು ಹಾಡಿಹೊಗಳುವುದಕ್ಕೆ ಈ ಕಾಲದಲ್ಲಿ ಪ್ರಾರಂಭ ಮಾಡುತ್ತವೆ. ಅಗ್ನಿಪುರಾಣದ ಪ್ರಕಾರ ದೇವಾಲಯಗಳನ್ನು ಕಟ್ಟಿಸುವ ಬಯಕೆ ಬಂತೆಂದರೆ ಸಾಕು – ಅವರ ಪಾಪ ಪರಿಹಾರವಾಗುತ್ತದೆಯಂತೆ. ದೇವಾಲಯಕ್ಕೆ ಒಂದು ಇಟ್ಟಿಗೆಯನ್ನು ಇಟ್ಟರೆ ಅದು ಅವನಿಗೆ ಸಾಯುವಾಗ ಒಂದು ಯಜ್ಞವನ್ನು ಮಾಡಿದ ಪುಣ್ಯವನ್ನು ಕೊಡುತ್ತದೆಯಂತೆ – ಹಾಗೆಂದು ಹಯಶೀರ್ಷ ಸಂಹಿತೆ ಹೇಳುತ್ತದೆ. ಯಾವುದಾದರೊಂದು ಮಗು ಆಟದ ನೆಪದಲ್ಲಿ ಮರಳಿನಲ್ಲಿ ಗುಡಿ ಕಟ್ಟಿದರೂ ಆ ಮಗುವಿಗೆ ಸ್ವರ್ಗ ಲಭಿಸುತ್ತದೆ ಎಂದು ವಿಷ್ಣು ರಹಸ್ಯವು ತಿಳಿಸುತ್ತದೆ. ಹೀಗೆ ಇಲ್ಲಿಂದ ದೇವಾಲಯಗಳಿಗೆ ಮಹತ್ವವೂ ಪ್ರಸಿದ್ಧಿಯೂ ದೊರೆಯುತ್ತದೆ. ಶ್ರೀಮಂತರು,ಚಕ್ರವರ್ತಿಗಳು, ದಂಡನಾಯಕರು ದೇವಾಲಯಗಳನ್ನು ಕಟ್ಟಿಸುತ್ತಾರೆ. ದೇವಾಲಯಗಳನ್ನು ಕಟ್ಟಿಸುವುದು, ಅಂತಹ ದೇವಾಲಯಗಳಿಗೆ ಪೂಜಾರಿಗಳನ್ನು ನೇಮಕ ಮಾಡುವುದು, ದೇವಾಲಯಗಳ ಸಂದರ್ಶನಕ್ಕಾಗಿ ಹೋಗುವುದು, ಅಲ್ಲಿ ಪ್ರಾರ್ಥನೆ ಮಾಡುವುದು, ಯಾರು ಪೂಜೆ ಮಾಡಬಹುದು, ಮಾಡಬಾರದು ಎನ್ನುವುದು ಮೊದಲಾದವುಗಳೆಲ್ಲ ಈ ಕಾಲದಿಂದಲೇ ಆರಂಭವಾಗುತ್ತವೆ. ನಮ್ಮ ಕನಕದಾಸರು ಈ ಕಾಲದವರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳೋಣ. ಹೀಗಾಗಿ ಮಧ್ಯಕಾಲೀನ ವಿಷಯಗಳಿಗೆ ಸಂಬಂಧಿಸಿದ ಈಗ ನಾವು ನಿರ್ದಿಷ್ಟವಾಗಿ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿರುವುದರಿಂದ, ಈ ವಿವರಗಳು ಇನ್ನಷ್ಟು ಸ್ಪಷ್ಟವಾಗಬಲ್ಲವು. ಹಾಗಾದುದರಿಂದ ನಿರ್ದಿಷ್ಟವಾಗಿ ದೇವಾಲಯಕ್ಕೆ ಸಂಬಂಧಿಸಿದಂತೆ ಕರ್ನಾಟಕವನ್ನೇ ಲಕ್ಷಿಸಿ ಇನ್ನು ಮುಂದೆ ಈ ವಿಷಯವನ್ನು ಇನ್ನಷ್ಟು ವಿಸ್ತರಿಸೋಣ. ಮತ್ತಷ್ಟು ಓದು
ಕಾವೇರಿ = ಕನ್ನಡ/ಕನ್ನಡಿಗ?
– ಚೇತನಾ ಹೆಗಡೆ
ಕಾವೇರಿ = ಕನ್ನಡ/ಕನ್ನಡಿಗ?
ಈ ಪ್ರಶ್ನೆ ನನ್ನನ್ನು ಚಿಕ್ಕಂದಿನಿಂದಲೂ ಕಾಡಿದೆ. ಕಾರಣ ನಮ್ಮ ಸಿನಿಮಾಗಳು ಮತ್ತು ಅವುಗಳ ಹಾಡುಗಳು. ಕನ್ನಡ ಭಾಷೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಹಾಡು ಇದ್ದರೂ ಅದರಲ್ಲಿ ಕಾವೇರಿಯ ಉಲ್ಲೇಖ ಪಕ್ಕಾ. ಯಾಕೆ ಕಾವೇರಿ ನದಿಗೆ ಇಷ್ಟೊಂದು ಪ್ರಾಮುಖ್ಯತೆ ಎಂಬುದು ದೇವರಾಣೆಗೂ ಅರ್ಥವಾಗಿರಲಿಲ್ಲ.
ಸತ್ಯ ಹೇಳುತ್ತೇನೆ, ಅಪ್ಪಟ ಮಲೆನಾಡಾದ ಶಿರಸಿಯಲ್ಲಿ ಹುಟ್ಟಿ ಬೆಳೆದ ನನಗೆ ನೀರಿನ ಕೊರತೆ ಎಂಬುದು ಅಷ್ಟಾಗಿ ಕಾಡಿರಲಿಲ್ಲ. ಪ್ರತೀ ಮನೆಯೂ ಒಂದೊಂದು ಸಿಹಿನೀರಿನ ಬಾವಿ ಹೊಂದಿರುವುದು ವಿಶೇಷವೇ ಅಲ್ಲ. ಹಳ್ಳಿಗಳಲ್ಲಿ ಮನೆಯ ಹಿಂದುಗಡೆಯೇ ಗುಡ್ಡದಿಂದ ಇಳಿದು ಬರುವ ನೀರಿನ ಝರಿಗಳು ಬಹು ಸಾಮಾನ್ಯವಾಗಿದ್ದ ಕಾಲ. ಹಾಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಹುಟ್ಟಿದ/ಹರಿಯುವ ನದಿಗಳಾದ ಅಘನಾಶಿನಿ, ಶರಾವತಿ, ಬೇಡ್ತಿ, ಕಾಳಿ, ವರದಾ ಮುಂತಾದ ಯಾವ ನದಿಯ ನೀರನ್ನೂ ಕುಡಿದು ಬೆಳೆದವಳಲ್ಲ ನಾನು… ಮತ್ತಷ್ಟು ಓದು
ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )
– ಡಾ. ಮಾಧವ ಪೆರಾಜೆ
‘ದೇವಾಲಯ ಪ್ರವೇಶ’ ಎನ್ನುವ ಸಂಗತಿಯು ಈಗ ಒಂದು ಜ್ವಲಂತ ಸಮಸ್ಯೆ ಎನ್ನುವ ಹಾಗೆ ಪ್ರತಿಬಿಂಬಿತವಾಗುತ್ತಿದೆ. ಕನ್ನಡದ ಜನಪ್ರಿಯ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ‘ದೇಗುಲ ಪ್ರವೇಶವೂ ಶುದ್ಧೀಕರಣವೂ’ ಎನ್ನುವ ಲೇಖನ (ಲೇ: ಹೊಸಕೆರೆ ನಂಜುಂಡೇಗೌಡ, ದಿ.6.10.14) ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಇದು ಅತ್ಯಂತ ಸಮಕಾಲೀನ ಸಂಗತಿಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಉಪನ್ಯಾಸಕ್ಕೆ ಸಂಬಂಧಿಸಿದ ಹಾಗೆ ಶೀರ್ಷಿಕೆಯ ಹಾಗಿರುವ ‘ಬಾಗಿಲನು ತೆರೆದು’ ಎನ್ನುವ ಕೀರ್ತನೆಯ ಸಾಲೊಂದು, ಈ ಉಪನ್ಯಾಸಕ್ಕೆ ಬಾಗಿಲೇ ಆಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಆ ಕೀರ್ತನೆಯನ್ನು ಪೂರ್ಣವಾಗಿ ಇಲ್ಲಿ ಉದ್ಧರಿಸಲಾಗಿದೆ. ಮತ್ತಷ್ಟು ಓದು
ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ
– ಗುರುಪ್ರಸಾದ್ ಕೆ ಕೆ.
ಶ್ರೀಧರಭಾಮಿನಿಧಾರೆ ೨೧-೨೫
21)
ಒಂದು ವರ್ಷದ ಮೇಲೆ ವರ್ಷವು
ಸಂಧಿತಾಗಲೆ ನೋಡುನೋಡುತ
ಬಂದೆ ಬಿಟ್ಟಿತು ತಾಯಿಯಗಲುವ ಕಾಲ ಸಿರಿಧರಗೇ||
ಬಂಧು ಇರುವುದು ತಾಯಿ ಮಾತ್ರವೆ
ಚೆಂದದಿಂ ಸೇವೆಯನು ಮಾಡುತ
ದುಂದುಭಿ ಎಂಬ ನಾಮದಲ್ಲಿಯ ವರುಷ ಬಂದಿಹುದೂ||
ತಾತ್ಪರ್ಯ : ವರುಷಗಳು ಉರುಳುತ್ತಿರಲು, ಅನಾರೋಗ್ಯದಿಂದ ತಾಯಿಯ ಅನಾಸಕ್ತಿಯೂ ಹೆಚ್ಚುತ್ತಲೇ ಹೋಯಿತು. ಜೀವನದಲ್ಲಿ ಯಾವ ಸ್ವಾರಸ್ಯವೂ ಇಲ್ಲದೇ ಅನಾಸಕ್ತರಾದ ತಾಯಿಯನ್ನು, ಶ್ರೀಧರರು ಅಪಾರ ಮಾತೃಭಕ್ತಿಯಿಂದ ಸೇವೆಗೈಯ ತೊಡಗಿದರು. ಹೀಗಿರುವಾಗ ಸನ್ 1921 ನೇ ವರ್ಷದಲ್ಲಿ ದುಂದುಭಿ ನಾಮ ಸಂವತ್ಸರವು ಬಂದಿತು. ದುಂದುಭಿ ಸಂವತ್ಸರದ ಮಾರ್ಗಶಿರ ಮಾಸದ ತಿಂಗಳಲ್ಲಿ ಮಂಗಳವಾರ ಬಂದಿತು. ಮತ್ತಷ್ಟು ಓದು