ವಿಷಯದ ವಿವರಗಳಿಗೆ ದಾಟಿರಿ

Archive for

5
ಡಿಸೆ

ನನ್ನೆಸ್ರು ಕಂಪ್ಯೂಟರ್ರೇ. ಬೇಕಾದ್ರೆ ಈ ಏರೋಪ್ಲೇನನ್ ಕೇಳ್ರಿ!

– ರೋಹಿತ್ ಚಕ್ರತೀರ್ಥ

780053446ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಕೂಗಳತೆ ದೂರದಲ್ಲಿರುವ ಹೊಸೂರು ಹಳ್ಳಿಯ ಯಾವುದೋ ಗಲ್ಲಿಯಲ್ಲಿ ಹೋಗಿ ಕಂಪ್ಯೂಟರ್ ಎಂದು ಜೋರಾಗಿ ಕೂಗುತ್ತೀರಿ. ಆಗ ಗಲ್ಲಿಯ ನಾಲ್ಕು ಮೂಲೆಯಿಂದ ನಾಲ್ಕು ಹುಡುಗರು ಓಡಿಬಂದು ನಿಮ್ಮ ಮುಂದೆ ನಿಲ್ಲುತ್ತಾರೆ. ಏನಯ್ಯ, ನೀವ್ಯಾಕ್ರಯ್ಯ ಬಂದ್ರಿ ಎಂದರೆ ನಮ್ಮ ಹೆಸರು ಕಂಪ್ಯೂಟರ್ ಅಂತಾ ಸಾರ್ ಎಂದು ನಿಮ್ಮನ್ನೇ ಗೊಂದಲಕ್ಕೆ ಬೀಳಿಸಿಬಿಡುತ್ತವೆ ಆ ಚಳ್ಳೆಪಿಳ್ಳೆಗಳು. ಹೋಗೋಗ್ರೋ, ಕಂಪ್ಯೂಟರ್ ಅನ್ನೋ ಹೆಸರನ್ನ ಮನುಷ್ಯರಿಗ್ಯಾರಾದ್ರೂ ಇಡತಾರಾ ಅಂತ ಅವರ ಜೊತೆ ವಾದಕ್ಕಿಳಿದಿರಾ, ಮುಗೀತು ಕತೆ! ಬೇಕಾದ್ರೆ ನನ್ ಅಣ್ಣ ಹೈಕೋರ್ಟನ್ನ ಕೇಳಿ ಅನ್ನಬಹುದೊಬ್ಬ. ನಮ್ ಕೇರಿಯ ಬಸ್ಸು, ಟ್ರೇನು, ಮಿಲಿಟ್ರಿ, ರಾಕೆಟ್ ಯಾರನ್ನು ಬೇಕಾದರೂ ಕೇಳ್ರಿ; ನನ್ ಹೆಸರು ಹೇಳತಾರೆ ಅನ್ನಬಹುದು ಇನ್ನೊಬ್ಬ. ನನ್ನ ಅಕ್ಕ ಹೇಮಮಾಲಿನೀನ ಕೇಳಿ, ಇಲ್ಲಾ ನನ್ನವ್ವನ ತಂಗೀ ಮಗ ರಾಜೇಶ್ ಖನ್ನನನ್ನ ಕೇಳಿ ಅನ್ನಬಹುದು ಮೂರನೆಯವನು. ನಮಗೆಲ್ಲ ವೋಟರ್ ಕಾರ್ಡ್ ಮಾಡಿಸುವ ಜಲ್ಲಿಯಮ್ಮ ಜಪಾನ್ ಅವರನ್ನೇ ಕೇಳಿ ಬನ್ನಿ ಅನ್ನಬಹುದು ನಾಲ್ಕನೆ ಹುಡುಗ. ಅಂದ ಹಾಗೆ, ನಾವು ಜಗತ್ತಲ್ಲಿ ನೋಡಬಹುದಾದ ದೋಸೆ, ಫೋನ್, ಕಾಫಿ, ಬಾಲ್, ಸೈಕಲ್, ಮೈಸೂರು ಪಾಕ್, ಏರೋಪ್ಲೇನ್, ಕ್ರಿಕೆಟ್ ಎಲ್ಲವೂ ಇಲ್ಲಿ ಮನುಷ್ಯರ ಹೆಸರುಗಳಾಗಿ ಅವತರಿಸಿವೆ. ಇಂಥದೊಂದು ವಿಚಿತ್ರ ಜಗತ್ತನ್ನು ನೋಡಬೇಕಾದರೆ ನಾವು ಹಕ್ಕಿಪಿಕ್ಕಿಗಳ ಹಾಡಿಗೇ ಹೋಗಿಬರಬೇಕು! Read more »