ಜಲಿಯನ್ವಾಲಾ ಬಾಗ್ ಸೇಡಿಗಾಗಿ 21 ವರ್ಷ ಕಾದಿದ್ದ ಕ್ರಾಂತಿಕಾರಿ
ಮಯೂರಲಕ್ಷ್ಮೀ
(ಲೇಖಕರು ಉಪನ್ಯಾಸಕರು)
ಮಾರ್ಚ್ 13, 1940. ಲಂಡನ್ನ ಕಾಕ್ಸ್ಟನ್ ಹಾಲ್. ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ರಾಯಲ್ ಸೆಂಟ್ರಲ್ ಏಷಿಯಾ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಸಭೆ ನಡೆದಿತ್ತು. ಬ್ರಿಗೇಡಿಯರ್ ಜನರಲ್ ಸರ್ ಪಿ. ಸ್ಕೈಸ್ ಪ್ರಸ್ತುತ ಜಗತ್ತಿನ ವಿದ್ಯಮಾನಗಳ ಕುರಿತು ಮಾತನಾಡುತ್ತಿದ್ದರು. ಅನೇಕ ಗಣ್ಯರು ಅಲ್ಲಿದ್ದರು. ಅಂದು ಓರ್ವ ಪ್ರಮುಖನ ಭಾಷಣ ಮತ್ತು ಸನ್ಮಾನವಿತ್ತು. ಆತ ಭಾರತದಲ್ಲಿನ ತನ್ನ ಸೇವೆಯ ಅವಧಿಯ ಸಾಧನೆಗಳನ್ನು ಕುರಿತು ಮಾತನಾಡಿದ. ಕಾರ್ಯಕ್ರಮದ ನಂತರ ಜನರು ಹೊರನಡೆಯತೊಡಗಿದರು. ಆ ಪ್ರಮುಖನೂ ಹೊರಟ. ಇದ್ದಕ್ಕಿದ್ದಂತೆಯೇ ಅವನಿಂದ ಸುಮಾರು ಮೂರು ಗಜಗಳಷ್ಟು ಅಂತರದಲ್ಲಿದ್ದ ಯುವಕನೋರ್ವ ಮಿಂಚಿನವೇಗದಲ್ಲಿ ಅವನೆದುರಾಗಿ ನಿಂತು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದ. ಮತ್ತಷ್ಟು ಓದು