ವಿಷಯದ ವಿವರಗಳಿಗೆ ದಾಟಿರಿ

Archive for

12
ಡಿಸೆ

ಜಯಲಲಿತಾರನ್ನು ಚಿರಸ್ಮರಣೀಯವಾಗಿಸಿದ “ಅಮ್ಮ ಉನವಾಗಮ್”

– ಶ್ರೇಯಾಂಕ ಎಸ್ ರಾನಡೆ

26amma-kitchen1||ವಿಶ್ವಸಂಸ್ಥೆಯ ಅಂಗಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆಯ ಇತ್ತೀಚಿನ “ವಿಶ್ವದ ಆಹಾರ ಅಭದ್ರತೆಯ ಪರಿಸ್ಥಿತಿ 2015″ರ ವರದಿಯ ಪ್ರಕಾರ ಭಾರತದಲ್ಲಿ ದಿನನಿತ್ಯ 19.46 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ನಗರೀಕರಣಗೊಳ್ಳುತ್ತಿರುವ ದೇಶ. ಹಾಗಾಗಿ ಸರಿಯಾದ ಯೋಜನೆ ರೂಪಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಹೊರತು ನಗರೀಕರಣಗೊಂಡಂತೆಲ್ಲ ನಿರಾಶ್ರಿತರ, ಬಡವರ, ಹಸಿವಿನಿಂದ ಬಳಲುವವರ ಸಂಖ್ಯೆಯೂ ಹೆಚ್ಚಲಿದೆ. ತಕ್ಷಣದ ಪರಿಸ್ಥಿತಿಯಿಂದ ನೋಡಿದರೆ ಸರಕಾರಗಳ ಕಡಿಮೆ ಮೊತ್ತದ ಆದರೆ ಉತ್ತಮ ಗುಣಮಟ್ಟದ ‘ಅಮ್ಮ ಮೆಸ್’ನಂತಹ ಆಹಾರ ಪೂರೈಸುವ ಯೋಜನೆಗಳು ಈ ದೇಶದ ಹಸಿವು ಹಾಗೂ ಪೌಷ್ಟಿಕತೆಯ ಕೊರತೆಯನ್ನು ನೀಗಿಸಿ ದೇಶವನ್ನು ಮತ್ತಷ್ಟು ಉತ್ಪಾದಕಗೊಳಿಸಲು ಸಹಾಯ ಮಾಡುತ್ತವೆ.|| ಮತ್ತಷ್ಟು ಓದು »