ವಿತ್ತೀಯ ಸಾಕ್ಷರತೆ ಮತ್ತು ಉನ್ನತ ಶಿಕ್ಷಣ ಕೇಂದ್ರಗಳ ಸಾಮಾಜಿಕ ಬದ್ಧತೆ
– ಶ್ರೇಯಾಂಕ ಎಸ್ ರಾನಡೆ
ಭಾರತೀಯ ರಿಸರ್ವ್ ಬ್ಯಾಂಕ್ನ ಅಕ್ಟೋಬರ್ 2016ರ ದಾಖಲೆಯ ಪ್ರಕಾರ, 125 ಕೋಟಿಗೂ ಅಧಿಕ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ಒಟ್ಟಾರೆ 94.2 ಕೋಟಿ ಡೆಬಿಟ್ ಕಾರ್ಡ್ಗಳಿವೆ. ಅಕ್ಟೋಬರ್ ತಿಂಗಳಲ್ಲಿ ಈ ಕಾರ್ಡ್ಗಳಿಂದ 2.63 ಲಕ್ಷ ಕೋಟಿ ರೂಪಾಯಿಗಳ ವ್ಯವಹಾರವಾಗಿದೆ. ಆದರೆ ಇದರಲ್ಲಿ ಶೇಕಡ 90%ಗೂ ಅಧಿಕ ಕಾರ್ಡ್ಗಳ ಬಳಕೆಯಾಗಿದ್ದು ಅಟೋಮೇಟೆಡ್ ಟೆಲ್ಲರ್ ಯಂತ್ರ(ಎ.ಟಿ.ಎಂ.)ದಿಂದ ಹಣ ಹೊರತೆಗೆಯುವುದಕ್ಕೆ ಮಾತ್ರ. ಅಂದರೆ ಬರೀ 8% ಕಾರ್ಡ್ಗಳನ್ನು ನೇರವಾಗಿ ನೋಟುರಹಿತ ವ್ಯಾಪಾರಕ್ಕಾಗಿ(ಆನ್ಲೈನ್ ಮತ್ತು ಆಫ್ಲೈನ್) ಬಳಸಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ವೈರುಧ್ಯದಿಂದ ಕೂಡಿದೆಯೆಂದರೆ ದೇಶದಲ್ಲಿ ಕಾರ್ಡ್ಗಳಿಂದ ವ್ಯವಹಾರ ನಡೆಸುವ 15.12ಲಕ್ಷ ‘ಪಾಯಿಂಟ್ ಆಫ್ ಸೇಲ್’ ಟರ್ಮಿನಲ್ಗಳಿವೆ. ಆದರೆ ದೇಶದಲ್ಲಿರುವ ಒಟ್ಟು ಎ.ಟಿ.ಎಂ.ಗಳ ಸಂಖ್ಯೆ ಕೇವಲ 2.20 ಲಕ್ಷ ಮಾತ್ರ. ಚಲಾವಣೆಯಲ್ಲಿರುವ ಶೇಕಡಾ 50% ಡೆಬಿಟ್ ಕಾರ್ಡ್ಗಳು ಸಕ್ರಿಯವಾಗಿ ನೋಟು ವಿನಿಮಯಕ್ಕಾಗಿ ಬಳಕೆಯಾಗುತ್ತಿವೆ. ಭಾರತದ ಪ್ರತೀ 10 ಡೆಬಿಟ್ ಕಾರ್ಡ್ಗಳಲ್ಲಿ 9 ಕಾರ್ಡ್ಗಳನ್ನು ಕೇವಲ ಎ.ಟಿ.ಎಂ. ಯಂತ್ರಗಳಿಂದ ಹಣ ಪಡೆದುಕೊಳ್ಳುವುದಕ್ಕೆ ಮಾತ್ರ ಉಪಯೋಗಿಸಲಾಗುತ್ತಿದೆ. ಅವುಗಳಿಂದ ನೇರವಾಗಿ ನೋಟುರಹಿತ ವ್ಯವಹಾರವಾಗುತ್ತಿಲ್ಲ.