ವಿಷಯದ ವಿವರಗಳಿಗೆ ದಾಟಿರಿ

Archive for

16
ಡಿಸೆ

ಮೌಲ್ಯ ರಾಜಕಾರಣ ಮರೆತ ಜಯಲಲಿತಾ!

– ತುರುವೇಕೆರೆ ಪ್ರಸಾದ್
ಪತ್ರಕರ್ತರು

54849200ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನೊಂದಿಗೆ ಅವರ ಆಡಳಿತ ಕೊನೆಗೊಂಡಿದೆ. ಇದನ್ನೇ ಜಯಲಲಿತಾ ಯುಗಾಂತ್ಯ ಎಂದು ಬಣ್ಣಿಸಲಾಗುತ್ತಿದೆ. ತಮಿಳುನಾಡಿನ ಕೋಟಿ ಕೋಟಿ ಜನರು ತಮ್ಮ ಅಮ್ಮನ ನಿಧನದ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾರೆ. ನಾಡಿನಾದ್ಯಂತ ಶೋಕ ಮಡುಗಟ್ಟಿದೆ. ಅಮ್ಮನ ಸಾವಿನ ಭಾವೋದ್ವೇಗದ ಅಲೆ ಉಕ್ಕಿ ಹರಿಯುತ್ತಿದೆ. ಎಲ್ಲೆಡೆ ಅಮ್ಮನ ಗುಣಗಾನ ನಡೆಯುತ್ತಿದೆ. ಜಯಲಲಿತಾ ತಾವು ಬದುಕಿರುವಷ್ಟು ದಿನವೂ ತಮ್ಮ ನಾಡಿನ ರೈತರಿಗಾಗಿ ಕಾವೇರಿ ನೀರನ್ನು ಶತಾಯಗತಾಯ ಹರಿಸಿಕೊಳ್ಳಲೇಬೇಕು ಎಂದು ಹಠ ಹಿಡಿದವರಂತೆ ವರ್ತಿಸಿದರು. ಈ ವರ್ಷವೂ ಕರ್ನಾಟಕದ ಎಲ್ಲಾ ಜಲಾಶಯಗಳು ನೀರಿಲ್ಲದೆ ಒಣಗಿ ನಿಂತಿದ್ದಾಗಲೂ ಸಹ ಜಯಲಲಿತಾ ತಮ್ಮ ರಾಜ್ಯಕ್ಕೆ ನೀರು ಹರಿಸಲೇಬೇಕೆಂದು ಕರ್ನಾಟಕದ ಮೇಲೆ ಒತ್ತಡ ಹೇರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದಾಗ್ಯೂ ಕರ್ನಾಟಕದ ಜನ ಅವರ ಸಾವಿಗೆ ಅನುಕಂಪ ವ್ಯಕ್ತಪಡಿಸಿದ್ದಾರೆ, ಒಬ್ಬ ಧೀಮಂತ ಮಹಿಳೆಯ ಸಾವಿಗೆ ನೀಡಬೇಕಾದ ಘನತೆ ಗೌರವಗಳನ್ನು ಮಾನವೀಯತೆಯ ನೆಲೆಯಲ್ಲಿ ಪ್ರದರ್ಶಿಸಿ ಕನ್ನಡಿಗರು ಎಂದಿನಂತೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. Read more »

Advertisements