ವಿಷಯದ ವಿವರಗಳಿಗೆ ದಾಟಿರಿ

Archive for

3
ಡಿಸೆ

ಸಾಹಿತಿ, ಬುದ್ಧಿಜೀವಿಗಳ ಆತ್ಮ ಸಾಕ್ಷಿ ಯಾರ ಪಾದಾರುವಿಂದವನ್ನು ಸೇರಿದೆ?

ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ
ಆಂಧ್ರ ಪ್ರದೇಶ

15203330_1161962633852199_2178590942366491034_nಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅರೆನಗ್ನ ಚಿತ್ರ ನೋಡಿ, ಸಾಕಷ್ಟು ಛೀಮಾರಿಗೆ ಒಳಗಾಗಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್, “ಮೂರೂ ಬಿಟ್ಟವರು ಊರಿಗೆ ದೊಡ್ಡವರು” ಎನ್ನುವ ಹಾಗೇ ಓಡಾಡಿಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ. ಈ ನಡುವೆ ಸರ್ಕಾರವು ಸಚಿವ ಮಹಾಶಯರ ಬೆನ್ನಿಗೆ ನಿಂತು, ಸಿ.ಐ.ಡಿ.ಯಿಂದ ತನಿಖೆಯ ನಾಟಕವಾಡಿಸಿ ಕ್ಲೀನ್‍ಚೀಟ್ ನೀಡುವ ಉಮ್ಮೇದಿಯಲ್ಲಿದೆ. ನಿಷ್ಠ ಪೋಲಿಸ್ ಅಧಿಕಾರಿ ಗಣಪತಿ ಸಾವಿನ ವಿಚಾರದಲ್ಲೇ ಜಾರ್ಜ್‍ಗೆ ಕ್ಲೀನ್‍ಚೀಟ್ ನೀಡಿದವರಿಗೆ, ಈ ಪ್ರಕರಣ ಹೂವೆತ್ತಿದಷ್ಟೇ ಸಲೀಸು ಬಿಡಿ! ಇರಲಿ, ಇದೆಲ್ಲಾ ರಾಜಕಾರಣದ ಕೇಡಿನ ಭಾಗ. ನನ್ನ ಪ್ರಶ್ನೆ ಆ ಕುರಿತದ್ದಲ್ಲ, ಆ ಉದ್ದೇಶವೂ ನನ್ನಲ್ಲಿಲ್ಲ. ಆದರೆ ಸಭ್ಯ, ಪ್ರಜ್ಞಾವಂತ ಸಮಾಜವನ್ನು ಕಾಡುತ್ತಿರುವುದು ಹಾಗೂ ಸಂಕಟಕ್ಕೆ ದೂಡಿರುವುದು, ಈ ಮನುಷ್ಯ ನಾಡಿದ್ದು ರಾಯಚೂರಿನಲ್ಲಿ ನಡೆಯುತ್ತಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷನೆಂಬುದು! ಮತ್ತಷ್ಟು ಓದು »

3
ಡಿಸೆ

ಆ ಯೋಧನ ಸಾವೂ ಕೂಡಾ ಚಿಲ್ಲರೆ ಸಂಗತಿಯಲ್ಲಿ ಹೂತುಹೋಯಿತು..!

– ಸಂತೋಷ್ ತಮ್ಮಯ್ಯ

srinivas-kumar-sinha-3ಅಂದು ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆಯೊಂದುನಡೆದುಹೋಗಿತ್ತು. ದೇಶಾದ್ಯಂತ ಅಚ್ಚರಿ, ಕೆಲವರಿಗೆ ಆಘಾತ. ಇದೇಕೆ ಹೀಗೆ ಎಂಬ ಉದ್ಗಾರ. ಆರ್ಮಿ ಕೇಂದ್ರಕಛೇರಿಯ ಸೌತ್‌ಬ್ಲಾಕ್‌ನಲ್ಲಿ ತಿಂಗಳುಗಟ್ಟಲೆ ಗಾಸಿಫ್‌ಗಳು. ಎಮರ್ಜೆನ್ಸಿ ಇನ್ನೂ ಹೋಗಿಲ್ಲವೇ? ಇಂದಿರಾ ಸರ್ವಾಧಿಕಾರಕ್ಕೆ ಇದಕ್ಕಿಂತ ಇನ್ನೇನು ಉದಾಹರಣೆ ಬೇಕು ಎಂದು ವಿರೋಧ ಪಕ್ಷಗಳ ಆರೋಪ.

ಅಂದು ನಡೆದಿದ್ದು ಇಷ್ಟು:
ಆರ್ಮಿಯ ೧೧ನೇ ಚೀಫ್ ಆಫ್ ಆರ್ಮಿ ಸ್ಟಾಫ್ ಕೆ.ವಿ ಕೃಷ್ಣರಾವ್ ೧೯೮೩ರ ಮೇ ಕೊನೆಯಲ್ಲಿ ನಿವೃತ್ತರಾಗುವವರಿದ್ದರು. ಕೆಲವು ದಿನಗಳ ಹಿಂದಿನಿಂದಲೇ ಸೌತ್ ಬ್ಲಾಕ್ ಹೊಸ ಜನರಲ್‌ನ ನೇಮಕದ ಪ್ರಕ್ರಿಯೆಯಲ್ಲಿ ನಿರತವಾಗಿತ್ತು. ಹೊಸ ಜನರಲ್ ಯಾರೆಂಬ ಬಗ್ಗೆ ಆರ್ಮಿಗಾಗಲಿ, ಜನರಿಗಾಗಲೀ ಯಾವುದೇ ಗೊಂದಲಗಳಿರಲಿಲ್ಲ. ಏಕೆಂದರೆ ಕೃಷ್ಣರಾವ್ ಚೀಫ್ ಆಗಿದ್ದಾಗ ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿದ್ದವರು ಮಹಾ ಮೇಧಾವಿ ಯೋಧ ಶ್ರೀನಿವಾಸ್ ಕುಮಾರ್ ಸಿನ್ಹಾ. ಮಿಲಿಟರಿಯ ಸೇವಾರ್ಹತೆಯಲ್ಲಿ ಸದ್ಯಕ್ಕಿದ್ದ ಹಿರಿಯರು ಅವರೇ. ಅಲ್ಲದೆ ಅವರು ಪ್ರಥಮ ಮಹಾದಂಡನಾಯಕ ಜನರಲ್ ಕಾರ್ಯಪ್ಪನವರಿಗೆ adc-aide de corps ಅಗಿದ್ದ ಅನುಭವಸ್ಥರು. ಜನರಲ್ ಆಯ್ಕೆಗೆ ಇನ್ನು ಅಧಿಕೃತ ಪ್ರಕಟಣೆಯೊಂದು ಮಾತ್ರ ಉಳಿದಿತ್ತು. ಜ.ಕೃಷ್ಣರಾವ್ ನಿವೃತ್ತರಾಗುವ ಕೇವಲ ಮೂರು ದಿನಗಳ ಹಿಂದೆ ಆ ಅಧಿಕೃತ ಪ್ರಕಟಣೆ ಹೊರಬಿತ್ತು. ದೇಶವನ್ನು ಆಘಾತಕ್ಕೆ ದೂಡಿದ್ದು ಆ ಪ್ರಕಟಣೆಯೇ. ಏಕೆಂದರೆ ಎಸ್. ಕೆ. ಸಿನ್ಹಾ ಅವರಿಗಿಂತ ವಯಸ್ಸಿನಲ್ಲೂ, ಸೇವಾವಧಿಯಲ್ಲೂ ಕಿರಿಯರಾಗಿದ್ದ ಲೆ.ಜ ಎ.ಎಸ್. ವೈದ್ಯ ಅವರನ್ನು ಭೂಸೇನೆಯ ದಂಡನಾಯಕ ಎಂದು ಘೋಷಣೆ ಮಾಡಲಾಗಿತ್ತು. ಈ ಎ.ಎಸ್ ವೈದ್ಯ ಎಂಥ ಮಹಾ ಯೋಧರೆಂದರೆ ಮಹಾವೀರ ಚಕ್ರವನ್ನು ಎರಡೆರಡು ಬಾರಿ ಪಡೆದು mahavirachakra bar ಎಂದು ಹೆಸರು ಪಡೆದಿದ್ದವರು. ಅಂದರೆ ಎಸ್. ಕೆ ಸಿನ್ಹಾರನ್ನು ಸೂಪರ್ ಸೀಡ್ ಮಾಡಲಾಗಿತ್ತು! ಮತ್ತಷ್ಟು ಓದು »